ಆಸ್ತಿ ವಿವಾದ : ಚಿಕ್ಕಪ್ಪನಿಂದ ಕೊಲೆಯಾದ ಯುವಕ

Wednesday, April 3rd, 2013
Sullia Youth killed

ಸುಳ್ಯ : ಆಲೆಟ್ಟಿ ಗ್ರಾಮದ ಬೊಳ್ಳೂರು ಎಂಬಲ್ಲಿ ಆಸ್ತಿ ವಿವಾದದಿಂದಾಗಿ ಯುವಕನೋರ್ವ ಆತನ ಚಿಕ್ಕಪ್ಪನಿಂದಲೇ ಕೊಲೆಯಾದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ. ಬೊಳ್ಳೂರು ಬೆಳ್ಳಂಪಾರೆಯ ಅಪ್ಪಯ್ಯ ನಾಯ್ಕ ಎಂಬವರ ಪುತ್ರ ಸದಾಶಿವ ನಾಯ್ಕ(೨೬) ಮೃತ ವ್ಯಕ್ತಿ ಯಾಗಿದ್ದು, ಈತ  ಹಾಗು ಈತನ ಚಿಕ್ಕಪ್ಪ ನಾರಾಯಣ ನಾಯ್ಕ ಈ ಇಬ್ಬರ ಕುಟುಂಬದ ನಡುವೆ ಆಸ್ತಿ ವಿಷಯವಾಗಿ ಆಗಾಗ್ಗೆ  ಕಲಹ ನಡೆಯುತ್ತಿದ್ದು ನಿನ್ನೆ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯಗೊಂಡಿದೆ. ಕೊಲೆ ಆರೋಪಿನಾರಾಯಣ ನಾಯ್ಕ ಸುಳ್ಯ ರೋಟರಿ ಶಾಲೆಯಲ್ಲಿ ಅಟೆಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಮಂಗಳವಾರ […]

ಕರ್ನಾಟಕ ರಾಜ್ಯ ಪೊಲೀಸ್‌ ಧ್ವಜ ಹಾಗೂ ಕಲ್ಯಾಣ ದಿನಾಚರಣೆ

Wednesday, April 3rd, 2013
Police Flag Day

ಮಂಗಳೂರು : ಪೊಲೀಸರು ಕಾನೂನಿನ ಬಗ್ಗೆ ಸ್ಪಷ್ಟ ಜ್ಞಾನ ಹೊಂದುವುದು ಆವಶ್ಯ. ಆಗ ಯಾವುದೇ ಕ್ಲಿಷ್ಟಕರ ಸನ್ನಿವೇಶಗಳನ್ನು ಸುಲಲಿತವಾಗಿ ನಿಭಾಯಿಸಲು ಸಾಧ್ಯ. ಇಲ್ಲವಾದರೆ ಮುಜುಗರದ ಸಂದರ್ಭ ಎದುರಿಸಬೇಕಾಗುತ್ತದೆ ಎಂದು ನಿವೃತ್ತ ಪೊಲೀಸ್‌ ಉಪಾಧೀಕ್ಷಕ ವಿಶ್ವನಾಥ ಪಂಡಿತ್‌ ಹೇಳಿದರು. ಅವರು  ಮಂಗಳವಾರ ನಗರದ ಡಿ.ಎ.ಆರ್‌. ಪೊಲೀಸ್‌ ಕವಾಯತು ಮೈದಾನದಲ್ಲಿ ಜರಗಿದ ಕರ್ನಾಟಕ ರಾಜ್ಯ ಪೊಲೀಸ್‌ ಧ್ವಜ ಹಾಗೂ ಕಲ್ಯಾಣ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ನಿವೃತ್ತರಾದ 61 ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬಂದಿಗಳನ್ನು  ಈ ಸಂದರ್ಭ ಸನ್ಮಾನಿಸಲಾಯಿತು.  ನಿವೃತ್ತ ಪೊಲೀಸರ ಕಲ್ಯಾಣ […]

ಉಡುಪಿ : ಕಿಡಿಗೇಡಿಗಳಿಂದ ನೇಜಾರ್ ನಲ್ಲಿ ಮಸೀದಿ ಮೇಲೆ ಕಲ್ಲೆಸೆತ

Wednesday, April 3rd, 2013
Nejar mosque

ಉಡುಪಿ : ನೇಜಾರ್ ಗ್ರಾಮದಲ್ಲಿ ಕೆಲವು ದಿನಗಳಿಂದ ಕೋಮು ದ್ವೇಷ ಕೆರಳಿಸುವ ಸಣ್ಣ ಪುಟ್ಟ ಘಟನೆಗಳು ನಡೆಯುತ್ತಿದ್ದು, ನಿನ್ನೆ ಈ ಹಿನ್ನಲೆಯಲ್ಲಿ ಕೆಲವು ಕಿಡಿಗೇಡಿಗಳು ನೇಜಾರ್ ನಲ್ಲಿರುವ ಮಸೀದಿಗೆ ಕಲ್ಲೆಸೆದಿದ್ದಾರೆ. ಮಂಗಳವಾರ ರಾತ್ರಿ ನೆಜಾರ್ ನಲ್ಲಿರುವ ವ್ಯಕ್ತಿಯೊಬ್ಬರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗುಪೊಂದು ಅನ್ಯಕೋಮಿನ ವ್ಯಕ್ತಿಯ   ಮೇಲೆ ಹಲ್ಲೆ ನಡೆಸಿ ಬಳಿಕ ಅದೇ ಗುಂಪು ಇಲ್ಲಿರುವ ಮಸೀದಿಯ ಮೇಲೂ ಕಲ್ಲೆಸೆದಿದ್ದಾರೆ.  ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತದಿಂದ ನೊಂದ ವ್ಯಕ್ತಿ ಆತ್ಮಹತ್ಯೆ

Wednesday, April 3rd, 2013
Man sucide at well

ಮಂಗಳೂರು : ಕೆಲ ತಿಂಗಳ ಹಿಂದೆ ನಡೆದ ಅಪಘಾತದಿಂದಾಗಿ ಖಿನ್ನತೆಗೆ ಒಳಗಾದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ನಗರದ ಬಿಕರ್ನಕಟ್ಟೆ ಬಳಿ ನಡೆದಿದೆ. ಕಳೆದ ಫೆಬ್ರವರಿ ೨೩ ರಂದು ವೆಲೇರಿ ಯನ್ ರೋಡ್ರಿಗಸ್ ಎಂಬವರು ಕಂಕನಾಡಿ ಬಳಿ ತನ್ನ ಇನ್ನೋವಾ ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ೧೨ ವರ್ಷದ  ಬಾಲಕಿಯೊಬ್ಬಳು ಇವರ ಕಾರಿನಡಿಗೆ ಬಿದ್ದು ಮೃತಪಟ್ಟಿದ್ದಳು. ರಸ್ತೆ ದಾಟುವಾಗ ಈ ಅಪಘಾತ ನಡೆದಿತ್ತು. ಈ ಅಪಘಾತದಿಂದ ವೆಲೇರಿಯನ್ ರವರು ಸಾಕಷ್ಟು ನೊಂದಿದ್ದು ಇದೆ ಕಾರಣದಿಂದ ನಿನ್ನೆ ಬೆಳಿಗ್ಗೆ […]

ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲಿರುವ ಅಂಚೆ ಕಚೇರಿಯಲ್ಲಿ ಬೆಂಕಿ, ತಪ್ಪಿದ ಅನಾಹುತ

Tuesday, April 2nd, 2013
Post office

ಮಂಗಳೂರು : ಇಂದು ಮಧ್ಯಾಹ್ನ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಒಂದನೇ ಮಹಡಿಯಲ್ಲಿರುವ ಅಂಚೆ ಕಚೇರಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು ಇದರಿಂದ  ಕಚೇರಿಯಲ್ಲಿದ್ದ ಕೆಲವು ಅರ್ಜಿ ಫಾರಂಗಳು ಸುಟ್ಟು ಹೋಗಿವೆ. ಅಂಚೆ ಕಚೇರಿಯಲ್ಲಿರುವ ಕಸದ ಬುಟ್ಟಿಯಲ್ಲಿ ಮದ್ಯಾಹ್ನ ಸುಮಾರು 12.15 ರ ಸುಮಾರಿಗೆ ಕಾಣಿಸಿಕೊಂಡ ಬೆಂಕಿ ಪಕ್ಕದಲ್ಲಿದ್ದ ಟೇಬಲ್ ಗೆ ಹರಡಿ ಕೆಲವು ಕಡತಗಳಿಗೆ ಹಾಗು ಅರ್ಜಿ ಫಾರಂಗಳಿಗೆ ತಗಲಿದೆ. ಪರಿಣಾಮ ಕೆಲವು ಅರ್ಜಿ ಫಾರಂ ಗಳು ಸುಟ್ಟು ಹೋಗಿದ್ದು  ಸಿಬ್ಬಂಧಿಗಳು ಕೂಡಲೆ  ಅಗ್ನಿಶಾಮಕ ಇಲಾಖೆಗೆ ಸುದ್ದಿ ಮುಟ್ಟಿಸಿ, […]

ಕುಂದಾಪುರ : ಅಂಕದಕಟ್ಟೆ ಸಮೀಪದ ಮನೆಯೊಂದರಲ್ಲಿ ಅಗ್ನಿ ದುರಂತ, ಲಕ್ಷಾಂತರ ರೂಪಾಯಿ ನಷ್ಟ

Tuesday, April 2nd, 2013
Ankadakatte fire mishap

ಕುಂದಾಪುರ : ಕುಂದಾಪುರ ಸಮೀಪದ ಅಂಕದಕಟ್ಟೆ ಎಂಬಲ್ಲಿ  ಸುಮತಿ ಎಂಬುವವರಿಗೆ ಸೇರಿದ ಮನೆಯಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಅಗ್ನಿ ದುರಂತದಿಂದಾಗಿ ಮನೆ ಹಾಗು ಮನೆಯೊಳಗಿನ ವಸ್ತುಗಳು ಸಂಪೂರ್ಣ ಹತ್ತಿ ಉರಿದಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಸುಮತಿ ಎಂಬುವವರು ಈ ಮನೆಯಲ್ಲಿ ಅವರ ತಮ್ಮ ತಮ್ಮಂದಿರಾದ ರವಿಕುಮಾರ್, ಪ್ರತಾಪ್ ರೊಂದಿಗೆ ವಾಸವಾಗಿದ್ದು  ರಾತ್ರಿ ೧.೩೦ ರ ಸುಮಾರಿಗೆ ವಸ್ತುಗಳು ಬೀಳುವ ಸದ್ದು ಕೇಳಿ ಮನೆಮಂದಿ ಎಚ್ಚರಗೊಂಡಿದ್ದಾರೆ. ಆದರೆ ಆ ವೇಳೆಗಾಗಲೇ  ಬೆಂಕಿ ಹತ್ತಿ ಉರಿಯುತ್ತಿದ್ದು ಏನೂ ಮಾಡಲು […]

ಉದ್ಯಮಿ ಗಿರೀಶ್‌ ಪುತ್ರನ್‌ ಕೊಲೆ, ಮತ್ತೊಬ್ಬ ಆರೋಪಿಯ ಬಂಧನ

Tuesday, April 2nd, 2013
Girish Putran murder case

ಬಜಪೆ : ಹೊಯ್ಗೆ ಬಜಾರ್‌ನ ರಿಯಲ್ ಎಸ್ಟೇಟ್ ಉದ್ಯಮಿ ಗಿರೀಶ್‌ ಪುತ್ರನ್‌ ಕೊಲೆ ಪ್ರಕರಣದ ಇನ್ನೊಬ್ಬ ಪ್ರಮುಖ ಆರೋಪಿ ರಿತೇಶ್‌ (28) ನನ್ನು ಬಜಪೆ ಪೊಲೀಸ್‌ ಇನ್ಸ್‌ಪೆಕ್ಟರ್‌ ದಿನಕರ ಶೆಟ್ಟಿ ನೇತೃತ್ವದ ಪೊಲೀಸ್‌ ತಂಡ ಸೋಮವಾರ ಬಂಧಿಸಿದ್ದು, ಇದರೊಂದಿಗೆ ಈ ಪ್ರಕರಣ ಕುರಿತಂತೆ ಬಂಧಿತರಾದವರ ಸಂಖ್ಯೆ 3 ಕ್ಕೇರಿದೆ. ಆರೋಪಿ ರೀತು ಯಾನೆ ರಿತೇಶ್‌ನನ್ನು ಖಚಿತ ಮಾಹಿತಿ ಮೇರೆಗೆ  ಮೂಲ್ಕಿ ಬಪ್ಪನಾಡು ಬಳಿ ಬಂಧಿಸಲಾಗಿದ್ದು, ಕೊಲೆಗೆ ಉಪಯೋಗಿಸಿದ್ದ ಚಾಕುವನ್ನು ವಶ ಪಡಿಸಿಕೊಳ್ಳಲಾಗಿದೆ. ರಿತೇಶ್‌ ಹಳೆ ಆರೋಪಿಯೂ ಆಗಿದ್ದಾನೆ. […]

ಫ್ರೆಂಚ್‌ ಸೈನಿಕರ ಗುಂಡಿಗೆ ಬಲಿಯಾದ ಕೃಷ್ಣಯ್ಯ ಮೊಗವೀರರ ಅಂತ್ಯಸಂಸ್ಕಾರ

Tuesday, April 2nd, 2013
Krishnaiah Mogaveera

ಕುಂದಾಪುರ : ಮಧ್ಯ ಆಫ್ರಿಕಾದ ಬಾಂಗ್ವೆ ವಿಮಾನ ನಿಲ್ದಾಣದಲ್ಲಿ ಫ್ರೆಂಚ್‌ ಸೈನಿಕರ ಗುಂಡಿಗೆ ಬಲಿಯಾದ ಕುಂದಾಪುರ ಬಳ್ಕೂರಿನ ಕೃಷ್ಣಯ್ಯ ಮೊಗವೀರ ಅವರ ಪಾರ್ಥಿವ ಶರೀರ ಶರೀರವನ್ನು ಸೋಮವಾರ ಮಧ್ಯಾಹ್ನ ಹುಟ್ಟೂರಿಗೆ  ತರಲಾಯಿತು. ಫ್ರಾನ್ಸ್‌ ರಾಯಭಾರ ಕಚೇರಿಯ ಎರಿಕ್‌ ಲೆವೆರ್ಟೊ ಅವರು  ಫ್ರೆಂಚ್‌ ಸೈನಿಕರ ಗುಂಡಿಗೆ ಬಲಿಯಾದ ಕೃಷ್ಣಯ್ಯ ಮೊಗವೀರ ಅವರ ಪಾರ್ಥಿವ ಶರೀರ ಹುಟ್ಟೂರು ತಲುಪುವ ಮುನ್ನ  ಬಳ್ಕೂರಿನ ಮೃತರ ಮನೆಗೆ ಆಗಮಿನಿಸಿ ಫ್ರೆಂಚ್‌ ಸೈನಿಕರಿಂದ ಆದ ಈ ಕೃತ್ಯಕ್ಕೆ ವಿಷಾದ ವ್ಯಕ್ತಪಡಿಸಿದರು. ಊರಿನ ಸಾವಿರಾರು ಮಂದಿ ಕೃಷ್ಣಯ್ಯ ಅವರ […]

ಇಂದಿನಿಂದ ಪ್ರಾರಂಭವಾದ ಎಸ್.ಎಸ್.ಎಲ್.ಸಿ ಪರೀಕ್ಷೆ ;ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿ

Monday, April 1st, 2013
SSLC Exams

ಮಂಗಳೂರು : ಇಂದಿನಿಂದ ಆರಂಭಗೊಂಡಿರುವ ಎಸೆಸೆಲ್ಸಿ ಪರೀಕ್ಷೆ ಸುಸೂತ್ರವಾಗಿ ನಡೆಯಲು ಎಲ್ಲ ರೀತಿಯ ಕಟ್ಟುನಿಟ್ಟಿನ ಕ್ರಮಗಳನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಕೈಗೊಂಡಿದೆ. ಜಿಲ್ಲೆಯಲ್ಲಿ ಈ ಬಾರಿ ಒಟ್ಟು 35,061 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಇದರಲ್ಲಿ  18,060 ಗಂಡು ಮತ್ತು 17,001 ಹೆಣ್ಮಕ್ಕಳಿದ್ದಾರೆ. ಇದುವರೆಗೂ  ಬೆಳಗ್ಗೆ 10:30ಕ್ಕೆ ಪರೀಕ್ಷೆಯು ಆರಂಭಗೊಳ್ಳುತ್ತಿತ್ತು. ಆದರೆ ಈ ಬಾರಿ 9:30ಕ್ಕೆ ಆರಂಭ ಗೊಂಡು, 12:45ಕ್ಕೆ ಮುಕ್ತಾಯಗೊಳ್ಳಲಿದೆ. ಪ್ರಸಕ್ತ ಸಾಲಿನ ಪರೀಕ್ಷೆಗೆ ಜಿಲ್ಲೆಯಲ್ಲಿ 96 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಪರೀಕ್ಷೆಯ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದ […]

ಕದ್ರಿ ದೇವಾಲಯದಲ್ಲಿ ಗುಂಡು ಸಿಡಿತ, ಹಿನ್ನಲೆ ಇನ್ನೂ ನಿಗೂಢ

Monday, April 1st, 2013
Gun fired at Kadri temple

ಮಂಗಳೂರು : ನಗರದ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಹೊರ ಅಂಗಣದಲ್ಲಿ ಫೈರ್ ಆದ ಗುಂಡಿನ ತುಣುಕೊಂದು ಭಾನುವಾರ ಪತ್ತೆಯಾಗಿ ದೇವಾಲಯದಲ್ಲಿ ಕೆಲ ಹೊತ್ತು ಆತಂಕದ ವಾತಾವರಣ ಕಂಡುಬಂಡಿತು. ಮಂಗಳೂರಿನಲ್ಲಿ ಅವಿನಾಶ್ ಮೊಸಾಯಿಕ್ ಉದ್ಯಮ ನಡೆಸುತ್ತಿರುವ ಉದ್ಯಮಿ ಪ್ರಕಾಶ್ ಶೇರಿಗಾರ್ ಅವರು ತಮ್ಮ ಮಗಳ ಮದುವೆಯ ಆಮಂತ್ರಣ ಪತ್ರವನ್ನು ಸಂಪ್ರದಾಯದಂತೆ ದೇವರ ಮುಂದಿಡಲು ಭಾನುವಾರ ಕುಟುಂದ ಸಮೇತರಾಗಿ  ಅವರು ಕದ್ರಿ ದೇವಸ್ಥಾನಕ್ಕೆ ಆಗಮಿಸಿದ್ದರು. ಈ ವೇಳೆ ಅವರು ಕದ್ರಿ ದೇವಸ್ಥಾನದ ಆವರಣದಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ಗುಡಿಗೆ ಪ್ರವೇಶಿಸುವ […]