ಓಂಕಾರ ನಗರ ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನದಲ್ಲಿ ಗಣಪತಿ ವಿಗ್ರಹ ಪ್ರತಿಷ್ಠೆ, ತೆನೆ ಹಬ್ಬದ ಉದ್ಘಾಟನೆ

Monday, September 9th, 2013
Bunts Hostel Ganeshotsava

ಮಂಗಳೂರು : ಬಂಟ್ಸ್ ಹಾಸ್ಟೆಲ್  ಓಂಕಾರ ನಗರ  ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ,  ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ವತಿಯಿಂದ ಸೋಮವಾರ  ಗಣಪತಿ ವಿಗ್ರಹ ಪ್ರತಿಷ್ಠೆ, ಧ್ವಜಾರೋಹಣ ಹಾಗೂ ತೆನೆ ಹಬ್ಬಕಾರ್ಯಕ್ರಮ ಜರುಗಿತು. ಶ್ರೀ ಪ್ರಭಾಕರ್ ರೈ ಹಾಗೂ ಶ್ರೀಮತಿ ನಿರ್ಮಲ.ಪಿ ರೈ ದಂಪತಿಗಳು ಧ್ವಜಾರೋಹಣ ನೆರವೇರಿಸಿದರು. ಶ್ರೀ ಗೋಪಾಲ ಕೃಷ್ಣ ಶೇಣವ ಮತ್ತು ಶ್ರೀಮತಿ ಉಷಾ ಜಿ.ಶೇಣವ ದಂಪತಿಗಳು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀ ಕೋಟೆ ಕುಂಜವಿಠಲ ರೈ ಹಾಗೂ ಶ್ರೀಮತಿ ಲೀಲಾವತಿ.ವಿ.ರೈ ದಂಪತಿಗಳು ತೆನೆಹಬ್ಬಕ್ಕೆ ಚಾಲನೆ ನೀಡಿದರು. […]

ಮದುವೆಗೆ ಬಂದಿದ್ದ ಯುವಕ ನೇತ್ರಾವತಿ ನದಿಯಲ್ಲಿ ಮುಳುಗಿ ಸಾವು

Monday, September 9th, 2013
Praveen

ಬಂಟ್ವಾಳ : ಸಜಿಪ ಮುನ್ನೂರು ಗ್ರಾಮದ ಮಂಜಲ್ಪಾದೆ ಎಂಬಲ್ಲಿ ಸ್ನೇಹಿತನ ಮದುವೆಗೆಂದು ಬಂದಿದ್ದ ಯುವಕನೋರ್ವ ನೇತ್ರಾವತಿ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋದ ಘಟನೆ ರವಿವಾರ ಬೆಳಗ್ಗೆ ನಡೆದಿದೆ. ರವಿವಾರ ಕಟೀಲಿನಲ್ಲಿ  ತನ್ನ ಸ್ನೆಹಿತ ಹರೀಶ್ ಎಂಬವರ ಮದುವೆಗೆ ಬಂದಿದ್ದ ಕಡೇಶ್ವಾಲ್ಯ ಗ್ರಾಮದ ಪ್ರವೀಣ್ ಕುಲಾಲ್(20) ನೀರುಪಾಲಾದ ದುರ್ದೈವಿ.  ಈತನೊಂದಿಗೆ ನದಿಗೆ ಸ್ನಾನಕ್ಕೆ ಇಳಿದಿದ್ದ ಕಿರಣ್ ಅಮ್ಟೂರು, ಅಜಯ್ ಹೊನ್ನಾವರ ಹಾಗೂ ಕಮಲಾಕ್ಷ ಶಾಂತಿಗುಡ್ಡೆ ಪ್ರಾಣಾಪಾಯದಿಂದ ಪಾರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. […]

ಸಿಐಡಿ ಪೊಲೀಸರ ಬಗ್ಗೆ ನಮಗೆ ಎಳ್ಳಷ್ಟೂ ವಿಶ್ವಾಸವಿಲ್ಲ : ಡಿವೈಎಫ್‍ಐನ ಜಿಲ್ಲಾ ಧ್ಯಕ್ಷ ಮುನೀರ್ ಕಾಟಿಪಳ್ಳ

Saturday, September 7th, 2013
Dyfc

ಮಂಗಳೂರು: ಪಂಜಿಮೊಗರು ಜೋಡಿ ಕೊಲೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಅಗ್ರಹಿಸಿ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಸೆ.6 ರಂದು 24 ಗಂಟೆಗಳ ಹಗಲು ರಾತ್ರಿ ಧರಣಿ ನಡೆಯಿತು. ಡಿವೈಎಫ್‍ಐನ ಜಿಲ್ಲಾ ಧ್ಯಕ್ಷ ಮುನೀರ್ ಕಾಟಿಪಳ್ಳ ಜೋಡಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರ ಬಗ್ಗೆ ನಮಗೆ ಎಳ್ಳಷ್ಟೂ ವಿಶ್ವಾಸವಿಲ್ಲ. ಅವರು ಎರಡೂ ಕುಟುಂಬಗಳನ್ನು ಜಗಳಕ್ಕೆ ಬಿಟ್ಟು ಶಾಂತಿ ಕದಡಿದ್ದಾರೆ ಎಂದು ಡಿವೈಎಫ್‍ಐನ ಜಿಲ್ಲಾ ಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ. ಇದರಿಂದ ಇದೀಗ ಆ ಕುಟುಂಬಗಳಲ್ಲಿ ಜಗಳ ನಡೆಯುತ್ತಿದ್ದು, […]

ಮಂಗಳೂರಿನಲ್ಲಿ ನಾನಾ ಆಕಾರದ ಗಣೇಶ ವಿಗ್ರಹಗಳ ಭರದಿಂದ ತಯಾರಿ

Friday, September 6th, 2013
ಮಂಗಳೂರಿನಲ್ಲಿ ನಾನಾ ಆಕಾರದ ಗಣೇಶ ವಿಗ್ರಹಗಳ ಭರದಿಂದ ತಯಾರಿ

ಮಂಗಳೂರು : ಭಾದ್ರಪದ ಮಾಸದ ಶುಕ್ಲ ಪಕ್ಷದ ಚೌತಿಯಂದು ಗಣೇಶ ಆರಾಧನೆ ದೇಶದ ಮೂಲೆ ಮೂಲೆಗಳಲ್ಲಿ ನಡೆಯುತ್ತದೆ. ಶಿವ ಪಾರ್ವತಿಯರ ಪುತ್ರ ಗಣೇಶನ ಆಕಾರವು ವಿಚಿತ್ರ ಮತ್ತು ವಿಶೇಷವಾದದು. ಆನೆ ಮುಖದ ದೊಡ್ಡ ಕಿವಿಯ, ಡೊಳ್ಳು ಹೊಟ್ಟೆಯ ಈತ ದೇವತೆಗಳಿಗೂ ಮಾನವ ಕುಲಕ್ಕೂ ಪ್ರಥಮ ಪೂಜಿತ. ಶಿವ ಪುರಾಣದ ಪ್ರಕಾರ ಪಾರ್ವತಿಯು ತನ್ನ ಮೈ ಮೇಲಿನ ಮಣ್ಣಿನ ಕೊಳೆಯನ್ನು ಮೂರ್ತಿಯನ್ನಾಗಿಸಿ ಅದಕ್ಕೆ ಜೀವ ನೀಡಿದ್ದಳು ಎಂದು ಹೇಳಲಾಗುತ್ತದೆ. ಜೀವ ಪಡೆದ ಆ ಪಾರ್ವತಿಯ ಪುತ್ರನನ್ನು ತಾನು ಸ್ನಾನಕ್ಕೆ […]

ಮಂಗಳೂರು ಪುರಭವನದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮ ದಿನೋತ್ಸವ ಹಾಗೂ ಶಿಕ್ಷಕ ದಿನಾಚರಣೆ

Friday, September 6th, 2013
town-hall

ಮಂಗಳೂರು :  ಶಿಕ್ಷಕರಿಲ್ಲದ್ದಿದ್ದರೆ ನಾವಿಲ್ಲ.ಶಿಕ್ಷಣವೇ ನಮ್ಮ ಯಶಸ್ಸು ಗಳಿಸುವ ಸಾಧನ. ಶಿಕ್ಷಣ ಕ್ಷೇತ್ರ ಅತ್ಯಂತ ಪವಿತ್ರ ಹಾಗೂ ಜವಾಬ್ದಾರಿಯುತ ಕ್ಷೇತ್ರವಾಗಿದೆ. ನಮ್ಮ ಜ್ಞಾನವನ್ನು ಬೆಳಗಿಸಲು ಹಾಗೂ ಜೀವನ ರೂಪಿಸಲು ಶಿಕ್ಷಕರು ಶ್ರಮಿಸುತ್ತಿದ್ದಾರೆ. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮ ದಿನೋತ್ಸವ ಹಾಗೂ ಶಿಕ್ಷಕ ದಿನಾಚರಣೆಯನ್ನು  ಆಚರಿಸುವುದು ಶ್ಲಾಘನೀಯ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಜೆ.ಆರ್.ಲೋಬೋ ಅಭಿಪ್ರಾಯಪಟ್ಟರು. ಇಂದು ಕರ್ನಾಟಕ ಸರ್ಕಾರದ ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರು ಉತ್ತರವಲಯ ಶಿಕ್ಷಕ ದಿನಾಚರಣೆ […]

ಜಿಲ್ಲಾ ಮಟ್ಟದ ಶಿಕ್ಷಕ ದಿನಾಚರಣೆ ಹಾಗೂ ಗುರುವಂದನಾ ಸಮಾರಂಭ : ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು

Friday, September 6th, 2013
bantwal-rai

ಮಂಗಳೂರು : ಸಂಪೂರ್ಣ ಸಾಕ್ಷರ ಜಿಲ್ಲೆ; ಬುದ್ದಿವಂತರ ಜಿಲ್ಲೆ ಎಂದು ದಕ್ಷಿಣ ಕನ್ನಡ ಜಿಲ್ಲೆ ಹೆಸರಾಗಿದ್ದು ಇದರಲ್ಲಿ ಶಿಕ್ಷಕರ ಕೊಡುಗೆ ಅಪಾರ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರೂ ಆಗಿರುವ ಶ್ರೀ ಬಿ. ರಮಾನಾಥ ರೈ ಅವರು ಹೇಳಿದರು. ಅವರಿಂದು ಜಿಲ್ಲಾ ಮಟ್ಟದ ಶಿಕ್ಷಕ ದಿನಾಚರಣೆ ಹಾಗೂ ಗುರುವಂದನಾ ಸಮಾರಂಭವನ್ನು ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪ ಸಭಾಂಗಣ, ಬಂಟ್ವಾಳದಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು. ಶಿಕ್ಷಕರು ಸಮಾಜಕ್ಕೆ ಮಾದರಿಯಾಗಿರಬೇಕು. ಆರೋಗ್ಯವಂತ […]

ಬಡವರಿಗೆ ಸರ್ಕಾರದ ಸಹಾಯಧನ ವಿತರಿಸಿದ ಜೆ.ಆರ್.ಲೋಬೊ

Thursday, September 5th, 2013
lobo

ಮಂಗಳೂರು: ಬಡಕುಟುಂಬಗಳಿಗೆ ಸರ್ಕಾರದಿಂದ ಸಿಗುವ ವಿವಿಧ ರೀತಿಯ ಸಹಾಯಧನವನ್ನು ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ ನಗರದ ಎನ್.ಜಿ.ಒ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ವಿತರಿಸಿದರು. ಈ ಸಂದರ್ಭ ನೆರೆದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರದ ಇಲಾಖೆ ಆಸಕ್ತಿ ವಹಿಸಿ ಕೆಲಸ ನಿರ್ವಹಿಸಿದರೆ ಯಾವುದೇ ರೀತಿಯ ಕಾರ್ಯವನ್ನು ಸಾಧಿಸಬಹದು ಎಂಬುದಕ್ಕೆ ಈ ಸಮಾರಂಭವೇ ಸಾಕ್ಷಿಯಾಗಿದೆ. ಇಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಆಸಕ್ತಿ ವಹಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಸೂಕ್ತ ರೀತಿಯ ಸಹಾಯಧನವನ್ನು ವಿತರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. […]

ಕಾಂಗ್ರೆಸ್ ಸಕ್ರಿಯ ಕಾರ್ಯಕರ್ತ ನೀಲಯ ಬರ್ಬರ ಹತ್ಯೆ

Thursday, September 5th, 2013
murder-mangalore

ಉಲ್ಲಾಳ : ಅಪರಿಚಿತ ದುಷ್ಕರ್ಮಿಗಳು ಸೆಪ್ಟಂಬರ್‌ 4ರ ತಡರಾತ್ರಿ  10:30ರ ಸುಮಾರಿಗೆ ಕಾಂಗ್ರೆಸ್ ಸಕ್ರಿಯ ಕಾರ್ಯಕರ್ತ, ಮಡ್ಯಾರ್-ನಡಾರು ನಿವಾಸಿ ನೀಲು ಯಾನೆ ನೀಲಯ ಎಂಬಾತನನ್ನು ಮಡ್ಯಾರು ದೇವಸ್ಥಾನದ ಸಮೀಪ  ಬರ್ಭರಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಕಾರು ಸಮೀಪದ ಮಾಡೂರು ಜಂಕ್ಷನ್‍ನಲ್ಲಿ ಎಂದಿನಂತೆ ನಿನ್ನೆ ರಾತ್ರಿ 10 ಗಂಟೆಯವರೆಗೆ ತನ್ನ ಗೆಳೆಯರೊಂದಿಗೆ ನೀಲು ಯಾನೆ ನೀಲಯ ಇದ್ದ. ಬಳಿಕ ತನ್ನ ಆಲ್ಟೋ ಕಾರ್‍ನಲ್ಲಿ ಗೆಳೆಯ ಧೀರಜ್ ಎಂಬಾತನನ್ನು ಆತನ ಮನೆಗೆ ಬಿಟ್ಟುಬಂದಿದ್ದ. […]

ಬಿಬಿಎಂಪಿಯ ನೂತನ ಮೇಯರ್ ಆಗಿ ಕಟ್ಟೆ ಸತ್ಯನಾರಾಯಣ, ಉಪ ಮೇಯರ್ ಆಗಿ ಇಂದಿರಾ ಅವಿರೋಧ ಆಯ್ಕೆ

Wednesday, September 4th, 2013
satyanarayan

ಬೆಂಗಳೂರು:  ಬಿಬಿಎಂಪಿಯ ನೂತನ ಮೇಯರ್ ಆಗಿ ಬಸವನಗುಡಿ ವಾರ್ಡ್ ಸದಸ್ಯ ಕಟ್ಟೆ ಸತ್ಯನಾರಾಯಣ, ಉಪಮೇಯರ್ ಆಗಿ  ಬ್ಯಾಟರಾಯನಪುರ ವಾರ್ಡ್ ನ  ಎನ್. ಇಂದಿರಾ ಅವಿರೋಧವಾಗಿ  ಬುಧವಾರ ನಡೆದ ಚುನಾವಣೆಯಲ್ಲಿ  ಆಯ್ಕೆಯಾಗಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಸ್ಥಾನಗಳನ್ನು ಹಂಚಿಕೊಂಡವು. ಬಿಬಿಎಂಪಿಯಲ್ಲಿ ಬಿಜೆಪಿ ಆಡಳಿತ ಪಕ್ಷವಾಗಿದೆ. ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಮೇಯರ್ ಸ್ಥಾನಕ್ಕೆ ಬಸವನಗುಡಿ ವಾರ್ಡ್ ಸದಸ್ಯ ಕಟ್ಟೆ ಸತ್ಯನಾರಾಯಣ್ ಅವರ ಹೆಸರನ್ನು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಘೋಷಿಸಿದರು. ಬೇರೆ  ಅಭ್ಯರ್ಥಿಗಳು ಸ್ಪರ್ಧಿಸದ ಕಾರಣ ಅವರು ಮೇಯರ್ […]

ಮಂಗಳ ಕ್ರೀಡಾಂಗಣಾದಲ್ಲಿ ದಸರಾ ಕ್ರೀಡಾ ಕೂಟದ ಉದ್ಘಾಟನೆ

Wednesday, September 4th, 2013
Mangala-cridangana

ಮಂಗಳೂರು  : ಸ್ವಾಮಿ ವಿವೇಕಾನಂದರ 150 ನೇ ಜನ್ಮ ದಿನ ಸ್ಮರಣಾರ್ಥ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಮಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ 2013-14 ನೇ ಸಾಲಿನ ಮಂಗಳೂರು ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ದಿನಾಂಕ: 02-09-2013 ರಂದು  ಶ್ರೀ ರಿತೇಶ್ ಶೆಟ್ಟಿ, ಉಪಾಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಂಗಳೂರು ಇವರು ಉದ್ಘಾಟಿಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕೆ. ಹರೀಶ್, ಅಧ್ಯಕ್ಷರು, ತಾಲೂಕು ಪಂಚಾಯತ್, ಮಂಗಳೂರು ವಹಿಸಿದರು […]