ಬೊಕ್ಕಪಟ್ನ- ಬೋಳೂರಿನಿಂದ ಕಂಕನಾಡಿ ರೈಲ್ವೇ ನಿಲ್ದಾಣದ ವರೆಗೆ ನೂತನ ಸರಕಾರಿ ಸಿಟಿ ಬಸ್ ಸೇವೆಗೆ ಶಾಸಕ ಕಾಮತ್ ಚಾಲನೆ

Monday, September 27th, 2021
Bokkapatna

ಮಂಗಳೂರು: ಜಿಲ್ಲಾಡಳಿತ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಬೊಕ್ಕಪಟ್ನ- ಬೋಳೂರಿನ ಸುಲ್ತಾನ್ ಬತ್ತೇರಿಯಿಂದ ಅಮೃತಾನಂದಮಯಿ ಆಶ್ರಮದ ಮೂಲಕವಾಗಿ ಕಂಕನಾಡಿ ರೈಲ್ವೇ ಸ್ಟೇಷನ್ ವರೆಗೆ ಮತ್ತು ಅಲ್ಲಿಂದ ವಾಪಸು ಬೋಳೂರು ಸುಲ್ತಾನ್ ಬತ್ತೇರಿ – ಬೊಕ್ಕಪಟ್ನದ ವರೆಗೆ ಸರಕಾರಿ ಸಿಟಿ ಬಸ್ ಸೇವೆಯನ್ನು ಹೊಸದಾಗಿ ದಿನಾಂಕ 27.9.2021 ರಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಶ್ರೀ ಡಿ.ವೇದವ್ಯಾಸ ಕಾಮತ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ಸ್ಥಳೀಯ ಸಾರ್ವಜನಿಕರು ಬಹಳ ಕಾಲದಿಂದಲೂ ಇಲ್ಲಿ ಸರಕಾರಿ […]

ಕುಂಬಳೆಯ ವಿದ್ಯಾರ್ಥಿನಿಯ ಆತ್ಮಹತ್ಯೆಗೆ ಸಂಬಂಧಪಟ್ಟ ಮತ್ತೋರ್ವನ ಬಂಧನ

Monday, September 27th, 2021
Vishal Rathod

ಕಾಸರಗೋಡು : ಮಂಗಳೂರಿನ ಖಾಸಗಿ ಕಾಲೇಜು ವಿದ್ಯಾರ್ಥಿನಿಯೋರ್ವಳ ಆತ್ಮಹತ್ಯೆಗೆ ಸಂಬಂಧಪಟ್ಟಂತೆ ಕುಂಬಳೆ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಬಂಧಿತನನ್ನು ಬಿಜಾಪುರದ ಮೂಲದ ವಿಶಾಲ್ ರಾಥೋಡ್ (22) ಎಂದು ಗುರುತಿಸಲಾಗಿದೆ. ಕುಂಬಳೆಯ ಸ್ನೇಹಾ ಎಂಬ ವಿದ್ಯಾರ್ಥಿನಿಯ ಆತ್ಮಹತ್ಯೆಗೆ ಸಂಬಂಧಪಟ್ಟಂತೆ ವಿಶಾಲ್ ನನ್ನು ಬಂಧಿಸಲಾಗಿದೆ. ಸೆ. 17ರಂದು ಸಂಜೆ ಕಾಲೇಜಿನಿಂದ ಮನೆಗೆ ಬಂದಿದ್ದ ಸ್ನೇಹಾ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಮನೆಯಿಂದ ಲಭಿಸಿದ್ದ ಪತ್ರದಲ್ಲಿ ಇಬ್ಬರ ಮೊಬೈಲ್ ನಂಬ್ರ ಹಾಗೂ ಹೆಸರು ಬರೆದಿಡಲಾಗಿತ್ತು. ಇದನ್ನು ಕೇಂದ್ರೀಕರಿಸಿ ತನಿಖೆ ನಡೆಸಿದ ಕುಂಬಳೆ ಠಾಣಾ ಪೊಲೀಸರು […]

ತುಳುವೆರೆ ಪಕ್ಷದ ವೆಬ್‌ಸೈಟ್ ಲೋಕಾರ್ಪಣೆ ಮತ್ತು ಸದಸ್ಯತ್ವ ಅಭಿಯಾನಕ್ಕೆ ಚಾಲನೆ

Monday, September 27th, 2021
Tuluvere Paksha

ಬೆಳ್ತಂಗಡಿ : ತುಳುವೆರೆ ಪಕ್ಷದ ವೆಬ್‌ಸೈಟ್ ಲೋಕಾರ್ಪಣೆ ಮತ್ತು ಸದಸ್ಯತ್ವ ಅಭಿಯಾನಕ್ಕೆ ಅಂಬೇಡ್ಕರ್ ಭವನದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಚಾಲನೆ ನೀಡಲಾಯಿತು. ಕಾರ್ಯಕರ್ತರ ಸಮಾವೇಶ ಮತ್ತು ಸಮಾರಂಭದ ಅಧ್ಯಕ್ಷತೆಯನ್ನು ಪಕ್ಷದ ಸ್ಥಾಪಕ ಅಧ್ಯಕ್ಷರಾದ ಶೈಲೇಶ್ ಆರ್.ಜೆ.ಯವರು ವಹಿಸಿ ಮಾತನಾಡುತ್ತ ತುಳು ಭಾಷೆಯ ಸ್ಥಾನಮಾನ ಮತ್ತು ತುಲುನಾಡ್ ರಾಜ್ಯ ರಚನೆಯ ಬೇಡಿಕೆಗೆ ಸುಧೀರ್ಘಕಾಲದಿಂದ ತುಳುವರು ಹೋರಾಟ ನಡೆಸುತ್ತಿದ್ದರು ತುಳು ಭಾಷೆಗೆ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಅಧಿಕೃತ ಭಾಷೆಯೆಂಬ ಸ್ಥಾನಮಾನ ನೀಡಲು ವಿಫಲವಾಗಿದೆ, 8ನೇ ಪರಿಚ್ಛೇದಕ್ಕೆ ಸೇರಿಸಲು […]

ಕಾರ್ಕಳ ಮೆಸ್ಕಾಂ ಉಪವಿಭಾಗಗಳಿಗೆ ರೂ. 6 ಕೋಟಿ ವಿಶೇಷ ಅನುದಾನ : ವಿ ಸುನಿಲ್ ಕುಮಾರ್

Sunday, September 26th, 2021
Sunil Kumar V

ಕಾರ್ಕಳ : ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಲೊ ವೊಲ್ಟೇಜ್ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಹಾಗೂ ಸಮರ್ಪಕ ವಿದ್ಯುತ್ ಪೂರೈಕೆಗಾಗಿ ಕಾರ್ಕಳ ಕ್ಷೇತ್ರದ ಕಾರ್ಕಳ ಮತ್ತು ಹೆಬ್ರಿ ಮೆಸ್ಕಾಂ ಉಪ ವಿಭಾಗಗಳಿಗೆ ರೂ. 6.00 ಕೋಟಿ ವಿಶೇಷ ಅನುದಾನದಲ್ಲಿ ಹೆಚ್ಚುವರಿಯಾಗಿ ವಿದ್ಯುತ್ ಪರಿವರ್ತಕ (ಟಿಸಿ) ಗಳನ್ನು ಅಳವಡಿಸಲು ಕ್ರಮ ಕೈಗೊಂಡಿದ್ದು ಮುಂದಿನ ದಿನಗಳಲ್ಲಿ ಕಾರ್ಕಳ ಕ್ಷೇತ್ರದಲ್ಲಿ ಲೊ ವೊಲ್ಟೇಜ್ ಹಾಗೂ ವಿದ್ಯುತ್ ಪರಿವರ್ತಕಗಳ ಸಮಸ್ಯೆ ಬಗೆಹರಿಸಲಾಗುವುದು ಎಂದು ಕ್ಷೇತ್ರದ ಶಾಸಕರು, ಮಾನ್ಯ ಇಂಧನ […]

‘ತುಳುವರ ಹಬ್ಬ ಎಂದರೆ ಪ್ರಕೃತಿ ಪೂಜೆ’

Sunday, September 26th, 2021
Veena Shetty

ಮಂಗಳೂರು : ಕೃಷಿ ಪ್ರಧಾನವಾದ ತುಳುನಾಡಿನಲ್ಲಿ ಹಬ್ಬಗಳೆಂದರೆ ಪ್ರಕೃತಿ ಪೂಜೆ. ತುಳುವರು ಪ್ರಕೃತಿಯ ಆರಾಧಕರು.ಪ್ರಕೃತಿಯನ್ನು ಬಿಟ್ಟು ತುಳುವರನ್ನು ಕಲ್ಪನೆ ಕಷ್ಟ’ ಎಂದು ಎಂ ಆರ್ ಪಿ ಎಲ್ ಉಪ ಮಹಾಪ್ರಬಂಧಕರಾದ ವೀಣಾ ಟಿ.ಶೆಟ್ಟಿ ಅವರು ಹೇಳಿದರು. ಅವರು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಉಪನ್ಯಾಸ ಮಾಲಿಕೆಯ 5ನೇ ಕಾರ್ಯಕ್ರಮದಲ್ಲಿ ‘ತುಳುವ ಮಣ್ಣ್’ದ ಕಮ್ಮೆನ’ ಎಂಬ ವಿಷಯದಲ್ಲಿ ತುಳು ಉಪನ್ಯಾಸ ನೀಡಿ ಮಾತನಾಡುದರು. ತುಳುವರು ಹೆಣ್ಣನ್ನು ಪೂಜಿಸುವವರು. ತುಳುನಾಡಿನಲ್ಲಿ ಅವಿಭಕ್ತ ಕುಟುಂಬ ಪದ್ಧತಿ ಪ್ರಮುಖವಾಗಿದ್ದು ಜಾತ್ರೆಗಳು,ಯಕ್ಷಗಾನ, […]

ಕೇಂದ್ರ ಸರ್ಕಾರದ ಸಚಿವ ಸರ್ಬಾನಂದ ಸೋನೊವಾಲ್ ಧರ್ಮಸ್ಥಳಕ್ಕೆ ಭೇಟಿ

Sunday, September 26th, 2021
Sonowal

ಧರ್ಮಸ್ಥಳ : ಕೇಂದ್ರ ಸರ್ಕಾರದ ಆಯುಷ್ ಇಲಾಖಾ ಸಚಿವ ಸರ್ಬಾನಂದ ಸೋನೊವಾಲ್ ಶನಿವಾರ ಧರ್ಮಸ್ಥಳಕ್ಕೆ ಭೇಟಿ ನೀಡಿ, ದೇವರ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾನ್ಯ ಸಚಿವರನ್ನು ಗೌರವಿಸಿದರು. ಉಡುಪಿಯಲ್ಲಿ ಎಸ್.ಡಿ.ಎಂ. ಆಯುರ್ವೇದ ಆಸ್ಪತ್ರೆಯಲ್ಲಿ ರತ್ನಶ್ರೀ ಆರೋಗ್ಯಧಾಮವನ್ನು ಉದ್ಘಾಟಿಸಿದ ಬಳಿಕ ಸಚಿವರು ಧರ್ಮಸ್ಥಳಕ್ಕೆ ಭೇಟಿ ನೀಡಿ, ಶಾಂತಿವನದಲ್ಲಿರುವ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಗೂ ಭೇಟಿ ನೀಡಿದ ಸಚಿವರು ಆಸ್ಪತ್ರೆಯಲ್ಲಿರುವ ವಿಶೇಷ ಸೌಲಭ್ಯಗಳು, ಶಿಸ್ತು, ಸ್ವಚ್ಛತೆ ಮತ್ತು ಸೌಜನ್ಯಪೂರ್ಣ ಸೇವೆ ಬಗ್ಯೆ ಮೆಚ್ಚುಗೆ ವ್ಯಕ್ತಪಡಿಸಿದರು. […]

ಧರ್ಮೇಂದ್ರ ಹಾಗೂ ರಾಜೇಶ್ ಪವಿತ್ರನ್ ಇವರನ್ನು ಈ ಸಂಘಟನೆಯಿಂದ ಉಚ್ಚಾಟಿಸಲಾಗಿದೆ : ಡಾ.ಎಲ್ ಕೆ ಸುವರ್ಣ

Sunday, September 26th, 2021
KL Suvarna

ಮಂಗಳೂರು :  ಸಿಎಂ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಜೈಲು ಪಾಲಾದ ಧರ್ಮೇಂದ್ರ ಹಾಗೂ ಇತರರಿಗೂ ಅಖಿಲ ಭಾರತ ಹಿಂದೂ ಮಹಾಸಭಾಕ್ಕೂ ಯಾವುದೇ ಸಂಬಂಧವಿಲ್ಲ ಈಗಲೂ ಕೆಲ ಮಾಧ್ಯಮಗಳಲ್ಲಿ ಅವರ ಹೆಸರುಗಳ ಮುಂದೆ ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಎಂದು ಉಲ್ಲೇಖಿಸಲಾಗುತ್ತದೆ. ಧರ್ಮೇಂದ್ರ ಹಾಗೂ ರಾಜೇಶ್ ಪವಿತ್ರನ್ ಇವರನ್ನು ಈ ಸಂಘಟನೆಯಿಂದ ಉಚ್ಚಾಟಿಸಲಾಗಿದೆ ಎಂದು ಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ಡಾ.ಎಲ್ ಕೆ ಸುವರ್ಣ ಸ್ಪಷ್ಟಪಡಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು, ಧರ್ಮೇಂದ್ರ […]

27ರಿಂದ ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆ: ನಿಷೇಧಾಜ್ಞೆ ಜಾರಿ

Saturday, September 25th, 2021
sslc exam

ಮಂಗಳೂರು : ಇದೇ ಸೆ. 27 ರಿಂದ 29ರ ವರೆಗೆ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಗಳು ನಡೆಯಲಿರುವ ಹಿನ್ನಲೆಯಲ್ಲಿ ಆ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ, ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿಗಳೂ ಆದ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ. ಸೆ. 27 ರಿಂದ 29ರ ವರೆಗೆ ಜಿಲ್ಲೆಯ 17 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿರುವ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆ ಸುಸೂತ್ರವಾಗಿ ನಡೆಸಲು ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲು […]

ಸಂಗೀತ ಕ್ಷೇತ್ರದ ದಿಗ್ಗಜ ಕಲಾವಿದರಿಗೆ ಶ್ರದ್ಧಾಂಜಲಿ

Friday, September 24th, 2021
Kalkura

ಮಂಗಳೂರು  : ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಇತ್ತೀಚೆಗೆ ನಮ್ಮನ್ನಗಲಿದ ಹಿರಿಯ ಚೇತನಗಳಾದ ಸರೋಜಾ ರಾವ್ ಮತ್ತು ಎಂ.ಆರ್. ಸಾಯಿನಾಥ್ ಅವರಿಗೆ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಲ್ಕೂರ ಪ್ರತಿಷ್ಠಾನದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಗೀತ ಗುರುಪರಂಪರೆಯ ಶಿಕ್ಷಣ ಪದ್ಧತಿಯಲ್ಲಿ ಯಾವುದೇ ರಾಜಿಯನ್ನು ಮಾಡಿಕೊಳ್ಳದೆ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಶಕ್ತಿ ನೀಡಿದ ಕೆಲವೇ ಕೆಲವರಲ್ಲಿ ಸರೋಜಮ್ಮ ಒಬ್ಬರಾಗಿದ್ದಾರೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾದ ಸರೋಜಮ್ಮ ಅವರದು ನಿಷ್ಕಲ್ಮಶ ವ್ಯಕ್ತಿತ್ವವಾಗಿತ್ತು. ಇವರ ಅಗಲಿಕೆಯಿಂದ ಸಂಗೀತ […]

ಅಕ್ರಮ ಗೋ ಸಾಗಾಟ ಮತ್ತು ಅಕ್ರಮ ಮತಾಂತರ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ : ವಿ. ಸುನಿಲ್ ಕುಮಾರ್

Friday, September 24th, 2021
Sunil Kumar

ಕಾರ್ಕಳ : ಇತ್ತೀಚಿನ ದಿನಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗೋ ಸಾಗಾಟ ಮತ್ತು ಕಾನೂನು ಬಾಹಿರ ಮತಾಂತರ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಗಮನಕ್ಕೆ ಬಂದಿದ್ದು ಈ ನಿಟ್ಟಿನಲ್ಲಿ ಇಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ಹತ್ತಿಕ್ಕುವಂತೆ ಹಾಗೂ ಕಠಿಣ ಕ್ರಮ ಕೈಗೊಳ್ಳುವಂತೆ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾನ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರಾದ ವಿ ಸುನಿಲ್ ಕುಮಾರ್ ರವರು ಕಟ್ಟು ನಿಟ್ಟಿನ ಸೂಚನೆ […]