ಪತ್ರಕರ್ತರಿಗೆ ಅಂಚೆ ಮತ ಸೌಲಭ್ಯ ಒದಗಿಸುವಂತೆ ಮನವಿ

Thursday, April 3rd, 2014
Press Club

ಮಂಗಳೂರು : ಪತ್ರಕರ್ತರಿಗೆ ಅಂಚೆ ಮತ ಅಥವಾ ಚುನಾವಣಾ ಕರ್ತವ್ಯ ದೃಢಪತ್ರದ (ಇಡಿಸಿ) ಸೌಲಭ್ಯ ಒದಗಿಸುವಂತೆ ಕೋರಿ ದ. ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ದ. ಕ. ಚುನಾವಣಾಧಿಕಾರಿ ಎ.ಬಿ. ಇಬ್ರಾಹಿಂ ಅವರಿಗೆ ಬುಧವಾರ ಮನವಿ ನೀಡಲಾಯಿತು. ದ. ಕ. ಜಿಲ್ಲೆಯಲ್ಲಿ ನಕ್ಸಲ್‌ ಪೀಡಿತ ಪ್ರದೇಶವಿರುವುದರಿಂದ ಗ್ರಾಮೀಣ ಪ್ರದೇಶಗಳಿಗೆ ಮಾಧ್ಯಮ ಪ್ರತಿನಿಧಿಗಳು ಭೇಟಿ ನೀಡುವ ಅವಶ್ಯಕತೆ ಇರುತ್ತದೆ. ಚುನಾವಣೆ ದಿನದಂದು ಪತ್ರಕರ್ತರು ಬೆಳಗ್ಗಿನಿಂದ ರಾತ್ರಿ ವರೆಗೆ ಕರ್ತವ್ಯ ನಿರ್ವಹಿಸಬೇಕಾದ ಪರಿಸ್ಥಿತಿ ಇದೆ. ಈ ನಿಟ್ಟಿನಲ್ಲಿ […]

ಕಾರ್ಕಳ ಭೀಕರ ಅಪಘಾತ : ಬೆಂಗಳೂರು ಡಿಸಿಪಿ ಪತ್ನಿ ಹಾಗು ಚಾಲಕ ಬಲಿ

Thursday, April 3rd, 2014
Police Jeep

ಕಾರ್ಕಳ: ಪೊಲೀಸ್‌ ಬೊಲೆರೋ ಜೀಪ್‌ ಹಾಗೂ ಸರಕಾರಿ ಬಸ್‌ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಜೀಪ್‌ನಲ್ಲಿದ್ದ ಬೆಂಗಳೂರು ಪಶ್ಚಿಮ ವಲಯದ ಡಿಸಿಪಿ ಲಾಬೂರಾಮ್‌ ಅವರ ಪತ್ನಿ ಗಾಯತ್ರಿ (35) ಹಾಗೂ ಜೀಪ್‌ ಚಾಲಕ ನಟರಾಜ್‌ ಸಾವಿಗೀಡಾಗಿ, ಉಳಿದ ಮೂವರು ಗಾಯಗೊಂಡ ಘಟನೆ ತಾಲೂಕಿನ ಬೈಲೂರು ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದೆ. ಬೊಲೇರೊ ಪೊಲೀಸ್‌ ಜೀಪ್‌ ಧರ್ಮಸ್ಥಳದಿಂದ ಕಾರ್ಕಳ ಮೂಲಕ ಉಡುಪಿಗೆ ಸಾಗುತ್ತಿದ್ದು ಅದರಲ್ಲಿ 5 ಜನ ಪ್ರಯಾಣಿಕರಿದ್ದರು. ಬಸ್‌ ಉಡುಪಿಯಿಂದ ಕಾರ್ಕಳ ಕಡೆಗೆ ಬರುತ್ತಿತ್ತು. ಮಧ್ಯಾಹ್ನ 1.30ರ […]

ಪಳ್ಳಿ: ಕಂಪಾನ್ ಫ್ರೆಂಡ್ಸ್ ತಂಡಕ್ಕೆ ಸತ್ಯ ಸಾರಮಣಿ ಟ್ರೋಫಿ

Wednesday, April 2nd, 2014
Palli

ಕಾರ್ಕಳ: ಶ್ರೀ ಬ್ರಹ್ಮ ಶ್ರೀ ಸತ್ಯ ಸಾರಮಣಿ ಪಳ್ಳಿ ಹಾಗೂ ಫ್ರೆಂಡ್ಸ್ ಪಳ್ಳಿ ವತಿಯಿಂದ ಇತ್ತೀಚೆಗೆ ಪಳ್ಳಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಸೀಮಿತ ಓವರ್ಗಳ ಕ್ರಿಕೆಟ್ ಪಂದ್ಯಾಟದಲ್ಲಿ ಕಂಪಾನ್ ಫ್ರೆಂಡ್ಸ್ ತಂಡ `ಶ್ರೀ ಬ್ರಹ್ಮಶ್ರೀ ಸತ್ಯ ಸಾರಮಣಿ ಟ್ರೋಫಿ’ಯನ್ನು ತನ್ನದಾಗಿಸಿಕೊಂಡಿದೆ. ಬ್ರಹ್ಮಲಿಂಗೇಶ್ವರ ಬಜೆಕಳ ತಂಡ ರನ್ನರ್ಸ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಈ ಪಂದ್ಯಾಟದಲ್ಲಿ ಒಟ್ಟು 36 ತಂಡಗಳು ಭಾಗವಹಿಸಿದ್ದವು. ಸೆಮಿಫೈನಲ್ನಲ್ಲಿ ಪಳ್ಳಿ ಫ್ರೆಂಡ್ಸ್ ತಂಡವನ್ನು ಸೋಲಿಸಿದ ಕಂಪಾನ್ ತಂಡ ಫೈನಲ್ನಲ್ಲಿ ಬ್ರಹ್ಮಲಿಂಗೇಶ್ವರ ತಂಡವನ್ನು ಮಣಿಸಿ ಟ್ರೋಫಿಯನ್ನು […]

ಗೂಂಡಾಗಿರಿ ತಡೆಗಟ್ಟಲಾಗದ ಮೊದಿನ್ ಬಾವಾ ರಾಜೀನಾಮೆ ನೀಡಲಿ – ಮುನೀರ್ ಕಾಟಿಪಳ್ಳ

Wednesday, April 2nd, 2014
Muneer Katipalla

ಮಂಗಳೂರು : ಕಾಂಗ್ರೆಸ್ ಪಕ್ಷದ ಮನಪಾ ಸದಸ್ಯೆ ಪ್ರತಿಭಾ ಕುಳಾಯಿ ಅವರಿಗೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕೋಡಿಕೆರೆ ಪ್ರದೇಶದ ಬಿಜೆಪಿ ಬೆಂಬಲಿಗರು ಕಿರುಕುಳ ನೀಡಿ ದೌರ್ಜನ್ಯ ಎಸಗಿರುವುದನ್ನು DYFI ತೀವ್ರವಾಗಿ ಖಂಡಿಸುತ್ತದೆ. ಅದೇ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಖಾತರಿಪಡಿಸುವ ಜವಾಬ್ದಾರಿ ಹೊಂದಿರುವ ಸ್ಥಳೀಯ ಕಾಂಗ್ರೆಸ್ ಶಾಸಕ ಮೊದಿನ್ ಬಾವ ತಾವು ದೂರು ನೀಡಿದ್ದರೂ ಪೊಲೀಸರು ಕ್ರಮ ಕೈಗೊಂಡಿಲ್ಲ, ಮಾಜಿ ಶಾಸಕರ ಬೆಂಬಲದಿಂದ ಕೋಡಿಕೆರೆಯಲ್ಲಿ ಗೂಂಡಾಗಿರಿ ನಡೆಯುತ್ತಿದೆ ಎಂದು ಗೋಳು ತೋಡಿಕೊಂಡಿರುವುದು ಹಾಸ್ಯಾಸ್ಪದ ಎಂದು DYFIಮುಖಂಡ ಮುನೀರ್ […]

ಡಾ| ರಂಗನಾಥ್ ಎಸ್. ಶೆಟ್ಟಿ ಜೋಗೇಶ್ವರಿ ನಿಧನ

Tuesday, April 1st, 2014
Dr.Ranganath Shetty

ಮುಂಬಯಿ :  ಉಪನಗರ ಜೋಗೇಶ್ವರಿ ಪೂರ್ವದ ಪ್ರಸಿದ್ಧ ವೈದ್ಯಾಧಿಕಾರಿ, ಡಾ| ರಂಗನಾಥ್ ಎಸ್.ಶೆಟ್ಟಿ (68.) ಅವರು ಇಂದಿಲ್ಲಿ ಸೋಮವಾರ (31.03.2014) ಮುಂಜಾನೆ ತನ್ನ ಸ್ವನಿವಾಸ ಗೋರೆಗಾಂವ್ ಪೂರ್ವದ ಪೇರುಭಾಗ್ ಅಲ್ಲಿನ ಧನವಂತಿ ಅಪಾರ್ಟ್ ಮೆಂಟ್ ನ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು. ಮೂಲತಃ ಮಂಗಳೂರು ಬಳ್ಕುಂಜೆ ಸನಿಹದ ಮುಂಡ್ಕೂರು ಉಳೆಪಾಡಿ ಕಲೆಂಬಿ ನಿವಾಸದವರಾಗಿದ್ದ ರಘುನಾಥ್ ಶೆಟ್ಟಿ ಹಲವಾರು ವರ್ಷಗಳಿಂದ ಜೋಗೇಶ್ವರಿ ಪೂರ್ವದಲ್ಲಿ ಪಾರಸ್ ನಗರದಲ್ಲಿ ಕ್ಲಿನಿಕ್ ಮೂಲಕ ವೈದ್ಯಕೀಯ ಸೇವಾ ನಿರತರಾಗಿದ್ದರು. ಮೃತರು ಪತ್ನಿ ಶ್ರೀಮತಿ ಸುಕನ್ಯಾ ಆರ್.ಶೆಟ್ಟಿ, ಏಕೈಕ ಸುಪುತ್ರಿ ಡಾ| […]

ದಕ್ಷಿಣಕನ್ನಡ 17 ಲೋಕಸಭಾ ಚುನಾವಣೆ-14 ಅಭ್ಯರ್ಥಿಗಳು

Saturday, March 29th, 2014
Ibrahim AB

ಮಂಗಳೂರು : 17 ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಗೆ ನಾಮಪತ್ರ ಹಿಂತೆಗೆದುಕೊಳ್ಳಲು ಇಂದು ಅಂತಿಮ ದಿನವಾಗಿದ್ದು, ಒಟ್ಟು 14 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. 1) ಜನಾರ್ಧನ ಪೂಜಾರಿ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್), 2)ನಳಿನ್ ಕುಮಾರ್ ಕಟೀಲು (ಭಾರತೀಯ ಜನತಾ ಪಕ್ಷ), 3)ಮೂಸೆಕುಂಞ ಯಾನೆ ಅಬ್ದುಲ್ ಕರೀಂ(ಬಹುಜನ ಸಮಾಜ ಪಕ್ಷ) 4)ಕೆ.ಯಾದವ ಶೆಟ್ಟಿ (ಭಾರತೀಯ ಕಮ್ಯನಿಸ್ಟ್ ಪಕ್ಷ/ಮಾರ್ಕಿಸ್ಟ್),5) ಮಾರ್ಪಳ್ಳಿ ರಾಮಯ್ಯ ವಾಸುದೇವ(ಆಮ್ ಆದ್ಮಿ ಪಾರ್ಟಿ)6) ಸುಪ್ರೀತ್ ಕುಮಾರ್ ಪೂಜಾರಿ( ಹಿಂದೂಸ್ತಾನ್ ಜನತಾ ಪಾರ್ಟಿ)7) ಹನೀಫ್ ಖಾನ್ ಕೊಡಾಜೆ (ಸೋಶಿಯಲ್ […]

ಹಂಝ ಮಲಾರಿಗೆ ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ

Saturday, March 29th, 2014
Hamza Malar

ಮಂಗಳೂರು : ಯುವ ಕಥೆಗಾರ, ಪತ್ರಕರ್ತ ಹಂಝ ಮಲಾರ್ ಅವರ್`ಅಜ್ಜಿ ಸಾಕಿದ ಪುಳ್ಳಿ’ ಕಥಾ ಸಂಕಲನಕ್ಕೆ ಬೆಂಗಳೂರಿನ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ನೀಡುವ `ವಿಶ್ವೇಶ್ವರಯ್ಯ ರಾಜ್ಯ ಮಟ್ಟದ ಪ್ರಶಸ್ತಿ’ ಲಭಿಸಿದೆ. ಈಗಾಗಲೆ ಈ ಕೃತಿಗೆ ಭಟ್ಕಳದ ಡಾ. ಸೈಯ್ಯದ್ ಝಮೀರುಲ್ಲಾ ಷರೀಫ್ ಸಾಹಿತ್ಯ ಪ್ರಶಸ್ತಿ ಹಾಗು ಬೆಂಗಳೂರಿನ ಬುದ್ಧ, ಬಸವ, ಗಾಂಧಿ ಸಾಂಸ್ಕೃತಿಕ ಪ್ರತಿಷ್ಠಾನದ ಸಾಹಿತಿ ಹೆಬ್ಬಗೋಡಿ ಗೋಪಾಲ್ ದತ್ತಿ ಪುಸ್ತಕ ಬಹುಮಾನವೂ ಲಭಿಸಿದೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ತಿರುವೈಲು ಚಂದ್ರಹಾಸ ಶೆಟ್ಟಿ ನಾಮಪತ್ರ ವಾಪಸ್

Saturday, March 29th, 2014
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ತಿರುವೈಲು ಚಂದ್ರಹಾಸ ಶೆಟ್ಟಿ ನಾಮಪತ್ರ ವಾಪಸ್

ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಇರುವೈಲು ಚಂದ್ರಹಾಸ ಶೆಟ್ಟಿ, ಶುಕ್ರವಾರ ತನ್ನ ನಾಮಪತ್ರವನ್ನು ಹಿಂದೆಗೆದುಕೊಂಡಿದ್ದಾರೆ. ಮಂಗಳೂರಿನಲ್ಲಿ ಒಟ್ಟು 17 ಮಂದಿ ಸಲ್ಲಿಸಿದ ನಾಮಪತ್ರಗಳು ಸಿಂಧುಗೊಂಡಿದ್ದವು. ಇದೀಗ ಓರ್ವ ಅಭ್ಯರ್ಥಿ ಹಿಂದೆಗೆದುಕೊಂಡಿರುವುದರಿಂದ 16 ಮಂದಿ ಸ್ಪರ್ಧಾಕಣದಲ್ಲಿದ್ದಾರೆ. ಒಟ್ಟು 10 ಮಂದಿ ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರಗಳನ್ನು ಸಲ್ಲಿಸಿದ್ದು ಇದು 9ಕ್ಕೆ ಇಳಿದಿದೆ. ನಾಮಪತ್ರಗಳನ್ನು ವಾಪಸ್‌ ಪಡೆದುಕೊಳ್ಳಲು ಮಾ. 29 ಕೊನೆ ದಿನ. ಸಂಜೆ 4 ಗಂಟೆಗೆ ಅಭ್ಯರ್ಥಿಗಳಿಗೆ ಚಿಹ್ನೆಗಳನ್ನು ವಿತರಿಸಲಾಗುವುದು […]

ಪ್ರಸಾದ್‌ ಆರ್ಟ್‌ ಗ್ಯಾಲರಿಯಲ್ಲಿ ರೇಣುಕಾ ನಂಬಿಯಾರ್‌ ಚಿತ್ರಕಲಾ ಪ್ರದರ್ಶನ

Saturday, March 29th, 2014
Renuka Nambiyar Art

ಮಂಗಳೂರು : ನಗರದ ಪ್ರಸಾದ್‌ ಆರ್ಟ್‌ ಗ್ಯಾಲರಿಯಲ್ಲಿ ಮಾ. 29ರಿಂದ31ರ ತನಕ ನಡೆಯುವ ರೇಣುಕಾ ನಂಬಿಯಾರ್‌ ಅವರ ಚಿತ್ರಕಲಾ ಪ್ರದರ್ಶನವನ್ನು ಏಕಮ್‌ ಕ್ಯಾಂಡಲ್ಸ್‌ನ ಸಿಇಒ ವನಿತಾ ಪೈ ಅವರು ಉದ್ಘಾಟಿಸಿದರು. ಪ್ರತಿಯೊಬ್ಬ ಮನಿಷ್ಯನಲ್ಲಿಯೂ ಒಂದೊಂದು ಕಲೆ ಅಡಗಿದೆ. ಕಲಾವಿದ ಕಲಾಪ್ರೌಢಿಮೆಯಿಂದ ಪ್ರಸಿದ್ಧಿ ಗಳಿಸುವ ಮೂಲಕ ಕಲಾಜಗತ್ತನ್ನು ಔನತ್ಯಕ್ಕೇರಿಸಬೇಕು. ಕಲೆ ಮನುಷ್ಯ ಜೀವನ ಶೈಲಿಯನ್ನು ಬದಲಾವಣೆ ಗೊಳಿಸಬಹುದಾದ ಮಾಧ್ಯಮ ಎಂದು ಅಭಿಪ್ರಾಯಪಟ್ಟರು ಆರೋಗ್ಯಪೂರ್ಣ ಬದುಕಿಗೆ ಕಲೆಯ ಪಾತ್ರ ಮಹತ್ವ. ರೇಣುಕಾ ನಂಬಿಯಾರ್‌ ಅವರ ಚಿತ್ರಕಲೆಗಳು ವಿಭಿನ್ನವಾಗಿದೆ. ಇನ್ನೂ ಉತ್ತಮ […]

ಮುತಾಲಿಕ್ ಎರಡು ಕಡೆ ಚುನಾವಣಾ ಅಖಾಡಕ್ಕೆ : ಪ್ರಹ್ಲಾದ್‌ ಜೋಶಿ, ಅನಂತ್ ಕುಮಾರ್‌ ಗೆ ಪೈಪೋಟಿ

Friday, March 28th, 2014
Muthalik

ಬೆಂಗಳೂರು, : ಬೆಳಗ್ಗೆ ಬಿಜೆಪಿ ಸೇರಿ ಸಂಜೆ ಪಕ್ಷದಿಂದ ಹೊರಬಂದ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಎರಡು ಕಡೆ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಪ್ರಮೋದ್ ಮುತಾಲಿಕ್ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್‌ ಜೋಶಿ ವಿರುದ್ಧ ಧಾರವಾಡ ಕ್ಷೇತ್ರದಲ್ಲಿ ಮತ್ತು ಅನಂತ್ ಕುಮಾರ್‌ ವಿರುದ್ಧ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು, ಎರಡೂ ನಾಮಪತ್ರಗಳು […]