ನರಹರಿ ಬೆಟ್ಟದ ಸದಾಶಿವ ದೇವಸ್ಥಾನದಲ್ಲಿ ಅಸಂಖ್ಯಾತ ಭಕ್ತರಿಂದ ಆಟಿ ಅಮಾವಾಸ್ಯೆ ತೀರ್ಥಸ್ನಾನ
Sunday, July 31st, 2011ವಿಟ್ಲ: ಭೂ ಲೋಕದ ಕೈಲಾಸ ಎಂದೇ ಪ್ರಸಿದ್ದವಾಗಿರುವ ತಾಣ ನರಹರಿ ಪರ್ವತ ಸದಾಶಿವ ದೇವಸ್ಥಾನದಲ್ಲಿ ಶನಿವಾರ ಭಕ್ತರು ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ಶ್ರದ್ದಾ ಭಕ್ತಿಯಿಂದ ಆಟಿ ಅಮಾವಾಸ್ಯೆ ತೀರ್ಥಸ್ನಾನ ಮಾಡಿದರು. ನರಹರಿ ಬೆಟ್ಟ ಸಮುದ್ರ ಮಟ್ಟದಿಂದ ಸಾವಿರ ಅಡಿಗೂ ಹೆಚ್ಹು ಎತ್ತರದಲ್ಲಿದ್ದು ಪ್ರಕೃತಿಯ ಸೌಂದರ್ಯದ ನಡುವೆ ಸದಾಶಿವ ದೇವರ ಸಾನಿಧ್ಯವಿದೆ. ತುಳು ಪರಂಪರೆಯ ಆಟಿ ಅಮಾವಾಸ್ಯೆ ತೀರ್ಥಸ್ನಾನದ ಪವಿತ್ರ ದಿನದಂದು ಮುಂಜಾನೆಯೇ ಅಸಂಖ್ಯಾತ ಭಕ್ತರು ಮುಖ್ಯವಾಗಿ ನವವಧೂವರರು ನರಹರಿ ಪರ್ವತ ಏರಿ ಶಂಖ, ಚಕ್ರ, ಗದಾ, ಪದ್ಮಗಳೆಂಬ […]