ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಪ್ರತಿಭಾ ಪುರಸ್ಕಾರ

Sunday, June 15th, 2014
Ramakrishna school

ಮಂಗಳೂರು: ಬಂಟ್ಸ್ ಹಾಸ್ಟೆಲ್ನಲ್ಲಿರುವ ಶ್ರೀ ರಾಮಕೃಷ್ಣ ಪ್ರೌಢ ಶಾಲೆಯಲ್ಲಿ 2013-14ರ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೇಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ 34 ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಶಾಲಾ ವತಿಯಿಂದ ಪುರಸ್ಕರಿಸಲಾಯಿತು. ಎ.ಬಿ.ಶೆಟ್ಟಿ ಸಭಾಂಗಣದಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಕೆ.ಅಜಿತ್ಕುಮಾರ್ ರೈ ಮಾಲಾಡಿ, ಕಾರ್ಯದರ್ಶಿಗಳಾದ ಮೇಘನಾಥ ಶೆಟ್ಟಿ, ಖಜಾಂಚಿ ಮನಮೋಹನ ಶೆಟ್ಟಿಯವರು ಆಗಮಿಸಿ, ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಸನ್ಮಾನಿಸಿದರು. ಹಾಗು ತಮ್ಮ ಭಾಷಣದಲ್ಲಿ ವಿದ್ಯಾರ್ಥಿಗಳ ಸಾಧನೆಯನ್ನು ಪ್ರಶಂಸಿಸಿದರು. ವೇದಿಕೆಯಲ್ಲಿ ಶಿಕ್ಷಕ ರಕ್ಷಕ […]

ಹೈಬ್ರಿಡ್ ಬೈಕ್ ವಿದ್ ಟು ವೀಲ್ ಡ್ರೈವ್ ಕರಾವಳಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ಅಪೂರ್ವ ಸಾಧನೆ

Friday, June 13th, 2014
Karavali College

ಮಂಗಳೂರು : ನಗರದ ನೀರುಮಾರ್ಗದಲ್ಲಿರುವ ಪ್ರತಿಷ್ಠಿತ ಕರಾವಳಿ ಇನ್ಸ್ಪಿಟ್ಯೂಟ್ ಆಫ್ ಟೆಕ್ನಾಲಜಿಯ ಅಂತಿಮ ವರ್ಷ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಸುಬಿನ್ ಡಿ ತಂಬಿ ಹಾಗೂ ಅನಜು ಐಸಾಕ್ ಇವರು, ಪ್ರೋ. ಪಿ. ರಮೇಶ್ ಕುಮಾರ್ ಇವರ ಮಾರ್ಗದರ್ಶನದಲ್ಲಿ ವಿಶಿಷ್ಟ ರೀತಿಯ ಆಧುನಿಕ ದ್ವಿಚಕ್ರ ವಾಹನ ‘ಹೈಬ್ರಿಡ್ ಬೈಕ್ ವಿದ್ ಟು ವೀಲ್ ಡ್ರೈವ್’ವನ್ನು ನಿರ್ಮಿಸುವ ಮೂಲಕ ದ್ವಿಚಕ್ರ ವಾಹನಗಳ ಯುಗದಲ್ಲಿ ಹೊಸ ಆಯಾಮವನ್ನು ಸೃಷ್ಟಿಸಿದ್ದಾರೆ. ಈ ದ್ವಿಚಕ್ರ ವಾಹನದಲ್ಲಿ ಗ್ರಾಹಕರಿಗೆ ಎರಡು ಆಯ್ಕೆಗಳಿದ್ದು, ಇದು ಪೆಟ್ರೋಲ್ […]

ನರನಾರಾಯಣನಾಗುವ ಏಕೈಕ ಭೂಮಿ ಭಾರತ : ಪ್ರಭಾಕರ ಭಟ್

Friday, June 13th, 2014
Rama Vidya Kendra Kalladka

ಬಂಟ್ವಾಳ : ಒಳ್ಳೆಯ ಚಿಂತನೆಗಳು ಯೋಜನೆಗಳನ್ನು ಮನಸ್ಸಿನಲ್ಲಿ ತುಂಬಿಕೊಂಡು ಅದೆಲ್ಲವೂ ದೇಶಕ್ಕೆ ಸಮರ್ಪಿತವಾದಾಗ ಅದರಿಂದ ನಮಗೂ ಒಳಿತೇ ಸಂಭವಿಸುತ್ತದೆ. ನಾವು ಯಾವುದೇ ವೃತ್ತಿಯಲ್ಲಿದ್ದರೆ ನಮ್ಮ ತನುಮನ ಧನ ದೇಶಕ್ಕೆ ಸಮರ್ಪಿತವಾದಾಗ ನಿಜವಾಗಿ ನಾವು ತೃಪ್ತರಾಗಲು ಸಾಧ್ಯ ಎಂದು ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ಡಾ| ಪ್ರಭಾಕರ ಭಟ್ ಹೇಳಿದರು. ಅವರು ಶ್ರೀರಾಮ ಪದವಿ ಪೂರ್ವ ವಿದ್ಯಾಲಯದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ‘ಆಗತ ಸ್ವಾಗತ’ ಇದರಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಾ, ಪರೀಕ್ಷೆ ,ಅಂಕಗಳು ವಿದ್ಯಾಭ್ಯಾಸದ ಒಂದು ಭಾಗವಾದರೆ […]

ಆಶಾಲತಾ ನಾಪತ್ತೆ ಪ್ರಕರಣ: ಬಂಟ್ವಾಳ ಪೊಲೀಸರಿಗೆ ಅಭಿನಂದನೆ

Friday, June 13th, 2014
Bantwal Police

ಬಂಟ್ವಾಳ: ಪೋಲೀಸರು ಯಾವುದೇ ಒತ್ತಡಕ್ಕೆ ಒಳಗಾಗದೇ ತಾಳ್ಮೆಯಿಂದ ಕೆಲಸ ಮಾಡಿದರೆ ಯಾವುದೇ ಪ್ರಕರಣವನ್ನು ಬೇಧಿಸುತ್ತಾರೆ, ಅವರಿಗೆ ಸಾರ್ವಜನಿಕರು ಕೂಡಾ ಸಹಾಯ ಮಾಡಬೇಕು ಎಂದು ಹಿಂದುಳಿದ ವರ್ಗ ಆಯೋಗದ ಸದಸ್ಯ ಎಂ. ತುಂಗಪ್ಪ ಬಂಗೇರ ಹೇಳಿದರು. ಅವರು ಬಂಟ್ವಾಳ ವೃತ್ತ ನಿರೀಕ್ಷಕ ಕಚೇರಿಯಲ್ಲಿ ಸರಪಾಡಿ ಅಪ್ರಾಪ್ತೆ ಆಶಾಲತಾ ನಾಪತ್ತೆ ಪ್ರಕರಣಕ್ಕೆ ಸಂಬಂದಿಸಿದಂತೆ ಆರೋಪಿಗಳನ್ನು ಬಂಧಿಸಿದ ವೃತ್ತ ನಿರೀಕ್ಷಕ ಬೆಳ್ಳಿಯಪ್ಪ ಗ್ರಾಮಾಂತರ ಠಾಣಾ ಉಪನೀರೀಕ್ಷಕ ನಾಗರಾಜ್ ಮತ್ತು ಅವರ ತಂಡಕ್ಕೆ ಅಭಿನಂದನೆ ಸಲ್ಲಿಸಿ ಮಾತನಾಡಿದರು. ಸಾಕಷ್ಟು ಉಹಾಪೋಹಗಳಿಗೆ ಕಾರಣವಾಗಿದ್ದ ಪ್ರಕರಣಕ್ಕೆ […]

ಹೋರಾಟಗಳನ್ನು ಮಾಡಿದಾಗ ಮಾತ್ರ ಸಮಸ್ಯೆಗಳು ಪರಿಹಾರಗೊಳ್ಳಬಹುದು : ಮ್ಯಾಥ್ಯೂ ಕುಟ್ಟಿ

Wednesday, June 11th, 2014
Mathew Kutty

ಬಂಟ್ವಾಳ: ತೆಂಗು ಬೆಳೆಗಾರರು ಎಲ್ಲಾ ಒಂದಾದಾಗ ಮಾತ್ರ ಸರಕಾರದ ಸವಲತ್ತುಗಳನ್ನು ಪಡೆಯಲು ಸಾದ್ಯವಾಗುತ್ತದೆ, ಜೊತೆಗೆ ಸರಕಾರದ ಯೋಜನೆಗಳು ಕಾರ್ಯರೂಪಕ್ಕೆ ತರುವಲ್ಲಿಯೂ ಸಹಕಾರಿಯಾಗುತ್ತದೆ ಎಂದು ತೆಂಗು ಅಭಿವೃದ್ದಿ ಮಂಡಳಿ ನಿರ್ದೇಶಕ ಮ್ಯಾಥ್ಯೂ ಕುಟ್ಟಿ ಹೇಳಿದರು. ಅವರು ಕರ್ನಾಟಕ ರೈತ ಸಂಘ ಹಸಿರು ಸೇನೆ ಜಿಲ್ಲಾ ಸಮಿತಿ, ತೆಂಗು ಅಭಿವೃದ್ದಿ ಮಂಡಳಿ ಮತ್ತು ತೋಟಗಾರಿಕಾ ಇಲಾಖೆಯ ಜಂಟಿ ಅಶ್ರಯದಲ್ಲಿ ಬಿ.ಸಿ.ರೋಡ್ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ನಡೆದ ಸಮಗ್ರ ತೆಂಗು ಕೃಷಿಗೆ ತೆಂಗು ಅಭಿವೃದ್ದಿ ಮಂಡಳಿಯ ಯೋಜನೆಗಳು ಮತ್ತು ರೈತರೊಂದಿಗೆ ಸಂವಾದ ಕಾರ್ಯಕ್ರಮವನ್ನು […]

ಮದುವೆಯ ಸಹಾಯರ್ಥವಾಗಿ ಕಾಮಾಜೆ ಯುವಕ ಸಂಘದ ವತಿಯಿಂದ ರೂ 5 ಸಾವಿರ ನಗದು

Wednesday, June 11th, 2014
Kammaje yuvaka Mandala

ಬಂಟ್ವಾಳ: ಕಾಮಾಜೆಯ ಶಾಂತ ಅವರ ಮಗಳು ಶುಭಾ ಅವರ ಮಗಳ ಮದುವೆಯ ಸಹಾಯರ್ಥವಾಗಿ ಕಾಮಾಜೆ ಯುವಕ ಸಂಘದ ವತಿಯಿಂದ ರೂ 5 ಸಾವಿರ ನಗದು ನೀಡಲಾಯಿತು. ಸಂಘದ ಅಧ್ಯಕ್ಷ ಬಾಸ್ಕರ್ ಟೈಲರ್, ಉಪಾಧ್ಯಕ್ಷ ವಿನೋದ್ ಕಾಮಾಜೆ , ಕಾರ್ಯದರ್ಶಿ ಉಮೇಶ್ ಕುಲಾಲ್ ಮತ್ತು ಸಂಘದ ಪದಾಧಿಕಾರಿಗಳು ಹಾಜರಿದ್ದರು. ನವೂದಯ ಯುವಕ ಸಂಘದ 2014-15ನೇ ಸಾಲಿನ ಅಧ್ಯಕ್ಷರಾಗಿ ಬಾಸ್ಕರ್ ಟೈಲರ್ ಕಾಮಾಜೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ವಿನೋದ್ ಕಾಮಾಜೆ, ಕಾರ್ಯದರ್ಶಿಯಾಗಿ ಉಮೇಶ್ ಕುಲಾಲ್ ಮೈರಾನ್ಪಾದೆ, ಜತೆ ಕಾರ್ಯದರ್ಶಿಗಳಾಗಿ ರತೀಶ್ ಭಂಡಾರಿ […]

ಉಳ್ಳಾಲ ಕಡಲ್ಕೊರೆತದ ಸಮಸ್ಯೆಗೆ ಅಕ್ಟೋಬರ್‌ ತಿಂಗಳಲ್ಲಿ ಪೈಲೆಟ್‌ ಕಾಮಗಾರಿ ಆರಂಭ

Wednesday, June 11th, 2014
Ullal-sea erection

ಉಳ್ಳಾಲ : ಉಳ್ಳಾಲ ಕಡಲ್ಕೊರೆತದ ಗಂಭೀರ ಸಮಸ್ಯೆಯನ್ನು ಬಗೆ ಹರಿಸಲು ಪೈಲೆಟ್‌ ಕಾಮಗಾರಿ ನಡೆಯುತ್ತಿದೆ. ಪೂರ್ಣ ಪ್ರಮಾಣದ ಕಾಮಗಾರಿ ಮುಂದಿನ ಅಕ್ಟೋಬರ್‌ ತಿಂಗಳಲ್ಲಿ ಪ್ರಾರಂಭವಾಗಲಿದ್ದು, ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್‌ ಹೇಳಿದ್ದಾರೆ. ಮಂಗಳವಾರ ಉಳ್ಳಾಲ ಕಡಲ್ಕೊರೆತದ ಪ್ರದೇಶಗಳಿಗೆ ಭೇಟಿ ನೀಡಿದ ಅವರು ಎಡಿಬಿ ಯೋಜನೆಯಡಿ 223 ಕೋಟಿ ರೂ. ಉಳ್ಳಾಲಕ್ಕೆ, ಉಚ್ಚಿಲ, ಸೋಮೇಶ್ವರ, ತಲಪಾಡಿಗೆ 26 ಕೋಟಿ ಬಿಡುಗಡೆಯಾಗಿದ್ದು, ಮೊಗವೀರಪಟ್ಣದಲ್ಲಿ ತಾತ್ಕಾಲಿಕ ಬಮ್ಸ್‌ ರಚನೆ […]

ಕರ್ನಾಟಕ ಬ್ಯಾಂಕಿನ ಶ್ರೀಮತಿ ಲೀಲಾ ಚಂದ್ರಶೇಖರ ಕಾರಂತ ಬೀಳ್ಕೂಡುಗೆ

Wednesday, June 11th, 2014
Leela

ಮಂಗಳೂರು : ‘ರಾಗತರಂಗ’ದ ಅಧ್ಯಕ್ಷರಾಗಿದ್ದ ಶ್ರೀ ಚಂದ್ರಶೇಖರ ಕಾರಂತರು (ಮಹಾಪ್ರಬಂಧಕರು – ಕರ್ನಾಟಕ ಬ್ಯಾಂಕ್) ಸೇವೆಯಿಂದ ನಿವೃತ್ತರಾದ ಶುಭ ಸಂದರ್ಭ ಅಭಿಮಾನಿಗಳೆಲ್ಲರೊಂದಾಗಿ ಗೌರವಿಸುವ ಸಮಾರಂಭ ಹಮ್ಮಿಕೊಂಡಿದ್ದರು. ಬೀಳ್ಕೂಡುಗೆ ಕಾರ್ಯಕ್ರಮ ಇತ್ತೀಚೆಗೆ ಎಸ್.ಡಿ.ಎಂ. ಕಾಲೇಜು ಸಭಾಂಗಣದಲ್ಲಿ ಕಾರ್ಯಕ್ರಮ ನೆರವೇರಿತು. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ಡಾ. ದೇವರಾಜ ಕೆ. ಧರ್ಮದರ್ಶಿ ಹರಿಕೃಷ್ಣ ಪುನೂರೂರು, ಜನಾರ್ದನ ಹಂದೆ ಪಾಂಡುರಂಗ, ಸುರೇಂದ್ರ ಶೆಣೈ, ನಿತ್ಯಾನಂದ ಕಾರಂತ, ಪೂರ್ಣಿಮ, ಸೌಮ್ಯ – ಮುಂತಾದವರ ಸಮಕ್ಷಮ ಕಲ್ಕೂರ ಪ್ರಶಸ್ತಿ ಪ್ರದಾನ ಮಾಡಲಾಯಿತು. […]

ಪತ್ರಿಕೆಗಳು ಸಮಾಜದ ಕಣ್ಣು : ಹಿರಿಯ ಪತ್ರಕರ್ತ ಮಲಾರ್ ಜಯರಾಂ ರೈ

Tuesday, June 10th, 2014
Manjeshwara press club

ಮಂಜೇಶ್ವರ : ಪತ್ರಿಕೆಗಳು ಸಮಾಜದ ಕಣ್ಣು , ಪತ್ರಕರ್ತರು ಸಮಾಜದ ಏಳಿಗೆಗಾಗಿ ಪ್ರತಿಭದ್ದವಾಗಿ ದುಡಿಯಬೇಕು ಮತ್ತು ಪತ್ರಿಕೆಗಳು ಸಾಮಾಜಿಕ ಕಳಕಳಿಯನ್ನು ಹೊಂದಿರಬೇಕೆಂದು ಹಿರಿಯ ಪತ್ರಕರ್ತ ಮಲಾರ್ ಜಯರಾಂ ರೈ ನುಡಿದಿದ್ದಾರೆ. ಅವರು ಮಂಜೇಶ್ವರ ಪ್ರೆಸ್ ಕ್ಲಬ್ ನ ನೂತನ ಕಛೇರಿಯನ್ನು ಉದ್ಗಾಟಿಸಿ ಮಾತನಾಡುತ್ತಿದ್ದರು. ಸಮಾಜದಲ್ಲಿನ ಕುಂದು ಕೊರತೆಗಳನ್ನು ಎತ್ತಿ ತೋರಿಸುವಲ್ಲಿ ಪತ್ರಕರ್ತರು ಮಾಡುವ ಕೆಲಸ ಪ್ರಶಂಸನಾರ್ಹ, ಈ ನಿಟ್ಟಿನಲ್ಲಿ ಯುವ ಪತ್ರಕರ್ತರು ಪತ್ರಿಕಾ ರಂಗಕ್ಕೆ ಬರುವುದು ಬಹಳ ಸಂತೋಷದ ವಿಷಯ ಎಂದರು. ಸಭಾ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದ […]

ತುಳು ಸಿನಿಮಾ ‘ಚಾಲಿಪೋಲಿಲು’ ಸೆಪ್ತೆಂಬರ್ ನಲ್ಲಿ ತೆರೆಗೆ

Saturday, June 7th, 2014
Chali Polilu

ಮಂಗಳೂರು : ಜಯಕಿರಣ ಫಿಲ್ಮ್ಸ್ ಲಾಂಛನದಡಿ ಪ್ರಕಾಶ್ ಪಾಂಡೇಶ್ವರ ಅವರು ನಿರ್ಮಿಸುತ್ತಿರುವ ಚಾಲಿಪೋಲಿಲು ತುಳು ಸಿನಮಾ ಬಗ್ಗೆ ಚಿತ್ರಪ್ರೇಮಿಗಳು ಅತೀವ ನರೀಕ್ಷೆ ಇಟ್ಟುಕೊಂಡು ಕಾಯುತ್ತಿರುವುದಕ್ಕೆ ಕಾರಣಗಳು ಹಲವಾರು. ಈ ಬ್ಯಾನರ್ನಡಿಯಲ್ಲಿ ನಿರ್ಮಾಣವಾಗುವ ಮೊದಲ ಸಿನಿಮಾ ಇದಾಗಿದ್ದರೂ, ಇದರಲ್ಲಿರುವ ಹಲವಾರು ಗುಣಾತ್ಮಕ ಅಂಶಗಳು ಚಿತ್ರಪ್ರೇಮಿಗಳ ನಿರೀಕ್ಷೆಯನ್ನು ನಾಲ್ಕು ಪಟ್ಟು ಹೆಚ್ಚಿಸಿದೆ. ಹಲವು ಪ್ರಥಮಗಳಿಗೆ ಚಾಲಿಪೋಲಿಲು ಸಿನಮಾ ಸಾಕ್ಷಿಯಾಗಿದೆ. ಮುಖ್ಯವಾಗಿ ತುಳು ರಂಗಭೂಮಿಯ ಹೆಚ್ಚಿನೆಲ್ಲ ಪ್ರಮುಖ ತಂಡಗಳ ಮುಖ್ಯ ಕಲಾವಿದರೆಲ್ಲರಿಗೂ ಇಲ್ಲಿ ಅವಕಾಶ ನೀಡಲಾಗಿರುವುದು ಮತ್ತು ಈ ರೀತಿ ಎಲ್ಲ […]