ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ 127ನೇ ಸ್ಥಾಪಕರ ದಿನಾಚರಣೆ

Saturday, December 29th, 2012
Founders Day in Mangalore

ಮಂಗಳೂರು : ಕಾಂಗ್ರೆಸ್ ಪಕ್ಷದ 127 ನೇ ಸ್ಥಾಪಕ ದಿನಾಚರಣೆಯನ್ನು ನಿನ್ನೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಆಚರಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯ ಮುಂಭಾಗದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಗುಲ್ಜಾರ್ ಬಾನು ದ್ವಜಾರೋಹಣವನ್ನು ನೆರವೇರಿಸಿದರು. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಾಸಕ ರಮಾನಾಥ ರೈ ಸಮಾರಂಭವನ್ನುದ್ದೇಶಿಸಿ ಮಾತನಾಡುತ್ತಾ, ಭಾರತದ ಇತಿಹಾಸದಲ್ಲಿ ವಿಶೇಷ ಸ್ಥಾನವನ್ನು ಹೊಂದಿರುವ ಕಾಂಗ್ರೆಸ್ ಪಕ್ಷ ದೇಶದ ಅಭಿವೃದ್ಧಿಗೆ ತನ್ನದೇ ಆದ ವಿಶೇಷ ಕೊಡುಗೆಗಳನ್ನು […]

ಸುರತ್ಕಲ್ ಬಳಿ ಬಸ್ ಕಾರ್ ಡಿಕ್ಕಿ ಮೇಯರ್ ಗೆ ಗಾಯ

Saturday, December 29th, 2012
Mayor Gulzar Banu

ಮಂಗಳೂರು : ಮಂಗಳೂರಿನಿಂದ ಸುರತ್ಕಲ್ ಕಡೆಗೆ ಅತಿ ವೇಗವಾಗಿ ಸಾಗುತ್ತಿದ್ದ ಕೆ ಎಸ್ ಆರ್ ಟಿಸಿ ಬಸ್ ಮಹಾನಗರ ಪಾಲಿಕೆ ಗೆ ತೆರಳುತ್ತಿದ್ದ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕಾರಿಗೆ ಶುಕ್ರವಾರ ಮಧ್ಯಾಹ್ನ ಡಿಕ್ಕಿ ಹೊಡೆದಿದ ಪರಿಣಾಮ ಮೇಯರ್ ಗಾಯಗೊಂಡಿರುವ ಘಟನೆ ನಡೆದಿದೆ. ಮೇಯರ್ ಗುಲ್ಜಾರ್ ಬಾನು ರವರು ಮನೆಯಿಂದ ಮಹಾನಗರ ಪಾಲಿಕೆಗೆ ಕಾರಿನಲ್ಲಿ ತೆರಳುತ್ತಿದ್ದು, ಸುರತ್ಕಲ್ ಜಂಕ್ಷನ್ ನಲ್ಲಿ ಮುಖ್ಯ ರಸ್ತೆಗೆ ಸಂಪರ್ಕ ಪಡೆಯಲು ಕಾರು ಚಾಲಕ ರಸ್ತೆ ಬದಿ ಕಾರು ನಿಲ್ಲಿಸಿದ್ದ ವೇಳೆ ಮಂಗಳೂರು […]

ಯುವತಿ ಜತೆ ಪ್ರೇಮ ಸಲ್ಲಾಪ, ಎಡವಟ್ಟಾದ ಬುರ್ಖಾ ಧಾರಣೆ

Saturday, December 29th, 2012
Burkha clad youth trapped

ಮಂಗಳೂರು : ನಗರದ ಕಾಲೇಜು ವಿದ್ಯಾರ್ಥಿಯೊಬ್ಬ ಪ್ರೇಯಸಿ ಜತೆ ತಿರುಗಾಡುವ ಉದ್ದೇಶದಿಂದ ತನ್ನ ಗುರುತು ಪತ್ತೆಯಾಗದಂತೆ ಜನರ ಕಣ್ಣಿಗೆ ಮಣ್ಣೆರಚಲು ಬುರ್ಖಾ ವೇಷ ಧರಿಸಿ ಕೊನೆಗೆ ಪೊಲೀಸ್ ಕೈಗೆ ಸಿಕ್ಕಿಬಿದ್ದ ಘಟನೆ ಶುಕ್ರವಾರ ನಡೆದಿದೆ. ಪುತ್ತೂರಿನ ವೃತ್ತಿಪರ ಕಾಲೇಜೊಂದರ ವಿದ್ಯಾರ್ಥಿ ಅಜಿತ್ ಎಂಬಾತ ತನ್ನ ಪ್ರೇಯಸಿ, ನಗರದ ಕಾಲೇಜೊಂದರ ವಿದ್ಯಾರ್ಥಿನಿಯನ್ನು ಕರೆದುಕೊಂಡು ನಗರದ ಮಾಲ್ ಒಂದಕ್ಕೆ ಬಂದಿದ್ದ. ಯುವತಿ ಜತೆ ಒಂದಷ್ಟು ಕಾಲ ಯಾರಿಗೂ ಕಾಣದಂತೆ ಸುತ್ತಾಡುವ ಯೋಚನೆ ಆತನದ್ದಾಗಿತ್ತು. ಇದಕ್ಕಾಗಿ ಆತ ಕಂಡುಕೊಂಡ ಮಾರ್ಗವೇ ಬುರ್ಖಾಧಾರಣೆ. […]

ಮಂಗಳೂರಿನಲ್ಲಿ ಹೆಚ್ಚುತ್ತಿರುವ ಸಲಿಂಗಕಾಮಿಗಳು !

Saturday, December 29th, 2012
Salinga kama

ಮಂಗಳೂರು : ನನಗೆ ರೂಮಿನಿಂದ ಹೊರಬರಲಾಗುತ್ತಿಲ್ಲ, ಎಲ್ಲಿ ನೋಡಿದರೂ ಚುಡಾಯಿಸುವ ಇಂಥವರೇ ಕಾಣಸಿಗುತ್ತಾರೆ. ಹಗಲುಹೊತ್ತು ಚೆನ್ನಾಗಿಯೇ ಮಾತಾಡುವ ಇವರು ರಾತ್ರಿಯಾದೊಡನೆ ನನ್ನ ಹಿಂದೆ ಬಿದ್ದು ಚಿತ್ರಹಿಂಸೆ ಕೊಡುತ್ತಾರೆ. ಇದರಿಂದ ನನಗೆ ಸಾಯುವ ಯೋಚನೆ ಬರುತ್ತಿದೆ ಆದರೆ ನನ್ನನ್ನು ನಂಬಿದವರ ಸ್ಥಿತಿ ನೆನೆದು ಎಲ್ಲವನ್ನೂ ಅವುಡುಗಚ್ಚಿ ಸಹಿಸಿಕೊಂಡು ಬದುಕುತ್ತಿದ್ದೇನೆ. ನಾನು ಅನುಭವಿಸುವ ಯಾತನೆ, ನೋವು ಇನ್ನಾರೂ ಅನುಭವಿಸದಿರಲಿ ಎಂದು ನನ್ನ ಕಥೆ ನಿಮಗೆ ಹೇಳುತ್ತಿದ್ದೇನೆ ಎಂದು ಬಂಟ್ವಾಳ ಮುಸ್ಲಿಂ ಯುವಕನೊಬ್ಬ ತನ್ನ ಕತೆಯನ್ನು ಬಿಚ್ಚಿಟ್ಟಿದ್ದಾನೆ. ನಾನು ಅವರಿಗೇನೂ ಮಾಡಿಲ್ಲ. […]

ಎಂಡೋ ನಿಧಿಗಾಗಿ ಸೈಕಲ್ ಹತ್ತಿದ ಪ್ರೊಫೆಸರ್

Saturday, December 29th, 2012
Endo Sulfan Victims

ಮಂಗಳೂರು: ಬಿಜಾಪುರ ಜಿಲ್ಲೆಯ ಇಂಡೀ ತಾಲೂಕಿನ ಶಿರ್ಷಾಕ್ ಸಾಲುಟಿಗಿಯ ಪಂಡಿತ್ ರಾವ್ ಕರಾವಳಿ ಜಿಲ್ಲೆಯ ಎಂಡೋಪೀಡಿತರ ನಿಧಿಗಾಗಿ ಇಂದಿನಿಂದ ಎರಡು ದಿನ ಮಂಗಳೂರಿನ ಸುತ್ತ ಮುತ್ತ ಸೈಕಲ್ ಜಾಥ ಮಾಡಲಿದ್ದಾರೆ. ಇಂದು ಬೆಳಗ್ಗೆ ಜಿಲ್ಲಾಧಿಕಾರಿಯವರಿಗೆ 10,000 ರೂಪಾಯಿ ಚೆಕ್ ನೀಡಿದ ಪಂಡಿತ್ ರಾವ್, ಇನ್ನುಳಿದ 5,000 ರೂಪಾಯಿ ಚೆಕ್ಕನ್ನು ಟಿವಿ 9 ಎಂಡೋ ಸಹಾಯ ನಿಧಿಗೆ ನೀಡಲಿದ್ದಾರೆ. ಛಂಡೀಗಡ್ ನ ಸರಕಾರಿ ಕಾಲೇಜಿನಲ್ಲಿ ಅಸಿಸ್ಟೆಂಡ್ ಪ್ರೊಫೆಸರ್ ಆಗಿ ಕೆಲಸನಿರ್ವಹಿಸುತ್ತಿರುವ ರಾವ್ ಪಂಜಾಬಿ ಭಾಷೆಯಲ್ಲಿ ಬರೆದ ಪುಸ್ತಕಗಳನ್ನು ಮಾರಿ […]

ನಟಿ ಪೂಜಾ ಮದುವೆ ಬ್ರೇಕ್ ಆಫ್ ಗೆ ಉಡುಪಿ ಉದ್ಯಮಿಯ ಕೈವಾಡ

Saturday, December 29th, 2012
Pooja Gandhi

ಮಂಗಳೂರು : ಮುಂಗಾರು ಮಳೆ ಹುಡುಗಿಯ ಕನಸಲ್ಲಿ ಕಾರ್ಮೋಡ ಕವಿದಿದೆ. ನಿಶ್ಚಿತಾರ್ಥವಾದ ಮೂವತ್ತೈದೇ ದಿನಕ್ಕೆ ಪೂಜಾ ಗಾಂಧಿ ಎಂಗೇಜ್ಮೆಂಟ್ ಮುರಿದು ಬಿದ್ದಿದೆ. ಇದು ನಿರೀಕ್ಷಿತವಾ? ಇಂತಹ ಅನುಮಾನವನ್ನು ಮದುವೆ ಆಗಬೇಕಿದ್ದ ಆನಂದಗೌಡ ಅವರೆ ವ್ಯಕ್ತಪಡಿಸುತ್ತಾರೆ. ನಾನು ಮತ್ತು ಪೂಜಾ ಮೂರು ವರ್ಷಗಳಿಂದ ಪ್ರೀತಿ ಮಾಡುತ್ತಿಲ್ಲ. ನಮ್ಮಿಬ್ಬರ ಭೇಟಿ ಆಗಿದ್ದು ಕೇವಲ ಒಂಭತ್ತು ತಿಂಗಳ ಹಿಂದೆ. ಅದೂ ಪತ್ರಕರ್ತರೊಬ್ಬರ ಮೂಲಕ. ಆಕೆಗೆ ಬೇರೊಬ್ಬರ ಜತೆ ಸ್ನೇಹವಿತ್ತು ಅಂತ ಗೊತ್ತಾಗಿ, ಒಂದು ಸಾರಿ ದೂರವಾಗಿದ್ದೆವು. ಮತ್ತೆ ಹೊಂದಾಣಿಕೆ ಮಾಡಿಕೊಂಡು ಹೋಗೋಣ […]

ಪುತ್ತೂರು ಜೋಡಿ ಆತ್ಮಹತ್ಯೆ ಪ್ರೀತಿಗೆ ಯುವಕನ ತಾಯಿಯೇ ವಿಲನ್ ಆದಳು !

Saturday, December 29th, 2012
Chetan Navya

ಮಂಗಳೂರು : ಪರಸ್ಪರ ಪ್ರೀತಿಸುತ್ತಿದ್ದ ಜೋಡಿಯೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ತಾಜಾ ಘಟನೆ ಪುತ್ತೂರು ಪೇಟೆಯ ಹೊರವಲಯದ ಚಿಕ್ಕಮುಡ್ನೂರು ಗ್ರಾಮದ ಕರ್ಮಲ ಎಂಬಲ್ಲಿಂದ ಬೆಳಕಿಗೆ ಬಂದಿದೆ. ಪರಸ್ಪರ ಪ್ರೀತಿಸುತ್ತಿದ್ದ ಅವರ ವಿವಾಹಕ್ಕೆ ಯುವಕನ ಮನೆಯವರು ವಿರೋಧ ವ್ಯಕ್ತಪಡಿಸಿರುವುದೇ ಆತ್ಮಹತ್ಯೆಗೆ ಕಾರಣ ಎನ್ನುವ ಮಾತುಗಳೇ ಜಾಸ್ತಿಯಾಗಿ ಕೇಳಿ ಬರುತ್ತಿದೆ. ಚಿಕ್ಕಮುಡ್ನೂರು ಗ್ರಾಮದ ಕರ್ಮಲ ನಿವಾಸಿ ರುಕ್ಮಯ್ಯ ಗೌಡ ಅವರ ಪುತ್ರ ಚೇತನ್ (26) ಮತ್ತು ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ನಿವಾಸಿ ವಿಶ್ವನಾಥ ಗೌಡ ಅವರ ಪುತ್ರಿ ನವ್ಯ […]

ರೇಡಿಯೋ ಜಾಕಿಗಳ ಮೂರ್ಖತನಕ್ಕೆ ದಾದಿ ಬಲಿ

Friday, December 28th, 2012
Jacintha Saldanha

ಮಂಗಳೂರು : ಗರ್ಭಿಣಿಯಾಗಿರುವ ಕೇಂಬ್ರಿಜ್ ರಾಜಕುಮಾರಿ ಕೇಟ್ ಮಿಡ್ಲ್ ಟನ್ ಳ ಖಾಸಗಿ ಮಾಹಿತಿಯನ್ನು ಪಡೆಯಲು ರೇಡಿಯೋ ಆರ್ ಜೆಗಳು ಮಾಡಿದ ಕುಚೇಷ್ಟೆ ಒಬ್ಬ ಪ್ರತಿಭಾವಂತ, ಹೃದಯವಂತ ಕರಾವಳಿ ಮೂಲದ ದಾದಿಯೊಬ್ಬರು ಪ್ರಾಣವನ್ನು ಕಳೆದುಕೊಳ್ಳಬೇಕಾಯಿತು. ಹೌದು. ನರ್ಸ್ ಜೆಸಿಂತಾ ಸಲ್ಡಾನಾ ಈಗಿಲ್ಲ…ಎನ್ನುವ ಸುದ್ದಿಯ ಮೂಲಕ ಉಡುಪಿಯ ಜಿಲ್ಲೆಯ ಶಿರ್ವದ ಮನೆಯೊಂದರಲ್ಲಿ ದುಃಖ ಮಡುಗಟ್ಟಿ ಹೋಗಿತ್ತು. ಭಾರತದವರು ಅದರಲ್ಲೂ ಕರಾವಳಿಗರು ಮಾನವೀಯತೆ, ಸತ್ಯಾಸಂದತೆಗೆ ಹೆಚ್ಚು ಒದ್ದಾಟ ಮಾಡುವ ಮನಸ್ಸಿನವರು ಇದೇ ಕಾರಣದಿಂದ ಜೆಸಿಂತಾ ಬದುಕಿಗೆ ಪೂರ್ಣ ವಿರಾಮ ಬಿದ್ದುಬಿಟ್ಟಿದೆ […]

ಕರಾವಳಿಯ ಜೆಡಿಎಸ್ ನಲ್ಲಿ `ಸದಾ’ ಹೊಸ ಸಂಚಲನ

Friday, December 28th, 2012
Sadananda Shetty

ಮಂಗಳೂರು : ರಾಜ್ಯದ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ನಾನಾ ಪಕ್ಷಗಳ ರಾಜಕೀಯ ಕಸರತ್ತು ಆರಂಭಗೊಂಡಿದೆ. ಅದರಲ್ಲೂ ಜೆಡಿಎಸ್ ಈ ನೆಲೆಯಲ್ಲಿ ಒಂದು ಹೆಜ್ಜೆ ಮುಂದಡಿ ಇಟ್ಟಿದೆ. ಮುಂಬರುವ ಚುನಾವಣೆಯಲ್ಲಿ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಉದ್ಯಮಿ ಎ. ಸದಾನಂದ ಶೆಟ್ಟಿ ಅವರನ್ನು ಘೋಷಿಸಿದೆ. ಈ ಮೂಲಕ ರಾಜ್ಯದಲ್ಲೇ ಜೆಡಿಎಸ್ ತನ್ನ ಮೊದಲ ಅಭ್ಯರ್ಥಿ ಘೋಷಣೆಯಾದಂತಾಗಿದೆ. ಅದು ಕೂಡ ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಈ ಅಂತಿಮ ನಿರ್ಧಾರವನ್ನು ವನ್ನು […]

ತುಳುನಾಡ ರಕ್ಷಣಾ ವೇದಿಕೆಯಿಂದ ಜೆಪ್ಪು ಪಟ್ನ ಪ್ರದೇಶದಲ್ಲಿ ಒಳ ಚರಂಡಿ ಹಾಗೂ ರೈಲ್ವೆ ಕೆಳ ಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿ ಪ್ರತಿಭಟನೆ

Friday, December 28th, 2012
Tulunada Rakshana Vedike

ಮಂಗಳೂರು : ಜೆಪ್ಪು ಮಹಾಕಾಳಿಪಡ್ಪು,ಶೆಟ್ಟಿಬೆಟ್ಟು, ಜೆಪ್ಪು ಪಟ್ನ ಪ್ರದೇಶದಲ್ಲಿ ಒಳ ಚರಂಡಿ ವ್ಯವಸ್ಥೆ ಹಾಗೂ ರೈಲ್ವೆ ಕೆಳ ಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿ ತುಳುನಾಡ ರಕ್ಷಣಾ ವೇದಿಕೆಯಿಂದ ಗುರುವಾರ ಮಹಾಕಾಳಿ ಪಡ್ಪುವಿನಿಂದ ಮೋರ್ಗನ್ ಗೇಟ್ ವರೆಗೆ ರಸ್ತೆ ತಡೆ ಹಾಗು ಪ್ರತಿಭಟನಾ ಜಾಥಾ ವನ್ನು ಹಮ್ಮಿಕೊಳ್ಳಲಾಗಿತ್ತು. ತುಳುನಾಡು ರಕ್ಷಣಾ ವೇದಿಕೆಯ ಸ್ಥಾಪಕ, ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು, ಕುಡ್ಸೆಂಫ್ ಯೋಜನೆಯಲ್ಲಿ 350 ಕೋಟಿ ರೂಪಾಯಿ ಖರ್ಚು ಮಾಡಿದರೂ ಇಲ್ಲಿ ಒಳಚರಂಡಿಯೇ ಇಲ್ಲದ ಪರಿಸ್ಥಿತಿ ಇದೆ. ಚರಂಡಿ […]