ಪತ್ರಕರ್ತರ ಸಂಘದಿಂದ ವನಮಹೋತ್ಸವ, ಹಸಿರು ಮಂಗಳೂರು ಯೋಜನೆಗೆ ಚಾಲನೆ – ಮೇಯರ್

Friday, July 25th, 2014
vanamahotsava

ಮಂಗಳೂರು : ಮಂಗಳೂರು ನಗರದಲ್ಲಿ ಕಾಂಕ್ರೀಟೀಕರಣದ ಜತೆ ಹಸುರೀಕರಣ ಕೂಡಾ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಪಾಲಿಕೆ ಆಡಳಿತ `ಹಸಿರು ಮಂಗಳೂರು’ ಯೋಜನೆ ಹಮ್ಮಿಕೊಂಡಿದೆ ಎಂದು ಮೇಯರ್ ಮಹಾಬಲ ಮಾರ್ಲ ಹೇಳಿದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್ ಕ್ಲಬ್ ಮತ್ತು ಅರಣ್ಯ ಇಲಾಖೆ ಮಂಗಳೂರು ವಿಭಾಗದ ಸಂಯುಕ್ತ ಆಶ್ರಯದಲ್ಲಿ ನಗರದ ಲೇಡಿಹಿಲ್ ನ ಪತ್ರಿಕಾ ಭವನದ ಮುಂಭಾಗದಲ್ಲಿ ಶುಕ್ರವಾರ ನಡೆದ ವನಮಹೋತ್ಸವಕ್ಕೆ ಅವರು ಚಾಲನೆ ನೀಡಿದರು. ಪಾಕರ್್ ಮತ್ತು ಮೈದಾನಗಳ ಅಭಿವೃದ್ದಿಗಾಗಿ ಪಾಲಿಕೆಯಲ್ಲಿ ಪ್ರತ್ಯೇಕ ನಿಧಿ […]

ಬಾಲ ಕಾರ್ಮಿಕ ಪದ್ಧತಿ ಒಂದು ಸಾಮಾಜಿಕ ಪಿಡುಗು

Friday, July 25th, 2014
child labor

ಮಂಗಳೂರು : (ಲೇಖನ) ಬಾಲ ಕಾರ್ಮಿಕ ಪದ್ಧತಿ ಒಂದು ಸಾಮಾಜಿಕ ಪಿಡುಗು. ಸಮಾಜದ ಸೌಸ್ಥ್ಯವನ್ನು ಕದಡುವ ಅನಿಷ್ಠ ಪದ್ಧತಿ. ಮಕ್ಕಳ ಭವಿಷ್ಯವನ್ನು ಎಳೆ ವಯಸ್ಸನಲ್ಲಿಯೇ ಚಿವುಟುವ ಕ್ರೂರ ಪದ್ಧತಿ. ಒಂದು ದೇಶದ ಸಾಮಾಜಿಕ ಹಾಗೂ ಆರ್ಥಿಕತೆ ಮೇಲೆ ಪ್ರತೀಕೂಲ ಪರಣಾಮ ಬೀರಬಲ್ಲ ಶಕ್ತಿಯನ್ನು ತನ್ನ ಆಂತರ್ಯದಲ್ಲಿ ಹುದುಗಿಸಿಕೊಂಡಿರುವ ಪದ್ಧತಿ. ಈ ಸಮಸ್ಯೆ ಕುರಿತು ಅಧ್ಯಯನ ಮಾಡಿದರೆ ಅದರ ಆಳ ಹಾಗೂ ವಿಸ್ತಾರ ಭಯಾನಕವೆನಿಸುತ್ತದೆ. ಈ ಸಮಸ್ಯೆ ಕೇವಲ ಒಂದು ಪ್ರಾಂತ ಅಥವಾ ದೇಶಕ್ಕೆ ಸೀಮಿತವಾಗಿಲ್ಲ. ಇದು ವಿಶ್ವ […]

ಕುರ್ನಾಡು-ಚೇಳೂರಿನಲ್ಲಿ ಜಿಲ್ಲಾ ಕಾರಾಗೃಹ ನಿರ್ಮಾಣ ಯೋಜನೆ: ಕೆ.ಜೆ. ಜಾರ್ಜ್

Thursday, July 24th, 2014
KJ-George

ಮಂಗಳೂರು : ಮಂಗಳೂರಿನಲ್ಲಿ ಗರಿಷ್ಠ ಭದ್ರತೆ ಇರುವ ಕಾರಾಗೃಹ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಅದಕ್ಕಾಗಿ ಬಂಟ್ವಾಳ ತಾಲೂಕಿನ ಕುರ್ನಾಡು ಮತ್ತು ಚೇಳೂರು ಗ್ರಾಮಗಳ ವ್ಯಾಪ್ತಿಯಲ್ಲಿ 100 ಎಕರೆ ಜಮೀನು ಗುರುತಿಸಲಾಗಿದೆ ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾರವರ ನಗರ ಹೊರ ವಲಯದಲ್ಲಿ ಕಾರಾಗೃಹ ನಿರ್ಮಾಣದ ಯೋಜನೆ ಸರಕಾರದ ಮುಂದೆ ಇದೆಯೇ ಎಂಬ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, 63 ಎಕರೆ 89 ಸೆಂಟ್ಸ್ ಜಮೀನು ಇಲಾಖೆಯ ವಶದಲ್ಲಿದೆ. […]

ಪತ್ರಿಕಾಗೋಷ್ಠಿ ನಡೆಸಿ ಸಿ.ಬಿ.ಐ. ತನಿಖೆಯ ದಾರಿ ತಪ್ಪಿಸುತ್ತಿರುವ ಮಹೇಶ ಶೆಟ್ಟಿ ತಿಮರೋಡಿ : ಧರ್ಮಸ್ಥಳ

Thursday, July 24th, 2014
Sowjanya Murder

ಧರ್ಮಸ್ಥಳ: ಇಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಉಜಿರೆಯ ಮಹೇಶ ಶೆಟ್ಟಿ ತಿಮರೋಡಿಯವರು ಕಳೆದ ಒಂದು ವರ್ಷದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಇಲ್ಲಿಯ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಕುಟುಂಬದ ವಿರುದ್ಧ ನಿರಂತರವಾಗಿ ಮಾಡುತ್ತಿದ್ದ ಸುಳ್ಳು ಆರೋಪಗಳನ್ನು ಮತ್ತೊಮ್ಮೆ ಪುನರುಚ್ಚರಿಸುತ್ತಾ ಸಾರ್ವಜನಿಕರನ್ನು ಹಾಗೂ ಶ್ರೀ ಕ್ಷೇತ್ರದ ಭಕ್ತಾದಿಗಳನ್ನು ದಾರಿ ತಪ್ಪಿಸುವ ಕಠೋರ ಪ್ರಯತ್ನವಷ್ಟೆ ಆಗಿದೆ. ಉಜಿರೆಯ ಕಾಲೇಜು ವಿದ್ಯಾರ್ಥಿನಿಯ ಹತ್ಯೆಯ ಕುರಿತು ರಾಷ್ಟ್ರದ ಅತ್ಯುನ್ನತ ತನಿಖಾ ಸಂಸ್ಥೆಯಾದ ಸಿ.ಬಿ.ಐ. ಕಳೆದ 4 ತಿಂಗಳುಗಳಿಂದ ನಿಷ್ಪಕ್ಷಪಾತ ಹಾಗೂ […]

ಕಂಕನಾಡಿ ಮಾರುಕಟ್ಟೆಯ ಕೆಸರು ಕೊಚ್ಚೆಯನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದ ವರ್ತಕರು

Wednesday, July 23rd, 2014
kankanady Market

ಮಂಗಳೂರು : ಕಂಕನಾಡಿ ಮಾರುಕಟ್ಟೆಯ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಲು ವಿವಿಧ ಚುನಾಯಿತ ಪ್ರತಿನಿಧಿಗಳಿಗೆ ಮಹಾನಗರಪಾಲಿಕೆಗೆ ಹಲವಾರು ಸಲ ಮನವಿ ಮಾಡಿಕೊಂಡಿದ್ದರೂ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಾರದಿದ್ದ ಕಾರಣ ಕಂಕನಾಡಿ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸುತ್ತಿರುವ ವ್ಯಾಪಾರಸ್ಥರು ಶ್ರಮದಾನ ಮಾಡಿ ಮಾರುಕಟ್ಟೆಯನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಕೈಗೊಂಡರು. ಮಾರುಕಟ್ಟೆಯನ್ನು ಸುಸ್ಥಿತಿಯಲ್ಲಿಡಲು ಕ್ರಮ ಕೈಗೊಳ್ಳಲು ಕಳೆದ ಹತ್ತು ತಿಂಗಳಲ್ಲಿ ಆರೋಗ್ಯ ಮಂತ್ರಿಗಳಾದ ಶ್ರೀ ಯು. ಟಿ. ಖಾದರ್, ಸ್ಥಳೀಯ ಶಾಸಕರಾದ ಶ್ರೀ ಜೆ. ಆರ್. ಲೋಬೋ, ಉಸ್ತುವಾರಿ ಮಂತ್ರಿಗಳಾದ ಶ್ರೀ ರಮಾನಾಥ ರೈ, […]

ಶಾಲಾ ಮಕ್ಕಳ ಆರೋಗ್ಯ ತಪಾಸಣೆಗೆ 16 ವೈದ್ಯರ ತಂಡ-ಎ.ಬಿ.ಇಬ್ರಾಹಿಂ

Wednesday, July 23rd, 2014
dc ab ibrahim

ಮಂಗಳೂರು : ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮದಡಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ 2014-15ನೇ ಸಾಲಿನಲ್ಲಿ ಜಿಲ್ಲೆಯ ಸರ್ಕಾರಿ ,ಅನುದಾನಿತ,ಖಾಸಗಿ ಮತ್ತು ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ 1 ರಿಂದ 10ನೇ ತರಗತಿಯ ಮಕ್ಕಳ ಆರೋಗ್ಯ ತಪಾಸಣೆ ನಡೆಸಲು 16 ನುರಿತ ವೈದ್ಯರ ತಂಡ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ತಿಳಿಸಿದ್ದಾರೆ. ಅವರು ಇಂದು ತಮ್ಮ ಕಚೇರಿಯಲ್ಲಿ ನಡೆದ ಶಾಲಾ ಮಕ್ಕಳ ಆರೋಗ್ಯ ತಪಾಸಣೆ ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮ ಅನುಷ್ಠಾನ ಪ್ರಗತಿ ಪರಿಶೀಲನೆ ನಡೆಸಿದರು. ಜಿಲ್ಲಾ […]

ತುಟ್ಟಿ ಭತ್ಯೆ ನೀಡದಿದ್ದರೆ ಕೆಲಸ ಸ್ಥಗಿತ ಮಾಡುತ್ತೇವೆ :ಎಐಟಿಯುಸಿ ಎಚ್ಚರಿಕೆ

Wednesday, July 23rd, 2014
SK beedi

ಮಂಗಳೂರು : ಬೀಡಿ ಕಾರ್ಮಿಕರಿಗೆ 2014 ಎಪ್ರಿಲ್ ಒಂದರಿಂದ ನೀಡಬೇಕಾದ ತುಟ್ಟಿಭತ್ಯೆ ರೂ.21.15 ನ್ನು ಬೀಡಿ ಮಾಲಕರು ಇದುವರೆಗೆ ಕಾರ್ಮಿಕರಿಗೆ ಪಾವತಿಸದೆ ವಿಳಂಬ ನೀತಿಯನ್ನು ಅನುಸರಿಸುತ್ತಿದ್ದಾರೆ. ಈ ಬಗ್ಗೆ ಹಲವಾರು ಸಲ ಮಾಲಕರನ್ನು ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ. ಪೂರ್ತಿ ಮೊತ್ತ ಕಾರ್ಮಿಕರಿಗೆ ಪಾವತಿಸುವ ಬದಲು ಕಡಿಮೆ ಮಾಡುವ ಬಗ್ಗೆ ಪ್ರಯತ್ನಿಸುತ್ತಿದ್ದಾರೆ. ತಕ್ಷಣ ರೂ. 21.15 ಪಾವತಿಸದಿದ್ದರೆ ಕೆಲಸ ಸ್ಥಗಿತ ಮಾಡುತ್ತೇವೆ ಎಂದು ಎಐಟಿಯುಸಿ ಕಾರ್ಮಿಕರು ಬೀಡಿ ಮಾಲಕರನ್ನು ಎಚ್ಚರಿಸಿದರು. ತುಟ್ಟಿಭತ್ಯೆ ಪಾವತಿಸದಿರುವ ಎಲ್ಲಾ ಬೀಡಿ ಮಾಲಕರ ವಂಚನಾ ನೀತಿಯನ್ನು […]

ಮಂಗಳೂರು ನಗರದಲ್ಲಿ ತೀವ್ರವಾದ ಪಾರ್ಕಿಂಗ್ ಸಮಸ್ಯೆ : ಡಿಸಿ ವಿಶೇಷ ಸಭೆ

Saturday, July 19th, 2014
MUDA

ಮಂಗಳೂರು : ವಾಹನಗಳ ಪಾರ್ಕಿಂಗ್ ಸಮಸ್ಯೆ ಮಂಗಳೂರು ನಗರದಲ್ಲಿ ತೀವ್ರವಾಗಿ ಕಾಡುತ್ತಿದ್ದು, ಈ ನಿಟ್ಟಿನಲ್ಲಿ ಮುಂದಿನ ತಿಂಗಳು ವಿಶೇಷ ಸಭೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದ್ದಾರೆ. ಅವರು ಶನಿವಾರ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಂಗಳೂರು ನಗರದ ಬೆಳವಣಿಗೆಗೆ ಪೂರಕವಾಗಿ ಪಾರ್ಕಿಂಗ್ ವ್ಯವಸ್ಥೆ ಸಿದ್ಧಗೊಂಡಿಲ್ಲ. ವಾಹನಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳಗೊಂಡಿದ್ದರೂ, ರಸ್ತೆ ಅಭಿವೃದ್ಧಿ ಅದಕ್ಕೆ ಅನುಗುಣವಾಗಿಲ್ಲ. ಬಹುಮಹಡಿ ವಾಣಿಜ್ಯ ಕಟ್ಟಡಗಳು ಮತ್ತು ಅಪಾರ್ಟ್ ಮೆಂಟ್ ಗಳ ನಿರ್ಮಾಣದಲ್ಲೂ […]

ಆಟಿ ಸ್ಪೆಷಲ್ : ಕೆ.ಎಸ್.ಅರ್.ಟಿ.ಸಿ ಪ್ರಯಾಣದಲ್ಲಿ ರಿಯಾಯಿತಿ ದರ

Friday, July 18th, 2014
ksrtc

ಮಂಗಳೂರು : ವಾರದ ದಿನಗಳಲ್ಲಿ ನಿಗಮದ ಸೇವೆಗಳತ್ತ ಸಾರ್ವಜನಿಕ ಪ್ರಯಾಣಿಕರನ್ನು ಆಕರ್ಷಿಸಲು ಪ್ರಯಾಣೋತ್ಸವ ಯೋಜನೆಯನ್ನು ಪರಿಚಯಿಸುತ್ತಿದೆ. ಆಟಿ ವಿಶೇಷ ಕೊಡುಗೆಯಾಗಿ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕೆ.ಎಸ್.ಅರ್.ಟಿ.ಸಿ ಸೇವೆಗಳಲ್ಲಿ ಮಂಗಳವಾರ, ಬುಧವಾರ ಹಾಗೂ ಗುರುವಾರಗಳಂದು ಪ್ರಯಾಣಿಸಲು ಮುಂಗಡ ಬುಕ್ಕಿಂಗ್ ಮಾಡುವ ಪ್ರಯಾಣಿಕರಿಗೆ ಮಾತ್ರ ಪ್ರಯಾಣದರದಲ್ಲಿ ಶೇ. 10% ರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ. ಇದು ಜುಲೈ14ರಿಂದ ಸೆಪ್ಟಂಬರ್ 18ರವರೆಗೆ ಜಾರಿಯಲ್ಲಿರುತ್ತದೆ ( ಈ ರಿಯಾಯಿತಿಯು ಆಗಸ್ಟ್ 14, 27 ಮತ್ತು 28ರಂದು ಅನ್ವಯವಾಗುವುದಿಲ್ಲ). ಇದಲ್ಲದೆ ಆನ್ಲೈನ್ ಮುಖಾಂತರ ಇ-ಟಿಕೆಟ್/ಎಂಟಿಕೇಟ್ ಮುಂಗಡ […]

ಗ್ರಾಮಸ್ನೇಹಿ ಪರಿಣಾಮಕಾರಿಗೊಳಿಸಲು ಅಧಿಕಾರಿಗಳಿಗೆ ಜಿ.ಪಂ. ಅಧ್ಯಕ್ಷರ ಸೂಚನೆ

Thursday, July 17th, 2014
kdp meeting

ಮಂಗಳೂರು : ಗ್ರಾಮೀಣ ಮಟ್ಟದಲ್ಲಿ ನಾಗರೀಕರ ಅಹವಾಲುಗಳನ್ನು ತಳಮಟ್ಟದಲ್ಲಿಯೇ ಆಲಿಸಲು ಪ್ರತೀ ಜಿಲ್ಲಾ ಪಂಚಾಯತ್ ಸದಸ್ಯರ ಕ್ಷೇತ್ರದಲ್ಲಿ ಆರಂಭಿಸಲಾಗಿರುವ ಗ್ರಾಮಸ್ನೇಹಿ ಕಾರ್ಯಕ್ರಮವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್ಪಗೌಡ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅವರು ಗುರುವಾರ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇತ್ತೀಚೆಗೆ ನಡೆದ ಮೊದಲ ಗ್ರಾಮಸ್ನೇಹಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದೆ. ಆಗಸ್ಟ್ 5ರಂದು ಎರಡನೇ ಕಾರ್ಯಕ್ರಮ ನಡೆಯಲಿದೆ. ಜನರ ಅಹವಾಲುಗಳನ್ನು ನೇರವಾಗಿ […]