ಕೊಂಕಣಿ ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಕಾಸರಗೋಡು ಚಿನ್ನಾ ನೇಮಕ

Tuesday, September 13th, 2011
ಕೊಂಕಣಿ ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಕಾಸರಗೋಡು ಚಿನ್ನಾ ನೇಮಕ

ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಕಾಸರಗೋಡು ಚಿನ್ನಾ ಅವರು ಸೋಮವಾರ ಇಲ್ಲಿನ ಲಾಲ್‌ಬಾಗ್‌ನ ಕೊಂಕಣಿ ಅಕಾಡೆಮಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರ ವಹಿಸಿಕೊಂಡರು. ಕಾರ್ಯಕ್ರಮವನ್ನು ಮಂಗಳೂರು ಮೇಯರ್‌ ಕೆ. ಪ್ರವೀಣ್‌, ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ನೇಮಕಾತಿ ಆದೇಶದ ಪ್ರತಿಯನ್ನು ರಿಜಿಸ್ಟಾರ್ ಡಾ| ದೇವದಾಸ್‌ ಪೈ ಅವರು ಚಿನ್ನಾ ಕಾಸರಗೋಡು ಅವರಿಗೆ ಹಸ್ತಾಂತರಿಸಿದರು. ಚಿನ್ನಾ ಅವರು ಸಹಿ ಮಾಡುವ ಮೂಲಕ ಅಧಿಕಾರ ಸ್ವೀಕರಿಸಿದರು. ಅಕಾಡೆಮಿಯ ನಿಕಟ ಪೂರ್ವ ಅಧ್ಯಕ್ಷ ಕುಂದಾಪುರ […]

ಬ್ರಹ್ಮಶ್ರೀ ನಾರಾಯಣ ಗುರುಗಳ 157ನೇ ಜನ್ಮ ದಿನಾಚರಣೆ

Monday, September 12th, 2011
Narayana Guru Jayanti

ಮಂಗಳೂರು: ಅಖೀಲ ಭಾರತ ಬಿಲ್ಲವರ ಯೂನಿಯನ್‌, ಬಿಲ್ಲವರ ಮಹಿಳಾ ಸಂಘ ಹಾಗೂ ಕುದ್ರೋಳಿಯ ನಾರಾಯಣ ಗುರು ವಿದ್ಯಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ರವಿವಾರ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಅವರ 157ನೇ ಜನ್ಮ ದಿನಾಚರಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ. ಕೃಷ್ಣ ಪಾಲೆಮಾರ್‌ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ನಾರಾಯಣ ಗುರು ಅವರ ಜನ್ಮದಿನವನ್ನು ಆಚರಿಸುವುದರ ಜತೆಗೆ ಅವರ ಆದರ್ಶಗಳನ್ನೂ ಪಾಲಿಸಬೇಕು. ಬಿಲ್ಲವ ಸಮಾಜದ ಅಭಿವೃದ್ಧಿಗೆ ಸರಕಾರ ಅನೇಕ ಸವಲತ್ತುಗಳನ್ನು ಒದಗಿಸುತ್ತಿದೆ, ನಗರದ ಕುಂಜತ್ತಬೈಲ್‌ನಲ್ಲಿ ನಿರ್ಮಿಸಲು […]

ಬಜಪೆ ಸಹಕಾರಿ ಬ್ಯಾಂಕ್ ಹಾಗೂ ಎಸ್.ಡಿ.ಸಿ.ಸಿ. ಬ್ಯಾಂಕಿಗೆ ಅಪೆಕ್ಸ್‌ ಪ್ರಶಸ್ತಿ

Sunday, September 11th, 2011
Apex-Award

ಬಜಪೆ: ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ 2009 -10ನೇ ಸಾಲಿಗೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿಗೆ ನೀಡುವ ಪ್ರಥಮ ಸ್ಥಾನದ ರಾಜ್ಯ ಪ್ರಶಸ್ತಿಯನ್ನು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಸೆ. 10ರಂದು ನಡೆದ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಪ್ರದಾನ ಮಾಡಲಾಯಿತು. ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು, ನಿರ್ದೇಶಕ ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ.ಎನ್‌. ರಾಜೇಂದ್ರ ಕುಮಾರ್‌ ಹಾಗೂ ಪ್ರದಾನ […]

ದರ್ಶನ್ ಕುಡಿದು ಬಂದು ಹಲ್ಲೆ ಮಾಡಿದರಲ್ಲದೆ, ಮಗುವಿನ ಮೇಲೆ ಸಂಶಯ ಪಟ್ಟರು

Saturday, September 10th, 2011
Darshan-Vijayalakshmi

ಬೆಂಗಳೂರು: ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಪರಪ್ಪನ ಅಗ್ರಹಾರದ ಕೈದಿಯಾಗಿದ್ದಾರೆ. ಈ ಪ್ರಕರಣ ದರ್ಶನ್ ಸಿನಿಮಾ ಲೈಫಿಗೆ ಮಾರಕ ಆಗಲಿದೆಯೇ ಎಂಬ ಸಂದೇಹ ಅವರ ಅಭಿಮಾನಿಗಳನ್ನು ಕಾಡುತ್ತಿದೆ. ಕನ್ನಡ ಚಿತ್ರರಂಗದ ಮಾಸ್ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ದರ್ಶನ್ ಅವರಿಗೆ ಹಲವಾರು ಹಿಟ್ ಚಿತ್ರಗಳನ್ನು ಕೊಟ್ಟಿದ್ದರು. ಅವರಿಂದಲೇ ನಟಿ ನಿಖಿತಾ ಪರಿಯಚಯವಾಗಿದ್ದು ಎಂದು ಗಾಂಧೀ ನಗರದ ಜನ ಹೇಳುತ್ತಿದ್ದಾರೆ. ಇಷ್ಟು ದಿನ ಬೆಳ್ಳಿ ತೆರೆಯ […]

ನೋ ಪಾರ್ಕಿಂಗ್‌ : ಪಾಲಿಕೆಯ ಆರೋಗ್ಯ ಅಧಿಕಾರಿಗೆ ದಂಡ

Saturday, September 10th, 2011
Manjayya-Shetty-Car

ಮಂಗಳೂರು : ನೋ ಪಾರ್ಕಿಂಗ್‌ ಜಾಗದಲ್ಲಿ ಕಾರು ನಿಲ್ಲಿಸಿದ ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿ ಮಂಜಯ್ಯ ಶೆಟ್ಟಿ ಅವರ ವಾಹನಕ್ಕೆ ಮಂಗಳೂರು ನಗರದ ಟ್ರಾಫಿಕ್‌ ಪೊಲೀಸರು ಲಾಕ್‌ ಮಾಡಿ ಪ್ರಕರಣ ದಾಖಲಿಸುವ ಮೂಲಕ ಕಾನೂನು ಪಾಲನಾ ನಿಯಮಕ್ಕೆ ಮತ್ತೊಮ್ಮೆ ಚಾಲನೆ ನೀಡಿದ್ದಾರೆ. ಮಂಜಯ್ಯ ಶೆಟ್ಟಿ ಅವರು ಶುಕ್ರವಾರ ಸಂಜೆ 5.15 ರ ವೇಳೆಗೆ ತನ್ನ ಕಾರನ್ನು ಪಿ.ವಿ.ಎಸ್‌. ಜಂಕ್ಷನ್‌ ಬಳಿ ಎಂ.ಜಿ. ರಸ್ತೆಯಲ್ಲಿ ಮಾನಸ ಟವರ್ ಎದುರು ನಿಲ್ಲಿಸಿ ಹೋಗಿದ್ದರು. ಈ ಮಾರ್ಗವಾಗಿ ಬಂದ ಟ್ರಾಫಿಕ್‌ […]

ಪರಿಸರ ನಿಯಂತ್ರಣ ಮಂಡಳಿಯ ಉಪ ಅಧಿಕಾರಿ ಲೋಕಾಯುಕ್ತ ಬಲೆಗೆ

Friday, September 9th, 2011
Lokayukta Raid/ಲೋಕಾಯುಕ್ತ ಬಲೆಗೆ

ಉಡುಪಿ: ರಾಜ್ಯ ಪರಿಸರ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ರವಿಚಂದ್ರ ಕೆ. ಅವರು ಮಣಿಪಾಲದಲ್ಲಿ ಕೈಗಾರಿಕಾ ಘಟಕವನ್ನು ಸ್ಥಾಪನೆಯ ಪರವಾನಿಗೆಗೆ ಲಂಚ ಪಡೆಯುತ್ತಿದ್ದಾಗ ಉಡುಪಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ನಿಸರ್ಗ ಕೋಕನೆಟ್‌ ಇಂಡಸ್ಟ್ರೀಸ್‌ ಎಂಬ ಕೈಗಾರಿಕಾ ಘಟಕವನ್ನು ಸ್ಥಾಪನೆ ಮಾಡಲು ಕುಂದಾಪುರ ತಾಲೂಕು ಯೆಡ್ಯಾಡಿ-ಮತ್ಯಾಡಿ ಗ್ರಾಮದ ಗಣೇಶ್‌ ಆನಂದ ಅವರು ನಿರಾಕ್ಷೇಪಣಾ ಪತ್ರ ಕೋರಿ ಮಣಿಪಾಲದ ಕೈಗಾರಿಕಾ ಪ್ರದೇಶದಲ್ಲಿರುವ ಪರಿಸರ ಮಾಲಿನ್ಯ ಅಧಿಕಾರಿಯವರಿಗೆ ಆ.12ರಂದು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ರೂ.5,000 ಶುಲ್ಕ ಪಾವತಿಸಿದ್ದರು. ಪರಿಸರ ಮಾಲಿನ್ಯ […]

ಬಾಂಬ್‌ ದಾಳಿ : ಜಿಲ್ಲಾ ನ್ಯಾಯಾಲಯದ ಭದ್ರತಾ ವ್ಯವಸ್ಥೆಗೆ ವಕೀಲರ ಮನವಿ

Friday, September 9th, 2011
Lawyers Protest/ ವಕೀಲರ ಪ್ರತಿಭಟನೆ

ಮಂಗಳೂರು: ಹೊಸದಿಲ್ಲಿಯ ಹೈಕೋರ್ಟ್‌ ಆವರಣದಲ್ಲಿ ಭಯೋತ್ಪಾದಕರು ನಡೆಸಿದ ಬಾಂಬ್‌ ದಾಳಿಯನ್ನು ಖಂಡಿಸಿ ಮಂಗಳೂರು ವಕೀಲರ ಸಂಘದ ವತಿಯಿಂದ ಗುರುವಾರ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಮಂಗಳೂರು ನ್ಯಾಯಾಲಯ ಸಂಕೀರ್ಣದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆಗಳನ್ನು ಅಳವಡಿಸುವಂತೆ ವಕೀಲರು ಆಗ್ರಹಿಸಿದರು. ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಸ್‌.ಪಿ. ಚೆಂಗಪ್ಪ ಅವರು, ನ್ಯಾಯಾಲಯದ ಆವರಣದಲ್ಲಿ ಭಯೋತ್ಪಾದಕರು ನಡೆಸಿದ ದಾಳಿ ಖಂಡನೀಯ ಇಲ್ಲಿ ಸೆಷನ್ಸ್‌ ನ್ಯಾಯಾಲಯ, ಫಾಸ್ಟ್‌ ಟ್ರ್ಯಾಕ್ ಕೋರ್ಟ್‌, ಜೆಎಂಎಫ್‌ಸಿ, ಸಿವಿಲ್‌ ಸಹಿತ 12 ನ್ಯಾಯಾಲಯಗಳು […]

ಮೇರಿ ಮಾತೆಯ ಜನ್ಮದಿನ (ಹೊಸ ಬೆಳೆಯ)ಮೊಂತಿ ಹಬ್ಬ ಆಚರಣೆ

Friday, September 9th, 2011
Monti-fest/ಮೇರಿ ಮಾತೆಯ ಜನ್ಮದಿನ

ಮಂಗಳೂರು : ಯೇಸುಕ್ರಿಸ್ತರ ತಾಯಿ ಮೇರಿ ಮಾತೆಯ ಜನ್ಮದಿನವನ್ನು ಸೆ. 8, ಗುರುವಾರ ಕ್ರೈಸ್ತರು ದಕ್ಷಿಣ ಕನ್ನಡ, ಉಡುಪಿ, ಕೊಡಗು ಹಾಗೂ ಕಾಸರಗೋಡು ಜಿಲ್ಲೆಯಾದ್ಯಂತ ಕ್ರೈಸ್ತ ದೇವಾಲಯಗಳಲ್ಲಿ ಸಂಭ್ರಮೋಲ್ಲಾಸದಿಂದ ಆಚರಿಸಿದರು. ಕರಾವಳಿ ಜಿಲ್ಲೆಗಳಲ್ಲಿ ಮೇರಿ ಮಾತೆಯ ಜನ್ಮದಿನವನ್ನು ಮೊಂತಿ ಹಬ್ಬವನ್ನಾಗಿ ಆಚರಿಸಲಾಗುತ್ತಿದೆ. ‘ದೇವ ಮಾತೆ’ ಮೇರಿ ಮಾತೆ ಪವಾಡಗಳನ್ನು ಸೃಷ್ಟಿಸುತ್ತಾರೆ ಎನ್ನುವುದು ಕ್ಯಾಥೋಲಿಕರ ನಂಬಿಕೆ. ಕ್ರೈಸ್ತರು ಈ ದಿನವನ್ನು ಹೊಸ ಬೆಳೆಯ ಹಬ್ಬ ಎಂದು ಕರೆಯುತ್ತಾರೆ. ಬಾಲೆ ಮೇರಿಗೆ ನಮಿಸುವುದರ ಜತೆಗೆ ಹೊಸ ಭತ್ತದ ತೆನೆಯನ್ನು ಕ್ರೈಸ್ತ […]

ಹಿಂದೂ ಯುವಸೇನೆಯ ವತಿಯಿಂದ 19ನೇ ವರ್ಷದ ವೈಭವದ ಶೋಭಾಯಾತ್ರೆ

Friday, September 9th, 2011
Neharu Maidan Ganapati

ಮಂಗಳೂರು : ಹಿಂದೂ ಯುವಸೇನೆಯ ವತಿಯಿಂದ 19ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವದಲ್ಲಿ 7ದಿನಗಳ ಕಾಲ ಪೂಜಿಸಲ್ಪಟ್ಟ ಶ್ರೀ ಮಹಾಗಣಪತಿಯ ವೈಭವದ ಶೋಭಾಯಾತ್ರೆ ಬುಧವಾರ ಸಂಜೆ ವಿಜೃಭಂಣೆಯಿಂದ ನಗರದ ಕೇಂದ್ರ ಮೈದಾನದಲ್ಲಿ ಜರಗಿತು. ಮಹಾಗಣಪತಿಯ ಉತ್ಸವ ಮೂರ್ತಿಯ ಸಾರ್ವಜನಿಕ ಮೆರವಣಿಗೆಯು ನೆಹರೂ ಮೈದಾನದಿಂದ ಕೇರಳದ ಪ್ರಸಿದ್ಧ ಚೆಂಡೆವಾದನ,ನಾಸಿಕ್ ಬ್ಯಾಂಡ್, ವಿವಿಧ ವಿನ್ಯಾಸದ ಟ್ಯಾಬ್ಲೊಗಳು, ವಾದ್ಯ ಘೋಷಗಳೊಂದಿಗೆ ಹೊರಟು ಕ್ಲಾಕ್ ಟವರ್ ಮಾರ್ಗವಾಗಿ,ಹಂಪನ್ ಕಟ್ಟೆ ಮುಖ್ಯ ಸಿಗ್ನಲ್ ವೃತ್ತದ ಮೂಲಕ ಕೆ.ಎಸ್.ರಾವ್.ರಸ್ತೆ, ನವಭಾರತ್ ಸರ್ಕಲ್,ಡೊಂಗರಕೇರಿ, ನ್ಯೂಚಿತ್ರ ಟಾಕೀಸ್,ರಥಬೀದಿಯಾಗಿ ಸಾಗಿ ಶ್ರೀ […]

ಎಚ್ ಡಿ ಕುಮಾರ ಸ್ವಾಮಿ ದಂಪತಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು

Thursday, September 8th, 2011
KDK Anitha/ಎಚ್ ಡಿ ಕುಮಾರ ಸ್ವಾಮಿ ದಂಪತಿ

ಬೆಂಗಳೂರು : ಎಚ್ ಡಿ ಕುಮಾರ ಸ್ವಾಮಿ ದಂಪತಿಗಳಿಗೆ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಜಂತಕಲ್ ಮೈನಿಂಗ್ ಕಂಪೆನಿ ಗುತ್ತಿಗೆ ಲೈಸನ್ಸ್ ನವೀಕರಣ ಹಾಗೂ ವಿಶ್ವಭಾರತಿ ಸೊಸೈಟಿ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧ ನಿರೀಕ್ಷಣಾ ಜಾಮೀನು ನೀಡಬೇಕೆಂದು ಕುಮಾರ ಸ್ವಾಮಿ ದಂಪತಿಗಳು ಹೈಕೋರ್ಟ್‌ ಗೆ ಅರ್ಜಿ ಸಲ್ಲಿಸಿದ್ದರು. ಎಚ್ಡಿಕೆ ದಂಪತಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಬುಧವಾರ ಬೆಳಗ್ಗೆ 11ಕ್ಕೆ ತೀರ್ಪು ಪ್ರಕಟಗೊಳ್ಳುವ ನಿರೀಕ್ಷೆಯಿತ್ತು. ಆದರೆ, ಸುಮಾರು ಒಂದೂವರೆ ಗಂಟೆ ವಿಳಂಬವಾದರೂ ಎಚ್ಡಿಕೆ ಪರ […]