ವಾರ್ತಾ ಇಲಾಖೆಯ ಪ್ರಾಯೋಜಕತ್ವದಲ್ಲಿನ ವಿಧಾನ ಸಭೆ-60 ಛಾಯಾಚಿತ್ರ ಪ್ರದರ್ಶನ

Saturday, December 8th, 2012
Karnataka Vidhana Sabha 60

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಡಿಸೆಂಬರ್ 7 ರಂದು ವಿಧಾನ ಸೌಧದ ಅಪರೂಪದ ಛಾಯಾಚಿತ್ರಗಳ ಛಾಯಾಚಿತ್ರ ಪ್ರದರ್ಶನ ವಿಧಾನ ಸಭೆ-60 ನಡೆಯಿತು. ರಾಜ್ಯ ವಿಧಾನ ಸಭೆಗೆ 60 ವರ್ಷ ತುಂಬಿದ ಸವಿನೆನಪಿಗಾಗಿ ವಾರ್ತಾ ಇಲಾಖೆಯ ಪ್ರಾಯೋಜಕತ್ವದಲ್ಲಿ ಈ ಪ್ರದರ್ಶನ ಏರ್ಪಡಿಸಲಾಗಿತ್ತು. ವಿಧಾನಸೌಧ ನಿರ್ಮಾಣದಿಂದ ಹಿಡಿದು, ವಿವಿಧ ಹಂತದ ಕಾಮಗಾರಿಗಳ ಛಾಯಾಚಿತ್ರಗಳು, ವಿಧಾನ ಸೌಧ ನಿರ್ಮಾಣದ ಕಾರ್ಯನೆರವೇರಿಸಿದ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ, ರಾಜ್ಯಪಾಲ ಜಯಚಾಮರಾಜೇಂದ್ರ ಒಡೆಯರ್ ರಿಂದ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿನ ಛಾಯಾಚಿತ್ರಗಳು […]

ಬಹು ನಿರೀಕ್ಷೆಯ ತುಳುಚಿತ್ರ “ತೆಲಿಕೆದ ಬೊಳ್ಳಿ” ತೆರೆಗೆ

Friday, December 7th, 2012
Thelikeda Bolli film released

ಮಂಗಳೂರು :ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ಬಹು ನಿರೀಕ್ಷೆಯ ತುಳುಚಿತ್ರ “ತೆಲಿಕೆದ ಬೊಳ್ಳಿ” ಗುರುವಾರ ತೆರೆಕಂಡಿತು. ಸೆಂಟ್ರಲ್‌ ಸಿನಿಮಾಸ್‌ ಲಾಂಛನದಲ್ಲಿ ನಿರ್ಮಾಣಗೊಂಡ ಈ ಚಿತ್ರದ ಬಿಡುಗಡೆ ಸಮಾರಂಭವು ನಗರದ ಸೆಂಟ್ರಲ್ ಟಾಕೀಸ್ ನಲ್ಲಿ ಗುರುವಾರ ನಡೆಯಿತು. ಸಮಾರಂಭದಲ್ಲಿ ಚಿತ್ರದ ನಿರ್ದೇಶಕ ಪಿ.ಎಚ್‌. ವಿಶ್ವನಾಥ್‌, ಛಾಯಾಗ್ರಾಹಕ ಆರ್‌. ಮಂಜುನಾಥ್‌, ಚಿತ್ರದ ನಿರ್ಮಾಪಕರಾದ ಸುಧೀರ್‌ ಕಾಮತ್‌ ಮತ್ತು ಶರ್ಮಿಳಾ ಡಿ. ಕಾಪಿಕಾಡ್‌, ತೆಲಿಕೆದ ಬೊಳ್ಳಿ ಚಿತ್ರದ ಪ್ರಮುಖ ನಟ ಹಾಗೂ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದ ದೇವದಾಸ್‌ […]

ಬೆಂಗಳೂರು – ಬಂಟ್ವಾಳ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದ ಬೀಕರ ಅಪಘಾತ ಒಂದೇ ಕುಟುಂಬದ 6 ಮಂದಿ ದುರ್ಮರಣ

Friday, December 7th, 2012
mishap near Kushalnagar

ಕುಶಾಲನಗರ :ಗುರುವಾರ ಸಂಜೆ ಕಾರುಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಹಾಗು ಒಂದೇ ಕುಟುಂಬದ 6 ಮಂದಿ ಸದಸ್ಯರು ಸೇರಿದಂತೆ ಒಟ್ಟು 7 ಮಂದಿ ಮೃತಪಟ್ಟ ಘಟನೆ ಬೈಲುಕೊಪ್ಪದ ಸಮೀಪ ಬೆಂಗಳೂರು- ಬಂಟ್ವಾಳ ರಾಜ್ಯ ಮುಖ್ಯ ಹೆದ್ದಾರಿಯಲ್ಲಿ ನಡೆದಿದೆ. ಸುಂಟಿಕೊಪ್ಪದ ಕಾರ್ಪೆಂಟರ್ ಶಫಿ (43), ಪತ್ನಿ ರಮೀಜಾ (36) ಪುತ್ರರಾದ ಇರ್ಫಾನ್‌ (19), ಇಮ್ರಾನ್‌ (16), ಪುತ್ರಿ ತಸ್ಮಿಯಾ (13), ಕಿರಿಯ ಪುತ್ರ ಮೂರು ವರ್ಷದ ಆಫಾನ್‌, ಶಫಿ ಅವರ ತಮ್ಮ […]

ನಗರದ ಕಲ್ಲಾಪು ಬಳಿ ಬಸ್ -ಜೀಪ್ ಡಿಕ್ಕಿ ಆರುಮಂದಿಗೆ ಗಾಯ

Friday, December 7th, 2012
Jeep bus hit at Kallaup

ಮಂಗಳೂರು : ಗುರುವಾರ ಬೆಳಗ್ಗೆ ತೊಕ್ಕೊಟ್ಟು ಸಮೀಪ ಕಲ್ಲಾಪು ಬಳಿ ಬಸ್ ಮತ್ತು ಕಾರ್ ನಡುವೆ ಮುಖಾಮುಕಿ ಸಂಭವಿಸಿದ ಡಿಕ್ಕಿಯಲ್ಲಿ ಜೀಪ್ ನಲ್ಲಿದ್ದ 6 ಮಂದಿ ಗಾಯಗೊಂಡಿದ್ದು ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ವಿದೇಶಕ್ಕೆ ತೆರಳಲಿದ್ದ ಮನೆಮಂದಿಯೊಬ್ಬರನ್ನು ಬಜ್ಪೆ ವಿಮಾನ ನಿಲ್ದಾಣಕ್ಕೆ ಬಿಟ್ಟು ಹಿಂದಿರುಗುತ್ತಿದ್ದ ವೇಳೆ ಕುಂಪಲದಿಂದ ಸ್ಟೇಟ್ ಬ್ಯಾಂಕ್ ಗೆ ತೆರಳುತ್ತಿದ್ದ ಸಿಟಿ ಬಸ್ ಡಿಕ್ಕಿ ಹೊಡೆದಿದೆ. ಕಾಸರಗೋಡು ವಿದ್ಯಾನಗರದ ನಾಸಿರ್, ಅಬ್ದುಲ್ ಕುಂಞ, ಅನ್ಫಾಲ, ಅಶ್ರಫ್, ನೌಫಾರ ಹಾಗೂ ಜೀಪ್ ಚಾಲಕ ಅಬೂಬಕರ್ ಗಾಯಾಳುಗಳಾಗಿದ್ದು ಈ […]

ಆರ್ಥಿಕ ಮುಗ್ಗಟ್ಟಿನಿಂದಾಗಿ ಕುಂದಾಪುರ – ತಲಪಾಡಿ ನಡುವಿನ ಚತುಷ್ಪಥ ಕಾಮಗಾರಿ ಕುಂಠಿತ

Thursday, December 6th, 2012
Kundapur Talapady project

ಮಂಗಳೂರು :ಕುಂದಾಪುರ- ಸುರತ್ಕಲ್ ಮತ್ತು ನಂತೂರು- ತಲಪಾಡಿ ನಡುವಿನ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ಗುತ್ತಿಗೆಯನ್ನು 2010ರ ಸೆ.5ರಲ್ಲಿ ನವಯುಗ ಎಂಜಿನಿಯರಿಂಗ್ ಕಂಪನಿ ವಹಿಸಿಕೊಂಡಿದ್ದು 910 ದಿನ ಅಂದರೆ 2013ರ ಮಾ.5ಕ್ಕೆ ಮುಗಿಸುವ ಒಪ್ಪಂದವಾಗಿತ್ತು. ಅದರಂತೆ ಪ್ರಾರಂಭದಲ್ಲಿ ಕಾಮಗಾರಿ ಶರವೇಗದಲ್ಲಿ ನಡೆಯುವ ಮೂಲಕ ಪ್ರಶಂಸೆಗೆ ಪಾತ್ರವಾಗಿತ್ತು. ಆದರೆ ಇದೀಗ ಗುತ್ತಿಗೆ ಪಡೆದಿರುವ ಕಂಪನಿ ಎದುರಿಸುತ್ತಿರುವ ಆರ್ಥಿಕ ಮುಗ್ಗಟ್ಟಿನಿಂದಾಗಿ ಮಳೆಗಾಲದ ನಂತರ ಕಾಮಗಾರಿ ಪುನಾರಂಭಗೊಂಡಿಲ್ಲ. ತಿಂಗಳಿಗೆ ಕನಿಷ್ಠ 10 ಕಿ.ಮೀ. ಕಾಮಗಾರಿ ಮುಗಿಸಬೇಕು ಎಂಬ ಉದ್ದೇಶವಿದ್ದರೂ, ಈಗಿನ ಆರ್ಥಿಕ […]

ಮೀನುಗಾರಿಕೆಗೆ ತೆರಳಿದ ಬೋಟ್‌ ಮುಳುಗಡೆ, ಲಕ್ಷಾಂತರ ರೂಪಾಯಿ ನಷ್ಟ

Thursday, December 6th, 2012
Boat collision

ಮಂಗಳೂರು : ಮೀನುಗಾರಿಕೆಗೆ ತೆರಳಿದ ಎಫ್‌. ಎಂ. ಫಯಾಜ್‌ ಎಂಬುವವರಿಗೆ ಸೇರಿದ ಬೋಟೊಂದು ಮಂಗಳವಾರ ಮುಳುಗಡೆಗೊಂಡು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ . ಮಂಗಳವಾರ ಮಲ್ಪೆ ಬಂದರಿನಿಂದ ಹೊರಟ ಬೋಟ್‌ ರಾತ್ರಿ ಸುಮಾರು 11 ಗಂಟೆ ವೇಳೆಗೆ ಬಂದರಿನ ನೇರ ತೆಲ್‌ಕಲ್‌ ಸಮೀಪ ಸಾಗುತ್ತಿದ್ದಾಗ ಬೋಟ್‌ನ ಅಡಿಭಾಗ ಕಲ್ಲಿಗೆ ತಾಗಿ ಹಲಗೆ ಮುರಿದು ನೀರು ಒಳನುಗ್ಗಿ ಬೋಟ್‌ ಮುಳುಗಡೆಗೊಂಡಿದೆ. ಬೋಟ್‌ನಲ್ಲಿದ್ದ 7 ಮಂದಿ ಮೀನುಗಾರರು ಹಾಗೂ ಬೋಟನ್ನು ಸಮೀಪದಲ್ಲಿದ್ದ ಹನುಮಬೆನಕ ಬೋಟಿನವರು ರಕ್ಷಿಸಿ ದಡ ಸೇರಿಸಿದ್ದಾರೆ. ಸುಮಾರು […]

ವೇತನ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸುವಂತೆ ಕೋರಿ ನಗರದಲ್ಲಿ ಆಶಾ ಕಾರ್ಯಕರ್ತೆಯರಿಂದ ಪ್ರತಿಭಟನೆ

Thursday, December 6th, 2012
Asha Workers

ಮಂಗಳೂರು :ಭಾರತೀಯ ಮಜ್ದೂರ್ ಸಂಘದ ಸಂಯೋಜನೆಗೆ ಒಳಪಟ್ಟ ಭಾರತೀಯ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಇದಕ್ಕೂ ಮೊದಲು ನಗರದ ಭಾರತೀಯ ಮಜ್ದೂರ್ ಸಂಘದ ಕಚೇರಿಯಿಂದ ಜಿಲ್ಲಾಧಿಕಾರಿ ಕಛೇರಿ ವರೆಗೆ ಆಶಾ ಕಾರ್ಯಕರ್ತೆಯರು ಕಾಲ್ನಡಿಗೆಯಲ್ಲಿ ಘೋಷಣೆಗಳನ್ನು ಕೂಗುತ್ತಾ ತೆರಳಿದರು. ಭಾರತೀಯ ಮಜ್ದೂರ್ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಸೂರ್ಯ ನಾರಾಯಣರಾವ್ ಮಾತನಾಡಿ ಸ್ವಾತಂತ್ರ್ಯ ಹೋರಾಟದ ಸಂದರ್ಭ ಮಹಾತ್ಮ ಗಾಂಧಿಯವರು ಪ್ರತಿ ಕಾರ್ಮಿಕರಿಗೆ ಗರಿಷ್ಟ ಸೌಲಭ್ಯ ನೀಡಬೇಕು ಆಗ ಮಾತ್ರ ನಮ್ಮ […]

ಮಂಗಳೂರು ವಿಶ್ವ ವಿದ್ಯಾಲಯದ ಪ್ರಾಧ್ಯಾಪಕಿ ಅನಿತಾ ರವಿಶಂಕರ್ ಲೋಕಾಯುಕ್ತ ಬಲೆಗೆ

Wednesday, December 5th, 2012
Mangalore University Professor

ಮಂಗಳೂರು :ಮಂಗಳೂರು ವಿಶ್ವ ವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ. ಅನಿತಾ ರವಿಶಂಕರ್ ರವರನ್ನು ಲಂಚ ಸ್ವೀಕಾರದ ಹಿನ್ನಲೆಯಲ್ಲಿ ಮಂಗಳವಾರ ಬಂಧಿಸಿದ್ದಾರೆ. ಪ್ರಾಧ್ಯಾಪಕಿ ಅನಿತಾ ರವಿಶಂಕರ್ ಪಿಎಚ್‌ಡಿ ಆಕಾಂಕ್ಷಿ ವಿದ್ಯಾರ್ಥಿಗಳಿಂದ ತಲಾ 5 ಸಾವಿರ ರೂಪಾಯಿಗಳನ್ನು ಸ್ವೀಕರಿಸುತ್ತಿದ್ದರೆನ್ನಲಾಗಿದೆ. ಈ ಹಿನ್ನಲೆಯಲ್ಲಿ ಪಿಎಚ್‌ಡಿ ಆಕಾಂಕ್ಷಿ ಪ್ರೇಮ ಡಿಸೋಜ ಎಂಬವರು ಪಿಎಚ್‌ಡಿಗಾಗಿ ವಿದ್ಯಾರ್ಥಿಗಳಿಂದ ಲಂಚ ಸ್ವೀಕರಿಸುವ ಉಪನ್ಯಾಸಕರಿಗೆ ಸರಿಯಾಗಿ ಪಾಠ ಕಲಿಸಬೇಕೆಂದು ಈ ಬಗ್ಗೆ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಪ್ರೇಮ ಅವರಿಗೆ ಧ್ವನಿ […]

ಮಂಗಳೂರಿನಲ್ಲಿ ಸಂಗೋಳ್ಳಿ ರಾಯಣ್ಣ ದರ್ಶನ್

Wednesday, December 5th, 2012
Darshan in Mangalore

ಮಂಗಳೂರು :ಭಾರೀ ಯಶಸ್ಸಿನಿಂದ ರಾಜ್ಯಾದ್ಯಂತ ಪ್ರದರ್ಶನ ಕಾಣುತ್ತಿರುವ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರದ ಗೆಲುವಿನ ಹಿನ್ನೆಲೆಯಲ್ಲಿ ಗೆಲುವಿಗೆ ಕಾರಣರಾದವರಿಗೆ ಧನ್ಯವಾದ ತಿಳಿಸಲು ಚಿತ್ರತಂಡ ರಾಜ್ಯಾದ್ಯಂತ ಪ್ರವಾಸ ಹೊರಟಿದ್ದು ಈ ಸಂಬಂಧ ನಿನ್ನೆ ಮಂಗಳೂರಿನ ಸೆಂಟ್ರಲ್ ಥಿಯೇಟರ್‌ ಗೆ ಮಧ್ಯಾಹ್ನ ಸುಮಾರು 12ರ ವೇಳೆಗೆ ನಟ ದರ್ಶನ್ ಹಾಗು ಚಿತ್ರ ತಂಡ ಚಿತ್ರಮಂದಿರಕ್ಕೆ ಭೇಟಿ ನೀಡಿದರು. ಈ ವೇಳೆಗೆ ದರ್ಶನ್‌ ಆಗಮನದ ಸುದ್ದಿ ತಿಳಿದ ಟಾಕೀಸಿನ ಒಳಗೆ ಇದ್ದ ಚಿತ್ರ ಪ್ರೇಮಿಗಳು ಮತ್ತು ಟಾಕೀಸಿನ ಹೊರಗೆ ಇದ್ದ ಚಿತ್ರಪ್ರೇಮಿಗಳು […]

ಬಹುನಿರೀಕ್ಷೆಯ ತುಳು ಚಿತ್ರ ‘ತೆಲಿಕೆದ ಬೊಳ್ಳಿ’ ನಾಳೆ ತೆರೆಗೆ

Wednesday, December 5th, 2012
Telikeda Bolli Tulu Movie

ಮಂಗಳೂರು : ಬಹುನಿರೀಕ್ಷೆಯ, ಬಹುತಾರಾಗಣದ ಹಾಸ್ಯ ಪ್ರಧಾನ ತೆಲಿಕೆದ ಬೊಳ್ಳಿ ಚಿತ್ರವು ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಡಿಸೆಂಬರ್ 6ರಂದು ತೆರೆಕಾಣಲಿದೆ. ಈ ಸಂಬಂಧ ಮಂಗಳವಾರ ನಗರದಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತೆಲಿಕೆದ ಬೊಳ್ಳಿ ಚಿತ್ರದ ಪ್ರಮುಖ ನಟ ಹಾಗೂ ಚಿತ್ರಕಥೆ, ಸಂಭಾಷಣೆ ಬರೆದ ದೇವದಾಸ್‌ ಕಾಪಿಕಾಡ್‌ ರವರು ಮಾಹಿತಿ ನೀಡಿದರು. ಸುಧೀರ್‌ ಕಾಮತ್‌ ಮತ್ತು ಶರ್ಮಿಳಾ ದೇವದಾಸ್‌ ಕಾಪಿಕಾಡ್‌ ನಿರ್ಮಾಪಕರಾಗಿರುವ ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಪಿ.ಎಚ್‌. ವಿಶ್ವನಾಥ್‌ ಅವರ ನಿರ್ದೇಶನವಿದೆ. ಆರ್‌. ಮಂಜುನಾಥ್‌ ಅವರ […]