ನಕಲಿ ದಾಖಲೆ ಸೃಷ್ಟಿಸಿ ವಂಚನೆ ಹಿನ್ನಲೆಯಲ್ಲಿ ವಿದ್ಯಾರ್ಥಿ ಬಂಧನ

Saturday, May 11th, 2013
Fazil

ಕಾಸರಗೋಡು : ನಕಲಿ ದಾಖಲೆ ಸೃಷ್ಟಿಸಿ ವಂಚನೆ ನಡೆಸಿರುವ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಬಿಬಿಎಂ ಓದುತ್ತಿರುವ ತಿರುವನಂತಪುರ ಮೂಲದ ಫಾಸಿಲ್ ಎಂಬಾತನನ್ನು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮಂಜೇಶ್ವರ ಹೊಸಂಗಡಿಯ ಅಬ್ದುಲ್ ಸುನೈರ್ ಮುನೀರ್ ಎಂಬುವವರ ಡ್ರೈವಿಂಗ್ ಲೈಸನ್ಸನ್ನು ದುರುಪಯೋಗಪಡಿಸಿಕೊಂಡ ಆರೋಪಿ ಫಸೀಲ್, ಸುನೈರ್ ನ ಹೆಸರಲ್ಲಿ ಬ್ಯಾಂಕ್ ನಕಲಿ ದಾಖಲೆ ಸೃಷ್ಟಿಸಿ  ಖಾತೆ ತೆರೆದು ಬ್ಯಾಂಕ್ ನಿಂದ ಹಣ ಪಡೆದು ವಂಚನೆ ನಡೆಸಿದ್ದಾನೆ. ಆರೋಪಿ ಬ್ಯಾಂಕ್ ಗೆ ಸುಮಾರು ೩.೫೦ ಲಕ್ಷ ರೂಪಾಯಿ ವಂಚಿಸಿದ್ದಾಗಿ ತಿಳಿದು ಬಂದಿದೆ. […]

ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಆಯ್ಕೆ ಹಿನ್ನಲೆಯಲ್ಲಿ ದ.ಕ.ಜಿಲ್ಲಾ ಕಾಂಗ್ರೆಸ್ ನಿಂದ ಸಂಭ್ರಮಾಚರಣೆ

Saturday, May 11th, 2013
DK celebration victory

ಮಂಗಳೂರು : ಸಿದ್ದರಾಮಯ್ಯನವರು ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಶುಕ್ರವಾರ ಸಂಜೆ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಸಿಹಿತಿಂಡಿ ವಿತರಿಸಿ, ಪಟಾಕಿ ಸಿಡಿಸುವ ಮೂಲಕ ಸಂಭ್ರಮಾಚರಿಸಿದರು. ಬಿಜೆಪಿ ಯ ಆಡಳಿತದಿಂದ ಬೇಸತ್ತ ಜನ ಈ ಚುನಾವಣೆಯಲ್ಲಿ ಕಾಂಗ್ರೆಸ್ ನ್ನು ಗೆಲ್ಲಿಸುವ ಮೂಲಕ ಮತ್ತೊಮ್ಮೆ  ರಾಜ್ಯ ರಾಜಕೀಯದಲ್ಲಿ ಅಭಿವೃದ್ದಿಯ ಶಕೆ ಆರಂಭವಾಗುವಂತೆ ಮಾಡಿದ್ದಾರೆ ಎಂದು ಅಶ್ರಫ್ ಹೇಳಿದರು. ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಗಪೂರ್ ಮಾತನಾಡಿ, ಹಿಂದುಳಿದ ವರ್ಗದ […]

ಉಚ್ಚಿಲ: ದುಷ್ಕರ್ಮಿ ಗಳಿಂದ ದನ ಕಳ್ಳತನ, ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆ ತರುವ ಪ್ರಯತ್ನ

Friday, May 10th, 2013
Cattle theft uchil

ಮಂಗಳೂರು : ಉಚ್ಚಿಲ ಸೇತುವೆ ಬಳಿಯ ನಿವಾಸಿ ಗಣೇಶ್ ವಾಸುದೇವ ಮಯ್ಯ ಎಂಬುವವರ ಮನೆಯಿಂದ ದನ ಮತ್ತು ಕರುವನ್ನು ಕದ್ದೊಯ್ದು ಬಳಿಕ ದನದ ಕಾಲನ್ನು ದುಷ್ಕರ್ಮಿಗಳು ಮನೆಯ ಎದುರಿನ ತುಳಸಿಕಟ್ಟೆ ಬಳಿ ಇರಿಸಿದ ಘಟನೆ ನಡೆದಿದೆ. ಗಣೇಶ್‌ ವಾಸುದೇವ ಮಯ್ಯ ರ ಮನೆಯ ಹಟ್ಟಿಯ ಹೊರಗೆ ಕಟ್ಟಿದ್ದ ಹಸು ಮತ್ತು ಕರುವನ್ನು ದುಷ್ಕರ್ಮಿಗಳು  ಕಳವು ಗೈದು ಬಳಿಕ ಅದೇ ಮನೆಯ ತುಳಸಿಕಟ್ಟೆಯ ಬಳಿ ದನದ ಕಾಲೊಂದನ್ನು ಇರಿಸಿದ್ದಾರೆ. ಬೆಳಗ್ಗೆ ಹಾಲು ಕರೆಯಲು ಗಣೇಶ್ ರವರ ಪತ್ನಿ ಹೊರಗೆ […]

ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ಜಗದೀಶ್ ಶೆಟ್ಟರ್

Thursday, May 9th, 2013
Jagadish Shettar resign

ಬೆಂಗಳೂರು : ಬಿಜೆಪಿ ಪಕ್ಷದಲ್ಲಿನ ಒಳಜಗಳ ಹಾಗು ಭ್ರಷ್ಟಾಚಾರದ ಆರೋಪಗಳು ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಲು, ಮತ್ತು ಪ್ರತಿಪಕ್ಷವಾದ ಕಾಂಗ್ರೆಸ್ ನ ಗೆಲುವಿಗೆ ಪಮುಖ ಕಾರಣವಾಯಿತೆಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು. ಅವರು ಬುಧವಾರ ರಾಜ್ಯ ವಿಧಾಸಭಾ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆಯೆ ಸಂಜೆ 7 ಗಂಟೆಗೆ ರಾಜಭವನಕ್ಕೆ ತೆರಳಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ರವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು  ಬಿಜೆಪಿ ಯ ವಿರುದ್ದ ನಡೆದ ವ್ಯಾಪಕ ಅಪಪ್ರಚಾರ ಮತ್ತು ಸರ್ಕಾರದ […]

ಭ್ರಷ್ಟಾಚಾರದಲ್ಲಿ ತೊಡಗಿಕೊಂಡಲ್ಲಿ ಜನತೆ ಐದು ವರ್ಷಗಳ ಬಳಿಕ ತಕ್ಕ ಪಾಠ ಕಲಿಸುತ್ತಾರೆ : ಜನಾರ್ಧನ ಪೂಜಾರಿ

Thursday, May 9th, 2013
Janardhana Poojary

ಮಂಗಳೂರು : ಬಿಜೆಪಿಯ ಆಂತರಿಕ ಕಚ್ಚಾಟ, ದುರಾಡಳಿತದಿಂದ ಬೇಸತ್ತ ಜನ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆ ತಕ್ಕ ಪಾಠ ಕಲಿಸಿದ್ದು, ಜನರು ಚುನಾವಣೆಯ ಮೂಲಕ ತಮ್ಮ ನಿರ್ಧಾರವನ್ನು ಮುಂದಿಟ್ಟಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಹಾಗು ಕಾಂಗ್ರೆಸ್ ನಾಯಕ ಜನಾರ್ಧನ ಪೂಜಾರಿ ಹೇಳಿದರು. ಅವರು ಬುಧವಾರ ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶದ ಹಿನ್ನಲೆಯಲ್ಲಿ ಏರ್ಪಡಿಸಲಾದ ಮಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಮಾತನಾಡಿದರು. ರಾಜಕೀಯ ಪಕ್ಷಗಳು ತಮಗೆ ಸಿಕ್ಕಿರುವ ಅಧಿಕಾರವನ್ನು ಸರಿಯಾಗಿ ಉಪಯೋಗಿಸಿಕೊಳ್ಳದೆ, ದುರುಪಯೋಗಪಡಿಸಿಕೊಂಡಲ್ಲಿ […]

ಉಡುಪಿಯಲ್ಲೂ ತನ್ನ ಜಯದ ಖಾತೆ ತೆರೆದ ಕಾಂಗ್ರೆಸ್

Wednesday, May 8th, 2013
Udupi Result

ಉಡುಪಿ : ಉಡುಪಿ ಜಿಲ್ಲೆಯ ಒಟ್ಟು 5 ವಿಧಾನಸಭಾ ಕ್ಷೇತ್ರಗಳಲ್ಲಿ 3 ರಲ್ಲಿ ಕಾಂಗ್ರೆಸ್, 1 ಬಿಜೆಪಿ ಹಾಗು 1 ಸ್ಥಾನ ಪಕ್ಷೇತರರ ಪಾಲಾಗಿದೆ. ದ.ಕ ಜಿಲ್ಲೆಯಲ್ಲಿ ಕಾಂಗ್ರೆಸ್ ಬಹುಮತವನ್ನು ಸಾಧಿಸಿದಂತೆ ಉಡುಪಿಯಲ್ಲಿಯು 3 ಸ್ಥಾನ ಪಡೆದು ಪ್ರಾಬಲ್ಯ ಮೆರೆದಿದೆ. ಉಡುಪಿ ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮದ್ವರಾಜ್ ಒಟ್ಟು 86,868  ಮತಗಳನ್ನು ಪಡೆದು ಬಿಜೆಪಿ ಯ ಸುಧಾಕರ್ ಶೆಟ್ಟಿ ಯವರನ್ನು 39,524 ಮತಗಳ ಮೂಲಕ ಪರಾಭವಗೊಳಿಸಿದ್ದಾರೆ. ಇನ್ನು ಕಾರ್ಕಾಳದಲ್ಲಿ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಒಟ್ಟು 65,039  […]

ರಾಜ್ಯ ವಿಧಾನಸಭಾ ಚುನಾವಣೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ಭರ್ಜರಿ ಜಯ

Wednesday, May 8th, 2013
Dk Politicians

ಮಂಗಳೂರು : ಮೇ 5ರಂದು ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶ ಮೇ 8 ಬುಧವಾರ  ಪ್ರಕಟಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 8  ಕ್ಷೇತ್ರಗಳಲ್ಲಿ ಕಾಂಗ್ರೆಸ್ 7 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದು ಉಳಿದ 1  ಕ್ಷೇತ್ರ ಸುಳ್ಯದಲ್ಲಿ  ಬಿಜೆಪಿ ಅಭ್ಯರ್ಥಿ ಎಸ್. ಅಂಗಾರ ಗೆಲುವನ್ನು ಸಾಧಿಸಿದ್ದಾರೆ. ಮಂಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯು.ಟಿ.ಖಾದರ್ ತಮ್ಮ ಪ್ರತಿಸ್ಪರ್ಧಿ ಬಿಜೆಪಿ ಯ ಚಂದ್ರಹಾಸ್ ಉಚ್ಚಿಲ್ ರವರನ್ನು 29,087 ಮತಗಳ ಅಂತರದಿಂದ ಸೋಲಿಸಿದ್ದಾರೆ. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ […]

ಪರೀಕ್ಷೆಯಲ್ಲಿ ಅನಿತ್ತೀರ್ಣಳಾದ ಹಿನ್ನಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ

Tuesday, May 7th, 2013
Veena Kundapur

ಕುಂದಾಪುರ : ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಳಾದ ಹಿನ್ನಲೆಯಲ್ಲಿ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿ ತಲ್ಲೂರು ಗರಡಿಮನೆ ಸಮೀಪದ ನಿವಾಸಿ ನರಸಿಂಹ ಪೂಜಾರಿಯವರ ಪುತ್ರಿ ವೀಣಾ. ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿನಿಯಾಗಿದ್ದ ಈಕೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳೆರಡರಲ್ಲೂ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದಳು ಎನ್ನಲಾಗಿದೆ. ಆದರೆ ಸೋಮವಾರ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ತಾನು ಅನುತ್ತೀರ್ಣಳಾದ ಸಂಗತಿ ತಿಳಿದು ಖಿನ್ನಗೊಂಡ ಆಕೆ ರಾತ್ರಿ ನೆರೆಮನೆಯವರ ತೋಟದ ಬಾವಿಗೆ […]

ದ್ವಿತೀಯ ಪಿಯುಸಿ ಫಲಿತಾಂಶ : ಅಕ್ಷಯ ಕಾಮತ್ ರಾಜ್ಯಕ್ಕೆ ಪ್ರಥಮ

Tuesday, May 7th, 2013
Akshay Kamath -Sooraj Hegde

ಮಂಗಳೂರು : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ಉಡುಪಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದರೆ, ದಕ್ಷಿಣ ಕನ್ನಡ ದ್ವಿತೀಯ ಸ್ಥಾನವನ್ನು ಪಡೆದಿದೆ. ಕೆನರಾ ಕಾಲೇಜಿನ ಅಕ್ಷಯ ಕಾಮತ್ ವಿಜ್ಞಾನ ವಿಭಾಗದಲ್ಲಿ  ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದರೆ, ಆಳ್ವಾಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಯಾಗಿರುವ ಸೂರಜ್ ಹೆಗ್ಡೆ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಅಗ್ರ ಸ್ಥಾನವನ್ನು ಪಡೆದಿದ್ದಾನೆ. ಮಂಗಳೂರಿನ ಕೆನರಾ ಪಿ.ಯು. ಕಾಲೇಜಿನ ವಿದ್ಯಾರ್ಥಿಯಾಗಿರುವ ಅಕ್ಷಯ್‌ ಕಾಮತ್‌ ಈ ಬಾರಿಯ ದ್ವಿತೀಯ ಪಿಯುಸಿ ವಿಜ್ಞಾನ […]

ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಪ್ರಕಟ : ರಾಜ್ಯಕ್ಕೆ ದ್ವಿತಿಯ ಸ್ಥಾನ ಪಡೆದ ಮಂಗಳೂರಿನ ಮಾನ್ವಿತಾ

Monday, May 6th, 2013
Manvitha

ಮಂಗಳೂರು : ಮೇ 6 ಸೋಮವಾರ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಕೊಣಾಜೆ ವಿಶ್ವಮಂಗಳ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿನಿ ಮಾನ್ವಿತಾ ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನಿಯಾಗಿದ್ದು, ಇಡಿ ರಾಜ್ಯದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾಳೆ. ಒಟ್ಟು 625 ಅಂಕಗಳಲ್ಲಿ 621 ಅಂಕ ಪಡೆದ ಮಾನ್ವಿತ ಇಂಗ್ಲೀಷ್, ಗಣಿತ ಮತ್ತು ಸಮಾಜ ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು, ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ 99 ಅಂಕಗಳನ್ನು ಪಡೆದರೆ, ವಿಜ್ನಾನ ನದಲ್ಲಿ 98 ಅಂಕ ಪಡೆದಿದ್ದಾಳೆ. ಓದಿನಲ್ಲಿ ಮುಂದಿರುವ […]