ಪತ್ರಿಕಾಭವನದ ಮುಂಭಾಗದಲ್ಲಿ ಉದ್ಯಾನವನ: ವೇದವ್ಯಾಸ ಕಾಮತ್

Tuesday, July 13th, 2021
Press Club VanaMahotsava1

  ಮಂಗಳೂರು: ಮಂಗಳೂರು ಪತ್ರಿಕಾ ಭವನದ ಮುಂಭಾಗದಲ್ಲಿ ಮಂಗಳೂರು ಮಹಾ ನಗರಪಾಲಿಕೆ ಹಾಗೂ ಮಂಗಳೂರು ಸ್ಮಾರ್ಟ್ ಸಿಟಿ ಸಹಯೋಗದಲ್ಲಿ ಉದ್ಯಾನವನ ನಿರ್ಮಾಣ ಮಾಡುವುದಾಗಿ ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ್ ಕಾಮತ್ ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ,ಅರಣ್ಯ ಇಲಾಖೆಯ ಸಹಯೋಗದಲ್ಲಿ ಸೋಮವಾರ ನಗರದ ಪತ್ರಿಕಾ ಭವನದ ಬಳಿ ಆಯೋಜಿಸಲಾದ ವನಮಹೋತ್ಸವ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಪರಿಸರವನ್ನು ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿ ಆಗಿದೆ .ಈ ನಿಟ್ಟಿನಲ್ಲಿ […]

ನಗ್ರಿ ಶ್ರೀ ಶಾರದ ಭಜನಾ ಮಂದಿರದ ಸಮುದಾಯದ ಭವನಕ್ಕೆ ಶಿಲಾನ್ಯಾಸ

Tuesday, July 13th, 2021
Nagri Sharadha Bajana Mandali

ಬಂಟ್ವಾಳ: ಬಂಟ್ವಾಳ ಶಾಸಕರ ರೂ .50 ಲಕ್ಷ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ನಗ್ರಿ ಶ್ರೀ ಶಾರದ ಭಜನಾ ಮಂದಿರದ ಸಮುದಾಯದ ಭವನಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಧಾರ್ಮಿಕ ವಿಧಿವಿಧಾನಗಳ ಮೂಲಕ ನೆರವೇರಿತು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಶಿಲಾನ್ಯಾಸ ನೆರವೇರಿಸಿ ಬಳಿಕ ಮಾತನಾಡಿ, ಸರಕಾರದ ಅನುದಾನಗಳ ಮೂಲಕ ಗ್ರಾಮದ ಎಲ್ಲಾ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿ ಗೆ ಮೊದಲ ಆಧ್ಯತೆ ನೀಡಲಾಗುತ್ತದೆ ‌ಎಂದರು. ಧಾರ್ಮಿಕ ಕೇಂದ್ರ ಗಳ ಅಭಿವೃದ್ಧಿಗೆ ಗ್ರಾಮಸ್ಥರ ಒಗ್ಗಟ್ಟಿನ ಸಹಕಾರ ಸದಾ ಇರಲಿ ಎಂದು ಹೇಳಿದರು. […]

ಕೆವಿಜಿ ಆಯುರ್ವೇದ ಕಾಲೇಜಿನಲ್ಲಿ ರಸಾಯನಿಕೇತರ ಸ್ಯಾನಿಟೈಸರ್ ಪ್ರಾತ್ಯಕ್ಷಿಕೆ

Tuesday, July 13th, 2021
S Angara

ಸುಳ್ಯ : ಕೆವಿಜಿ ಆಯುರ್ವೇದ ಕಾಲೇಜಿನಲ್ಲಿ ರಸಾಯನಿಕೇತರ ಸ್ಯಾನಿಟೈಸರ್ ಡೈಮಂಡ್ ಡ್ರಾಪ್ ‌ಬಳಕೆ ಕುರಿತು ಪ್ರಾತ್ಯಕ್ಷಿಕೆ ಕಾರ್ಯಕ್ರಮ ಕೆವಿಜಿ ಆಯುರ್ವೇದ ಕಾಲೇಜಿನ ಆಡಿಟೋರಿಯಂ ನಲ್ಲಿ ಜು.11 ರಂದು ನಡೆಯಿತು. ಸಚಿವ ಎಸ್ ಅಂಗಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಹಾಯಕ ಕಮೀಷನರ್ ಯತೀಶ್ ಉಳ್ಳಾಲ್, ‌ಸುಳ್ಯ ತಹಶಿಲ್ದಾರ್ ಅನಿತಾಲಕ್ಷ್ಮಿ, ಕೆವಿಜಿ ಆಯುರ್ವೇದ ಕಾಲೇಜು ಪ್ರಾಂಶುಪಾಲರಾದ ಡಾ.ಲೀಲಾದರ್ ಡಿ.ವಿ,ಸುಳ್ಯ ಕ್ಷೇತ್ರ‌ ಶಿಕ್ಷಣಾಧಿಕಾರಿ ಎಸ್ ಪಿ ಮಹದೇವ್,ತಾಲೂಕು ಅರೋಗ್ಯಾಧಿಕಾರಿ ಡಾ.ನಂದಕುಮಾರ್, ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಡ,ಪುತ್ತೂರು ತಾಲೂಕು ಅರೋಗ್ಯಧಿಕಾರಿ […]

ಫ್ಲ್ಯಾಟ್ ನಲ್ಲಿದ್ದ ಒಂಟಿ ಮಹಿಳೆಯನ್ನು ಕೊಂದು ಚಿನ್ನಾಭರಣ ದೋಚಿದ ಕಳ್ಳರು

Tuesday, July 13th, 2021
vishala ganiga

ಬ್ರಹ್ಮಾವರ: ಫ್ಲ್ಯಾಟ್ ನಲ್ಲಿ ಮಹಿಳೆಯೊಬ್ಬರನ್ನು ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ  ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಉಪ್ಪಿನಕೋಟೆ ಎಂಬಲ್ಲಿ ನಡೆದಿದೆ. ಕೊಲೆಯಾದವರನ್ನು ವಿಶಾಲ ಗಾಣಿಗ(35) ಎಂದು ಗುರುತಿಸಲಾಗಿದೆ. ವಿಶಾಲ ಗಾಣಿಗ ಅವರ ಪತಿ ವಿದೇಶದಲ್ಲಿದ್ದು, ಗಂಗೊಳ್ಳಿ ಮೂಲದ ವಿಶಾಲ ಅವರು ಇತ್ತೀಚಿಗಷ್ಟೇ ಊರಿಗೆ ಮರಳಿದ್ದರು. ಬ್ರಹ್ಮಾವರದಲ್ಲಿ ಸ್ವಲ್ಪ ಕೆಲಸವಿದೆ ಮುಗಿಸಿ ಬರುತ್ತೇನೆ ಎಂದು ಮನೆಯಲ್ಲಿ ಹೇಳಿಬಂದಿದ್ದ ವಿಶಾಲ ಅವರು ಮನೆಗೆ ವಾಪಾಸಾಗಿರಲಿಲ್ಲ ಎಂದು ಹೇಳಲಾಗಿದೆ. ವಿಶಾಲ  ಭಾನುವಾರ ರಾತ್ರಿಯಿಂದ ಮನೆಯಲ್ಲಿ ಒಬ್ಬರೆ ಇದ್ದರೆನ್ನಲಾಗಿದೆ. ಈ ಅವಧಿಯಲ್ಲಿ ದುಷ್ಕಮಿಗಳು ಫ್ಲ್ಯಾಟ್ […]

ಸಾವಿನ ದಾರಿಯಲ್ಲಿದ್ದ ಹಿಂದೂ ಕುಟುಂಬಕ್ಕೆ, ಬದುಕುವ ದಾರಿ ತೋರಿಸಿದ ಉಳ್ಳಾಲ ಮುಸ್ಲಿಂ ಕುಟುಂಬ !

Monday, July 12th, 2021
Ullal Marriage

ಮಂಗಳೂರು : ಶಕ್ತಿನಗರದಲ್ಲಿ ಸ್ವಂತ ಮನೆಯಲ್ಲಿ ವಾಸವಿದ್ದ ಕುಟುಂಬವದು. ಗೀತಾ ಅವರ ಪತಿ ಕೆಲವು ವರ್ಷಗಳ ಹಿಂದೆಯೇ ದುರಂತ ಸಾವು ಕಂಡಿದ್ದಾರೆ. ದಂಪತಿಗೆ ಇಬ್ಬರು ಹೆಣ್ಮಕ್ಕಳು. ವರ್ಷದ ಹಿಂದೆ ಹಿರಿಯ ಮಗಳಿಗೆ ಮದುವೆಯಾಗಿ ಸಾಲದಿಂದ ಹೊರಬರಲು ಎಲ್ಲವನ್ನೂ ಮಾರಿ, ಖಾಲಿ ಕೈಯೊಂದಿದೆ ನಾಲ್ಕು ತಿಂಗಳ ಹಿಂದೆ ಗೀತಾ ತಾಯಿ, ಮಗಳು ಕವನಾ, ಅತ್ತೆ ರೇಣುಕಾ ಮಂಚಿಲಕ್ಕೆ ಬಂದಿದ್ದಾರೆ. ರೇಣುಕಾ ಅವರೇ ಅಲ್ಲಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರೂ, ಕರೊನಾ ಎರಡನೇ ಅಲೆಯಿಂದ ಅದೂ ಇಲ್ಲದಂತಾಗಿ ಜೀವನವೇ ಕಷ್ಟವಾಗಿದೆ. […]

ಜುಲೈ 13 ರಂದು ಬಾನಂಗಳದಲ್ಲಿ ಮಂಗಳ – ಶುಕ್ರಗ್ರಹಗಳ ಸಂಯೋಗ

Monday, July 12th, 2021
Venus Mars

ಮಂಗಳೂರು : ಮಂಗಳ-ಶುಕ್ರಗ್ರಹಗಳು ಜು.13ರ ಮಂಗಳವಾರ ಸನಿಹ ಬರಲಿದ್ದು, (Conjunction). ಈ ಗ್ರಹಗಳು ಉಳಿದ ದಿನಗಳಲ್ಲಿ ದೂರದೂರವಿದ್ದರೂ ಆ ದಿನ ಭೂಮಿಯಿಂದ ಆಗಸವನ್ನು ನೋಡಿದಾಗ ಅವು ಸನಿಹವಿದ್ದಂತೆ ಕಾಣಲಿದೆ ಇದು ಖಗೋಳಾಸಕ್ತರಿಗೆ ಒಂದು ಅಪರೂಪದ ಅವಕಾಶವಾಗಿದೆ. ಗ್ರಹಗಳನ್ನು ಬರಿಗಣ್ಣಿನಿಂದ, ದುರ್ಬೀನಿನಿಂದ ಅಥವಾ ದೂರದರ್ಶಕದಿಂದ ನೋಡಬಹುದು. ಮೋಡವಿರದ ಶುಭ್ರ ಆಕಾಶವಿದ್ದರೆ ಜುಲೈ 13 ರ ರಾತ್ರಿ ಸುಮಾರು 7.20 ಗಂಟೆಗೆ ಪಶ್ಚಿಮ ಮತ್ತು ವಾಯುವ್ಯ ದಿಕ್ಕಿನ ನಡುವೆ ನೋಡಿದಾಗ ಮಂಗಳ ಶುಕ್ರ ಸಂಯೋಗದೊಂದಿಗೆ ಬಾಲಚಂದ್ರ ಮತ್ತು ಮಖಾ ನಕ್ಷತ್ರ ಕಾಣಬಹುದಾಗಿದ್ದು, […]

ಅಪಘಾತಕ್ಕೊಳಗಾದ ವ್ಯಕ್ತಿಗೆ ಉಪಚರಿಸಿದ ಯುವಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು

Sunday, July 11th, 2021
Tejas

ಮಂಗಳೂರು: ಬೈಕನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಲು ಮುಂದಾಗಿದ್ದ ಯುವಕನಿಗೆ ಲಾರಿ ಡಿಕ್ಕಿ ಹೊಡೆದ  ಪರಿಣಾಮ ಯುವಕ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿರುವ ಘಟನೆ ಬೈಕಂಪಾಡಿಯಲ್ಲಿ ನಡೆದಿದೆ. ಮೃತ ಯುವಕ ತೇಜಸ್‌ (28) ಸುಳ್ಯ ತಾಲೂಕಿನ ಮರ್ಕಜೆಯ ದೊಡ್ಡತೋಟ ನಿವಾಸಿಯಾಗಿದ್ದು, ಮಂಗಳೂರಿನಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಶನಿವಾರ ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ದ್ವಿಚಕ್ರ ವಾಹವೊಂದು ಅಪಘಾತಕ್ಕೀಡಾಗಿತ್ತು. ಇದನ್ನು ಗಮನಿಸಿದ ತೇಜಸ್, ಗಾಯಾಳುವನ್ನು ಉಪಚರಿಸಿ ಆತನ ಬೈಕ್ನನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಲು ದೂಡಿಕೊಂಡು ಹೋಗುತ್ತಿದ್ದನು. ಅದೇ […]

ಸುಬ್ರಹ್ಮಣ್ಯ – ಗುಂಡ್ಯ ರಾಜ್ಯ ಹೆದ್ದಾರಿಯಲ್ಲಿ ವಾಹನ ಸವಾರರನ್ನು ಓಡಿಸಿದ ಕಾಡಾನೆ

Sunday, July 11th, 2021
Elephant

ಕಡಬ :   ಸುಬ್ರಹ್ಮಣ್ಯ – ಗುಂಡ್ಯ ರಾಜ್ಯ ಹೆದ್ದಾರಿಯ ಅನಿಲ ಎಂಬಲ್ಲಿ ಕಾಡಾನೆಯೊಂದು ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ಅಟ್ಟಾಡಿಸಿದ ಘಟನೆ ಭಾನುವಾರ ನಡೆದಿದೆ. ಸಿರಿಬಾಗಿಲು ಗ್ರಾಮದ ಅನಿಲ ಸಮೀಪ ಹೆದ್ದಾರಿಗೆ ಆಗಮಿಸಿದ ಒಂಟಿ ಕಾಡಾನೆಯು ಕಾರು ಹಾಗೂ ದ್ವಿಚಕ್ರ ವಾಹನ ಸವಾರರನ್ನು ಓಡಿಸಿದೆ ಎಂದು ತಿಳಿದು ಬಂದಿದೆ.

ವಿಶಾಲ ಗಾಜಿನ ಕಿಟಿಕಿ ಮತ್ತು ಛಾವಣಿ ಇರುವ ಮಂಗಳೂರು-ಯಶವಂತಪುರ ರೈಲಿನ ‘ವಿಸ್ಟಾಡೋಮ್’ ಬೋಗಿಗಗಳಿಗೆ ಚಾಲನೆ

Sunday, July 11th, 2021
Visdom Coach

ಮಂಗಳೂರು :  ಗಾಜಿನ ಛಾವಣಿ ಮತ್ತು ವಿಶಾಲ ಗಾಜಿನ ಕಿಟಿಕಿ ಇರುವ  ಮಂಗಳೂರು-ಯಶವಂತಪುರ ನಡುವೆ ಹಗಲು ಸಂಚರಿಸುವ ರೈಲಿನ  ‘ವಿಸ್ಟಾಡೋಮ್’ ಬೋಗಿಗಳನ್ನು  ಸೇವೆಗೆ ಭಾನುವಾರ ಬೆಳಗ್ಗೆ 9 ಗಂಟೆಗೆ ಮಂಗಳೂರು ಜಂಕ್ಷನ್ (ಪಡೀಲ್) ರೈಲು ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು. ಸಂಸದ ನಳಿನ್ ಕುಮಾರ್ ಕಟೀಲ್‌ರ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಾರ್ವಜನಿಕರು ಅನೇಕ ಬೇಡಿಕೆಗಳನ್ಬು ಮುಂದಿಟ್ಟಿದ್ದು, ಒಂದೊಂದೇ ಬೇಡಿಕೆಗಳನ್ನು ಈಡೇರಿಸುತ್ತಾ ಬಂದಿದೆ. 2014ರವರೆಗೆ ಆಮೆಗತಿಯಲ್ಲಿ ಸಾಗುತ್ತಿದ್ದ ಅಭಿವೃದ್ಧಿ ಕಾಮಗಾರಿಯು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಬಂದ […]

‘ತುಳು ಇತಿಹಾಸದಲ್ಲಿ ಹವ್ಯಾಸಿಗಳ ಕೊಡುಗೆ ಅನನ್ಯʼ : ಡಾ. ಪುಂಡಿಕಾಯ್‌ ಗಣಪಯ್ಯ ಭಟ್‌ ಅಭಿಮತ

Sunday, July 11th, 2021
Ganapathi Bhat

ಮಂಗಳೂರು: ಪ್ರಾಚೀನ ತುಳು ಇತಿಹಾಸವನ್ನು ಯಾರೂ ದಾಖಲಿಸಿಲ್ಲ ಎಂಬುದು ಆಧುನಿಕ ದೃಷ್ಟಿಕೋನವಷ್ಟೇ. ನಮ್ಮ ಹಿರಿಯರು ಮಿತಿಯೊಳಗೆ, ಅಸಂಪ್ರದಾಯಿಕ ರೀತಿಯಲ್ಲಿ ಇತಿಹಾಸ ದಾಖಲಿಸಿದ್ದಾರೆ, ಎಂದು ಮೂಡಬಿದ್ರಿ ಶ್ರೀ ದವಳಾ ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಪುಂಡಿಕಾಯ್‌ ಗಣಪಯ್ಯ ಭಟ್‌ ಅಭಿಪ್ರಾಯಪಟ್ಟಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನ ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವ ವಿಭಾಗ, ಮಾನುಷ (ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ಪ್ರಾಧ್ಯಾಪಕರ ಸಂಘ) ದ ಸಹಯೋಗದೊಂದಿಗೆ ಆರಂಭಿಸಿರುವ ತುಳುನಾಡು, ಕೊಡಗುಗಳ ಇತಿಹಾಸ […]