ಶ್ರೀ ಧಾಮ ಮಾಣಿಲದಲ್ಲಿ 48 ದಿನಗಳ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆ ಆರಂಭ

Monday, July 5th, 2021
Manila

ವಿಟ್ಲ:  ಶ್ರೀ ಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ವರಮಹಾಲಕ್ಷ್ಮೀ ವೃತಾಚರಣೆಯ ಪ್ರಯುಕ್ತ 48 ದಿನಗಳ ವರೆಗೆ ನಡೆಯಲಿರುವ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆಯ ಪ್ರಥಮ ಪೂಜೆಯು ಜು.4ರಂದು ಆರಂಭ ಗೊಂಡಿತು. ಈ ಸಂದರ್ಭದಲ್ಲಿ ಮಾತನಾಡಿದ  ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಉಪಕಾರಸ್ಮರಣೆ ನಮ್ಮೊಳಗಿದ್ದರೆ ಪರಮಾತ್ಮನ ಶ್ರೀರಕ್ಷೆ ಸದಾ ಇರುತ್ತದೆ ಎಂದು ಹೇಳಿದರು. ಬಾಲಭೋಜನ ಕಾರ್ಯಕ್ರಮಕ್ಕೆ  ಸ್ವಾಮೀಜಿಯವರು ಚಾಲನೆ ನೀಡಿ ಆಶೀರ್ವಚನ ನೀಡಿದರು. ಎಲ್ಲಾ ಜೀವ ರಾಶಿಗಳು ಇವತ್ತು ಕೋವಿಡ್‌ನಿಂದಾಗಿ ನಲುಗಿ […]

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಕ್ಕೆ ತುಳು ಚಲನಚಿತ್ರ ಭರತ್ ಆಯ್ಕೆ

Monday, July 5th, 2021
bharath

ಮಂಗಳೂರು : ವೈಷ್ಣವ ಪ್ರೊಡಕ್ಷನ್ ರತ್ನಾಗಿರಿ ಹಾಗೂ ಮಹಾರಾಷ್ಟ್ರ ತುಳುವರ ಕೂಡುವಿಕೆಯಿಂದ ಅದ್ದೂರಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಚಲನಚಿತ್ರವು ತುಳು ಕನ್ನಡ ಒಳಗೊಂಡಂತೆ 7 ಬಾಷೆಗಳಲ್ಲಿ ತೆರೆ ಕಾಣಲಿದೆ. ತುಳುನಾಡ ಸಂಸ್ಕೃತಿ ಹಾಗೂ ಉದ್ಯೋಗ ಅರಸಿ ಮುಂಬೈನ ಕಡೆ ಮುಖಮಾಡಿದ ತುಳುವರ ಮನಸಿನಲ್ಲಿ ಇರುವ ತುಳುನಾಡ ಬಗೆಗಿನ ಅಭಿಮಾನ ಹಾಗೂ 100 ವರ್ಷಗಳಿಂದೀಚೆ ತುಳುವರ ಜೀವನ ಶೈಲಿ ಹಾಗೂ ಬೆಳವಣಿಗೆ ಹಾಗೂ ನಂಬಿಕೆ ಆಚರಣೆಗಳನ್ನು ವಿಶ್ವಕ್ಕೆ ತೋರಿಸುವ ಮತ್ತು ತುಳುನಾಡ ಜಾನಪದ ಸಂಸ್ಕೃತಿಗೆ ಹಾಗೂ ತುಳುವರಿಗೆ ಸಿಗಬೇಕಾದ […]

ಜುಲೈ 5 ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರ್ಬಂಧ ಮತ್ತು ಸಡಿಲಿಕೆ ಹೇಗಿರಲಿದೆ ನೋಡಿ !

Sunday, July 4th, 2021
Mask

ಮಂಗಳೂರು : ಜಿಲ್ಲಾಧಿಕಾರಿಯವರ ಆದೇಶದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರ್ಬಂಧ ಮತ್ತು ಸಡಿಲಿಕೆ ಹೀಗಿರಲಿದೆ.  ಜುಲೈ 5 ರಿಂದ ಜಿಲ್ಲೆಯ ದೇವಾಲಯಗಳು ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಲಿವೆ. ದೇವಾಲಯಗಳ ಆವರಣ ಸ್ವಚ್ಛಗೊಳಿಸುವ, ಸ್ಯಾನಿಟೈಸ್ ಮಾಡುವ ಕಾರ್ಯ ಭಾನುವಾರ ಭರದಿಂದ ನಡೆಯಿತು. ಜಿಲ್ಲೆಯ ಪ್ರಮುಖ ದೇವಾಲಯಗಳಾದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕಟೀಲು ದುರ್ಗಾಪರಮೇಶ್ವರಿ ದೇವಾಲಯಗಳು, ನಗರದ ಕುದ್ರೋಳಿ ಗೋಕರ್ಣನಾಥೇಶ್ವರ, ಕದ್ರಿ ದೇವಾಲಯಗಳಲ್ಲಿ ಆವರಣವನ್ನು ಸ್ವಚ್ಛಗೊಳಿಸಿ, ಭಕ್ತರ ಪ್ರವೇಶಕ್ಕೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ದೇವರ ದರ್ಶನಕ್ಕೆ ಮಾತ್ರ ಅವಕಾಶ ಒದಗಿಸಲಾಗಿದ್ದು, ಸೇವೆಗಳಿಗೆ ಅವಕಾಶ […]

ಪಂಚೆಯುಟ್ಟು ಗದ್ದೆಗೆ ಇಳಿದು, ಉಳುಮೆ ಮಾಡಿದ ಪುತ್ತೂರು ಶಾಸಕ

Sunday, July 4th, 2021
Sanjeeva-Matandooru

ಪುತ್ತೂರು: ಕೆಲ ದಿನಗಳ ಹಿಂದೆ ಟ್ರಾಕ್ಟರ್ ಚಲಾಯಿಸಿ ಗದ್ದೆ ಉಳುಮೆಗೆ ಚಾಲನೆ ನೀಡಿ ಗಮನ ಸೆಳೆದಿದ್ದ ಶಾಸಕ ಸಂಜೀವ ಮಠಂದೂರು,   ರವಿವಾರ ಸ್ವತಃ ಗದ್ದೆಗೆ ಇಳಿದು ನೇಗಿಲು ಹಿಡಿದು ಉಳುಮೆ ಮಾಡಿದರು. ಪುತ್ತೂರು ತಾಲೂಕಿನ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಪಕ್ಕದಲ್ಲಿರುವ ಗದ್ದೆಯಲ್ಲಿ ಪಂಚೆಯುಟ್ಟು ಗದ್ದೆಗೆ ಇಳಿದು, ಎತ್ತುಗಳನ್ನು ಕಟ್ಟಿದ್ದ ನೇಗಿಲನ್ನು ಕೈಗೆ ತೆಗೆದು `ಗದ್ದೆಗೆ ಇಳಿಯೋಣ-ಬೇಸಾಯ ಮಾಡೋಣ’ ಅಭಿಯಾನ ಕ್ಕೆ ಚಾಲನೆ ನೀಡಿದರು. ಆರ್ಯಾಪು ಗ್ರಾಮದ ಸಂಪ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಹಾಗೂ ಸಂಪ್ಯ ನವಚೇತನಾ ಯುವಕ ಮಂಡಲದ […]

ಮುಳ್ಯ ಅಟ್ಲೂರಿನಲ್ಲಿ ಬಿಜೆಪಿ, ಪ್ರಣವ್ ಪೌಂಡೇಶನ್, ದಾನಿಗಳ ಸಹಕಾರ 200 ಕುಟುಂಬಗಳಿಗೆ ಪುಡ್ ಕಿಟ್ ವಿತರಣೆ

Sunday, July 4th, 2021
Angara

ಸುಳ್ಯ  : ಕೊರೋನ ಸಂಕಷ್ಟದ ಈ ಸಮಯದಲ್ಲಿ ಭಾರತೀಯ ಜನಾತ ಪಾರ್ಟಿ ಮುಳ್ಯ ಅಟ್ಲೂರ್ ಮತ್ತು ಪ್ರಣವ್ ಪೌಂಡೇಶನ್ ಇವರ ಸಹಬಾಗಿತ್ವದಲ್ಲಿ ಮುಳ್ಯ 6 ನೆ ವಾರ್ಡ್ ನ ಬಿ ಪಿ ಎಲ್ ಕಾರ್ಡ್ ದಾರರಿಗೆ ಫುಡ್ ಕಿಟ್ ವಿತರಣೆ ಕಾರ್ಯಕ್ರಮ ಜು. 4 ರಂದು ಮುಳ್ಯ ಭಜನಾ  ಮಂದಿರ ಆವರಣದಲ್ಲಿ ನಡೆಯಿತು. ಮೀನುಗಾರಿಕೆ ಬಂದರು ಒಳನಾಡು ಸಾರಿಗೆ ಸಚಿವ ಎಸ್. ಅಂಗಾರ ಪುಡ್ ಕಿಟ್ ವಿತರಣೆಗೆ ಚಾಲನೆ ನೀಡಿದರು. ಸಚಿವರಿಗೆ ಗ್ರಾಮಸ್ಥರಿಂದ ಸನ್ಮಾನ ನಡೆದ ನಂತರ ಸಾಂಕೇತಿಕವಾಗಿ […]

ಸೇಲ್ಸ್‌ಮ್ಯಾನ್ ಗೆ ಹನಿಟ್ರ್ಯಾಪ್, ಯುವತಿ ಬಂಧನ, ಆರು ಮಂದಿಗೆ ಹುಡುಕಾಟ

Sunday, July 4th, 2021
Honey Trap

 ಪುತ್ತೂರು : ಸೇಲ್ಸ್‌ಮ್ಯಾನ್ ಆಗಿರುವ ವ್ಯಕ್ತಿಯೊಬ್ಬ ಹನಿಟ್ರ್ಯಾಪ್‌ಗೊಳಗಾಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ. ಈ ಬಗ್ಗೆ  7 ಮಂದಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು ಯುವತಿಯೋರ್ವಳನ್ನು ಪೊಲೀಸರು ಬಂಧಿಸಿದ್ದಾರೆ. ನೆಟ್ಟಣಿಗೆ ಮುಡ್ನೂರು ಗ್ರಾಮದ ಚೀಚಗದ್ದೆ ನಿವಾಸಿ ಇಬ್ರಾಹಿಂ ಎಂಬವರ ಪುತ್ರ, ವೃತ್ತಿಯಲ್ಲಿ ಸೇಲ್ಸ್‌ಮ್ಯಾನ್ ಆಗಿರುವ ಅಬ್ದುಲ್ ನಾಸೀರ್ (25ವ.)ಎಂಬವರು ಹನಿಟ್ರ್ಯಾಪ್‌ಗೆ  ಗೊಳಗಾಗಿ  ರೂ.30 ಲಕ್ಷ ಕಳೆದುಕೊಂಡಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ನೆಟ್ಟಣಿಗೆ ಮುಡ್ನೂರು ಚೀಚಗದ್ದೆಯ ಹನೀಫ್ ಯಾನೆ ಕೆಎಂವೈ ಹನೀಫ್, ಕೊಟ್ಯಾಡಿಯ ಮಹಮ್ಮದ್ ಕುಂಞಿ, ಕೊಟ್ಯಾಡಿಯ ಶಾಫಿ, ಸವಣೂರಿನ ಅಝರ್, ಸಯೀದ್‌ […]

ಎಸ್ಸೆಸ್ಸೆಲ್ಸಿ ಪರೀಕ್ಷೆ : ಅಚ್ಚುಕಟ್ಟಿನ ಸಿದ್ದತೆಗೆ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ

Saturday, July 3rd, 2021
SSlc Exam

ಮಂಗಳೂರು : ಜು. 19 ಹಾಗೂ 22 ರಂದು ನಡೆಯಲಿರುವ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಯಾವುದೇ ಅವಗಡಗಳು ಎದುರಾಗದಂತೆ ಅಚ್ಚುಕಟ್ಟಿನ ಸಿದ್ಧತೆಗಳನ್ನು ಮಾಡಿಕೊಂಡು ಸುಸೂತ್ರವಾಗಿ ಪರೀಕ್ಷಾ ಕಾರ್ಯಗಳನ್ನು ನಿರ್ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಹಾಗೂ ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅವರು ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಜು.3ರ ಶನಿವಾರ ಹಮ್ಮಿಕೊಳ್ಳಲಾಗಿದ್ದ ಎಸ್ ಎಸ್ ಎಲ್ ಸಿ ಪರೀಕ್ಷೆಯ […]

ಜಿಲ್ಲಾ ಉಸ್ತುವಾರಿ ಸಚಿವರಿಂದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಟರ್ಪಾಲ್ ಗಳ ವಿತರಣೆ

Saturday, July 3rd, 2021
Shillekyata

ಮಂಗಳೂರು : ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು, ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಅವರು ಜು.3ರ ಶನಿವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ 20 ಶಿಳ್ಳೆಕ್ಯಾತ ಸಮುದಾಯದ ಕುಟುಂಬಗಳಿಗೆ ಟರ್ಪಾಲ್ ಗಳನ್ನು  ವಿತರಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎದುರಾದ ತೌಖ್ಯ ಚಂಡಮಾರುತದ ಪ್ರಭಾವದಿಂದಾಗಿ ಅಲೆಮಾರಿ ಶಿಳ್ಳಕ್ಯಾತ ಕುಟುಂಬದ ಗುಡಿಸಲುಗಳ ಟರ್ಪಾಲ್ ಗಳು ತೀವ್ರವಾಗಿ ಹಾನಿಯಾಗಿದ್ದವು. ಜಿಲ್ಲೆಯಲ್ಲಿ ಮುಂಗಾರು ಮಳೆಯೂ ಪ್ರಾರಂಭವಾಗಿರುವ ಹಿನ್ನಲೆಯಲ್ಲಿ ಈ ಸಮುದಾಯದವರಿಗೆ 20*30 […]

ಮನೆಯಲ್ಲಿ ಮಲಗಿದ್ದ ನಾಯಿಯನ್ನು ಹಿಡಿದ ಚಿರತೆ, ಆದರೂ ನಾಯಿ ಬದುಕಿದ್ದು ಹೇಗೆ ಗೊತ್ತಾ ?

Saturday, July 3rd, 2021
chita

ಮೂಡುಬಿದಿರೆ:  ಚಿರತೆಯೊಂದು ಮನೆಯಂಗಳಕ್ಕೆ ಬಂದು ನಾಯಿಯೊಂದನ್ನು ಹಿಡಿದಿದ್ದು, ಚಿರತೆ ಕಾಂಪೌಂಡ್ ಹಾರುವ ವೇಳೆ ಚಿರತೆಯ ಬಾಯಿಯಿಂದ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪಡುಕೋಣಾಜೆಯ ಸತೀಶ್ ಎಂಬವರ ಮನೆಯ ಬಳಿ ಗುರುವಾರ ರಾತ್ರಿ ಅಡ್ಡಾಡುತ್ತಿದ್ದ ಚಿರತೆ ಮನೆಯಂಗಳದಲ್ಲಿ ಮಲಗಿದ್ದ ನಾಯಿಯನ್ನು ಎತ್ತಿಕೊಂಡು ಹೋಗಲು ಪ್ರಯತ್ನಿಸಿ ವಿಫಲವಾಗಿದೆ. ಸ್ಥಳಕ್ಕೆ ಉಪವಲಯಾರಣ್ಯಾಧಿಕಾರಿ ಮಂಜುನಾಥ ಗಾಣಿಗ ಮತ್ತು ಸಿಬ್ಬಂದಿ ಭೇಟಿ ನೀಡಿದ್ದಾರೆ. ಶಿರ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಜೊತೆ ಮಾತುಕತೆ ನಡೆಸಿದ್ದು, ಚಿರತೆಯನ್ನು ಹಿಡಿಯಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.  

ನಿಂಬೆಹಣ್ಣು ಚೀಲಗಳ ನಡುವೆ ಅಕ್ರಮವಾಗಿ 40 ಕೆಜಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರ ವಶ

Saturday, July 3rd, 2021
Ganja

ಮಂಗಳೂರು: ನಿಂಬೆಹಣ್ಣು ತುಂಬಿದ ಚೀಲಗಳ ನಡುವೆ  ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 40 ಕೆಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕೇರಳದ ಶಿಹಾಬುದ್ದೀನ್ ಹಾಗೂ ಲತೀಫ್ ಬಂಧಿತರು. ನಗರದ ಕೊಟ್ಟಾರಚೌಕಿಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ಆರೋಪಿಗಳು ಪತ್ತೆಯಾಗಿದ್ದಾರೆ. ಬೊಲೆರೊ ವಾಹನ ಸಮೇತ ಒಟ್ಟು 11.17 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಾಂಜಾ ರಾಕೆಟ್  ಮಂಗಳೂರು ಪೊಲೀಸರು ಬೆಂಗಳೂರಿಗೆ ತೆರಳಿ ಬೀದರಹಳ್ಳಿಯಿಂದ 3.50 ಲಕ್ಷ ರೂ.ಮೌಲ್ಯದ 55 ಗ್ರಾಂ ಎಂಡಿಎಂಎ ವಶಕ್ಕೆ ಪಡೆದಿದ್ದಾರೆ. […]