ಡಾ|ಪಿ.ವಿ.ಭಂಡಾರಿಯವರಿಗೆ, ಡಾ| ಹೆಗ್ಗಡೆ ಯವರಿಂದ ‘ಸಂಯಮ’ ಪ್ರಶಸ್ತಿ ಪ್ರಧಾನ

Saturday, March 16th, 2013
Samyama award 2013

ಉಡುಪಿ : ಅಜ್ಜರಕಾಡು ಪುರಭವನದಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಉಡುಪಿಯ ಡಾ|ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ನಿರ್ದೇಶಕ ಡಾ|ಪಿ.ವಿ.ಭಂಡಾರಿಯವರಿಗೆ  ‘ಸಂಯಮ 2013’ ಪ್ರಶಸ್ತಿಯನ್ನು ಶುಕ್ರವಾರ ಡಾ|ಹೆಗ್ಗಡೆಯವರು ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ|ಪಿ.ವಿ.ಭಂಡಾರಿಯವರು  ಪ್ರಶಸ್ತಿ ಜೊತೆಗೆ ಬಂದ 1 ಲ.ರೂ. ಮೊತ್ತವನ್ನು ತಾನು ಕೆಲಸ ಮಾಡುತ್ತಿರುವ ಎ.ವಿ.ಬಾಳಿಗಾ ಚಾರಿಟೀಸ್‌ಗೆ ನೀಡುವುದಾಗಿ ಘೋಷಿಸಿದರು ಮತ್ತು  ಪ್ರಶಸ್ತಿಯು ಇನ್ನಷ್ಟು ಕೆಲಸ ಮಾಡಲು ಪ್ರೇರಣೆ ನೀಡಿದೆ ಎಂದರು. ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದ ಡಾ|ಡಿ.ವೀರೇಂದ್ರ ಹೆಗ್ಗಡೆ ಯವರು ಮದ್ಯ ಮಾರಾಟದ […]

ಮಲಯಾಳಿ ಕಡ್ಡಾಯ ನೀತಿಯಿಂದ ಕನ್ನಡಿಗರನ್ನು ಹೊರತುಪಡಿಸುವುದಾಗಿ ಮುಖ್ಯಮಂತ್ರಿ ಉಮ್ಮನ್‌ ಚಾಂಡಿ ಭರವಸೆ

Saturday, March 16th, 2013
Umman Chandi

ಕಾಸರಗೋಡು : ಕೇರಳದಲ್ಲಿ ಸರಕಾರಿ ನೌಕರಿ ಹೊಂದಬೇಕಾದರೆ ಮಲಯಾಳವನ್ನು ಕಡ್ಡಾಯವಾಗಿ ಕಲಿತಿರಬೇಕು ಎಂಬ ಆದೇಶದಿಂದ ಕನ್ನಡಿಗರನ್ನು  ಹೊರತುಪಡಿಸಬೇಕೆಂದು ಶುಕ್ರವಾರ ಬೆಳಗ್ಗೆ ಮುಖ್ಯಮಂತ್ರಿಯವರನ್ನು ಭೇಟಿಯಾದ ಮಂಜೇಶ್ವರ ಶಾಸಕರು ತಿಳಿಸಿದ್ದಾರೆ. ಕೇರಳದಲ್ಲಿ ಇನ್ನು ಮುಂದೆ  ಸರಕಾರಿ ನೌಕರಿ ಹೊಂದಬೇಕಾದರೆ ಮಲಯಾಳವನ್ನು ಕಡ್ಡಾಯವಾಗಿ ಕಲಿತಿರಬೇಕು ಎನ್ನುವ ಸರ್ಕಾರದ ಶಿಫಾರಸ್ಸನು ಕೇರಳದ ಲೋಕಸೇವಾ ಆಯೋಗ ಅಂಗೀಕರಿಸಿದ್ದು ಈ ಆದೇಶ ಕಾಸರಗೋಡಿನಲ್ಲಿರುವ ಅಲ್ಪಸಂಖ್ಯಾತ ಕನ್ನಡಿಗರನ್ನು ಸರಕಾರಿ ನೌಕರಿಯಿಂದ ವಂಚಿತರನ್ನಾಗಿ ಮಾಡುವ ಸಾಧ್ಯತೆ ಇದೆ. ಆದ್ದರಿಂದ ಈ ನಿಯಮದಿಂದ ಕನ್ನಡಿಗರನ್ನು ಹೊರತುಪಡಿಸಬೇಕೆಂದು ಕೇಳಿಕೊಳ್ಳಲಾಗಿದ್ದು  ಈ ನಿಯಮದಿಂದ […]

ಗ್ರಾಮೀಣ ಪ್ರದೇಶದಲ್ಲಿ ಗ್ರಾಹಕ ಜಾಗೃತಿ ನಡೆಯಬೇಕು : ಜಿಲ್ಲಾಧಿಕಾರಿ

Friday, March 15th, 2013
Consumer Day

ಮಂಗಳೂರು : ದ.ಕ ಜಿಲ್ಲಾಡಳಿತ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಮಂಗಳೂರು, ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟ (ರಿ) ದ.ಕ ಜಿಲ್ಲೆ ಹಾಗೂ ಗ್ರಾಹಕ ಸಂಘ ಮತ್ತು ಯೋಜನಾ ವೇದಿಕೆ ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ. ವಿಶ್ವ ಗ್ರಾಹಕ ದಿನಾಚರಣೆ ಮತ್ತು ಗ್ರಾಹಕ ಶಿಕ್ಷಣ ಸರ್ಟಿಪಿಕೇಟ್ ಪ್ರದಾನ ಸಮಾರಂಭವನ್ನು ಮಾರ್ಚ್ 15 ಶುಕ್ರವಾರ ಬೆಳಿಗ್ಗೆ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ದ.ಕ ಜಿಲ್ಲಾಧಿಕಾರಿ ಎನ್. ಪ್ರಕಾಶ್ ಉದ್ಘಾಟಿಸಿದರು. ಉದ್ಘಾಟನೆ ಬಳಿಕ […]

ಕಾವೂರು ಪೊಲೀಸ್ ಠಾಣೆಯ ಎದುರು ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

Friday, March 15th, 2013
BJP protest at Kavoor Police Sta

ಮಂಗಳೂರು : ಕುಂಜತ್ತಬೈಲಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗುರುವಾರ ರಾತ್ರಿ ನಡೆದ ಘರ್ಷಣೆಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಕಾವೂರು ಪೊಲೀಸರು ನಡೆಸಿದ  ಲಾಠಿ ಚಾರ್ಜ್ ನಲ್ಲಿ ಹಲವರು ಗಾಯಗೊಂಡಿದ್ದು ಅವರನ್ನು ನಗರದ ಎಜೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕಾರ್ಯಕರ್ತರ ಮೇಲಿನ  ಕಾವೂರು ಪೊಲೀಸ್ ಠಾಣೆ ಎಸ್ ಐ,  ಸಿಬ್ಬಂದಿ ನಡೆಸಿದ ಲಾಠಿ ಚಾರ್ಜ್ ನ್ನು ವಿರೋಧಿಸಿ ಶುಕ್ರವಾರ ಹಲವು ಬಿಜೆಪಿ ಕಾರ್ಯಕರ್ತರು ಕಾವೂರು ಪೊಲೀಸ್ ಠಾಣೆಯ ಎದುರು ಪ್ರತಿಭಟಿಸಿ ಹಲವಾರು ಬೇಡಿಕೆಗಳನ್ನು ಮುಂದಿಟ್ಟರು. ಗುರುವಾರ ಕುಂಜತ್ತಬೈಲು […]

ಬಂಟ್ವಾಳ-ಕಡೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ, ಬೈಕ್ ಸವಾರ ಗಂಭೀರ

Friday, March 15th, 2013
Bike Pickup accident at bantwal

ಬಂಟ್ವಾಳ : ಬಂಟ್ವಾಳ-ಕಡೂರು ರಾಷ್ಟ್ರೀಯ ಹೆದ್ದಾರಿಯ ನಾವೂರ ಗ್ರಾಮದ ಫರ್ಲಾದಲ್ಲಿ  ಪಿಕಪ್ ವಾಹನವೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಗುರುವಾರ ನಡೆದಿದೆ. ಬೈಕ್ ಸವಾರ ಮೂರ್ಜೆ ನಿವಾಸಿ ವೀರಪ್ಪ ಮೂಲ್ಯ(42) ಅವರು ಬಿಸಿ.ರೋಡ್ ನಿಂದ ಮೂರ್ಜೆ ಕಡೆ ಹೋಗುತ್ತಿರುವಾಗ ಹಿಂದಿನಿಂದ ಬಂದ ಪಿಕಪ್ ಡಿಕ್ಕಿ ಹೊಡೆದಿದೆ. ಘಟನೆಯಿಂದ ಬೈಕ್ ಸವಾರ ವೀರಪ್ಪ ಮೂಲ್ಯ ಬೈಕ್ ಸಹಿತ ರಸ್ತೆ ಬದಿಯ ಚರಂಡಿಗೆ ಎಸೆಯಲ್ಪಟ್ಟಿದ್ದರು. ಘಟನೆಯಿಂದ ತೀವ್ರ ಅಸ್ವಸ್ಥ ರಾದ ಅವರನ್ನು […]

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಬಡವರಿಗೆ ಕೆ.ಜಿ.ಗೆ 1 ರೂ.ಗೆ ಅಕ್ಕಿ : ಜನಾರ್ದನ ಪೂಜಾರಿ

Friday, March 15th, 2013
Bantwal Congress victory procession

ಬಂಟ್ವಾಳ : ಪುರಸಭಾ-ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ದಾಖಲಿಸಿರುವ ಹಿನ್ನಲೆಯಲ್ಲಿ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾರ್ಚ್ ೧೪  ಗುರುವಾರ ಸಂಜೆ ಬಿ.ಸಿ. ರೋಡಿನ ಪೂಂಜಾ ಮೈದಾನದಲ್ಲಿ ನೂತನ ಕಾಂಗ್ರೆಸ್ ಸದಸ್ಯರ ಅಭಿನಂದನೆ ಮತ್ತು ಮತದಾರರಿಗೆ ಕೃತಜ್ಞತಾ ಸಭೆಯನ್ನು ಆಯೋಗಿಸಲಾಗಿತ್ತು. ಸಮಾರಂಭಕ್ಕೂ ಮೊದಲು ನೂತನ ಸದಸ್ಯರನ್ನು ಬಿ.ಸಿ.ರೋಡಿನ ಮುಖ್ಯ ವೃತ್ತದ ಬಳಿಯಿಂದ ಮೈದಾನದವರೆಗೆ ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಕರೆತರಲಾಯಿತು. ಸಭೆಯನ್ನು  ಕೇಂದ್ರದ ಮಾಜಿ ವಿತ್ತ ಸಚಿವ ಬಿ.ಜನಾರ್ದನ ಪೂಜಾರಿ ಉದ್ಘಾಟಿಸಿದರು. ಸ್ಥಳೀಯ […]

ಶಿಕ್ಷಣದಲ್ಲಿ ನೈತಿಕ ಮೌಲ್ಯಗಳ ಬೋಧನೆಯ ಮೂಲಕ ಯುವಜನರನ್ನು ಸಜ್ಜನರನ್ನಾಗಿ ಪರಿವರ್ತಿಸಲು ಸಾಧ್ಯ :ಎ.ಎಂ.ಪ್ರಸಾದ್

Friday, March 15th, 2013
National level con St Agnes

ಮಂಗಳೂರು : ನಗರದ ಸಂತ ಆಗ್ನೆಸ್ ಕಾಲೇಜಿನ ಮನಃಶಾಸ್ತ್ರ ವಿಭಾಗ ಹಾಗೂ ಮಂಗಳೂರಿನ ಸಮಗ್ರ ಯೋಗ ಸತ್ಸಂಗದ ಜಂಟಿ ಆಯೋಜಕತ್ವದಲ್ಲಿ ಗುರುವಾರ ಆಗ್ನೆಸ್ ಕಾಲೇಜಿನಲ್ಲಿ ಎರಡು ದಿನಗಳ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದ್ದು ಇದರ ಉದ್ಘಾಟನೆಯನ್ನು ಕ್ರೈಮ್ ಮತ್ತು ಟೆಕ್ನಿಕಲ್ ಸರ್ವಿಸ್‌ನ ಅಡಿಷನಲ್ ಡಿಜಿಪಿ ಅಶಿತ್ ಮೋಹನ್ ಪ್ರಸಾದ್ ನೆರವೇರಿಸಿದರು. ನಂತರ ಮಾತನಾಡಿದ ಅವರು ಇಂದಿನ ದಿನಗಳಲ್ಲಿ ಅಪರಾಧ ಚಟುವಟಿಕೆಗಳು ಸಮಾಜದಲ್ಲಿ ದಿನೇ ದಿನೇ ಹೆಚ್ಚುತ್ತಿದ್ದು ಇದರಲ್ಲಿ ಹೆಚ್ಚಾಗಿ ೧೮ ವರ್ಷ ಒಳಗಿನ ಯುವಕರು ಇದ್ದಾರೆ. ಇದಕ್ಕೆ ಪ್ರಮುಖವಾಗಿ […]

ಇಟಲಿ ರಾಯಭಾರಿಗೆ ಸುಪ್ರೀಮ್ ಕೋರ್ಟ್ ನಿಂದ ತಡೆ

Thursday, March 14th, 2013
ಇಟಲಿ ರಾಯಭಾರಿಗೆ ಸುಪ್ರೀಮ್ ಕೋರ್ಟ್ ನಿಂದ ತಡೆ

ನವದೆಹಲಿ : ಭಾರತೀಯ ಮೀನುಗಾರರಿಬ್ಬರನ್ನು ಗುಂಡಿಕ್ಕಿ ಕೊಂದ ಆರೋಪ ಎದುರಿಸುತ್ತಿರುವ ಇಟಲಿ ನೌಕಾಪಡೆಯ ಸಿಬ್ಬಂದಿಯಿ ಬ್ಬರನ್ನು ಮರಳಿ ಒಪ್ಪಿಸುವಂತೆ ಸುಪ್ರೀಮ್ ಕೋರ್ಟ್ ಆದೇಶಿಸಿದೆ. ತಮ್ಮ ದೇಶದಲ್ಲಿನ ಮತದಾನದಲ್ಲಿ ಪಾಲ್ಗೊಳ್ಳಲು ಅನುಮತಿ ಕೋರಿ ಇಟಲಿಗೆ ತೆರಳಿದ ಇಬ್ಬರು ನೌಕಾ ಸಿಬ್ಬಂದಿಯನ್ನು ವಾಪಾಸು ಕಳುಹಿಸುವ ವಿಷಯಕ್ಕೆ ಸಂಬಂಧಪಟ್ಟಂತೆ ಮಾತು ತಪ್ಪಿರುವ ಇಟಲಿಯ ಧೋರಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಮ್ ಕೋರ್ಟ್ ದೆಹಲಿಯಲ್ಲಿರುವ ಇಟಲಿ ರಾಯಭಾರಿ ಭಾರತ ಬಿಟ್ಟು ತೆರಳುವುದಕ್ಕೆ ಗುರುವಾರ ತಡೆಯಾಜ್ಞೆ ನೀಡಿದೆಯಲ್ಲದೆ, ಈ ಕುರಿತು ಮಾರ್ಚ್ 18  ರೊಳಗೆ ಉತ್ತರಿಸುವಂತೆ […]

ಪೆಟ್ರೋಲ್ ಬೆಲೆ ೧ ರೂ. ಅಗ್ಗ, ಡೀಸೆಲ್ ೫೦ ಪೈಸೆ ಹೆಚ್ಚಳ

Thursday, March 14th, 2013
Petrol and deasel price

ನವ ದೆಹಲಿ : ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬೆಲೆಗಳು ಇಳಿಯುತ್ತಿರುವ ಪರಿಣಾಮ ಪೆಟ್ರೋಲ್ ಬೆಲೆಯೂ ಒಂದು ರೂಪಾಯಿಯಷ್ಟು ಇಳಿಯಲಿದೆ. ಪೆಟ್ರೋಲ್ ಬೆಲೆ ಒಂದು ರೂಪಾಯಿಯಷ್ಟು  ಇಳಿಕೆಯಾಗಲಿದ್ದರೆ, ಜನವರಿಯಲ್ಲಿ ಪ್ರತಿ ತಿಂಗಳು ಡೀಸೆಲ್ ಬೆಲೆಯನ್ನು ಹೆಚ್ಚಿಸುವ ನಿರ್ಧಾರ ಕೈಗೊಂಡಿರುವುದರಿಂದ, ಡೀಸೆಲ್ ಬೆಲೆ ೪೦ ರಿಂದ ೫೦ ಪೈಸೆ ಹೆಚ್ಚಳವಾಗುವ ಸಾಧ್ಯತೆ ಇದೆ. ಈ ಬೆಲೆಯು  ಮಾರ್ಚ್ ೧೫ ಶುಕ್ರವಾರ ಅಥವಾ ಮಾರ್ಚ್ ೧೬ ಶನಿವಾರದಿಂದು ಪ್ರಕಟಗೊಳ್ಳುವ  ಸಾಧ್ಯತೆಯಿದೆ.

ಮಾರ್ಚ್ 18 ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ವೈಮಾನಿಕ ಸರಕು ನಿರ್ವಹಣಾ ಸಂಕೀರ್ಣ ದ ಉದ್ಘಾಟನೆ

Thursday, March 14th, 2013
Mangalore International Airport

ಮಂಗಳೂರು : ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು  ವೈಮಾನಿಕ ಸರಕು ನಿರ್ವಹಣಾ ಸಂಕೀರ್ಣ ದ ಉದ್ಘಾಟನಾ ಸಮಾರಂಭವು ಮಾರ್ಚ್ 18 ರಂದು ನಡೆಯಲಿರಿರುವುದಾಗಿ ಅಧಿಕೃತ ಮೂಲಗಳಿಂದ ತಿಳಿದುಬಂದಿದೆ. ಉದ್ಘಾಟನೆಯನ್ನು ಕೇಂದ್ರ ವಿಮಾನ ಯಾನ ಸಚಿವ ಅಜಿತ್‌ ಸಿಂಗ್‌ ನೆರವೇರಿಸಲಿರುವರು. ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಕೇಂದ್ರ ಸಚಿವರಾದ ಎಂ. ವೀರಪ್ಪ ಮೊಲಿ ಮೊದಲಾದವರು ಆಗಮಿಸಲಿದ್ದಾರೆ.