ಬಿಜೆಪಿ ಯುವಮೋರ್ಚಾ ಮಂಗಳೂರು ದಕ್ಷಿಣ ಸಮಿತಿಯಿಂದ ಕಾಲ್ನಡಿಗೆ ಜಾಥಾ

Saturday, November 16th, 2013
Yuva Morcha

ಮಂಗಳೂರು: ಬಿಜೆಪಿ ಯುವಮೋರ್ಚಾ ಮಂಗಳೂರು ದಕ್ಷಿಣ ಸಮಿತಿ ವತಿಯಿಂದ ನಗರದ ನೆಹರೂ ಮೈದಾನದಿಂದ ಕೊಡಿಯಾಲ್‌ಬೈಲ್‌ನಲ್ಲಿರುವ ಬಿಜೆಪಿ ಕಚೇರಿವರೆಗೆ, ಬೆಂಗಳೂರಿನಲ್ಲಿ ನ. 17 ರಂದು ನಡೆಯಲಿರುವ ‘ಭಾರತ ಗೆಲ್ಲಿಸಿ’ ಶಕ್ತಿಶಾಲಿ ಭಾರತಕ್ಕಾಗಿ ಬೃಹತ್‌ ಸಮಾವೇಶದ ಹಿನ್ನೆಲೆಯಲ್ಲಿ ಕಾಲ್ನಡಿಗೆ ಜಾಥಾ ನ15, ಶುಕ್ರವಾರ ನಡೆಯಿತು. ಜಾಥಾವನ್ನು ಉದ್ದೇಶಿಸಿ ಮಾತನಾಡಿದ ಸಂಸದ ನಳಿನ್‌ಕುಮಾರ್‌ ಕಟೀಲು ಮಕ್ಕಳಿಂದ ಹಿಡಿದು ಮುದುಕರ ವರೆಗೆ ನರೇಂದ್ರ ಮೋದಿ ಪ್ರಧಾನಿಯಾಗಬೇಕೆಂದು ಉತ್ಸುಕರಾಗಿದ್ದಾರೆ. ಮೋದಿ ಅಲೆ ಸರ್ವ ಭಾರತೀರ ಹೃದಯದಲ್ಲಿ ಮೋದಿ ಮಿಳಿತಗೊಂಡಿದ್ದಾರೆ ಎಂದು ಹೇಳಿದರು. ಗುಜರಾತ್‌ನಲ್ಲಿ ಮೋದಿ […]

ಮಂಗಳೂರು ಮೀನುಗಾರಿಕೆಯ ಮಹಾಸಂಘದ ಕೇಂದ್ರ ಕಚೇರಿಯ ಉದ್ಘಾಟನೆ ನ.14

Friday, November 15th, 2013
Disel-bunk

ಮಂಗಳೂರು : ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ನಿ. ಇದರ ಸ್ಥಾಪಕಾಧ್ಯಕ್ಷ ದಿ| ಆರ್‌.ಡಿ. ಮೆಂಡನ್‌ ಅವರ ಸವಿನೆನೆಪಿಗಾಗಿ ಮಂಗಳೂರು ಮೀನುಗಾರಿಕಾ ಬಂದರು ಬಳಿ ನಿರ್ಮಿಸಿರುವ ನೂತನ ಕಚೇರಿ ಕಟ್ಟಡದ ಉದ್ಘಾಟನೆ ಹಾಗೂ ಸಂಸ್ಥೆಯ ವಿವಿಧ ಸೌಲಭ್ಯಗಳ ವಿತರಣಾ ಸಮಾರಂಭವನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್‌ ಸೊರಕೆ ಗುರುವಾರ ಉದ್ಘಾಟಿಸಿದರು. ಸಚಿವ ವಿನಯ ಕುಮಾರ್‌ ಸೊರಕೆ ಅವರು ಮಾತನಾಡಿ, ಮೀನುಗಾರಿಕಾ ಕ್ಷೇತ್ರಕ್ಕೆ ರಾಜ್ಯ ಸರಕಾರ ಹೆಚ್ಚಿನ ಒತ್ತು ನೀಡಿದ್ದು, […]

ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾಗಿ ಅಜಿತ್‌ ಕುಮಾರ್‌ ರೈ ಮಾಲಾಡಿಗೆ ಗೆಲುವು

Thursday, November 14th, 2013
Ajith Kumar Rai Maladi

ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಹಾಗೂ ಕಾರ್ಯಕಾರಿ ಸಮಿತಿಗೆ ರವಿವಾರ ನಡೆದ ಚುನಾವಣೆ ಫಲಿತಾಂಶ ಬುಧವಾರ ಸಂಜೆ ಪ್ರಕಟಗೊಂಡಿದ್ದು, ಅಜಿತ್‌ ಕುಮಾರ್‌ ರೈ ಮಾಲಾಡಿ ಅವರು ತಮ್ಮ ಪ್ರತಿಸ್ಪರ್ಧಿ ಸದಾನಂದ ಶೆಟ್ಟಿ ಅವರ ವಿರುದ್ಧ 1,149 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅಜಿತ್‌ ಕುಮಾರ್‌ ರೈ ಮಾಲಾಡಿ ಅವರು 4,363 ಮತ ಗಳಿಸಿದರೆ, ಸದಾನಂದ ಶೆಟ್ಟಿ ಅವರು 3,214 ಮತ ಪಡೆದರು. ಮಂಗಳೂರು ತಾಲೂಕಿನಲ್ಲಿ ಮಹಿಳಾ ಮೀಸಲು ಸ್ಥಾನ ಸೇರಿಸಿ ಒಟ್ಟು 20 […]

ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ತೊಕ್ಕೊಟ್ಟಿನಲ್ಲಿ ಪ್ರತಿಭಟನೆ

Thursday, November 14th, 2013
BJP-YM

ಮಂಗಳೂರು: ಮಂಗಳೂರು ಕ್ಷೇತ್ರ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ತೊಕ್ಕೊಟ್ಟು-ಬಬ್ಬುಕಟ್ಟೆವರೆಗಿನ ರಸ್ತೆಯ ದುರಸ್ತಿಯನ್ನು ಖಂಡಿಸಿ  ಬುಧವಾರ ನಗರದ ತೊಕ್ಕೊಟ್ಟಿನಲ್ಲಿ ಪ್ರತಿಭಟನೆ ನಡೆಯಿತು. ಮಾಜಿ ಶಾಸಕ ಜಯರಾಂ ಶೆಟ್ಟಿ ಮಾತನಾಡಿ, ಒಳಚರಂಡಿ ಕಾಮಗಾರಿಗಾಗಿ ತೊಕ್ಕೊಟ್ಟಿನಿಂದ ಬಬ್ಬುಕಟ್ಟೆವರೆಗೆ ಅಗೆಯಲಾಗಿರುವ ರಸ್ತೆ ದುರಸ್ಥಿಪಡಿಸುವಂತೆ ಒತ್ತಾಯಿಸಿ , ರಾಜ್ಯ ಸರಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ತೊಕ್ಕೊಟ್ಟಿ ನಿಂದ ಬಬ್ಬುಕಟ್ಟೆವರೆಗಿನ ರಸ್ತೆ ಸಂಪೂರ್ಣ ಕೆಟ್ಟು ಹೋಗಿದೆ. ಆರು ತಿಂಗಳ ಹಿಂದೆಯೂ ನಡೆದಂತಹ ಪ್ರತಿಭಟನೆ ವೇಳೆ ಅಧಿಕಾರಿಗಳು ನೀಡಿ ರುವ ಭರವಸೆಗಳು ಇನ್ನೂ ಈಡೇರಿಲ್ಲ. ಎಡಿಬಿಯಿಂದ ಲೋಕೋಪಯೋಗಿ ಇಲಾಖೆಗೆ […]

ಇಂಡಿಯನ್ ಮುಜಾಹಿದ್ದೀನ್ ಉಗ್ರರಿಗೆ ಮಂಗಳೂರು ಮಹಿಳೆಯ ಅಕೌಂಟ್ ನಿಂದ ಕೊಟ್ಯಾಂತರ ಹಣ ರವಾನೆ

Wednesday, November 13th, 2013
Indian Mujahiddin

ಮಂಗಳೂರು : ಪಾಟ್ನಾದಲ್ಲಿ ಸರಣಿ ಬಾಂಬ್ ಸ್ಫೋಟ ನಡೆಸಿದ ಇಂಡಿಯನ್ ಮುಜಾಹಿದ್ದೀನ್ ಉಗ್ರರಿಗೆ ಹಣಕಾಸು ನೆರವು ಒದಗಿಸದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಮಂಗಳೂರು ಮೂಲದ ಆಯಿಷಾ ಬಾನು ಪತಿಯ ಅಕೌಂಟ್‌ನಲ್ಲಿ 5 ಕೋಟಿ ರುಪಾಯಿ ನಗದು ಪತ್ತೆಯಾಗಿದೆ. ಆಯಿಷಾಳನ್ನು ವಶಕ್ಕೆ ಪಡೆದಿರುವ ಮಂಗಳೂರು ಪೊಲೀಸರು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಅವಳಿಂದ ವಿವಿಧ ಬ್ಯಾಂಕ್‌ಗಳ 7 ಪಾಸ್‌ಬುಕ್, 6 ಎಟಿಎಂ ಕಾರ್ಡ್, 10 ಮೊಬೈಲ್ ಹಾಗೂ 10 ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆಯಿಷಾ ಹಾಗೂ ಆಕೆಯ ಪತಿ ಜುಬೇರ್ […]

ವ್ಯಾಪಾರ ವರ್ಧನೆಗಾಗಿ 11 ಮಂದಿಯ ಜಪಾನಿ ಆಯೋಗ ಮಂಗಳೂರಿನಲ್ಲಿ

Tuesday, November 12th, 2013
KCCI

ಮಂಗಳೂರು: ಜಪಾನ್‌ನ 11 ಮಂದಿ ಸದಸ್ಯರು ಕರಾವಳಿ­ಯಲ್ಲಿರುವ  ಫಾದರ್‌ ಮುಲ್ಲರ್ ಆಸ್ಪತ್ರೆ, ಯುನಿಟಿ ಆರೋಗ್ಯ ಸಂಸ್ಥೆಗೆ ಭೇಟಿ ನೀಡಿದ್ದು ವೈದ್ಯಕೀಯ ಶಿಕ್ಷಣ ಮತ್ತು ಮೀನುಗಾರಿಕಾ ಕ್ಷೇತ್ರದಲ್ಲಿ ಮಂಗಳೂರಿನ ಸಂಸ್ಥೆಗಳೊಂದಿಗೆ ಸೋಮವಾರ ಮಂಗಳೂರಿಗೆ ಭೇಟಿ ನೀಡಿ ಕೈ ಜೋಡಿಸುವ ಆಸಕ್ತಿ ವಹಿಸಿದ್ದಾರೆ. ಜಪಾನ್‌ನ ವಿವಿಧ ರಾಜಕೀಯ ಪಕ್ಷಗಳ ಯುವ ಸದಸ್ಯರು ಜತೆಯಾಗಿ ರ್‍ಯೋಮಾ ಪ್ರಾಜೆಕ್ಟ್‌ ಎಂಬ ಸಂಘಟನೆ ರೂಪಿಸಿಕೊಂಡಿದ್ದು ಎಂಟು ದಿನಗಳ ಭಾರತ ಭೇಟಿಗಾಗಿ ಸ್ವಯಂ ಆಸಕ್ತಿಯಿಂದ ಬಂದಿರುವುದಾಗಿ ರ್‍ಯೋಮಾ ಪ್ರಾಜೆಕ್ಟ್‌ನ ಪ್ರತಿನಿಧಿಗಳ ಮುಖ್ಯಸ್ಥ ಸೊಹೈ ಕಮಿಯಾ ಹೇಳಿದರು. ಅವರು […]

ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಮತ್ತೆ ನಕ್ಸಲರ ಹೆಜ್ಜೆಗುರುತು

Saturday, November 9th, 2013
Belthangady

ಬೆಳ್ತಂಗಡಿ :  ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾರಾವಿಯ ಕುತ್ಲೂರಿನಲ್ಲಿ ರಾಮಚಂದ್ರ ಭಟ್‌ ಎಂಬುವವರ ಮನೆಗೆ ಭೇಟಿ ನೀಡಿದ ನಕ್ಸಲರ ತಂಡವು ಅಂಗಳದಲ್ಲಿ ನಿಲ್ಲಿಸಲಾಗಿದ್ದ ಕಾರು ಮತ್ತು ಬೈಕ್‌ಗೆ ಬೆಂಕಿ ಹಚ್ಚಿ ಪರಾರಿಯಾದ ಘಟನೆ ಇಂದು ಮುಂಜಾನೆ ಸುಮಾರು 2 ಗಂಟೆ ಹೊತ್ತಿಗೆ ನಡೆದಿದೆ. ಪಂಚಾಯತ್‌ ಸದಸ್ಯರಾಗಿರುವ ರಾಮಚಂದ್ರ ಭಟ್‌ ಅವರು ಪೊಲೀಸ್‌ ಮಾಹಿತಿದಾರರೆಂಬ ಶಂಕೆಯಲ್ಲಿ ನಕ್ಸಲರು ಈ ಕೃತ್ಯ ಎಸಗಿರಬೇಕೆಂದು ಅನುಮಾನಿಸಲಾಗುತ್ತಿದೆ. ಮನೆ ಆವರಣವನ್ನು ಪ್ರವೇಶಿಸಿದ ಸುಮಾರು 10 – 20 ಜನರಷ್ಟಿದ್ದ ಶಸ್ತ್ರಸಜ್ಜಿತ […]

ಧರ್ಮಸ್ಥಳ ಸುತ್ತಮುತ್ತ ನಡೆದ ಎಲ್ಲಾ ಅಸಹಜ ಸಾವುಗಳನ್ನು ಸಿಬಿಐಗೆ ಒಪ್ಪಿಸಲು ಮನವಿ: ಎಸ್‍ಎಫ್‍ಐ

Friday, November 8th, 2013
SFI

ಮಂಗಳೂರು : ಸೌಜನ್ಯ ಅತ್ಯಾಚಾರ ಪ್ರಕರಣವನ್ನು ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ಸಿಬಿಐಗೆ ವಹಿಸಲು ಮತ್ತು ಧರ್ಮಸ್ಥಳ ಸುತ್ತಮುತ್ತ ನಡೆದ ಅಸಹಜ ಸಾವು ಗಳನ್ನು ಸಿಬಿಐಗೆ ಒಪ್ಪಿಸಲು ಆಗ್ರಹಿಸಿ ನ. 7 ಗುರುವಾರ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ  ಪ್ರತಿಭಟನೆ ನಡೆಯಿತು. ಭಾರತೀಯ ವಿದ್ಯಾರ್ಥಿ ಫೆಡರೇಶನ್ (ಎಸ್‍ಎಫ್‍ಐ)ನ ಕಾರ್ಯದರ್ಶಿ ಜೀವನ್‍ರಾಜ್ ಕುತ್ತಾರ್  ಮಾತನಾಡಿ , ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಈವರೆಗೆ ನಡೆದ ಬಹುತೇಕ ಕೊಲೆ ಮತ್ತು ಅತ್ಯಾಚಾರಗಳು ದ್ವೇಷದಿಂದ ನಡೆದದ್ದು. ಇಲ್ಲಿ ಜನರ ಆಸ್ತಿ ಲಪಟಾಯಿಸುವ ಉದ್ದೇಶ ಪ್ರಮುಖವಾಗಿತ್ತು ಎಂದು ಹೇಳಿದರು. […]

ಅಂಗನವಾಡಿ ಮಕ್ಕಳಿಗೆ ಬಿಸ್ಕೆಟ್ ಭಾಗ್ಯ ಯೋಜನೆ:ಖಾದರ್‌

Thursday, November 7th, 2013
ayush-pushty

ಮಂಗಳೂರು : ಅನ್ನಭಾಗ್ಯ, ಶಾದಿಭಾಗ್ಯ ಮುಂತಾದ ಯೋಜನೆ ಜಾರಿಗೊಳಿಸಿರುವ ರಾಜ್ಯ ಸರ್ಕಾರ ಅಂಗನವಾಡಿ ಮಕ್ಕಳಿಗಾಗಿ ಬಿಸ್ಕೆಟ್ ಭಾಗ್ಯ ಯೋಜನೆ ಜಾರಿಗೆ ತರಲು ಮುಂದಾಗಿದೆ. ‘ಆಯುಷ್‌ ಪುಷ್ಟಿ’ ಎಂಬ ಬಿಸ್ಕತ್ತು ತಯಾರಿಸಿ ಅಂಗನವಾಡಿ ಮಕ್ಕಳಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಬುಧವಾರ ಪತ್ರಿಕಾಗೋಷ್ಠಿ  ಆರೋಗ್ಯ ಸಚಿವ ಯು.ಟಿ. ಖಾದರ್‌ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯು.ಟಿ.ಖಾದರ್, ಆಯುರ್ವೇದಿಕ್‌ ಗಿಡಮೂಲಿಕೆಗಳಿಂದ ತಯಾರಿಸಿದ ಆಯುಷ್‌ ಪುಷ್ಟಿ ಬಿಸ್ಕತ್ ಗಳನ್ನು ಅಂಗನವಾಡಿ ಮಕ್ಕಳಿಗೆ ನೀಡುವ ಕುರಿತು ಸರ್ಕಾರ ಚಿಂತನೆ ನಡೆಸಿದೆ. ಈ ಯೋಜನೆಯನ್ನು ಪ್ರಾಯೋಗಿಕವಾಗಿ ಪೌಷ್ಟಿಕಾಂಶ ಕೊರತೆ […]

ಅಂಚೆ ಮೂಲಕ ಬಂದ ಸಿದ್ಧಾಂತ ಮಂದಿರದ ವಿಗ್ರಹಗಳು

Thursday, November 7th, 2013
basadi

ಮಂಗಳೂರು: ಸಿದ್ದಾಂತ ಮಂದಿರದಿಂದ ಕಳವಾದ ವಿಗ್ರಹಗಳು ಪೊಲೀಸ್ ಆಯುಕ್ತರ ಕಚೇರಿಗೆ ಅಂಚೆ ಮೂಲಕ ಬಂದಿದ್ದರೂ ಅದನ್ನು ಮರೆಮಾಚುವ ಸಲುವಾಗಿ ತಾವೇ ಛತ್ತಿಸ್‍ಗಡದಿಂದ ವಶಪಡಿಸಿಕೊಂಡಿದ್ದು ಎಂದು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದ ಪೊಲೀಸ್ ಆಯುಕ್ತರು ನಿನ್ನೆ ಬೆಳಗ್ಗೆ ಪತ್ರಿಕಾಗೋಷ್ಠಿ ನಡೆಸಿ ಸಿದ್ಧಾಂತ ಮಂದಿರದ ವಿಗ್ರಹಗಳು ಅಂಚೆ ಮೂಲಕ ಬಂದಿರುವುದಾಗಿ ಒಪ್ಪಿಕೊಂಡಿದ್ದಾರೆ. ಸ್ಪೀಡ್‍ಪೋಸ್ಟ್ ಮೂಲಕ ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ಬಂದಿದ್ದ ವಿಗ್ರಹಗಳನ್ನು ಒರಿಸ್ಸಾ ರಾಜಧಾನಿ ಭುವನೇಶ್ವರದಿಂದ ಕಳುಹಿಸಲಾಗಿದ್ದರೂ ಪೊಲೀಸರು ಮಾತ್ರ ಛತ್ತೀಸ್‍ಗಡದ ಹೆಸರನ್ನು ಪದೇ ಪದೇ ಬಳಸುತ್ತಿರುವುದು ಶಂಕೆಯನ್ನುಂಟು ಮಾಡಿದೆ. […]