ಸಿದ್ದರಾಮಯ್ಯ ಬಜೆಟ್ ಟೀಕೆಗೆ ಸದಾನಂದಗೌಡ ತಿರುಗೇಟು

Tuesday, February 2nd, 2021
sadananda Gowda

ನವದೆಹಲಿ : ಕೊರೊನಾದಂತಹ ಸಾಂಕ್ರಾಮಿಕ ರೋಗವು ತಂದೊಡ್ಡಿರುವ ಆರ್ಥಕ ಸಂಕಷ್ಟದ ಮಧ್ಯೆಯೂ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್‌ ಅವರು ಅತ್ಯುತ್ತಮವಾದ ಬಜೆಟ್‌ ಮಂಡಿಸಿದ್ದಾರೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಶ್ರೀ ಡಿ ವಿ ಸದಾನಂದಗೌಡ ಅವರು ತಿಳಿಸಿದ್ದಾರೆ. ಬಜೆಟ್‌ ನಂತರ ಇಲ್ಲಿ ಸುದ್ದಿಗಾರರೊಂದಿವೆ ಮಾತನಾಡಿದ ಸಚಿವರು – ಆಯವ್ಯಯವು ತಾತ್ಕಾಲಿಕ ಅವಶ್ಯಕತೆಗಳ ಜೊತೆಗೇ ದೇಶವನ್ನು ಅಭಿವೃದ್ಧಿ ಪಥದ ಮೇಲೆ ಕೊಂಡೊಯ್ಯುವ ದೂರದೃಷ್ಟಿ ಪ್ರಸ್ತಾವನೆಗಳನ್ನು ಒಳಗೊಂಡಿದೆ, ಕೈಗಾರಿಕೆ ಸೇರಿದಂತೆ ಎಲ್ಲ ವಲಯಗಳನ್ನೂ ಸ್ವಾವಲಂಬಿಯಾಗಿ ರೂಪಿಸುವ […]

ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಮೀನು ಹಾಗೂ ಮೀನಿನ ಉತ್ಪನ್ನ ಸರಬಾರಜು : ಸಚಿವ ಎಸ್. ಅಂಗಾರ

Tuesday, February 2nd, 2021
Sangara

ಬೆಂಗಳೂರು : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಹೊನ್ನಾವರ ಹಾಗೂ ತದಡಿ ಮೀನುಗಾರಿಕೆ ಬಂದರಿನಲ್ಲಿ ಪರ್ಸೀನ್ ಬೋಟುಗಳು ಹಿಡಿದು ತಂದ ಮೀನನ್ನು ನಿಗಮದ ಮುಖಾಂತರ ಮಾರಾಟ ಮಾಡಿ ಮೀನುಗಾರರಿಗೆ ಉತ್ತಮ ಬೆಲೆಯನ್ನು ನೀಡಲು ಕ್ರಮವಹಿಸಲಾಗುತ್ತಿದೆ ಎಂದು ಸಚಿವ ಎಸ್. ಅಂಗಾರ ತಿಳಿಸಿದರು. ಸೋಮವಾರ ನಡೆದ ವಿಧಾನಸಭೆಯ ಕಾರ್ಯಕಲಾಪದಲ್ಲಿ ಶಾಸಕ ಉಮಾನಾಥ್ ಎ ಕೋಟ್ಯಾನ್ (ಮೂಡಬಿದ್ರೆ) ಅವರು ಕೇಳಿದ ಮೀನುಗಾರಿಕಾ ವಲಯವನ್ನು ಅಭಿವೃದ್ಧಿಗೊಳಿಸುವ ಹಾಗೂ ಮತ್ಸ್ಯಾಹಾರವನ್ನು ಜನಪ್ರಿಯಗೊಳಿಸಲು ಮೀನುಗಾರಿಕೆ ಅಭಿವೃದ್ಧಿ ನಿಗಮವು ಹಮ್ಮಿಕೊಂಡಿರುವ ಕ್ರಿಯಾ ಯೋಜನೆಗಳ ಕುರಿತ ಪ್ರಶ್ನೆಗೆ […]

ಮಂಗಳೂರು ಮಹಾನಗರ ಪಾಲಿಕೆಯ ಜಂಟಿ ನಿರ್ದೇಶಕರ ಮನೆಗೆ ಎಸಿಬಿ ದಾಳಿ

Tuesday, February 2nd, 2021
Jayaraj

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ನಗರ ಯೋಜನೆಗಳ ವಿಭಾಗದ ಜಂಟಿ ನಿರ್ದೇಶಕರೊಬ್ಬರ ಮೇಲೆ ಎಸಿಬಿ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ. ಮನಪಾ ನಗರ ಯೋಜನೆಗಳ ವಿಭಾಗದ ಕೆ.ವಿ. ಜಯರಾಜ್ ಎಂಬವರನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಜಯರಾಜ್ ಅವರ ಬಿಜೈ ಬಳಿ ಇರುವ ಮನೆ ಮೇಲೆ ಮಂಗಳವಾರ ಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಪರಿಶೀಲನೆ ಮುಂದುವರಿದಿದೆ. ಇದರ ಜೊತೆಗೆ ಅವರ ಕಚೇರಿ, ನಗರದ ಪಡೀಲ್ ಬಳಿಯ ಜಯರಾಜ್ ತಂದೆಯ ಮನೆ, ಕೇರಳದಲ್ಲಿರುವ ಜಯರಾಜ್ […]

ಕೈರಂಗಳದಲ್ಲಿ ಯುವತಿ ಮೇಲೆ ಅತ್ಯಾಚಾರ, ಆರೋಪಿಯ ಬಂಧನ

Tuesday, February 2nd, 2021
Rape

ಕೊಣಾಜೆ :  ಹದಿನೆಂಟರ ಹರೆಯದ ಯುವತಿಯೊಬ್ಬಳ ಮೇಲೆ ದುಷ್ಕರ್ಮಿಯೊಬ್ಬ ಮನೆಗೆ ನುಗ್ಗಿ ಅತ್ಯಾಚಾರ ಎಸಗಿದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಕೈರಂಗಳದಲ್ಲಿ ನಡೆದಿದೆ. ಕೈರಂಗಳ‌ ಗ್ರಾಮದಲ್ಲಿ ಹದಿನೆಂಟರ ಹರೆಯದ ಮೂಗಿ ಯುವತಿಯೊಬ್ಬಳ ಮೇಲೆ ಯಾರು ಇಲ್ಲದೆ ಇರುವುದನ್ನು ಗಮನಿಸಿ ದುಷ್ಕರ್ಮಿಯೊಬ್ಬ ಅತ್ಯಾಚಾರ ನಡೆದಿರುವ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ. ಮನೆ ಮಂದಿ ರವಿವಾರ ದೇವಸ್ಥಾನಕ್ಕೆ ತೆರಳಿದ್ದರು ಎನ್ನಲಾಗಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಯುವಕನೊಬ್ಬ ಮನೆಗೆ ನುಗ್ಗಿ ದುಷ್ಕೃತ್ಯ ಎಸಗಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಯುವತಿಯನ್ನು ಆಸ್ಪತ್ರಗೆ ದಾಖಲಿಸಲಾಗಿದ್ದು, ಆರೋಪಿಯನ್ನು […]

ನೀ ತಾಂಟ್ರೆ ಬಾ ತಾಂಟ್ ಎಂಬ ಫೇಸ್ ಬುಕ್ ಪೇಜ್ ವಿರುದ್ಧ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Monday, February 1st, 2021
Neetanre

ಮಂಗಳೂರು : ನೀ ತಾಂಟ್ರೆ ಬಾ ತಾಂಟ್ ಎಂಬ ಫೇಸ್ ಬುಕ್ ಪೇಜ್ ತೆರೆಯಲಾಗಿದ್ದು ಇದು ಎರಡು  ಕೋಮುಗಳ ನಡುವೆ ಘರ್ಷಣೆ ಸೃಷ್ಟಿಸಲು ಮಾಡಲಾಗಿದೆ ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ನಗರ ಪೊಲೀಸ್ ಆಯುಕ್ತ (ಡಿಸಿಪಿ) ಹರಿರಾಮ್ ಶಂಕರ್ ಹೇಳಿದ್ದಾರೆ. ಈ ಕುರಿತು ಮಾತನಾಡಿ ಅವರು, ಈ  ಫೇಸ್ ಬುಕ್ ಪೇಜ್ನಲ್ಲಿ ನಕಲಿ ದಾಖಲೆಗಳ ಸಹಾಯದಿಂದ ವಿಡಿಯೋಗಳನ್ನು ಪೋಸ್ಟ್ ಮಾಡಲಾಗುತ್ತಿದ್ದು, ಇದು ವಿಭಿನ್ನ ಗುಂಪುಗಳ ನಡುವೆ ಘರ್ಷಣೆಯಾಗುವುದಕ್ಕಾಗಿ ಮಾಡಲಾಗುತ್ತಿದೆ” ಎಂದರು. ಈ ನಿಟ್ಟಿನಲ್ಲಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ […]

ಯುವತಿಯ ಮೇಲೆ ಮಾಜಿ ಪ್ರಿಯಕರ ಮತ್ತು ಆತನ ಸ್ನೇಹಿತರ ತಂಡದ ದಾಳಿ : ಮೂವರು ಆರೋಪಿಗಳ ಬಂಧನ

Monday, February 1st, 2021
Trishul

ಮಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ ಪರಿಚಯ ಪ್ರೇಮಕ್ಕೆ ತಿರುಗಿದ ನಂತರ ಹುಡುಗಿ ಆತನಿಂದ ದೂರವಾಗಲು ನಿರ್ಧರಿದ್ದಳು ಆತ ಕೊಟ್ಟ ಗಿಫ್ಟ್ ಗಳನ್ನೂ ಹಿಂತಿರುಗಿಸಿದ್ದಳು ಇದರಿಂದ ಕೋಪಗೊಂಡ ಮಾಜಿ ಪ್ರಿಯಕರ ಮತ್ತು ಆತನ ಸ್ನೇಹಿತರ ತಂಡ ನಗರದ ರೆಸ್ಟೋರೆಂಟ್‌ವೊಂದರಲ್ಲಿ ಯುವತಿಯ ಮೇಲೆ ದಾಳಿ ಮಾಡಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ. ಬೊಕ್ಕಪಟ್ಣದ ತ್ರಿಶೂಲ್ ಸಾಲ್ಯಾನ್ (19), ಕೋಡಿಕಲ್‌ನ ಸಂತೋಷ್ ಪೂಜಾರಿ (19) ಮತ್ತು ಅಶೋಕ್ ನಗರದ […]

ಬೆಳ್ತಂಗಡಿ ತಾಲೂಕಿನಲ್ಲಿ ಸಂಭ್ರಮದ ಸಿರಿ ಜಾತ್ರೆ

Monday, February 1st, 2021
siriJatre

ಮಂಗಳೂರು: ಅಲ್ಲಿ ಹೋದಾಗ ಅಪರೂಪದ ದೃಶ್ಯವೇ ಕಂಡುಬಂದಿತ್ತು. ಸಾಲು ಸಾಲಾಗಿ ನಿಂತು ಹೊಂಬಾಳೆಯನ್ನು ಹಿಡಿದಿದ್ದ ಮಹಿಳೆಯರನ್ನು ನೋಡಿದ್ರೆ ಕಣ್ಣಲ್ಲಿ ಭಯ ಭಕ್ತಿ ಸೃಷ್ಟಿಸಿತ್ತು. ಹೌದು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಆಲಡೆ ಕ್ಷೇತ್ರ ಮರೋಡಿ ಉಮಾಮಹೇಶ್ವರ ದೇವಸ್ಥಾನದ ವರ್ಷಾವಧಿ‌ ಪ್ರಯುಕ್ತ ಆಯನ ಮತ್ತು ಸಿರಿಗಳ ಜಾತ್ರೆ ಸಂಭ್ರಮದಿಂದ ನಡೆಯಿತು. ಹೆಂಗಸರು ಸಾಲಾಗಿ ನಿಂತು ತಮ್ಮ ತಮ್ಮ ಕೈಯಲ್ಲಿ ಅಡಕೆ ಮರದ ಹಿಂಗಾರವನ್ನು ಹಿಡಿದು  ಸಾಮೂಹಿಕವಾಗಿ ಮೈಮೇಲೆ ದೈವವನ್ನು ಆವಾಹಿಸಿಕೊಂಡಿದ್ದರು. ಮಹಿಳೆಯರು‌ ಯುವತಿಯರನ್ನು ‘ಸಿರಿ’ಗಳೆಂದೂ, ಯುವಕರನ್ನು ‘ಕುಮಾರ’ […]

ದಿನಭವಿಷ್ಯ : ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ

Saturday, January 30th, 2021
satyanarayana

ಶ್ರೀ ನಾರಾಯಣ ಸ್ಮರಣೆಯನ್ನು ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ದೂರದ ಸಂಬಂಧಿಗಳು ನಿಮ್ಮನ್ನು ಕಾಣಲು ಬರಲಿದ್ದಾರೆ, ಅವರು ನಿಮ್ಮಿಂದ ಸಹಾಯ ಅಪೇಕ್ಷಿಸಬಹುದು. ಈ ದಿನ ನೀವು ಯಾರಿಗೂ ಸಾಲ ನೀಡುವ ವಿಚಾರಕ್ಕೆ ಹೋಗಬೇಡಿ ಇದರಿಂದ ಮುಂದೆ ಸಮಸ್ಯೆ ಅನುಭವಿಸಬೇಕಾಗುತ್ತದೆ. ಸಭಾ ಗೋಷ್ಠಿಗಳು ನಿಮಗೆ ಧನಾತ್ಮಕ ಚಿಂತನೆಯನ್ನು ತಂದುಕೊಡುತ್ತದೆ. ಕೆಲಸದಲ್ಲಿ ಉತ್ತಮ ಜ್ಞಾನದಿಂದ […]

ಪೊಲೀಸ್ ಮೇಲೆ ದಾಳಿ ಮಾಡಲು : ಮಾಯಾ ಗ್ಯಾಂಗ್ ಮತ್ತು ಕಾರ್ಖಾನಾ ಗ್ಯಾಂಗ್

Saturday, January 30th, 2021
N shashikumar

ಮಂಗಳೂರು : ಮಂಗಳೂರು ಪೊಲೀಸ್ ಗೋಲಿಬಾರ್ ಸೇಡು ತೀರಿಸಲು ಕರ್ತವ್ಯನಿರತ ಪೊಲೀಸ್ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಿದ ಆರೋಪದಲ್ಲಿ ಈಗಾಗಲೇ ಬಂಧಿಸಲ್ಪಟ್ಟಿರುವ ‘ಮಾಯಾ ಗ್ಯಾಂಗ್’ನ ಸದಸ್ಯರೊಂದಿಗೆ ‘ಕಾರ್ಖಾನಾ ಗ್ಯಾಂಗ್’ ಹೆಸರಿನ ಇನ್ನೊಂದು ತಂಡ ಕೈಜೋಡಿಸಿರುವ ವಿಚಾರ ತನಿಖೆಯಲ್ಲಿ ಬಯಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ. ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ವಶವಾಗಿರುವ ಇಬ್ರಾಹೀಂ, ಅಕ್ಬರ್ ಮತ್ತು ಮುಹಮ್ಮದ್ ಹನೀಫ್ ಎಂಬವರು ‘ಕಾರ್ಖಾನಾ ಗ್ಯಾಂಗ್’ನ ಸದಸ್ಯರು. ಇದರಲ್ಲಿ ಓರ್ವ ಕ್ರಿಮಿನಲ್ […]

ದಕ್ಷಿಣ ಕೊರಿಯಾದಲ್ಲಿ ಉದ್ಯೋಗ ಕೊಡಿಸುವುದಾಗಿ 13 ಲಕ್ಷ ವಂಚಿಸಿದ ಮಂಗಳೂರಿನ ನಕಲಿ ಏಜೆಂಟ್

Friday, January 29th, 2021
Yogish Shetty

ಮಂಗಳೂರು  :  ದಕ್ಷಿಣ ಕೊರಿಯಾದಲ್ಲಿ ತಿಂಗಳಿಗೆ 2 ಲಕ್ಷ ರೂಪಾಯಿ ಸಿಗುವ ಉದ್ಯೋಗ ಇದೆ ಎಂದು 13 ಲಕ್ಷ ಪಡೆದು ಮೂವರು ಅಮಾಯಕರನ್ನು  ವಂಚಿಸಿರುವುದಾಗಿ  ಮಂಗಳೂರು ಪೊಲೀಸ್ ಕಮಿಷನರ್ ಗೆ ದೂರು ನೀಡಲಾಗಿದೆ. ಮಂಗಳೂರು ಟೂರ್‍ಸ್ ಆಂಡ್ ಟ್ರಾವೆಲ್ಸ್, ಬಂದರು, ಮಂಗಳೂರು ಎಂಬ ಕಚೇರಿ ತೆರೆದು ಶಂಶೀರ್ ರಿಜ್ವಾನ್ ಎಂಬ ವ್ಯಕ್ತಿ ವಿದೇಶದಲ್ಲಿ ಉದ್ಯೋಗ ಮಾಡುವ ಆಸಕ್ತಿ ಇರುವವರನ್ನು ಕಚೇರಿಗೆ ಕರೆಸಿ ವಂಚಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಮಹಮ್ಮದ್ ನಿಯಾಝ್, ಬಿನ್. ಅಬ್ದುಲ್ ಅಝೀಝ್,  ಶಹನವಾಜ್, ಬಿನ್. ಅಬ್ದುಲ್ ಕರೀಂ, ಮಹಮ್ಮದ್ ಇರ್ಫಾನ್, ಬಿನ್. ಮಹಮ್ಮದ್ […]