ಲೇಡಿಗೋಶನ್‌ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಸಾವು ಆಸ್ಪತ್ರೆಯ ವೈಧ್ಯರು, ಸಿಬ್ಬಂಧಿಗಳ ವಿರುದ್ಧ ಪ್ರತಿಭಟನೆ

Saturday, February 2nd, 2013
Ladygoschen hospital

ಮಂಗಳೂರು : ಶುಕ್ರವಾರ ನಗರದ ಲೇಡಿಗೋಶನ್‌ ಆಸ್ಪತ್ರೆಯಲ್ಲಿ ಎರಡು ನವಜಾತ ಶಿಶುಗಳು ಸಾವನ್ನಪ್ಪಿದ್ದು, ಮಕ್ಕಳ ಸಾವಿಗೆ ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷವೇ ಇದಕ್ಕೆ ಕಾರಣ ಎಂದು ಕುಟುಂಬಿಕರು ಹಾಗೂ ಸಾರ್ವಜನಿಕರು ಆಸ್ಪತ್ರೆಯ ವೈಧ್ಯರು ಹಾಗೂ ಸಿಬ್ಬಂಧಿಗಳ ವಿರುದ್ಧ ಪ್ರತಿಭಟಿಸಿದರು. ಶುಕ್ರವಾರ ಎರಡು ಮಕ್ಕಳು ಸಾವನ್ನಪ್ಪಿದ್ದು, ಶಿಶುವೊಂದು ಬೆಳಗ್ಗೆ  ತಾಯಿ ಹೊಟ್ಟೆಯಲ್ಲಿರುವಾಗಲೇ ಮೃತಪಟ್ಟಿದ್ದರೆ, ಇನ್ನೊಂದು ಜನನವಾದ ಬಳಿಕ ಮೃತಪಟ್ಟಿದೆ. ಮೃತಪಟ್ಟ ಮಕ್ಕಳ ಪೋಷಕರು ನಂದಿಗುಡ್ಡೆ ಸ್ಮಶಾನದಲ್ಲಿ ಮಕ್ಕಳ ಅಂತ್ಯಸಂಸ್ಕಾರ ಮಾಡಲು ತೆಗೆದುಕೊಂದು ಹೋದಾಗ  ಅಲ್ಲಿನ ಸಿಬ್ಬಂದಿಗಳು ಆಸ್ಪತ್ರೆಯ ವೈದ್ಯಾಧಿಕಾರಿಗಳು ಶಿಶುಗಳ ಸಾವಿಗೆ ಸರಿಯಾದ […]

ಉಡುಪಿ : ತೆಂಕ ಎರ್ಮಾಳ್ ನಲ್ಲಿ ಭೀಕರ ರಸ್ತೆ ಅಪಘಾತ ತಾಯಿ ಮಗನ ಸಾವು

Friday, February 1st, 2013
car truck accsident atTenka Ermal

ಉಡುಪಿ  : ಕೇರಳದ ಕೊಟ್ಟಾಯಂ ಜಿಲ್ಲೆಯ ಪಾಲಂ ನ ನಿವಾಸಿಗಳಾದ ಜಾಯ್ ಸೆಬಾಸ್ಟಿಯನ್ ಹಾಗೂ ಅವರ ತಾಯಿ ಇಳಿ ಕುಟ್ಟಿ ಇಂದು ಮುಂಜಾನೆ 7 ಗಂಟೆ ಸುಮಾರಿಗೆ ಕೇರಳದಿಂದ ಉಡುಪಿ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಉಡುಪಿ ತಾಲುಕಿನ ತೆಂಕ ಎರ್ಮಾಳ್ ನಲ್ಲಿ ಈ ಅಪಘಾತ ಸಂಭವಿಸಿದೆ. ಜಾಯ್ ಸೆಬಾಸ್ಟಿಯನ್ ಅವರು ಕಾರ್ಕಳದ ಹೆಬ್ರಿಯಲ್ಲಿ ವಾಸವಾಗಿದ್ದು ತಮ್ಮ ಊರಿಗೆ ತನ್ನ ಹೆತ್ತವರೊಂದಿಗೆ ತೆರಳಿ ವಾಪಾಸು ಬರುವಾಗ ಉಡುಪಿಯಿಂದ ಬರುತ್ತಿದ್ದ ಲಾರಿ ಅವರು ಪ್ರಯಾಣಿಸುತ್ತಿದ್ದ […]

ಮಾರ್ನಿಂಗ್ ಹೋಂ ಸ್ಟೇ ದಾಳಿ : ನವೀನ್ ಸೂರಿಂಜೆ ಪ್ರಕರಣ ಹಿಂತೆಗೆತಕ್ಕೆ ನಿರ್ಧಾರ

Friday, February 1st, 2013
Naveen soorinje

ಮಂಗಳೂರು : ಪಡೀಲ್ ಬಳಿ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ ಮೇಲೆ  ನಡೆಸಿದ ದಾಳಿಗೆ ಸಂಬಂಧಿಸಿದಂತೆ ಖಾಸಗಿ ವಾಹಿನಿ ವರದಿಗಾರ ನವೀನ್ ಸೂರಿಂಜೆಯನ್ನು ನವೆಂಬರ್ 7ರಂದು ಬಂಧಿಸಲಾಗಿದ್ದು ಇದೀಗ ನವೀನ್ ಸೂರಿಂಜೆ ವಿರುದ್ಧ ದಾಖಲಿಸಲಾದ ಪ್ರಕರಣ ಹಿಂತೆಗದುಕೊಳ್ಳಲು ಸರಕಾರ ನಿರ್ಧರಿಸಿದೆ. ನಿನ್ನೆ  ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾನೂನು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ನವೆಂಬರ್ 7ರಂದು ನವೀನ್ ಸೂರಿಂಜೆ ಬಂಧನಕೊಳಗಾದ ಮೇಲೆ ಜಾಮೀನು ಅರಸಿ, ನ್ಯಾಯಾಲಯದ ಮೊರೆ ಹೋಗಿದ್ದರೂ, ಸ್ಥಳೀಯ ಹಾಗೂ ಹೈಕೋರ್ಟ್ ಜಾಮೀನು ನಿರಾಕರಿಸಿತ್ತು. ಪತ್ರಕರ್ತರು, ಜನಪರ ಹೋರಾಟಗಾರರು […]

ಮಂಗಳೂರಿನಲ್ಲಿ ಮತ್ತೆ ನೈತಿಕ ಪೋಲೀಸ್ ಗಿರಿ, ಮಹಿಳೆಯೊಂದಿಗಿದ್ದ ಅನ್ಯ ಕೋಮಿನ ವ್ಯಕ್ತಿ ಮೇಲೆ ಹಲ್ಲೆ

Friday, February 1st, 2013
Bhajrangdal activists

ಮಂಗಳೂರು : ನಗರದ ಪಂಪ್ ವೆಲ್ ಬಳಿಯ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ  ಯುವತಿ ಹಾಗು ಅದೇ ಅಂಗಡಿಯ ಮಾಲಕನು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬಜರಂಗದಳದ ಕಾರ್ಯಕರ್ತರು ಹಿಡಿದು ಥಳಿಸಿ  ಪೊಲೀಸರಿಗೆ ಒಪ್ಪಿಸಿದ  ಘಟನೆ ಗುರುವಾರ ಸಂಜೆ ನಡೆದಿದೆ. ಯುವತಿಗೆ 6 ತಿಂಗಳ ಹಿಂದೆ ಮದುವೆಯಾಗಿದ್ದರು ತನ್ನ ಅಂಗಡಿ ಮಾಲಕನ ಜತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಲಾಗಿದೆ. ನಿನ್ನೆ ಸಂಜೆ ಉದ್ಯೋಗ ಮುಗಿಸಿ ಕಾರಿನಲ್ಲಿ ಜತಯಾಗಿ ಪ್ರಯಾಣಿಸುತ್ತಿದ್ದಾಗ ಬಜರಂಗದಳ ಕಾರ್ಯಕರ್ತರು  ಇವರಿಬ್ಬರನ್ನು ತಡೆದು ನಿಲ್ಲಿಸಿ ಹಲ್ಲೆ ನಡೆಸಿದರು […]

ಎ.ಜೆ. ಆಸ್ಪತ್ರೆ ಆಸ್ಪತ್ರೆ:ರಾಜ್ಯದಲ್ಲೇ ಪ್ರಥಮ ಬೇರ್ಪಟ್ಟ ಕೈಗಳ ಯಶಸ್ವಿ ಮರುಜೋಡನೆ

Friday, February 1st, 2013
AJ Hospital

ಮಂಗಳೂರು : ನಗರದ ಎ.ಜೆ. ಆಸ್ಪತ್ರೆ ಆಸ್ಪತ್ರೆಯ ವೈದ್ಯರ ತಂಡ ವ್ಯಕ್ತಿಯೂಬ್ಬನ ಭುಜದಿಂದ ಸಂಪೂರ್ಣವಾಗಿ ಬೇರ್ಪಟ್ಟ ಎಡಗೈ ಮತ್ತು ಮೊಣಕೈ ಕೆಳಭಾಗದಿಂದ ತುಂಡಾದ ಬಲಗೈಯನ್ನು ಮೈಕ್ರೋವ್ಯಾಸ್ಕಾಲರ್ ಶಸ್ತ್ರ ಚಿಕಿತ್ಸೆಯ ಮೂಲಕ ಕೈಗಳನ್ನು ಮರು ಜೋಡಿಸುವಲ್ಲಿ ಯಶಸ್ವಿಯಾಗಿದೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ  ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ,ಈ ವಿಷಯ ತಿಳಿಸಿ, ರಾಜ್ಯದಲ್ಲೇ ಇದು ಪ್ರಥಮ ವೈದ್ಯಕೀಯ ಸಾಧನೆ ಎಂದು ಅವರು ಹೇಳಿದರು. ಮೂಲ್ಕಿ ಹಳೆಯಂಗಡಿ ನಿವಾಸಿ ಶರಶ್ಚಂದ್ರ ಶೆಣೈ ಎಂಬವರು ಮುಲ್ಕಿ ರೈಲು ನಿಲ್ದಾಣದ ಬಳಿ ನಡೆದುಕೊಂಡು […]

ಬಿಜೆಪಿ ಆಡಳಿತಾವಧಿಯಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತ :ಜಿ. ಪರಮೇಶ್ವರ್‌

Thursday, January 31st, 2013
G Parameshwar

ಮಂಗಳೂರು : ಕರ್ನಾಟಕದಲ್ಲಿ ನಾಲ್ಕೂವರೆ ವರ್ಷಗಳ ಕಾಲ ಆಡಳಿತ ನಡೆಸಿದ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತಕೊಂಡಿದ್ದು ತಾವು ಆಡಳಿತ ನಡೆಸಲು ಅಸಮರ್ಥರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್‌ ಹೇಳಿದರು. ಅವರು ಕೆಪಿಸಿಸಿ ವತಿಯಿಂದ ಯೋಜನೆಗೊಂಡ “ಕಾಂಗ್ರೆಸ್ ನಡಿಗೆ  ಸಾಮರಸ್ಯದ ಕಡೆಗೆ ” ಪಾದಯಾತ್ರೆಯ ಎರಡನೇ ದಿನವಾದ ಬುಧವಾರ ಅವರು ಮೂಲ್ಕಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ಕಾಂಗ್ರೆಸ್‌ನಿಂದ ಮಾತ್ರ ಜನಪರ ಆಡಳಿತ ನೀಡಲು ಸಾಧ್ಯವಿದ್ದು, ಜನತೆ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವ ಸಂಕಲ್ಪ ಮಾಡಬೇಕು […]

ಅಡಿಗರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಿದ್ದ ಎಲ್ಲಾ ೭ ಆರೋಪಿಗಳು ಪೋಲೀಸ್ ಕಸ್ಟಡಿಗೆ

Thursday, January 31st, 2013
Adiga murder accused police custody

ಮಂಗಳೂರು : ವಂಡಾರು ಕೊಕ್ಕನಬೈಲು ನಿವಾಸಿ, ಕೋಟ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತ ವಾಸುದೇವ ಅಡಿಗರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ೭ ಮಂದಿಯಲ್ಲಿ ಪ್ರಕರಣದ ರುವಾರಿ ರಮೇಶ್ ಬಾಯರಿ ಹಾಗೂ ಸುಬ್ರಮಣ್ಯ ಉಡುಪ, ರವಿಚಂದ್ರ ಮತ್ತು ಮೋಹನನಿಗೆ ಹೆಚ್ಚಿನ ತನಿಖೆ ನಿಮಿತ್ತ 2 ದಿನ ಪೋಲೀಸ್ ಕಸ್ಟಡಿ ಹಾಗೂ ಉಳಿದ ನಾಲ್ವರು ಆರೋಪಿಗಳಾದ ಕೆ.ಎಸ್. ರಾಘವೇಂದ್ರ, ಉಮೇಶ, ನವೀನ ಇವರುಗಳಿಗೆ ಕುಂದಾಪುರ ಜೆ.ಎಂ.ಎಫ್.ಸಿ. ನ್ಯಾಯಾಲಯ ಒಂದು ದಿನದ  ವಿಧಿಸಿದೆ. ತನಿಖೆಗೆ ಸಂಬಂಧಿಸಿದಂತೆ ನಾಲ್ಕುದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ […]

ಮಹಿಳಾ ಸಂಘಟನೆ, ಬಜರಂಗದಳ ನೇತೃತ್ವದಲ್ಲಿ ಅತ್ತಾವರದ ಐಸ್‍ಕ್ರೀಂ ಪಾರ್ಲರ್ ಮೇಲೆ ದಾಳಿ

Thursday, January 31st, 2013
ice cream parlour Attavar

ಮಂಗಳೂರು : ಅತ್ತಾವರ ವೃತ್ತದ ಬಳಿಯ ಮುರು ಅಂತಸ್ತಿನ ರಾಕ್ಸ್ ಹೆಸರಿನ ಐಸ್‍ಕ್ರೀಂ ಪಾರ್ಲರಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಬಜರಂಗ ದಳ ಮತ್ತು ದುರ್ಗಾ ವಾಹಿನಿ ಸಂಘಟನೆಗಳು ದೂರು ನೀಡಿದ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಪೊಲೀಸರು ದಾಳಿ ಮಾಡಿ ನಾಲ್ವರು ಯುವಕರು ಮತ್ತು ಮುವರು ಯುವತಿಯರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದರು. ರಾಕ್ಸ್‌ ಕೆಫೆ 3 ಮಾಳಿಗೆಗಳ ವ್ಯಾಪಾರ ಮಳಿಗೆಯಾಗಿದ್ದು, 3 ನೇ ಮಾಳಿಗೆಯಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಬಜರಂಗ ದಳ ಮತ್ತು ದುರ್ಗಾ ವಾಹಿನಿ […]

ಫರಂಗಿಪೇಟೆ ಕೇಂದ್ರ ಮೈದಾನದಲ್ಲಿ ಫೆಬ್ರವರಿ 2 ರಂದು ಜಾತ್ಯಾತೀತ ಜನತಾದಳದ ಬೃಹತ್ ಸಮಾವೇಶ

Wednesday, January 30th, 2013
JDS massive convention

ಮಂಗಳೂರು :ಫರಂಗಿಪೇಟೆಯಲ್ಲಿಯ ಕೇಂದ್ರ ಮೈದಾನದಲ್ಲಿರುವ ಅಬ್ದುಲ್ ನಜೀರ್ ಸಾಬ್ ವೇದಿಕೆಯಲ್ಲಿ ಫೆಬ್ರವರಿ 2 ಶನಿವಾರದಂದು ಜಾತ್ಯಾತೀತ ಜನತಾದಳ ಪಕ್ಷದ ವತಿಯಿಂದ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಸಮಾವೇಶದ ಸ್ವಾಗತ ಸಮಿತಿ ಹಾಗೂ ಪ್ರಚಾರ ಸಮಿತಿಯ ಅಧ್ಯಕ್ಷ ಶಶಿರಾಜ್ ಶೆಟ್ಟಿ ಕೊಳಂಬೆ ತಿಳಿಸಿದರು. ಸಮಾವೇಶವನ್ನು ಜಾತ್ಯಾತೀತ ಜನತಾದಳದ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದು, ಸಮಾವೇಶ ಸಮಾರಂಭದ ಅಧ್ಯಕ್ಷತೆಯನ್ನು ಪಕ್ಷದ ಜಿಲ್ಲಾಧ್ಯಕ್ಷ ಎಂ.ಬಿ.ಸದಾಶಿವ ವಹಿಸಲಿದ್ದಾರೆ ಎಂದರು. ಬುಧವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಫೆಬ್ರವರಿ 2 ರಂದು ಬಂಟ್ಸ್ ಹಾಸ್ಟೆಲ್ […]

ಉಳ್ಳಾಲದಿಂದ ಉಡುಪಿ ಜಿಲ್ಲೆಯ ಮಲ್ಪೆ ತನಕ ಆಯೋಜಿಸಲಾದ ಕಾಂಗ್ರೆಸ್ ಪಾದಯಾತ್ರೆಗೆ ಚಾಲನೆ

Wednesday, January 30th, 2013
Congress Padayaatra

ಮಂಗಳೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಸಹಯೋಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಿಂದ ಉಡುಪಿ ಜಿಲ್ಲೆಯ ಮಲ್ಪೆ ತನಕ ಮಂಗಳವಾರ ಆಯೋಜಿಸಿದ ಪಾದಯಾತ್ರೆಗೆ ವೀರ ವನಿತೆ ರಾಣಿ ಅಬ್ಬಕ್ಕಳ ಪ್ರತಿಮೆಗೆ ಹಾರಾರ್ಪಣೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ಬೆಳಗ್ಗೆ 9 ಕ್ಕೆ ಆರಂಭಗೊಳ್ಳಬೇಕಾಗಿದ್ದ ಪಾದಯಾತ್ರೆ ಮಧ್ಯಾಹ್ನ 12 ಗಂಟೆ ವೇಳೆಗೆ ಆರಂಭ ಗೊಂಡಿತು. ಉಳ್ಳಾಲದಿಂದ ನಾಸಿಕ್ ಬ್ಯಾಂಡ್, ಕೀಲು ಕುದುರೆ, ಬ್ಯಾಂಡ್ ಸೆಟ್, ಹುಲಿ ವೇಷ […]