ಫಿಫಾ ವಿಶ್ವಕಪ್…ಬ್ರೆಜಿಲ್​ ತಂಡವನ್ನು 2-1ರ ಅಂತರದಲ್ಲಿ ಸೋಲಿಸಿದ ಬೆಲ್ಜಿಯಂ ಸೆಮೀಸ್​ಗೆ ಲಗ್ಗೆ!

Saturday, July 7th, 2018
belgium

ಮಾಸ್ಕೋ: ಫಿಫಾ ವಿಶ್ವಕಪ್ ಫುಟ್ಬಾಲ್ 2018 ರ ಎರಡನೇ ಕ್ವಾರ್ಟರ್ ಫೈನಲ್ ಪಂದ್ಯ ರೋಚಕವಾಗಿ ಅಂತ್ಯವಾಗಿದೆ. ಬ್ರೆಜಿಲ್ ತಂಡವನ್ನು 2-1ರ ಅಂತರದಲ್ಲಿ ಸೋಲಿಸಿದ ಬೆಲ್ಜಿಯಂ ಸೆಮೀಸ್ಗೆ ಲಗ್ಗೆ ಇಟ್ಟಿದೆ. ಭಾರೀ ಜಿದ್ದಾಜಿದ್ದಿನಿಂದ ಕೂಡಿದ್ದ ಎರಡನೇ ಕ್ವರ್ಟರ್ ಫೈನಲ್ ಪಂದ್ಯದಲ್ಲಿ ಆರಂಭದಿಂದಲೇ ಬೆಲ್ಜಿಯಂ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಬೆಲ್ಜಿಯಂ ಪರ ಫೆರ್ನಾಂಡಿನ್ಹೋ 13ನೇ ನಿಮಿಷದಲ್ಲಿ ಗೋಲ್ ಗಳಿಸುವುದರ ಮೂಲಕ ಪಂದ್ಯದಲ್ಲಿ ತಂಡ ಮೇಲುಗೈ ಸಾಧಿಸುವಂತೆ ಮಾಡಿದರು. ಅನಂತರದಲ್ಲಿ ಅಂದರೆ 31 ನೇ ನಿಮಿಷದಲ್ಲಿ ಬೆಲ್ಜಿಯಂನ ಮತ್ತೊಬ್ಬ ಆಟಗಾರ […]

2018ರ ಐಪಿಎಲ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ ಚೆನ್ನೈ ಸೂಪರ್‌ಕಿಂಗ್ಸ್‌..!

Monday, May 28th, 2018
chennai-super-kings

ಮುಂಬೈ: ಶೇನ್‌ ವಾಟ್ಸನ್‌ ಸಿಡಿಲಬ್ಬರದ ಶತಕದ(117) ನೆರವಿನಿಂದ ಚೆನ್ನೈ ಸೂಪರ್‌ಕಿಂಗ್ಸ್‌ ತಂಡ ಸನ್‌ರೈಸರ್ಸ್‌ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ 2018 ರ ಐಪಿಎಲ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. 179 ರನ್‌ಗಳ ಟಾರ್ಗೆಟ್‌ ಪಡೆದ ಚೆನ್ನೈ ನಿಧಾನಗತಿ ಆರಂಭ ಪಡೆಯಿತಲ್ಲದೆ ಆರಂಭಿಕ ಪ್ಲೆಸಿಸ್‌(10) ವಿಕೆಟ್‌ ಕಳೆದುಕೊಂಡು ಆಘಾತಕ್ಕೊಳಗಾಯಿತು. ಆದರೆ 5 ಓವರ್‌ನಿಂದ ತಮ್ಮ ನೈಜ ಆಟಕ್ಕೆ ಮರಳಿದ ವಾಟ್ಸನ್‌ ಸಿಡಿಲಬ್ಬರದ ಶತಕ(117) ಸಿಡಿಸಿದರು. ಎರಡನೇ ವಿಕೆಟ್‌ ಜೊತೆಯಾಟದಲ್ಲಿ ಸುರೇಶ್‌ ರೈನಾ ಜೊತೆ 117 ರನ್‌ಗಳ ಜೊತೆಯಾಟ […]

ಇಂದಿನಿಂದ ಐಪಿಎಲ್‌ ಅಬ್ಬರ ಶುರು… ಮೊದಲ ಪಂದ್ಯದಲ್ಲೇ ಹಾಲಿ-ಮಾಜಿ ಚಾಂಪಿಯನ್ಸ್‌ ಫೈಟ್‌‌!

Saturday, April 7th, 2018
rohith

ಮುಂಬೈ: ಕ್ರಿಕೆಟ್ ಅಭಿಮಾನಿಗಳ ಭಾವಾವೇಶ, ಮನರಂಜನೆ, ಉತ್ಸುಕತೆಗೆ ಕಾರಣವಾದ ಐಪಿಎಲ್ ಟಿ-20 ಟೂರ್ನಿ ಇಂದಿನಿಂದ ಆರಂಭಗೊಳ್ಳಲಿದ್ದು, ವಿಶ್ವದ ಶ್ರೀಮಂತ ಟಿ-20 ಟೂರ್ನಿಯ 11ನೇ ಆವೃತ್ತಿಗೆ ಮುಂಬೈನಲ್ಲಿ ಇಂದು ಸಂಜೆ ವಿದ್ಯುಕ್ತ ಚಾಲನೆ ಸಿಗಲಿದೆ. ಕ್ರಿಕೆಟಿಗರಿಗೆ ಬದುಕು ಕಟ್ಟಿಕೊಟ್ಟ, ಅವಕಾಶಗಳ ಹೆಬ್ಬಾಗಿಲು ತೆರೆಯುವಂತೆ ಮಾಡಿದ, ಖ್ಯಾತಿ-ಕೀರ್ತಿ ತಂದುಕೊಟ್ಟ, ವಿವಾದಗಳಿಂದಲೂ ಸದ್ದು ಮಾಡಿದ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌)ನ 11ನೇ ಆವೃತ್ತಿಯ ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಹಾಗೂ ಮಾಜಿ ಚಾಂಪಿಯನ್ ಚೆನ್ನೈ ಸೂಪರ್‌ ಕಿಂಗ್ಸ್ ತಂಡಗಳು ಸೆಣಸಾಟ […]

ಏಷ್ಯನ್ ಕ್ರೀಡಾಕೂಟ : ಯೋಗೇಶ್ವರ್ ಗೆ ಚಿನ್ನ, ರಾಜ್ಯದ ಅಥ್ಲೀಟ್ ಪೂವಮ್ಮಗೆ ಕಂಚು

Monday, September 29th, 2014
Yogeshwar Poovamma

ಇಂಚೆನ್ : ಭಾರತದ ಕುಸ್ತಿ ಪಟು ಯೋಗೇಶ್ವರ್ ದತ್ ಪುರುಷರ 65 ಕೆ.ಜಿ. ವಿಭಾಗದ ಫ್ರೀ ಸ್ಟೈಲ್‌ ವಿಭಾಗದಲ್ಲಿ ಚಿನ್ನದ ಸಾಧನೆ ತೋರಿದರೆ ರಾಜ್ಯದ ಅಥ್ಲೀಟ್ ಎಂ.ಆರ್.ಪೂವಮ್ಮ ಮಹಿಳೆಯರ 400 ಮೀ. ಓಟದಲ್ಲಿ ಕಂಚಿನ ಪದಕ್ ಪಡೆದಿದ್ದಾರೆ. ಪಂಜಾಬಿನ ಖುಷ್‌ಬಿರ್‌ ಕೌರ್ ಅವರು ಮಹಿಳೆಯ 20 ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ಬೆಳ್ಳಿ ಪಡೆದು, 17ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾನುವಾರ 9ನೇ ದಿನವೂ ಭಾರತದ ಪರ ಭರ್ಜರಿ ಪದಕ ಬೇಟೆಯಾಡಿದರು. ಯೋಗೇಶ್ವರ್ ಅವರ ಚಿನ್ನದ ಸಾಧನೆಯೊಂದಿಗೆ ಭಾರತದ ಚಿನ್ನದ […]

ಅರ್ಚರಿಯಲ್ಲಿ ಭಾರತಕ್ಕೆ ಬಂಗಾರದ ಅಚ್ಚರಿ

Saturday, September 27th, 2014
ಅರ್ಚರಿಯಲ್ಲಿ ಭಾರತಕ್ಕೆ ಬಂಗಾರದ ಅಚ್ಚರಿ

ಇಂಚೆನ್‌ : ಭಾರತದ ಕ್ರೀಡಾ ಪ್ರೇಮಿಗಳ ಪಾಲಿಗೆ ಶನಿವಾರ ಶುಭದಿನ. 17ನೇ ಏಷ್ಯನ್ ಕ್ರೀಡಾಕೂಟದ ಆರ್ಚರಿ ಸ್ಪರ್ಧೆಯಲ್ಲಿ ಭಾರತವು ತಲಾ ಒಂದು ಬಂಗಾರ ಹಾಗೂ ಒಂದು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಚಾರಿತ್ರಿಕ ಸಾಧನೆ ಮಾಡಿದೆ. ಇಲ್ಲಿ ನಡೆಯುತ್ತಿರುವ 17ನೇ ಏಷ್ಯನ್ ಕ್ರೀಡಾಕೂಟದ ಕಂಪೌಂಡ್ ಪುರುಷರ ಆರ್ಚರಿ  ತಂಡವು ಬಂಗಾರ ಗೆದ್ದಿದೆ. ಈ ಕ್ರೀಡಾಕೂಟದಲ್ಲಿ ಭಾರತಕ್ಕೆ ದೊರೆತ ಎರಡನೇ ಚಿನ್ನದ ಪದಕವಿದು. ಇದೇ ವಿಭಾಗದ ಮಹಿಳೆಯರ ತಂಡವು   ಕಂಚಿನ ಸಾಧನೆ ಮಾಡಿದೆ. ಮತ್ತೊಂದೆಡೆ ಪುರುಷರ […]

ಡ್ರಗ್ಸ್ ಸ್ಮಗ್ಲಿಂಗ್, ಬಾಕ್ಸರ್ ವಿಜೇಂದರ್‌ ಸಿಂಗ್‌ ಮೇಲೆ ಆರೋಪ

Friday, March 8th, 2013
Vijendar Sing

ಮೊಹಾಲಿ : ಡ್ರಗ್ಸ್ ಸ್ಮಗ್ಲಿಂಗ್ ಗೆ ಸಂಬಂಧಪಟ್ಟಂತೆ ಬಾಕ್ಸಿಂಗ್ ಚಾಂಪಿಯನ್, ಒಲಿಂಪಿಕ್ಸ್ ನ ಪದಕ ವಿಜೇತ  ಬಾಕ್ಸರ್‌ ವಿಜೇಂದರ್‌ ಸಿಂಗ್‌ ರವರ ಮೇಲೆ ಆರೋಪ ಕೇಳಿ ಬಂದಿದೆ. ಮೊಹಾಲಿಯ ಫ್ಲಾಟ್‌ ಒಂದರಲ್ಲಿ 130 ಕೋಟಿ ರೂಪಾಯಿ ಮೌಲ್ಯದ 26 ಕಿಲೋ ಹೆರಾಯಿನ್‌ ನನ್ನು ವಶಪಡಿಸಿಕೊಂಡ ಪಂಜಾಬ್ ಪೊಲೀಸರು ಈ ವೇಳೆ ಅನೂಪ್‌ ಖಲೋನ್‌ ಎಂಬಾತನನ್ನು ಸೆರೆಹಿಡಿದಿದ್ದಾರೆ. ವಿಚಾರಣೆಯ ವೇಳೆ ಈತ ತನಗೆ ಬಾಕ್ಸರ್‌ ವಿಜೇಂದರ್‌ ಸಿಂಗ್‌ ಜತೆ ಸಂಪರ್ಕವಿದೆ ಎಂದು ಹೇಳಿಕೊಂಡಿದ್ದಾನೆ. ಅಲ್ಲದೆ ತಾನು ವಿಜೇಂದರ್‌ ಕುಮಾರ್‌ಗೆ […]

ಅಶ್ವಿನಿ ಅಕ್ಕುಂಜೆ ಉದ್ದೀಪನ ಮದ್ದು ಸೇವಿಸಿದ್ದು ನಿಜ: ಬಿ ರಿಪೋರ್ಟ್ ಪಾಸಿಟೀವ್

Monday, July 11th, 2011
Ashwini-Akkunji/ಅಶ್ವಿನಿ ಅಕ್ಕುಂಜೆ

ನವದೆಹಲಿ :  ಅಥ್ಲೀಟ್ ಆಟಗಾರ್ತಿ ಅಶ್ವಿನಿ ಅಕ್ಕುಂಜೆ  ಉದ್ದೀಪನ ಮದ್ದು ಸೇವಿಸಿರುವುದು ಬಿ ರಿಪೋರ್ಟ್ ನಿಂದ ಸಾಬೀತಾಗಿದೆ.  ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಕಿದ ಬಿ ರಿಪೋರ್ಟ್  ಪಾಸಿಟೀವ್ ಆಗಿದೆ. ಇದರಿಂದ ಅಶ್ವಿನಿಗೆ 2 ವರ್ಷ ನಿಷೇಧ ವಿಧಿಸುವ ಸಾಧ್ಯತೆ ಇದೆ. ಬಿ ರಿಪೋರ್ಟ್ ಫಲಿತಾಂಶದಿಂದ ಅಶ್ವಿನಿ ಉದ್ದೀಪನ ಮದ್ದು ಸೇವಿಸಿರುವುದು ಸಾಬೀತಾಗಿರುವುದರಿಂದ 2012ರ ಒಲಿಂಪಿಕ್ಸ್ ನಲ್ಲಿ ಅಶ್ವಿನಿ ಪಾಳ್ಗೊಳ್ಳುವುದು ದೂರದ ಮಾತಾಗಿದೆ. ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದ ಮತ್ತೊಬ್ಬ ಅಥ್ಲೀಟ್ ಪ್ರಿಯಾಂಕಾ ಪನ್ವಾರ್ ಕೂಡಾ 2 ವರ್ಷ  ಒಲಿಂಪಿಕ್ಸ್ ನಲ್ಲಿ […]

ವಿಶ್ವ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಟೀಂ ಇಂಡಿಯಾ

Sunday, April 3rd, 2011
ವಿಶ್ವ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಟೀಂ ಇಂಡಿಯಾ

ಮುಂಬೈ : 28 ವರ್ಷಗಳ ಬಳಿಕ ಭಾರತವು  ಮುಂಬೈಯ ಕಿಕ್ಕಿರಿದ ವಾಂಖೇಡೆ ಕ್ರೀಡಾಂಗಣದಲ್ಲಿ 2011ರ ಕ್ರಿಕೆಟ್ ವಿಶ್ವಕಪ್ ಅನ್ನು ಮುಡಿಗೇರಿಸಿಕೊಂಡಿತು. ಶನಿವಾರ ನಡೆದ ಫೈನಲ್ ಪಂದ್ಯವು ಏಷ್ಯಾದ ಪ್ರಬಲ ತಂಡಗಳೆರಡರ  ಹೋರಾಟಕ್ಕೆ ಸಾಕ್ಷಿಯಾಗಿ ಭಾರತವು 1983ರ ಏಪ್ರಿಲ್ 2ರ ಶನಿವಾರ ಮಾಡಿದ ಸಾಧನೆಯನ್ನೇ ಅದೇ ವಾರ ಅದೇ ತಾರೀಕಿನಲ್ಲಿ 28 ವರ್ಷಗಳ ಬಳಿಕ ಪುನರಾವರ್ತಿಸಿ, ಏಕದಿನ ಕ್ರಿಕೆಟ್ ನಲ್ಲಿ ನಂ.1 ಪಟ್ಟಕ್ಕೇರಿತು. ಶ್ರೀಲಂಕಾ ಒಡ್ಡಿದ 275 ರನ್ನುಗಳ ಬೆಂಬತ್ತಿದ ಭಾರತ, ಅಂತಿಮವಾಗಿ 48.2 ಓವರುಗಳಲ್ಲಿ 4 ವಿಕೆಟ್ […]

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಒಟ್ಟು101 ಪದಕಗಳು

Thursday, October 14th, 2010
ಸೈನಾ ನೆಹ್ವಾಲ್

ನವದೆಹಲಿ : ದೆಹಲಿಯಲ್ಲಿ ನಡೆದ 19ನೇ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಈ ಬಾರಿ ಭರ್ಜರಿ 38 ಸ್ವರ್ಣ ಪದಕ, 27ಬೆಳ್ಳಿ, 36 ಕಂಚು ಒಟ್ಟು101  ಪದಕ ಗೆದ್ದುಕೊಳ್ಳುವ ಮೂಲಕ ಆತಿಥೇಯ ಭಾರತ ತಂಡವು ನೂತನ ಇತಿಹಾಸ ರಚಿಸಿದೆ. ಕಾಮನ್ ವೆಲ್ತ್ ಗೇಮ್ಸ್ ನ ಕೊನೆಯ ದಿನವಾದ ಇಂದು ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಸಿಂಗಲ್ಸ್ ವಿಭಾಗದಲ್ಲಿ ಜಯಗಳಿಸಿ ಭಾರತವನ್ನು ಪದಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆರುವಂತೆ ಮಾಡಿದರು. 2002ರಲ್ಲಿ ನಡೆದ ಮ್ಯಾಂಚೆಸ್ಟರ್ ಕೂಟದಲ್ಲಿ ಭಾರತ 22 ಚಿನ್ನಗಳನ್ನು […]

ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 7 ವಿಕೆಟ್‌ಗಳಿಂದ ಜಯ

Wednesday, October 13th, 2010
ಆಸ್ಟ್ರೇಲಿಯಾ ಭಾರತ

ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣ,ಬೆಂಗಳೂರಿನಲ್ಲಿ ನಡೆಯುತ್ತಿರುವ ಟೆಸ್ಟ್‌ ಸರಣಿಯಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಏಳು ವಿಕೆಟುಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿರುವ ಟೀಮ್ ಇಂಡಿಯಾ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಕ್ಲೀನ್‌ಸ್ವೀಪ್‌ಗೈದಿದೆ. ಆ ಮೂಲಕ ಟೆಸ್ಟ್‌ನ ಅಗ್ರಸ್ಥಾನಕ್ಕೆ ನಾವೇ ಅರ್ಹ ತಂಡ ಎಂಬುದನ್ನು ಮಹೇಂದ್ರ ಧೋನಿ ಬಳಗ ಮತ್ತೊಮ್ಮೆ ಸಾಬೀತುಪಡಿಸಿದಂತಾಗಿದೆ. ಇದರೊಂದಿಗೆ ಭಾರತದಲ್ಲಿ ಟೆಸ್ಟ್ ಜಯ ದಾಖಲಿಸುವ ಆಸೀಸ್ ನಾಯಕ ರಿಕಿ ಪಾಂಟಿಂಗ್ ಕನಸು ಕನಸಾಗಿಯೇ ಉಳಿಯುವಂತಾಗಿದೆ. ನಾಲ್ಕನೇ […]