ಸೈಬರ್‌ ಅಪರಾಧ ಹೆಚ್ಚಲಿದೆ ಯುವ ಎಸ್‌ಐಗಳು ಜಾಗ್ರತರಾಗಿ : ಡಿಜಿಪಿ ಶಂಕರ ಬಿದರಿ

Sunday, December 18th, 2011
DG IGP Shankar Bidari

ಉಡುಪಿ : ನೂತನ ಡಿಜಿಪಿ ಶಂಕರ ಬಿದರಿಯವರು ಉಡುಪಿ ಎಸ್ಪಿ ಕಚೇರಿಯಲ್ಲಿ ಶುಕ್ರವಾರ ಭೂಗತ ಪಾತಕಿಗಳನ್ನು ಮತ್ತು ಕೊಲೆ ಆರೋಪಿಗಳನ್ನು ಸೆರೆ ಹಿಡಿದ ಜಿಲ್ಲಾ ಪೊಲೀಸರಿಗೆ ಪ್ರಸಸ್ತಿ ಪತ್ರಗಳನ್ನು ವಿತರಿಸಿದರು.ಬಳಿಕ ಮಾತನಾಡಿದ ಶಂಕರ ಬಿದರಿಯವರು ಮುಂದಿನ ದಿನಗಳಲ್ಲಿ ಸೈಬರ್‌ ಅಪರಾಧ ಹೆಚ್ಚಲಿದೆ ಆದ್ದರಿಂದ ಸೈಬರ್‌ ಅಪರಾಧದ ಬಗ್ಗೆ ಹೆಚ್ಚು ತಿಳಿದುಕೊಂಡಿರಬೇಕು. ವಿಶೇಷವಾಗಿ ಯುವ ಎಸ್‌ಐಗಳು ಈ ಕುರಿತು ಜ್ಞಾನ ಹೆಚ್ಚಿಸಿಕೊಂಡಿರಬೇಕು. ಅಪರಾಧ ನಿಯಂತ್ರಣಕ್ಕೆ ವಿಶೇಷ ಮುತುವರ್ಜಿ ವಹಿಸಬೇಕು. ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು. ಭೂಗತ […]

ಎಟಿಎಂ ಹಣ ಎಗರಿಸಿದ ಚಾಲಕಿ ಕಳ್ಳರ ತಂಡ, ಗಂಟೆಯೊಳಗೆ ಹಿಡಿದ ಪೊಲೀಸರು

Friday, December 16th, 2011
ATM Thieves

ಮಂಗಳೂರು : ನಗರದ ಹಂಪನಕಟ್ಟೆಯ ವಿಲಾಗ್ರೀಸ್ ಬಳಿ ಕೆಎಂಸಿ ಡೆಂಟಲ್‌ ಕಾಲೇಜು ಕಟ್ಟಡದಲ್ಲಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಎಟಿಎಂ ಯಂತ್ರಕ್ಕೆ ನಗದು ತುಂಬಿಸಲು ಬಂದಿದ್ದ ಪ್ರೋ ಇಂಟರ್ಯಾಕ್ಟಿವ್‌ ಸರ್ವೀಸಸ್‌ನ ಆಮ್ನಿ ವಾಹನದಿಂದ ಹಣವಿದ್ದ ಪೆಟ್ಟಿಗೆಯನ್ನು ಗುರುವಾರ ಮಧ್ಯಾಹ್ನ ಸುಮಾರು 12.15ರ ವೇಳೆಗೆ ಕಳ್ಳರು ಅಪಹರಿಸಿ ಪರಾರಿಯಾಗಿದ್ದಾರೆ. ಚಾಲಕಿ ಕಳ್ಳರ ತಂಡ ಎಟಿಎಂ ಬಳಿ ನಿಲ್ಲಿಸಲಾಗಿದ್ದ ವಾಹನದಲ್ಲಿ ಚಾಲಕ ಮಾತ್ರ ಇರುವುದನ್ನು ಗಮನಿಸಿ ಅಲ್ಲಿಗೆ ಬಂದ ತಂಡದ ವ್ಯಕ್ತಿಯೊಬ್ಬ ಹತ್ತು ರೂ.ಗಳ ಸುಮಾರು 25 ನೋಟುಗಳನ್ನು ಕಾರಿನ […]

ಏಶ್ಯನ್‌ ಪವರ್‌ಲಿಫ್ಟಿಂಗ್‌ ಸ್ಪರ್ಧಾ ವಿಜೇತರಿಗೆ ಮಂಗಳೂರಿನಲ್ಲಿ ಅದ್ದೂರಿ ಸ್ವಾಗತ

Thursday, December 15th, 2011
Champions

ಮಂಗಳೂರು: ಡಿ. 5 ರಿಂದ 9 ರ ವರೆಗೆ ಜಪಾನ್‌ನ ಕೋಬೆಸಿಟಿಯಲ್ಲಿ ನಡೆದ ಏಶ್ಯನ್‌ ಪವರ್‌ಲಿಫ್ಟಿಂಗ್‌ ಸ್ಪರ್ಧಾ ಕೂಟದಲ್ಲಿ ಪದಕ ವಿಜೇತರಾದವರನ್ನು ಬುಧವಾರ ನಗರದ ಕೇಂದ್ರ ರೈಲು ನಿಲ್ದಾಣದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಏಶ್ಯನ್‌ ಪವರ್‌ಲಿಫ್ಟಿಂಗ್‌ನಲ್ಲಿ ಕರ್ನಾಟಕ ಒಟ್ಟು 18 ಪದಕಗಳನ್ನು ಪಡೆದಿದೆ. ಜಿಲ್ಲೆಗೆ ಒಟ್ಟು 13 ಪದಕಗಳು ಬಂದಿವೆ. ವಿಜೇತರನ್ನು ಮೇಯರ್‌ ಪ್ರವೀಣ್‌ ಸೇರಿದಂತೆ ಹಲವು ಗಣ್ಯರು, ಬಾಲಾಂಜನೆಯ ಜಿಮ್ನೇಶಿಯಂನ ಪದಾಧಿಕಾರಿಗಳು ಸ್ವಾಗತಿಸಿದರು. ಬಳಿಕ ತೆರೆದ ವಾಹನದಲ್ಲಿ ಕಾರ್‌ಸ್ಟ್ರೀಟ್‌ ಹಾಗೂ ಎಸ್ ಡಿಎಂ ಕಾಲೇಜಿನ ವರೆಗೆ ಮೆರವಣಿಗೆಯಲ್ಲಿ […]

ನೂತನ ಐಜಿಪಿ ಪ್ರತಾಪ ರೆಡ್ಡಿ ಅಧಿಕಾರ ಸ್ವೀಕಾರ

Thursday, December 15th, 2011
Igp Prathap Reddy

ಮಂಗಳೂರು: ಪಶ್ಚಿಮ ವಲಯವು ಪೊಲೀಸ್‌ ಇಲಾಖೆಯ ನೂತನ ಐಜಿಪಿಯಾಗಿ ಪ್ರತಾಪ ರೆಡ್ಡಿ ಅವರು ಬುಧವಾರ ಇಲ್ಲಿನ ಐಜಿಪಿ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು. ಉನ್ನತ ತರಬೇತಿಗಾಗಿ ವಿದೇಶಕ್ಕೆ ತೆರಳಲಿರುವ ಐಜಿಪಿ ಅಲೋಕ್‌ ಮೋಹನ್‌ ಅವರಿಂದ ತೆರವಾಗುವ ಸ್ಥಾನಕ್ಕೆ ಪ್ರತಾಪ ರೆಡ್ಡಿಯವರನ್ನು ನಿಯೋಜಿಸಲಾಗಿದೆ. ಅಧಿಕಾರ ವಹಿಸಿಕೊಂಡ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ರೆಡ್ಡಿ ಕೇವಲ ಅಪರಾಧ ಪ್ರಕರಣಗಳ ಪತ್ತೆ ಪೊಲೀಸ್‌ ಇಲಾಖೆಯ ಸಾಧನೆಯ ಮಾನದಂಡವಲ್ಲ, ಇಲಾಖೆಯ ಸಮಗ್ರ ಚಟುವಟಿಕೆಗಳನ್ನು ಪರಿಗಣಿಸಿ ಸಾಧನೆಯನ್ನು ಅಳೆಯ ಬೇಕು ಎಂದು ಅಧಿಕಾರ ಸ್ವೀಕಾರದ ಬಳಿಕ […]

ಭಾರತೀಯ ನೌಕಾಪಡೆ ಹೆಲಿಕಾಪ್ಟರ್‌ನಲ್ಲಿ ದಿಢೀರ್‌ ಬೆಂಕಿ ತಪ್ಪಿದ ಅನಾಹುತ

Tuesday, December 13th, 2011
ಭಾರತೀಯ ನೌಕಾಪಡೆ ಹೆಲಿಕಾಪ್ಟರ್‌ನಲ್ಲಿ ದಿಢೀರ್‌ ಬೆಂಕಿ ತಪ್ಪಿದ ಅನಾಹುತ

ಮಂಗಳೂರು : ಬಜಪೆಯ ಹಳೆಯ ವಿಮಾನ ನಿಲ್ದಾಣದಲ್ಲಿ ಭಾರತೀಯ ನೌಕಾಪಡೆಗೆ ಸೇರಿದ ಹೆಲಿಕಾಪ್ಟರ್‌ನಲ್ಲಿ ದಿಢೀರ್‌ ಹೊಗೆ ಹಾಗೂ ಬೆಂಕಿ ಕಾಣಿಸಿಕೊಂಡ ಘಟನೆ ಸೋಮವಾರ ಬೆಳಗ್ಗೆ ನಡೆಯಿತು. ಕೊಚ್ಚಿಯ ಗರುಡ ನೌಕೆಯಿಂದ ಹೊರಟ ಹೆಲಿಕಾಪ್ಟರ್‌ ಇಂಧನ ತುಂಬಿಸಿಕೊಳ್ಳಲು ಬೆಳಗ್ಗೆ 10.45ರ ವೇಳೆ ಬಜಪೆ ವಿಮಾನ ನಿಲ್ದಾಣದಲ್ಲಿ ಇಳಿದಿತ್ತು. ನಿಲುಗಡೆಗೊಂಡಿದ್ದ ಕಾಪ್ಟರ್‌ನ ರೋಟಾರ್ ಬಳಿ 10.56ರ ವೇಳೆ ಹೊಗೆ ಚಿಮ್ಮುತ್ತಿದ್ದು ಇದೇ ವೇಳೆ ಬೆಂಕಿಯೂ ಕಾಣಿಸಿಕೊಂಡಿತು. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಅಗ್ನಿಶಾಮಕ ಸಿಬಂದಿ ಕಾಪ್ಟರ್‌ನ ಸಿಬಂದಿಗಳ ಸಹಕಾರದಿಂದ ಅಗ್ನಿಶಮನ […]

ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಉಮಾನಾಥ ಕೋಟ್ಯಾನ್‌ ಅಧಿಕಾರ ಸ್ವೀಕಾರ

Tuesday, December 13th, 2011
umanath kotian

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಉಮಾನಾಥ ಕೋಟ್ಯಾನ್‌ ಅವರು ತುಳು ಅಕಾಡೆಮಿ ಕಛೇರಿಯಲ್ಲಿ ಸೋಮವಾರ ಅಧಿಕಾರ ಸ್ವೀಕರಿಸಿದರು. ನಿಕಟಪೂರ್ವ ಅಧ್ಯಕ್ಷ ಡಾ| ಪಾಲ್ತಾಡಿ ರಾಮಕೃಷ್ಣ ಆಚಾರ್‌ ಅವರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು. ಅಧಿಕಾರ ಸ್ವೀಕರಿಸಿದ ಬಲಿಕ ಮಾತನಾಡಿದ ಅವರು, ತುಳು ಭಾಷೆ, ಸಂಸ್ಕೃತಿಯ ಏಳಿಗೆಗಾಗಿ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು. 10ನೇ ತರಗತಿ ತನಕ ತುಳು ಭಾಷೆಯ ಪಠ್ಯವನ್ನು ವಿಸ್ತರಿಸಲು ಪ್ರಯತ್ನಿಸುತ್ತೇನೆ. 8 ನೇ ಪರಿಚ್ಛೇದಲ್ಲಿ ತುಳು ಸೇರ್ಪಡೆಗೆ ಅಗತ್ಯ […]

ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿಯವರಿಗೆ ಅಭಿವಂದನಾ ಹಾಗೂ ಪೌರಸಮ್ಮಾನ ಕಾರ್ಯಕ್ರಮ

Friday, December 9th, 2011
Poura Sanmana

ಮಂಗಳೂರು : ಮಂಗಳೂರು ಮಹಾನಗರದ ಜನರ ಪರವಾಗಿ ಪುರಭವನದಲ್ಲಿ ಪರ್ಯಾಯ ಪೀಠಾರೋಹಣಗೈಯಲಿರುವ ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಅವರಿಗೆ ಅಭಿವಂದನಾ ಹಾಗೂ ಪೌರಸಮ್ಮಾನ ಕಾರ್ಯಕ್ರಮ ನಡೆಯಿತು. ಪೌರಸಮ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು ಕಷ್ಟ ಸುಖಗಳೆರಡೂ ಜೀವನದ ಪರ್ಯಾಯ ಅಂಗಗಳು. ಅದನ್ನು ಎಲ್ಲರೂ ಅನುಭವಿಸಬೇಕು ಸುಖವನ್ನು ಮಾತ್ರ ಬಯಸಿ ದುಃಖವನ್ನು ಕಡೆಗಣಿಸುವುದು ಧರ್ಮ ಅಲ್ಲ. ದುಃಖ ಬಂದಾಗ ಸ್ವೀಕರಿಸಿ ಭಗವಂತನ ಸ್ಮರಣೆ, ಭಕ್ತಿಯಿಂದ ಭವದ ದುಃಖಗಳಿಂದ ಪಾರಾಗಿ ಆತ್ಮೋನ್ನತಿ ಪಡೆಯಲು ಸಾಧ್ಯವಾಗುತ್ತದೆ ಎಂದು  ಶ್ರೀ […]

ಎಎಂಆರ್ ಜಲ ವಿದ್ಯುತ್‌ ಕಂಪೆನಿಯ ವಿರುದ್ದ ಸೂಕ್ತ ಪರಿಹಾರಕ್ಕಾಗಿ ಪ್ರತಿಭಟನೆ

Thursday, December 8th, 2011
ಎಎಂಆರ್ ಜಲ ವಿದ್ಯುತ್‌ ಕಂಪೆನಿಯ ವಿರುದ್ದ ಸೂಕ್ತ ಪರಿಹಾರಕ್ಕಾಗಿ ಪ್ರತಿಭಟನೆ

ಬಂಟ್ವಾಳ : ಶಂಭೂರು ಜಲ ವಿದ್ಯುತ್‌ ಯೋಜನೆಯಿಂದ ಒಮ್ಮೆಲೆ ಹರಿದು ಬಿಡುವ ನೀರಿನಿಂದ ಹಲವು ಜೀವಗಳು ಬಲಿಯಾಗುತ್ತಿವೆ. ಮಂಗಳವಾರ ನೇತ್ರಾವತಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಮೂವರು ವಿದ್ಯಾರ್ಥಿಗಳ ಸಾವಿಗೆ ಎಎಂಆರ್ ಜಲ ವಿದ್ಯುತ್‌ ಕಂಪೆನಿಯೇ ಕಾರಣ ಎಂದು ಸಾರ್ವಜನಿಕರು, ಕಾಲೇಜು ವಿದ್ಯಾರ್ಥಿಗಳು, ಊರಿನ ಜನರು ಬಂಟ್ವಾಳ ತಹಶೀಲ್ದಾರ್‌ ಕಚೇರಿಯಲ್ಲಿ ಡಿ. 7ಬುಧವಾರದಂದು ಪ್ರತಿಭಟನೆ ನಡೆಸಿ ಸೂಕ್ತ ಪರಿಹಾರಕ್ಕೆ ಆಗ್ರಹಿಸಿದರು. ಮಾಜಿ ಜಿ.ಪಂ. ಉಪಾಧ್ಯಕ್ಷ ಎಂ. ತುಂಗಪ್ಪ ಬಂಗೇರ ನೇತೃತ್ವದಲ್ಲಿ ತಹಶೀಲ್ದಾರ್‌ ಕಚೇರಿಗೆ ಮುತ್ತಿಗೆ ಹಾಕಲಾಯಿತು. ಜಲ ವಿದ್ಯುತ್‌ […]

ಕದ್ರಿ ಶ್ರೀ ಮಂಜುನಾಥೇಶ್ವರ ದೇವರ ಐತಿಹಾಸಿಕ ಕದ್ರಿ ಕಂಬಳ

Monday, December 5th, 2011
ಕದ್ರಿ ಶ್ರೀ ಮಂಜುನಾಥೇಶ್ವರ ದೇವರ ಐತಿಹಾಸಿಕ ಕದ್ರಿ ಕಂಬಳ

ಮಂಗಳೂರು : ಶ್ರೀ ಕ್ಷೇತ್ರ ಕದ್ರಿ ಶ್ರೀ ಮಂಜುನಾಥೇಶ್ವರ ದೇವರ ಐತಿಹಾಸಿಕ ಕದ್ರಿ ಕಂಬಳವು ಕದ್ರಿ ಕಂಬಳ ಸಮಿತಿ ವತಿಯಿಂದ ಶ್ರೀ ಯೋಗೇಶ್ವರ ಮಠದ ಮಹಂತರಸ ಶ್ರೀ ಸಂದ್ಯಾನಾಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಭಾನುವಾರ ನಡೆಯಿತು. ಮೂಲತಃ ಆಲೂಪ ವಂಶದ ರಾಜರ ಆಶ್ರಯದಲ್ಲಿ ಕದ್ರಿ ಕಂಬಳ ಆರಂಭವಾಗಿದೆಎಂದು ಐತಿಹಾಸಿಕ ದಾಖಲೆಗಳು ಹೇಳುತ್ತವೆ. ಅದಕ್ಕಾಗಿ ಇದನ್ನು ಅರಸು ಕಂಬಳ ಎಂದು ಕರೆಯುತ್ತಾರೆ. ಇದು ಕದಿರೆಯ ಮಂಜುನಾಥ ಸ್ವಾಮಿ ದೇವಸ್ಥಾನ ಬಳಿ ಆರಂಭವಾದ ಕಾರಣ ದೇವರ ಕಂಬಳ ಎಂದು ಕರೆಯುತ್ತಾರೆ. ಪ್ರಸಕ್ತ […]

ವಿಶೇಷ ಮಕ್ಕಳ ಸಾಧನೆಗಳನ್ನು ಸಮರ್ಥರು ಪ್ರೊತ್ಸಾಹಿಸಬೇಕು : ಭಟ್

Sunday, December 4th, 2011
World Disability Day

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತ-ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಅಂಗವಿಕಲರ ಮತ್ತು ನಾಗರಿಕರ ಕಲ್ಯಾಣ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಅಂಗವಿಕಲರ ಫೆಡರೇಷನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ , ಮಂಗಳೂರು ಪುರಭವನದಲ್ಲಿ ವಿಶ್ವ ಅಂಗವಿಕಲ ದಿನಾಚರಣೆಯನ್ನು ಆಚರಿಸಲಾಯಿತು. ಉಪ ಸಭಾಪತಿ ಎನ್ ಯೋಗೀಶ್ ಭಟ್ ಸಾಂಕೇತಿಕವಾಗಿ ದೀಪಬೇಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರೊಂದಿಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತ ಅತಿಥಿಗಳು ಕೈಜೋಡಿಸಿದರು. […]