ನಿಡ್ಡೋಡಿಗೆ ವಿವಿಧ ಇಲಾಖೆಗಳ ಅಧಿಕಾರಿಗಳ ಭೇಟಿ, ಗ್ರಾಮಸ್ಥರ ವಿರೋಧ

Friday, May 17th, 2013
Niddodi power project

ಮೂಡುಬಿದಿರೆ : ಯುಪಿಸಿಎಲ್‌ಗಿಂತ ಮೂರೂವರೆ ಪಟ್ಟು ದೊಡ್ಡದಾದ ನಿಡ್ಡೋಡಿಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಉಷ್ಣವಿದ್ಯುತ್‌ ಸ್ಥಾವರ ಸ್ಥಾಪನೆಗೆ ಸಂಬಂಧಪಟ್ಟಂತೆ  ವಿವಿಧ ಇಲಾಖೆಗಳ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಆಗಮಿಸಿದ್ದರು. ವಿಷಯ ತಿಳಿದ ನಿಡ್ಡೋಡಿ ಪ್ರದೇಶದ ಸುತ್ತಮುತ್ತಲಿನ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಘಟನೆ ಗುರುವಾರ ನಡೆಯಿತು. ಗುರುವಾರ ಸುಮಾರು 11ಗಂಟೆಗೆ ಸೆಂಟ್ರಲ್‌ ಎಲೆಕ್ಟ್ರಿಕಲ್‌ ಅಥಾರಿಟಿಯ ಅಧಿಕಾರಿ ಎಂ.ಎಸ್‌. ಪುರಿ ಅವರ ನೇತೃತ್ವದಲ್ಲಿ  ಆಗಮಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನು ಗ್ರಾಮಸ್ಥರಿಗೆ ನೀಡಿರಲಿಲ್ಲ. ಆದರೆ ಗ್ರಾಮ ಕರಣಿಕರು ಊರಲ್ಲಿ […]

ಬೆಳ್ತಂಗಡಿ : ಅಂತಾರಾಜ್ಯ ಕಳ್ಳರ ಬಂಧನ

Tuesday, April 23rd, 2013
Inter state thieves

ಬೆಳ್ತಂಗಡಿ : ಸೋಮವಾರ ಉಜಿರೆಯ ಚೆಕ್ ಪೋಸ್ಟ್ ಬಳಿ ಬೆಳ್ತಂಗಡಿ ಪೊಲೀಸರು ಮೂವರು ಅಂತಾರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ. ಬೆಂಗಳೂರಿನ ಕಮಲಾನಗರದ ಗೋಪಿ ಯಾನೆ ಗೋಪಿನಾಥ್(29), ಬೆಂಗಳೂರು ಕುರುಬರ ಹಳ್ಳಿಯ ಸೂರಿ ಯಾನೆ ಸುರೇಂದ್ರ(29), ಹಾಗೂ ಚಿಕ್ಕಬಳ್ಳಾಪುರದ ಗೌರಿಬಿದನೂರು ನಿವಾಸಿ ಮಣಿ ಯಾನೆ ಮಣಿಕಂಠ (23)ಬಂಧಿತ ಆರೋಪಿಗಳು. ಬೆಳ್ತಂಗಡಿ ಎಸ್‌ಐ ಯೋಗೀಶ್ ಕುಮಾರ್ ಮತ್ತು ತಂಡ ಉಜಿರೆಯಲ್ಲಿ ಚುನಾವಣಾ ಸಂಬಂಧಿ ಕರ್ತವ್ಯದಲ್ಲಿದ್ದ ವೇಳೆ ಬೆಂಗಳೂರು ನೋಂದಣಿಯ ಕ್ವಾಲಿಸ್ ಕಾರ್‌ನಲ್ಲಿದ್ದವರನ್ನು ತಡೆದು ನಿಲ್ಲಿಸಿ ವಿಚಾರಿಸಿದ ಸಂದರ್ಭ ಆರೋಪಿಗಳು ಕಳ್ಳತನದ ಬಗ್ಗೆ […]

ಕುಂದಾಪುರ: ಟಿಪ್ಪರ್-ಒಮ್ನಿ ಡಿಕ್ಕಿ ಓರ್ವ ಸಾವು, ಮೂರು ಮಂದಿ ಗಂಭೀರ

Tuesday, April 23rd, 2013
Accident

ಕುಂದಾಪುರ: ಒಮ್ನಿ ಹಾಗು ಟಿಪ್ಪರ್ ನಡುವೆ ಸೊಮವಾರ ಕುಂದಾಪುರದ ಹಕ್ಲಾಡಿ ಸಮೀಪ ನಡೆದ ಅಪಘಾತದಲ್ಲಿ  ಒಬ್ಬಾತ ಮೃತಪಟ್ಟಿದ್ದು, ಮೂರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಕಂದಾವರ ಉಳ್ಳೂರಿನ ರವೀಂದ್ರ ಪೂಜಾರಿ(28) ಎಂದು ಗುರುತಿಸಲಾಗಿದೆ. ವಿದೇಶದಲ್ಲಿ ಉದ್ಯೋಗಿಯಾಗಿದ್ದ ಆಲೂರಿನ ಸಸಿಹಿತ್ಲು ನಿವಾಸಿ ಶಂಕರ ಪೂಜಾರಿ(೪೧) ಎರಡು ದಿನಗಳ ಹಿಂದೆ ರಜೆ ನಿಮಿತ್ತ ಮುಂಬೈನಲ್ಲಿದ್ದ ತನ್ನ ಪತ್ನಿ ಸರೋಜ(೩೭)  ಹಾಗು ಪುತ್ರಿಯರಾದ ಸ್ವಪ್ನ(೧೧), ಸ್ವಯಂ(೫) ರೊಂದಿಗೆ ಊರಿಗೆ ಮರಳಿದ್ದರು. ಸೋಮವಾರ ಹೆಂಡತಿ ಸರೋಜಾ, ಮಕ್ಕಳಾದ ಸಪ್ನಾ(೧೧) ಮತ್ತು ಸ್ವಯಂ(೫) ಹಾಗು […]

ಎಸಿಪಿ ಟಿ. ಆರ್‌. ಜಗನ್ನಾಥ್‌ ನೇತೃತ್ವದಲ್ಲಿ ಪ್ರಶಾಂತ್‌ ಕೊಲೆ ಪ್ರಕರಣದ ನಾಲ್ವರು ಆರೋಪಿಗಳ ಬಂಧನ

Saturday, April 13th, 2013
Prashanth murder 4 killers arrested

ಮಂಗಳೂರು : ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಟಿ. ಆರ್‌. ಜಗನ್ನಾಥ್‌ ನೇತೃತ್ವದ ಪಾಂಡೇಶ್ವರ ಪೊಲೀಸ್‌ ಠಾಣೆ ಮತ್ತು ಸಿಸಿಬಿ ಘಟಕದ ಇನ್ಸ್‌ಪೆಕ್ಟರ್‌ಗಳು ನಡೆಸಿದ  ಜಂಟಿ ಕಾರ್ಯಾಚರಣೆಯಲ್ಲಿ ಪ್ರಶಾಂತ್‌ (36) ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಆದಿನಾಥೇಶ್ವರ ಟ್ರಾನ್ಸ್‌ಪೊರ್ಟ್‌ ಕಂಪೆನಿಯ ಮ್ಯಾನೇಜರ್‌ ಕುಂಜತ್ತಬೈಲ್‌ನ ಪ್ರಶಾಂತ್‌ ನನ್ನು ಆರೋಪಿಗಳು ಎಪ್ರಿಲ್ 7 ರಂದು ರಾತ್ರಿ 11.25 ರ ವೇಳೆಗೆ ನಗರದ ವೆಲೆನ್ಸಿಯಾದ ಮಂಗಳಾ ಬಾರ್‌ ಬಳಿ ಮಾರಕಾಯುಧಗಳಿಂದ ಕಡಿದು ಕೊಲೆ ಮಾದಿದ್ದರು. ಆರೋಪಿಗಳಾದ ಜಪ್ಪಿನ ಮೊಗರು […]

ಕೆರೆಯಲ್ಲಿ ಈಜಲು ತೆರಳಿದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

Friday, April 12th, 2013
Karinja temple pond

ಬಂಟ್ವಾಳ : ಕಾರಿಂಜೇಶ್ವರ ದೇವಸ್ಥಾನದ ಕೆರೆಯಲ್ಲಿ ಈಜಲೆಂದು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲದ ಘಟನೆ ಗುರುವಾರ ಮಧ್ಯಾಹ್ನನದ ವೇಳೆ ಸಂಭವಿಸಿದೆ.  ಫಾರ್ಲ ನಿವಾಸಿಗಳಾದ ಥಾಮಸ್ ಮತ್ತು ಅರ್ಸಿಲ್ಲಾ ಡಿ ಮೆಲ್ಲೋ ದಂಪತಿ ಪುತ್ರ ಅಥ್ವಿನ್ ಡಿ ಮೆಲ್ಲೋ (20) ಮತ್ತು ಜಾನ್ ಹಾಗೂ ಲೀನಾ ಲಸ್ರಾದೊ ದಂಪತಿ ಪುತ್ರ ರೋಷನ್ ಲಸ್ರಾದೋ(17) ಮೃತಪಟ್ಟ ವಿದ್ಯಾರ್ಥಿಗಳಾಗಿದ್ದಾರೆ. ಮಧ್ಯಾಹ್ನದ ವೇಳೆ ಕಾರಿಂಜೇಶ್ವರ ದೇವಸ್ಥಾನದ ಕೆರೆಗೆ ಈಜಲೆಂದು ಅಥ್ವಿನ್ ಡಿ ಮೆಲ್ಲೋ, ರೋಷನ್ ಲಸ್ರಾದೋ ಹಾಗು ಪ್ರಕಾಶ್ ವೇಗಸ್ ಈ ಮೂವರು […]

ಬಂದ್ಯೋಡು ವಸತಿ ಗೃಹವೊಂದರ ಮೇಲೆ ದಾಳಿ, ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾ ವಶ

Wednesday, April 10th, 2013
drugs mafia

ಕಾಸರಗೋಡು : ಜಿಲ್ಲೆಯಲ್ಲಿ ಗಾಂಜಾ ಸಾಗಾಣಿಕೆಯ ವಿರುದ್ದ ಪೊಲೀಸ್ ಕಾರ್ಯಾಚರಣೆ ಮುಂದುವರಿದಿದ್ದು ಬಂದ್ಯೋಡು ಬಳಿಯ ವಸತಿ ಗೃಹವೊಂದರ ಮೇಲೆ ದಾಳಿ ನಡೆಸಿದ ಪೊಲೀಸರು ಅಬ್ದುಲ್ ಅಜೀಝ್ ಎಂಬಾತನನ್ನು ಬಂಧಿಸಿದ್ದಾರೆ. ಬಳಿಕ ಆತನ ನೆರೆಮನೆಯ ರಿಕ್ಷಾ ಚಾಲಕ ಅಬ್ಬಾಸ್ (35) ಎಂಬಾತನ ಮನೆ ಮೇಲೆ  ದಾಳಿ ನಡೆಸಿದ ಪೊಲೀಸರು ಮನೆಯಲ್ಲಿ 3 ಗೋಣಿ ಚೀಲಗಳಲ್ಲಿ ತುಂಬಿಸಿಡಲಾಗಿದ್ದ ಗಾಂಜಾವನ್ನು ಪತ್ತೆ ಹಚ್ಚಿ ಮನೆಯಲ್ಲಿದ್ದ ಆತನ ಪತ್ನಿ ಸೆಮೀರಾ ಯಾನೆ ಸೆಮೀಮಾ(26) ಎಂಬಾಕೆಯನ್ನು ಬಂಧಿಸಿದ್ದಾರೆ. ಬಳಿಕ ಬಂಧಿತರು ನೀಡಿದ ಮಾಹಿತಿ ಮೇರೆಗೆ […]

ಪ್ರಶಾಂತ್ ಕೊಲೆ ಪ್ರಕರಣ, ಎಸಿಪಿ ಜಗನ್ನಾಥ ನೇತೃತ್ವದಲ್ಲಿ ತನಿಖೆ

Tuesday, April 9th, 2013
Prashanth murder case

ಮಂಗಳೂರು : ಆದಿನಾಥೇಶ್ವರ ಟ್ರಾನ್ಸ್‌ಪೋರ್ಟ್ ಕಂಪನಿಯ ಮ್ಯಾನೇಜರ್ ಪ್ರಶಾಂತ್ ಕೊಲೆ ಪ್ರಕರಣಕ್ಕೆ ಸಂಬಧಪಟ್ಟಂತೆ ಮಂಗಳೂರು ಗ್ರಾಮಾಂತರ ಇನ್‌ಸ್ಪೆಕ್ಟರ್ ಹಾಗೂ ಎಸಿಪಿ ಜಗನ್ನಾಥ ನೇತೃತ್ವದಲ್ಲಿ  ತಂಡಗಳನ್ನು ರಚಿಸಲಾಗಿದೆ. ರವಿವಾರ ರಾತ್ರಿ ೧೧.೨೫ ರ ವೇಳೆಗೆ ಸುಮಾರು ಆರರಿಂದ ಏಳು ಮಂದಿಯ ಹಂತಕರ ತಂಡ ಪ್ರಶಾಂತ್ ಮೇಲೆ ಗುಂಡು ಹಾರಿಸಿ ಬಳಿಕ ಮಾರಕಾಸ್ತ್ರಗಳಿಂದ ಕಡಿದು ಪರಾರಿಯಾಗಿದೆ. ಕೊಲೆ ನಡೆದ ಸ್ಥಳಕ್ಕೆ ಬೆರಳಚ್ಚು ಹಾಗೂ ಶ್ವಾನದಳತಂಡ ಭೇಟಿ ನೀಡಿ ತನಿಖೆ ನಡೆಸಿದೆ. ಪೊಲೀಸರಿಗೆ ಆರೋಪಿಗಳ ಬಗ್ಗೆ ಸ್ಪಷ್ಟ ಮಾಹಿತಿ ಲಭಿಸಿದ್ದು ಬಂಧನಕ್ಕೆ […]

ಪಣಂಬೂರು ಬೀಚ್ ನಲ್ಲಿ ನೀರಾಟವಾಡುತ್ತಿದ್ದ ವಿದ್ಯಾರ್ಥಿ ನೀರುಪಾಲು

Monday, April 8th, 2013
Panamburu beach

ಮಂಗಳೂರು : ಪರೀಕ್ಷೆ ಬರೆಯಲೆಂದು ಚಿಕ್ಕಮಗಳೂರಿನಿಂದ ಮಂಗಳೂರಿಗೆ ಆಗಮಿಸಿದ ವಿದ್ಯಾರ್ಥಿಯೊಬ್ಬ ಪಣಂಬೂರು ಬೀಚ್ ನಲ್ಲಿ ನಿರಾಟವಾಡುತ್ತಿದ್ದ ವೇಳೆ ಸಮುದ್ರದ ಸೆಳೆತಕ್ಕೆ ಸಿಲುಕಿ ಮೃತಪಟ್ಟ ಘಟನೆ ರವಿವಾರ ಸಂಭವಿಸಿದೆ. ಮೃತ ದುರ್ದೈವಿ ಚಿಕ್ಕಮಂಗಳೂರಿನ ಅಕಾಶ್ ಕಡೂರ್ (17). ಚಿಕ್ಕಮಗಳೂರಿನಿಂದ ಮಂಗಳೂರಿಗೆ ಎಇಇಇ ಪರೀಕ್ಷೆ ಬರೆಯಲು ಚಿಕ್ಕಮಂಗಳೂರಿನ ನವೋದಯ ವಿದ್ಯಾಲಯದ ಸುಮಾರು 35 ಮಂದಿ ವಿದ್ಯಾರ್ಥಿಗಳು ಆಗಮಿಸಿದ್ದರು. ಪರೀಕ್ಷೆ ಮುಗಿದ ನಂತರ ಪಣಂಬೂರು ಬೀಚ್ ಗೆ ತೆರಳಿದ ವಿದ್ಯಾರ್ಥಿಗಳು ನೀರಿನಲ್ಲಿ ಆಡುತ್ತಿದ್ದು ಅಕಾಶ್ ಅನಿರೀಕ್ಷಿತವಾಗಿ ಬಂದ ಸಮುದ್ರದ ಅಲೆಗೆ ಸಿಕ್ಕಿ ಸೆಳೆಯಲ್ಪಟ್ಟು […]

ನಗರದ ವೆಲೆನ್ಸಿಯಾ ಬಳಿ ದುಷ್ಕರ್ಮಿಗಳಿಂದ ಭೀಕರ ಹತ್ಯೆ

Monday, April 8th, 2013
Murdered at Valencia

ಮಂಗಳೂರು : ಬಾನುವಾರ ರಾತ್ರಿ ನಗರದ ಕಂಪನಿಯೊಂದರ ಮ್ಯಾನೇಜರ್ ಒಬ್ಬರನ್ನು ದುಷ್ಕರ್ಮಿಗಳ ತಂಡವೊಂದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ವೆಲೆನ್ಸಿಯ ಬಳಿಯ ಮಂಗಳಾ ಬಾರ್ ಸಮೀಪ ನಡೆದಿದೆ. ಶ್ರೀ ಆದಿನಾಥೇಶ್ವರ ರೋಡ್ ಲೈನ್ಸ್ (ಟ್ರಾನ್ಸ್‌ಪೋರ್ಟ್ ) ಸಂಸ್ಥೆಯ ಮ್ಯಾನೇಜರ್ ಪ್ರಶಾಂತ್ ಯಾನೆ ಪಚ್ಚು(30) ಹತ್ಯೆಯಾದವರು. ಪ್ರಶಾಂತ್ ಅವಿವಾಹಿತರಾಗಿದ್ದು, ಮರಕಡ ಕುಂಜತ್ತಬೈಲ್ ನ ನಿವಾಸಿಯಾಗಿರುವ ಸುಂದರ ಎಂಬವರ ಪುತ್ರರಾಗಿದ್ದಾರೆ. ಬಾನುವಾರ ರಾತ್ರಿ ಸುಮಾರು 11.45 ರ ವೇಳೆ ವೆಲೆನ್ಸಿಯಾದ ಮಂಗಳಾ ಬಾರ್ ಬಳಿ ಸುಮಾರು 7-8 ಮಂದಿಯ ತಂಡ […]

ಕಾಂಗ್ರೆಸ್ : ರಾಜ್ಯ ವಿಧಾನ ಸಭಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, ಜೆ.ಆರ್.ಲೋಬೊ ಕಣಕ್ಕೆ

Saturday, April 6th, 2013
JR Lobo & Ivan D Souza

ಮಂಗಳೂರು : ಕಾಂಗ್ರೆಸ್ ಪಕ್ಷದಿಂದ ರಾಜ್ಯ ವಿಧಾನ ಸಭೆಯ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದ್ದು, ಈಗ ಸಿದ್ಧವಾಗಿರುವ ಪಟ್ಟಿಯಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ದಿಂದ ಜೆ.ಆರ್.ಲೋಬೊ ರಿಗೆ ಟಿಕೆಟ್ ನೀಡಲಾಗಿದೆ. ಕೆಲ ತಿಂಗಳ ಹಿಂದೆ ಸರ್ಕಾರಿ ಹುದ್ದೆಯಿಂದ ಸ್ವಯಂ ನಿವೃತ್ತಿಗೊಂಡು ಕಾಂಗ್ರೆಸ್ ಪಕ್ಷಕ್ಕೆ ಸೇರಿದ  ಜೆ.ಆರ್.ಲೋಬೊ ಪಕ್ಷಕ್ಕೆ ಸೇರಿ ಸಾಮಾನ್ಯ ಕಾರ್ಯಕರ್ತನಂತೆ ತೆರೆ ಮರೆಯಲ್ಲೇ  ತನ್ನ ಪಾಲಿನ ಕೆಲಸ ಮಾಡಿಕೊಂಡಿದ್ದರು. ಒಂದೆಡೆ ಈ ಬಾರಿ ದಕ್ಷಿಣ ವಿಧಾನಸಭಾ ಕ್ಷೇತ್ರ ಸ್ಪರ್ಧಿಸುವ ಅವಕಾಶ ಒದಗಿಸುತ್ತೇವೆ ಎಂದು ಕಾಂಗ್ರೆಸ್ ನಾಯಕರು […]