ನಗರದ ಫಳ್ನೀರ್‌ ಬಳಿ ರೌಡಿ ಬಿಜೈ ರಾಜಾ ಕೊಲೆ, ನಾಲ್ವರ ವಿಚಾರಣೆ

Monday, December 3rd, 2012
Notorious gangster Bejai Raja

ಮಂಗಳೂರು :ಶನಿವಾರ ರಾತ್ರಿ ನಗರದ ಫಳ್ನೀರ್‌ ರಸ್ತೆಯ ಡ್ಯಾನಿಶ್‌ ಹೊಟೇಲ್‌ ಎದುರು ರೌಡಿ ಪಾಂಡು ಪೈ ಕೊಲೆ ಪ್ರಕರಣದ ಆರೋಪಿ ಶೈಲೇಶ್ ಯಾನೆ ಬಿಜೈ ರಾಜ ನನ್ನು ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಮಾರಕಾಯುಧಗಳಿಂದ ಕಡಿದು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಶೈಲೇಶ್ ಯಾನೆ ಬಿಜೈ ರಾಜ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸ್ ಕಮೀಷನರ್ ವ್ಯಾಪ್ತಿಯ ಪೊಲೀಸರ ತಂಡ ಭಾನುವಾರ ನಾನಾ ಕಡೆ ತೆರಳಿ ತನಿಖೆ ಕೈಗೊಂಡಿದ್ದು, ನಾಲ್ವರನ್ನು ವಿಚಾರಣೆಗೊಳಪಡಿಸಿದ್ದಾರೆ. ಈ ನಡುವೆ ಬಿಜೈ ರಾಜಾ […]

ಸಿಸಿಬಿ ಕಾರ್ಯಾಚರಣೆ :ಪೆಟ್ರೋಲ್, ಡೀಸೆಲ್ ಕಳವು ಜಾಲ ಪತ್ತೆ 6 ಆರೋಪಿಗಳ ಸೆರೆ

Monday, December 3rd, 2012
Fuel theft racket

ಮಂಗಳೂರು :ಮಂಗಳೂರಿನ ಸಿಸಿಬಿ ಪೊಲೀಸರು ಪೆಟ್ರೋಲ್ ಟ್ಯಾಂಕರ್‌ನ ಒಳಭಾಗದಲ್ಲಿ ರಹಸ್ಯವಾಗಿ ಮತ್ತೊಂದು ಟ್ಯಾಂಕ್ ನಿರ್ಮಿಸಿ ಪೆಟ್ರೋಲ್ ಸಂಸ್ಥೆ ಹಾಗೂ ಬಂಕ್‌ಗಳಿಗೆ ವಂಚಿಸಿ, ನಿರಂತರವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಕಳವು ಮಾಡುತ್ತಿದ್ದ ಜಾಲವನ್ನು ಪತ್ತೆಹಚ್ಚಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು. ಒಟ್ಟು 69 ಲಕ್ಷ ರೂ ಮೌಲ್ಯದ 5 ಟ್ಯಾಂಕರ್ ಹಾಗೂ ನಗದು 3 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. ಐಓಸಿಎಲ್‌ನಿಂದ ಟ್ಯಾಂಕರ್‌ಗೆ ಪೆಟ್ರೋಲ್ ಹಾಗೂ ಡೀಸೆಲ್‌ನ್ನು ಭರ್ತಿ ಮಾಡಿದ ನಂತರ ಐಓಸಿಎಲ್‌ನವರು ಟ್ಯಾಂಕ್‌ನ ಮೇಲ್ಭಾಗ ಮತ್ತು […]

ಇತಿಹಾಸ ಪ್ರಸಿದ್ಧ ಕದ್ರಿ ಕಂಬಳ

Monday, December 3rd, 2012
Kadri Kambala

ಮಂಗಳೂರು :ಡಿಸೆಂಬರ್ 2 ಭಾನುವಾರ ಇತಿಹಾಸ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥ ದೇವರ ಕಂಬಳವು ಕದ್ರಿ ಶ್ರೀ ಯೋಗೀಶ್ವರ ಮಠದ ಮಹಂತರಸ ರಾಜಯೋಗಿ ಶ್ರೀ ಸಂದ್ಯಾನಾಥ್ ಅವರ ಉಪಸ್ಥಿಯಲ್ಲಿ ಜರಗಿತು. ಇದೆ ಪ್ರಪ್ರಥಮ ಬಾರಿಗೆ ಕದ್ರಿ ಕಂಬಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾರ್ಯಕ್ರಮವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಮಾತನಾಡಿದ ಅವರು ಕಂಬಳ ದಕ್ಷಿಣ ಕನ್ನಡದ ಸಾಂಸ್ಕೃತಿಕ ಕ್ರೀಡೆ, ಇಲ್ಲಿನ ಜನತೆಯು ಕಂಬಳಕ್ಕೆ ಹೆಚ್ಚು ಮಾನ್ಯತೆ ನೀಡಿದ್ದಾರೆ. ಇದಕ್ಕೆ ಅಪಾರ ಜನ ಬೆಂಬಲವಿದೆ ಎಂದರು. […]

ತೊಕ್ಕೊಟ್ಟು ಜಂಕ್ಷನ್ ನಲ್ಲಿರುವ ಗುಜರಿ ಸಂಗ್ರಹಣ ದಾಸ್ತಾನಿಗೆ ಬೆಂಕಿ ಭಾರಿ ನಸ್ಟ

Saturday, December 1st, 2012
Scrap shop Thokkottu

ಮಂಗಳೂರು :ಉಳ್ಳಾಲ ಪೋಲೀಸ್ ಠಾಣಾ ವ್ಯಾಪ್ತಿಯ, ತೊಕ್ಕೊಟ್ಟು ಜಂಕ್ಷನ್ ನಲ್ಲಿನ ಗುಜರಿ ಸಂಗ್ರಹಣ ದಾಸ್ತಾನಿಗೆ ನಿನ್ನೆ ಮಧ್ಯರಾತ್ರಿ 11.40ರ ಸುಮಾರಿಗೆ ಬೆಂಕಿ ತಗುಲಿದ ಪರಿಣಾಮ ಭಾರಿ ನಸ್ಟ ಸಂಭವಿಸಿದೆ. ಇದು ಮಹಮ್ಮದ್ ಆಶ್ರಫ್ ಎಂಬುವವರಿಗೆ ಸೇರಿದ್ದಾಗಿದ್ದು ಸುಮಾರು 5 ಲಕ್ಷದಸ್ಟು ನಸ್ಟ ಸಂಭವಿಸಿದೆ. ರಾತ್ರಿಯೇ ಎರಡು ಅಗ್ನಿಶಾಮಕದಳ ಸ್ಥಳಕ್ಕೆ ಧಾವಿಸಿದ್ದು 3 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿವೆ. ಈ ಕಾರ್ಯಚರಣೆಯಲ್ಲಿ ಸ್ಥಳೀಯರು ಸಹಕರಿಸಿದರು. ಈ ಪ್ರದೇಶದ ಅಕ್ಕಪಕ್ಕದಲ್ಲಿ ಮನೆ ಹಾಗೂ ವಾಣಿಜ್ಯ ಸಂಕೀರ್ಣಗಳಿದ್ದು […]

ಬಸ್‌ ನಿಲ್ದಾಣದಲ್ಲಿ ಬಸ್ ಅಡಿ ಸಿಲುಕಿ ಕಂಡಕ್ಟರ್‌ ಸಾವು

Saturday, December 1st, 2012
Bus conductor

ಮಂಗಳೂರು :ಶುಕ್ರವಾರ ಬಿಜೈ ನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಬಸ್ ಕಂಡಕ್ಟರ್ ಬಸ್ ನಡಿ ಸಿಲುಕಿ ಮೃತಪಟ್ಟಿದ್ದಾರೆ. ಕೊಪ್ಪಳ ಜಿಲ್ಲೆಯ ವಿರೂಪಾಕ್ಷ ಸಜ್ಜನ್ ಬೆಟಗೇರಿ ಕಳೆದ 12 ವರ್ಷಗಳಿಂದ ಸಾರಿಗೆ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಅವರು ಪ್ರಸ್ತುತ ಕೊಪ್ಪಳ ಜಿಲ್ಲೆಗೆ ಸೇರಿದ ಬಸ್ ನಲ್ಲಿ ಮಂಗಳೂರು -ಗಂಗಾವತಿ ನಡುವೆ ಸಂಚರಿಸುತ್ತಿದ್ದ ಬಸ್ ನಲ್ಲಿ ಕಂಡಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಎಂದಿನಂತೆ ಬಸ್ ಶುಕ್ರವಾರ ಮಂಗಳೂರಿಗೆ ಬಂದಿದ್ದು, ಸಂಜೆ ಹೊತ್ತಿಗೆ ಹೊರಡುವುದಿತ್ತು. ಬಸ್ […]

ಉಡುಪಿ ಮಿಲಾಗ್ರಿಸ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

Saturday, December 1st, 2012
Rakshitha Milagres College

ಉಡುಪಿ :ಕಲ್ಯಾಣ್ ಪುರ ಮಿಲಾಗ್ರಿಸ್ ಕಾಲೇಜಿನ ಅಂತಿಮ ಬಿಎಸ್ಸಿ ವಿದ್ಯಾರ್ಥಿನಿ ರಕ್ಷಿತಾ ಎಂಬಾಕೆ ಸಂತೆಕಟ್ಟೆ ಬಳಿಯ ನಯಂಪಳಿಯಲ್ಲಿರುವ ತನ್ನ ಮನೆಯ ಕೋಣೆಯಲ್ಲಿ ನೇಣು ಹಾಕಿಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದಾಳೆ. ಉಡುಪಿ ಸಂತೇಕಟ್ಟೆ ನಯಂಪಳಿ ನಿಸರ್ಗ ಹೌಸ್ ನಿವಾಸಿ ನಿತ್ಯಾನಂದ ಕೆ.ಪಿ. ಮತ್ತು ಮಾಲತಿ ಎನ್ ಎಂಬವರ ಪುತ್ರಿಯಾಗಿರುವ ರಕ್ಷಾ ಶುಕ್ರವಾರ ಕಾಲೇಜಿಗೆ ರಜೆ ಇದ್ದ ಕಾರಣ ಓದಲೆಂದು ತನ್ನ ಕೋಣೆ ಸೇರುದ್ದಾಳೆನ್ನಲಾಗಿದೆ. ರಕ್ಷಿತಾಳ ಸ್ನೇಹಿತೆಯೊಬ್ಬಳು ಮನೆಗೆ ಫೋನ್ ಕರೆ ಮಾಡಿ ಕಂಪ್ಯೂಟರ್ ಕ್ಲಾಸ್ ಇರುವ ಬಗ್ಗೆ ಆಕೆಗೆ […]

ಬಿಜೆಪಿ :ಶಾಸಕ ಸ್ಥಾನಕ್ಕೆ ಬಿ ಎಸ್ ವೈ ರಾಜೀನಾಮೆ

Friday, November 30th, 2012
Yeddyurappa resignation

ಬೆಂಗಳೂರು :ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಶುಕ್ರವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಕಳೆದ ಕೆಲವು ತಿಂಗಳುಗಳಿಂದ ಮೂಡಿದ್ದ ಕುತೂಹಲಗಳಿಗೆ ಕೊನೆಗೂ ತೆರೆ ಎಳೆದಿದ್ದಾರೆ. ಸುಮಾರು 40 ವರ್ಷಗಳ ಕಾಲ ಭಾರೀ ಪರಿಶ್ರಮ ಪಟ್ಟು ತಾನೇ ಕಟ್ಟಿದ ಮನೆಯಿಂದ ಯಡಿಯೂರಪ್ಪ ಹೊರ ನಡೆದಿದ್ದಾರೆ. ಮಧ್ಯಾಹ್ನ 1.00 ಗಂಟೆಯ ಸುಮಾರಿಗೆ ವಿಧಾನಸೌಧಕ್ಕೆ ತೆರಳಿದ ಯಡಿಯೂರಪ್ಪ ಸ್ಪೀಕರ್ ಬೋಪಯ್ಯಗೆ ತನ್ನ ರಾಜೀನಾಮೆಯನ್ನು ಸಲ್ಲಿಸಿ ಬಿಜೆಪಿಗೆ ಗುಡ್‌ಬೈ ಹೇಳಿದ್ದಾರೆ. ರಾಜೀನಾಮೆ ನೀಡುವುದಕ್ಕೂ ಮುನ್ನ ಯಡಿಯೂರಪ್ಪ ಫ್ರೀಡಂ ಪಾರ್ಕ್ ನಲ್ಲಿ ತನ್ನ […]

ಎ.ಜೆ. ಆಸ್ಪತ್ರೆ :ಅನ್ನನಾಳದಲ್ಲಿನ ಫೈಬ್ರೋವ್ಯಾಸ್ಕಾಲರ್‌ ಪೊಲಿಪ್‌ ಸಮಸ್ಯೆಗೆ ಅಪರೂಪದ, ಯಶಸ್ವಿ ಶಸ್ತ್ರಚಿಕಿತ್ಸೆ

Friday, November 30th, 2012
AJ Hospital

ಮಂಗಳೂರು :ಅನ್ನನಾಳದಲ್ಲಿ ಕಂಡುಬರುವ ಫೈಬ್ರೋವ್ಯಾಸ್ಕಾಲರ್‌ ಪೊಲಿಪ್‌ (ಗಡ್ಡೆ) ಎಂಬ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ ನಗರದ ಎ.ಜೆ. ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ ಮಾಡಿ ಗುಣಮುಖರನ್ನಾಗಿಸಲಾಗಿದೆ. 32ರ ವಯಸ್ಸಿನ ಮಹಿಳೆಯೊಬ್ಬರು ಕಳೆದ ಮೂರು ವರ್ಷಗಳಿಂದ ಆಹಾರ ನುಂಗಲಾರದೆ ತೊಂದರೆಯಿಂದ ಬಳಲುತ್ತಿದ್ದರು. ಪರಿಣಾಮ ರಕ್ತ ಹೀನತೆಯಿಂದ ಬಳಲಿ ಕಳೆದ 6 ತಿಂಗಳಲ್ಲಿ 10 ಕೆ.ಜಿ. ತೂಕ ಕಳೆದುಕೊಂಡಿದ್ದರು. ಈ ಸಂದರ್ಭ ಎ.ಜೆ. ವೈದ್ಯಕೀಯ ಮಹಾವಿದ್ಯಾಲಯದ ಜನರಲ್‌ ಸರ್ಜರಿ ವಿಭಾಗದ ಮುಖ್ಯಸ್ಥ ಡಾ| ಅಶೋಕ್‌ ಹೆಗ್ಡೆ ಅವರನ್ನು ಸಂಪರ್ಕಿಸಲಾಗಿತ್ತು. ಪರೀಕ್ಷೆಯ ಅನಂತರ ಮಹಿಳೆಗೆ […]

ಲೋಕಸಭಾ ಅಭ್ಯರ್ಥಿ ಆಯ್ಕೆ, ಕಾಂಗ್ರೆಸ್ ನ ಜನಾರ್ದನ ಪೂಜಾರಿ ಮತ್ತು ವಿನಯ್ ಕುಮಾರ್ ಸೊರಕೆ ನಡುವೆ ಪೈಪೋಟಿ

Friday, November 30th, 2012
Congress LS ticket

ಮಂಗಳೂರು :ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಗುರುವಾರ ಬೆಳಗ್ಗೆ ಕಾಂಗ್ರೆಸ್ ಕಚೇರಿಯಲ್ಲಿ ಜನಾರ್ದನ ಪೂಜಾರಿ ಮತ್ತು ವಿನಯ್ ಕುಮಾರ್ ಸೊರಕೆ ಈ ಇಬ್ಬರು ನಾಯಕರ ಬೆಂಬಲಿಗರ ಬಿರುಸಿನ ಚಟುವಟಿಕೆ ಕಂಡುಬಂದಿತು. ಈ ಬಿರುಸಿನ ಚಟುವಟಿಕೆಯಲ್ಲಿ ಎಐಸಿಸಿ ವೀಕ್ಷಕರಾಗಿ ಆಗಮಿಸಿದ್ದ ಕೇರಳದ ಮಾಜಿ ಶಾಸಕ ಮುರಳೀಧರನ್ ಜಿಲ್ಲಾ ಕಾಂಗ್ರೆಸ್ ನಾಯಕರುಗಳಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ರಮಾನಾಥ ರೈ, ಶಾಸಕರಾದ ಯು.ಟಿ. ಖಾದರ್, ವಸಂತ ಬಂಗೇರ, ಕೆಪಿಸಿಸಿ ಕಾರ್ಯದರ್ಶಿ ಐವನ್ ಡಿಸೋಜ, ಅಶ್ವಿನಿಕುಮಾರ್ ರೈ, ಮಾಜಿ […]

ವಿದ್ಯಾರ್ಥಿನಿ ಸೌಜನ್ಯ ಪ್ರಕರಣ:ಸಿಒಡಿ ಪೊಲೀಸರ ತನಿಖೆ ಆರಂಭ

Friday, November 30th, 2012
Sowjanya

ಬೆಳ್ತಂಗಡಿ : ಉಜಿರೆ ಎಸ್‌ಡಿಎಂ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿ ಸೌಜನ್ಯಾ ಅವರ ಕೊಲೆ, ಅತ್ಯಾಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಸಿಒಡಿ ಪೊಲೀಸರು ಬೆಳ್ತಂಗಡಿಗೆ ಆಗಮಿಸಿದ್ದಾರೆ. ಸಿಒಡಿ ಇನ್ಸ್‌ಪೆಕ್ಟರ್‌ ಗೋಪಾಲ್‌ ಅವರು ಪ್ರಕರಣದ ಕುರಿತು ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ್ದಾರೆ. ಸಾರ್ವಜನಿಕರು ಹಿಡಿದುಕೊಟ್ಟ ಸಂಶಯಾಸ್ಪದ ವ್ಯಕ್ತಿಯನ್ನೇ ಪೊಲೀಸರು ಆರೋಪಿ ಎಂದು ಹೇಳಿದ್ದು ಸಾರ್ವಜನಿಕರ ಗೊಂದಲಕ್ಕೆ ಕಾರಣವಾಗಿತ್ತು. ಪ್ರಕರಣದಲ್ಲಿ ಘಟಾನುಘಟಿಗಳು ಭಾಗಿಯಾಗಿರಬಹುದು ಎಂದು ಜನತೆ ಸಂಶಯ ವ್ಯಕ್ತಪಡಿಸಿದ್ದರು. ಅಲ್ಲದೆ ನೈಜ ಆರೋಪಿಯನ್ನು ಪತ್ತೆಹಚ್ಚಲು ಪ್ರಕರಣದ ತನಿಕೆಯನ್ನು ಸಿಒಡಿ ಪೊಲೀಸರಿಗೆ ಒಪ್ಪಿಸಬೇಕೆಂದು ಪ್ರತಿಭಟನೆಗಳೂ […]