ನಾಡಿನೆಲ್ಲೆಡೆ ಶೃದ್ದಾ ಭಕ್ತಿಯ ‘ನಾಗರಪಂಚಮಿ’

Thursday, August 4th, 2011
Nagara Panchami/ನಾಗರಪಂಚಮಿ

ಮಂಗಳೂರು : ಇಂದು ದೇಶದಾದ್ಯಂತ ನಾಗರ ಪಂಚಮಿಯನ್ನು ಶೃದ್ದಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ‘ನಾಗರ ಪಂಚಮಿ’ ಕೃಷಿ ಮತ್ತು ಮಳೆಯಿಂದಾಗಿ ಸ್ಥಗಿತಗೊಂಡಿದ್ದ ನಮ್ಮ ಎಲ್ಲ ಶ್ರದ್ಧೆಯ, ಉತ್ಸಾಹದ ಆಚರಣೆಗಳೆಲ್ಲ ಮತ್ತೆ ಆರಂಭವಾಗುವ ಮೊದಲ ಹಬ್ಬ. ನಾಡಿಗೆ ದೊಡ್ಡ ಹಬ್ಬವೆಂದೇ ಪ್ರತೀತಿ. ಆಟಿ ತಿಂಗಳ ಅಮಾವಾಸ್ಯೆ ಯಂದು ಕಹಿ ಮದ್ದು ಸೇವಿಸಿ ನಮ್ಮ ಮೂಲದ ನಾಗನ ಸ್ಥಾನಕ್ಕೆ ಹೊರಡಲು ಸಿದ್ಧತೆಗಳಾಗುತ್ತವೆ. ಮುಂದೆ ಐದನೇ ದಿನ ‘ನಾಗರಪಂಚಮಿ’ ಅಥವಾ ‘ನಾಗ ಪಂಚಮಿ’. ನಾಗನಿಗೆ ಹಲವು ನಾಮಗಳಿವೆ, ಉಭಯ ಜೀವಿಗಳಲ್ಲಿ ಹೆಚ್ಚು ಶಕ್ತಿ […]

ಡಿ.ವಿ. ಸದಾನಂದ ಗೌಡ ಮುಖ್ಯಮಂತ್ರಿ : ಮಂಗಳೂರಿನಲ್ಲಿ ಕಾರ್ಯಕರ್ತರಿಂದ ವಿಜಯೋತ್ಸವ

Thursday, August 4th, 2011
BJP Victory/ಮಂಗಳೂರಿನಲ್ಲಿ ಕಾರ್ಯಕರ್ತರಿಂದ ವಿಜಯೋತ್ಸವ

ಮಂಗಳೂರು : ಡಿ.ವಿ. ಸದಾನಂದ ಗೌಡ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಂಬ್ರಮವನ್ನು ಕೊಡಿಯಾಲ್‌ಬೈಲ್‌ನಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪಕ್ಷ ಕಾರ್ಯಕರ್ತರು ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು. ಮುಖ್ಯಮಂತ್ರಿ ಆಯ್ಕೆಯ ಘೋಷಣೆ ಬಳಿಕ ಬಿಜೆಪಿ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ, ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಶೈಲಜಾ ಭಟ್‌, ಶ್ರೀಕರ ಪ್ರಭು ಮೊದಲಾದವರು ಪರಸ್ಪರ ಸಿಹಿ ಹಂಚಿಕೊಂಡರು. ಬಳಿಕ ಕಚೇರಿಂದ ಹೊರಗೆ ಬಂದು ಸುರಿಯುವ ಮಳೆಯನ್ನೂ ಲೆಕ್ಕಿಸದೆ ಪಟಾಕಿ ಸಿಡಿಸಿದರು. ಡಿ.ವಿ. ಸದಾನಂದ ಗೌಡರ ಭಾವಚಿತ್ರವನ್ನು ಹಿಡಿದು ಜೈಕಾರ ಕೂಗಿದರು. […]

ದೇವರಗುಂಡ ವೆಂಕಪ್ಪ ಸದಾನಂದ ಗೌಡ ಕರ್ನಾಟಕದ 26 ನೇ ಮುಖ್ಯಮಂತ್ರಿ

Wednesday, August 3rd, 2011
DV Sadanandagowda/ದೇವರಗುಂಡ ವೆಂಕಪ್ಪ ಸದಾನಂದ ಗೌಡ

ಬೆಂಗಳೂರು : ಬಿಜೆಪಿಯ ಹಿರಿಯ ನಾಯಕ ಡಿ.ವಿ. ಸದಾನಂದ ಗೌಡ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಸೋತ ಅಭ್ಯರ್ಥಿ ಜಗದೀಶ್ ಶೆಟ್ಟರ್ ಉಪ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲಿನಲ್ಲಿ ಬುಧವಾರ ಮಧ್ಯಾಹ್ನ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ರಹಸ್ಯ ಮತದಾನದ ಮೂಲಕ ಡಿವಿಎಸ್ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಗೊಂಡರು. ಸದಾನಂದ ಗೌಡ ಆಯ್ಕೆ ಮೂಲಕ ನಿರ್ಗಮಿತ ಮುಖ್ಯಮಂತ್ರಿ ಯಡಿಯೂರಪ್ಪ ಬಣ ಮೇಲುಗೈ ಸಾಧಿಸಿದಂತಾಗಿದೆ. ಯಡಿಯೂರಪ್ಪ ಸಹ ಮತ ಚಲಾಯಿಸಿದರು. ಸದಾನಂದ ಗೌಡ ಪರ 62 – […]

ಮುಂಬಯಿ ಕನ್ನಡ ಸಂಸ್ಕೃತಿ ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್‌

Wednesday, August 3rd, 2011
ಮುಂಬಯಿ ಕನ್ನಡ ಸಂಸ್ಕೃತಿ ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್‌

ಮಂಗಳೂರು: ಮುಂಬಯಿಯಲ್ಲಿ ಆ. 6 ಮತ್ತು 7ರಂದು ನಡೆಯಲಿರುವ ಕನ್ನಡ ಸಂಸ್ಕೃತಿ ಸಮ್ಮೇಳನದ ಪತ್ರಿಕಾಗೋಷ್ಠಿ ಮಂಗಳವಾರ ಪತ್ರಿಕಾಭಾವನದಲ್ಲಿ ನಡೆಯಿತು. ಮುಂಬಯಿಯ ಬಿಲ್ಲವ ಭವನ ಸಾಂತಾಕ್ರೂಸ್‌ನಲ್ಲಿ 8ನೇ ಅಖಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಕನ್ನಡ ಸಂಘ ಮತ್ತು ಹೃದಯ ವಾಹಿನಿ ಪತ್ರಿಕೆ ಆಯೋಜಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆ.ಪಿ. ಮಂಜುನಾಥ ಸಾಗರ್‌ ಸಮ್ಮೇಳನದ ಬಗ್ಗೆ ವಿವರಿಸಿದರು. ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್‌ ಅವರನ್ನು ಆಯ್ಕೆ ಮಾಡಲಾಗಿದೆ. ಸಮ್ಮೇಳನದಲ್ಲಿ ಹೊರನಾಡು ಕನ್ನಡಿಗರ ಗೋಷ್ಠಿ, ಹಾಸ್ಯಗೋಷ್ಠಿ, ಕವಿಗೋಷ್ಠಿ, ಮಾಧ್ಯಮ ಗೋಷ್ಠಿ, ಪ್ರಶಸ್ತಿ […]

ಜಿಲ್ಲಾ ಪಂಚಾಯತ್ ಸಿಇಒ ಆಗಿ ಡಾ. ಕೆ.ಏನ್. ವಿಜಯಪ್ರಕಾಶ್‌ ಅಧಿಕಾರ ಸ್ವೀಕಾರ

Tuesday, August 2nd, 2011
KN-Vijayaprakash/ಡಾ. ಕೆ.ಏನ್. ವಿಜಯಪ್ರಕಾಶ್‌

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಆಯಕ್ತರಾಗಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಡಾ. ವಿಜಯಪ್ರಕಾಶ್‌ ಸೋಮವಾರ ಜಿ.ಪಂ. ಸಿಇಒ ಆಗಿ ಅಧಿಕಾರ ವಹಿಸಿಕೊಂಡರು. ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಆಡಳಿತದಲ್ಲಿ ಪಾರದರ್ಶಕತೆಗೆ ಆದ್ಯತೆ ಹಾಗೂ ಗ್ರಾಮೀಣ ಪ್ರದೇಶದ ಸಮಗ್ರ ಅಭಿವೃದ್ಧಿಯನ್ನು ಕೇಂದ್ರೀಕರಿಸಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಜ್ಯಾರಿ ಗೊಳಿಸುವುದಾಗಿ ಅವರು ಹೇಳಿದರು. ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಕುಡಿಯುವ ನೀರಿನ ಕೊರತೆ ಮತ್ತು ಉತ್ತಮ ರಸ್ತೆ ಸೌಲಭ್ಯಗಳಿಂದ ವಂಚಿತವಾಗಿವೆ. ಮೂಲ ಸೌಕರ್ಯಗಳ ಅಭಿವೃದ್ಧಿ, ಸಂಪೂರ್ಣ ನೈರ್ಮಲೀಕರಣಕ್ಕೆ […]

ಪಿಲಿಕುಳ 35ಕ್ಕಿಂತಲೂ ಅಧಿಕ ಕಾಳಿಂಗ ಸರ್ಪದ ಮರಿಗಳ ಸಂತಾನೋತ್ಪತ್ತಿ

Tuesday, August 2nd, 2011
Pilikula-Snake/ಪಿಲಿಕುಳ ಕಾಳಿಂಗ ಸರ್ಪದ ಮರಿಗಳ ಸಂತಾನೋತ್ಪತ್ತಿ

ಮಂಗಳೂರು: ಪಿಲಿಕುಳ ನಿಸರ್ಗಧಾಮ ಈಗ ಮತ್ತಷ್ಟು ಆಕರ್ಷಣೀಯವಾಗಿದೆ. ಇಲ್ಲಿನ ಡಾ| ಶಿವರಾಮ ಕಾರಂತ ಜೈವಿಕ ಉದ್ಯಾನವನದ ಕಾಳಿಂಗ ಸರ್ಪ ಸಂತಾನೋತ್ಪತ್ತಿ ಕೇಂದ್ರದಲ್ಲಿ ಎರಡೂವರೆ ತಿಂಗಳ ಹಿಂದೆ ಮೂರು ಕಾಳಿಂಗ ಸರ್ಪಗಳು ಇಟ್ಟಿದ್ದ 82 ಮೊಟ್ಟೆಗಳ ಪೈಕಿ ಇದೀಗ 35ಕ್ಕಿಂತಲೂ ಅಧಿಕ ಮರಿಗಳು ಹೊರ ಬಂದಿದ್ದು ಉದ್ಯಾವವನದ ಸರ್ಪ ಸಂತತಿ ವೃದ್ದಿಸಿದೆ. ಪಿಲಿಕುಳದಲ್ಲಿ ಒಟ್ಟು 14 ಕಾಳಿಂಗ ಸರ್ಪಗಳಲ್ಲಿ 9 ಗಂಡು, 5 ಹೆಣ್ಣು. ನಾಗಮಣಿ, ನಾಗವೇಣಿ, ರಾಣಿ ಇವು ಮೊಟ್ಟೆ ಇಟ್ಟಿರುವ ಸರ್ಪಗಳು. ಈ ಪೈಕಿ ನಾಗಿಣಿ […]

ಅಮ್ಮಂದಿರಲ್ಲಿ ಮೂಢನಂಬಿಕೆ ಅಳಿದು ಉತ್ತಮ ಅರಿವು ಮೂಡಬೇಕು :ಜಿಲಾನಿ

Monday, August 1st, 2011
paustika

ಮಂಗಳೂರು : ಎದೆಹಾಲು ಅತ್ಯುತ್ತಮ ಪೌಷ್ಠಿಕ ಆಹಾರವಾಗಿದ್ದು, ಮಗು ಹುಟ್ಟಿದ ತಕ್ಷಣ ಹಾಲುಣಿಸುವ ಬಗ್ಗೆ ತಾಯಂದಿರಿಗೆ ಮಾಹಿತಿ ನೀಡಬೇಕಾದ ಅಗತ್ಯವಿದೆ ಎಂದು ಯೆನಪೋಯ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಗುಲಾಮ್ ಜಿಲಾನಿ ಖಾದಿರಿ ಹೇಳಿದರು. ಇಂದು ಯೆನಪೋಯಾ ಕಾಲೇಜಿನ ಅಕಾಡೆಮಿಕ್ ಬ್ಲಾಕ್ ನಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಆಹಾರ ಮತ್ತು ಪೌಷ್ಠಿಕತಾ ಮಂಡಳಿ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮುದಾಯ ಆಹಾರ ಮತ್ತು ಪೌಷ್ಠಿಕ ವಿಸ್ತರಣಾ ಘಟಕ ಬೆಂಗಳೂರು ಮತ್ತು ಯೆನಪೋಯ ಮೆಡಿಕಲ್ ಕಾಲೇಜಿನ […]

ಇಂದಿನಿಂದ ಪವಿತ್ರ ರಂಜಾನ್‌ ಉಪವಾಸ ಆರಂಭ

Monday, August 1st, 2011
Ramadan/ ರಂಜಾನ್‌ ಉಪವಾಸ

ಮಂಗಳೂರು: ರವಿವಾರ ರಾತ್ರಿ ಚಂದ್ರದರ್ಶನ ಆದ ಪ್ರಯುಕ್ತ ಕರಾವಳಿಯಾದ್ಯಂತ ಸೋಮವಾರದಿಂದ ಪವಿತ್ರ ರಂಜಾನ್‌ ಉಪವಾಸ ಆಚರಿಸಲಾಗುವುದು ಎಂದು ಮಂಗಳೂರಿನ ಖಾಝಿ ತ್ವಾಕ ಅಹಮದ್‌ ಮುಸ್ಲಿಯಾರ್‌ ತಿಳಿಸಿದ್ದಾರೆ. ರವಿವಾರ ರಾತ್ರಿಯಿಂದಲೇ ವಿಶೇಷ ತರಾವಿಹ ನಮಾಜು ಹಾಗೂ ವಿಶೇಷ ಪ್ರಾರ್ಥನೆಗಳು ಆರಂಭವಾಗಿದ್ದು, ಇಂದಿನಿಂದ (ಆಗಸ್ಟ್ ೧ ರಿಂದ) ಮುಸ್ಲಿಂ ಶ್ರುದ್ದಾಳುಗಳು ಉಪವಾಸ ಆಚರಿಸುತ್ತಾರೆ ಎಂದು ಅವರು ಹೇಳಿದರು. ಉಡುಪಿಯಲ್ಲಿಯೂ ರವಿವಾರ ಚಂದ್ರದರ್ಶನ ಆಗಿದ್ದು ಆ.1ರಿಂದ ರಂಜಾನ್‌ ವ್ರತಾಚರಣೆ ಆರಂಭಗೊಳ್ಳಲಿದೆ ಎಂದು ಉಡುಪಿ ಜಿಲ್ಲಾ ಸುನ್ನಿ ಜಮಾತ್‌ನ ಸಂಯುಕ್ತ ಖಾಝಿ ಮೌಲಾನಾ […]

ತಾಯಿ-ಮಗಳ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ಡಿವೈಎಫ್‌ಐನಿಂದ ಪ್ರತಿಭಟನೆ

Monday, August 1st, 2011
Murder-case/ ತಾಯಿ-ಮಗಳ ಕೊಲೆ

ಮಂಗಳೂರು : ಪಂಜಿ ಮೊಗರಿನ ತಾಯಿ-ಮಗಳ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಡಿವೈಎಫ್‌ಐ ದ.ಕ. ಜಿಲ್ಲಾ ಘಟಕದ ವತಿಯಿಂದ ಭಾನುವಾರ ಕಾವೂರು ಜಂಕ್ಷನ್‌ ಬಳಿ ಧರಣಿ ನಡೆಸಲಾಯಿತು. ಅದಕ್ಕೂ ಮೊದಲು ಪಂಜಿಮೊಗರಿನಿಂದ ಕಾವೂರು ಜಂಕ್ಷನ್‌ವರೆಗೆ ಮೆರವಣಿಗೆ ನಡೆಸಲಾಯಿತು. ಡಿವೈಎಫ್‌ಐ ಜಿಲ್ಲಾ ಅಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ ಮಂಗಳೂರು ಪೊಲೀಸರಿಗೆ ಕೊಲೆ ನಡೆದು ತಿಂಗಳು ಕಳೆದರೂ ಕೊಲೆಯ ಕಾರಣ ಹಾಗೂ ಕೊಲೆಗಾರರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಮಂಗಳೂರು ಪೊಲೀಸರಿಂದ ವರ್ಷ ಕಳೆದರೂ ಈ ಪ್ರಕರಣ […]

‘ಸಂತೋಷ’ದಿಂದ ಹೋಗುತ್ತಿದ್ದೇನೆ. ಹುದ್ದೆ ಇಲ್ಲದಿದ್ದರೂ, ಪಕ್ಷದ ಅಭಿವೃದ್ಧಿಗೆ ನಿರಂತರ ದುಡಿಯುತ್ತೇನೆ: ಯಡಿಯೂರಪ್ಪ

Sunday, July 31st, 2011
CM Yeddyurappa Resigns/ಯಡಿಯೂರಪ್ಪ ರಾಜೀನಾಮೆ

ಬೆಂಗಳೂರು : ದಕ್ಷಿಣ ಭಾರತದ ಪ್ರಪ್ರಥಮ ಬಿಜೆಪಿ ಸರ್ಕಾರದ ಮುಖ್ಯ ಮಂತ್ರಿ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರು ಸಂಜೆ 3.30ರ ಸುಮಾರಿಗೆ ತಮ್ಮ ಅಸಂಖ್ಯ ಬೆಂಬಲಿಗರೊಂದಿಗೆ ಅಧಿಕೃತ ನಿವಾಸದಿಂದ ರೇಸ್ ಕೋರ್ಸ್ ರಸ್ತೆಯ ಮೂಲಕ ಹೊರಟು ರಾಜಭವನದಲ್ಲಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ತಮ್ಮ ಒಂದು ವಾಕ್ಯದ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಸಂವಿಧಾನದ ಕಲಂ 164(1)ರ ಅನ್ವಯ ಯಡಿಯೂರಪ್ಪ ಅವರ ರಾಜೀನಾಮೆಯನ್ನು ಸ್ವೀಕರಿಸಿ, ಅಂಗೀಕಾರ ಮುದ್ರೆ ಒತ್ತಿದ್ದಾರೆ. ಹೊಸ ನಾಯಕನ ಆಯ್ಕೆಯಾಗುವವರೆಗೂ […]