ಕೂಲಿ ಕಾರ್ಮಿಕನ ಮೃತ ದೇಹ ತಳಂಗರೆಯ ಬಾವಿಯಲ್ಲಿ ಪತ್ತೆ

Tuesday, December 5th, 2023
ಕೂಲಿ ಕಾರ್ಮಿಕನ ಮೃತ ದೇಹ ತಳಂಗರೆಯ ಬಾವಿಯಲ್ಲಿ ಪತ್ತೆ

ಕಾಸರಗೋಡು : ತಮಿಳುನಾಡು ಮೂಲದ ಕೂಲಿ ಕಾರ್ಮಿಕನ ಮೃತ ದೇಹ ಮಂಗಳವಾರ ನಗರದ ತಳಂಗರೆಯ ಬಾವಿಯೊಂದರಲ್ಲಿ ಪತ್ತೆಯಾಗಿದೆ. ತಮಿಳುನಾಡು ತಿರುವಣ್ಣ ಮಲೈ ನ ಭೂಮಿನಾಥ್ (27) ಮೃತ ಪಟ್ಟ ಕಾರ್ಮಿಕ. ಭೂಮಿನಾಥ್ ಕಾಸರಗೋಡು ಪರಿಸರದಲ್ಲಿ ಕೂಲಿ ಕೆಲಸ ನಿರ್ವ ಹಿಸುತ್ತಿದ್ದರು. ಇವರು ವಾಸವಿದ್ದ ವಸತಿ ಗೃಹ ಸಮೀಪದ ಬಾವಿಯಲ್ಲಿ ಮಂಗಳವಾರ ಬೆಳಿಗ್ಗೆ ಮೃತ ದೇಹ ಪತ್ತೆಯಾಗಿದೆ. ಅಗ್ನಿ ಶಾಮಕ ದಳದ ಸಿಬಂದಿ ಗಳು ಮೃತ ದೇಹವನ್ನು ಮೇಲಕ್ಕೆ ತ್ತಿದ್ದು, ಬಳಿಕ ಮೃತ ದೇಹವನ್ನು ಮಹಜರು ನಡೆಸಿ, ಕಾಸರಗೋಡು […]

ಮನೆಯ ಆವರಣದೊಳಗೆ ನುಗ್ಗಿ ಎರಡು ಕರುಗಳನ್ನು ಕೊಂದು ಹಾಕಿದ ಚಿರತೆ

Tuesday, December 5th, 2023
Belthangady-Chita

ಬೆಳ್ತಂಗಡಿ : ಮನೆಯ ಆವರಣದೊಳಗೆ ನುಗ್ಗಿದ ಚಿರತೆಯೊಂದು ಕಟ್ಟಿ ಹಾಕಿದ ಎರಡು ಕರುಗಳನ್ನು ಕೊಂದು ಹಾಕಿದ ಘಟನೆ ಬೆಳ್ತಂಗಡಿಯ ಮುಂಡೂರು ಬಳಿ ಭಾನುವಾರ ರಾತ್ರಿ ನಡೆದಿದೆ. ಮುಂಡೂರು ಗ್ರಾಮದ ಕೇರಿಯಾರ್ ಎಂಬಲ್ಲಿ ಈ ಘಟನೆ ಸಂಭವಿಸಿದ್ದು, ಗುರುವಪ್ಪ ಸಾಲ್ಯಾನ್ ಅವರಿಗೆ ಸೇರಿದ ಕರುಗಳನ್ನು ಚಿರತೆ ಕೊಂದು ತಿಂದಿದೆ. ಮನೆ ಬಳಿ ಕಟ್ಟಿ ಹಾಕಿದ್ದ ಕರುಗಳ ಮೇಲೆ ಭಾನುವಾರ ರಾತ್ರಿ ದಾಳಿ ಮಾಡಿದ ಚಿರತೆ ತೋಟಕ್ಕೆ ಎಳೆದೊಯ್ದು ತಿಂದು ಹಾಕಿದೆ. ಕಳೆದ ಒಂದೂವರೆ ತಿಂಗಳ ಹಿಂದೆಯಷ್ಟೇ ಈ ಭಾಗದಲ್ಲಿ […]

ಆದಿಚುಂಚನಗಿರಿ ಕಾಲೇಜಿನ ಕಟ್ಟಡದ ಮೇಲಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ

Tuesday, December 5th, 2023
Meghashree

ಶಿವಮೊಗ್ಗ: ಇಲ್ಲಿನ ಆದಿಚುಂಚನಗಿರಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯೊವಳು ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೇಘಾಶ್ರೀ (18) ಮೃತ ವಿದ್ಯಾರ್ಥಿನಿ. ಈಕೆ ಶಿವಮೊಗ್ಗದ ಶರಾವತಿ ನಗರದಲ್ಲಿರುವ ಆದಿ ಚುಂಚನಗಿರಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಮೇಘಾಶ್ರೀ ಹೋಂ ಸಿಕ್‍ಗೆ ಒಳಗಾಗಿದ್ದಳು. ಇದೇ ಕಾರಣದಿಂದ ಈಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಇತ್ತ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೇಘಾ ಶ್ರೀ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ದೊಡ್ಡಪೇಟೆ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಮಂಗಳೂರು ನಗರದಲ್ಲಿ ದೈತ್ಯ ಗಾತ್ರದ ಕಾಡುಕೋಣ ಪ್ರತ್ಯಕ್ಷ, ಜನರಿಗೆ ಆತಂಕ

Monday, December 4th, 2023
Wild-bore

ಮಂಗಳೂರು : ಕಾಡುಕೋಣವೊಂದು ಕದ್ರಿ ಪ್ರದೇಶದಲ್ಲಿ ಕಾಡುಕೋಣ ಪ್ರತ್ಯಕ್ಷವಾಗಿದ್ದು, ಅದು ಸಂಚರಿಸುವ ಈ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕದ್ರಿ, ಕೈಬಟ್ಟಲು, ಕರಾವಳಿ ಲೇನ್ ಮತ್ತು ಸುತ್ತ ಮುತ್ತ ಪ್ರದೇಶದಲ್ಲಿ ದೈತ್ಯಗಾತ್ರದ ಕಾಡುಕೊಣ ರಾಜರೋಷವಾಗಿ ಹಗಲು, ರಾತ್ರಿ ಎನ್ನದೇ ಸುತ್ತಾಡುತ್ತಿದ್ದು ಜನ ಆತಂಕಕ್ಕೆ ಒಳಗಾಗಿದ್ದಾರೆ. ಈ ಕಾಡು ಕೋಣವು ಕೆಲ ಮನೆಗಳ ಕಂಪೌಂಡ್ ಗಳನ್ನು ಹಾರಿ, ಕಬ್ಬಿಣದ ತಡೆ ಬೇಲಿಗಳಮ್ಮು ಮುರಿದು ಹಾಕಿದೆ ಎಂದು ತಿಳಿದು ಬಂದಿದೆ. ರಾತ್ರಿ ವೇಳೆಯೇ ಕಾಡು ಕೋಣಗಳು ಸಂಚಾರ ಮಾಡುತ್ತಿವೆ ಎಂದು […]

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಲು ಆರ್‌ಎಸ್‌ಎಸ್ ಕಾರ್ಯಕರ್ತ ಗಣೇಶ್ ಶೆಣೈ ಮುಲ್ಕಿ ಪ್ರಧಾನಿಗೆ ಮನವಿ

Monday, December 4th, 2023
Ganesh-Shenoy

ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ಕೋರಿ ಆರ್‌ಎಸ್‌ಎಸ್ ಹಿರಿಯ ಕಾರ್ಯಕರ್ತ, ಬಿಎಂಎಸ್ ಮುಖಂಡ ಗಣೇಶ್ ಶೆಣೈ ಮುಲ್ಕಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಪತ್ರದ ಪ್ರತಿಯ ಜತೆ ಈ ಮಾಹಿತಿ ಹಂಚಿಕೊಂಡ ಗಣೇಶ್ ಶೆಣೈ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ವಿದ್ಯುತ್ ಬಿಲ್ ಶೇ.55 ಅಧಿಕಗೊಂಡಿದೆ. ಭೂಮಿ ರಿಜಿಸ್ಟ್ರೇಷನ್ ದರ, […]

ವಿಭಿನ್ನ ಕಥಾಹಂದರದ “ಕ್ಲಾಂತ” ಸಿನಿಮಾ ಸದ್ಯದಲ್ಲೇ ಬಿಡುಗಡೆ

Monday, December 4th, 2023
ವಿಭಿನ್ನ ಕಥಾಹಂದರದ "ಕ್ಲಾಂತ" ಸಿನಿಮಾ ಸದ್ಯದಲ್ಲೇ ಬಿಡುಗಡೆ

ಮಂಗಳೂರು: ತುಳುನಾಡಿನವರೇ ಸೇರಿ ನಿರ್ಮಾಣ ಮಾಡಿರೋ ಹೊಸ ಕನ್ನಡ ಚಲನಚಿತ್ರ “ಕ್ಲಾಂತ” ಸಿನಿಮಾ ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ಉದಯ ಅಮ್ಮಣ್ಣಾಯ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. “ಅನುಗ್ರಹ ಪವರ್ ಮೀಡಿಯಾ ಎಂಬ ಸಂಸ್ಥೆಯಡಿ ಮೊದಲ ಬಾರಿಗೆ ಈ ಸಿನಿಮಾ ನಿರ್ಮಾಣ ಮಾಡಿದ್ದೇನೆ. ಈ ಹಿಂದೆ ತೆರೆಕಂಡಿದ್ದ “ದಗಲ್ ಬಾಜಿಲು” ತುಳು ಚಿತ್ರದ ಜೋಡಿ ಆದ ನಿರ್ದೇಶಕ ವೈಭವ್ ಪ್ರಶಾಂತ್ ಹಾಗೂ ನಾಯಕ ವಿಗ್ನೇಶ್ ಮತ್ತೊಮ್ಮೆ ಜೊತೆಯಾಗಿ ಕ್ಲಾಂತ ಎಂಬ ಕನ್ನಡ ಚಿತ್ರದ ಮೂಲಕ ಮತ್ತೊಂದು ಮೈಲಿಗಲ್ಲು […]

ಅರಿಯಡ್ಕ ಗ್ರಾಮ ಪಂಚಾಯತ್ ಸದಸ್ಯ ಆತ್ಮಹತ್ಯೆ

Monday, December 4th, 2023
shankara

ಪುತ್ತೂರು : ಅರಿಯಡ್ಕ ಗ್ರಾಮ ಪಂಚಾಯತ್ ಸದಸ್ಯರೋರ್ವರು ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಮಾಡನ್ನೂರು ಗ್ರಾಮದ ಕಾವು ಬಂಗ್ಲೆ ಗುಡ್ಡೆ ನಿವಾಸಿ, ಅರಿಯಡ್ಕ ಗ್ರಾಮ ಪಂಚಾಯತಿನ ಕಾಂಗ್ರೆಸ್ ಬೆಂಬಲಿತ ಸದಸ್ಯ ಶಂಕರ ಮಾಡನ್ನೂರು ಆತ್ಮಹತ್ಯೆ ಗೆ ಶರಣಾದವರು. ಶಂಕರ್ 5 ವರ್ಷಗಳ ಹಿಂದೆ ಸಾಲ ಮಾಡಿ ಜಾಗ ಖರೀದಿ ಮಾಡಿದ್ದು, ಸಾಲ ಮರುಪಾವತಿ ಮಾಡಲು ಸಾಧ್ಯವಾಗದೆ ಜಿಗುಪ್ಸೆ ಹೊಂದಿದ್ದರು ಎನ್ನಲಾಗಿದೆ. ಡಿ.3ರಂದು ಮನೆಯವರು ಮಲಗಿದ್ದಾಗ ಮನೆಯ ಒಳಗಡೆಯೇ ಆತ್ಮಹತ್ಯೆ ಮಾಡಿಕೊಂಡಿದ್ದು, ಮರುದಿನ ಬೆಳಿಗ್ಗೆ ಆತ್ಮಹತ್ಯೆ […]

ದೊಣ್ಣೆ, ಲಾಠಿ, ಪೈಪ್‌ನಿಂದ ವಕೀಲನ ಮೇಲೆ ಹಲ್ಲೆ, ಆರು ಪೊಲೀಸರ ಅಮಾನತು

Saturday, December 2nd, 2023
advocate-preetham

ಚಿಕ್ಕಮಗಳೂರು : ಯುವ ವಕೀಲನ ಮೇಲೆ ದೊಣ್ಣೆ, ಲಾಠಿ, ಪೈಪ್‌ನಿಂದ ಹಲ್ಲೆ ನಡೆಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದ್ದು, ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಪಿಎಸ್‌ಐ ಮಹೇಶ್ ಪೂಜಾರಿ ಸೇರಿ ಆರು ಪೊಲೀಸರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ಹಲ್ಲೆಗೊಳಗಾದವರನ್ನು ಪ್ರೀತಂ ಎಂದು ಗುರುತಿಸಲಾಗಿದ್ದು, ಇವರು ಗುರುವಾರ ರಾತ್ರಿ ಹೆಲ್ಮೆಟ್‌ ಇಲ್ಲದೆ ಮಾರ್ಕೇಟ್ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಠಾಣೆಯ ಎದುರು ಅಡ್ಡಗಟ್ಟಿದ ಪೊಲೀಸರು, ಅವರ ಬೈಕ್‌ನಿಂದ ಕೀ ಕಸಿದುಕೊಂಡಿದ್ದಾರೆ. ಹೆಲ್ಮೆಟ್ ಹಾಕದಿರುವುದಕ್ಕೆ ದಂಡ ಕಟ್ಟುತ್ತೇನೆ, ಕೀ ಕಸಿದುಕೊಳ್ಳಲು ನಿಮಗೆ […]

ನಾಲ್ಕೂವರೆ ತಿಂಗಳ ಮಗುವನ್ನು ಸಾಯಿಸಿ, ತಾನು ಆತ್ಮಹತ್ಯೆ ಮಾಡಿಕೊಂಡ ತಾಯಿ

Saturday, December 2nd, 2023
Baby-death

ಮಂಗಳೂರು : ನಗರದ ಗುಜ್ಜರಕೆರೆ ಲೇಕ್ ವ್ಯೂ ಅಪಾರ್ಟ್ಮೆಂಟ್ ನ ಫ್ಲಾಟ್ ನಂಬರ್ 507 ರಲ್ಲಿ ತಾಯಿಯೊಬ್ಬಳು ನಾಲ್ಕೂವರೆ ತಿಂಗಳ ಮಗುವನ್ನು ಉಸಿರುಗಟ್ಟಿಸಿ ಸಾಯಿಸಿ, ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಸಂಜೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಖತಿಜಾತುಲ್ ಕುಬ್ರ ರವರ ಮಗಳು ಫಾತಿಮಾ ರುಕಿಯಾ (23) ಎಂದು ಗುರುತಿಸಲಾಗಿದೆ. ಫಾತಿಮಾ ರುಕಿಯಾ ಸುಮಾರು ಒಂದೂವರೆ ವರ್ಷದ ಹಿಂದೆ ಮುಹಮ್ಮದ್ ಉನೈಸ್ ಎಂಬವರನ್ನು ವಿವಾಹವಾಗಿದ್ದು ನಾಲ್ಕು ತಿಂಗಳ ಹಿಂದೆ ಗಂಡು ಮಗುವಾಗಿದ್ದು ಬಳಿಕ ತನ್ನ ತಾಯಿ ಬಳಿ […]

ತಲಪಾಡಿ ಟೋಲ್‌ಗೇಟ್‌ ನಲ್ಲಿ ಹಣ ಪಡೆದು ಕಾರು ಚಾಲಕರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ, ದೂರು ದಾಖಲು

Thursday, November 30th, 2023
Tollgate

ಮಂಗಳೂರು : ಕಾರು ಚಾಲಕರೋರ್ವರನ್ನು ತಲಪಾಡಿ ಟೋಲ್‌ಗೇಟ್‌ ಸಿಬ್ಬಂದಿ ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಯತ್ನಿಸಿದ್ದಾನೆ ಎಂದು ಆರೋಪಿಸಿ ಕಾರು ಚಾಲಕ ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ. ಅಬ್ದುಲ್ ಕರೀಂ ಎಂಬವರ ಕಾರಿನ ಫಾಸ್ಟ್ ಟ್ಯಾಗ್ ನಿಂದ ಹಣ ಪಾವತಿಯಾದರೂ ಸಿಬ್ಬಂದಿ ಗೇಟ್ ತೆರೆಯದ ಕಾರಣ ಪ್ರಶ್ನಿಸಿದ್ದಾರೆ. ಈ ಸಂದರ್ಭ ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ಬೈದಿದ್ದು, ಇದನ್ನು ಪ್ರಶ್ನಿಸಿದ ಕರೀಂ ಅವರ ಮೇಲೆ ಕೋಪಗೊಂಡ ಸಿಬ್ಬಂದಿ, ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆಂದು ತಿಳಿದು ಬಂದಿದೆ. ಈ […]