ದ.ಕ.ಜಿಲ್ಲೆಯಲ್ಲಿ ಕಾಂಗ್ರೆಸ್ ಬೆಂಬಲಿಸಲು ಇಂಟಕ್ ಕರೆ

Saturday, May 5th, 2018
dakshina-kannada

ಮಂಗಳೂರು: ದ.ಕ.ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಲು ಪಕ್ಷದ ಕಾರ್ಮಿಕ ಘಟಕ ವಾದ ಇಂಟಕ್ ಕರೆ ನೀಡಿದೆ. ಶನಿವಾರ ಇಂಟಕ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಇಂಟಕ್ ಜಿಲ್ಲಾಧ್ಯಕ್ಷ ಮನೋಹರ ಶೆಟ್ಟಿ ಇಂಟಕ್‌ನ ಸರ್ವ ಸದಸ್ಯರೂ ಕೂಡ ಬೂತ್ ಮಟ್ಟದಲ್ಲಿ ಸಕ್ರಿಯವಾಗಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಬೇಕು. ತಮ್ಮ ಕುಟುಂಬದ ಸರ್ವರನ್ನೂ ಕೂಡ ಮತದಾನ ಮಾಡುವಂತೆ ಪ್ರೇರೇಪಿಸಬೇಕು ಎಂದರು. ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಜೆ.ಆರ್.ಲೋಬೊ ಇಂಟಕ್‌ನ ಹಲವು ಸಮಸ್ಯೆಗಳಿಗೆ […]

ಮೋದಿಗೆ ಅಂಬೇಡ್ಕರ್ ಬಗ್ಗೆ ಮಾತಾಡಲು ನೈತಿಕ ಹಕ್ಕಿಲ್ಲ: ಕಾಂಗ್ರೆಸ್ ನಾಯಕಿ ಶೆಲ್ಜಾ

Saturday, May 5th, 2018
ambedkar

ಮಂಗಳೂರು: ಚುನಾವಣೆಯಲ್ಲಿ ಕೇಂದ್ರ ಸರ್ಕಾರದ ಸುಳ್ಳುಗಳು ಹೊರಬರುತ್ತಿವೆ. ಪ್ರಧಾನಿ ಮೋದಿಗೆ ಅಂಬೇಡ್ಕರ್ ಬಗ್ಗೆ ಮಾತಾಡಲು ನೈತಿಕ ಹಕ್ಕಿಲ್ಲ ಎಂದು ಕಾಂಗ್ರೆಸ್ ನಾಯಕಿ, ಮಾಜಿ ಸಚಿವೆ ಕುಮಾರಿ ಶೆಲ್ಜಾ ಮಂಗಳೂರಿನಲ್ಲಿ ಹೇಳಿದ್ದಾರೆ. ತಳಮಟ್ಟದಲ್ಲಿ ದಲಿತ ಸಮಸ್ಯೆಗಳು ಜ್ವಲಂತವಾಗಿ ಉಳಿದಿವೆ. ದಲಿತ ದೌರ್ಜನ್ಯ ಕಾಯ್ದೆಯನ್ನು ದುರ್ಬಲಗೊಳಿಸಲಾಗಿದೆ. 1989ರಲ್ಲಿ ರಾಜೀವ್ ಗಾಂಧಿ ತಂದ ಕಾನೂನನ್ನು ಯುಪಿಎ ಎರಡನೇ ಅವಧಿಯಲ್ಲಿ ಮತ್ತಷ್ಟು ಪ್ರಬಲಗೊಳಿಸಲಾಯಿತು. ಆದರೆ ಮೋದಿ ಸರ್ಕಾರ 13 ಅಧ್ಯಾದೇಶ ಜಾರಿಗೊಳಿಸಿದೆ. ಇದರಿಂದ ದಲಿತ ದೌರ್ಜನ್ಯ ಕಾಯ್ದೆ ಹಲ್ಲಿಲ್ಲದ ಹಾವಾಗಿದೆ. ಮೋದಿಯವರದ್ದು ದಲಿತರ […]

ಇಂದು ಶ್ರೀಕರ ಪ್ರಭು ಅಭಿಮಾನಿ ಬಳಗದ ಮಹಿಳಾ ಮತದಾರರ ಸಮಾವೇಶ

Saturday, May 5th, 2018
shrikar-prabhu

ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಪಕ್ಷೇತರ ಅಭ್ಯರ್ಥಿ ಶ್ರೀಕರ ಪ್ರಭು ಅವರ ಅಭಿಮಾನಿ ಬಳಗದ ಮಹಿಳಾ ಮತದಾರರ ಬ್ರಹತ್ ಸಮಾವೇಶ ಇಂದು (06-05-2018) ಆದಿತ್ಯವಾರ ಸಂಜೆ 5:30 ಇಂದ 6:45ರ ತನಕ ನಗರದ ಬಂಟ್ಸ್ ಹಾಸ್ಟೆಲ್ ಬಳಿಯ ಸಿ. ವಿ. ನಾಯಕ್ ಹಾಲ್ ನಲ್ಲಿ ಜರಗಲಿದೆ. ಈ ಸಮಾವೇಶದಲ್ಲಿ ಬಾರಿ ಸಂಖ್ಯೆಯ ಮಹಿಳಾ ಮತದಾರರು ಮತ್ತು ಕಾರ್ಯಕರ್ತರು ಭಾಗವಹಿಸಲಿದ್ದು, ಶ್ರೀಕರ್ ಪ್ರಭು ಅವರು ಅಭಿಮಾನಿಗಳನ್ನು ಉದ್ದೇಶಿಸಿ ತಮ್ಮ ಚುನಾವಣಾ ಪ್ರಚಾರ ಬಾಷಣ ಮಾಡಲಿದ್ದಾರೆಂದು ಶ್ರೀಕರ ಪ್ರಭು ಅಭಿಮಾನಿ […]

ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ಸಿಗೆ ಸೇರ್ಪಡೆ

Saturday, May 5th, 2018
resigns

ಮಂಗಳೂರು: ಮನಪಾ 25ನೇ ದೇರೆಬೈಲು ಪಶ್ಚಿಮ ವಾರ್ಡಿನ ಕೊಟ್ಟಾರ ಪರಿಸರದ ಸುಮಾರು 35ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಕದ್ರಿಯಲ್ಲಿರುವ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೊರ ಸಮ್ಮುಖ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಬಿಜೆಪಿ ಪಕ್ಷದ ದುರ್ಬಲ ಆಡಳಿತ, ನಾಯಕರಿಂದ ಕಾರ್ಯಕರ್ತರ ಶೋಷಣೆ, ಧರ್ಮದ ರಾಜಕೀಯದಿಂದ ಬೇಸತ್ತು ಮತ್ತು ಕಾಂಗ್ರೆಸ್ ಪಕ್ಷದ ತತ್ವ, ಸಿದ್ದಾಂತ, ಜಾತ್ಯತೀತ ನಿಲುವುಗಳಿಂದ ಆಕರ್ಷಿತರಾಗಿ ಹಿರಿಯರಾದ ಚಂದ್ರಶೇಖರ, ರಾಜೇಶ್ ಶೆಟ್ಟಿ, ದುರ್ಗೇಶ್ ಹಾಗೂ ಯುವ ನಾಯಕರಾದ ಕಿಶನ್, ಪ್ರಜ್ವಲ್, […]

ಕುಂದಾಪುರದ ಅಭ್ಯರ್ಥಿಗೆ ಸುರತ್ಕಲ್ ಅಭಿವೃದ್ಧಿಯ ಮಾಹಿತಿಯಿಲ್ಲ: ದೇವಿ ಪ್ರಸಾದ್ ಶೆಟ್ಟಿ

Saturday, May 5th, 2018
mohuiddin-bava

ಮಂಗಳೂರು: ಬಿಜೆಪಿ ಅಭ್ಯರ್ಥಿ ಭರತ್ ಶೆಟ್ಟಿ ಕುಂದಾಪುರದಿಂದ ವಲಸೆ ಬಂದವರು ಹೀಗಾಗಿ ಉತ್ತರ ಕ್ಷೇತ್ರದಲ್ಲಿ ಆದ ಅಭಿವೃದ್ಧಿಯ ಮಾಹಿತಿಲ್ಲದೆ ಟೀಕಿಸುತ್ತಿದ್ದಾರೆ.ಮಂಗಳೂರು ಉತ್ತರ ಕ್ಷೇತ್ರದಲ್ಲಿ ಶಾಸಕ ಮೊದಿನ್ ಬಾವಾ ಅವರ ಸಾಧನೆ ಇತರ ಕ್ಷೇತ್ರಗಳಿಗೂ ಮಾದರಿಯಾಗಿದೆ. ಆರೋಗ್ಯ ನಿಯಿಂದ ಹಿಡಿದು ರಸ್ತೆಯವರೆಗೆ ಜನ ಸಾಮಾನ್ಯನಿಗೆ ಬೇಕಾದ ಸವಲತ್ತು ಒದಗಿಸುವಲ್ಲಿ ಮೊದಲ ಐದು ವರ್ಷದಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್ ಮುಖಂಡ, ಚುನಾವಣಾ ಉಸ್ತುವಾರಿ ದೇವಿ ಪ್ರಸಾದ್ ಶೆಟ್ಟಿ ಹೇಳಿದರು. ಸುರತ್ಕಲ್ ಬ್ಲಾಕ್ ಸಮಿತಿಯ ಕಾರ್ಪೊರೇಟರ್‌ಗಳು, ಪ್ರಮುಖ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. […]

ವಸಂತ ಬಂಗೇರಾ ಅವರಿಗೆ ವಿವಿಧ ರೈತ ಸಂಘಟನೆಗಳು ಬೆಂಬಲ ನೀಡಲು ನಿರ್ಧಾರ..!

Saturday, May 5th, 2018
vasanth-bangera

ಮಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ. ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನೇರಾ ಹಣಾಹಣಿ ನಡೆಯುತ್ತಿದ್ದು, ಉಭಯ ಪಕ್ಷಗಳ ಅಭ್ಯರ್ಥಿಗಳು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಮತದಾರರನ್ನು ಓಲೈಸಲು ಮುಂದಾಗಿದ್ದಾರೆ. ಇದೇ ವೇಳೆ, ಹಾಲಿ ಶಾಸಕ ವಸಂತ ಬಂಗೇರಾ ಅವರಿಗೆ ಉತ್ತಮ ಜನಬೆಂಬಲ ದೊರೆಯುತ್ತಿದೆ. ಮಾಜಿ ಸಚಿವ ಗಂಗಾಧರ ಗೌಡ ಸೇರ್ಪಡೆಯಾಗಿದ್ದು, ಕಾಂಗ್ರೆಸ್ ಪಾಳಯದಲ್ಲಿ ಉತ್ಸಾಹದ ಅಲೆ ಎಬ್ಬಿಸಿದೆ. ಇನ್ನೊಂದೆಡೆ, ಮಹೇಶ್ […]

ಮಂಗಳೂರಿನಲ್ಲಿ ಬಿಜೆಪಿ ಪರ ಪ್ರಚಾರಕ್ಕೆ ಆಗಮಿಸುವ ನಮೋ ಪಕ್ಷ ಕಾರ್ಯಕರ್ತರಲ್ಲಿ ಹೊಸ ಹುರುಪು

Saturday, May 5th, 2018
narendra-modi

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಆಗಮಿಸಲಿದ್ದಾರೆ. ಮೇ 1ರಂದು ಉಡುಪಿಗೆ ಆಗಮಿಸಿದ್ದ ಮೋದಿ ಕಮಲ ಪಾಳಯದಲ್ಲಿ ಸಂಚಲನ ಉಂಟು ಮಾಡಿದ್ದರು. ಇದೀಗ ಮಂಗಳೂರಿನಲ್ಲಿ ಬಿಜೆಪಿ ಪರ ಪ್ರಚಾರಕ್ಕೆ ಆಗಮಿಸುವ ನಮೋ ಪಕ್ಷ ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಲಿದ್ದಾರೆ. ಮಂಗಳೂರಿನ ಕೇಂದ್ರ(ನೆಹರೂ) ಮೈದಾನದಲ್ಲಿ ಸಂಜೆ ಆರು ಗಂಟೆಗೆ ಮೋದಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದು, ಕರಾವಳಿಯಲ್ಲಿ ಇದು ಅವರ ಏಕೈಕ ಕಾರ್ಯಕ್ರಮವಾಗಲಿದೆ. ಪ್ರಧಾನಿ ನರೇಂದ್ರ ಮೋದಿಯ ಸ್ವಾಗತಕ್ಕೆ ಬಿಜೆಪಿ ವತಿಯಿಂದ ಭರ್ಜರಿ ತಯಾರಿಯನ್ನು ಮಾಡಲಾಗಿದೆ. ಈಗಾಗಲೇ […]

ಮೇ 7ರಂದು ಮತದಾರರ ಚೀಟಿ ಪಡೆಯಲು ಕೊನೆಯ ದಿನ: ಸಸಿಕಾಂತ್ ಸೆಂಥಿಲ್

Saturday, May 5th, 2018
sesikanth-senthil

ಮಂಗಳೂರು: ಮತದಾರರ ಪಟ್ಟಿಯಲ್ಲಿ ಇರುವ ಮತದಾರರ (ವೋಟರ್ ಸ್ಲಿಫ್) ಚೀಟಿಯನ್ನು ಈ ಬಾರಿ ಪ್ರತಿ ಮತದಾರರ ಮನೆಗೆ ತಲುಪಿಸಲಾ ಗುವುದು ಒಂದು ವೇಳೆ ಈ ಚೀಟಿ ದೊರೆಯದೆ ಇದ್ದವರಿಗಾಗಿ ಮೇ 7ರಂದು ಪ್ರತಿ ಮತಗಟ್ಟೆಯಲ್ಲಿ ಚೀಟಿ ಪಡೆಯಲು ಅವಕಾಶ ಮಾಡಿಕೊಡಲಾಗುವುದು. ಈ ಚೀಟಿಯಲ್ಲಿ ಮತದಾರರ ಭಾವಚಿತ್ರ ಮತಗಟ್ಟೆಯ ವಿವರ ಒಳಗೊಂಡಿರುತ್ತದೆ. ಈ ಚೀಟಿ ಇಲ್ಲದಿದ್ದರೂ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿದ್ದರೆ ಮತಚಲಾಯಿಸಲು ಯಾವೂದೇ ಸಮಸ್ಯೆಯಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ. ದ.ಕ ಜಿಲ್ಲೆಯಲ್ಲಿ ಚುನಾವಣಾ […]

ಶ್ರೀಕರ ಪ್ರಭು ಅವರಿಗೆ ಗೆಲ್ಲುವ ಸಾಧ್ಯತೆಯನ್ನುಇಮ್ಮಡಿಗೊಳಿಸಿದ ಮತದಾರ

Friday, May 4th, 2018
Srikara Prabhu

ಮಂಗಳೂರು : ಮಂಗಳೂರು ದಕ್ಷಿಣ ವಿಧಾನಸಭಾ ಪಕ್ಷೇತರ ಅಭ್ಯರ್ಥಿ ಶ್ರೀಕರ ಪ್ರಭುರವರು ಇಂದು ನಗರದ ಲೇಡಿ ಹಿಲ್, ಉರ್ವಾ ಮಾರ್ಕೆಟ್, ಉರ್ವಾ ಸ್ಟೋರ್, ಕೊಟ್ಟಾರ ಪರಿಸರದಲ್ಲಿ ತಮ್ಮ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ನಾಗರೀಕ ಬಂದುಗಳಲ್ಲಿ ಪಾದಯಾತ್ರೆಯ ಮೂಲಕ ತಮ್ಮ ಚುನಾವಣಾ ಚಿಹ್ನೆ ‘ಆಟೋ ರಿಕ್ಷಾ’ ಮಾದರಿ ಪ್ರದರ್ಶಿಸಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಮತದಾರ ಬಾಂದವರಿಂದ ಶ್ರೀಕರ ಪ್ರಭು ಅವರ ಬಗ್ಗೆ ಬಾರಿ ಒಲವು ವ್ಯಕ್ತವಾಗಿದ್ದು, ಇದು ಅವರು ಮುಂಬರುವ ಚುನಾವಣೆಯನ್ನು ಗೆಲ್ಲುವ ಸಾಧ್ಯತೆಯನ್ನು ಇಮ್ಮಡಿಗೊಳಿಸಿದೆ. ಈ […]

ಗೆಲ್ಲಲೇ ಬೇಕೆಂಬ ಹಠದಿಂದಾಗಿ ಮೊಯ್ದೀನ್ ಬಾವಾ ನೀಚ ರಾಜಕಾರಣಕ್ಕೆ ಇಳಿದಿದ್ದಾರೆ: ಮುನೀರ್ ಕಾಟಿಪಳ್ಳ

Friday, May 4th, 2018
mohiuddin-bava

ಮಂಗಳೂರು: ಹೇಗಾದರೂ ಗೆಲ್ಲಲೇ ಬೇಕೆಂಬ ಹಠದೊಂದಿಗೆ ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೊಯ್ದೀನ್ ಬಾವಾ ನೀಚ ರಾಜಕಾರಣಕ್ಕೆ ಇಳಿದಿದ್ದಾರೆ ಎಂದು ಸಿಪಿಎಂ ಅಭ್ಯರ್ಥಿ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ. ಬಿಜೈ ಮದರಸಾದ ಅಮಾಯಕ ಮೌಲವಿ ಹತ್ಯೆಯ ಪ್ರಧಾನ ಆರೋಪಿಗಳಾಗಿದ್ದ ಹಿಂದೂತ್ವ ಸಂಘಟನೆಗಳ ಜೊತೆಗೆ ಗುರುತಿಸಿಕೊಂಡಿದ್ದ ಟಿಕ್ಕಿ ರವಿ, ಪದ್ದು ಮೊದಲಾದವರನ್ನು ಮಂಗಳೂರು ಉತ್ತರದ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮೊಯ್ದೀನ್ ಬಾವಾ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಪಕ್ಷದ ಧ್ವಜ ನೀಡಿ, ಶಾಲು ಹೊದಿಸಿ ವೇದಿಕೆಯ ಮೇಲೆ ಬಿಗಿದಪ್ಪಿ ಇನ್ನಿಲ್ಲದ […]