ರೂಪದರ್ಶಿಯ ನಗ್ನಸತ್ಯ ಬಯಲಿಗೆ ಬಿತ್ತು

Monday, July 1st, 2013
Helen Joyce Gabriel Flanagan

ಇಂಗ್ಲೀಷ್ ರೂಪದರ್ಶಿ ಹೆಲೆನ್ ಜಾಯ್ಸ್ ಗೇಬ್ರಿಯಲ್ ಫ್ಲಾನಗಾನ್ ಎಂಬ 22 ರ ಹರೆಯದ ಚೆಲುವೆ ಸಕತ್ ಸುದ್ದಿಯಲ್ಲಿದ್ದಾಳೆ. ಸಾಮಾಜಿಕ ತಾಣ ಟ್ವಿಟ್ಟರ್ ನಲ್ಲಿ ತನ್ನ ಎದೆಸೀಳಿನ ಮೇಲೆ ಯಾರೋ ಗೀಚಿದ್ದಾರೆ ಎಂದು ಫೋಟೊ ಹಾಕಿದ್ದಾಳೆ. ಆಗಾಗ ತುಂಡುಡುಗೆ ಪ್ರದರ್ಶನ ನೀಡುತ್ತಿದ್ದ ಈಕೆ,  ಈ ರೀತಿ ಆಗಿದ್ದು ಬ್ಯೂಟಿ ಸಲೂನ್ ಗೆ ಹೋಗಿದ್ದಾಗ ಎಂದು ಎಂದು ದಿ ಸನ್ ವರದಿ ಮಾಡಿದೆ. ಐಟಿವಿಯ ನಿರೂಪಕಿ, ಲೇಖಕಿ, ರೋಸಿ ವೆಬ್ ಸ್ಟರ್ ಪಾತ್ರಧಾರಿ ಹೆಲೆನ್ ಇತ್ತೀಚೆಗೆ ತುಂಬಾ ಕಂಗಾಲಾಗಿದ್ದಳು. ತನ್ನ […]

ವೈದ್ಯಕೀಯ ವಿದ್ಯಾರ್ಥಿನಿ ಅತ್ಯಾಚಾರ ಮೂರನೇ ಆರೋಪಿ ಸೆರೆ

Thursday, June 27th, 2013
Manipal Rapist

ಉಡುಪಿ: ಮಣಿಪಾಲದಲ್ಲಿ ಅತ್ಯಾಚಾರಕ್ಕೆ ಒಳಗಾಗಿದ್ದ ಕೇರಳ ಮೂಲದ ವೈದ್ಯಕೀಯ ವಿದ್ಯಾರ್ಥಿನಿಯ ಪ್ರಕರಣಕ್ಕೆ ಸಂಭಂದಿಸಿದಂತೆ  ಪೊಲೀಸರು ಮೂರನೇ ಆರೋಪಿಯಾದ ಆನಂದನನ್ನು ಇಂದು ಸಂಜೆ ಪರ್ಕಲದ ಬಡಗಬೆಟ್ಟುವಿನಿಂದ ಬಂಧಿಸಿದ್ದಾರೆ, ಪ್ರಮುಖ ಆರೋಪಿ ಆನಂದ ತನ್ನ ಸ್ನೆಹಿತರ ಬಂಧನದ ಸುದ್ದಿ ತಿಳಿದು ತಾನು ಬಂಧನದಿಂದ ತಪ್ಪಿಸಲು ಮನೆಯ ಸಮೀಪದ ಕಾಡಿನಲ್ಲಿ ಮರವೊಂದಕ್ಕೆ ನೇಣು ಹಾಕಲು ಪ್ರಯತ್ನಿಸುವಾಗ ಸ್ಥಳಿಯರು ಗಮನಿಸಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಮಣಿಪಾಲ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಿ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಿ […]

ಮಣಿಪಾಲದಲ್ಲಿ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ಖಂಡಿಸಿ ಅಭಾವಿಪದಿಂದ ಬೃಹತ್ ಪ್ರತಿಭಟನೆ

Sunday, June 23rd, 2013
abvp students protest

ಮಂಗಳೂರು : ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವನ್ನು ಖಂಡಿಸಿ ಮಂಗಳೂರು ಅಭಾವಿಪವು ಬೆಸೆಂಟ್ ಕಾಲೇಜು ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನಾ ಸಭೆಯನ್ನು ನಡೆಸಿತು. ನೂರಾರು ವಿದ್ಯಾರ್ಥಿ/ ವಿದ್ಯಾರ್ಥಿನಿಯರು  ಪ್ರತಿಭಟನೆಯಲ್ಲಿ ಭಾಗವಹಿಸಿ ಅತ್ಯಾಚಾರ ಪ್ರಕರಣದ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಂಗಳೂರು ವಿ.ವಿ. ಸಿಂಡಿಕೇಟ್ ಸದಸ್ಯ, ಅಭಾವಿಪದ ಮಾಜಿ ರಾಜ್ಯ ಕಾರ್ಯದರ್ಶಿ ರವಿಚಂದ್ರ ಪಿ.ಎಂ. ಇದೊಂದು ಹೇಯ ಕೃತ್ಯವಾಗಿದ್ದು, ಸರಕಾರ 24 ತಾಸೊಳಗೆ ಆರೋಪಿಗಳನ್ನು […]

ಪಿವಿಎಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಮಧುಸೂದನ ಡಿ.ಕುಶೆ ನಿಧನ

Thursday, May 23rd, 2013
Madhusudan Kushe

ಮಂಗಳೂರು : ನೂರು ವರ್ಷ ಇತಿಹಾಸವುಳ್ಳ ಪ್ರತಿಷ್ಠಿತ ಪಿವಿಎಸ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಮಧುಸೂದನ ಡಿ.ಕುಶೆ (78) ಅವರು ಬುಧವಾರ ಆರೋಗ್ಯ ಸಮಸ್ಯೆಯಿಂದಾಗಿ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಕುಶೆ ಅವರ ತಂದೆ ದಿ. ಪುತ್ತು ವೈಕುಂಠ ಶೇಟ್ ಅವರು ಒಂದು ಶತಮಾನದ ಹಿಂದೆ ಸ್ಥಾಪಿಸಿದ ಪಿ.ವಿ.ಎಸ್ ಬೀಡಿ ಸಂಸ್ಥೆಯ ಆಡಳಿತ ಚುಕ್ಕಾಣಿಯನ್ನು ತಮ್ಮ 21 ನೇ ವಯಸ್ಸಿನಲ್ಲಿ ವಹಿಸಿಕೊಂಡ ಮಧುಸೂದನ ಕುಶೆ ಸಂಸ್ಥೆ ಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿ ಜರ್ಮನಿ, ಆಸ್ಟ್ರೇಲಿಯಾ ಮೊದಲಾದ ದೇಶಗಳಿಗೆ ಬೀಡಿಯನ್ನು […]

ಪಡುಬಿದ್ರೆ : ರಾಷ್ಟ್ರೀಯ ಹೆದ್ದಾರಿ ಬೀಡಿನಕೆರೆ ಬಳಿ ಅಪಘಾತ ಮೂವರ ದುರ್ಮರಣ

Wednesday, May 22nd, 2013
car truck accident padubidri

ಪಡುಬಿದ್ರೆ : ಮಂಗಳವಾರ ಮದ್ಯಾಹ್ನ 2;30 ರ ಸುಮಾರಿಗೆ ಪಡುಬಿದ್ರೆ ಮತ್ತು ಕಾಪು ನಡುವಿನ ರಾಷ್ಟ್ರೀಯ ಹೆದ್ದಾರಿ  ಬೀಡಿನಕೆರೆ ಬಳಿ ಕಾರು ಮತ್ತು ಟ್ಯಾಂಕರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದಂಪತಿ ಸೇರಿದಂತೆ ಒಟ್ಟು ಮೂವರು ಮೃತಪಟ್ಟಿದ್ದಾರೆ. ಮೃತರನ್ನು ಮಜೂರು ಗ್ರಾಮ ಪಂಚಾಯತ್ ಕಾರ್ಯದರ್ಶಿ, ನಿಟ್ಟೆ ನಿವಾಸಿ ಅರುಣಾ ಸತೀಶ್ ರೈ(55), ಆಕೆಯ ಪತಿ ಸತೀಶ್ ರೈ(57) ಹಾಗು ಸತೀಶ ರೈ ರ ಗೆಳೆಯ, ಕಾರು ಚಾಲಕ ಸುರತ್ಕಲ್ ಕೃಷ್ಣಾಪುರ 7  ನೇ ಬ್ಲಾಕ್ ನಿವಾಸಿ […]

ಕಾಪು : ರಸ್ತೆ ಅಪಘಾತ ದಂಪತಿ ಸಾವು

Wednesday, May 22nd, 2013
bike bus accident Kaup

ಕಾಪು : ಕೆಎಸ್‌ಆರ್‌ಟಿಸಿ ವೋಲ್ವೋ ಬಸ್‌ನ ಚಾಲಕ ಟ್ಯಾಂಕರೊಂದನ್ನು ಹಿಂದಿಕ್ಕುವ ಭರದಲ್ಲಿ ಕೈನೆಟಿಕ್‌ ಹೋಂಡಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ದಂಪತಿ ಮೃತಪಟ್ಟ ಘಟನೆ ಮಂಗಳವಾರ ರಾಷ್ಟ್ರೀಯ ಹೆದ್ದಾರಿ 66ರ ಕಾಪು ಹಳೇ ಮಾರಿಗುಡಿ ದೇವಸ್ಥಾನದ ಮುಂಭಾಗದ ದ್ವಾರದ ಬಳಿ ನಡೆದಿದೆ. ಮೃತರು ಕಾಪು ಪಡು ಗ್ರಾಮದ ತೆಂಕುಕರೆ ಹೊಸಮನೆಯ ಬಾಲಕೃಷ್ಣ ಶೆಟ್ಟಿ(50), ಮತ್ತು ಅವರ ಪತ್ನಿ ಮಮತಾ ಶೆಟ್ಟಿ (40).  ಮೃತ ಬಾಲಕೃಷ್ಣ   ಕುರ್ಕಾಲು -ಸುಭಾಶ್ ನಗರದಲ್ಲಿ ಜೀನಸು ವ್ಯಾಪಾರ ನಡೆಸುತ್ತಿದ್ದು, ಮಂಗಳವಾರ ದಂಪತಿ ಕುರ್ಕಾಲುವಿನಿಂದ ಕಾಪು […]

ರಾಜ್ಯ ಹೆದ್ದಾರಿ ಆಲಂಕಾರು ಬಳಿ ಅಪಘಾತ, ಬೈಕ್ ಸಹಸವಾರನ ಸಾವು, ಸವಾರ ಗಂಭೀರ

Tuesday, May 21st, 2013
Alankaru bike accident

ಪುತ್ತೂರು : ಸೋಮವಾರ ಮಧ್ಯಾಹ್ನ ಉಪ್ಪಿನಂಗಡಿ- ಕಡಬ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಆಲಂಕಾರು ಸಮೀಪ ಮಾಯಿಲ್ಗ ಎಂಬಲ್ಲಿ ಟಿಪ್ಪರ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸಹಸವಾರ ಮೃತಪಟ್ಟಿದ್ದು, ಬೈಕ್ ಸವಾರ ಗಂಬೀರವಾಗಿ ಗಾಯಗೊಂಡಿದ್ದಾರೆ. ಆಲಂಕಾರು ಗ್ರಾಮದ ಕೇಪುಳು ದಿ.ಕೃಷ್ಣಪ್ಪ ಪೂಜಾರಿ ಅವರ ಪುತ್ರ ದಿವಾಕರ (30) ಸಾವಿಗೀಡಾದ ದುರ್ದೈವಿಯಾಗಿದ್ದಾರೆ. ದಿವಾಕರ ಮತ್ತು ಅವರ ಸಹೋದರ ದಿನೇಶ  ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ ನಿಮಿತ್ತ ಆಲಂಕಾರಿನಿಂದ ಕುಂತೂರು ಕಡೆ ಹೊರಟ್ಟಿದ್ದು ಬೈಕ್ ಮಾಯಿಲ್ಗ ಸಮೀಪದ ತಿರುವುನಲ್ಲಿಗೆ ತಲುಪುತ್ತಿದ್ದಂತೆ ಎದುರಿನಿಂದ […]

ನಿಡ್ಡೋಡಿಗೆ ವಿವಿಧ ಇಲಾಖೆಗಳ ಅಧಿಕಾರಿಗಳ ಭೇಟಿ, ಗ್ರಾಮಸ್ಥರ ವಿರೋಧ

Friday, May 17th, 2013
Niddodi power project

ಮೂಡುಬಿದಿರೆ : ಯುಪಿಸಿಎಲ್‌ಗಿಂತ ಮೂರೂವರೆ ಪಟ್ಟು ದೊಡ್ಡದಾದ ನಿಡ್ಡೋಡಿಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಉಷ್ಣವಿದ್ಯುತ್‌ ಸ್ಥಾವರ ಸ್ಥಾಪನೆಗೆ ಸಂಬಂಧಪಟ್ಟಂತೆ  ವಿವಿಧ ಇಲಾಖೆಗಳ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಆಗಮಿಸಿದ್ದರು. ವಿಷಯ ತಿಳಿದ ನಿಡ್ಡೋಡಿ ಪ್ರದೇಶದ ಸುತ್ತಮುತ್ತಲಿನ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಘಟನೆ ಗುರುವಾರ ನಡೆಯಿತು. ಗುರುವಾರ ಸುಮಾರು 11ಗಂಟೆಗೆ ಸೆಂಟ್ರಲ್‌ ಎಲೆಕ್ಟ್ರಿಕಲ್‌ ಅಥಾರಿಟಿಯ ಅಧಿಕಾರಿ ಎಂ.ಎಸ್‌. ಪುರಿ ಅವರ ನೇತೃತ್ವದಲ್ಲಿ  ಆಗಮಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನು ಗ್ರಾಮಸ್ಥರಿಗೆ ನೀಡಿರಲಿಲ್ಲ. ಆದರೆ ಗ್ರಾಮ ಕರಣಿಕರು ಊರಲ್ಲಿ […]

ಬೆಳ್ತಂಗಡಿ : ಅಂತಾರಾಜ್ಯ ಕಳ್ಳರ ಬಂಧನ

Tuesday, April 23rd, 2013
Inter state thieves

ಬೆಳ್ತಂಗಡಿ : ಸೋಮವಾರ ಉಜಿರೆಯ ಚೆಕ್ ಪೋಸ್ಟ್ ಬಳಿ ಬೆಳ್ತಂಗಡಿ ಪೊಲೀಸರು ಮೂವರು ಅಂತಾರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ. ಬೆಂಗಳೂರಿನ ಕಮಲಾನಗರದ ಗೋಪಿ ಯಾನೆ ಗೋಪಿನಾಥ್(29), ಬೆಂಗಳೂರು ಕುರುಬರ ಹಳ್ಳಿಯ ಸೂರಿ ಯಾನೆ ಸುರೇಂದ್ರ(29), ಹಾಗೂ ಚಿಕ್ಕಬಳ್ಳಾಪುರದ ಗೌರಿಬಿದನೂರು ನಿವಾಸಿ ಮಣಿ ಯಾನೆ ಮಣಿಕಂಠ (23)ಬಂಧಿತ ಆರೋಪಿಗಳು. ಬೆಳ್ತಂಗಡಿ ಎಸ್‌ಐ ಯೋಗೀಶ್ ಕುಮಾರ್ ಮತ್ತು ತಂಡ ಉಜಿರೆಯಲ್ಲಿ ಚುನಾವಣಾ ಸಂಬಂಧಿ ಕರ್ತವ್ಯದಲ್ಲಿದ್ದ ವೇಳೆ ಬೆಂಗಳೂರು ನೋಂದಣಿಯ ಕ್ವಾಲಿಸ್ ಕಾರ್‌ನಲ್ಲಿದ್ದವರನ್ನು ತಡೆದು ನಿಲ್ಲಿಸಿ ವಿಚಾರಿಸಿದ ಸಂದರ್ಭ ಆರೋಪಿಗಳು ಕಳ್ಳತನದ ಬಗ್ಗೆ […]

ಕುಂದಾಪುರ: ಟಿಪ್ಪರ್-ಒಮ್ನಿ ಡಿಕ್ಕಿ ಓರ್ವ ಸಾವು, ಮೂರು ಮಂದಿ ಗಂಭೀರ

Tuesday, April 23rd, 2013
Accident

ಕುಂದಾಪುರ: ಒಮ್ನಿ ಹಾಗು ಟಿಪ್ಪರ್ ನಡುವೆ ಸೊಮವಾರ ಕುಂದಾಪುರದ ಹಕ್ಲಾಡಿ ಸಮೀಪ ನಡೆದ ಅಪಘಾತದಲ್ಲಿ  ಒಬ್ಬಾತ ಮೃತಪಟ್ಟಿದ್ದು, ಮೂರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಕಂದಾವರ ಉಳ್ಳೂರಿನ ರವೀಂದ್ರ ಪೂಜಾರಿ(28) ಎಂದು ಗುರುತಿಸಲಾಗಿದೆ. ವಿದೇಶದಲ್ಲಿ ಉದ್ಯೋಗಿಯಾಗಿದ್ದ ಆಲೂರಿನ ಸಸಿಹಿತ್ಲು ನಿವಾಸಿ ಶಂಕರ ಪೂಜಾರಿ(೪೧) ಎರಡು ದಿನಗಳ ಹಿಂದೆ ರಜೆ ನಿಮಿತ್ತ ಮುಂಬೈನಲ್ಲಿದ್ದ ತನ್ನ ಪತ್ನಿ ಸರೋಜ(೩೭)  ಹಾಗು ಪುತ್ರಿಯರಾದ ಸ್ವಪ್ನ(೧೧), ಸ್ವಯಂ(೫) ರೊಂದಿಗೆ ಊರಿಗೆ ಮರಳಿದ್ದರು. ಸೋಮವಾರ ಹೆಂಡತಿ ಸರೋಜಾ, ಮಕ್ಕಳಾದ ಸಪ್ನಾ(೧೧) ಮತ್ತು ಸ್ವಯಂ(೫) ಹಾಗು […]