ನಗರದ ಕಾರಾಗೃಹದಲ್ಲಿ ಕೈದಿಗಳ ನಡುವೆ ಜಗಳ, ಇಬ್ಬರು ಆಸ್ಪತ್ರೆಗೆ ದಾಖಲು

Sunday, April 25th, 2021
jail clash

ಮಂಗಳೂರು: ದರೋಡೆ ಪ್ರಕರಣದ ಆರೋಪಿ ಮತ್ತು ಇಬ್ಬರು ವಿಚಾರಣಾಧೀನ ಕೈದಿಗಳ ನಡುವೆ ಮಾರಾಮಾರಿ ನಡೆದು ಇಬ್ಬರು ಗಾಯಗೊಂಡಿರುವ ಘಟನೆ ನಗರದ ಕಾರಾಗೃಹದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ಅನ್ಸಾರ್ ಮತ್ತು ಝೈನುದ್ದೀನ್ ಗಾಯಾಳುಗಳು. ಬೆಳಗ್ಗೆ ಉಪಹಾರ ವಿತರಣೆ ವೇಳೆ ಘರ್ಷಣೆ ನಡೆದಿದೆ. ಪಣಂಬೂರು ಪೊಲೀಸರು ಬಂಧಿಸಿದ ದರೋಡೆ ಪ್ರಕರಣದ ಆರೋಪಿ ಸಮೀರ್ ಎಂಬಾತ ಹಲ್ಲೆ ನಡೆಸಿದ್ದಾನೆ. ಚಮಚೆ ಮತ್ತಿತರ ಅಡುಗೆ ಪಾತ್ರೆಗಳಿಂದ ಹಲ್ಲೆ ನಡೆದಿದೆ. ಅನ್ಸಾರ್ ನ ಕೈ ಮತ್ತು ಕಾಲಿಗೆ, ಝೈನುದ್ದೀನ್ ಭುಜಕ್ಕೆ ಗಾಯವಾಗಿದೆ. ಗಾಯಾಳುಗಳನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ […]

ಪಡುಮಲೆ ಸಾನ್ನಿಧ್ಯದಲ್ಲಿ ವೇದಘೋಷ ಆರಂಭಗೊಳ್ಳುತ್ತಿದ್ದಂತೆ ಸುತ್ತಮುತ್ತ ನಾಗಗಳ ಸಂಚಾರ

Sunday, April 25th, 2021
padumale

ಪುತ್ತೂರು: ಪಡುಮಲೆ ಸಾನ್ನಿಧ್ಯದಲ್ಲಿ ಏ.24ರ ಮೀನ ಮುಹೂರ್ತದಲ್ಲಿ ಕುಂಬಳೆ ಸೀಮೆ ಅರ್ಚಕರ ವೇದಘೋಷ ಆರಂಭಗೊಳ್ಳುತ್ತಿದ್ದಂತೆ ಸುತ್ತಮುತ್ತ ನಾಗಗಳ ಸಂಚಾರ ಕಂಡುಬಂದಿದ್ದು, ಭಕ್ತರಲ್ಲಿ ಅಚ್ಚರಿ ಮೂಡಿಸಿತು. ಪಡುಮಲೆಯಲ್ಲಿ 500 ವರ್ಷಗಳ ಹಿಂದೆಯೇ ನಾಗಾರಾಧನೆ ಕ್ಷೇತ್ರವಿತ್ತು. ಸಾವಿರಾರು ನಾಗಗಳು ಜನರಿಗೆ ದರುಶನ ನೀಡುತ್ತಿದ್ದವು ಎಂಬ ಪ್ರತೀತಿ ಇದೆ. ಕಾಲಾನಂತರ ಪೂಜಾ ವಿಧಿವಿಧಾನ ನಿಂತು ಹೋಗಿ ಕ್ಷೇತ್ರ ಪಾಳುಬಿದ್ದಿತ್ತು. ಈ ಹಿಂದೆ ಪಡುಮಲೆಯಲ್ಲಿ ನಡೆದ ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ ಪಡುಮಲೆಯಲ್ಲಿ ಕೋಟಿಚೆನ್ನಯರು ಆರಾಧಿಸಿಕೊಂಡು ಬರುತ್ತಿದ್ದ ನಾಗಬ್ರಹ್ಮ ನಾಗರಾಜ ನಾಗಯಕ್ಷಿಣಿ ಮತ್ತು ನಾಗ ಕೆತ್ತನೆಗಳಿರುವ […]

ವಾರಾಂತ್ಯ ಕರ್ಫ್ಯೂ : ಬೆಳಗ್ಗೆನೇ ನಗರದ ಸಿಟಿ ಬಸ್‌ ನಿಲ್ದಾಣದಲ್ಲಿ ಲಾಠಿ ಬೀಸಿದ ಪೊಲೀಸರು

Saturday, April 24th, 2021
Lathi charge

ಉಡುಪಿ : ನಗರದ ಸಿಟಿ ಬಸ್‌ ನಿಲ್ದಾಣದಲ್ಲಿ ಬೆಳಗ್ಗಿನ ಹೊತ್ತು ಮಲಗಿದ್ದವರಿಗೆ ಬೈಕಿನಲ್ಲಿ ಬಂದ ಪೊಲೀಸರು ಲಾಠಿಯ ಬೀಸಿದ ಘಟನೆ ನಡೆಯಿತ. ಸಂತೆಕಟ್ಟೆ ಜಂಕ್ಷನ್‌, ಸಿಂಡಿಕೇಟ್‌ ಸರ್ಕಲ್‌, ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣ, ಕಲ್ಸಂಕ ವೃತ್ತದ ಬಳಿ ಬೆಳಗ್ಗಿನ ಹೊತ್ತು ಪೊಲೀಸರು ಬಿಗು ತಪಾಸಣೆ ನಡೆಸಿದರು. ಇದು ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಬಂದವರಿಗೆ ಕಿರಿಕಿರಿ ಉಂಟುಮಾಡಿತು. ಬೆಳಗ್ಗಿನ ಹೊತ್ತು ಕೆಲವು ಮಂದಿ ಮನೆಯಿಂದ ಹೊರಬಂದು ಅಗತ್ಯ ವಸ್ತುಗಳಿಗಾಗಿ ಓಡಾಡುತ್ತಿದ್ದರು. ಪೊಲೀಸರು ಲಾಠಿ  ಬೀಸಿದ್ದರಿಂದ ಮತ್ತೆ ಮನೆಸೇರಿಕೊಂಡ ಘಟನೆ ನಡೆಯಿತು. ಇದರಿಂದಾಗಿ ಉಡುಪಿ […]

ಕೇವಲ ಫೋಟೋಕ್ಕಾಗಿ ಮಾತ್ರ ಮಾಸ್ಕನ್ನು ತೆಗೆದು ಹಾಕಿಕೊಂಡಿದ್ದೆ : ಜಿಲ್ಲಾಧಿಕಾರಿ ಜಿ ಜಗದೀಶ್ ಸ್ಪಷ್ಟನೆ

Saturday, April 24th, 2021
G Jagadeesha

ಉಡುಪಿ : ಜಿಲ್ಲಾಧಿಕಾರಿ ಜಿ ಜಗದೀಶ್ ಮಾಸ್ಕ್ ಧರಿಸಿದೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಕುರಿತು ಸ್ಪಷ್ಟನೆ ನೀಡಿದ್ದು. ಕೇವಲ ಫೋಟೋಕ್ಕಾಗಿ ಮಾತ್ರ ಮಾಸ್ಕನ್ನು ತೆಗೆದು ಹಾಕಿಕೊಂಡಿದ್ದೇನೆ ಎಂದಿದ್ದಾರೆ. ಖಾಸಗಿ ಕಾರ್ಯಕ್ರಮದಲ್ಲಿ ಮಾಸ್ಕ್ ಹಾಕಬೇಕಿಲ್ಲ. ನನ್ನ ಮನೆಯ ಪಕ್ಕದಲ್ಲೇ ಕಾರ್ಯಕ್ರಮಿದ್ದದ್ದು. ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧಿಕಾರಿಯವರ ಮಗಳ ಕಾರ್ಯಕ್ರಮವಾಗಿತ್ತು.  ನಾಲ್ಕು ಮನೆಯ ಕುಟುಂಬಸ್ಥರು ಹೆಚ್ಚು ಕಮ್ಮಿ 20 ಮಂದಿ ಅದರಲ್ಲಿ ಭಾಗಿಯಾಗಿದ್ದರು. ನಾನು ಊಟಕ್ಕೂ ನಿಲ್ಲದೆ, ಐದಾರು ನಿಮಿಷವಷ್ಟೇ ಇದ್ದು ಹೊರಟೆ . ಕೇವಲ ಫೋಟೋಕ್ಕಾಗಿ ಮಾತ್ರ ಮಾಸ್ಕನ್ನು ತೆಗೆದು ಹಾಕಿಕೊಂಡಿದ್ದೇನೆ. ಸೀಮಿತ […]

ಬಜ್ಪೆ ಸುಗಂಧ ದ್ರವ್ಯ ತಯಾರಿ ಕಂಪೆನಿಯಲ್ಲಿ ಅಗ್ನಿ ಅನಾಹುತ, ದಟ್ಟ ಹೊಗೆ

Saturday, April 24th, 2021
cantom smith

ಮಂಗಳೂರು :  ಎಂಎಸ್‌ಇಝೆಡ್ ವ್ಯಾಪ್ತಿಯೊಳಗಿರುವ ಬಜ್ಪೆ ಸಮೀಪದ ಪೆರ್ಮುದೆ ಎಂಬಲ್ಲಿ ಕ್ಯಾಟಸಿಂತ್ ಸ್ಪೆಷಾಲಿಟಿ ಕೆಮಿಕಲ್ಸ್ ಪ್ರೈವೆಟ್ ಲಿ. ಎಂಬ ಹೆಸರಿನ ನೂತನ ಸುಗಂಧ ದ್ರವ್ಯ ತಯಾರಿ ಕಂಪೆನಿಯಲ್ಲಿ ಶನಿವಾರ ಅಪರಾಹ್ನ ಅಗ್ನಿ ಅನಾಹುತ ಸಂಭವಿಸಿದೆ. ಈ ಸಂದರ್ಭ ಕಂಪೆನಿಯಲ್ಲಿ ಕೆಲಸಗಾರರು ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ. ಇದರಿಂದ ಪರಿಸರದಲ್ಲಿ ದಟ್ಟ ಹೊಗೆ ಕಾಣಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ತೆರಳಿದ್ದು, ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.  

ವೀಕೆಂಡ್ ಲಾಕ್ ಡೌನ್ : ಆದೇಶ ಉಲ್ಲಂಘಿಸಿದ 30 ಮಳಿಗೆಗಳ ವಿರುದ್ಧ ಪ್ರಕರಣ ದಾಖಲು, ಅನಗತ್ಯ ವಾಹನ ಸಂಚಾರಕ್ಕೆ ತಡೆ

Saturday, April 24th, 2021
Lock Down

ಮಂಗಳೂರು : ವೀಕೆಂಡ್ ಲಾಕ್ ಡೌನ್ ಬಿಗಿಗೊಳಿಸಲು ಅಗತ್ಯ ವಸ್ತುಗಳ ಖರೀದಿ ಸಮಯ ಮುಗಿಯುತ್ತಿದ್ದಂತೆ ಆಯಾ ಕಟ್ಟಿನ ಸ್ಥಳಗಳಲ್ಲಿ ಬ್ಯಾರಿಕೇಡ್ ಹಾಕಿ ಅನಗತ್ಯ ವಾಹನ ಸಂಚಾರಕ್ಕೆ ಪೊಲೀಸರು ತಡೆ ಹಾಕಿದ್ದಾರೆ. ನಗರದ ಕ್ಲಾಕ್ ಟವರ್ ನಲ್ಲಿ ಪೊಲೀಸ್ ಆಯುಕ್ತ ಎನ್‌. ಶಶಿಕುಮಾರ್, ಡಿಸಿಪಿಗಳಾದ ಹರಿರಾಂ ಶಂಕರ್, ವಿನಯ್ ಗಾಂವ್ಕರ್ ನೇತೃತ್ವದಲ್ಲಿ ಪೊಲೀಸರು ವಾಹನ ಸಂಚಾರ ತಪಾಸಣೆ ಮಾಡಿದ್ದಾರೆ. ಗ್ರಾಮಾಂತರ ಪ್ರದೇಶಗಳಿಗೆ ಸರಕಾರಿ ಬಸ್ಸುಗಳು ಸಂಚರಿಸುತ್ತಿದ್ದರೂ ಬಸ್ಸಿನಲ್ಲಿ ಬೆರಳೆಣಿಕೆಯ ಪ್ರಯಾಣಿಕರು ಮಾತ್ರವೇ ಸಂಚರಿಸುತ್ತಿದ್ದಾರೆ. ಹಾಲು, ಮೊಟ್ಟೆ , ತರಕಾರಿ, ಗ್ಯಾಸ್ ಸೇರಿದಂತೆ ಅಗತ್ಯ […]

ಬಾಕ್ಸೈಟ್ ಮೈನಿಂಗ್ ವ್ಯವಹಾರದಲ್ಲಿ ಮೋಸ, ಫಳ್ನೀರ್ ನಿವಾಸಿಯ ಬಂಧನ

Friday, April 23rd, 2021
Divya Darshan

ಮಂಗಳೂರು : ಬಾಕ್ಸೈಟ್ ಮೈನಿಂಗ್ ವ್ಯವಹಾರದಲ್ಲಿದ್ದ ಕೇರಳ ಮೂಲದ ಉದ್ಯಮಿ ಯೊಬ್ಬರನ್ನು ಸುಮಾರು ಎರಡೂವರೆ ತಿಂಗಳ ಕಾಲ ಒತ್ತೆಯಾಳಾಗಿರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಫಳ್ನೀರ್ ನಿವಾಸಿ ದಿವ್ಯದರ್ಶನ (33) ಎಂಬಾತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಕುರಿತು ತಿಳಿಸಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ದುಬೈನಲ್ಲಿ ಉದ್ಯೋಗಿಯಾಗಿದ್ದ ಕೇರಳ ಮೂಲದ ಮುಹಮ್ಮದ್ ಹನೀಫ್ ಎಂಬವರನ್ನು 2019-20ನೆ ಸಾಲಿನ ಅವಧಿಯಲ್ಲಿ ಜೀವ ಬೆದರಿಕೆ ಇದೆ ಎಂಬುದಾಗಿ ಹೇಳಿ ಅವರನ್ನು ತನ್ನ ಫ್ಲ್ಯಾಟ್‌ನಲ್ಲಿ ದಿವ್ಯದರ್ಶನ  ಇರಿಸಿದ್ದ ಎಂದು ಹೇಳಿದರು. ತನ್ನದೇ ಸಹಚರರಿಂದ […]

ಬೈಕ್‌ಗೆ ನಾಯಿ ಕಟ್ಟಿ ರಸ್ತೆಯಲ್ಲಿ ಎಳೆದ ಪ್ರಕರಣ, ಓರ್ವ ಆರೋಪಿ ಬಂಧನ

Friday, April 23rd, 2021
neelappa

ಮಂಗಳೂರು :  ಅಮಾನವೀಯವಾಗಿ ನಾಯಿಯನ್ನು ಬೈಕ್‌ಗೆ ಕಟ್ಟಿ ರಸ್ತೆಯುದ್ದಕ್ಕೂ ಎಳೆದೊಯ್ದ ಪ್ರಕರಣಕ್ಕೆ ಸಂಬಂಧಿಸಿ ಬೈಕಿನಲ್ಲಿ ನಾಯಿ ಹಿಡಿದುಕೊಂಡಿದ್ದ ಹಿಂಬದಿ ಸವಾರ ಕೊಪ್ಪಳ ಜಿಲ್ಲೆಯ ನೀಲಪ್ಪ(30)ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸುರತ್ಕಲ್ ಎನ್‌ಐಟಿಕೆ ಕಾಲನಿಯಿಂದ ರಸ್ತೆಯಲ್ಲಿ ಎ.17ರಂದು ರಾತ್ರಿ ಬೈಕ್‌ನ ಹಿಂಬದಿಗೆ ಹಗ್ಗದಲ್ಲಿ ಕಟ್ಟಿಹಾಕಿ ನಾಯಿಯನ್ನು ಎಳೆದುಕೊಂಡು ಹೋಗುವ ದೃಶ್ಯದ ವಿಡಿಯೋವನ್ನು ಸಾಮಾಜಿಕ  ಜಾಲತಾಣದಲ್ಲಿ ಬಿಡಲಾಗಿತ್ತು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ  ಹಿನ್ನೆಲೆಯಲ್ಲಿ ಸುರತ್ಕಲ್ ಪೊಲೀಸರು ಸ್ವಯಂ ಆಗಿ ಕೇಸು ದಾಖಲಿಸಿದ್ದರು. ಈ ನಡುವೆ ವಿಡಿಯೋ ಮಾಡಿದವರು ವಿಳಂಬವಾಗಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದರು. […]

ಯಾವುದೇ ಕಾರಣಕ್ಕೂ ಲಾಕ್ ಡೌನ್ ಮಾಡುವುದಿಲ್ಲವೆಂದು ಎಂದು ಹೇಳಿ, ಸರಕಾರ ಈಗ ಮಾಡುತ್ತಿರುವುದೇನು ?

Friday, April 23rd, 2021
Market Bundh

ಮಂಗಳೂರು : ಕೊರೋನಾ ಮಾರ್ಗ ಸೂಚಿ ಪ್ರಕಾರ ಸರಕಾರ ಕ್ಷಣಕ್ಕೊಂದು ನಿರ್ಧಾರ ತಳೆದು ಜನರನ್ನು ಸಂಪೂರ್ಣ ಗೊಂದಲ ಹಾಗೂ ಭಯಭೀತ ಗೊಳಿಸಿದ್ದು, ಸರಕಾರ ಯಾವುದೇ ಕಾರಣಕ್ಕೂ ಲಾಕ್ ಡೌನ್ ಮಾಡುವುದಿಲ್ಲವೆಂದು ಹೇಳಿದ್ದು, ಇದೀಗ ಹಿಂಬಾಗಿಲ ಮೂಲಕ ಸಾರ್ವಜನಿಕ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿ, ವೀಕೆಂಡ್ ಕರ್ಫ್ಯೂ ಹೆಸರಲ್ಲಿ ಅಘೋಷಿತ ಸಂಪೂರ್ಣ ಲಾಕ್ ಡೌನ್ ಸ್ಥಿತಿಗೆ ತಂದಿದೆ. ಕೊರೋನಾ ನಿಯಂತ್ರಣ ಇರುವ ಪ್ರದೇಶದಲ್ಲಿ ಕೂಡ ವ್ಯವಹಾರ ಮಳಿಗೆಗಳನ್ನು ಏಕಾಏಕಿ ಬಲವಂತ ಮುಚ್ಚಲು ಆರಂಭಿಸಿದೆ. ಸರಕಾರದ ಈ ಕ್ರಮ ಮುಂದಿನ […]

ಮಂಗಳೂರು : ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದ ಪೊಲೀಸರು

Friday, April 23rd, 2021
Shops Close

ಮಂಗಳೂರು : ನಗರದ ಕೆಲವು ಜ್ಯುವೆಲ್ಲರಿ ಶಾಪ್, ಚಪ್ಪಲಿ ಅಂಗಡಿಗಳು, ಬಟ್ಟೆ ಬರೆ, ವಾಚ್ ಅಂಗಡಿಗಳು ಇಂದು ಕೂಡ ತೆರದಿದ್ದುದನ್ನು ಗಮನಿಸಿದ ಪೊಲೀಸರು ಅವುಗಳನ್ನು ಮುಚ್ಚಿವಂತೆ ಹೇಳಿದರು. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಶುಕ್ರವಾರ ಬೆಳಿಗ್ಗೆ ಪೊಲೀಸರು ಮುಚ್ಚಿಸಿದ್ದಾರೆ. ಕೆಲವು ಅಂಗಡಿಗಳು ಇಂದು ಕೂಡ ತೆರೆದಿದ್ದ ಹಿನ್ನೆಲೆಯಲ್ಲಿ ನಗರದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ನೇತೃತ್ವದಲ್ಲಿಅವುಗಳನ್ನು ಮುಚ್ಚಿಸಲಾಯಿತು, ನಗರದ ಕೇಂದ್ರ ಮಾರುಕಟ್ಟೆ, ಹಂಪನಕಟ್ಟೆ, ಮಿಲಾಗ್ರಿಸ್ ಮೊದಲಾದ ಕಡೆಗಳಲ್ಲಿ ಆಯುಕ್ತರು ಹಾಗು ಉಪ ಆಯುಕ್ತರ ನೇತೃತ್ವದಲ್ಲಿ ಅಗತ್ಯ […]