ಸುದ್ದಿವಾಹಿನಿಯ ವರದಿಗಾರ ನವೀನ್‌ ಸೂರಿಂಜೆ ಬಂಧನ

Thursday, November 8th, 2012
Naveen Soorinje

ಮಂಗಳೂರು :ಸುದ್ದಿವಾಹಿನಿಯೊಂದರ ವರದಿಗಾರ ನವೀನ್‌ ಸೂರಿಂಜೆ ಅವರನ್ನು ಪಡೀಲ್‌ ಬಳಿ ಬುಧವಾರ ರಾತ್ರಿ ಗ್ರಾಮಾಂತರ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಸುಳ್ಯದಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ಭಾಗಿಯಾಗಿ ಹಿಂತಿರುಗಿದ ಸಂದರ್ಭ ರವೀಶ್ ನಾಯಕ್ ನೇತೃತ್ವದಲ್ಲಿ ಕಂಕನಾಡಿ ಪೊಲೀಸರು ಅವರನ್ನು ಬಂಧಿಸಿದರು. ಕಳೆದ ಜುಲೈ 28ರಂದು ಮೋರ್ನಿಂಗ್‌ ಮಿಸ್ಟ್‌ ಹೋಂಸ್ಟೇಯಲ್ಲಿ ಬರ್ತ್‌ಡೇ ಪಾರ್ಟಿಯಲ್ಲಿ ನಿರತರಾಗಿದ್ದ ಯುವತಿಯರ ಮೇಲೆ ದಾಳಿ ನಡೆದ ಸಂದರ್ಭ ಸ್ಥಳದಲ್ಲಿದ್ದ ನವೀನ್‌ ತಮಗೆ ಸಕಾಲದಲ್ಲಿ ಮಾಹಿತಿ ನೀಡಿಲ್ಲ ಎಂದು ಪೊಲೀಸರು ಅವರ ಮೇಲೆ ಕೇಸು ದಾಖಲಿಸಿದ್ದರು. […]

ನಗರದಲ್ಲಿ ಎನ್ ಇಇಟಿ ಪರೀಕ್ಷೆ ಜಾರಿ ವಿರೋಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ವತಿಯಿಂದ ಪ್ರತಿಭಟನೆ

Wednesday, November 7th, 2012
NEET Exams

ಮಂಗಳೂರು :ಕರ್ನಾಟಕ ರಾಜ್ಯಸರ್ಕಾರ ಪ್ರಸಕ್ತ ವರ್ಷದಿಂದಲೇ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆಯಲು NEET (National Eligibility Entrance Test) ಪರೀಕ್ಷೆ ಬರೆಯುದನ್ನು ಜಾರಿಗೆ ತಂದಿರುವುದನ್ನು ಅಂತ್ಯತ ಅವೈಜ್ಞಾನಿಕ ಕ್ರಮ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ವತಿಯಿಂದ ನಗರದ ಬಂಟ್ಸ್ ಹಾಸ್ಟೆಲ್ ವೃತ್ತದ ಬಳಿ ಇಂದು ಪ್ರತಿಭಟನೆಯನ್ನು ನಡೆಸಲಾಯಿತು. ಎ.ಬಿ.ವಿ.ಪಿ. ರಾಜ್ಯ ಕಾರ್ಯದರ್ಶಿ ರಮೇಶ್ ಕೆ ಮಾತನಾಡಿ ರಾಜ್ಯ ಸರಕಾರವು ಈ ಪರೀಕ್ಷೆಯ ಕುರಿತಂತೆ ಕೇಂದ್ರ ಸರಕಾರದ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಪ್ರಸಕ್ತ ಸಾಲಿನಲ್ಲೇ ಪರೀಕ್ಷೆಯನ್ನು ನಡೆಸುವುದಾಗಿ […]

ಅಂತರ್ ರಾಜ್ಯ ವಾಹನ ಕಳ್ಳತನದ ನಾಲ್ವರು ಆರೋಪಿಗಳ ಸೆರೆ

Wednesday, November 7th, 2012
SP Abhishek Goel

ಮಂಗಳೂರು :ದ.ಕ ಜಿಲ್ಲೆಯ ಪುತ್ತೂರು, ಸುಳ್ಯ, ಉಪ್ಪಿನಂಗಡಿ, ಕಡಬ, ಉಳ್ಳಾಲ ಹಾಗೂ ಕೇರಳ ರಾಜ್ಯದ ಮಂಜೇಶ್ವರ ಪೊಲೀಸ್ ಠಾಣಾ ಸರಹದ್ದಿನಲ್ಲಿ ವಾಹನ ಕಳ್ಳತನ ಹಾಗೂ ಗ್ಯಾಸ್ ಸಿಲಿಂಡರ್ ಕಳ್ಳತನ ಮಾಡಿದ 4 ಜನ ಆರೋಪಿಗಳನ್ನು ಬಂಟ್ವಾಳ ತಾಲೂಕಿನ ಮಾಣಿ ಎಂಬಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಜಿಲ್ಲಾ ಅಪರಾಧ ಪತ್ತೆದಳ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ಆರೋಪಿಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರಿಗೆ ಹಸ್ತಾಂತರಿಸಿರುವುದಾಗಿ ಬುಧವಾರ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ನಡೆದ […]

ಹಿರಿಯ ಸಾಹಿತಿ ಡಾ| ಸಂಜೀವ ಬೋಳಾರ್‌ ಅವರಿಗೆ ಯುವ ವಾಹಿನಿ ಪ್ರಾಯೋಜಿತ ವಿಶುಕುಮಾರ್‌ ಪ್ರಶಸ್ತಿ

Wednesday, November 7th, 2012
Vishukumar award

ಮಂಗಳೂರು :ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಜರಗಿದ ಯುವ ವಾಹಿನಿ ಕೇಂದ್ರ ಸಮಿತಿ ರಜತ ಮಹೋತ್ಸವ ಸಮಾರಂಭದಲ್ಲಿ ಯುವ ವಾಹಿನಿ ಪ್ರಾಯೋಜಿತ ’ವಿಶುಕುಮಾರ್‌ ಪ್ರಶಸ್ತಿ’ಯನ್ನು ಈ ಬಾರಿ ಹಿರಿಯ ಸಾಹಿತಿ ಡಾ| ಸಂಜೀವ ಬೋಳಾರ್‌ ಅವರಿಗೆ ಕನ್ನಡ ಸಾಹಿತ್ಯ ಪರಿಷತ್‌ನ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಬಳಿಕ ಮಾತನಾಡಿದ ಅವರು, ದಿ.ವಿಶುಕುಮಾರ್‌ ನಾಡು ಕಂಡ ಓರ್ವ ಶ್ರೇಷ್ಠ ಸಾಹಿತಿಯಾಗಿದ್ದು, ಸಾಹಿತಿ ಡಾ.ಶಿವರಾಮ ಕಾರಂತರ ಬಳಿಕ ಸಾಹಿತ್ಯದಲ್ಲಿ ಅದ್ಭುತ ಛಾಪು ಮೂಡಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು. […]

ಗಡ್ಗರಿ ಹೇಳಿಕೆ ವಿರೋಧಿಸಿ ಎಸ್.ಎಫ್.ಐ. ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ

Wednesday, November 7th, 2012
SFI Protest

ಮಂಗಳೂರು :ಎಸ್.ಎಫ್.ಐ. ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ನಿನ್ನೆ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಸ್ವಾಮಿ ವಿವೇಕಾನಂದ ಹಾಗೂ ಭೂಗತ ದೊರೆ ದಾವೂದ್ ಇಬ್ರಾಹಿಂ ಬುದ್ದಿಮತ್ತೆ ಒಂದೇ ಎಂಬ ಹೇಳಿಕೆಯ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಸ್.ಎಫ್.ಐ. ರಾಜ್ಯ ಸಹ ಕಾರ್ಯದರ್ಶಿ ಜೀವನ್ ರಾಜ್ ಕುತ್ತಾರ್ ಭ್ರಷ್ಟಾಚಾರದಲ್ಲಿ ಸಿಲುಕಿರುವ ನಿತಿನ್ ಗಡ್ಕರಿ ಹತಾಶರಾಗಿದ್ದು, ಅವರ ತಲೆ ಖಾಲಿಯಾಗಿದೆ. ಆದುದರಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಯುವಕರ ಆದರ್ಶ […]

ಚೈನಾ ಪಟಾಕಿ ಕ್ರೇಕರ್ಸ್ ವರ್ಲ್ಡ್ ಮಾಲಕರಿಂದ 1.5 ಲಕ್ಷ ಪ್ರತಿ ತುಳು ಲಿಪಿ ಪುಸ್ತಕ ವಿತರಣೆ

Tuesday, November 6th, 2012
Crackers World

ಮಂಗಳೂರು :ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಚೈನಾ ಪಟಾಕಿ ಕ್ರೇಕರ್ಸ್ ವರ್ಲ್ಡ್ ಮಾಲಕ ಉಸ್ಮಾನ್ ರವರು ಮಾತನಾಡಿ  ತುಳುವರಿಗಾಗಿ ಪ್ರಥಮ ಹಂತವಾಗಿ 1.5 ಲಕ್ಷ ಪ್ರತಿ ತುಳು ಲಿಪಿ ಪುಸ್ತಕಗಳನ್ನು ಮುದ್ರಿಸಿ ಉಚಿತವಾಗಿ ಸಾರ್ವಜನಿಕರಿಗೆ ನೀಡಲಾಗುವುದು ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮೆಗಾಮೀಡಿಯಾ ಮಾಲಕರಾದ ಶಿವಪ್ರಸಾದ್ ರವರು ಉಪಸ್ಥಿತರಿದ್ದರು ಕಳೆದ 12 ವರ್ಷಗಳಿಂದ ನಗರದ ಬಿ.ಬಿ. ಅಲಾಬಿ ರಸ್ತೆಯಲ್ಲಿ ಚೈನಾ ಪಟಾಕಿ ವ್ಯವಹಾರ ನಡೆಸುತ್ತಿದ್ದು ತುಳು ಭಾಷೆಯ ಮೇಲಿನ ಅಭಿಮಾನದಿಂದ ಶಿವಕಾಶಿಯ ಪಟಾಕಿ ಉತ್ಪನ್ನ […]

ಬೀಡಿ ಕೆಲಸ ಕಡಿತ ನೀತಿಯನ್ನು ವಿರೋಧಿಸಿ ಎಸ್. ಕೆ.ಬೀಡಿ ವರ್ಕರ್ಸ್ ಫೆಡರೇಶನ್ ವತಿಯಿಂದ ಕಂಪನಿ ಚಲೋ

Tuesday, November 6th, 2012
Beedi Workers

ಮಂಗಳೂರು :ಇತ್ತೀಚಿನ ದಿನಗಳಲ್ಲಿ ಬೀಡಿ ಕಂಪನಿಗಳು ಬೀಡಿ ಕೆಲಸವನ್ನು ಕಡಿತಗೊಳಿಸಿದ್ದು ಕಂಪನಿಯ ಈ ಕ್ರಮವನ್ನು ವಿರೋಧಿಸಿ ಎಸ್.ಕೆ. ಬೀಡಿ ವರ್ಕರ್ಸ್ ಫೆಡರೇಶನ್ (ಎ‌ಐಟಿಯುಸಿ) ನೇತೃತ್ವದಲ್ಲಿ ಇಂದು ಲಾಲ್‌ಬಾಗ್‌ನ ಗಣೇಶ್ ಬೀಡಿ ಕಂಪೆನಿಯೆದುರು ಬೀಡಿ ಕಾರ್ಮಿಕರು ಕಂಪೆನಿ ಚಲೋ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರನ್ನುದ್ದೇಶಿಸಿ ಮಾತನಾಡಿದ ಎ‌ಐಟಿಯುಸಿ ಜಿಲ್ಲಾ ಅಧ್ಯಕ್ಷ ಪಿ. ಸಂಜೀವ, ಧೂಮಪಾನ ನಿಷೇಧದ ಹಿನ್ನೆಲೆಯಲ್ಲಿ ಬೀಡಿ ಕೈಗಾರಿಕೆಯನ್ನು ನಾಶ ಮಾಡಲು ಸರಕಾರ ಹವಣಿಸುತ್ತಿದ್ದು, ಇದರಿಂದ ಬೀಡಿ ಉದ್ಯಮವನ್ನು ನಂಬಿರುವ ಲಕ್ಷಾಂತರ ಬೀಡಿ ಕಾರ್ಮಿಕರು ಬೀದಿ ಪಾಲಾಗಲಿದ್ದಾರೆ ಎಂದು […]

ಸೌಜನ್ಯ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ಕೇಮಾರು ಶ್ರೀ ಒತ್ತಾಯ

Tuesday, November 6th, 2012
ಸೌಜನ್ಯ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ಕೇಮಾರು ಶ್ರೀ ಒತ್ತಾಯ

ಬೆಳ್ತಂಗಡಿ :ಸೌಜನ್ಯಳ ಮನೆಗೆ ಭೇಟಿ ನೀಡಿದ ಕೇಮಾರು ಶ್ರೀ ಈಶವಿಠಲದಾಸ ಸ್ವಾಮೀಜಿಯವರು ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಜವಾದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಆದ್ದರಿಂದ ಈ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದರು. ಇನ್ನು15 ದಿನಗಳಲ್ಲಿ ಸೂಕ್ತ ತನಿಖೆ ನಡೆಸದೇ ಇದ್ದಲ್ಲಿ ಸಾರ್ವಜನಿಕರ ಬೆಂಬಲದೊಂದಿಗೆ ನ್ಯಾಯ ಸಿಗುವವರೆಗೆ ಹೋರಾಟ ನಡೆಸಲಾಗುವುದು ಎಂದವರು ತಿಳಿಸಿದರು. ಪ್ರಕರಣದ ಹಿಂದೆ ಯಾರೇ ಇದ್ದರು ಅದನ್ನು ಕೂಡಲೇ ಪತ್ತೆಹಚ್ಚಿ ಬಹಿರಂಗಪಡಿಸಬೇಕು, ಹಾಗೂ ಸಾರ್ವಜನಿಕರ ಹಿತಾಸಕ್ತಿ […]

ಕರ್ಣಾಟಕ ಬ್ಯಾಂಕಿನ ನೂತನ 511ನೇ ಶಾಖೆ ಕುಲಶೇಖರದಲ್ಲಿ ಶುಭಾರಂಭ

Tuesday, November 6th, 2012
Karnataka Bank

ಮಂಗಳೂರು :ಖಾಸಗಿ ರಂಗದ ಬ್ಯಾಂಕ್ ಗಳಲ್ಲಿ ಮುಂಚೂಣಿಯಲ್ಲಿರುವ ಕರ್ಣಾಟಕ ಬ್ಯಾಂಕ್ ತನ್ನ ನೂತನ 511ನೇ ಶಾಖೆಯನ್ನು ಕುಲಶೇಖರದಲ್ಲಿ ಆರಂಭಿಸಿತು, ಪ್ಲಾಮಾ ಡೆವಲಪರ್ಸ್ ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪಿ.ಎಂ.ಎ.ರಜಾಕ್ ನೂತನ ಶಾಖೆಯನ್ನು ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಪಿ.ಜಯರಾಮ ಭಟ್ ಮಾತನಾಡಿ, ಬ್ಯಾಂಕ್ ನಲ್ಲಿ ಲಭ್ಯವಿರುವ 25 ಲಕ್ಷದೊಳಗಿನ ಗೃಹ ಸಾಲದ ಬಡ್ಡಿ ದರವನ್ನು ಶೀಘ್ರವೇ ಶೇ.10.75ಕ್ಕೆ ಇಳಿಸಲಿದೆ. ಮುಂದಿನ ದಿನಗಳಲ್ಲಿ ಬ್ಯಾಂಕ್ ಶಾಖೆಯ ಸಂಖ್ಯೆಯನ್ನು 550ಕ್ಕೂ, ಎಟಿಎಂಗಳ ಸಂಖ್ಯೆಯನ್ನೂ 450ಕ್ಕೂ […]

ಮಲ್ಪೆ ಬೀಚ್ ಫ್ರೆಂಡ್ಸ್ ಆಶ್ರಯದಲ್ಲಿ ಮಲ್ಪೆ ಕಡಲ ಕಿನಾರೆಯಲ್ಲಿ ದೀಪಾವಳಿ ಹಬ್ಬ

Monday, November 5th, 2012
Deepavali

ಮಂಗಳೂರು :ಮಲ್ಪೆ ಕಡಲ ಕಿನಾರೆಯಲ್ಲಿ ಕಳೆದ ಹಲವು ವರ್ಷಗಳಿಂದ ಮಲ್ಪೆ ಬೀಚ್ ಫ್ರೆಂಡ್ಸ್ ಆಯೋಜಿಸುತ್ತಿರುವ ದೀಪಾವಳಿ ಹಬ್ಬ ಪ್ರತಿವರ್ಷ ಸಾವಿರಾರು ಮಂದಿಯನ್ನು ಆಕರ್ಷಿಸುತ್ತಿದ್ದು, ಈ ವರ್ಷ ಇದೇ ನವೆಂಬರ್ 14ರಂದು ಸಂಜೆ ಗಂಟೆ 5.30ರಿಂದ ಆರಂಭವಾಗಲಿದೆ. ಭೂಮಿಯನ್ನು ಆದರ್ಶಪ್ರಾಯನಾಗಿ ಆಳ್ವಿಕೆ ನಡೆಸಿದ ಬಲಿ ಚಕ್ರವರ್ತಿಯ ನೆನಪಿನ ಹಬ್ಬವಾಗಿ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ಕರಾವಳಿಯಲ್ಲಿ ನರಕ ಚತುರ್ದಶಿ – ಬಲಿಪಾಡ್ಯಮಿಯ ಸಂಭ್ರಮವನ್ನು ವಿಶಿಷ್ಟ ವಿಧಿ-ವಿಧಾನಗಳೊಂದಿಗೆ ಆಚರಿಸಲಾಗುತ್ತದೆ. ಇಂದಿನ ಆಧುನಿಕ ಜೀವನ ಪದ್ಧತಿಯಲ್ಲಿ ದೀಪಾವಳಿ ಹಬ್ಬವನ್ನು ಸಾಂಪ್ರದಾಯಿಕ ರೀತಿಯಲ್ಲಿ ಆಚರಿಸಲು […]