ಎರಡನೇ ಬಾರಿ ಹಸೆಮಣೆ ಏರಿದ ನಟಿ ಶ್ರುತಿ

Thursday, June 6th, 2013
Shruti Chandrashekar

ಕೊಲ್ಲೂರು : ನಟಿ ಶ್ರುತಿ ಅವರು ಗುರುವಾರ ಪತ್ರಕರ್ತ ಚಂದ್ರಚೂಡ ಚಕ್ರವರ್ತಿ ಅಲಿಯಾಸ್ ಚಂದ್ರಶೇಖರ್ ಅವರನ್ನು  ವರಿಸುವ ಮೂಲಕ ನೂತನ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ. ಖ್ಯಾತ ನಿರ್ದೇಶಕ ಎಸ್ ಮಹೇಂದರ್ ಅವರ ಜೊತೆ ವಿವಾಹ ವಿಚ್ಛೇದನ ಪಡೆದಿರುವ ಶ್ರುತಿ ಕೊಲ್ಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ಇಂದು ಬೆಳಗ್ಗೆ 7.45ಕ್ಕೆಎರಡನೇ ಬಾರಿ ಹಸೆಮಣೆ ಏರಿದ್ದಾರೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಬಾಣಿಗ ಗ್ರಾಮದಲ್ಲಿ ಶ್ರುತಿ-ಚಂದ್ರಶೇಖರ್ ಅವರ ಮದುವೆ ನಿಗದಿಯಾಗಿತ್ತು. ಗ್ರಾಮದ ಪ್ರಸಿದ್ಧ ಬಾಣೇಶ್ವರ, ವೆಂಕಟರಮಣ, ಆಂಜನೇಯ ಸ್ವಾಮಿ (ಒಟ್ಟಿಗೆ ಇರುವ ದೇವಸ್ಥಾನಗಳು) ದೇವಸ್ಥಾನದಲ್ಲಿ […]

ಶಾಸಕ ವಸಂತ ಬಂಗೇರ ವಿಧಾನಸಭೆಯಲ್ಲಿ ತುಳು ಭಾಷೆಯಲ್ಲಿ ಪ್ರಮಾಣ ವಚನಕ್ಕೆ ಸ್ಪೀಕರ್ ಆಕ್ಷೇಪ

Wednesday, June 5th, 2013
Vasanth Bangera

ಬೆಳ್ತಂಗಡಿ  : ಬೆಳ್ತಂಗಡಿ ಶಾಸಕ ವಸಂತ ಬಂಗೇರ ಅವರು ವಿಧಾನಸಭೆಯಲ್ಲಿ ಮೇ 30ರಂದು ತುಳುವಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅದರೆ, ಆ ಸಂದರ್ಭದಲ್ಲಿ ಹಂಗಾಮಿ ಸ್ಪೀಕರ್ ಆಗಿದ್ದ ಮಾಲೀಕಯ್ಯ ಗುತ್ತೇದಾರ್ ಅವರು ತುಳುಭಾಷೆ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಲ್ಲ. ನೀವು ತುಳು ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ ಅದು ಅಸಿಂಧುವಾಗಲಿದೆ ಎಂದಿದ್ದರು. ಶಾಸಕ ವಸಂತ ಬಂಗೇರ ಅವರು ತುಳು ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಭಾಷೆಯ ಅಸ್ತಿತ್ವ ಹಾಗೂ ಮಹತ್ವವನ್ನು ಜಗತ್ತಿಗೆ ಸಾರಿದ್ದಾರೆ.  ಇದು ತುಳುವರ […]

ಗುಜರಾತ್ 6 ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು

Wednesday, June 5th, 2013
Narendra Modi

ಅಹಮದಾಬಾದ್:  ಗುಜರಾತ್ ವಿಧಾನಸಭೆಯ ನಾಲ್ಕು ಹಾಗೂ ಎರಡು ಲೋಕಸಭೆ ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಎಲ್ಲಾ ಆರು ಸ್ಥಾನಗಳಲ್ಲೂ ಭರ್ಜರಿ ಜಯ ಗಳಿಸಿದೆ. ಈ ಮೂಲಕ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಮತ್ತಷ್ಟು ಬಲ ಬಂದಂತಾಗಿದೆ. ಪೋರಬಂದರ್ ಮತ್ತು ಬನಸ್ಕಾಂತ ಲೋಕಸಭಾ ಕ್ಷೇತ್ರಗಳಿಗೆ ಹಾಗೂ ಲಿಂಬ್ಡಿ, ಚೆತ್ಪುರ್, ಧೋರ್ಜಿ ಹಾಗೂ ಮಾರ್ವ ವಿಧಾನಸಭೆಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಎಲ್ಲ ಸ್ಥಾನಗಳಲ್ಲೂ ಗೆಲುವು ಸಾಧಿಸಿದೆ. ಈ ಎಲ್ಲ ಕ್ಷೇತ್ರಗಳಿಗೆ ಕಳೆದ ಭಾನುವಾರ ಮತದಾನ ನಡೆದಿತ್ತು. ಗುಜರಾತ್ ಉಪ […]

900 ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

Wednesday, June 5th, 2013
Mutton Merchants Association book distributes

ಮಂಗಳೂರು : ಮಂಗಳೂರಿನ ಜಮಿಯತುಲ್ ಸಾ-ಅದಾ (ಮಾಂಸ ವ್ಯಾಪಾರಸ್ತರ ಸಂಘ) ವತಿಯಿಂದ 1ರಿಂದ 10ನೆ ತರಗತಿಯ ವರೆಗಿನ 900 ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸುವ ಕಾರ್ಯಕ್ರಮ ಇಂದು ಕುದ್ರೋಳಿಯ ಏಒನ್ ಬಾಗ್ ನಲ್ಲಿರುವ ಕಚೇರಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಂದರ್ ಠಾಣೆಯ ಇನ್ಸ್ ಪೆಕ್ಟರ್ ವಿ.ಟಿ. ಸುಬ್ರಹ್ಮಣ್ಯ ಮಾತನಾಡಿ, ಓದು ಬರಹ ಇಲ್ಲದ ವ್ಯಕ್ತಿಗೆ ಕಾನೂನಿನ ಅರಿವು ಇರುವುದಿಲ್ಲ. ಇಂತಹವರು ಸಮಾಜದಲ್ಲಿ ತಪ್ಪು ಹೆಜ್ಜೆಗಳನ್ನು ಇಡುತ್ತಾರೆ. ಜ್ಞಾನವೇ ಆಸ್ತಿ, ಅದನ್ನು ಗಳಿಸಲು ಶ್ರಮಿಸಿರಿ […]

ನಾಲ್ಕು ವರ್ಷ ಯುವತಿಯನ್ನು ಬಂಧನದಲ್ಲಿದ್ದಲ್ಲಿಟ್ಟು ಪೋಷಕರಿಂದ ಚಿತ್ರಹಿಂಸೆ

Tuesday, June 4th, 2013
Hemavathi

ಬೆಂಗಳೂರು : ಯುವತಿಯೊಬ್ಬಳನ್ನು ಆಕೆಯ ಪೋಷಕರೇ ಗೃಹ ಬಂಧನದಲ್ಲಿದ್ದಲ್ಲಿಟ್ಟು ಚಿತ್ರಹಿಂಸೆನೀಡಿದ ಘಟನೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದಿದೆ. ಮಗಳು ಪ್ರೀತಿ ಮಾಡಿದ ತಪ್ಪಿಗಾಗಿ ಆಕೆಯನ್ನು ಬಂಧನದಲ್ಲಿಡಲಾಗಿತ್ತು. ಮಂಗಳವಾರ ಆರೋಗ್ಯ ಸಚಿವ ಯು.ಟಿ. ಖಾದರ್ ಜೊತೆ ಪೊಲೀಸರು ಮತ್ತು ವೈದ್ಯರ ಸಹಾಯದಿಂದ ಗೃಹ ಬಂಧನದಲ್ಲಿದ್ದ ಯುವತಿಯನ್ನು ರಕ್ಷಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹೇಮಾವತಿ (35) ಮಲ್ಲೇಶ್ವರಂ ನಿವಾಸಿಗಳಾದ ರೇಣುಕಪ್ಪ ಮತ್ತು ಗೌರಮ್ಮ ನ ಮಗಳು.  ನಾಲ್ಕು ವರ್ಷಗಳಿಂದ ಅರೆನಗ್ನ ಸ್ಥಿತಿಯಲ್ಲಿ ಮನೆಯಲ್ಲಿ ಆಕೆಯನ್ನು ಕೂಡಿ ಹಾಕಿದ್ದರು.  ಯುವತಿ ಕೊಠಡಿ ಬಿಟ್ಟು ಹೊರಗೆ […]

ನಗರದ ಹಂಪನಕಟ್ಟೆಯ ಕಟ್ಟಡ ಕುಸಿತ ಇಬ್ಬರಿಗೆ ಗಾಯ

Tuesday, June 4th, 2013
Building collapses at hampanka

ಮಂಗಳೂರು : ರವಿವಾರ ಒಂದೇ ಸಮನೆ ಸುರಿದ ಮಳೆಯಿಂದಾಗಿ ಶಿಥಿಲಗೊಂಡ ನಗರದ ಹಂಪನಕಟ್ಟೆಯ ಕ್ಲಾಕ್ ಟವರ್ ಬಳಿಯಿರುವ ಕಟ್ಟಡದ ಮೇಲಂತಸ್ಥಿನ ಮಳಿಗೆಯ ಮುಂಭಾಗ ಕುಸಿದು ಬಿದ್ದ ಘಟನೆ ಸೋಮವಾರ ನಡೆದಿದೆ. ಸೋಮವಾರ ಬೆಳಗ್ಗೆ ಈ ಘಟನೆ ಸಂಭವಿಸಿದ್ದು ಘಟನೆಯಿಂದ ಜಾನ್(62) ಹಾಗು ಪವನ್ ಕುಮಾರ್ ಎಂಬಿಬ್ಬರು ಗಾಯಗೊಂಡಿದ್ದು, ಇವರು ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಿಂದಾಗಿ ಜಾನ್ ರ ಕಾಲಿನ ಮೂಳೆ ಮುರಿದಿದ್ದು, ಪವನ್ ಕುಮಾರ್ ಗೆ ಸಣ್ಣಪುಟ್ಟ ಗಾಯಗಳಾಗಿವೆ. ಕುಸಿದ ಕಟ್ಟಡವು ಬಹಳಷ್ಟು ಹಳೆಯದಾಗಿದ್ದು, […]

ಪುತ್ತೂರು : ಬಸ್ ಜೀಪ್ ನಡುವೆ ಭೀಕರ ಅಪಘಾತ, ನಾಲ್ವರ ದುರ್ಮರಣ

Monday, June 3rd, 2013
puttur Accident

ಪುತ್ತೂರು : ರವಿವಾರ ಸಂಜೆ ಪುತ್ತೂರು ಸುಳ್ಯ ಹೆದ್ದಾರಿಯ ಸಂಟ್ಯಾರು ಎಂಬಲ್ಲಿ ಕೆ ಎಸ್ ಆರ್ ಟಿಸಿ ಮತ್ತು ಜೀಪ್ ನಡುವೆ ಸಂಭವಿಸಿದ ಅಪಘಾತದಲ್ಲಿ ಒಂದೇ ಕುಂಟುಂಬದ ನಾಲ್ವರು ಮೃತಪಟ್ಟು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಸಂಭವಿಸಿದೆ. ಅಪಘಾತದಲ್ಲಿ ಪುತ್ತೂರಿನ ಬೈಪಾಸ್ ತೆಂಕಿಲ ನಿವಾಸಿ ಹಾಗೂ ಪುರಸಭಾ ಸದಸ್ಯೆ ಲೀನಾ ಮಸ್ಕರೇನ್ಜಸ್(46), ಆಕೆಯ ಪತಿ ಪುತ್ತೂರಿನ ಸಂತ ಫಿಲೋಮಿನಾ ಪ್ರೌಢಶಾಲೆಯ ಸಿಬ್ಬಂಧಿ ಪೀಟರ್ ಮಸ್ಕರೇನ್ಜಸ್(50), ಪುತ್ರ ಪ್ರಿತೇಶ್ ಮಸ್ಕರೇನ್ಜಸ್ (13) ಮತ್ತು ಪೀಟರ್ ಮಸ್ಕರೇನ್ಜಸ್ ರ ಸಹೋದರ […]

ನಾಟೆಕಲ್ ಬಳಿ ಉರುಳಿ ಬಿದ್ದ ಸಿಮೆಂಟ್ ಮಿಕ್ಸರ್ ವಾಹನ, ಅಪಾಯದಿಂದ ಪಾರಾದ ಚಾಲಕ

Thursday, May 30th, 2013
Cement mixer truck accident near Natikal

ಮಂಗಳೂರು : ಗುರುವಾರ ಬೆಳಗಿನ ಜಾವ ಮಂಗಳೂರಿನಿಂದ ಮುಡಿಪು ಕಡೆಗೆ ತೆರಳುತ್ತಿದ್ದ ಸಿಮೆಂಟ್ ಮಿಕ್ಸರ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಘಟನೆ ನಗರದ ಹೊರವಲಯದ ನಾಟೆಕಲ್ ಬಳಿ ಸಂಭವಿಸಿದೆ. ಗುರುವಾರ ಬೆಳಗ್ಗೆ ಸುಮಾರು 2.30 ರ ವೇಳೆಗೆ ಕಾಂಕ್ರೀಟ್ ಮಿಕ್ಸರ್ ವಾಹನವು ಮಂಗಳೂರಿನಿಂದ ಮುಡಿಪು ಬಳಿ ಇರುವ ಇನ್ಫೋಸಿಸ್ ಕಡೆಗೆ ತೆರಳುತ್ತಿದ್ದಾಗ ನಾಟೆಕಲ್ ಬಳಿ ಇರುವ ಅಪಾಯಕಾರಿ ತಿರುವಿನಲ್ಲಿ ಚಾಲಕನ  ನಿಯಂತ್ರಣ ತಪ್ಪಿದ ಕಾರಣದಿಂದಾಗಿ ಉರುಳಿ ಬಿದ್ದಿದೆ. ಘಟನೆಯಿಂದ ವಾಹನವು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ  […]

ಪೊಲೀಸರ ಕಣ್ತಪ್ಪಿಸಿ ಪರಾರಿಯಾದ ಆರೋಪಿ, ಸೆರೆ

Thursday, May 30th, 2013
CP Abdul Latif

ಕಾಸರಗೋಡು : ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತನಾದ ಆರೋಪಿಯನ್ನು  ನ್ಯಾಯಾಲಯಕ್ಕೆ ಹಾಜರುಪಡಿಸಿ ಕರೆದುಕೊಂಡು ಹೋಗುವಾಗ, ಪೊಲೀಸರ ಕಣ್ತಪ್ಪಿಸಿ ಪರಾರಿಯಾದಾತನನ್ನು ಬಂಧಿಸುವಲ್ಲಿ ಕಾಸರಗೋಡು ಪೊಲೀಸರು ಯಶಸ್ವಿಯಾಗಿದ್ದಾರೆ. ಚಟ್ಟಂಚಾಲ್ ತೆಕ್ಕಿಲ್ ನ ಸಿ.ಎ.ಅಬ್ದುಲ್ ಲತೀಫ್ (43) ಪರಾರಿಯಾದ ಆರೋಪಿಯಾಗಿದ್ದಾನೆ. ಕಳವು ಪ್ರಕರಣದ ಹಿನ್ನಲೆಯಲ್ಲಿ ಕಣ್ಣೂರು ಸೆಂಟ್ರಲ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಲತೀಫ್ ನನ್ನು ಪೊಲೀಸರು ಸೋಮವಾರದಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಬಳಿಕ ವಾಪಾಸ್ ಕಣ್ಣೂರಿಗೆ ಕರೆದುಕೊಂಡು ಹೋಗುವಾಗ ವಿದ್ಯಾನಗರ ಬಸ್ ನಿಲ್ದಾಣದ ಬಳಿ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದನು. ಈ ವೇಳೆ ಪರಾರಿಯಾದ […]

ಕೊಟ್ಟಾರ ಸಮೀಪ ಬಂಗ್ರಕೂಳೂರು ಬಳಿ ಸೇತುವೆಗೆ ಡಿಕ್ಕಿ ಹೊಡೆದ ಬಸ್, ತಪ್ಪಿದ ಅನಾಹುತ

Tuesday, May 28th, 2013
bus skids Bangrakulur

ಮಂಗಳೂರು : ಮಂಗಳವಾರ ಹುಬ್ಬಳ್ಳಿಯಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಕೊಟ್ಟಾರ ಸಮೀಪದ ಬಂಗ್ರಕೂಳೂರು ಬಳಿಯ ಕಿರು ಸೇತುವೆಯ ತಡೆಗೋಡೆಗೆ ಹೊಡೆದು ನಿಂತ ಘಟನೆ ನಡೆದಿದೆ. ಹುಬ್ಬಳ್ಳಿಯಿಂದ ಹೊರಟ ಕೆ.ಎಸ್.ಆರ್.ಟಿ.ಸಿ ಬಸ್ ಮಂಗಳೂರಿನ ಕೂಳೂರು ಸಮೀಪಿಸುತ್ತಿದ್ದಂತೆ ಬಸ್ ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡು, ಬಸ್ ನ ಸ್ಟೀರಿಂಗ್ ವ್ಹೀಲ್ ತುಂಡಾಗಿದೆ. ಚಾಲಕ ಬಸ್ ನ್ನು ನಿಧಾನವಾಗಿ ಚಲಾಯಿಸಿಕೊಂಡು ಬಂದರೂ ಬಂಗ್ರಕೂಳೂರು ಸಮೀಪ  ಸುರಿದ ಮಳೆಯಿಂದಾಗಿ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್  ಕಿರು […]