ಕೇರಳ ರಾಜ್ಯದಲ್ಲಿ ಮೇ 8 ರಿಂದ 9 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್

Saturday, May 8th, 2021
Kerala Bundh

ಕಾಸರಗೋಡು : ಕೇರಳ ರಾಜ್ಯ ದಲ್ಲಿ ಕೊರೋನ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಲ್ಲಿ ಶನಿವಾರದಿಂದ  9 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಜಾರಿಗೆ ತರಲಾಗಿದ್ದು, ಸೂಕ್ತ ದಾಖಲೆ ಅಥವಾ ಪ್ರಮಾಣ ಪತ್ರ ಇಲ್ಲದೆ ಸಂಚರಿಸಿದ್ದಲ್ಲಿ ವಾಹನ ಜಪ್ತಿ ಅಥವಾ ದಂಡ ವಸೂಲಿ ಮಾಡಲಾಗುತ್ತಿದೆ. ರಸ್ತೆಗಳಲ್ಲಿ ಬೆರಳೆಣಿಕೆಯ ವಾಹನಗಳು ಕಂಡು ಬರುತ್ತಿದ್ದು, ಅನಗತ್ಯವಾಗಿ ರಸ್ತೆಗಿಳಿದವರನ್ನು ಹಿಂದಕ್ಕೆ ಕಳುಹಿಸಲಾಗುತ್ತಿದೆ. ಪೊಲೀಸ್ ಪಾಸ್ ಹೊಂದಿದವರಿಗೆ ಮಾತ್ರ ಇನ್ನು ಮುಂದೆ ಸಂಚಾರಕ್ಕೆ ಅನುಮತಿ ನೀಡಲಾಗುವುದು. ತುರ್ತು ಸಂದರ್ಭದಲ್ಲಿ ಸಂಚರಿಸಲು ಪ್ರಮಾಣ ಪತ್ರ ಹೊಂದಿರಬೇಕು ಎಂದು […]

ಕೂಲ್ ಡ್ರಿಂಕ್ಸ್ ಬಾಟಲಿಯ ಬಾಕ್ಸ್‌ಗೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಬೈಕ್ ಸವಾರ ಸಾವು

Saturday, May 8th, 2021
Prasjanth

ಮಂಗಳೂರು : ರಸ್ತೆಯಲ್ಲಿ ಅಡ್ಡ ದಾಟುತ್ತಿದ್ದ ಸ್ಕೂಟರ್‌ ಗೆ   ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ  ನಿಯಂತ್ರಣ ತಪ್ಪಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಪದವಿನಂಗಡಿಯಲ್ಲಿ ನಡೆದಿದೆ. ಮೃತನನ್ನುಕೆಪಿಟಿ ಸಮೀಪದ  ಶರಬತ್ ಕಟ್ಟೆ ನಿವಾಸಿ ಪ್ರಶಾಂತ್ (30) ಎಂದು ಗುರುತಿಸಲಾಗಿದೆ. ಪ್ರಶಾಂತ್ ನಗರದ ಹೊರವಲಯದಲ್ಲಿರುವ ನೀರು ಮಾರ್ಗದ ಚೇತನಾ ಎಂಟರ್‌ಪ್ರೈಸಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು ಬೋಂದೆಲ್ ಕಡೆಯಿಂದ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ರಸ್ತೆಯಲ್ಲಿ ಅಡ್ಡ ದಾಟುತ್ತಿದ್ದ ಸ್ಕೂಟರ್‌ ಗೆ   ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಅಂಗಡಿಯೊಂದರ ಕೂಲ್ ಡ್ರಿಂಕ್ಸ್ ಬಾಟಲಿಯ ಬಾಕ್ಸ್‌ಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು […]

ಹಸಿದೊಟ್ಟೆಗೆ ಊಟ ನೀಡಿ ಮಾನವಿಯತೆ ಮೆರೆದ ಕುಂದಾಪುರದ ಶ್ರೀ ನಾರಾಯಣ ಗುರು ಯುವಕ ಮಂಡಳಿ

Saturday, May 8th, 2021
Narayana Guru

ಕುಂದಾಪುರ  :   ಉಡುಪಿ ಜಿಲ್ಲೆಯ ಕುಂದಾಪುರದ ತಾಲೂಕಿನ ಶ್ರೀ ನಾರಾಯಣ ಗುರು ಯುವಕ ಮಂಡಳಿ(ರಿ)ಯವರಿಂದು ಲಾಕ್ ಡೌನ್ ಇಂದಾಗಿ ದಿನದ ಕೂಳಿಲ್ಲದೆ ಹಸಿವಿನಿಂದ ಕಂಗೆಟ್ಟಿದ್ದ ಅಲ್ಲಿನ ಸುತ್ತ-ಮುತ್ತ ಪರಿಸರದಲ್ಲಿನ ಬಡವರಿಗೆ, ವಿಕಲ ಚೇತನರಿಗೆ, ಲಾರಿ ಚಾಲಕರಿಗೆ, ಹಾಗೂ ಹಣ ವಿದ್ದರೂ ಸಹ, ಊಟ ಮಾಡಲು ಹೊಟೇಲ್ ಗಳಿಲ್ಲದೆ ಹಸಿವಿನಿಂದ ಕಂಗೆಟ್ಟಿದ್ದ ಸುಮಾರು 250 ಜನರ ಹಸಿವಿನ ಹೊಟ್ಟೆಗೆ ಊಟ ನೀಡಿ ಮಾನವಿಯತೆ ಮೆರೆದ್ದಿದ್ದಾರೆ. ಈ ಸಂದರ್ಭದಲ್ಲಿ ಮಂಡಳಿಯ ಅಧ್ಯಕ್ಷ ಶ್ರೀನಾಥ ಕಡ್ಲಿ ಮನೆ, ಕಾರ್ಯದರ್ಶಿ ವಿಜಯ್ ಪೂಜಾರಿ,ಕಿರಣ್ […]

ಕಾಂಗ್ರೆಸ್ ಜಿಲ್ಲೆಗೆ ಕೆಟ್ಟ ಹೆಸರು ತರುವುದಲ್ಲದೆ, ಸರಕಾರಿ ಆಸ್ಪತ್ರೆಗೆ ಬರದಂತೆ ಜನರಲ್ಲಿ ಭಯ ತುಂಬುತ್ತಿದೆ

Saturday, May 8th, 2021
vedavyas kamath

ಮಂಗಳೂರು : ವೆನ್ಲಾಕ್ ಆಸ್ಪತ್ರೆಯ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡಿ ಜಿಲ್ಲೆಗೆ ಕೆಟ್ಟ ಹೆಸರು ತರುವುದಲ್ಲದೆ, ಜನತೆ ವೆನ್ಲಾಕ್‌ಗೆ ಬರಲು ಭಯಪಡುವ ವಾತಾವರಣವನ್ನು ಕಾಂಗ್ರೆಸ್ ನಿರ್ಮಿಸುತ್ತಿದೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೆನ್ಲಾಕ್ ಆಸ್ಪತ್ರೆಯಲ್ಲಿ ಬಡವರಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳಿವೆ. ಆದರೆ ಕಾಂಗ್ರೆಸ್ ಜನತೆಯ ದಿಕ್ಕು ತಪ್ಪಿಸುತ್ತಿದ್ದು, ಬಡವರು ಸರಕಾರಿ ಆಸ್ಪತ್ರೆಗೆ ಬರದಂತೆ ಭಯ ತುಂಬುತ್ತಿದೆ. ಆರೋಗ್ಯ ವಿಷಯದ ಈ ರೀತಿಯ ರಾಜಕಾರಣ ಕಾಂಗ್ರೆಸ್‌ಗೆ […]

ಬ್ಯಾರಿ ಪರಿಷತ್, ಮಂಗಳೂರು ಅಧ್ಯಕ್ಷ ಕೋವಿಡ್ ಸೋಂಕಿಗೆ ಬಲಿ

Friday, May 7th, 2021
Aboobakkar

ಮಂಗಳೂರು : ಅಖಿಲ ಭಾರತ ಬ್ಯಾರಿ ಪರಿಷತ್, ಮಂಗಳೂರು ಇದರ ಅಧ್ಯಕ್ಷ ಅಬೂಬಕರ್ ಪಲ್ಲಮಜಲು(48) ಕೋವಿಡ್-19 ಸೋಂಕಿನ ಚಿಕಿತ್ಸೆ ಫಲಿಸದೆ  ಶುಕ್ರವಾರ ಬೆಳಗ್ಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಅವರು ಕಳೆದ ಐದು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು  ಶುಕ್ರವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಅವರು ಕೊನೆಯುಸಿರೆಳೆದರೆಂದು ಕುಟುಂಬದ ಮೂಲಗಳು ತಿಳಿಸಿವೆ. ಇವರು ಹಲವು ಸಾಮಾಜಿಕ ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದರು ಅಲ್ಲದೆ ಪಲ್ಲಮಲಜು ಹಯಾತುಲ್ ಇಸ್ಲಾಂ ಜುಮಾ ಮಸೀದಿಯ ಮಾಜಿ ಅಧ್ಯಕ್ಷರಾಗಿದ್ದರು. ಮೃತರು ಪತ್ನಿ, ಮೂವರು ಪುತ್ರಿಯರು […]

ರಸ್ತೆ ಅಭಿವೃದ್ಧಿಯ ಕೆಲಸದ ಹೆಸರಿನಲ್ಲಿ ನೆಲಕ್ಕುರುಳಿದ ಸಾರ್ವಜನಿಕ ರಂಗಮಂದಿರ

Friday, May 7th, 2021
Rangamandhira

ಬಂಟ್ವಾಳ: ಸುಮಾರು 38 ವರ್ಷಗಳ ಕಾಲ ಬಿ.ಸಿ.ರೋಡಿನ ಸಾಂಸ್ಕೃತಿಕ ಚಟುವಟಿಕೆಯಷ್ಟೇ ಅಲ್ಲ, ರಾಜಕೀಯ, ವೈಚಾರಿಕ, ರಂಗಭೂಮಿ ಚಟುವಟಿಕೆಗಳಿಗೆ ಇದ್ದ ಏಕೈಕ ವೇದಿಕೆ ಸಾರ್ವಜನಿಕ ರಂಗಮಂದಿರ ನೆಲಕ್ಕುರುಳಿದೆ. 2017ರಲ್ಲಿ ನಿರ್ಮಾಣಗೊಂಡ ಬಿ.ಸಿ. ರೋಡಿನ ಮಿನಿ ವಿಧಾನಸೌಧದ ಎದುರು ಇರುವ ಈ ಕಟ್ಟಡದಲ್ಲಿ ಅಂದಿನಿಂದ ಚಟುವಟಿಕೆಗಳು ನಿಂತಿದ್ದವು. ಅದನ್ನು ತೆರವುಗೊಳಿಸುವ ಕುರಿತು ಆಗಾಗ್ಗೆ ಮಾತುಗಳು ಕೇಳಿಬರುತ್ತಿದ್ದವು. ಇದೀಗ 2 ಕೋಟಿ ರೂ ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಈ ಸಂದರ್ಭ ಶಿಥಿಲವಾಗಿರುವ ಈ ಕಟ್ಟಡವನ್ನು ತೆರವುಗೊಳಿಸುವ ಕಾರ್ಯ ಗುರುವಾರ ಆರಂಭಗೊಂಡಿದೆ. ‘ […]

ಕಟ್ಟಿಗೆ ರಾಶಿಯಡಿಯಲ್ಲಿ ಬಚ್ಚಿಡಲಾಗಿದ್ದ 430 ಬಾಟ್ಲಿ ಮದ್ಯ ವಶ

Friday, May 7th, 2021
liquors

ಕಾಸರಗೋಡು : ಕೊರೋನಾ ಸಾಂಕ್ರಾಮಿಕದ ನಡುವೆ ಕಾಸರಗೋಡು ಅಬಕಾರಿ ದಳದ ಸಿಬಂದಿಗಳು ಕಟ್ಟಿಗೆ ರಾಶಿಯಡಿಯಲ್ಲಿ ಬಚ್ಚಿಡಲಾಗಿದ್ದ 430 ಬಾಟ್ಲಿ ಮದ್ಯವನ್ನು ವಶ ಪಡಿಸಿಕೊಂಡಿದ್ದಾರೆ. ಮಧೂರು ಕಲ್ಲಕಟ್ಟದ ಎ.ಕೆ. ಸಚಿನ್ ಎಂಬಾತನ ಮನೆಯ ಸಮೀಪದ ಕಟ್ಟಿಗೆ ರಾಶಿ ಯೊಂದರಲ್ಲಿ ಮದ್ಯದ ಬಾಟ್ಲಿ ಗಳನ್ನು ಬಚ್ಚಿಡಲಾಗಿತ್ತು. ಅಬಕಾರಿ ದಳಕ್ಕೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಲಾಯಿತು. ಮತ್ತೊಂದು ಪ್ರಕರಣದಲ್ಲಿ ಕರಂದಕ್ಕಾಡ್ ಸಮೀಪ ಜನವಾಸ ವಿಲ್ಲದ ಮನೆಯ ಹಿಂಬದಿ ಅಕ್ರಮವಾಗಿ ಮಾರಾಟಕ್ಕಿಡಲಾಗಿದ್ದ ಸುಮಾರು 21 ಬಾಟ್ಲಿ ಮದ್ಯವನ್ನು ಅಬಕಾರಿ ದಳದ ಸಿಬಂದಿಗಳು […]

ದ.ಕ. ಜಿಲ್ಲೆಯಲ್ಲಿ ಮೇ 7 ರಿಂದ ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ನಿಯಮ, ಮೇ 15ರ ಬಳಿಕ ಸಂಪೂರ್ಣ ಬಂದ್

Thursday, May 6th, 2021
Rajendra

ಮಂಗಳೂರು : ದ.ಕ. ಜಿಲ್ಲೆಯಲ್ಲಿ ಮೇ 7 ರಿಂದ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಲು ಜಿಲ್ಲಾಡಳಿತ ಮುಂದಾಗಿದ್ದು, ಈ ಅವಧಿಯಲ್ಲಿ ಅಗತ್ಯ ಸೇವೆಗಳು ಬೆಳಿಗ್ಗೆ 6 ರಿಂದ  9 ರವರೆಗೆ ಮಾತ್ರ ಲಭ್ಯವಿದೆ ಮತ್ತು ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರಲಿದೆ.  ಮೇ 15ರ ಬಳಿಕ ಮದುವೆ ಸಮಾರಂಭಗಳಿವೆ ಅವಕಾಶವಿಲ್ಲ ಎಂದು ಜಿಲ್ಲಾಡಳಿತದ ಗುರುವಾರದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಶನಿವಾರ ಹಾಗೂ ರವಿವಾರದಂದು ಜಿಲ್ಲೆಯಲ್ಲಿ ಕರ್ಫ್ಯೂ ಜಾರಿಯಲ್ಲಿರಲಿದ್ದು, ಎಲ್ಲಾ ಚಟುವಟಿಕೆಗಳು ಸ್ತಬ್ಧವಾಗಿರಲಿವೆ. ಈ ಅವಧಿಯಲ್ಲಿ ಆಸ್ಪತ್ರೆಗಳು ಹಾಗೂ ಮೆಡಿಕಲ್ ಗಳ ಸೇವೆ ಲಭ್ಯ ಇರಲಿದೆ. […]

ಫಲ್ಗುಣಿ ನದಿಯಲ್ಲಿ ಈಜಲು ಹೋದ ಯುವಕ ಮೃತ್ಯು

Thursday, May 6th, 2021
Nishanth

ಬೆಳ್ತಂಗಡಿ:  ಯುವಕನೋರ್ವ ಫಲ್ಗುಣಿ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದಲ್ಲಿ ಗುರುವಾರ ನಡೆದಿದೆ. ಮೃತ ಯುವಕನನ್ನು ಕಾರ್ಯಾಣ ದುಗ್ಗಪ್ಪ ಎಂಬವರ ಪುತ್ರ ನಿಶಾಂತ್ (22) ಎಂದು ಗುರುತಿಸಲಾಗಿದೆ. 5 ಮಂದಿ ಸ್ನೇಹಿತರು ಫಲ್ಗುಣಿ ನದಿಯಲ್ಲಿ ಈಜಲು ಹೋಗಿದ್ದರು ಎನ್ನಲಾಗಿದೆ. ಆದರೆ ನಿಶಾಂತ್ ನೀರಿನಲ್ಲಿ ಮುಳುಗಿದ್ದಾಗಿ ತಿಳಿದುಬಂದಿದ್ದು, ಈ ವೇಳೆ ಆತನ ಸ್ನೇಹಿತರು ನಿಶಾಂತ್ ನನ್ನು ಉಳಿಸುವ ಪ್ರಯತ್ನ ನಡೆಸಿ ದಡಕ್ಕ ತಂದಿದ್ದು, ಆ ವೇಳೆಗಾಗಲೇ ನಿಶಾಂತ್ ಮೃತಪಟ್ಟಿದ್ದ ಎಂದು ಯುವಕರು ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ […]

ಈ ಬಾರಿಯ ಕೋವಿಡ್ ಕರ್ಫ್ಯೂ ನಿಂದ ಕೊರೋನ ನಿಯಂತ್ರಣ ಕಷ್ಟ ಸಾಧ್ಯ : ಶೋಭಾ ಕರಂದ್ಲಾಜೆ

Thursday, May 6th, 2021
shobha karandlaje

ಉಡುಪಿ : ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ಕೊರೋನ ಸೋಂಕು ನಿಯಂತ್ರಣಕ್ಕಾಗಿ ಕಳೆದ ಬಾರಿಯಂತೆ ಗಂಭೀರವಾಗಿ ಕರ್ಪ್ಯೂ ಮಾಡಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ. ಉಡುಪಿ ಜಿಲ್ಲೆ ಯಲ್ಲಿ ಕೋವಿಡ್  ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಈ ಬಾರಿಯ ಕೋವಿಡ್ ಕರ್ಫ್ಯೂ ನಿಂದ ನಿಯಂತ್ರಣ ಕಷ್ಟ ಸಾಧ್ಯ. ಕಳೆದ ಬಾರಿಯಂತೆ ಗಂಭೀರವಾಗಿ ಕರ್ಪ್ಯೂ ಮಾಡಬೇಕು. ಅವಶ್ಯಕ ವಸ್ತುಗಳಿಗೆ ಮಾತ್ರ ಅವಕಾಶ ನೀಡಬೇಕು. ಉಳಿದಂತೆ ಪೂರ್ಣ ಲಾಕ್ಡೌನ್ ಮಾಡಬೇಕು. ಜನ ಈಗಿನಂತೆ ಓಡಾಡಿದರೆ ಕೋವಿಡ್ ನಿಯಂತ್ರಣ […]