ದ.ಕ ಜಿಲ್ಲಾಧಿಕಾರಿ ಎನ್‌. ಪ್ರಕಾಶ್‌, ಪೊಲೀಸ್‌ ಆಯುಕ್ತ ಮನೀಷ್‌ ಕರ್ಬೀಕರ್‌ ವರ್ಗಾವಣೆ

Friday, December 13th, 2013
prakash Khabikar

ಮಂಗಳೂರು : ಸರಕಾರದ ಆದೇಶದಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎನ್‌. ಪ್ರಕಾಶ್‌ ಹಾಗೂ ಮಂಗಳೂರು ಪೊಲೀಸ್‌ ಆಯುಕ್ತ ಮನೀಷ್‌ ಕರ್ಬೀಕರ್‌ ಅವರನ್ನು ವರ್ಗಾವಣೆಗೊಳಿಸಲಾಗಿದೆ. ಎನ್‌. ಪ್ರಕಾಶ್‌ ಅವರು ದ.ಕ. ಜಿಲ್ಲಾಧಿಕಾರಿಯಾಗಿ 2012ರ ಡಿಸೆಂಬರ್‌ 3ರಂದು ಅಧಿಕಾರ ಸ್ವೀಕರಿಸಿದ್ದರು. ಅವರು ಕಾರ್ಮಿಕ ಆಯುಕ್ತರಾಗಿ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದಾರೆ. ಕರ್ಬೀಕರ್‌ ಅವರು 2012 ಸೆ. 20ರಂದು ಮಂಗಳೂರು ಪೊಲೀಸ್‌ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದರು. ಅವರನ್ನು ಬೆಂಗಳೂರಿಗೆ ಕೆಎಸ್‌ಆರ್‌ಪಿ ಐಜಿಪಿ ಆಗಿ ವರ್ಗಾವಣೆ ಮಾಡಲಾಗಿದೆ. ಅವರಿಂದ ತೆರವಾದ ಮಂಗಳೂರು ಪೊಲೀಸ್‌ ಆಯುಕ್ತ ಹುದ್ದೆಗೆ […]

ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಅಧ್ಯಕ್ಷರಿಗೆ ಆಹ್ವಾನ

Thursday, December 12th, 2013
Alvas Nudisiri

ಮೂಡುಬಿದಿರೆ : ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ 2013 ಇದರ ಸರ್ವಾಧ್ಯಕ್ಷರಾದ ಡಾ. ಬಿ.ಎ ವಿವೇಕ ರೈ ಅವರಿಗೆ ನುಡಿಸಿರಿ ಸ್ವಾಗತ ಸಮಿತಿಯು ಅಧಿಕೃತ ಆಮಂತ್ರಣವನ್ನು ನೀಡಿದೆ. ಮಂಗಳೂರಿನಲ್ಲಿ ರೈಗಳ ಸುಯಿಲ್ ನಿವಾಸಕ್ಕೆ ತೆರಳಿದ ಸ್ವಾಗತ ಸಮಿತಿಯ ಅಧ್ಯಕ್ಷ ಕೆ.ಅಮರನಾಥ ಶೆಟ್ಟಿ, ಆಳ್ವಾಸ್ ಎಜುಕೇಶನ್ ಫೌಂಡೇಶನ್ನ ಟ್ರಸ್ಟಿ ವಿವೇಕ್ ಆಳ್ವ ಇವರನ್ನೊಳಗೊಂಡ ತಂಡ ಭೇಟಿಯಾಗಿ ಈ ಆಹ್ವಾನವನ್ನು ನೀಡಿತು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ಬಿ.ಎ ವಿವೇಕ ರೈ ಈ ಬಾರಿಯ ಸಮ್ಮೇಳನ ಕನ್ನಡ ನಾಡು ನುಡಿಯ […]

ಬ್ಯಾರಿ ಕಲಾರಂಗದಿಂದ ಬ್ಯಾರಿ ಕಲಾವಿದರ ಸಮಾವೇಶ

Thursday, December 12th, 2013
Byari Artist

ಮಂಗಳೂರು : ಬ್ಯಾರಿ ಕಲಾರಂಗದ ವತಿಯಿಂದ ಮಂಗಳೂರು ನಗರದ ಪುರಭವನದಲ್ಲಿ ಡಿ.11 ಬುಧವಾರ ಬ್ಯಾರಿ ಕಲಾವಿದರ ಸಮಾವೇಶ ನಡೆಯಿತು. ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಅಬ್ದುಲ್ ರವೂಫ್ ಪುತ್ತಿಗೆ ‘ದಪ್ಪು’ ಬಾರಿಸುವ ಮೂಲಕ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ನಾಟಕಕಾರ ಸಂಜೀವ್ ದಂಡಕೇರಿ ಧ್ವಜಾರೋಹಣ ಮಾಡಿದರು. ಬ್ಯಾರಿ ಕಲಾರಂಗದ ಅಧ್ಯಕ್ಷ ಅಝೀಝ್ ಬೈಕಂಪಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತುಳು ನಾಟಕಕಾರ, ಚಲನಚಿತ್ರ ನಿರ್ಮಾಪಕ ವಿಜಯ ಕುಮಾರ್ ಕೊಡಿಯಾಲ್‌ಬೈಲ್, ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ, ಯೋಗೀಶ್ ಶೆಟ್ಟಿ ಜೆಪ್ಪು, ಮುಸ್ಲಿಂ ಶಿಕ್ಷಣ […]

ಅಡಕೆ ನಿಷೇಧಿಸಕ್ಕೆ ರೈತರು ಚಿಂತಿಸಬೇಕಾದ ಅಗತ್ಯವಿಲ್ಲ : ಕೊಂಕೋಡಿ

Wednesday, December 11th, 2013
campco

ಮಂಗಳೂರು: ಕ್ಯಾಂಪ್ಕೊ ಮಂಗಳೂರು ಕಚೇರಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಕ್ಯಾಂಪ್ಕೊ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಅವರು ಅಡಕೆಯನ್ನು ನಿಷೇಧಿಸಲು ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ ರೈತರು ಚಿಂತಿಸಬೇಕಾದ ಅಗತ್ಯವಿಲ್ಲ ಕ್ಯಾಂಪ್ಕೊ ಸರ್ಕಾರ ಮಾಡಿರುವ ಹುನ್ನಾರವನ್ನು ನ್ಯಾಯಾಂಗದ ಮೂಲಕ ವಿಫಲಗೊಳಿಸಲಿದೆ ಎಂದು ಹೇಳಿದರು. ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಸುಪ್ರೀಂ ಕೋರ್ಟ್ ಗೆ ಕಳೆದ ನವೆಂಬರ್ ನಲ್ಲಿ ಅಡಿಕೆ ನಿಷೇಧ ಮಾಡುವುದರ ಬಗ್ಗೆ ವರದಿಯನ್ನು ಸಲ್ಲಿಸಿದ್ದು, ಕೇಂದ್ರದ ವಕೀಲರು ಕೂಡ ಅಡಿಕೆಯನ್ನು ನಿಷೇಧಿಸಬೇಕು ಎಂಬ ವಾದವನ್ನು ಮಂಡಿಸಿದ್ದಾರೆ. ಕ್ಯಾಂಪ್ಕೊ […]

ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ವಿಧಿವಶ

Tuesday, December 10th, 2013
Srikantadatta Narasimharaja Wodeyar

ಬೆಂಗಳೂರು : ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಅವರು ಮಂಗಳವಾರ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ನಗರದ ವಿಕ್ರಮ್ ಆಸ್ಪತ್ರೆಯಲ್ಲಿ ಒಂದು ವಾರದ ಹಿಂದೆ ಎದೆನೋವಿನ ಕಾರಣ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದಿದ್ದರು. ಮಂಗಳವಾರ ಮಧ್ಯಾಹ್ನ ಮನೆಯಲ್ಲಿ ತೀವ್ರ ಎದೆನೋವು ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ಮಹಾರಾಜರನ್ನು ಕರೆ ತರಲಾಗಿತ್ತು. ಆಸ್ಪತ್ರೆಗೆ ಬರುವಷ್ಟರಲ್ಲೇ ಒಡೆಯರ್ ಅವರು ವಿಧಿವಶರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯಲ್ಲಿರುವ ತುರ್ತು ನಿಗಾ ಘಟಕದಲ್ಲಿ ಒಡೆಯರ್ ಅವರ ಪಾರ್ಥೀವ ಶರೀರವನ್ನು ಇರಿಸಲಾಗಿದೆ. ಒಡೆಯರ್ […]

ಅತ್ತಾವರ ಮಣಿಪಾಲ್ ಡೆಂಟಲ್ ಕಾಲೇಜಿಗೆ ಮೂರು ವರ್ಷದಿಂದ ಆಕ್ರಮ್ ವಿದ್ಯುತ್ ಸಂಪರ್ಕ

Tuesday, December 10th, 2013
Mescom

ಮಂಗಳೂರು : ಅತ್ತಾವರ ಕೆಎಂಸಿ ಆಸ್ಪತ್ರೆಯ ಹಿಂಭಾಗದಲ್ಲಿರುವ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸಾಯನ್ಸಸ್ ಗೆ ಅಕ್ರಮ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿದೆ ಎಂಬ ದೂರಿನಂತೆ ಮೆಸ್ಕಾಂ ಅಪರಾಧ ಪತ್ತೆ ದಳದ ಅಧಿಕಾರಿಗಳು ಸೋಮವಾರ ದಾಳಿ ನಡೆಸಿದರು. ಅತ್ತಾವರ ಕೆಎಂಸಿ ಆಸ್ಪತ್ರೆಯ ಹಿಂಭಾಗದಲ್ಲಿ ಕಾರ್ಯಾಚರಿಸುತ್ತಿರುವ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸಾಯನ್ಸಸ್ ಗೆ ಅಕ್ರಮ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಟಿ.ಎಸ್.ಹನೀಫ್ ಅವರು ದೂರು ನೀಡಿದ್ದರು. ಮೆಸ್ಕಾ ಅಪರಾಧ ಪತ್ತೇದಳದ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭ […]

ಕುಕ್ಕೆ ಸುಬ್ರಹ್ಮಣ್ಯನಿಗೆ ಅವಭೃತೋತ್ಸವ

Monday, December 9th, 2013
Temple

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಚಂಪಾಷಷ್ಠಿ ಮಹೋತ್ಸವದ ಪ್ರಯುಕ್ತ ಮಾರ್ಗಶಿರ ಶುದ್ಧ ಸಪ್ತಮಿ ಸೋಮವಾರ ಬೆಳಿಗ್ಗೆ ಕುಮಾರಾಧಾರಾ ನದಿಯಲ್ಲಿ ಶ್ರೀ ದೇವರಿಗೆ ನೌಕಾವಿಹಾರ ಹಾಗೂ ಅವಭೃತೋತ್ಸವ ನಡೆಯಿತು. ದೇವಳದಿಂದ  ಬಂಡಿ ರಥದಲ್ಲಿ ಶ್ರೀ ದೇವರ ಅವಭೃತೋತ್ಸವ ಸವಾರಿ ಹೊರಟು, ಬಿಲದ್ವಾರದ ಕಟ್ಟೆಯಲ್ಲಿ ಪೂಜೆ ನಡೆಸಲಾಯಿತು.ಬಳಿಕ ಕುಮಾರಾಧಾರಾ ನದಿ ತಟದವರೆಗೆ ಸಾಗಿಬಂದು ನದಿಯಲ್ಲಿ ತಳಿರು ತೋರಣ ಮತ್ತು ಹೂವುಗಳಿಂದ ಸಿಂಗರಿಸಲ್ಪಟ್ಟ ತೆಪ್ಪದಲ್ಲಿ ನೌಕಾವಿಹಾರ ನಡೆಯಿತು.  ಬಳಿಕ ಅವಭೃತೋತ್ಸವ ನಡೆಯಿತು. ದೇವಳದ ಪ್ರಧಾನ ಅರ್ಚಕ ವೇ|ಮೂ| ಕೇಶವ ಜೋಗಿತ್ತಾಯರ […]

5.10 ಲಕ್ಷ ರೂ. ನಗದು ದೋಚಿದ ವ್ಯಕ್ತಿಯ ಬಂಧನ

Saturday, December 7th, 2013
robber

ಮಂಗಳೂರು : ಕೇರಳ ಮೂಲದ ಕಣ್ಣೂರು ನಿವಾಸಿ ಅಯ್ಯಂವಾಡಿ ಎಂಬವರು ತನ್ನ ತಮ್ಮನ ಜೊತೆಯಲ್ಲಿ ಮಂಗಳೂರಿನ ಟೌನ್‌ಹಾಲ್ ಕಡೆಗೆ ನಡೆದು ಕೊಂಡು ಹೋಗುತ್ತಿದ್ದಾಗ ಓರ್ವ ವ್ಯಕ್ತಿ ಬಲವಂತವಾಗಿ  ಎಳೆದು ಪರಾರಿಯಾದ ಘಟನೆ ಶುಕ್ರವಾರ ಬೆಳಿಗ್ಗೆ ಮಂಗಳೂರಿನಲ್ಲಿ ನಡೆದಿದೆ. ಲಕ್ಷಾಂತರ ರೂ. ನಗದು ದೋಚಿದ್ದ ಆರೋಪಿಯನ್ನು ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಇಟ್ಟಂಗಿಯ ಓಂಕಾರ ಶೆಟ್ಟಿ(30) ಎಂದು ಗುರುತಿಸಲಾಗಿದೆ. ಈ ಬಗ್ಗೆ ಅಯ್ಯಂವಾಡಿ ಅವರು ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದರು. ನಿನ್ನೆ ಸಂಜೆ ಪಾಂಡೇಶ್ವರ ಇನ್ಸ್‌ಪೆಕ್ಟರ್  ದಿನಕರ್  ಶೆಟ್ಟಿಯವರು […]

ಕುಕ್ಕೆ ಸುಬ್ರಮಣ್ಯ ದೇವಾಲಯದಲ್ಲಿ ಮಡೆಸ್ನಾನ ಆರಂಭ

Saturday, December 7th, 2013
made sana

ಮಂಗಳೂರು : ಸುಳ್ಯ ತಾಲೂಕಿನ ಕುಕ್ಕೆ ಸುಬ್ರ ಮಣ್ಯ ದೇವಾಲಯದಲ್ಲಿ ಶುಕ್ರವಾರ ಚಂಪಾ ಷಷ್ಠಿ ಆರಂಭವಾಗಿದ್ದು ಪರ ವಿರೋಧದ ಚರ್ಚೆಯ ನಡುವೆಯೂ ಸುಮಾರು ನೂರಕ್ಕೂ ಅಧಿಕ ಭಕ್ತರು ಚಂಪಾ ಷಷ್ಠಿಯ ಮೊದಲ ದಿನ ದೇವಾಲಯದಲ್ಲಿ ಮಡೆಸ್ನಾನ ಮಾಡಿದ್ದಾರೆ. ಶುಕ್ರವಾರ ಮಧ್ಯಾಹ್ನ ನಡೆದ ಮಡೆಸ್ನಾನದಲ್ಲಿ ಭಕ್ತರ ಸಂಖ್ಯೆ ಕಡಿಮೆ ಇತ್ತು. ಸುಮಾರು  202 ಜನ ಭಕ್ತರು ಮೊದಲ ದಿನದ ಮಡೆ ಸ್ನಾನದಲ್ಲಿ ಪಾಲ್ಗೊಂಡಿದ್ದರು. ಇನ್ನೂ ಎರಡು ದಿನ ಮಡೆಸ್ನಾನ ಆಚರಣೆ ಯಥಾಸ್ಥಿತಿಯಂತೆ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ […]

ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್-2013ರ ಅಮಂತ್ರಣ ಪತ್ರಿಕೆ ಬಿಡುಗಡೆ

Friday, December 6th, 2013
nudisiri

ಮೂಡುಬಿದಿರೆ : ವಿದ್ಯಾಗಿರಿಯಲ್ಲಿ  ಡಿ.19ರಿಂದ 22ರವರೆಗೆ ನಡೆಯಲಿರುವ ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್-2013ರ ಅಮಂತ್ರಣ ಪತ್ರಿಕೆಯನ್ನು ಗುರುವಾರ ಆಳ್ವಾಸ್ ವಿಶ್ವನುಡಿಸಿರಿ ಕಚೇರಿಯಲ್ಲಿ ಬಿಡುಗಡೆಗೊಳಿಸಲಾಯಿತು. ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಪಂಡಿತಾಚರ್ಯವರ್ಯ ಸ್ವಾಮೀಜಿ ಹಾಗೂ ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಸಮಾರಂಭದಲ್ಲಿ ಆಶೀರ್ವಚನ ನೀಡಿದ ಸ್ವಾಮೀಜಿ, ಸಾಹಿತ್ಯ, ಸಂಸ್ಕೃತಿ, ಕಲೆಗಳ ಜತೆಗೆ ಕೃಷಿ, ಜನಪದ ಬಗ್ಗೆ ಕ್ರಾಂತಿ ಮಾಡಲು ಹೊರಟಿರುವ ವಿಶ್ವನುಡಿಸಿರಿ ಸಮ್ಮೇಳನವು ಜಾಗತಿಕ ಮಟ್ಟದಲ್ಲೇ ಗಮನಸೆಳೆಯಲಿದೆ. ಡಾ.ಎಂ. ಮೋಹನ್ ಆಳ್ವರವರ ಉತ್ಸಾಹ, […]