ಮುಸ್ಲಿಂ ಭಾಂದವರಿಂದ ಸಾಮೂಹಿಕ ನಮಾಜ್

Thursday, August 8th, 2013
feastmuslim

ಮಂಗಳೂರು : ಕರಾವಳಿಯಾದ್ಯಂತ ಮುಸ್ಲಿಂ ಬಾಂಧವರು ಈದ್ ಉಲ್ ಫಿತರ್  ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ನಗರದ ಲೈಟ್‌ಹೌಸ್ ಹಿಲ್ ನಲ್ಲಿನ ಈದ್ಗಾದಲ್ಲಿ ನೂರ್ ಮಸ್ಜೀದ್ ಮಸೀದಿಯಲ್ಲಿ ಇಂದು ಬೆಳಿಗ್ಗೆ ಮುಸ್ಲಿಂ ಭಾಂದವರು ಸಾಮೂಹಿಕ ನಮಾಜ್ ಮಾಡಿ ಬಳಿಕ ಶುಭಾಶಯ ವಿನಿಮಯ ಮಾಡಿಕೊಂಡರು. ಈದ್-ಉಲ್-ಫಿತರ್ , ಹಬ್ಬವು ರಮ್ಜಾನ್ ತಿಂಗಳ ಕೊನೆಯ ದಿನ ಆಚರಿಸಲಾಗುತ್ತದೆ. ಮುಸ್ಲಿಂ ಬಾಂಧವರು ಒಂದು  ತಿಂಗಳು ಪೂರ್ತಿ ಉಪವಾಸ ದಲ್ಲಿ ತೊಡಗಿದ್ದು  ಅನ್ನ, ನೀರು ಸಹ ಮುಟ್ಟದೇ ಉಪವಾಸ ವೃತ ಆಚರಿಸಿದ್ದರು. ಉಪವಾಸ ತಿಂಗಳಲ್ಲಿ ಉಳ್ಳವರು ಇಲ್ಲದವರಿಗೆ ಕಡ್ಡಾಯವಾಗಿ […]

ಪಾಕಿಸ್ಥಾನದ ಉಗ್ರರು ನಡೆಸಿದ ಕೃತ್ಯವನ್ನು ಖಂಡಿಸಿ ಹಿಂದೂ ಜನಜಾಗ್ರತಿ ಸಮಿತಿಯಿಂದ ಪ್ರತಿಭಟನೆ

Wednesday, August 7th, 2013
Hindu Jagarana Vedike

ಮಂಗಳೂರು: ಪಾಕಿಸ್ಥಾನದ ಉಗ್ರರು ಭಾರತದ ಸೈನಿಕರ ಮೇಲೆ ದಾಳಿ ನಡೆಸಿ ಐವರನ್ನು ಹತ್ಯೆ ಮಾಡಿರುವುದನ್ನು ಖಂಡಿಸಿ ಆಗಸ್ಟ್ 7ರಂದು ನಗರದ ಡಿ.ಸಿ.ಆಫೀಸ್ ಬಳಿ ಹಿಂದೂ ಜನಜಾಗ್ರತಿ ಸಮಿತಿಯಿಂದ ಪ್ರತಿಭಟನೆ ನಡೆಯಿತು. ಪಾಕಿಸ್ಥಾನದ ಸೇನೆಯು ಭಾರತದ ಗಡಿಯೋಳಗೆ ನುಸುಳಿ ಇಬ್ಬರು ಭಾರತೀಯ ಸೈನಿಕರ ಶಿರಚ್ಛೇಧನ ನಡೆದರೂ ಸರಕಾರದ ನಿರ್ಲಕ್ಷದಿಂದ ಈಗ ಪುನ: ಗಡಿಯಲ್ಲಿ ಐವರು ಅಮಾಯಕ ಭಾರತೀಯ ಸೈನಿಕರು ಬಲಿಯಾಯಿತು.  ಉಗವಾದಿ ಅಥವ ಪಾಕಿಸ್ಥಾನದ ಸೇನೆಯಾಗಿರಲಿ ಇದು ಪಾಕ್ ಪುರಸ್ಕೃತ ಷಡ್ಯಂತ್ರದ ಭಾಗವಾಗಿರುವುದರಿಂದ ಅದಕ್ಕೆ ಭಾರತದ  ಸೈನಿಕರು ತಕ್ಕ […]

ಬಿ.ಸಿ.ರೋಡು ಸಮೀಪ ಮನೆಯೊಂದರಲ್ಲಿ ಅಕ್ರಮ ಕಸಾಯಿಖಾನೆ ಪತ್ತೆ , ಓರ್ವನ ಬಂಧನ

Wednesday, August 7th, 2013
Cow Killing House

ಬಂಟ್ವಾಳ : ಬಂಟ್ವಾಳ ನಗರ ಪೊಲೀಸರು ಬಿ.ಸಿ.ರೋಡು ಸಮೀಪದ ಕೈಕಂಬ ತಾಳಿಪಡ್ಪು ಎಂಬಲ್ಲಿ ಮಂಗಳವಾರ ಮಧ್ಯಾಹ್ನ ದಾಳಿ ನಡೆಸಿ ಅಕ್ರಮ ಕಸಾಯಿಖಾನೆಯೊಂದನ್ನು ಪತ್ತೆ ಹಚ್ಚಿದ ಓರ್ವನನ್ನು ಬಂಧಿಸಿದ್ದಾರೆ. ಮನೆಯೊಂದಕ್ಕೆ ಪೊಲೀಸರು ದಾಳಿ ನಡೆಸಿದಾಗ ಅಕ್ರಮ ಕಸಾಯಿಖಾನೆ ಪತ್ತೆಯಾಗಿದೆ. ಬಶೀರ್ ಎಂಬಾತನನ್ನು ಬಂಧಿಸಲಾಗಿದ್ದು  ಉಳಿದ ಮೂರು ಮಂದಿ ಪರಾರಿಯಾಗಿದ್ದಾರೆ. ಮನೆಯಲ್ಲಿ ಭಾರೀ ಪ್ರಮಾಣದ ದನದ ಮಾಂಸ ಹಾಗೂ ರುಂಡಗಳು ಪತ್ತೆಯಾಗಿದೆ.  ಆರೋಪಿಗಳು ದನಗಳನ್ನು ಕಳ್ಳಸಾಗಣೆ ಮಾಡಿ ತಂದು , ಮಾಂಸ ಮಾಡಿ ಮಾರುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಬಂಟ್ವಾಳ ವೃತ್ತ […]

ನರಹರಿ ಬೆಟ್ಟ ಮತ್ತು ಕಾರಿಂಜೇಶ್ವರ ದೇವಸ್ಥಾನದಲ್ಲಿ ಭಕ್ತಾಧಿಗಳಿಂದ ವಿಶೇಷ ತೀರ್ಥ ಸ್ನಾನ

Wednesday, August 7th, 2013
ati-1

ಬಂಟ್ವಾಳ: ಆಟಿ ಅಮಾವಾಸ್ಯೆಯ ಪ್ರಯುಕ್ತ  ಪುರಾಣ ಪ್ರಸಿದ್ದ ಕ್ಷೇತ್ರವಾದ ನರಹರಿ ಶ್ರೀ ಸದಾಶಿವ ದೇವಸ್ಥಾನ ಮತ್ತು ಕಾರಿಂಜ ಮಹಾತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ  ಮಂಗಳವಾರ ಭಕ್ತಾಧಿಗಳು ಬೆಳಗ್ಗಿನಿಂದಲೇ  ವಿಶೇಷ ತೀರ್ಥ ಸ್ನಾನದಲ್ಲಿ ಪಾಲ್ಗೊಂಡರು. ಮುಂಜಾನೆಯಿಂದಲೇ ನರಹರಿ ಸದಾಶಿವ ಕ್ಷೇತ್ರದಲ್ಲಿ ಅಪಾರ ಸಂಖ್ಯೆಯ ಭಕ್ತರು ಅಲ್ಲಿನ ಶಂಖ, ಚಕ್ರ, ಗದಾ, ಪದ್ಮ ಗಳೆಂಬ ತೀರ್ಥಕೆರೆಗಳಿಗೆ ಅಡಿಕೆ ಹಾಗೂ ವೀಳ್ಯದೆಲೆ ಅರ್ಪಿಸಿ ವಿಶೇಷ ತೀರ್ಥಸ್ನಾನ ಮಾಡಿದರು. ಉಬ್ಬಸ ನಿವಾರಣೆಗಾಗಿ ಹುರಿ ಹಗ್ಗವನ್ನು ದೇವರಿಗೆ ಅರ್ಪಿಸುವ ಸೇವೆ ಇಲ್ಲಿ ವಿಶೇಷವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು […]

ಪಿಕಪ್ ವಾಹನದಲ್ಲಿ ಅಕ್ರಮವಾಗಿ ದನ ಸಾಗಿಸುತ್ತಿದ್ದವರ ಬಂಧನ

Wednesday, August 7th, 2013
vitla-cattle

ಬಂಟ್ವಾಳ: ವಿಟ್ಲ ಪೊಲೀಸರು ಒಕ್ಕೆತ್ತೂರು ಎಂಬಲ್ಲಿ  ಪಿಕಪ್ ವಾಹನದಲ್ಲಿ  ಅಕ್ರಮವಾಗಿ ದನ ಸಾಗಿಸುತ್ತಿದ್ದ ಪಿಕಪ್ ವಾಹನದಲ್ಲಿ  ಅಕ್ರಮವಾಗಿ ದನ ಇಬ್ಬರನ್ನು ಮಂಗಳವಾರ ಮಧ್ಯಾಹ್ನ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧಿತ ವ್ಯಕ್ತಿಗಳನ್ನು ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ ನಿವಾಸಿ ಸಿರಾಜುದ್ದೀನ್ ಮತ್ತು  ಕುಂಡಡ್ಕ ದರ್ಬೆ ನಿವಾಸಿ ತಿಮ್ಮಯ್ಯ ಆಚಾರ್ಯ ಎಂದು ಗುರುತಿಸಲಾಗಿದೆ. ಕಾರ್ಯಚರಣೆ ಯಲ್ಲಿ ವಿಟ್ಲ ಠಾಣಾಧಿಕಾರಿ  ಮಾಧವ ಕೂಡ್ಲು, ಹೆಡ್ ಕಾನ್ಸ್ ಟೇಬಲ್ ರಾಧಾಕೃಷ್ಣ, ಪ್ರವೀಣ್ ರೈ, ರಕ್ಷಿತ್ ರೈ, ಮುರುಗೇಶ್, ಲೋಕೇಶ್, ಭವಿತ್ ರೈ ಅವರು ಭಾಗವಹಿಸಿದ್ದರು. […]

ಬಲ್ಲಾಳ್ ಬಾಗ್ ಶೂಟೌಟ್ ಆರು ಮಂದಿ ಆರೋಪಿಗಳ ಬಂಧನ

Wednesday, August 7th, 2013
Ballalbagh-shoot-out

ಮಂಗಳೂರು :  ನಗರದ – ಮಣ್ಣಗುಡ್ಡ  ರಸ್ತೆಯಲ್ಲಿ  ಆಗಸ್ಟ್ 2 ರಂದು ಉದ್ಯಮಿಯ ಮೇಲೆ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆನ್ನು  ಬರ್ಕೆ ಪೊಲೀಸರು  ಮಂಗಳವಾರ ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಗಳಾದ ಸೂರಿಂಜೆಯ ನಿತೀಷ್‌ಕುಮಾರ್ ಯಾನೆ ಲಿಂತು(20), ಸತೀಷ್ ಯಾನೆ ಸಚ್ಚು (28) ಮರೋಳಿಯ ದೀಕ್ಷಿತ್ ಯಾನೆ ದಿಕ್ಷ್(26), ಬಜ್ಪೆಯ ಪದ್ಮ ರಾಜ್ ಯಾನೆ ಪದ್ದು(24), ಸೋಮೇಶ್ವರದ ಚೋನಿಯ ಯಾನೆ ಕೇಶವ (23)ಮತ್ತು ಕಂಕನಾಡಿಯ ಅನಿಲ್ (30) ಬಂಧಿತ ಆರೋಪಿಗಳಾ ಗಿದ್ದಾರೆ.  ಇವರು ಈ ಹಿಂದೆ ಹಲವಾರು ಕೊಲೆ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದು , ನಿತೀಶ್‌ […]

ಗೋ ಹಂತಕರ ಮತ್ತು ದನಗಳ ಡಕಾಯಿತಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಿ : ಮೋನಪ್ಪ ಭಂಡಾರಿ

Tuesday, August 6th, 2013
Monappa Bhandary

ಮಂಗಳೂರು :  ಗೋ ಹತ್ಯೆ ಮತ್ತು ದನಗಳ ಡಕಾಯಿತು ಸಂಖ್ಯೆ ಜಾಸ್ತಿಯಾಗಿದ್ದು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದಮೇಲೆ ಗೋ ಹತ್ಯೆ ನಿಲ್ಲಿಸುವಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯು ಸಂಪೂರ್ಣ ವಿಫಲವಾಗಿದೆ ಎಂದು ವಿಧಾನ ಸಭೆ ಸದಸ್ಯ ಮೋನಪ್ಪ ಭಂಡಾರಿ ಹೇಳಿದರು. ಅವರು ಇಂದು ನಗರದ ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಈ ಮಾತನ್ನು ಹೇಳಿದರು, ಸಂವಿದಾನದ ಪರಿಚ್ಚೇದ 44 ರ ಆಶಯದಂತೆ 64 ರ  ಗೋ ಹತ್ಯೆ ನಿಷೇಧ ಮಸೂದೆಗೆ ತಿದ್ದುಪಡಿ ತಂದು […]

ಜೆಪ್ಪು ಮೋರ್ಗನ್ಸ್‌ಗೇಟ್ ರೈಲ್ವೆ ಸೇತುವೆ ಬಳಿ ಯುವಕನ ಮೃತ ದೇಹ ಪತ್ತೆ

Tuesday, August 6th, 2013
Youth dead

ಮಂಗಳೂರು : ಜೆಪ್ಪು ಮೋರ್ಗನ್ಸ್‌ಗೇಟ್ ಸಮೀಪದ ರೈಲ್ವೆ ಸೇತುವೆ ಬಳಿ ಮಂಗಳವಾರ ಯುವಕನೊಬ್ಬನ ಮೃತ ದೇಹ  ಪತ್ತೆಯಾಗಿದ್ದು . ಮೃತ ವ್ಯಕ್ತಿಯನ್ನು ಶಾಂತಿಗುಡ್ಡೆ ನಿವಾಸಿ ವಿಕ್ರಾಂತ್ ಶೆಟ್ಟಿ (27) ಎಂದು ಗುರುತಿಸಲಾಗಿದೆ. ಸೋಮವಾರ ಸುಮಾರು 11 ಗಂಟೆ ಸುಮಾರಿಗೆ ಜ್ಯೋತಿ ಸಮೀಪದ ರಿಕ್ರಿಯೇಶನ್ಸ್ ಕ್ಲಬ್ ನಿಂದ ಶಾಂತಿಗುಡ್ಡೆಯ ತನ್ನ ನಿವಾಸಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಕಾರಿನಲ್ಲಿ  ಬಂದ ದುಷ್ಕರ್ಮಿಗಳ ತಂಡವೊಂದು ವಿಕ್ರಾಂತ್ ಶೆಟ್ಟಿಯ ವಾಹನಕ್ಕೆ ಡಿಕ್ಕಿ ಹೊಡೆಸಿ  ವಿಕ್ರಾಂತ್ ಶೆಟ್ಟಿ ಮೇಲೆ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ […]

ನಗರದ ವಿ.ವಿ.ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಆಟಿದ ತಮ್ಮನ

Tuesday, August 6th, 2013
ನಗರದ ವಿ.ವಿ.ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಆಟಿದ ತಮ್ಮನ

ಮಂಗಳೂರು : ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ಬಿಲ್ಲವರ ಮಹಿಳಾ ಸಂಘ ಕುದ್ರೋಳಿ ಇವರ ಸಹಯೋಗದೊಂದಿಗೆ ಮಂಗಳೂರಿನ ರವೀಂದ್ರ ಕಲಾಭವನದಲ್ಲಿ ಆಗಸ್ಟ್ 4 ರಂದು ಆಟಿದ ತಮ್ಮನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನಗರಾಭಿವೃಧ್ದಿ ಸಚಿವ ವಿನಯಕುಮಾರ್ ಸೊರಕೆಯವರು ನೆರವೇರಿಸಿದರು. ನಂತರ ಅವರು ಮಾತಾಡಿ ಇಂದು ತುಳುನಾಡಿನ ಸಂಪ್ರಾದಾಯ ಆಚರಣೆಗಳು ಮರೆಯಾಗುತ್ತಿದ್ದು ಅದನ್ನು ರಕ್ಷಿಸುವ ಕೆಲಸವಾಗಬೇಕು, ಜನತೆ ನಗರ ಜೀವನಕ್ಕೆ ಹೊಂದಿಕೊಳ್ಳುತ್ತಿದ್ದು ಹಳ್ಳಿಭಾಗದ ಆಚರಣೆಗಳು ಮರೆಯಾಗುತ್ತಿವೆ ಎಂದರು. ಇಂತಹ ಅಟಿಯ ಕಾರ್ಯಕ್ರಮಗಳು ನಗರದ ಜನತೆಗೆ ತುಳುನಾಡಿನ […]

ಸಿಬಿಎಸ್ಸಿ ಪಠ್ಯದಲ್ಲಿ ಝಾನ್ಸಿ ರಾಣಿಗೆ ಅವಮಾನ ಹಿಂದೂ ಜನಜಾಗೃತಿ ಸಮಿತಿ ಖಂಡನೆ

Monday, August 5th, 2013
Hindu Jana Jagruthi

ಮಂಗಳೂರು: ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಭಾನುವಾರ ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ಸಿಬಿಎಸ್ ಸಿ ಪಠ್ಯದಲ್ಲಿ ಝಾನ್ಸಿ ರಾಣಿಗೆ ಅವಮಾನ ಮಾಡಿರುವುದನ್ನುದು ಖಂಡಿಸಿ ಪ್ರತಿಭಟನೆ ಸಭೆ ನಡೆಯಿತು. ಜನಜಾಗೃತಿ ಸಮಿತಿಯ ಸುಕನ್ಯ ಆಚಾರ್ಯ ಅವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಸಿಬಿಎಸ್ ಸಿ ಪಠ್ಯದಲ್ಲಿ ಝಾನ್ಸಿ ರಾಣಿಗೆ ಅಪಮಾನ ವಾಗುವಂತೆ ಚಿತ್ರಿಸಲಾಗಿದೆ.  ಇದಕ್ಕೆ ಕಾರಣರಾದವರ ವಿರುದ್ದ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ಲೆಕ್ಕಿಸದೆ ಹೋರಾಡಿದ ಮಹಿಳೆಯ ಅವಮಾನಿಸಿದ್ದು ಖಂಡನೀಯ ಎಂದು ಅವರು ಹೇಳಿದರು. ಉದ್ಯಮಿಜಿಲ್ಲಾ ಸಂಚಾಲಕ ಪ್ರಸನ್ನ ಕಾಮತ್, ಅನಂತ್ ಕಾಮರ್, ವಕೀಲ […]