ಅಂತರ್ ರಾಜ್ಯ ಕಳ್ಳರ ಜಾಲ ಪತ್ತೆ, 13 ಲಕ್ಷ ಮೌಲ್ಯದ ಬೆಳ್ಳಿ ಆಭರಣ ವಶ

Saturday, December 15th, 2012
Inter state thieves

ಮಂಗಳೂರು :ಜುವೆಲ್ಲರಿ ಕಳ್ಳತನಕ್ಕೆ ಸಂಬಂಧಿಸಿದಂತೆ ಅಂತಾರಾಜ್ಯ ಚೋರರ ಜಾಲವನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಭೇದಿಸಿ ಒಟ್ಟು 8 ಮಂದಿಯನ್ನು ಬಂಧಿಸಿ ಕಾರು ಸಹಿತ 13 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮಧ್ಯಪ್ರದೇಶ ಧಾರ್ ಜಿಲ್ಲೆಯ ಕುಕ್ಷಿ ತಾಲೂಕಿನ ಭಾಗ್ ತಾಂಡಾ ವಾಸಿಗಳಾದ ಅಮರ್ ಸಿಂಗ್ ಯಾನೆ ಅಮ್ಜತ್(28), ಸರ್ದಾರ್(20), ಮದನ್(32), ಬಹುಲಿಯ(50), ಮಡಿಯಾ ಭುರಿಯಾ(40), ಉಷನ್ ಬಿಲಾಲ(38), ಮೋಹನ್ ಸಿಂಗ್ ಯಾನೆ ಮುನ್ಸ(30), ವಿಜಯಾ ಕುಮಾರ್ ಸೋನಿ ಯಾನೆ ಮುನ್ನಾ ಜೋಭಟ್(50) ಬಂಧಿತ […]

ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಬೀದಿ ಮಡೆಸ್ನಾನ ಹರಕೆ ಸೇವೆ ಪ್ರಾರಂಭ

Friday, December 14th, 2012
Beedhi Madesnana

ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಪ್ರತಿ ವರ್ಷ ವಾರ್ಷಿಕ ಜಾತ್ರಾ ಸಮಯದಂದು ಕ್ಷೇತ್ರದ ಕುಮಾರಧಾರಾ ನದಿಕಿನಾರೆಯಲ್ಲಿ ಮಿಂದು ಸುಮಾರು 2 ಕಿ.ಮೀ. ದೂರ ದೇವಸ್ಥಾನದ ವರೆಗೆ ಉರುಳುತ್ತಾ ಮಾಡುವ ವಿಶಿಷ್ಟವಾದ ಬೀದಿ ಮಡೆಸ್ನಾನದ ಹರಕೆ ಸೇವೆ ಗುರುವಾರ ಮುಂಜಾನೆ ಆರಂಭಗೊಂಡಿತು. ಶುಲ್ಕ ರಹಿತವಾದ ಈ ಸೇವೆ ನೂರಾರು ಭಕ್ತರಿಂದ ಷಷ್ಟಿ ಜಾತ್ರೆಯ ಮಹಾರಥೋತ್ಸವದ ವರೆಗೂ ನಡೆಯುತ್ತದೆ. ಕುಮಾರಧಾರಾ ನದಿಯಲ್ಲಿ ಮಿಂದು ಅಲ್ಲಿಂದ ಉರುಳುತ್ತಾ ರಾಜರಸ್ತೆಯ ಮೂಲಕ, ರಥಬೀದಿಯ ಮೂಲಕ ಸಾಗಿ ದೇವಳದ ಹೊರಾಂಗಣಕ್ಕೆ ಬಂದು […]

ಬಿಜೈ ರಾಜಾ ಕೊಲೆ ನಾಲ್ವರು ಆರೋಪಿಗಳ ಸೆರೆ

Friday, December 14th, 2012
Bejai Raja

ಮಂಗಳೂರು :ಬಿಜೈ ರಾಜಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕದ್ರಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಪಂಜಿಮೊಗರಿನ ಅವಿನಾಶ್ (22), ಕೆಪಿಟಿಯ ದೀಕ್ಷಿತ್ ದೇವಾಡಿಗ (22), ಜೈಸನ್ ಡಿಸೋಜಾ (22), ಕೋಡಿಕಲ್ ನ ರಿತೇಶ್ (23) ಬಂಧಿತ ಆರೋಪಿಗಳಾಗಿದ್ದಾರೆ. ಪೂರ್ವದ್ವೇಷದ ಹಿನ್ನಲೆಯಲ್ಲಿಯೇ ಬಿಜೈ ರಾಜಾ ಕೊಲೆ ನಡೆದಿರುವ ಬಗ್ಗೆ ಪೊಲೀಸರು ಧೃಢಪಡಿಸಿದ್ದು, ಈ ಕೊಲೆಯ ಹಿಂದೆ ಬಹುದೊಡ್ಡ ಗ್ಯಾಂಗ್ ಕೆಲಸ ಮಾಡಿದ್ದು ಅದರ ಮಾಸ್ಟರ್ ಮೈಂಡ್ ಗಳಾದ ಈ ನಾಲ್ವರನ್ನು ಸೆರೆ ಹಿಡಿದಿದ್ದು, ಇವರ ವಿಚಾರಣೆಯ ನಂತರವೇ ಇನ್ನಷ್ಟು […]

ಕೊಡಿಯಾಲ್‌ಬೈಲ್ ನ ಯೆನೆಪೋಯ ಆಸ್ಪತ್ರೆಯಲ್ಲಿ ಪತ್ರಕರ್ತರಿಗಾಗಿ ಉಚಿತ ಹೃದಯ ತಪಾಸಣಾ ಶಿಬಿರ

Thursday, December 13th, 2012
Heart Check up Camp

ಮಂಗಳೂರು :ಮಂಗಳೂರು ಪತ್ರಿಕಾ ಭವನದಲ್ಲಿ ಗುರುವಾರ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಮಂಗಳೂರು ಪ್ರೆಸ್‌ಕ್ಲಬ್ ಇವುಗಳ ಜಂಟಿ ಆಶ್ರಯದಲ್ಲಿ ಕೊಡಿಯಾಲ್‌ಬೈಲ್ ನ ಯೆನೆಪೋಯ ಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದೊಂದಿಗೆ ಪತ್ರಕರ್ತರಿಗಾಗಿ ಹೃದಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. ಶಿಬಿರವನ್ನು ಉದ್ಘಾಟಿಸಿದ ಯೆನೆಪೋಯ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಹರೀಶ್ ನಾಯರ್ ಇಂದಿನ ಒತ್ತಡದ ಪರಿಸ್ಥಿತಿಯಲ್ಲಿ ಆರೋಗ್ಯದೆಡೆಗೆ ಕಾಳಜಿ ವಹಿಸುವುದು ಅವಶ್ಯಕ. ಈ ದಿಸೆಯಲ್ಲಿ ಯೆನೆಪೋಯ ಆಸ್ಪತ್ರೆಯು ಉಚಿತವಾಗಿ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಆರೋಗ್ಯ ಸೇವೆಯನ್ನು […]

ರೋಸಾ ಮಿಸ್ತಿಕಾ ಪ್ರಾಂಶುಪಾಲೆ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

Thursday, December 13th, 2012
Rosa Mystica students Protest

ಮಂಗಳೂರು :ಗುರುಪುರ – ಕೈಕಂಬದ ರೋಸಾ ಮಿಸ್ತಿಕಾ ಶಿಕ್ಷಣ ಸಂಸ್ಥೆಯಲ್ಲಿ ಅಯ್ಯಪ್ಪ ಮಾಲೆ ಧರಿಸಿದ ವಿಧ್ಯಾರ್ಥಿಗಳನ್ನು ತರಗತಿಯಿಂದ ಹೊರ ಹಾಕಿದ ಘಟನೆ ನಡೆದಿದೆ. ರೋಸಾ ಮಿಸ್ತಿಕಾ ಶಿಕ್ಷಣ ಸಂಸ್ಥೆಯಲ್ಲಿ ಪಿಯುಸಿ ಓದುತ್ತಿರುವ ನಾಲ್ವರು ವಿದ್ಯಾರ್ಥಿಗಳು ಶಬರಿಮಲೆಗೆ ಹೊಗುವ ನಿಮಿತ್ತ ಅಯ್ಯಪ್ಪ ವ್ರತಾಚರಣೆಯಲ್ಲಿದ್ದು ಮಾಲೆ ಹಾಗೂ ಕಪ್ಪು ಶಾಲು ಧರಿಸಿಕೊಂಡು ತರಗತಿಗೆ ಹಾಜರಾಗುತ್ತಿದ್ದರು ಆದರೆ ಇದಕ್ಕೆ ಪ್ರಾಂಶುಪಾಲೆ ಜೆಸ್ಸಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದರಲ್ಲದೆ, ಧರ್ಮವನ್ನು ಅವ್ಯಾಚವಾಗಿ ನಿಂದಿಸುತ್ತಿದ್ದರೆನ್ನಲಾಗಿದೆ. ಬುಧವಾರ ಮುಂಜಾನೆಯೂ ಇದೇ ರೀತಿ ಆಕ್ಷೇಪ ವ್ಯಕ್ತಪಡಿಸಿದ ಇವರು ವಿದ್ಯಾರ್ಥಿಗಳನ್ನು ತರಗತಿಯಿಂದ […]

ಅಡ್ಯಾರು ಬಳಿ ಅಪಘಾತ ಚಾಲಕ ಪವಾಡ ಸದೃಶ ಪಾರು

Thursday, December 13th, 2012
Accident in Adyar

ಮಂಗಳೂರು : ಗುರುವಾರ ಬೆಳಿಗ್ಗೆ ಮಧ್ಯಪ್ರದೇಶದಿಂದ ಮಂಗಳೂರಿಗೆ ದೊಡ್ಡದಾದ ಕಬ್ಬಿಣದ ಕೊಳವೆಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ನಗರದ ಹೊರವಲಯದ ಅಡ್ಯಾರು ಸಹ್ಯಾದ್ರಿ ಕಾಲೇಜಿನ ಬಳಿ ಅಪಘಾತಕ್ಕೀಡಾಗಿ ಚಾಲಕನು ಪವಾಡ ಸದೃಶವಾಗಿ ಪಾರಾದ ಘಟನೆ ನಡೆದಿದೆ. ಲಾರಿಯ ಮುಂದೆ ಚಲಿಸುತ್ತಿದ್ದ ಕಾರೊಂದು ಅನಿರೀಕ್ಷಿತವಾಗಿ ತಿರುಗಿದ ಸಂದರ್ಭದಲ್ಲಿ ಕಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸುವ ಭರದಲ್ಲಿ ಚಾಲಕನು ಬ್ರೇಕ್ ಹಾಕಿದ ಈ ಸಂದರ್ಭದಲ್ಲಿ ಹಿಂದಿನಿಂದ ಬರುತ್ತಿದ್ದ ಇನ್ನೊಂದು ಲಾರಿಯು ಮುಂದಿನ ಲಾರಿಗೆ ಡಿಕ್ಕಿಯಾಗಿದ್ದು, ಡಿಕ್ಕಿಯ ರಭಸಕ್ಕೆ ಲಾರಿಯಲ್ಲಿದ್ದ ಕೊಳವೆಗಳು ಮುಂದಕ್ಕೆ ಜಾರಿ ಚಾಲಕನು ಕುಳಿತುಕೊಳ್ಳುವ […]

ಆಧಾರ ದ್ವಿತೀಯ ಹಂತದ ನೋಂದಣಿ ಕಾರ್ಯದ ಯೋಜನಾ ಕಾರ್ಯಾಗಾರ

Thursday, December 13th, 2012
Workshop

ಮಂಗಳೂರು :ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಧಾರ ದ್ವಿತೀಯ ಹಂತದ ನೋಂದಣಿ ಕಾರ್ಯದ ಯೋಜನಾ ಕಾರ್ಯಾಗಾರ ವನ್ನು ಆಯೋಜಿಸಲಾಗಿತ್ತು. ಇದರ ಅದ್ಯಕ್ಷತೆಯನ್ನು ಅಪರ ಜಿಲ್ಲಾಧಿಕಾರಿ ಕೆ.ಎ ದಯಾನಂದ ರವರು ವಹಿಸಿದ್ದರು. ಆಧಾರ್ ನಡಿ ನೋಂದಣಿಕರಿಸುವುದನ್ನು ಸಮಗ್ರವಾಗಿಸಲು ನಿವೃತ್ತ ಅಧಿಕಾರಿಗಳನ್ನು ಪರಿಶೀಲಕರನ್ನಾಗಿ ನೇಮಿಸಲಾಗಿದ್ದು, ಅವರಿಗಾಗಿ ತರಬೇತಿಯನ್ನು ಆಯೋಜಿಸಲಾಗಿದೆ. ಈ ಕಾರ್ಯವನ್ನು ಬಹಳ ಗಮನವಹಿಸಿ ನಿರ್ವಹಿಸಬೇಕು. ಪರಿಶೀಲಕರ ಜವಾಬ್ದಾರಿ ಮತ್ತು ಕರ್ತವ್ಯ ಬಹುಮುಖ್ಯವಾಗಿದ್ದು, ಪರಿಶೀಲನೆಯ ನಂತರ ಪರಿಶೀಲಿಸಿದ ಮಾಹಿತಿಯ ದೋಷಗಳಿಗೆ ಪರಿಶೀಲಕರೇ ಜವಾಬ್ದಾರರು. ಹಾಗಾಗಿ ಕಾರ್ಯಾಗಾರವನ್ನು ಗಂಭೀರವಾಗಿ ತೆಗೆದುಕೊಂಡು ಎಲ್ಲ ಪ್ರಶ್ನೆಗಳಿಗೆ […]

ಭೂಗತ ಪಾತಕಿ ಛೋಟಾ ಶಕೀಲ್‌ನ ಸಹಚರರ ಸೆರೆ

Thursday, December 13th, 2012
Chota Shakeel's Associates

ಮಂಗಳೂರು :ನಗರದ ಕೊಡಿಯಾಲ್ ಬೈಲ್ ನ ನಿವಾಸಿಯೊಬ್ಬರನ್ನು ಹತ್ಯೆಗೈದು ದರೋಡೆ ನಡೆಸಲು ಸಂಚು ರೂಪಿಸಿದ್ದ ಭೂಗತ ಪಾತಕಿ ಛೋಟಾ ಶಕೀಲ್‌ನ ಸಹಚರರನ್ನು ನಗರದ ಸಿಸಿಬಿ ಹಾಗೂ ಡಿಸಿಐಬಿ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಆಂಧ್ರಪ್ರದೇಶ ಮೂಲದ ಬೆಂಗಳೂರಿನ ಹನುಮಗಿರಿ ಗಿರಿನಗರದ ನಿವಾಸಿ

ಎಂಡೋಸಲ್ಫಾನ್ ಸಂತ್ರಸ್ಥರಿಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಒಂದು ದಿನದ ಉಪವಾಸ ಸತ್ಯಾಗ್ರಹ

Wednesday, December 12th, 2012
Endo Protest

ಮಂಗಳೂರು :ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಎಐಸಿಸಿ ಸದಸ್ಯ ಪಿವಿ ಮೋಹನ್ ನೇತೃತ್ವದಲ್ಲಿ ಎಂಡೋ ಸಲ್ಫಾನ್ ಸಂತ್ರಸ್ಥರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿತ್ತು. ಉಪವಾಸ ಸತ್ಯಾಗ್ರಹವನ್ನು ಕಾಂಗ್ರೆಸ್ ನಾಯಕ ಜೆ.ಆರ್. ಲೋಬೊ ಉದ್ಘಾಟಿಸಿ ಎಂಡೋಸಲ್ಫಾನ್ ಸಿಂಪಡನೆಯಿಂದ ಹಲವಾರು ಮಂದಿ ತೊಂದರೆಯನ್ನು ಅನುಭವಿಸುತ್ತಿದ್ದು ಇವರು ಸೂಕ್ತ ರೀತಿಯ ಪರಿಹಾರ ಸಿಗದೆ ನರಳುತ್ತಿದ್ದರೂ ಸರಕಾರ ಮಾತ್ರ ಈ ವಿಷಯದಲ್ಲಿ ತನ್ನ ಜಾಣ ಕುರುಡನ್ನು ಪ್ರದರ್ಶಿಸುತ್ತಿದೆ. ಎಂಡೋ ಸಲ್ಫಾನ್ ಅಥವಾ ಇನ್ನಾವುದೇ ರಾಸಾಯನಿಕಗಳನ್ನು […]

ಜೆಸಿಂತಾ ಆತ್ಮಕ್ಕೆ ಶಾಂತಿ ಕೋರಿ ನಗರದಲ್ಲಿ ಇಂದು ಮೊಂಬತ್ತಿ ಮೆರವಣಿಗೆ

Wednesday, December 12th, 2012
Jacintha Saldanha

ಮಂಗಳೂರು :ಲಂಡನ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಉಡುಪಿ ಮೂಲದ ನರ್ಸ್ ಜೆಸಿಂತಾ ಸಲ್ದಾನ ಅವರ ಆತ್ಮಕ್ಕೆ ಶಾಂತಿಕೋರಿ ಇಂದು ಮಂಗಳೂರಿನಲ್ಲಿ ಮೊಂಬತ್ತಿ ಮೆರವಣಿಗೆ ಹಾಗೂ ಸಂತಾಪ ಸಭೆ ಆಯೋಜಿಸಲಾಗಿದೆ. ನಗರದ ವೆಲೆನ್ಸಿಯಾ ವೃತ್ತದಿಂದ ಬೆಂದೂರುವೆಲ್‌ವರೆಗೆ ಸಂಜೆ 6.30ಕ್ಕೆ ಮೊಂಬತ್ತಿ ಮೆರವಣಿಗೆ ನಡೆಯಲಿದ್ದು ಬಳಿಕ ಅಲ್ಲಿ ಸಂತಾಪ ಸಭೆ ಜರಗಲಿದೆ ಎಂದು ಐವನ್‌ ಡಿಸೋಜ ಅವರು ತಿಳಿಸಿದ್ದಾರೆ. ಲಂಡನ್‌ನಲ್ಲಿ ನರ್ಸ್‌ ಜೆಸಿಂತಾ ಸಲ್ದಾನ ಅವರ ನಿಗೂಢ ಸಾವಿನ ಬಗ್ಗೆ ಸಮಗ್ರ ತನಿಖೆಯಾಗುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಕೇಂದ್ರ ಇಂಧನ ಮತ್ತು ನೈಸರ್ಗಿಕ […]