ಕೊಲೆಯ ಪ್ರತೀಕಾರ : ರೌಡಿ ಕಬೀರ್ ಬರ್ಬರ ಹತ್ಯೆ

Friday, February 25th, 2011
ರೌಡಿ ಕಬೀರ್ ಬರ್ಬರ ಹತ್ಯೆ

ಮಂಗಳೂರು : ಎರಡು ಕೊಲೆ ಹಾಗೂ ಒಂಬತ್ತು ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಗುರುಪುರ ನಿವಾಸಿ ಅಕ್ಬರ್ ಯಾನೆ ಕಬೀರ್ ಗುರುಪುರ (30ವ) ಇಂದು ಮಧ್ಯಾಹ್ನ 12.40ರ ಸುಮಾರಿಗೆ ಗುರುಪುರ ಸೇತುವೆ ಬಳಿ ಬರ್ಬರವಾಗಿ ಹಂತಕರ ತಲವಾರಿನೇಟಿಗೆ ಪ್ರಾಣ ಬಿಟ್ಟಿದ್ದಾನೆ. ಶುಕ್ರವಾರದ ಮಧ್ಯಾಹ್ನದ ನಮಾಜಿಗೆ ತನ್ನ ಸ್ನೇಹಿತರಾದ ನಝೀರ್ ಹಾಗೂ ಸರ್ಪರಾಜ್ ಜೊತೆಗೆ ಬೈಕಿನಲ್ಲಿ ಗುರುಪುರದ ಮಸೀದಿಯೊಂದಕ್ಕೆ ತೆರರಳುತ್ತಿದ್ದ ವೇಳೆ ಟಾಟಾ ಸುಮೋದಲ್ಲಿ ಬಂದ ಹಂತಕರ ತಂಡವೊಂದು ಹಿಂದಿನಿಂದ ಬಂದು ಬೈಕಿಗೆ  ಹೊಡೆಯಿತು, ಪರಿಣಾಮ ಬೈಕು ಚಲಾಯಿಸುತ್ತಿದ್ದ ಮೂರು […]

ರಾಜ್ಯ ಬಜೆಟ್ : ಗ್ರಾಮೀಣ ಅಭಿವೃದ್ಧಿಯ ಜೊತೆಗೆ ನಗರ ಅಭಿವೃದ್ಧಿಗೆ ವಿಶೇಷ ಆದ್ಯತೆ

Thursday, February 24th, 2011
ರಾಜ್ಯ ಬಜೆಟ್

ಬೆಂಗಳೂರು : ರಾಜ್ಯ ಸರಕಾರದ ಆಡಳಿತಾವದಿಯ ಎರಡೂವರೆ ವರ್ಷದ ಅವದಿಯಲ್ಲಿ ಸತತವಾಗಿ ಆರನೇ ಬಾರಿಗೆ  ಬಜೆಟ್ ಮಂಡಿಸಿದ ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅನ್ನದಾತನ ಹೊಲದಲ್ಲಿ ಚಿನ್ನದ ಹೊಳೆಯನ್ನೇ ಹರಿಸಿದ್ದಾರೆ. ದಕ್ಷಿಣ ಭಾರತದ ಏಕೈಕ ಬಿಜೆಪಿ ಸರ್ಕಾರ ಎಂದಿಗೂ ಅನ್ನದಾತರ ಪರ ಎಂದ ಸಿಎಂ, ರೈತರ ನಾಡಗೀತೆ ‘ನೇಗಿಲ ಹಿಡಿದು.. ಉಳುವ ಯೋಗಿಯ..’ ಸಾಲುಗಳನ್ನು ಹೇಳಿದರು. ನಂತರ ಕೋಟಿ ವಿದ್ಯೆಗಳಿಗಿಂತ ಮೇಟಿ ವಿದ್ಯೆಯೆ ಮೇಲು ಎನ್ನುತ್ತಾ ಆಯವ್ಯಯ ಪತ್ರವನ್ನು ಸದನದಲ್ಲಿ ಮಂಡಿಸಿದರು. ಕೃಷಿ ಬಜೆಟ್ ಮಂಡಿಸಿದ ಬಳಿಕ  […]

ಇತಿಹಾಸ ಪ್ರಸಿದ್ಧ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಮಾರಿಪುಜೆ

Wednesday, February 23rd, 2011
ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನ

ಮಂಗಳೂರು :  ಮಂಗಳೂರಿನ ಇತಿಹಾಸ ಪ್ರಸಿದ್ಧ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ  ವರ್ಷಾವಧಿ ಮಹಾಪೂಜೆಯು ಸೋಮವಾರ ಮತ್ತು ಮಂಗಳವಾರ ಎರಡು ದಿನಗಳ ಕಾಲ ಅತೀ ವಿಜೃಂಭಣೆಯಿಂದ ಜರಗಿತು. ಮೊದಲ ದಿನ ರಾತ್ರಿ  ಮಾರಿಯಮ್ಮ ಕ್ಷೇತ್ರದ ವಿಶೇಷ ಸಂಪ್ರದಾಯವಾದ ಹಾಲು ಉಕ್ಕಿಸುವ ಪೂಜೆಯೊಂದಿಗೆ ಆರಂಭವಾದ ಉತ್ಸವವು ಎರಡನೇ ದಿನದಂದು ಇಲ್ಲಿನ ಪರಂಪರೆಯಂತೆ ನೈವೇದ್ಯ ಬಲಿ, ರಾಶಿಪೂಜೆ, ಮಾರಿ ಉಚ್ಚಿಷ್ಠ, ಮೊದಲಾದ ಸಾಂಪ್ರದಾಯಿಕ ವಿಧಿ ವಿಧಾನದೊಂದಿಗೆ ನಡೆಯಿತು. ವರ್ಷಾವಧಿ ಮಹೋತ್ಸವಕ್ಕೆ ಫೆ.11ರಂದು ಪ್ರಸಾದ ಹಾರಿಸುವ ಮೂಲಕ ಈ ಬಾರಿಯ ಚಾಲನೆ […]

ಮೀಸಲಾತಿ ಆಶ್ರಯಿಸದೇ ಮಹಿಳೆ ಮುನ್ನಡೆಯಬೇಕು: ಶೈಲಜಾ ಭಟ್

Friday, February 18th, 2011
ಮಹಿಳಾ ಸಬಲೀಕರಣ

ಮಂಗಳೂರು : ಚುನಾವಣೆಯಲ್ಲಿ ಮೀಸಲಾತಿ ಕಲ್ಪಿಸುವ ಮೂಲಕ ಸರ್ಕಾರ ಮಹಿಳೆಗೆ ರಾಜಕೀಯ ಸ್ಥಾನಮಾನ ದೊರೆಯುವ ಅವಕಾಶ ಕಲ್ಪಿಸಿದೆ. ಒಂದು ಹಂತದ ವರೆಗೆ ಈ ಸೌಲಭ್ಯವನ್ನು ಬಳಸಿಕೊಂಡು, ಮುಂದೆ ಮೀಸಲಾತಿಯ ಆಶ್ರಯವಿಲ್ಲದೆಯೂ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವಷ್ಟು ಮಹಿಳೆ ಸಬಲಳಾಗಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನ ಅಧ್ಯಕ್ಷೆ ಕೆ.ಟಿ. ಶೈಲಜಾ ಭಟ್ ಅವರು ತಿಳಿಸಿದರು. ಮಹಿಳಾ ಸಬಲೀಕರಣ ಕುರಿತು ವಾರ್ತಾ ಇಲಾಖೆ ಶಕ್ತಿನಗರದ ಕಲಾಂಗಣ್ನಲ್ಲಿ ಆಯೋಜಿಸಿರುವ ಎರಡು ದಿನಗಳ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಮಾಜಿ […]

ಹರಿಷಿ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಮಾಜಿ ಸಚಿವ ಹಾಲಪ್ಪ ಹಲ್ಲೆ

Wednesday, February 16th, 2011
ಹಾಲಪ್ಪ ಉಮಾಪತಿ

ಶಿವಮೊಗ್ಗ : ಸೊರಬದ ಹರಿಷಿ ಗ್ರಾಮದ ಆರೋಗ್ಯ ಕೇಂದ್ರದ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ಹರಿಷಿ ಗ್ರಾಮ ಪಂಚಾಯತ್ ಅಧ್ಯಕ್ಷ ಉಮಾಪತಿಯವರ ಮೇಲೆ ಹಾಲಪ್ಪ ಬೂಟು ಕಾಲಿನಿಂದ ಹಲ್ಲೆ ನಡೆಸಿದ್ದಾರೆ. ಬೂಟು ಕಾಲಿನಿಂದ ಎದೆಗೆ ಒದ್ದು ಹಲ್ಲೆ ನಡೆಸಿರುವ ಘಟನೆಯಿಂದ ಉಮಾಪತಿ ಸೊರಬ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ. ಉದ್ಘಾಟನಾ ಸಮಾರಂಭಕ್ಕೆ ಬಂದಿದ್ದ ಹಾಲಪ್ಪ ಆರೋಗ್ಯ ಕೇಂದ್ರದ ಕೋಣೆಗಳಿಗೆ ಬೀಗ ಹಾಕಿರುವುದನ್ನು ಪ್ರಶ್ನಿಸಿದ್ದರು. ಆರೋಗ್ಯದ ಕೇಂದ್ರದ ಕೆಲಸ ಪೂರ್ಣವಾಗಿಲ್ಲ ಎಂದು ಅಧ್ಯಕ್ಷ ಉಮಾಪತಿ ಬೀಗ ಹಾಕಿದ್ದರು. ಇದರಿಂದ […]

ವೆನ್ಲಾಕ್ ಆಸ್ಪತ್ರೆ ಮತ್ತು ಲೇಡಿಗೋಷನ್ ಆಸ್ಪತ್ರೆಯ ಅವ್ಯವಸ್ಥೆಯ ವಿರುದ್ದ ಕಾರ್ಮಿಕ ಸಂಘದ ಪ್ರತಿಭಟನೆ

Tuesday, February 15th, 2011
ವೆನ್ಲಾಕ್ ಆಸ್ಪತ್ರೆ ಮತ್ತು ಲೇಡಿಗೋಷನ್ ಆಸ್ಪತ್ರೆಯ ಅವ್ಯವಸ್ಥೆಯ ವಿರುದ್ದ ಪ್ರತಿಭಟನೆ

ಮಂಗಳೂರು : ದ.ಕ. ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮತ್ತು ಲೇಡಿಗೋಷನ್ ಆಸ್ಪತ್ರೆಯ ಅವ್ಯವಸ್ಥೆ, ಸಿಬ್ಬಂದಿಗಳ ಮತ್ತು ಅಲ್ಲಿನ ವೈದ್ಯರುಗಳ ನಿರ್ಲಕ್ಷ್ಯ, ಆರೋಗ್ಯ ರಕ್ಷಾ ಕವಚ ಸಮಿತಿ ಹೆಸರಿನಲ್ಲಿ ಖಾಸಗೀಕರಣದ ವಿರುದ್ಧ ಅಖಿಲ ಭಾರತ ಕಾರ್ಮಿಕ ಸಂಘ ಶೀರ್ತಾಡಿ, ಮಂಗಳೂರು ಇದರ ವತಿಯಿಂದ ಇಂದು ಬೆಳಿಗ್ಗೆ 10.00ರಿಂದ  ನಗರದ ವೆನ್ಲಾಕ್ ಆಸ್ಪತ್ರೆಯ ಮುಂಭಾಗದಲ್ಲಿ ಅಹೋ ರಾತ್ರಿ ಪ್ರತಿಭಟನೆ ಆರಂಭಗೊಂಡಿದೆ. ಪ್ರತಿಭಟನೆಯ ನೇತೃತ್ವ ವಹಿಸಿದ ಅಖಿಲ ಭಾರತ ಕಾರ್ಮಿಕ ಸಂಘ  ಪ್ರಧಾನ ಕಾರ್ಯದರ್ಶಿ ಸುದತ್ತ ಜೈನ್ ಶೀರ್ತಾಡಿ ಅವರು ಮಾತನಾಡಿ, […]

ಈಜಿಪ್ಟನ ಜನತೆಗೆ ಪಿ.ಎಫ್.ಐ ಅಭಿನಂದನೆ

Tuesday, February 15th, 2011
ಪಾಪ್ಯಲರ್ ಫ್ರಂಟ್ ಆಫ್ ಇಂಡಿಯಾ

ಮಂಗಳೂರು: ಈಜಿಪ್ಟಿನ ಅಧ್ಯಕ್ಷ ಹೋಸ್ನಿ ಮುಬಾರಕ್ ಅಧಿಕಾರಕ್ಕೆ ಅಂತ್ಯ ಕಾಣಿಸಿದ ಈಜಿಪ್ಟಿನ ಜನತೆಗೆ ಅಭಿನಂದನೆ ಸೂಚಿಸುವ ಸಭೆಯನ್ನು ಪಾಪ್ಯಲರ್ ಫ್ರಂಟ್ ಆಫ್ ಇಂಡಿಯಾದ ಮಂಗಳೂರು ಶಾಖೆ ಸೋಮವಾರ ಸಂಜೆ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸಿತು. ಅಭಿನಂದನೆ ಸಭೆಯನ್ನುದ್ದೇಶಿಸಿ ಮಾತನಾಡಿದ ಪಿ.ಎಫ್.ಐ ಸದಸ್ಯ ನಝೀರ್ ಬೋಳಂಗಡಿ ಮಾತನಾಡಿ ಮೂವತ್ತು ವರ್ಷಗಳಿಂದ ಈಜಿಪ್ಟಿನ ಜನತೆಯ ಮೇಲೆ ಸರ್ವಾಧಿಕಾರರವನ್ನು ನಡೆಸುತ್ತಿದ್ದ ಹೋಸ್ನಿ ಮುಬಾರಕ್ ಅಧಿಕಾರವನ್ನು ಪ್ರತಿಭಟನೆಯ ಮೂಲಕ ಕೊನೆಗಾಣಿಸಿ ಜಯ ಪಡೆದ ಅಲ್ಲಿನ ಜನತೆಯನ್ನು ನಾವು ಅಭಿನಂದಿಸುತ್ತೇವೆ. ಈಜಿಪ್ಟಿನ ಸರ್ವಾಧಿಕಾರಿಗೆ ಆದ […]

ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರಾಗಿ ಶ್ರೀಮತಿ ಭವ್ಯ ಪೂಜಾರ್ತಿ

Friday, February 11th, 2011
ಮಂಗಳೂರು ತಾಲೂಕು ಪಂಚಾಯತ್

ಮಂಗಳೂರು : ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರಾಗಿ ಶ್ರೀಮತಿ ಭವ್ಯ ಪೂಜಾರ್ತಿ ಯವರು ಆಯ್ಕೆಯಾಗಿರುತ್ತಾರೆ. ಇವರು ಕಲ್ಲಮುಂಡ್ಕೂರು ತಾಲೂಕು ಪಂಚಾಯತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದು, ಪದವೀಧರರಾಗಿದ್ದಾರೆ. ತಾಲೂಕುಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ, ಭವ್ಯಾ ಪೂಜಾರ್ತಿಯವರು 19 ಮತಗಳನ್ನು ಪಡೆದು, ಕಾಂಗ್ರೆಸ್ನ ಸುರೇಖಾ ಚಂದ್ರಹಾಸ್ ರವರನ್ನು 1 ಮತದ ಅಂತರದಿಂದ ಸೋಲಿಸಿದರು. ಸುರೇಖಾ ಚಂದ್ರಹಾಸ್ರವರು 18 ಮತಗಳನ್ನು ಪಡೆದಿದ್ದರು. ಹಾಗೆಯೇ ಮಂಗಳೂರು ತಾಲೂಕು ಪಂಚಾಯತ್ ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ವಿಜಯಲಕ್ಷ್ಮಿ ಶೆಟ್ಟಿ ಆಯ್ಕೆಯಾಗಿರುತ್ತಾರೆ. ಇವರು […]

ದ.ಕ.ಜಿಲ್ಲೆಯಲ್ಲಿ 1.96ಲಕ್ಷ ಎಕರೆ ಸರಕಾರಿ ಭೂಮಿ ಒತ್ತುವರಿ-ಸುಬೋಧ್ ಯಾದವ್

Wednesday, February 9th, 2011
ಸುಬೋಧ್ ಯಾದವ್

ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯಲ್ಲಿ 5,63,000 ಎಕರೆ ಸರಕಾರಿ ಭೂಮಿ ಇದ್ದು,ಇದರಲ್ಲಿ 1,96,000 ಎಕರೆಗೆ ಭೂಮಿಯನ್ನು ಖಾಸಗಿಯವರು ಒತ್ತುವರಿ ಮಾಡಿದ್ದಾರೆ ಎಂದು ದ.ಕ. ಜಿಲ್ಲಾಧಿಕಾರಿ ಶ್ರೀ ಸುಬೋಧ್ ಯಾದವ್ ತಿಳಿಸಿದ್ದಾರೆ. ಅವರು ಇಂದು ತಮ್ಮ ಕಚೇರಿಯಲ್ಲಿ ನಡೆದ ಸರಕಾರಿ ಭೂಮಿ ಒತ್ತುವರಿ ತೆರವುಗೊಳಿಸುವ ಕುರಿತಾದ ಕಂದಾಯಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಬೆಳ್ತಂಗಡಿ ತಾಲೂಕಿನಲ್ಲಿ 2 ಲಕ್ಷ ಎಕರೆ ಸರಕಾರಿ ಜಮೀನು ಇದ್ದು,ಇದರಲ್ಲಿ 50,000 ಎಕರೆ ಜಮೀನು ಒತ್ತುವರಿಯಾಗಿದೆ. ಇದೇ ರೀತಿ ಸುಳ್ಯ ತಾಲ್ಲೂಕಿನಲ್ಲಿರುವ 1.20 ಲಕ್ಷ […]

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಕೆ.ಟಿ ಶೈಲಾಜಾ ಭಟ್

Wednesday, February 9th, 2011
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಚುನಾವಣೆ

ಮಂಗಳೂರು,ಫೆ.08: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ 2011-12ರ ಅವಧಿಯ ಅಧ್ಯಕ್ಷರಾಗಿ ಬಿಜೆಪಿ ಸದಸ್ಯರಾದ ಕೆ.ಟಿ ಶೈಲಾಜಾ ಭಟ್  ಅವರು ಅಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಧರ್ಮಸ್ಥಳ ಕ್ಷೇತ್ರದ ಬಿಜೆಪಿ ಸದಸ್ಯೆ ಧನಲಕ್ಷ್ಮೀ ಜನಾರ್ಧನ್.ಡಿ ಇವರು ಅಯ್ಕೆಯಾಗಿದ್ದಾರೆ . ಚುನಾವಣಾಧಿಕಾರಿ   ಎಂ.ವಿ. ಜಯಂತಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ಸಹಾಯಕ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ  ಅವರ ಉಪಸ್ಥಿತಿಯಲ್ಲಿ ನಗರದ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ  ಅಧ್ಯಕ್ಷ ಹಾಗೂ ಉಪಾಧ್ಯಕ್ಷ  ಚುನಾವಣೆ ನಡೆಯಿತು. ಒಟ್ಟು 35 ಸದಸ್ಯ ಬಲದ ದ.ಕ.ಜಿಲ್ಲಾ ಪಂಚಾಯತ್‌ನಲ್ಲಿ ಬಿಜೆಪಿ […]