ಮೃತ ಸೌಮ್ಯಾ ಳ ಮನೆಗೆ ಜನಾರ್ದನ ಪೂಜಾರಿ, ಕಾಂಗ್ರೆಸ್ಸ್ ನಾಯಕರ ಭೇಟಿ, ಸಾಂತ್ವಾನ

Thursday, February 28th, 2013
Janardhana poojaary visit Sowmya's family

ಬಂಟ್ವಾಳ : ಬಾಳ್ತಿಲ ಗ್ರಾಮದ ಕುಂಟಲ್ಪಾಡಿ ಯಲ್ಲಿ ಸೋಮವಾರ ಅತ್ಯಾಚಾರ ಯತ್ನದ ಬಳಿಕ ಕೊಲೆಗೀಡಾಗಿರುವ ಸೌಮ್ಯಾ ಅವರ ಮನೆಗೆ ಬುಧವಾರ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಮತ್ತು ಕಾಂಗ್ರೆಸ್ಸ್ ನಾಯಕರು ಭೇಟಿ ನೀಡಿ ಮೃತಳ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಹಾಗು ಈ ಸಂದರ್ಭದಲ್ಲಿ ಅವರು ಕಾಂಗ್ರೆಸ್ ಕಾರ್ಯಕರ್ತರಿಂದ ಮಂಗಳವಾರ ಸಂಗ್ರಹಿಸಿದ 1.10 ಲಕ್ಷ ರೂಪಾಯಿಗಳನ್ನು  ಸೌಮ್ಯಾ ಳ ಹೆತ್ತವರಿಗೆ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಮಹಿಳೆಗೆ ರಕ್ಷಣೆ ಇಲ್ಲದಂತಹ  ಸ್ಥಿತಿ ನಿರ್ಮಾಣವಾಗಿದ್ದು, […]

ಬಂಟ್ವಾಳ : ಕಾನೂನು ಮಾಹಿತಿ ಶಿಬಿರ

Wednesday, February 27th, 2013
Legal Information Camp at Bantwal

ಬಂಟ್ವಾಳ : ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ, ವಕೀಲರ ಸಂಘ ಬಂಟ್ವಾಳ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆ ಬಂಟ್ವಾಳ ಹಾಗೂ ಗ್ರಾಮ ಪಂಚಾಯತ್ ಅಲ್ಲಿಪಾದೆ ಇವುಗಳ  ಆಶ್ರಯದಲ್ಲಿ ನಡೆದ ಕಾನೂನು ಮಾಹಿತಿ ಶಿಬಿರವನ್ನು ತಾಲೂಕು ಸೇವೆಗಳ ಸಮಿತಿಯ ಅಧ್ಯಕ್ಷರು ಹಿರಿಯ ಸಿವಿಲ್ ನ್ಯಾಯಧೀಶೆಯಾದ ಎ.ಕೆ ನವೀನಕುಮಾರಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕಾನೂನಿನ ದೃಷ್ಠಿಯಲ್ಲಿ  ಎಲ್ಲರೂ ಸಮಾನರಾಗಿದ್ದು ಅದಕ್ಕೆ ಮೇಲು -ಕೀಳು, ಗಂಡು ಹೆಣ್ಣು ಎಂಬ ಭೇದವಿಲ್ಲ ಈ ಅರಿವು ಎಲ್ಲರಲ್ಲೂ ಮೂಡಬೇಕು ಎಂಬ […]

ಜಿಲ್ಲಾಧಿಕಾರಿಗಳಿಂದ ನಗರದ ನೈರ್ಮಲ್ಯ ಪರಿಶೀಲನೆ

Wednesday, February 27th, 2013
city's sanitation inspection

ಮಂಗಳೂರು  : ಇಂದು ಬೆಳಗ್ಗೆ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಆಡಳಿತಾಧಿಕಾರಿಯೂ ಆದ ಶ್ರೀ ಎನ್. ಪ್ರಕಾಶ್ ಅವರು  ಮಾನ್ಯ ಆಯುಕ್ತರು ಹಾಗೂ ಪರಿಸರ ಅಭಿಯಂತರರೊಂದಿಗೆ ಪಾಲಿಕಾ ವ್ಯಾಪ್ತಿಯೊಳಗಿನ ಘನತ್ಯಾಜ್ಯ ವಿಲೇವಾರಿ ಹಾಗೂ ನೈರ್ಮಲ್ಯಕ್ಕೆ ಸಂಬಂಧಿಸಿ ಕೆಲ  ಪ್ರದೇಶಗಳಿಗೆ ಸ್ವತಹ ಸಂದರ್ಶಿಸಿ ಪರಿಶೀಲನೆ ನಡೆಸಿದರು. ನಗರದ ಫಳ್ನೀರು ರಸ್ತೆ, ಕಂಕನಾಡಿ, ಶಾಂತಿನಿಲಯ ರಸ್ತೆ, ನಂದಿಗುಡ್ಡ, ಪಾಂಡೇಶ್ವರ, ಕೋರ್ಟ್, ದಕ್ಕೆ, ಸೆಂಟ್ರಲ್ ಮಾರ್ಕೆಟ್, ರಥಬೀದಿ, ಬಂದರು, ಕುದ್ರೋಳಿ, ಮಣ್ಣಗುಡ್ಡೆ, ಉರ್ವ, ಕೊಟ್ಟಾರ, ಬಿಜೈ, ಕದ್ರಿ, ಶಿವಭಾಗ್, […]

ಕೊಲ್ಕತ್ತಾ ಮಾರುಕಟ್ಟೆ ಸಂಕೀರ್ಣದಲ್ಲಿ ಅಗ್ನಿ ದುರಂತ ಸಾವಿನ ಸಂಖ್ಯೆ19 ಕ್ಕೆ ಏರಿಕೆ

Wednesday, February 27th, 2013
Kolkata market complex

ಕೊಲ್ಕತ್ತಾ  : ಬುಧವಾರ ಕೇಂದ್ರ ಕೊಲ್ಕತ್ತಾ ದ ಸೀಲ್ಡಾ ಪ್ರದೇಶದಲ್ಲಿ ಗೋದಾಮು ಮತ್ತು ಕಚೇರಿ ಸಂಕೀರ್ಣಗಳಿರುವ ಮಾರುಕಟ್ಟೆಯಲ್ಲಿ ನಸುಕಿನ ಜಾವ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಸುಮಾರು 19 ಜನರು ಮೃತಪಟ್ಟಿದ್ದು, 12ಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ  26 ತಂಡಗಳು ಸತತವಾಗಿ ಮೂರು ಗಂಟೆಗಳ ಸತತ ಪರಿಶ್ರಮದಿಂದ ಬೆಂಕಿಯನ್ನು ಶಮನಗೊಳಿಸಲು ಪ್ರಯತ್ನಿಸಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ನಸುಕಿನ ಜಾವ 4 ಗಂಟೆ ಸುಮಾರಿಗೆ ಈ ಬೆಂಕಿ ಆಕಸ್ಮಿಕ ಉಂಟಾಗಿದ್ದು, ಮೃತರಲ್ಲಿ […]

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ “ತುಳುನಾಡ ಜಾನಪದ ವೈಭವ ಕಾರ್ಯಕ್ರಮ “

Wednesday, February 27th, 2013
Tulunada Janapada Vaibhava

ಮಂಗಳೂರು : ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಇದರ ವತಿಯಿಂದ ಪ್ರತಿಭಾ ದಿನಾಚರಣೆ “ತುಳುನಾಡ ಜಾನಪದ ವೈಭವ” ಕಾರ್ಯಕ್ರಮ ಕಾಲೇಜಿನ ವಿದ್ಯಾರ್ಥಿಗಳಿಂದ ಬುಧವಾರ ಫೆಬ್ರವರಿ 27 ರಂದು ಬೆಳಗ್ಗೆ ನಡೆಯಿತು. ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ತುಳುನಾಡಿನ ಸಂಸ್ಕೃತಿಗೆ ಸಂಬಂಧಪಟ್ಟ, ಯಕ್ಷಗಾನ, ಹುಲಿವೇಷ, ಆಟಿಕಳಂಜ, ಕೋಟಿ ಚೆನ್ನಯ್ಯ, ಜನಪದ ನೃತ್ಯ, ಕಂಗೀಲು ಮೊದಲಾದ ಪ್ರದರ್ಶನಗಳನ್ನು ನಡೆಸಿಕೊಟ್ಟರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ರಂಗಭೂಮಿ ಮತ್ತು ಚಲನಚಿತ್ರ ಕಲಾವಿದೆ ಶ್ರೀಮತಿ ಸರೋಜಿನಿ ಶೆಟ್ಟಿ ಮಾತನಾಡಿ, ಆಧುನಿಕತೆಯ ಪ್ರಭಾವದಿಂದ […]

ಅಂಬೇಡ್ಕರ್ ಪ್ರತಿಮೆ ಸ್ಥಳಾಂತರಕ್ಕೆ ಒಪ್ಪಿದ ಸರ್ಕಾರ

Wednesday, February 27th, 2013
Ambedkar statue shifted

ಬೆಂಗಳೂರು : ಇಲ್ಲಿನ ವಿಧಾನಸೌಧ ಮುಂಭಾಗದ ಅಂಬೇಡ್ಕರ್ ಪ್ರತಿಮೆಯನ್ನು ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲು ಸರ್ಕಾರ ಒಪ್ಪಿಕೊಂಡಿದ್ದು ಈ ಮೂಲಕ  ವಿವಾದದ ಸ್ವರೂಪ ಪಡೆದುಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಸ್ಥಳಾಂತರ ವಿವಾದಕ್ಕೆ ಹೈಕೋರ್ಟ್ ಸೋಮವಾರ ಮಂಗಳ ಹಾಡಿದೆ. ಅಮರನಾಥನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಹಿಂದಿನ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದ ವಿಭಾಗೀಯ ಪೀಠ, `ಪ್ರತಿಮೆಯನ್ನು 15 ದಿನಗಳಲ್ಲಿ ತಾತ್ಕಾಲಿಕವಾಗಿ ಸ್ಥಳಾಂತರ ಮಾಡಬೇಕು’ ಎಂದು ಡಿಸೆಂಬರ್ 12ರಂದು ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಕೆಲವು ದಲಿತ ಸಂಘಟನೆಗಳು […]

ನಿಡ್ಡೋಡಿ ಉಷ್ಣವಿದ್ಯುತ್ ಸ್ಥಾವರ ಸ್ಥಾಪನೆಗೆ ಗ್ರಾಮಸ್ಥರ ವಿರೋಧ

Wednesday, February 27th, 2013
Niddodi thermal power project

ಮೂಡುಬಿದಿರೆ : ದ.ಕ.ಜಿಲ್ಲೆಯ ಕಲ್ಲಮುಂಡ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ  ನಿಡ್ಡೋಡಿ ಗ್ರಾಮದಲ್ಲಿ  ನಾಲ್ಕುಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ಉಷ್ಣವಿದ್ಯುತ್ ಸ್ಥಾವರ ಸ್ಥಾಪಿಸಲುದ್ದೇಶಿಸಿರುವ ವಿಷಯ ಬಹಿರಂಗವಾಗಿದ್ದು, ಕೃಷಿ ಪ್ರಧಾನ ವಾದ ಈ ಪ್ರದೇಶದಲ್ಲಿ  ಉಷ್ಣವಿದ್ಯುತ್ ಸ್ಥಾವರ ಸ್ಥಾಪನೆ ವಿರೋಧಿಸಿ ಈ ಪರಿಸರದ ಜನ ರಾಜಕೀಯೇತರ ಹೋರಾಟಕ್ಕೆ ಸಜ್ಜಾಗಿದ್ದಾರೆ. ನಿಡ್ಡೋಡಿ ಉಷ್ಣವಿದ್ಯುತ್ ಸ್ಥಾವರ ಸ್ಥಾಪನೆಗೆ ಸುಮಾರು 4,000 ಎಕ್ರೆ ಜಾಗದ ಅಗತ್ಯತೆ ಇದೆ. ಶೇ. 85ರಷ್ಟು ಕೃಷಿಭೂಮಿಯೇ ಇರುವ ನಿಡ್ಡೋಡಿಯಲ್ಲಿ ಒಂದು ವೇಳೆ ಈ ಯೋಜನೆ ಜಾರಿಗೆ ಬಂದಲ್ಲಿ  ತಲೆತಲಾಂತರಗಳಿಂದ ಕೃಷಿಯನ್ನೇ […]

ಉರ್ವ ಮಾರಿಗುಡಿಯಲ್ಲಿ ವಿಜೃಂಭಣೆಯ ವರ್ಷಾವದಿ ಮಾರಿಪೂಜೆ

Wednesday, February 27th, 2013
Urva Maari Pooja

ಮಂಗಳೂರು : ಕಾರಣೀಕ ಕ್ಷೇತ್ರ ಉರ್ವ ಮಾರಿಗುಡಿಯಲ್ಲಿ ಪ್ರತಿಷ್ಥಾ ವರ್ಧಂತಿ ಮಹೋತ್ಸವ ಸಹಿತ ಎರಡು ದಿನಗಳ ಕಾಲ ವರ್ಷಾವದಿ ಮಹಾಪೂಜೆಯು ಫೆಬ್ರವರಿ 25 ಮತ್ತು 26 ರಂದು ಬಹಳ ವಿಜೃಂಭಣೆಯಿಂದ ನಡೆಯಿತು. ಮೊಗವೀರ ಸಮಾಜದ ಏಳುಪಟ್ಟಣದ 9 ಮೊಗವೀರ ಸಮಾಜದವರು ಸೇರಿ ಉರ್ವ ಮಾರಿಪೂಜೆಯನ್ನು ನೆರೆವೇರಿಸುತ್ತಾರೆ. ಉರ್ವ ಮಾರಿ ಪೂಜೆಯು ಕೇವಲ ಮೊಗವೀರ ಸಮಾಜದವರಿಗೆ ಸೀಮಿತವಲ್ಲ ಸರ್ವಧರ್ಮಿಯರು. ಹರಕೆ ಸಲ್ಲಿಸುವುದು ವಾಡಿಕೆಯಾಗಿದೆ. ಭಕ್ತರು ಮಾರಿಯಮ್ಮ ದೇವಿಗೆ ಭಕ್ತಿಯಿಂದ ಹರಕೆ ನೀಡಿದರೆ ಅವರ ಇಷ್ಟಾರ್ಥ ಕೈಗೂಡುವುದು ಎಂಬ ನಂಬಿಕೆ […]

ಕಾಂಗ್ರೆಸ್ ಅಭ್ಯರ್ಥಿ ಗಣೇಶ್ ಪೂಜಾರಿ ನಾಮ ಪತ್ರ ಸಿಂಧುಗೊಳಿಸಿದ ಚುನಾವಣಾಧಿಕಾರಿ

Tuesday, February 26th, 2013
Ganesh Pujari electoral nomination

ಮಂಗಳೂರು : ಕಾಂಗ್ರೆಸ್ ಅಭ್ಯರ್ಥಿ ಗಣೇಶ್ ಪೂಜಾರಿ ಪಾಲಿಕೆಯ ಕಟ್ಟಡದಲ್ಲಿ ವಾಣಿಜ್ಯ ಮಳಿಗೆಯನ್ನು ಬಾಡಿಗೆ ಪಡೆದು ಬಾಡಿಗೆಯನ್ನು ಹಲವು ತಿಂಗಳುಗಳಿಂದ ಪಾವತಿಸುತ್ತಿಲ್ಲ ಹಾಗಾಗಿ ಅವರು ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಬಾರದು ಹಾಗೂ ನಾಮ ಪತ್ರವನ್ನು ತಿರಸ್ಕರಿಸಬೇಕು ಎಂದು ಸೋಮವಾರ ಬಿಜೆಪಿಯ ಅಭ್ಯರ್ಥಿ ನವೀನಚಂದ್ರ ಚುನಾವಣಾಧಿಕಾರಿಯವರಲ್ಲಿ ಕೇಳಿಕೊಂಡಿದ್ದರು. ಇದಕ್ಕೆ ಚುನಾವಣಾಧಿಕಾರಿಯು ಮಂಗಳವಾರ ಸರಿಯಾದ ದಾಖಲೆ ಪತ್ರಗಳನ್ನು ಸಲ್ಲಿಸುವಂತೆ ತಿಳಿಸಿದ್ದರು. ಅದರಂತೆ ಇಂದು ಬೆಳಗ್ಗೆ ಬಿಜೆಪಿಯ ಅಭ್ಯರ್ಥಿ ನವೀನಚಂದ್ರ ಹಾಗೂ ಅವರ ಕಾನೂನು ಸಲಹೆಗಾರರು ಚುನಾವಣಾಧಿಕಾರಿಯವರ ಮುಂದೆ ದಾಖಲೆಗಳನ್ನು ಪ್ರಸ್ತುತ […]

ಸರಕಾರ, ಅಧಿಕಾರಿಗಳ ತಟಸ್ಥ ನೀತಿಯನ್ನು ವಿರೋಧಿಸಿ ಎಂಡೋಸಲ್ಫಾನ್ ಸಂತ್ರಸ್ಥರಿಂದ ಇಂದು ರಸ್ತೆ ತಡೆ

Tuesday, February 26th, 2013
Endosulfan victims Protest

ಕಾಸರಗೋಡು : ಎಂಡೋಸಲ್ಫಾನ್ ಸಂತ್ರಸ್ತ ಜನಪರ ಒಕ್ಕೂಟ ಹೊಸಬಸ್ಸು ನಿಲ್ದಾಣ ಪರಿಸರದ ಸಹಿವೃಕ್ಷದಡಿಯಲ್ಲಿ ಕಳೆದ ಎಂಟು ದಿನಗಳಿಂದ ಸತ್ಯಾಗ್ರಹ ನಡೆಸುತ್ತಿದ್ದಾರೆ. ಆದರೆ ಈವರೆಗೂ ಸರಕಾರ ಹಾಗೂ ಸರಕಾರದ ಯಾವೊಬ್ಬ ಅಧಿಕಾರಿಗಳು ಭೇಟಿ ನೀಡದೆ ತಟಸ್ಥ ವಾಗಿದ್ದು ಇದರಿಂದ ನೊಂದ  ಪ್ರತಿಭಟನಾ ಕಾರರು ಇಂದು ರಸ್ತೆ ತಡೆಯ ಮೂಲಕ ತೀವ್ರ ಸ್ವರೂಪದ ಹೋರಾಟಕ್ಕೆ ಮುಂದಾಗಿದ್ದಾರೆ. ಇಂದು ಬೆಳಗ್ಗೆ ನಗರದ ಹೊಸಬಸ್ಸು ನಿಲ್ದಾಣ ಪರಿಸರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂತ್ರಸ್ತ ವಲಯದ ಗೃಹಿಣಿಯರು ರಸ್ತೆ ತಡೆ ನಡೆಸಿದರು. ರಸ್ತೆ ತಡೆಯನ್ನು ಎಂಡೋಸಲ್ಫಾನ್ […]