ನಿಮ್ಮ ಗ್ರಾಮದಲ್ಲಿ ರುದ್ರಭೂಮಿ ಕೊರತೆಯೇ? ತಹಶೀಲ್ದಾರರಿಗೆ ಮನವಿ ಸಲ್ಲಿಸಿ-ಎ.ಬಿ.ಇಬ್ರಾಹಿಂ

Monday, June 16th, 2014
Ibrahim

ಮಂಗಳೂರು : ಮನುಷ್ಯ ಬದುಕಿದ್ದಾಗ ಯಾವರೀತಿ ಗೌರವಾದರಗಳಿಂದ ಬದುಕು ಸಾಗಿಸುವನೋ ಅದೇ ರೀತಿ ಅವರು ಸತ್ತಾಗಲು ಅವರ ಪಾರ್ಥಿವ ಶರೀರವನ್ನು ಗೌರವಾದರಗಳಿಂದ ಮುಕ್ತಿ ಕಾಣಿಸಬೇಕು. ಇದಕ್ಕಾಗಿ ಎಲ್ಲಾ ಗ್ರಾಮಗಳಲ್ಲಿ ರುದ್ರಭೂಮಿ ಇರಲೇಬೇಕು. ಅದ್ದರಿಂದ ದ.ಕ.ಜಿಲ್ಲೆಯ ಎಲ್ಲಾ ತಹಶೀಲ್ದಾರರು ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ರುದ್ರಭೂಮಿ ಕೊರತೆ ಬಗ್ಗೆ ವಿವರವಾದ ವರದಿಯೊಂದನ್ನು ಸಿದ್ದಪಡಿಸಲು ರುದ್ರಭೂಮಿ ಕೊರತೆ ಇರುವ ಗ್ರಾಮಸ್ಥರು ಕೂಡಲೇ ಮನವಿಗಳನ್ನು ಆಯಾ ತಹಶೀಲ್ದಾರರಿಗೆ ನೀಡುವಂತೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಸೂಚಿಸಿದ್ದಾರೆ. ಅವರು ಇಂದು ತಮ್ಮ ಕಚೇರಿಯಲ್ಲಿ ಜಿಲ್ಲೆಯ ಕಂದಾಯಾಧಿಕಾರಿಗಳ ಸಭೆ […]

ಕಲುಬುರ್ಗಿಯವರ ಅವಹೇಳನಕಾರಿ ಹೇಳಿಕೆಗೆ ಖಂಡನೆ- ಕಲ್ಕೂರ

Sunday, June 15th, 2014
Kulkura

ಮಂಗಳೂರು : ಪ್ರಾಚೀನ ಕಾಲದಿಂದ ಆರಾಧಿಸಿಕೊಂಡು ಬರುತ್ತಿರುವ ಮೂರ್ತಿ ಪೂಜೆ ಬಗ್ಗೆ ಅವಹೇಳನಕಾರಿಯಾದ ಹೇಳಿಕೆಯನ್ನು ನೀಡಿದ ಪ್ರೊ. ಎಂ. ಎಂ. ಕಲುಬುರ್ಗಿಯವರ ಪತ್ರಿಕಾ ವರದಿಯನ್ನು ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಹಾಗೂ ಸದಸ್ಯರು ಖಂಡತುಂಡವಾಗಿ ಖಂಡಿಸಿರುತ್ತಾರೆ. ಯಾವಾಗಲೋ ಎಲ್ಲೊ ಬರೆದ ಅನಂತಮೂರ್ತಿ ಲೇಖನವನ್ನು ಎತ್ತಿ ಹಿಡಿದು ತನ್ನ ಸ್ವಂತದ್ದಷ್ಟನ್ನು ಸೇರಿಸಿ ಅಗ್ಗದ ಪ್ರಚಾರಕ್ಕಾಗಿ ಇಂದು ಹೇಳಿಕೆ ನೀಡ ಬೇಕಾದ ಅಗತ್ಯವಿರಲಿಲ್ಲ. ಇದು ಕೋಟಿ ಕೋಟಿ ಆಸ್ತಿಕ ಬಂಧುಗಳಿಗೆ ಘಾಸಿ ಉಂಟುಮಾಡುವ ತುಚ್ಛ […]

ಆಶಾಲತಾ ನಾಪತ್ತೆ ಪ್ರಕರಣ: ಬಂಟ್ವಾಳ ಪೊಲೀಸರಿಗೆ ಅಭಿನಂದನೆ

Friday, June 13th, 2014
Bantwal Police

ಬಂಟ್ವಾಳ: ಪೋಲೀಸರು ಯಾವುದೇ ಒತ್ತಡಕ್ಕೆ ಒಳಗಾಗದೇ ತಾಳ್ಮೆಯಿಂದ ಕೆಲಸ ಮಾಡಿದರೆ ಯಾವುದೇ ಪ್ರಕರಣವನ್ನು ಬೇಧಿಸುತ್ತಾರೆ, ಅವರಿಗೆ ಸಾರ್ವಜನಿಕರು ಕೂಡಾ ಸಹಾಯ ಮಾಡಬೇಕು ಎಂದು ಹಿಂದುಳಿದ ವರ್ಗ ಆಯೋಗದ ಸದಸ್ಯ ಎಂ. ತುಂಗಪ್ಪ ಬಂಗೇರ ಹೇಳಿದರು. ಅವರು ಬಂಟ್ವಾಳ ವೃತ್ತ ನಿರೀಕ್ಷಕ ಕಚೇರಿಯಲ್ಲಿ ಸರಪಾಡಿ ಅಪ್ರಾಪ್ತೆ ಆಶಾಲತಾ ನಾಪತ್ತೆ ಪ್ರಕರಣಕ್ಕೆ ಸಂಬಂದಿಸಿದಂತೆ ಆರೋಪಿಗಳನ್ನು ಬಂಧಿಸಿದ ವೃತ್ತ ನಿರೀಕ್ಷಕ ಬೆಳ್ಳಿಯಪ್ಪ ಗ್ರಾಮಾಂತರ ಠಾಣಾ ಉಪನೀರೀಕ್ಷಕ ನಾಗರಾಜ್ ಮತ್ತು ಅವರ ತಂಡಕ್ಕೆ ಅಭಿನಂದನೆ ಸಲ್ಲಿಸಿ ಮಾತನಾಡಿದರು. ಸಾಕಷ್ಟು ಉಹಾಪೋಹಗಳಿಗೆ ಕಾರಣವಾಗಿದ್ದ ಪ್ರಕರಣಕ್ಕೆ […]

ಉಳ್ಳಾಲ ಕಡಲ್ಕೊರೆತದ ಸಮಸ್ಯೆಗೆ ಅಕ್ಟೋಬರ್‌ ತಿಂಗಳಲ್ಲಿ ಪೈಲೆಟ್‌ ಕಾಮಗಾರಿ ಆರಂಭ

Wednesday, June 11th, 2014
Ullal-sea erection

ಉಳ್ಳಾಲ : ಉಳ್ಳಾಲ ಕಡಲ್ಕೊರೆತದ ಗಂಭೀರ ಸಮಸ್ಯೆಯನ್ನು ಬಗೆ ಹರಿಸಲು ಪೈಲೆಟ್‌ ಕಾಮಗಾರಿ ನಡೆಯುತ್ತಿದೆ. ಪೂರ್ಣ ಪ್ರಮಾಣದ ಕಾಮಗಾರಿ ಮುಂದಿನ ಅಕ್ಟೋಬರ್‌ ತಿಂಗಳಲ್ಲಿ ಪ್ರಾರಂಭವಾಗಲಿದ್ದು, ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್‌ ಹೇಳಿದ್ದಾರೆ. ಮಂಗಳವಾರ ಉಳ್ಳಾಲ ಕಡಲ್ಕೊರೆತದ ಪ್ರದೇಶಗಳಿಗೆ ಭೇಟಿ ನೀಡಿದ ಅವರು ಎಡಿಬಿ ಯೋಜನೆಯಡಿ 223 ಕೋಟಿ ರೂ. ಉಳ್ಳಾಲಕ್ಕೆ, ಉಚ್ಚಿಲ, ಸೋಮೇಶ್ವರ, ತಲಪಾಡಿಗೆ 26 ಕೋಟಿ ಬಿಡುಗಡೆಯಾಗಿದ್ದು, ಮೊಗವೀರಪಟ್ಣದಲ್ಲಿ ತಾತ್ಕಾಲಿಕ ಬಮ್ಸ್‌ ರಚನೆ […]

ಪತ್ರಿಕೆಗಳು ಸಮಾಜದ ಕಣ್ಣು : ಹಿರಿಯ ಪತ್ರಕರ್ತ ಮಲಾರ್ ಜಯರಾಂ ರೈ

Tuesday, June 10th, 2014
Manjeshwara press club

ಮಂಜೇಶ್ವರ : ಪತ್ರಿಕೆಗಳು ಸಮಾಜದ ಕಣ್ಣು , ಪತ್ರಕರ್ತರು ಸಮಾಜದ ಏಳಿಗೆಗಾಗಿ ಪ್ರತಿಭದ್ದವಾಗಿ ದುಡಿಯಬೇಕು ಮತ್ತು ಪತ್ರಿಕೆಗಳು ಸಾಮಾಜಿಕ ಕಳಕಳಿಯನ್ನು ಹೊಂದಿರಬೇಕೆಂದು ಹಿರಿಯ ಪತ್ರಕರ್ತ ಮಲಾರ್ ಜಯರಾಂ ರೈ ನುಡಿದಿದ್ದಾರೆ. ಅವರು ಮಂಜೇಶ್ವರ ಪ್ರೆಸ್ ಕ್ಲಬ್ ನ ನೂತನ ಕಛೇರಿಯನ್ನು ಉದ್ಗಾಟಿಸಿ ಮಾತನಾಡುತ್ತಿದ್ದರು. ಸಮಾಜದಲ್ಲಿನ ಕುಂದು ಕೊರತೆಗಳನ್ನು ಎತ್ತಿ ತೋರಿಸುವಲ್ಲಿ ಪತ್ರಕರ್ತರು ಮಾಡುವ ಕೆಲಸ ಪ್ರಶಂಸನಾರ್ಹ, ಈ ನಿಟ್ಟಿನಲ್ಲಿ ಯುವ ಪತ್ರಕರ್ತರು ಪತ್ರಿಕಾ ರಂಗಕ್ಕೆ ಬರುವುದು ಬಹಳ ಸಂತೋಷದ ವಿಷಯ ಎಂದರು. ಸಭಾ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದ […]

ತುಳು ಸಿನಿಮಾ ‘ಚಾಲಿಪೋಲಿಲು’ ಸೆಪ್ತೆಂಬರ್ ನಲ್ಲಿ ತೆರೆಗೆ

Saturday, June 7th, 2014
Chali Polilu

ಮಂಗಳೂರು : ಜಯಕಿರಣ ಫಿಲ್ಮ್ಸ್ ಲಾಂಛನದಡಿ ಪ್ರಕಾಶ್ ಪಾಂಡೇಶ್ವರ ಅವರು ನಿರ್ಮಿಸುತ್ತಿರುವ ಚಾಲಿಪೋಲಿಲು ತುಳು ಸಿನಮಾ ಬಗ್ಗೆ ಚಿತ್ರಪ್ರೇಮಿಗಳು ಅತೀವ ನರೀಕ್ಷೆ ಇಟ್ಟುಕೊಂಡು ಕಾಯುತ್ತಿರುವುದಕ್ಕೆ ಕಾರಣಗಳು ಹಲವಾರು. ಈ ಬ್ಯಾನರ್ನಡಿಯಲ್ಲಿ ನಿರ್ಮಾಣವಾಗುವ ಮೊದಲ ಸಿನಿಮಾ ಇದಾಗಿದ್ದರೂ, ಇದರಲ್ಲಿರುವ ಹಲವಾರು ಗುಣಾತ್ಮಕ ಅಂಶಗಳು ಚಿತ್ರಪ್ರೇಮಿಗಳ ನಿರೀಕ್ಷೆಯನ್ನು ನಾಲ್ಕು ಪಟ್ಟು ಹೆಚ್ಚಿಸಿದೆ. ಹಲವು ಪ್ರಥಮಗಳಿಗೆ ಚಾಲಿಪೋಲಿಲು ಸಿನಮಾ ಸಾಕ್ಷಿಯಾಗಿದೆ. ಮುಖ್ಯವಾಗಿ ತುಳು ರಂಗಭೂಮಿಯ ಹೆಚ್ಚಿನೆಲ್ಲ ಪ್ರಮುಖ ತಂಡಗಳ ಮುಖ್ಯ ಕಲಾವಿದರೆಲ್ಲರಿಗೂ ಇಲ್ಲಿ ಅವಕಾಶ ನೀಡಲಾಗಿರುವುದು ಮತ್ತು ಈ ರೀತಿ ಎಲ್ಲ […]

ಮಂಗಳೂರು ತಾ.ಪಂ: ಅಧ್ಯಕ್ಷೆ-ರಜನಿ, ಉಪಾಧ್ಯಕ್ಷ ಪ್ರಕಾಶ್

Saturday, June 7th, 2014
Rajani-Prakash

ಮಂಗಳೂರು : ಮಂಗಳೂರು ತಾಲೂಕ್ ಪಂಚಾಯತ್ ನ ಪ್ರಸಕ್ತ ಆಡಳಿತದ 3ನೇ ಅವಧಿಯ ಅಧ್ಯಕ್ಷೆಯಾಗಿ ರಜನಿ (ಕಾಂಗ್ರೆಸ್) ಹಾಗೂ ಉಪಾಧ್ಯಕ್ಷರಾಗಿ ಪ್ರಕಾಶ್(ಬಿಜೆಪಿ) ಆಯ್ಕೆಯಾಗಿದ್ದಾರೆ. ಶುಕ್ರವಾರ ತಾ.ಪಂ. ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಇಬ್ಬರೂ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಅ ವರ್ಗಕ್ಕೆ ಮೀಸಲಾಗಿತ್ತು. ಅಧ್ಯಕ್ಷರಾಗಿ ಆಯ್ಕೆಯಾದ ರಜನಿ ಅವರು ಪಡುಮಾರ್ನಾಡು ಕ್ಷೇತ್ರ ಹಾಗೂ ಉಪಾಧ್ಯಕ್ಷ ಪ್ರಕಾಶ್ ಅವರು ಬಡಗ ಎಡಪದವು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಮಂಗಳೂರು ಉಪವಿಭಾಗಾಧಿಕಾರಿ ಡಾ.ಪ್ರಶಾಂತ್ […]

ಕೇಂದ್ರ ರೈಲ್ವೇ ಸಚಿವ ಸದಾನಂದ ಗೌಡರನ್ನು ಬೇಟಿ ಮಾಡಿ ಮನವಿ ಸಲ್ಲಿಸಿದ ಯು.ಟಿ ಖಾದರ್

Wednesday, June 4th, 2014
UT Khader

ಮಂಗಳೂರು : ಹೊಸದಿಲ್ಲಿಯಲ್ಲಿ ರೈಲ್ವೇ ಸಚಿವ ಸದಾನಂದ ಗೌಡ ಅವರನ್ನು ಭೇಟಿಯಾದ ರಾಜ್ಯ ಆರೋಗ್ಯ ಸಚಿವ ಖಾದರ್‌ ಅವರು, ಕರಾವಳಿಯ ಇತರ ರೈಲ್ವೇ ಬೇಡಿಕೆ ಈಡೇರಿಸುವಂತೆ ಹಾಗೂ ಮೆಟ್ರೋ ರೈಲು ಆರಂಭಕ್ಕೆ ಚಾಲನೆಯನ್ನು ನೀಡಬೇಕು ಎಂದು ಮನವಿ ಸಲ್ಲಿಸಿದರು. ಮಣಿಪಾಲ, ಮಂಗಳೂರು ಹಾಗೂ ಕೊಣಾಜೆಯನ್ನು ‘ಎಜುಕೇಶನಲ್‌ ಹಬ್‌’ ಎಂದು ಪರಿಗಣಿಸಿ ಈ ನಗರಗಳ ಮಧ್ಯೆ ಮೆಟ್ರೋ ರೈಲು ಓಡಿಸುವಂತೆ ಈ ಹಿಂದೆ ಮನವಿ ಕೂಡ ಸಲ್ಲಿಕೆಯಾಗಿತ್ತು. ರೈಲ್ವೇ ಸಚಿವರು ಕರಾವಳಿ ಜಿಲ್ಲೆಯವರೇ ಆಗಿರುವುದರಿಂದ ಈ ಬೇಡಿಕೆಯನ್ನು ಈಗ […]

ಗ್ಯಾಸ್ ಟ್ಯಾಂಕರ್ ಮತ್ತು ಟ್ರ್ಯಾಕ್ಸ್ ತೂಫಾನ್ ಡಿಕ್ಕಿ: ಮೂವರು ಸ್ಥಳದಲ್ಲೇ ಮೃತ

Tuesday, June 3rd, 2014
Shiradi Accident

ಮಂಗಳೂರು : ಗ್ಯಾಸ್ ಟ್ಯಾಂಕರ್ ಮತ್ತು ಟ್ರ್ಯಾಕ್ಸ್ ತೂಫಾನ್ ನಡುವೆ ಶಿರಾಡಿಯ ಅಡ್ಡಹೊಳೆ ಸಮೀಪ ಸೋಮವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟು, 13 ಜನರು ಗಾಯಗೊಂಡಿದ್ದಾರೆ. ತೂಫಾನ್‌ ಚಾಲಕ ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ದಾವಣಗೆರೆಯ ನಿವಾಸಿಗಳು ಎಂದು ಗುರುತಿಸಲಾಗಿದೆ. ಸುಬ್ರಮಣ್ಯ ದೇವರ ದರ್ಶನ ಪಡೆದು ರಾಷ್ಟ್ರೀಯ ಹೆದ್ದಾರಿ 75ರ ಮಾರ್ಗವಾಗಿ ಉಡುಪಿಗೆ ತೆರಳುತ್ತಿದ್ದಾಗ, ಶಿರಾಡಿ ಗ್ರಾಮದ ಅಡ್ಡಹೊಳೆ ಸಮೀಪ ಸೋಮವಾರ ತೂಫಾನ್‌ ವಾಹನಕ್ಕೆ ಗ್ಯಾಸ್ ಟ್ಯಾಂಕರ್‌ ಡಿಕ್ಕಿ ಹೊಡೆದಿದೆ. ಮೃತಪಟ್ಟವರನ್ನು ತೂಫಾನ್ […]

ಪ್ರಶ್ನೆಗಳಲೇ ಪತ್ರಕರ್ತರ ಅಸ್ತ್ರವಾಗಿದೆ: ದಿನೇಶ್ ಅಮೀನ್ ಮಟ್ಟು

Sunday, June 1st, 2014
Mattu Dinesh

ಮುಂಬಯಿ : ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಮಾಧ್ಯಮ ಸಲಹಾಗಾರ, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರು ಇಂದಿಲ್ಲಿ ಶನಿವಾರ ಪೂರ್ವಾಹ್ನ ಸಾಂತಕ್ರೂಜ್ ಪೂರ್ವದ ವಕೋಲ ಉತ್ಕರ್ಷ್ ನಗರ್ ಇಲ್ಲಿನ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಕಛೇರಿಗೆ ಭೇಟಿ ನೀಡಿದರು. ಕನ್ನಡಿಗರ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅಧ್ಯಕ್ಷತೆಯಲ್ಲಿ ನಡೆಸಲಾಗಿದ್ದ ಸಭೆಯಲ್ಲಿ ಹಿರಿಯ ಪತ್ರಕರ್ತ, ಅಂಕಣಕಾರ-ಚಿಂತಕ, ರವಿ.ರಾ.ಅಂಚನ್, ಸಂಘದ ಸಲಹಾಗಾರ ಗ್ರೇಗರಿ ಎಲ್.ಡಿ’ಅಲ್ಮೇಡಾ ಮತ್ತು ಉದ್ಯಮಿ ಸುಧಾಕರ್ ಉಚ್ಚಿಲ್ ಅವರು ವೇದಿಕೆಯಲ್ಲಿ ಆಸೀನರಿದ್ದು, ದಿನೇಶ್ ಮಟ್ಟು […]