`ಯುವಜನಾಂಗಕ್ಕೆ ಉತ್ತಮ ಮಾರ್ಗದರ್ಶನ ಅಗತ್ಯ’

Friday, January 7th, 2011
ಅಪರಾಧ ತಡೆ ಮಾಸ

ಮಂಗಳೂರು, ಜ.7 : ಸಮಾಜವನ್ನು ಅಪರಾಧಮುಕ್ತವಾಗಿಸಲು 16ರಿಂದ 18ರ ಹರೆಯದ ಯುವಜನಾಂಗಕ್ಕೆ ಉತ್ತಮ ಮಾರ್ಗದರ್ಶನ ನೀಡಬೇಕಿದೆ. ಈ ಹರೆಯದಲ್ಲೇ ಮಕ್ಕಳು ಹಾದಿ ತಪ್ಪುವ ಅವಕಾಶಗಳು ಹೆಚ್ಚಿದ್ದು, ಅವರನ್ನು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸುವುದರಿಂದ ಅವರಲ್ಲಿ ಸಾಮಾಜಿಕ ಜವಾಬ್ದಾರಿ ಮೂಡಲಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಡಾ. ಟಿ. ಸಿ ಶಿವಶಂಕರಮೂರ್ತಿ ಹೇಳಿದರು. ಅವರಿಂದು ಮಂಗಳೂರು ಪೊಲೀಸ್ ಕಮಿಷನರೇಟ್ ಮತ್ತು ರೋಶನಿ ಕಾಲೇಜಿನ ಅಪರಾಧಶಾಸ್ತ್ರ ವಿಭಾಗ ಜಂಟಿಯಾಗಿ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಅಪಾರ […]

ಮಂಗಳೂರು ನಾಗರೀಕರ ಸುಖಕರ ಪ್ರಯಾಣಕ್ಕೆ ಕೆಎಸ್ಅರ್ ಟಿಸಿ ಬಸ್ಸುಗಳು

Thursday, January 6th, 2011
ಸುಬೋಧ್ ಯಾದವ್

ಮಂಗಳೂರು ಜ 6 : ಖಾಸಗಿ ಬಸ್ಸುಗಳ ಮೇಲಾಟದಿಂದ ಮಂಗಳೂರು ನಾಗರೀಕರಿಗೆ ಪ್ರಯಾಣ ಪ್ರಯಾಸವಾಗಿದ್ದು,ಇದರಿಂದ ಮುಕ್ತಿ ಹೊಂದಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ನಗರ ಸಾರಿಗೆ ಬಸ್ಗಳನ್ನು ಓಡಿಸಲು ಪರವಾನಗಿ ನೀಡುವಂತೆ  ಕೆಎಸ್ಆರ್ಟಿಸಿ ಕಾನೂನು ಅಧಿಕಾರಿ ರಾಜೇಶ್ ಶೆಟ್ಟಿ ಅವರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಾದ ಶ್ರೀ ಸುಬೋಧ್ ಯಾದವ್ ಅವರನ್ನು ಕೋರಿದ್ದಾರೆ. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಈ ವಿಷಯವನ್ನು ಪ್ರಾಧಿಕಾರದ […]

ಪೋಲಿಯೋ ಮುಕ್ತ ಸಮಾಜಕ್ಕೆ ಪೋಲಿಯೋ ಹನಿ

Wednesday, January 5th, 2011
ಪೋಲಿಯೋ ಮುಕ್ತ ಸಮಾಜ

ಮಂಗಳೂರು ಜ.5 : ಪೋಲಿಯೋದಂತಹ ಮಾರಕ ರೋಗ ನಿರ್ಮೂಲನೆಗೆ ಅವಿರತ ಪರಿಶ್ರಮದ ಅಗತ್ಯವಿದೆ. 2007ರಲ್ಲಿ ಬೆಂಗಳೂರಿನಲ್ಲಿ ಪೋಲಿಯೋ ಪತ್ತೆಯಾಗಿತ್ತು. ಬಳಿಕ ಇದುವರೆಗೆ ರಾಜ್ಯದಲ್ಲಿ ಪೋಲಿಯೋ ಪ್ರಕರಣ ವರದಿಯಾಗಿಲ್ಲ ಎಂದು ಡಾ ಸತೀಶ್ ಚಂದ್ರ ವಿವರಿಸಿದರು. ಇಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ಮಾಹಿತಿ ನೀಡಿದ ಪಲ್ಸ್ ಪೋಲಿಯೋ ಕಾರ್ಯಕ್ರಮದ ಉಸ್ತುವಾರಿ ಡಾಕ್ಟರ್ ಸತೀಶ್ ಚಂದ್ರ ಅವರು ಇದುವರೆಗಿನ ಅಂಕಿ ಅಂಶ ಹಾಗೂ ಮಾಹಿತಿ ನೀಡಿದರು. 2011 ಜನವರಿ ದ್ವಿತೀಯ ಸುತ್ತಿನ ಪಲ್ಸ್ ಪೋಲಿಯೋ […]

ಪ್ಲಾಸ್ಟಿಕ್ ನಿರ್ಮೂಲನೆಗೆ ಪರಿಸರ ಸ್ನೇಹಿ ಜೂಟ್ ಉತ್ಪನ್ನಗಳನ್ನು ಬಳಸಿ-ರಜನಿದುಗ್ಗಣ್ಣ

Wednesday, January 5th, 2011
ಮೇಯರ್ ರಜನಿ ದುಗ್ಗಣ್ಣ

ಮಂಗಳೂರು ಜ 5 :-ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ನಿರ್ಮೂಲನೆಗೆ ಪರಿಸರ ಸ್ನೇಹಿ ದೇಶಿಯ ಉತ್ಪನ್ನ ಸೆಣಬಿನ ಉತ್ಪನ್ನಗಳನ್ನು ಹೆಚ್ಚಾಗಿ ಬಳಸುವಂತೆ ಮಂಗಳೂರು ಮಹಾನಗರಪಾಲಿಕೆ ಮೇಯರ್ ರವರಾದ ಶ್ರೀಮತಿ ರಜನಿ ದುಗ್ಗಣ್ಣ ಅವರು ಜನತೆಗೆ ಕರೆ ನೀಡಿದ್ದಾರೆ. ಅವರು ಇಂದು ಮಂಗಳೂರಿನಲ್ಲಿ ರಾಷ್ಟ್ರೀಯ ಸೆಣಬು ಮಂಡಳಿ ದಕ್ಷಿಣ ಚೆನ್ನೈ ಇವರ ವತಿಯಿಂದ ಜನವರಿ 5ರಿಂದ 9 ರ ವರೆಗೆ ಐದು ದಿನಗಳ ಕಾಲ ನಡೆಯಲಿರುವ ಸೆಣಬು ಉತ್ಪನ್ನಗಳ ಮಾರಾಟ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಈ ಮಾರಾಟ ಪ್ರದರ್ಶನದಲ್ಲಿ ಪಶ್ಚಿಮ […]

ರಾಜ್ಯದಲ್ಲಿ ಜಿಲ್ಲಾ ಮತ್ತು ತಾಲೂಕ ಪಂಚಾಯತ್ ಚುನಾವಣೆಗಳಲ್ಲಿ ಬಿಜೆಪಿಗೆ ಗೆಲುವು

Tuesday, January 4th, 2011
ಜಿಲ್ಲಾ ಮತ್ತು ತಾಲೂಕ ಪಂಚಾಯತ್ ಚುನಾವಣೆ ಫಲಿತಾಂಶ

ಬೆಂಗಳೂರು : ಎರಡು ಹಂತದಲ್ಲಿ ನಡೆದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣಾ ಫಲಿತಾಂಶ ಘೋಷಣೆಯಾಗಿದ್ದು, ಭಾರತೀಯ ಜನತಾ ಪಕ್ಷ ಗೆಲುವು ಸಾಧಿಸುವ ಮೂಲಕ ಆಡಳಿತಾರೂಢ ಬಿಜೆಪಿಯ ಕಡೆ ಮತದಾರ ಒಲವು ತೋರಿಸಿದ್ದಾನೆ ಬಿಜೆಪಿಯ ಭದ್ರಕೋಟೆ  ಬಳ್ಳಾರಿಯಲ್ಲಿ ಮತ್ತು ಉತ್ತರ ಕನ್ನಡದಲ್ಲಿ ಬಿಜೆಪಿ ಬಹುತೇಕ ಹಿಂದೆ ಬಿದ್ದಿದೆ. ಮುಖ್ಯಮಂತ್ರಿಗಳ ತವರು ಕ್ಷೇತ್ರ ಶಿವಮೂಗ್ಗದಲ್ಲಿ ಬಿಜೆಪಿ ಮುನ್ನಡೆ ಸಾಧಿಸುವ ಮೂಲಕ ಯಡಿಯೂರಪ್ಪ ಮುಖಭಂಗವನ್ನು ತಪ್ಪಿಸಿಕೊಂಡಿದ್ದಾರೆ. ರಾಮನಗರ, ಹಾಸನ, ತುಮಕೂರು ಹಾಗೂ ಕೋಲಾರ ಜಿಲ್ಲೆಗಳಲ್ಲಿ ಜೆಡಿಎಸ್, ಬೆಂಗಳೂರು ಗ್ರಾಮಾಂತರ, ಬೆಂಗಳೂರು […]

ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಗೆ ಜಯಭೇರಿ

Tuesday, January 4th, 2011
ದ.ಕ.ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಚುನಾವಣೆ ಫಲಿತಾಂಶ

ಮಂಗಳೂರು : ಡಿ.31ರಂದು ನಡೆದ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಕ್ಷೇತ್ರಗಳ ಚುನಾವಣೆಯ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು , ದಕ್ಷಿಣ ಕನ್ನಡ ಮತ್ತು ಉಡುಪಿಯ ಜಿ.ಪಂ., ತಾ.ಪಂ. ಕ್ಷೇತ್ರಗಳಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ ಮೇಲುಗೈ ಸಾಧಿಸಿದೆ ಇಂದು ಬೆಳಿಗ್ಗೆ ಮತ ಎಣಿಕೆ ಮುಗಿದಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ 24 ಸ್ಥಾನಗಳನ್ನು  ತನ್ನದಾಗಿಸಿಕೊಂಡಿದೆ, ಕಾಂಗ್ರೆಸ್ 11 ಸ್ಥಾನಗಳನ್ನು ಪಡೆಯಿತು. ಬಂಟ್ವಾಳದಲ್ಲಿ ಜಿ.ಪಂ. ಕ್ಷೇತ್ರದಲ್ಲಿ 6ಸ್ಥಾನಗಳಲ್ಲಿ ಬಿಜೆಪಿ ,ಕಾಂಗ್ರೆಸ್ 3 ಸ್ಥಾನಗಳನ್ನು ಗಳಿಸಿದೆ. ಗೋಳ್ತಮಜಲು ಕ್ಷೇತ್ರದಲ್ಲಿ […]

ನಟಿ ಜೂಹಿ ಚಾವ್ಲಾ , ರಂಜಿತಾರಿಂದ ನಿತ್ಯಾನಂದನ ಪಾದಪೂಜೆ

Saturday, January 1st, 2011
Nityananda

ಬೆಂಗಳೂರು : ಹೊಸ ವರ್ಷದ ಸಂಭ್ರಮದ ನಡುವೆಯೇ  ನಿತ್ಯಾನಂದ ಸ್ವಾಮಿ  ಆನಂದೋತ್ಸವದ ಹೆಸರಿನಲ್ಲಿ ತನ್ನ 34ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಬಾಲಿವುಡ್ ಖ್ಯಾತ ನಟಿ ಜೂಹಿ ಚಾವ್ಲಾ ಅವರು ಬಿಡದಿ ಆಶ್ರಮಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು. ಈ ಸಂದರ್ಭದಲ್ಲಿ ಆಶ್ರಮದಲ್ಲಿ ಸಾಮಾಜಿಕ, ಧಾರ್ಮಿಕ ಹಾಗೂ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇಂದು ಬೆಳಿಗ್ಗೆ ಮೆರವಣಿಗೆ ಮೂಲಕ ನಿತ್ಯಾನಂದ ಸ್ವಾಮಿಯನ್ನು  ಆಶ್ರಮಕ್ಕೆ ಕರೆ ತಂದು ಪಾದಪೂಜೆ ನಡೆಸಲಾಯಿತು. ಜೂಹಿ ಚಾವ್ಲಾ ಕುಟುಂಬ ಕೂಡ […]

ವಿಷ್ಣು ಅಭಿಮಾನಿಗಳಿಂದ ಅಭಿಮಾನ್ ಸ್ಟುಡಿಯೋದಲ್ಲಿ ಪುಣ್ಯ ಸ್ಮರಣೆ

Thursday, December 30th, 2010
ವಿಷ್ಣುವರ್ಧನ್

ಬೆಂಗಳೂರು : ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಗಳನ್ನಗಲಿ ವರ್ಷ ತುಂಬಿರುವ ಹಿನ್ನೆಲೆಯಲ್ಲಿ ವಿಷ್ಣುವರ್ಧನ್ ಅಭಿಮಾನಿಗಳು ರಕ್ತದಾನ, ನೇತ್ರದಾನದಂತಹ ಹಲವಾರು ಕಾರ್ಯಗಳನ್ನು  ಬಡವರಿಗಾಗಿ ರಾಜ್ಯಾದ್ಯಂತ ಹಮ್ಮಿಕೊಂಡಿದ್ದರು ವಿಷ್ಣು ಸಮಾಧಿ ಇರುವ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ, ಆರಾಧ್ಯಮೂರ್ತಿಗೆ ನಮನ ಸಲ್ಲಿಸಿದರು. ಉತ್ತರಳ್ಳಿಯಲ್ಲಿರುವ ಸ್ಟುಡಿಯೋಗೆ ಮೆರವಣಿಗೆಯಲ್ಲಿ ಸಾಗಿದ ಸಾವಿರಾರು ಅಭಿಮಾನಿಗಳು ಗೌರವ ಅರ್ಪಿಸಿದರು. ಸರಕಾರದ ಪರವಾಗಿ ಸಚಿವೆ ಶೋಭಾ ಕರಂದ್ಲಾಜೆ ಗೌರವ ಸಲ್ಲಿಸಿದರು ವಿಷ್ಣು ಸಹೋದರ ರವಿಕುಮಾರ್, ಪತ್ನಿ ಭಾರತಿ ವಿಷ್ಣುವರ್ಧನ್, ಮಗಳು ಕೀರ್ತಿವರ್ಧನ್, ಅಳಿಯ ಅನಿರುದ್ಧ […]

ಕರ್ನಾಟಕದಲ್ಲಿ ಚುನಾವಣೆ ಬಳಿಕ ಮತ್ತೆ ವಿದ್ಯುತ್ ದರ ಏರಿಕೆ

Tuesday, December 28th, 2010
ಶೋಭಾ ಕರಂದ್ಲಾಜೆ

ಗುಲ್ಬರ್ಗಾ  : ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಈಗಾಗಲೇ ದರ ಏರಿಕೆಗೆ ಶಿಫಾರಸ್ಸು ಮಾಡಿರುವ ಹಿನ್ನಲೆಯಲ್ಲಿ  ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆಗಳ ಬಳಿಕ ವಿದ್ಯುತ್ ದರ ಏರಿಕೆಗೆ ಸಂಬಂಧಿಸಿದಂತೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು. ವಿದ್ಯುತ್ ದರ ಏರಿಕೆಗೆ ಇದುವರೆಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಮುಖ್ಯವಾಗಿ ವಿದ್ಯುತ್ ಕಂಪನಿಗಳು ಹಾನಿಯಲ್ಲಿವೆ. ಇದರ ಜೊತೆಗೆ ಉಚಿತ ವಿದ್ಯುತ್ ನ್ನು ಸಹ ನೀಡುತ್ತಿದ್ದೇವೆ. ವಿದ್ಯುತ್ ಸೋರಿಕೆ ಕೂಡಾ ನಿರಂತರವಾಗಿದೆ. ನಿಗಮ ಮಾಡಿರುವ […]

ಕರ್ತವ್ಯಲೋಪ ಸಿಬ್ಬಂದಿಗೆ ಜಿಲ್ಲಾಧಿಕಾರಿಗಳ ಎಚ್ಚರಿಕೆ

Monday, December 27th, 2010
ಸುಬೋಧ್ ಯಾದವ್

ಮಂಗಳೂರು : ಲೋಕಾಯುಕ್ತರು ಜಿಲ್ಲಾಧಿಕಾರಿಗಳಿಗೆ ಬರೆದಿರುವ ಪತ್ರಗಳನ್ನು ಜಿಲ್ಲಾಧಿಕಾರಿಗಳ  ಗಮನಕ್ಕೆ ತರದೆ ಲೋಕಾಯುಕ್ತರಿಗೆ ವರದಿ ಸಲ್ಲಿಸಲು ವಿಳಂಬ ಮಾಡಿ ಕರ್ತವ್ಯ ಲೋಪವೆಸಗಿರುವ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗಳಿಗೆ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ತೀವ್ರ ಎಚ್ಚರಿಕೆ ನೀಡಿದ್ದಾರೆ. ಮಂಗಳೂರು ತಾಲೂಕಿನ ಕದ್ರಿ ಗ್ರಾಮದ ಸರ್ವೇ ನಂಬರ್ 266/3ಎಪಿ1 ರಲ್ಲಿ 0.10 ಎಕ್ರೆ ಜಮೀನನ್ನು ಶ್ರೀಮತಿ ದುಲ್ಸಿನ್ ಡಿಸೋಜ ಅವರಿಗೆ ಪೆಟ್ರೋಲ್ ಬಂಕ್ ಗೆ ಲೀಸ್ ಗೆ ನೀಡಲಾಗಿತ್ತು. ಅವರು ಲೀಸ್ ಗೆ ನೀಡಲಾದ ಜಮೀನನ್ನು ಹೊರತುಪಡಿಸಿ ಸರಕಾರಿ ಜಮೀನನ್ನು […]