ನದಿಗೆ ಆಟವಾಡಲು ಹೋಗಿದ್ದ ನಾಲ್ವರು ಬಾಲಕರು ನೀರು ಪಾಲು

Monday, January 9th, 2012
Childrens Died

ಬೆಳ್ತಂಗಡಿ :  ರವಿವಾರದ ರಜಾ ಪ್ರಯುಕ್ತ ಮನೆ ಸಮೀಪದ ನದಿಗೆ ಸಂಜೆ ಆಟವಾಡಲು ಹೋಗಿದ್ದ ನಾಲ್ವರು ಬಾಲಕರು  ಸುದೇಮುಗೇರು ಎಂಬಲ್ಲಿ  ನೀರು ಪಾಲಾದ ಘಟನೆ ವರದಿಯಾಗಿದೆ. ಕೇವಲ ಆರಡಿಯಷ್ಟು ನೀರು ನಾಲ್ವರು ಮಕ್ಕಳ ಪ್ರಾಣವನ್ನು ಬಲಿತೆಗೆದು ಕೊಂಡಿದೆ. ಲಾರಿ ನಿಲ್ಲಿಸಿ ಮರಳು ತೆಗೆಯುವ ಸ್ಥಳದಲ್ಲಿ ನೀರಿದ್ದರೂ ನಡೆದಾಡುವಷ್ಟು ಆಳದ ದಾರಿ ಇದೆ.  ರಜಾದ ಮಜಾ ಅನುಭವಿಸಲು ಈ ಮಕ್ಕಳು ಅಪರಾಹ್ನ ಸುಮಾರು 3.30ರ ವೇಳೆಗೆ ನದಿಗೆ ತೆರಳಿದ್ದರು. ಮನೆಯಿಂದ ಸುಮಾರು ಅರ್ಧ ಕಿ.ಮೀ. ದೂರದಲ್ಲಿ ಆಟವಾಡುತ್ತಿದ್ದರು.  3.45ರ ವೇಳೆಗೆ ಮಕ್ಕಳು ಕಾಣೆಯಾಗಿರುವುದು ಬೆಳಕಿಗೆ […]

ಗೋವನಿತಾಶ್ರಯ ಟ್ರಸ್ಟ್‌ ವತಿಯಿಂದ ಮೂರು ದಿನಗಳ ‘ಗೋಮಂಡಲ-ಗೋಪೂಜೆ’

Sunday, January 8th, 2012
Gomandala Gopooja

ಮಂಗಳೂರು : ಗೋವನಿತಾಶ್ರಯ ಟ್ರಸ್ಟ್‌ ಮಂಗಳೂರು ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಶುಕ್ರವಾರ ಸಂಜೆ ಗೋಧೂಳಿ ಮಹೂರ್ತದಲ್ಲಿ ಮೂರು ದಿನಗಳ ‘ಗೋಮಂಡಲ-ಗೋಪೂಜಾ’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಿತು. ವಜ್ರದೇಹಿ ಸಂಸ್ಥಾನದ ಶ್ರೀ ರಾಜಶೇಖರಾನಂದಜೀ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು. ಕೊಲ್ಯ ಶ್ರೀ ರಮಾನಂದ ಸ್ವಾಮೀಜಿ ಅವರು ಗೋಮಾತೆಯ ರಕ್ಷಣೆಗೆ ಎಲ್ಲರೂ ಬದ್ಧರಾಗೋಣ ಎಂದು ಕರೆ ನೀಡಿದರು. ಸಮಾರಂಭದ ಮುಖ್ಯ ಅಥಿತಿ ಸ್ಥಾನದಿಂದ ಮಾತನಾಡಿದ ಸಂಸದ ನಳಿನ್‌ ಕುಮಾರ್‌ ಕಟೀಲು ರಾಜ್ಯ ಸರಕಾರ ರೂಪಿಸಿರುವ ಗೋಹತ್ಯೆ ನಿಷೇಧ ಕಾಯ್ದೆಗೆ […]

ಕಂಕನಾಡಿ ಕೋಟಿ ಚೆನ್ನಯ ಗರಡಿ ಕ್ಷೇತ್ರದಲ್ಲಿ ದೇಯಿ ಬೈದೆತಿ ಬಿಂಬ ಪ್ರತಿಷ್ಠಾಪನೆ

Tuesday, January 3rd, 2012
kankanady garadi

ಮಂಗಳೂರು : ನಗರದ ಕಂಕನಾಡಿ  ಕೋಟಿ ಚೆನ್ನಯ ಗರಡಿ ಕ್ಷೇತ್ರದಲ್ಲಿ ಸೋಮವಾರ  ದೇಯಿ ಬೈದೆತಿ ಬಿಂಬ ಪ್ರತಿಷ್ಠಾಪನೆ ಹಾಗೂ ವಿವಿಧ ಸೇವೆಗಳ ಸಮರ್ಪಣಾ ಸಭಾ ಕಾರ್ಯಕ್ರಮ  ನಡೆಯಿತು. ಬಿ. ಜನಾರ್ದನ ಪೂಜಾರಿ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಕಿರುಷಷ್ಠಿ ಮಹೋತ್ಸವ ಮಡೆಮಡೆಸ್ನಾನ ಸೇವೆ

Friday, December 30th, 2011
kukke subhramanya Kiru shasti

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಕಿರುಷಷ್ಠಿ ಮಹೋತ್ಸವದಂದು ಶುಕ್ರವಾರ ನೂರಾರು ಭಕ್ತಾಧಿಗಳಿಂದ ಶ್ರೀ ದೇವಳದಲ್ಲಿ ಮಡೆಮಡೆಸ್ನಾನ ಸೇವೆ ಜರುಗಿತು. ಶ್ರೀ ದೇವಳದ ಹೊರಾಂಗಣದಲ್ಲಿ ಮಧ್ಯಾಹ್ನ ಅನ್ನ ಸಂತರ್ಪಣೆಯ ಬಳಿಕ ಸುಮಾರು 150ಕ್ಕೂ ಅಧಿಕ ಮಂದಿ ಭಕ್ತಾಧಿಗಳು ಈ ಸೇವೆಯಲ್ಲಿ ಪಾಲ್ಗೊಂಡರು. ಚರ್ಮರೋಗ ಪೀಡಿತ ಸುಮಾರು 7 ವರುಷದ ಪುಟ್ಟ ಬಾಲಕಿಯೋರ್ವಳು ಈ ಮಡೆಮಡೆಸ್ನಾನ ಸೇವೆಯಲ್ಲಿ ಪಾಲ್ಗೊಂಡಿದ್ದುದು ವಿಶೇಷವಾಗಿತ್ತು. ಶ್ರೀ ದೇವಳದಲ್ಲಿ ಚಂಪಾಷಷ್ಠಿಯಂದು ಮಡೆಮಡೆಸ್ನಾನದ ವಿಚಾರದಲ್ಲಿ ಭಾರೀ ವಿವಾದವೆದ್ದುದರಿಂದ ಈ ಬಾರಿ ಶ್ರೀ ದೇವಳದಲ್ಲಿ ಬಿಗಿ ಪೋಲೀಸ್ […]

ಹಿರಿಯ ಮಗನಿಗೆ ಸಮಾಧಿ ಸ್ಥಳದಲ್ಲಿ ಪೂಜೆ ಸಲ್ಲಿಸಲು ತಡೆಯೊಡ್ಡಿದ ಮಧು ಬೆಂಬಲಿಗರು

Wednesday, December 28th, 2011
Madhu Kumara Bangarappa

ಸೊರಬ : ಮಾಜಿ ಸಿಎಂ ಎಸ್ ಬಂಗಾರಪ್ಪ ಅವರ ಸಮಾಧಿ ಸ್ಥಳಕ್ಕೆ ಪೂಜೆ ಸಲ್ಲಿಸಲು ಆಗಮಿಸಿದ ಹಿರಿಯ ಮಗ ಕುಮಾರ್ ಬಂಗಾರಪ್ಪಗೆ ಸಹೋದರ ಮಧು ಬಂಗಾರಪ್ಪ ಬೆಂಬಲಿಗರು ವಿರೋಧ ವ್ಯಕ್ತ ಪಡಿಸಿದ ಘಟನೆ  ಇಂದು ನಡೆದಿದೆ. ಪಟ್ಟಣದ ಸರಕಾರಿ ಕಾಲೇಜಿನ ಪಕ್ಕದಲ್ಲಿರುವ ಮಧು ಬಂಗಾರಪ್ಪ ಒಡೆತನದ ಜಾಗದಲ್ಲಿ ಬಂಗಾರಪ್ಪ ಸಮಾಧಿಗೆ ಕುಮಾರ್ ತನ್ನ ಪತ್ನಿ, ಮಕ್ಕಳ ಸಮೇತ ಆಗಮಿಸಿ ಪೂಜೆ ನಡೆಸುವವರಿದ್ದರು. ಇದನ್ನು ಕಂಡ ಮಧು ಬಂಗಾರಪ್ಪ ಬೆಂಬಲಿಗರು ಅವರನ್ನು ಮಧ್ಯದಲ್ಲೇ ತಡೆಯೂಡ್ಡಿದರು. ಈ ವಿಷಯದಲ್ಲಿ ಕುಮಾರ್ […]

ಮಾಜಿ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪ ವಿಧಿವಶ

Monday, December 26th, 2011
ಮಾಜಿ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪ ವಿಧಿವಶ

ಬೆಂಗಳೂರು : ಮಾಜಿ ಮುಖ್ಯಮಂತ್ರಿ, ಸಾರೆಕೊಪ್ಪ ಬಂಗಾರಪ್ಪ (1932-2011) ಅವರು ಡಿ.26ರ 12.45ಕ್ಕೆ ಇಹಲೋಕ ತ್ಯಜಿಸಿದ್ದಾರೆ.ಅವರು ಅಂತ್ಯದಿಂದಾಗಿ ಕರ್ನಾಟಕ ವರ್ಣರಂಜಿತ ವ್ಯಕ್ತಿತ್ವದ ರಾಜಕೀಯ ಮುತ್ಸದ್ದಿ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ. ಮೂತ್ರಪಿಂಡದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಅಸುನೀಗಿದರು. 1991ರಿಂದ 92ರವರೆಗೆ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪ ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕೆಲ ದಿನಗಳ ಹಿಂದೆ “ನಾನು ಮತ್ತು ದೇವೇಗೌಡರು ರಾಜಕೀಯದಿಂದ ಯಾವತ್ತೂ ರಾಜಕೀಯದಿಂದ ನಿವೃತ್ತರಾಗುವುದಿಲ್ಲ” ಎಂದು ಬಂಗಾರಪ್ಪ ಸರಿಯಾಗಿ ಒಂದು ವರ್ಷದ […]

ಧರ್ಮಾಧ್ಯಕ್ಷ ರೈ| ರೆ| ಡಾ| ಅಲೋಶಿಯಸ್‌ ಪಾವ್ಲ್ ಡಿ’ಸೋಜಾ ಅವರಿಂದ ಕ್ರಿಸ್ಮಸ್‌ ಸಂದೇಶ

Saturday, December 24th, 2011
Aloysius Paul D’Souza

ಮಂಗಳೂರು : ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ರೈ| ರೆ| ಡಾ| ಅಲೋಶಿಯಸ್‌ ಪಾವ್ಲ್ ಡಿ’ಸೋಜಾ ಅವರು ಶುಕ್ರವಾರ ಕೊಡಿಯಾಲ್‌ಬೈಲ್‌ನಲ್ಲಿರುವ ಬಿಷಪ್ಸ್ ಹೌಸ್‌ನಲ್ಲಿ ಕೇಕ್‌ ಕತ್ತರಿಸಿ ಕ್ರಿಸ್ಮಸ್‌ ಸಂದೇಶ ನೀಡಿದರು. ನಿರಾಶ್ರಿತರಿಗೆ ಆಶ್ರಯ ನೀಡಬೇಕೆಂಬ ಸಾಮಾಜಿಕ ಮತ್ತು ಮಾನವೀಯ ಕಳಕಳಿಯ ಸಂದೇಶವನ್ನು ಕ್ರಿಸ್ಮಸ್‌ ನೀಡುತ್ತದೆ. ಯೇಸು ಕ್ರಿಸ್ತರು ಜನಿಸಿದಾಗ ಅವರಿಗೆ ಛತ್ರದಲ್ಲೆಲ್ಲಿಯೂ ಜಾಗ ಸಿಕ್ಕಿರಲಿಲ್ಲ; ಹಾಗಾಗಿ ತಾಯಿ ಮೇರಿ ಶಿಶು ಯೇಸುವನ್ನು ಬಟ್ಟೆಯಲ್ಲಿ ಸುತ್ತಿ ಗೋವುಗಳ ಕೊಟ್ಟಿಗೆಯಲ್ಲಿ (ಗೋದಲಿ) ಮಲಗಿಸಿದ್ದರು ಎಂದು ಬೈಬಲ್‌ ತಿಳಿಸುತ್ತದೆ. ನಿರಾಶ್ರಿತರಿಗೆ ಆಶ್ರಯ […]

ವಿಜಯ ಬ್ಯಾಂಕಿನ ಸಿಬ್ಬಂದಿಯಿಂದಲೇ ಬ್ಯಾಂಕ್‌ ಲಾಕರ್‌ ದರೋಡೆ

Wednesday, December 21st, 2011
Bajpe Bank Robbery

ಮಂಗಳೂರು: ವಿಜಯ ಬ್ಯಾಂಕಿನ ಸಿಬಂದಿಯೇ ಬ್ಯಾಂಕ್‌ ಲಾಕರ್‌ನಿಂದ ಚಿನ್ನಾಭರಣಗಳನ್ನು ಕಳವು ಮಾಡಿದ ಪ್ರಕರಣ ಬಜಪೆ ಶಾಖೆಯಲ್ಲಿನಡೆದಿದೆ, ಬ್ಯಾಂಕಿನ ಗುಮಾಸ್ತ ದಯಾಕರ ಶೆಟ್ಟಿ(45) ಎಂಬಾತ 460 ಗ್ರಾಂ ತೂಕದ 13,50,000 ರೂ. ಬೆಲೆಯ ಚಿನ್ನಾಭರಣಗಳನ್ನು ಕಳವುಮಾಡಿರುವ ಸಂಗತಿ ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ. ಬ್ಯಾಂಕಿನ ಗ್ರಾಹಕರಾದ ಅತಿಕಾ ಬಾನು, ಲಾರೆನ್ಸ್‌ ಫೆರ್ನಾಂಡಿಸ್‌ ಮತ್ತು ಮಹಮದ್‌ ಹುಸೈನ್‌ ಅವರು ತಾವು ಸಾಲಕ್ಕಾಗಿ ಈ ಬ್ಯಾಂಕ್‌ ಶಾಖೆಯಲ್ಲಿ ಗಿರವಿ ಇಟ್ಟಿದ್ದ ಚಿನ್ನಾಭರಣಗಳನ್ನು ಬಿಡಿಸಲು ಬಂದಾಗ ಲಾಕರ್‌ನಲ್ಲಿ ಚಿನ್ನಾಭರಣಗಳು ಇಲ್ಲದೆ ಇರುವ ಸಂಗತಿ […]

ನಾನು ಶಿಕಾರಿಪುರದ ಒಬ್ಬ ಸಾಮಾನ್ಯ ಶಾಸಕ, ಬಿಜೆಪಿ ರಾಜ್ಯಾಧ್ಯಕ್ಷತೆ ಬೇಡ :ಯೆಡ್ಡಿ

Monday, December 19th, 2011
ನಾನು ಶಿಕಾರಿಪುರದ ಒಬ್ಬ ಸಾಮಾನ್ಯ ಶಾಸಕ, ಬಿಜೆಪಿ ರಾಜ್ಯಾಧ್ಯಕ್ಷತೆ ಬೇಡ :ಯೆಡ್ಡಿ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿರುವ ಮಾಜಿ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ರವಿವಾರ ಪೊಳಲಿ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು. ಅವರು ರವಿವಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು. ನಾನೀಗ ಶಿಕಾರಿಪುರದ ಒಬ್ಬ ಸಾಮಾನ್ಯ ಶಾಸಕ. ತನ್ನ ಮೇಲೆ ಆರೋಪ ಬಂದಾಗ ವರಿಷ್ಠರ ಸೂಚನೆಯಂತೆ ರಾಜೀನಾಮೆ ನೀಡಿದ್ದೇನೆ. ಮುಂದೆ ವರಿಷ್ಠರು ಉನ್ನತ ಹುದ್ದೆ ನೀಡಿದರೆ ಸ್ವೀಕರಿಸುತ್ತೇನೆ. ಬಿಜೆಪಿ ರಾಜ್ಯಾಧ್ಯಕ್ಷತೆ ಬೇಡ […]

ಕಾರು ಅಪಘಾತ ಯೋಗೀಶ್‌ ಭಟ್‌ ಪಾರು, ಪತ್ನಿಗೆ ತೀವ್ರ ಗಾಯ

Monday, December 19th, 2011
yogish bhat accident

ಮಂಗಳೂರು: ವಿಧಾನ ಸಭಾ ಉಪ ಸಭಾಧ್ಯಕ್ಷ ಎನ್‌. ಯೋಗೀಶ್‌ ಭಟ್‌ ಮತ್ತು ಅವರ ಕುಟುಂಬದ ಸದಸ್ಯರು ಭಾನುವಾರ ಬೆಳಗ್ಗಿನ ಜಾವ ಮಂಗಳೂರಿನಿಂದ ಮೈಸೂರಿಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಪ್ರಯಾಣಿಸುತ್ತಿದ್ದಾಗ ಅವರ ಸರಕಾರಿ ವಾಹನ ಚಾಲಕನ ನಿಯಂತ್ರಣ ತಪ್ಪಿ ಸುಳ್ಯ ತಾಲೂಕಿನ ಪೆರಾಜೆಯಲ್ಲಿ ಅಪಘಾತಕ್ಕೀಡಾಯಿತು. ಘಟನೆಯಲ್ಲಿ ಯೋಗೀಶ್‌ ಭಟ್‌ ಅವರು ಅಪಾಯದಿಂದ ಪಾರಾಗಿದ್ದಾರೆ. ಪತ್ನಿ ವಿಜಯ ಭಟ್‌ ಅವರ ತಲೆಗೆ ತೀವ್ರ ಗಾಯವಾಗಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತೆಗೆ ದಾಖಲಿಸಲಾಗಿದೆ. ಕಾರಿನಲ್ಲಿ ಯೋಗೀಶ್‌ ಭಟ್‌ , ಪತ್ನಿ ವಿಜಯ […]