ಮಂಗಳೂರು : ಚಿನ್ನಾಭರಣ ಮಳಿಗೆಯ 1ಕೋಟಿ 75 ಲಕ್ಷ ವಶ, ಇಬ್ಬರ ಬಂಧನ

Monday, November 5th, 2018
police commissioner

ಮಂಗಳೂರು : ಕಾರ್ ಸ್ಟ್ರೀಟ್ ನ ವೈಷ್ಣವಿ ಆಭರಣಗಳ ಮಳಿಗೆ ಮಾಲಕರಿಗೆ ಸೇರಿದ 1ಕೋಟಿ 75 ಲಕ್ಷ ರೂಪಾಯಿ ಹಣ ದರೋಡೆ ಪ್ರಕರಣಕ್ಕೆ ಸಂಭಂದಿಸಿದ ಇಬ್ಬರು ಆರೋಪಿಗಳನ್ನು ಉರ್ವ ಪೊಲೀಸ್, ಸಿಸಿಬಿ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಅಕ್ಟೋಬರ್ 26 ರಂದು ಮುಂಬೈಯಿಂದ ಮಂಗಳೂರಿಗೆ ಚಿನ್ನಾಭರಣ ಮಾರಿ ಹಣ ತರುತ್ತಿದ್ದ ವೇಳೆ  ಮಂಗಳೂರಿನ ಲೇಡಿಹಿಲ್ ನಲ್ಲಿ  ಮಂಜುನಾಥ್ ಗಣಪತಿ ಎಂಬುವವರನ್ನು ಬೆದರಿಸಿ ಚಿನ್ನಾಭರಣಗಳ ಮಳಿಗೆ ಕೆಲಸದಾಳುವಾಗಿದ್ದ ಮಂಜುನಾಥ್ ಮತ್ತು ಇತರರು ಹೊಂಚು ಹಾಕಿ ಕುಳಿತು 1ಕೋಟಿ 75 ಲಕ್ಷ ರೂಪಾಯಿ ದರೋಡೆ ಮಾಡಿದ್ದರು. ಮಂಜುನಾಥ್ ಗಣಪತಿ ಎಂಬುವವರು ನೀಡಿದ್ದ ದೂರಿನ ಮೇಲೆ […]

ರಾಮನಗರದಲ್ಲಿ ನಮಗೆ ಯಾವುದೇ ಭಯವಿಲ್ಲ: ಅನಿತಾ ಕುಮಾರಸ್ವಾಮಿ

Monday, November 5th, 2018
anitha-kumarswamy

ಹಾಸನ: ರಾಮನಗರದಲ್ಲಿ ನಮಗೆ ಯಾವುದೇ ಭಯವಿಲ್ಲ, ಎಲ್ಲವನ್ನೂ ಎದುರಿಸಲು ಸಿದ್ಧವಿದ್ದೇವೆ ಎಂದು ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು. ಹಾಸನಾಂಬೆ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಮನಗರ ಅಷ್ಟೇ ಅಲ್ಲ, ಉಳಿದ ನಾಲ್ಕು ಕಡೆಗಳಲ್ಲಿ ಮೈತ್ರಿ ಅಭ್ಯರ್ಥಿಗಳಿಗೆ ಜಯ ಸಿಗಲಿದೆ. ಚುನಾವಣಾ ಕಣಕ್ಕೆ ಬರುವ ಬಗ್ಗೆ ಮಾತುಕತೆ ಆಗಿಲ್ಲ. ಮುಂದೆ ಏನು ಆಗುತ್ತೋ ನನಗೆ ಗೊತ್ತಿಲ್ಲ. ನಾನು ಕೂಡ ರಾಜಕೀಯ ಪ್ರವೇಶ ಮಾಡುತ್ತೇನೆಂದು ಅಂದುಕೊಂಡಿರಲಿಲ್ಲ. ನನ್ನ ಮಗ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕ್ರಿಯಾಶೀಲವಾಗಿ ಕೆಲಸ […]

ಸ್ಕೂಟಿಗೆ ಪೆಟ್ರೋಲ್ ಹಾಕಿಸಿ ಹಣ ನೀಡದೆ ಯುವಕನೋರ್ವ ಪರಾರಿ..!

Monday, November 5th, 2018
petrol

ಚಿಕ್ಕಮಗಳೂರು: ಸ್ಕೂಟಿಗೆ ಪೆಟ್ರೋಲ್ ಹಾಕಿಸಿ ಹಣ ನೀಡದೆ ಯುವಕನೋರ್ವ ಪರಾರಿಯಾದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಈ ಘಟನೆ ನಡೆದಿದ್ದು, ಬಾಳೆಹೊನ್ನೂರಿನ ಶ್ರೀರಂಭಾಪುರಿ ಸವಿ೯ಸ್ ಸ್ಟೇಷನ್ಗೆ ಸ್ಕೂಟಿಯಲ್ಲಿ ಬಂದ ಯುವಕ 300 ರೂ. ಪೆಟ್ರೋಲ್ ಹಾಕಿಸಿ ಹಣ ಪಾವತಿಸದೆ ಪರಾರಿಯಾಗಿದ್ದಾನೆ. ಹಣ ನೀಡದೆ ಯುವಕ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮೊದಲಿಗೆ ಎಟಿಎಂ ಕಾರ್ಡ್ ಕೊಟ್ಟಿದ್ದಾನೆ. ಆದರೆ ಅದರಲ್ಲಿ ಹಣ ಇಲ್ಲದ ಕಾರಣ ಪೆಟ್ರೋಲ್ ಬಂಕ್ನವರು ಯುವಕನ ಬಳಿ ಹಣ ಕೇಳಿದ್ದಾರೆ. […]

ಬುದ್ಧಿ ಹೇಳಿದ್ದಕ್ಕೆ ಮನೆ ಬಿಟ್ಟು ಹೋದ ಮಕ್ಕಳು..ಪೋಷಕರಿಂದ ಹುಡುಕಾಟ!

Monday, November 5th, 2018
childrens

ಮೈಸೂರು: ಮನೆಯಲ್ಲಿದ್ದ 100 ರೂಪಾಯಿಯನ್ನು ಖರ್ಚು ಮಾಡಿದ್ದಕ್ಕೆ ತಂದೆ ತಾಯಿ ಬುದ್ಧಿ ಹೇಳಿದ ಕಾರಣ, ಇಬ್ಬರು ಮಕ್ಕಳು ಮನೆ ಬಿಟ್ಟು ಹೋದ ಘಟನೆ ಮೈಸೂರಿನಲ್ಲಿ ನಡೆದಿದೆ. ನಗರದ ಎನ್.ಆರ್.ಮೊಹಲ್ಲಾದಲ್ಲಿ ವಾಸವಾಗಿರುವ ನಾಗರಾಜು ಮತ್ತು ಸೌಮ್ಯ ದಂಪತಿಯ ಮಕ್ಕಳಾದ ಐಶ್ವರ್ಯ(14) ಹಾಗೂ ನಕುಲ್(12) ಬುದ್ದಿ ಹೇಳಿದ್ದಕ್ಕೆ ಬೇಸರಗೊಂಡು ಮನೆಬಿಟ್ಟು ಹೋದ ಮಕ್ಕಳು. ಅಕ್ಟೋಬರ್ 28ರಂದು ಮಕ್ಕಳು ಮನೆಯಲ್ಲಿದ್ದ 100 ರೂಪಾಯಿಯನ್ನು ಖರ್ಚು ಮಾಡಿದ್ದಾರೆ. ಇದಕ್ಕೆ ಮನೆಯಲ್ಲಿ ಹೀಗೇ ಮಾಡಬೇಡಿ ಎಂದು ತಂದೆತಾಯಿ ಬುದ್ಧಿ ಹೇಳಿದ್ದಾರೆ. ತಂದೆ ತಾಯಿಯ ಈ […]

ಸಮಾರಂಭದಲ್ಲಿ ರೇವಣ್ಣನ ಹಾಡಿ ಹೊಗಳಿದ ಜಯಮಾಲ

Monday, November 5th, 2018
jayamala

ಹಾಸನ: ಸರ್ಕಾರ ನೀಡುವ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿಯನ್ನು ಜೈನಕಾಶಿಯ ಪೀಠಾಧ್ಯಕ್ಷ ಚಾರುಕೀರ್ತಿ ಭಟ್ಟಾರಕ ಸ್ವಾಮಿಜೀಯವರಿಗೆ ಪ್ರದಾನ ಮಾಡಲಾಯ್ತು. ಕರ್ನಾಟಕ ಸರ್ಕಾರದ ಪರವಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಜಯಮಾಲಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರೇವಣ್ಣ ಸೇರಿ ಹಲವು ಗಣ್ಯರು ಪ್ರಶಸ್ತಿಯನ್ನ ಪ್ರಧಾನ ಮಾಡಿದರು. ಈ ವೇಳೆ ಸಚಿವೆ ಜಯಮಾಲಾ ರೇವಣ್ಣನನ್ನ ಹಾಡಿ ಹೊಗಳಿದ ಘಟನೆ ಕೂಡಾ ನಡೆಯಿತು. ಹೆಚ್.ಡಿ.ರೇವಣ್ಣನವರು ಹಿಡಿದ ಕೆಲಸವನ್ನ ಎಂದು ಬಿಡುವವರಲ್ಲ. ಅದು ಯಾವುದೇ ಸರ್ಕಾರವಿದ್ರು ಕೂಡಾ […]

ಹೊಳೆಯಲ್ಲಿ ಸ್ನಾನಕ್ಕಿಳಿದಿದ್ದ ಯುವಕ ಮುಳುಗಿ ಸಾವು

Monday, November 5th, 2018
mangalore

ಮಂಗಳೂರು: ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಯುವಕ ಹೊಳೆಯಿಂದ ಮೇಲೆ ಬರಲಾಗದೆ ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ದರ್ಖಾಸ್ ಹೊಳೆಯಲ್ಲಿ ನಡೆದಿದೆ.‌ ಸ್ಟೀವನ್ (24) ಮೃತ ಯುವಕ. ಈತ ಬೆಳ್ತಂಗಡಿ ಕನ್ನಾಜೆ ನಿವಾಸಿಯಾಗಿದ್ದು, ಮೂವರು ಗೆಳೆಯರ ಜೊತೆ ಸ್ನಾನ ಮಾಡಲು ಹೊಳೆಗೆ ಹೋಗಿದ್ದಾಗ ಈ ಘಟನೆ ಸಂಭವಿಸಿದೆ. ಸ್ಥಳೀಯ ಈಜುಗಾರ ಇಸ್ಮಾಯಿಲ್ ಸಂಜಯ್ ನಗರ ಅವರು ನೀರಿನಲ್ಲಿ ಮುಳುಗಿದ್ದ ಸ್ಟೀವನ್ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೂಪರ್ ಮಾರ್ಕೆಟ್ ಬಳಿ ಗಾಂಜಾ ಸೇವನೆ: ಇಬ್ಬರ ಆರೋಪಿಗಳ ಬಂಧನ

Monday, November 5th, 2018
ganja

ಮಂಗಳೂರು: ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಚಿಲಿಂಬಿ ಮೋರ್ ಸೂಪರ್ ಮಾರ್ಕೆಟ್ ಬಳಿ ಗಾಂಜಾ ಸೇವನೆಯಲ್ಲಿ ತೊಡಗಿದ್ದ 02 ಜನರನ್ನು ಆರೋಪಿತರನ್ನು ಕೇಂದ್ರ ಉಪವಿಭಾಗದ ರೌಡಿ ನಿಗ್ರಹ ದಳದ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿರುತ್ತಾರೆ. ಖಲೀಲ್ ಕಾಲಿದ್ ಕುಂಜತ್ತೂರು, ಪ್ರಾಯ 23, ತಂದೆ- ಖಾಲಿದ್, ವಾಸ- ಮರಿಮಾರ್ ಗುಡ್ಡ ಮಜಲ್, ಜಿ.ಎಲ್.ಪಿ ಶಾಲೆ ಬಳಿ, ಕಣ್ವತೀರ್ಥ, ಕುಂಜತ್ತೂರು, ಮಂಜೇಶ್ವರ, ಕೇರಳ ರಾಜ್ಯ, ಅಬ್ದುಲ್ ನಾಸೀರ್ ಇಬ್ರಾಹಿಂ, ಪ್ರಾಯ 22, ತಂದೆ- ಇಬ್ರಾಹಿಂ, ವಾಸ- ಮಜಲ್ ಹೌಸ್, ಎಂ.ಎಂ […]

ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಕುರಾನ್ ವಾಚಿಸಿದ ಖಾದರ್​ ಪುತ್ರಿ

Monday, November 5th, 2018
u-t-khader

ಮಂಗಳೂರು: ದುಬೈಯಲ್ಲಿ ಹನ್ನೆರಡು ದಿನಗಳ ಕಾಲ ನಡೆಯುವ ಅಂತಾರಾಷ್ಟ್ರೀಯ ಕುರಾನ್ ಸ್ಪರ್ಧೆಯಲ್ಲಿ ಸಚಿವ ಯು.ಟಿ. ಖಾದರ್ ಪುತ್ರಿ ಹವ್ವಾ ನಸೀಮಾ ಇಂದು ಪಾಲ್ಗೊಂಡರು. ದುಬೈ ಸರ್ಕಾರವು ಅಲ್ ಮಮ್ಝಾರ್ನಲ್ಲಿ ನಿರ್ಮಿಸಿರುವ ಜಾಗತಿಕ ಮಟ್ಟದ ವೇದಿಕೆಯಲ್ಲಿ ಕುಳಿತು ಸಚಿವ ಯು.ಟಿ. ಖಾದರ್ ಪುತ್ರಿ ಹಾಫಿಝಾ ಹವ್ವಾ ನಸೀಮಾ ಅವರು ಮೊದಲನೇ ಸುತ್ತಿನಲ್ಲಿ ಕುರಾನ್ ಪಠಿಸಿದರು. ವಿಶ್ವದ 104 ರಾಷ್ಟ್ರಗಳ 25 ವರ್ಷದೊಳಗಿನ 150 ಯುವತಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಯುಎಇ ಉಪಾಧ್ಯಕ್ಷರು ಮತ್ತು ಪ್ರಧಾನ ಮಂತ್ರಿ ಶೇಖ್ ಮುಹಮ್ಮದ್ […]

ತುಳುನಾಡ ರಕ್ಷಣಾ ವೇದಿಕೆಯಿಂದ ಗಾಯಕ ಗಿರೀಶ್ ರವರಿಗೆ ಸನ್ಮಾನ

Sunday, November 4th, 2018
Yogish-shetty

ಮಂಗಳೂರು  : ತುಳುನಾಡ ರಕ್ಷಣಾ ವೇದಿಕೆ (ರಿ) ಇದರ  ಕಲಾವಿದರ ಘಟಕ  ಸಭೆಯು ತುರವೇ ಕೇಂದ್ರ ಕಛೇರಿಯಲ್ಲಿ ದಿನಾಂಕ 4-11-2018 ಆದಿತ್ಯವಾರ ಬೆಳಿಗ್ಗೆ 10:00 ಕ್ಕೆ ಸರಿಯಾಗಿ ನಡೆಯಿತು, ಈ ಸಭೆಯಲ್ಲಿ 2018-19 ರ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವ ಅಧ್ಯಕ್ಷರಾಗಿ ಸುಭಾಷ್ ಶೆಟ್ಟಿ, ಅಧ್ಯಕ್ಷರಾಗಿ ದಿನೇಶ್ ಕಾಪಿಕಾಡ್, ಉಪಾಧ್ಯಕ್ಷರಾಗಿ ದಿನೇಶ್ ಧರ್ಮಸ್ಥಳ, ಪ್ರಧಾನ ಕಾರ್ಯದರ್ಶಿಯಾಗಿ ರಂಜಿತ್ ಕುಡ್ಲ, ಜೊತೆ ಕಾರ್ಯದರ್ಶಿಗಳಾಗಿ ಪ್ರಮೋದ್ ಭಟ್, ನಮಿತ ಕೂಳೂರು,ಸಂಘಟನಾ ಕಾರ್ಯದರ್ಶಿಯಾಗಿ ಸುಪ್ರೀತ್ ಕುತ್ತಾರ್, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಆಶೀಶ್ […]

ಈ ಬಾರಿಯ ದೀಪಾವಳಿಗೆ ಮಂಗಳೂರಿಗೆ ಬಂದಿದೆ ಸ್ವದೇಶಿ ನಿರ್ಮಿತ ಆಕಾಶ ಬುಟ್ಟಿಗಳು

Saturday, November 3rd, 2018
VivekTraders

ಮಂಗಳೂರು  : ದೀಪಗಳ ಹಬ್ಬ ದೀಪಾವಳಿಗೆ ಇನ್ನೇನೂ ಬೆರಳೆಣಿಕೆಯಷ್ಟು ದಿನಗಳು ಮಾತ್ರ ಬಾಕಿ ಇದ್ದು, ಎಲ್ಲರ ಮನೆಯನ್ನೂ ಬೆಳಗಿಸಲೂ ಇದೀಗ ಸ್ವದೇಶಿ ನಿರ್ಮಿತ ಆಕಾಶ ಬುಟ್ಟಿಗಳು ವಿಶಿಷ್ಟ ಚಿತ್ತಾರದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಮನೆಯಲ್ಲೆ ತಯಾರಿಸಬಹುದಾದ ಈ ಆಕಾಶ ಬುಟ್ಟಿಯನ್ನು ನಾವು ಇಲ್ಲಿಯವೆರೆಗೆ ಚೀನಾದಿಂದ ಖರೀದಿ ಮಾಡಿಕೊಳ್ಳಬಹುದಾದ ಪರಿಸ್ಥಿತಿ ಬಂದೊಂದಗಿತ್ತು!! ಆದರೆ ಈ ಬಾರಿ ಚೀನಾದ ಆಕಾಶ ಬುಟ್ಟಿಗೆ ಗುಡ್ ಬೈ ಹೇಳುವ ಸಂದರ್ಭ ಬಂದಿದ್ದು ಸಮರ್ಪಣಾ ಟ್ರಸ್ಟ್ ನಿಂದ ಮಾರುಕಟ್ಟೆಗೆ ಬಣ್ಣ ಬಣ್ಣದ ಆಕಾಶ ಬುಟ್ಟಿಗಳನ್ನು ಪರಿಚಯಿಸಿದ್ದಾರೆ. […]