ಬಿಜೆಪಿ ದ.ಕ ಜಿಲ್ಲಾ ಹಿಂ.ವ.ಮೋರ್ಚದ ಕೋಶಾಧಿಕಾರಿ ಶ್ರೀ ಸಂದೇಶ್ ಪೂಜಾರಿ

Wednesday, August 20th, 2014
Sandesh

ಮಂಗಳೂರು : ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚದ ಕೋಶಾಧಿಕಾರಿಯಾಗಿ ಪೆರ್ಮುದೆ ಗ್ರಾಮ ಪಂಚಾಯತ್ ನ ಅಧ್ಯಕ್ಷರಾಗಿರುವ ಶ್ರೀ ಸಂದೇಶ್ ಪೂಜಾರಿಯವರನ್ನು ನೇಮಕ ಮಾಡಲಾಗಿದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷರಾದ ನ್ಯಾಯವಾದಿ ಶ್ರೀ ಮೋಹನ್ರಾಜ್ ಕೆ.ಆರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಸ್ಟೀವನ್ ರೇಗೊಗೆ ಸಿರಿ ಸಿನಿಮಾ ಪ್ರಶಸ್ತಿ

Saturday, August 16th, 2014
Stevan Rego

ಮಂಗಳೂರು: ಸಿರಿ ಕ್ರಿಯೇಷನ್, ಮಂಗಳೂರು ಹಾಗೂ ಚಿತ್ರ ಸಂಗಮ, ಬೆಂಗಳೂರು ಅವರು ನೀಡುವ ಸಿರಿ ಸಿನಿಮಾ ಪ್ರಶಸ್ತಿ- 2014ಗೆ ಮಂಗಳೂರು ವಿಜಯ ಕರ್ನಾಟಕದ ಉಪಸಂಪಾದಕ ಹಾಗೂ ವರದಿಗಾರ ಸ್ಟೀವನ್ ರೇಗೊ, ದಾರಂದಕುಕ್ಕು ಆಯ್ಕೆಯಾಗಿದ್ದಾರೆ. ಮುದ್ರಣ ಮಾಧ್ಯಮದಲ್ಲಿ ಕರಾವಳಿ ಸಿನಿಮಾ ಲೋಕದ ವಿಶೇಷ ವರದಿಗಳನ್ನು ಪರಿಗಣಿಸಿ ಸಿರಿ ಸಿನಿಮಾ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ಪ್ರದಾನ ಮಾಡಲಾಗುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಸ್ಟೀವನ್ ರೇಗೊ ಅವರಿಗೆ 2012 ರಲ್ಲಿ ಮಂಗಳೂರಿನ ಪ್ರತಿಷ್ಟಿತ  ಮೆಗಾ ಮಿಡಿಯಾ ಪ್ರಶಸ್ತಿ ಲಭಿಸಿತ್ತು. ಅವರ […]

ಪಡಿತರ ಚೀಟಿ: ಗೊಂದಲ ನಿವಾರಿಸಲು ಜಿ.ಪಂ. ಅಧ್ಯಕ್ಷರ ಸೂಚನೆ

Wednesday, August 13th, 2014
zp kdp

ಮಂಗಳೂರು : ಪಡಿತರ ಚೀಟಿಗೆ ಎಪಿಕ್  ಕಾರ್ಡ್ ಸಂಖ್ಯೆ ಜೋಡಣೆ ಸಂಬಂದ ಎಪಿಕ್ ನೀಡದವರ ರೇಷನ್ ಕಾರ್ಡ್ ಗಳನ್ನು  ಅಮಾನತಿನಲ್ಲಿಡುವ ಅಥವಾ ರದ್ದುಗೊಳಿಸುವ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ಉಂಟಾಗುತ್ತಿದ್ದು, ಈ ಬಗ್ಗೆ ಸ್ಪಷ್ಟವಾಗಿ ಸಾರ್ವಜನಿಕರಿಗೆ ಮಾಹಿತಿ ನೀಡಿ ಪಡಿತರ ಚೀಟಿ ವ್ಯವಸ್ಥೆಯನ್ನು ಸುಗಮಗೊಳಿಸಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್ಪಗೌಡ ಸೂಚಿಸಿದ್ದಾರೆ. ಅವರು ಬುಧವಾರ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ(ಕೆಡಿಪಿ)ಗಳ ಮಾಸಿಕ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಡವರು ಹಲವೆಡೆ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಲು […]

ತುಟ್ಟಿಭತ್ತೆಯಲ್ಲಿ ಕಡಿತ ಮಾಡಿ ವಂಚಿಸಲು ಪ್ರಯತ್ನ-ಕಾರ್ಮಿಕರ ಆಕ್ರೋಶ

Wednesday, August 13th, 2014
CITU bantwal

ಬಂಟ್ವಾಳ : ಕಳೆದ ವರ್ಷ ಏರಿಕೆಯಾದ ಗ್ರಾಹಕ ಬೆಲೆ ಸೂಚ್ಯಾಂಕದ ಆಧಾರದಲ್ಲಿ ಕರ್ನಾಟಕ ರಾಜ್ಯ ಸರಕಾರವು 2014 ಎಪ್ರಿಲ್ 1 ರಿಂದ ಅನ್ವಯವಾಗುವಂತೆ ಬೀಡಿ ಕಾರ್ಮಿಕರಿಗೆ ತುಟ್ಟಿಭತ್ತೆ ರೂ.21.15 ಪ್ರಕಟಿಸಿ ಕಾರ್ಮಿಕರಿಗೆ ಪಾವತಿಸುವಂತೆ ಮಾಲಕರಿಗೆ ಸೂಚಿಸಿದ್ದರೂ ಬೀಡಿ ಮಾಲಕರು ತುಟ್ಟಿಭತ್ತೆಯನ್ನು ಈವರೆಗೆ ಪಾವತಿಸಿರುವುದಿಲ್ಲ, ಅದನ್ನು ಬಿಟ್ಟು ಮಾಲಕರು ಆಗಸ್ಟ್ 1 ರಿಂದ ಅನ್ವಯವಾಗುವಂತೆ ಪೂರ್ತಿ ಮೊತ್ತ ಪಾವತಿಸುವ ಬದಲಾಗಿ ಕೇವಲ ರೂ.15 ನೀಡಿ ರೂ.6.15 ಪೈಸೆ ವಂಚಿಸಲು ಪ್ರಯತ್ನಿಸುತ್ತಿದ್ದಾರೆ. ಮಾಲಕರ ಈ ವಂಚನಾ ನೀತಿ ಖಂಡನೀಯ, ಬೀಡಿ […]

ಪೇಜಾವರ ಮಠದಲ್ಲಿ ಒಡಿಯೂರು ಶ್ರೀಗಳಿಂದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಭೇಟಿ

Wednesday, August 13th, 2014
Pejawara swamiji

ಮುಂಬಯಿ : ಸಾಂತಕ್ರೂಜ್ ಪೂರ್ವದಲ್ಲಿನ ಪೇಜಾವರ ಮಠದಲ್ಲಿ ಚಾತುರ್ಮಾಸ್ಯ ವ್ರತಾಚರಣೆ ನಡೆಸುತ್ತಿರುವ ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರನ್ನು ಕಳೆದ ಸೋಮವಾರ ತೆಂಕಣದ ಗಾನಗಾಪುರ ಎಂದೇ ಜನಜನಿತ ಕರ್ನಾಟಕ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಗುರುದೇವದತ್ತ ಸಂಸ್ಥಾನಮ್ ಶ್ರೀ ದತ್ತಗುರು ವೀರಾಂಜನೆಯ ಸ್ವಾಮಿ ಕ್ಷೇತ್ರ ಒಡಿಯೂರುಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಸೌಹಾರ್ದ ಭೇಟಿಯನ್ನೀಡಿದರು. ಉಭಯ ಸ್ವಾಮೀಜಿಗಳು ಪರಸ್ಪರ ಗೌರವಾರ್ಪಣೆಗೈದು ಮುಂಬಯಿ ಪ್ರವಾಸದ ಬಗ್ಗೆ […]

ರಿಕ್ಷಾ ಚಾಲಕನ ಹತ್ಯೆ: ಬಂಟ್ವಾಳ ಪೊಲೀಸರೇ ನೇರ ಹೊಣೆ DYFI ಆರೋಪ

Tuesday, August 12th, 2014
Bantwal Murder

ಮಂಗಳೂರು : ಕ್ರಿಮಿನಲ್ ಗ್ಯಾಂಗ್ ಗಳ ಮೇಲಾಟಕ್ಕೆ ಅಮಾಯಕ ರಿಕ್ಷಾ ಚಾಲಕ ರಿಫಾಯಿ ಹತ್ಯೆಗೀಡಾಗಿರುವುದು ನಾಗರಿಕ ಸಮಾಜವನ್ನೇ ಬೆಚ್ಚಿ ಬೀಳಿಸಿದೆ. ರಿಕ್ಷಾ ಚಾಲಕನ ಬರ್ಬರ ಕೊಲೆಗೆ ಬಂಟ್ವಾಳ ಪೊಲೀಸರ ನಿಷ್ಕ್ರೀಯತೆ, ಕ್ರಿಮಿನಲ್ ನೊಂದಿಗಿನ ಒಡನಾಟವೇ ಕಾರಣ ಎಂದು DYFI ದ.ಕ. ಜಿಲ್ಲಾ ಸಮಿತಿ ಆಪಾದಿಸಿದೆ. ದ.ಕ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿರುವುದನ್ನು ಈ ಘಟನೆ ಎತ್ತಿ ತೋರಿಸುತ್ತದೆ ಎಂದು DYFI ಆರೋಪಿಸಿದೆ. ಮಾರಿಪಳ್ಳ ಪರಿಸರದಲ್ಲಿ ಕಳೆದ ಒಂದೆರಡು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಮಾದಕ ಪದಾರ್ಥಗಳ ಜಾಲ, ಕ್ರಿಮಿನಲ್ […]

ಮಂಗಳೂರಿನಲ್ಲಿ ಎಸ್.ಬಿ.ಎಂ. ಇ-ಲಾಬಿ ಪ್ರಾರಂಭ

Monday, August 11th, 2014
E loby

ಮಂಗಳೂರು : ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಪ್ರಥಮ ಇ-ಲಾಬಿಯನ್ನು ಬ್ಯಾಂಕಿನ ಕಂಕನಾಡಿ ಶಾಖೆಯಲ್ಲಿ ಸೈಂಟ್ ವಿನ್ಸೆಂಟ್ ಫೆರಾರಿ ಚರ್ಚ್ ನ ಧರ್ಮಗುರುಗಳಾದ ರೆ.ಫಾ. ಜೇಮ್ಸ್ ಡಿ ಸೋಜರವರು ಇಂದು ಉದ್ಘಾಟಿಸಿದರು. ದಿನವಿಡೀ ಸಾರ್ವಜನಿಕರಿಗೆ ತೆರೆದಿರುವ ಇ-ಲಾಬಿ’ಯಲ್ಲಿ ಸ್ಟೇಟ್ ಬ್ಯಾಂಕಿನ ಡೆಬಿಟ್ ಕಾರ್ಡ್ ದಾರರು, ನಗದು ಸ್ವೀಕೃತಿಯಂತ್ರ (ಕ್ಯಾಶ್ ಡಿಪಾಸಿಟ್ ಮಷೀನ್ ನ) ಮೂಲಕ ನಗದು ಜಮಾ ಮಾಡುವಿಕೆ, ಎಟಿಎಂ ನಿಂದ ಹಣ ಹಿಂಪಡೆಯುವಿಕೆ, ಸ್ವಯಂ ಸೇವಾ ಕಿಯೋಸ್ಕ್ ನ ಮೂಲಕ ಪಾಸು ಪುಸ್ತಕ ಪ್ರಿಂಟಿಂಗ್, ಇಂಟರ್ನೆಟ್ […]

ಮುಂಬಯಿ ಬಿಲ್ಲವರ ಅಸೋಸಿಯೇಶನ್ ನೂತನ ಅಧ್ಯಕ್ಷರಾಗಿ ನಿತ್ಯಾನಂದ ಡಿ. ಕೋಟ್ಯಾನ್ ಅಯ್ಕೆ

Saturday, August 9th, 2014
Billava Mumbai

ಮುಂಬಯಿ: ನಗರದ ಹಿರಿಯ ಸಾಮಾಜಿಕ ಸಂಸ್ಥೆ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ನೂತನ ಅಧ್ಯಕ್ಷರಾಗಿ ನಿತ್ಯಾನಂದ ಡಿ. ಕೋಟ್ಯಾನ್ ಆಯ್ಕೆಯಾದರು. ಕಳೆದ ಶುಕ್ರವಾರ ಸಂಜೆ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದಲ್ಲಿ ಜರಗಿದ ಬಿಲ್ಲವರ ಅಸೋಸಿಯೇಶನ್ನ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ನಡೆಸಲಾದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ನಿತ್ಯಾನಂದ ಡಿ.ಕೋಟ್ಯಾನ್ ನೂತನ ಅಧ್ಯಕ್ಷರಾಗಿ, ಜ್ಯೋತಿ ಕೆ.ಸುವರ್ಣ ಅವರು ಉಪಾಧ್ಯಕ್ಷ, ಡಾ| (ನ್ಯಾಯವಾದಿ) ಯು. ಧನಂಜಯ ಕುಮಾರ್ ಅವರು ನೂತನ ಗೌರವ ಪ್ರಧಾನ ಕಾರ್ಯ ದರ್ಶಿ ಆಗಿ ಆಯ್ಕೆಯಾದರು. ಕಳೆದ 23 […]

ಧರ್ಮಸ್ಥಳ : ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ರಕ್ಷಿಸಿದ ದೇವಳದ ಸಿಬ್ಬಂದಿ

Friday, August 8th, 2014
Dharmasthala River

ಧರ್ಮಸ್ಥಳ : ಧರ್ಮಸ್ಥಳದಲ್ಲಿ ನೇತ್ರಾವತಿ ಸ್ನಾನ ಘಟ್ಟದಲ್ಲಿ ಗುರುವಾರ ಸಂಜೆ ನದಿಗೆ ಹಾರಿ ಆತ್ಮಹತ್ಯೆ ಮಾಡಲು ಯತ್ನಿಸಿದ ಮಹಿಳೆಯನ್ನು ದೇವಳದ ಸಿಬ್ಬಂದಿ ಸಕಾಲಿಕ ಪ್ರಜ್ಷೆಯಿಂದ ರಕ್ಷಿಸಿದ ಘಟನೆ ವರದಿಯಾಗಿದೆ. ಬೆಂಗಳೂರಿನ ನಿವಾಸಿ ಗೀತಾ (ಹೆಸರು ಬದಲಾಯಿಸಲಾಗಿದೆ) ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದು ತಂದೆ – ತಾಯಿ ಜೊತೆ ವಾಸ್ತವ್ಯ ಇದ್ದಾರೆ. ಒಬ್ಬ ತಮ್ಮನೂ ಇದ್ದಾನೆ. ಗುರುವಾರ ಅದೇನೋ ಮಾನಸಿಕ ಖಿನ್ನತೆ ಆಕೆಯನ್ನು ಕಾಡಿತು. ಮನೆಯಿಂದ ಬೆಳಿಗ್ಗೆ ಕಚೇರಿಗೆಂದು ಹೊರಟವಳು ಧರ್ಮಸ್ಥಳಕ್ಕೆ ಬರುವ ಬಸ್ ಹತ್ತಿದರು. ಸಂಜೆ 7 ಗಂಟೆಗೆ […]

ವಿದ್ಯುತ್ ಸ್ಪರ್ಶಕ್ಕೆ ಕಾಡಾನೆ ಬಲಿ , ಬೈನೆ ಮರದ ಆಸೆಗೆ ಪ್ರಾಣ ಕಳೆದುಕೊಂಡ ಗಜರಾಜ

Friday, August 8th, 2014
Elephant

ಸುಬ್ರಹ್ಮಣ್ಯ:ಆಹಾರ ಅರಸುತ್ತಾ ಕೃಷಿಕನೊರ್ವರ ತೋಟಕ್ಕೆ ದಾಳಿಯಿಟ್ಟು ಅಲ್ಲಿಂದ ತೆರಳಿದ ಒಂಟಿ ಸಲಗವೊಂದು ತನ್ನ ಇಷ್ಟದ ಆಹಾರವಾದ ಬೈನೆ ಗಿಡವನ್ನು ತಿನ್ನುವ ಸಂಧರ್ಭ ವಿದ್ಯುತ್ ಸ್ಪರ್ಶಿಸಿ ಸಾವೀಗೀಡಾದ ದುರಂತ ಘಟನೆ ಸುಬ್ರಹ್ಮಣ್ಯ ರೇಂಜ್ನ ದೇವಚಳ್ಳ ಗ್ರಾಮದ ನಾಲ್ಕೂರು ರಕ್ಷಿತಾರಣ್ಯದ ಹೆರಕಜೆ ಎಂಬಲ್ಲಿ ಶುಕ್ರವಾರ ನಡೆದಿದೆ.ದಾರುಣವಾಗಿ ಸಾವಿಗೀಡಾದ ಕಾಡಾನೆ ಸುಮಾರು 25 ವರ್ಷ ತುಂಬಿದೆ ಎಂದು ಅಂದಾಜಿಸಲಾಗಿದ್ದು 2 ದಂತವನ್ನು ಹೊಂದಿದೆ. ಗುತ್ತಿಗಾರು ಸಮೀಪದ ದೇವಚಳ್ಳ ಗ್ರಾಮದ ನಾಲ್ಕೂರು ರಕ್ಷಿತಾರಣ್ಯದ ಕೊಲ್ಲಮೊಗ್ರು -ಕಂದ್ರಪ್ಪಾಡಿ ಸಂಪರ್ಕ ರಸ್ತೆಯ ಮಧ್ಯೆ ಹೆರಕಜೆ ಎಂಬಲ್ಲಿಯ […]