ಬ್ಯಾರಿ ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷರಿಗೆ ಕತ್ತಿಯಿಂದ ಕಡಿದು ಕೊಲೆಯತ್ನ

Friday, March 16th, 2012
Beary Sahitya Parishat New President Attacked

ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷ ರಹೀಂ ಉಚ್ಚಿಲ ಅವರನ್ನು ನಾಲ್ವರು ಮುಸುಕುಧಾರಿಗಳ ತಂಡ ಗುರುವಾರ ಮಧ್ಯಾಹ್ನ ಬ್ಯಾರಿ ಅಕಾಡೆಮಿ ಕಚೇರಿಯಲ್ಲಿ ಕತ್ತಿಯಿಂದ ಕಡಿದು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ, ಬ್ಯಾರಿ ಅಕಾಡೆಮಿ ಕಚೇರಿಯಲ್ಲಿ ಮಧ್ಯಾಹ್ನ 1.30ರ ವೇಳೆಗೆ ಕಚೇರಿಯ ಚೇಂಬರ್‌ನಲ್ಲಿ ಒಬ್ಬರೇ ಕುಳಿತಿದ್ದ ಸಂದರ್ಭದಲ್ಲಿ ಎರಡು ಮೋಟಾರ್‌ ಸೈಕಲ್‌ಗ‌ಳಲ್ಲಿ ಬಂದ ನಾಲ್ವರು ಮುಸುಕುಧಾರಿಗಳು ಈ ಕೃತ್ಯ ಎಸಗಿದ್ದಾರೆ. ಈ ಸಂದರ್ಭದಲ್ಲಿ ಹೊರಗೆ ಕಚೇರಿ ಸಹಾಯಕ ಸತೀಶ್‌ ರೈ ಮಾತ್ರ ಇದ್ದರು. ಅಪರಿಚಿತರು […]

ನೋಡಬಹುದಾದ ”ಮದುವೆ ಮನೆ”

Sunday, November 27th, 2011
Ganesh Shruda Arya

ಬೆಂಗಳೂರು : ನಿರ್ದೇಶಕ ಸುನಿಲ್ ಕುಮಾರ್ ಸಿಂಗ್ ಚೊಚ್ಚಲ ನಿರ್ದೇಶನದಲ್ಲಿಯೇ ಸದಭಿರುಚಿಯ ಉತ್ತಮ ಚಿತ್ರವೊಂದನ್ನು ಪ್ರೆಕ್ಷಕರಿಗೆ ನೀಡಿದ್ದಾರೆ. ಸೋಲಿನ ಸೆರಗಲ್ಲಿ ತೇಲಾಡುತಿದ್ದ ಗಣೇಶ್‌ಗೆ ಇಂತಹ ಚಿತ್ರವೊಂದರ ಅಗತ್ಯವಿತ್ತು. ಕತೆ, ಚಿತ್ರಕತೆ, ಸಂಭಾಷಣೆ, ಸಂಗೀತ, ಛಾಯಾಗ್ರಹಣ ಸೇರಿದಂತೆ ಎಲ್ಲಾ ವಿಭಾಗದಲ್ಲಿಯೂ ಈ ಚಿತ್ರ ಯಶಷ್ವಿಯಾಗಿದೆ. ಚಿತ್ರದ ನಾಯಕಿ ಸುಮಾಳನ್ನು (ಶ್ರದ್ಧಾ ಆರ್ಯ) ಚಿತ್ರದ ನಾಯಕ ಸೂರಜ್ (ಗಣೇಶ್) ಅನಿರೀಕ್ಷಿತ ಸಂದರ್ಭದಲ್ಲಿ ಭೇಟಿಯಾಗುತ್ತಾನೆ. ಸುಮಾಳಿಗೆ ಮದುವೆ ಗೊತ್ತಾಗಿರುತ್ತದೆ. ಮದುವೆಯಾಗುವವನು ಎಸಿಪಿ ದುಷ್ಯಂತ್ (ಚಿರಂತ್). ಆದರೆ ಮದುವೆ ಮನೆಯ ಸಂಭ್ರಮದಲ್ಲಿ ಭಾಗಿಯಾಗಿದ್ದ […]

ಉದುರುವ ಕೂದಲು, ಬಕ್ಕತಲೆಗೆ ಪರಿಹಾರ!

Thursday, November 17th, 2011
Hair Falling

ಕೂದಲು ಉದುರುವುದು! ಬಹಳಷ್ಟು ಮಂದಿಗೆ ಇದೊಂದು ಗಂಭೀರ ಸಮಸ್ಯೆ. ಕೂದಲು ಉದುರುತ್ತಿರುವ ಬಗ್ಗೆ ತಲೆ ಬಿಸಿ ಮಾಡಿಯೇ ಇನ್ನಷ್ಟು ಕೂದಲು ಉದುರಿಸಿಕೊಳ್ಳಬೇಕಾದ ಅನಿವಾರ್ಯತೆ ಅವರದ್ದು. ವಂಶಪಾರಂಪರ್ಯದ ಬೋಳುತಲೆಯ ಶಾಪ ಕೆಲವರಿಗಾದರೆ, ಬಹಳಷ್ಟು ಮಂದಿಗೆ ಆಧುನಿಕ ಜೀವನ ಶೈಲಿ, ಬದಲಾದ ಆಹಾರ ಕ್ರಮದಿಂದಾಗಿಯೇ ಕೂದಲು ಉದುರುವ ಸಮಸ್ಯೆ ಶಾಪವಾಗಿ ಕಾಡುತ್ತದೆ ಎಂಬುದೂ ಸತ್ಯ. ಹೆಚ್ಚಿನ ಪ್ರಮಾಣದಲ್ಲಿ ಟೀ, ಕಾಫಿ, ಆಲ್ಕೋಹಾಲ್, ಮಾಂಸ ಸೇವನೆ, ಸಿಗರೇಟು ಸೇದುವುದು, ಹೆಚ್ಚು ಜಂಕ್ ಫುಡ್ ಆಹಾರ ವ್ಯವಸ್ಥೆಗೇ ಮಾರು ಹೋಗಿರುವುದು ಕೂಡಾ ಕೂದಲುದುರುವಿಕೆಗೆ […]

ಐಶ್ವರ್ಯ ರೈ ಮಗುವಿಗಾಗಿ 150 ಕೋಟಿ ಬೆಟ್

Wednesday, November 9th, 2011
aishwarya-rai

ಮಂಗಳೂರು : ಬಾಲಿವುಡ್ ತಾರೆ ಐಶ್ವರ್ಯ ರೈಗೆ ಹುಟ್ಟಲಿರುವ ಮಗು ಹೆಣ್ಣಾ ಗಂಡಾ ಎಂದು ಈ ಮೊದಲು ಬಾಜಿ ಕಟ್ಟಿದ್ದರು. ಈಗ ಐಶ್ವರ್ಯ ಡೆಲಿವರಿ ಡೇಟ್ ಮೇಲೆ ಬಾಜಿ ಕಟ್ಟಲು ಭಾರಿ ಬೇಡಿಕೆ ಶುರುವಾಗಿದೆಯಂತೆ. ಬೆಟ್ ಕಟ್ಟಿರುವ ಮೊತ್ತ ಬರೋಬ್ಬರಿ 150 ಕೋಟಿ ರೂಪಾಯಿಗಳು. ಐಶ್ವರ್ಯ ರೈ ನವೆಂಬರ್ 9 ಅಥವಾ 14ಕ್ಕೆ ಪ್ರಸವಿಸಲಿದ್ದಾರೆ ಎಂಬುದು ವೈದ್ಯರು ನೀಡಿರುವ ದಿನಾಂಕ. ನವೆಂಬರ್ 14ರಂದು ಮಕ್ಕಳ ದಿನಾಚರಣೆ. ಆದರೆ ಜೋತಿಷ್ಯದ ಸಂಖ್ಯಾಶಾಸ್ತ್ರಜ್ಞರ ಪ್ರಕಾರ 11.11.11ರಂದೇ ಐಶ್ವರ್ಯ ರೈ ಮಗುವಿಗೆ […]

ಹಣಕ್ಕಾಗಿ ವೈದ್ಯಕೀಯ ವಿದ್ಯಾರ್ಥಿ ಅಪಹರಣ

Friday, October 14th, 2011
Medical-Student Kidnap

ಉಳ್ಳಾಲ: ದೇರಳಕಟ್ಟೆಯ ವೈದ್ಯಕೀಯ ಕಾಲೇಜಿನಲ್ಲಿ ಇಂಟರ್ನ್ಶಿಪ್‌ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು ತಂಡವೊಂದು ಹಣಕ್ಕಾಗಿ ಬುಧವಾರ ತಡರಾತ್ರಿ ಅಪಹರಣ ನಡೆಸಿದ್ದು, ಗುರುವಾರ ಮುಂಜಾನೆ ಕೇರಳದ ಮಂಜೇಶ್ವರದ ಉದ್ಯಾವರದ ಬಳಿ ಜಖಂಗೊಳಿಸಿ ಬಿಟ್ಟಿದ್ದಾರೆ.   ದೇರಳಟ್ಟೆಯಲ್ಲಿ ನಿರ್ಮಾಣ ಹಂತದಲ್ಲಿರುವ ಕಾಂಪ್ಲೆಕ್ಸ್‌ ಒಂದರಿಂದ ವಿದ್ಯಾರ್ಥಿಯನ್ನು ಅಪಹರಿಸಲಾಗಿದ್ದು ಹಣಕ್ಕಾಗಿ ಈ ಅಪಹರಣ ನಡೆದಿದೆ ಎನ್ನಲಾಗಿದೆ. ಕಾಲೇಜಿನ ಎದುರಿಗಿರುವ ಫ್ಲಾಟ್‌ನಲ್ಲಿ ವಿದ್ಯಾರ್ಥಿ ವಾಸವಾಗಿದ್ದ. ವಿದ್ಯಾರ್ಥಿಯನ್ನು ಕೇರಳದ ತ್ರಿಶೂರ್‌ ನಿವಾಸಿ ಮಹಮ್ಮದ್‌ ನೆಬಿಲ್‌(23) ಎಂದು ಗುರುತಿಸಲಾಗಿದೆ. ನೆಬಿಲ್‌ನ ತಂದೆ ತಾಯಿ ವಿದೇಶದಲ್ಲಿ ಉದ್ಯೋಗದಲ್ಲಿದ್ದು ಕಾಂಪ್ಲೆಕ್ಸ್‌ ನ ಣಕಾಸಿನ ವ್ಯವಹಾರ ನೆಬಿಲ್‌ […]

ನೀವು ಎಲ್ಲೇ ಹೋಗಿ ರೋಮಿಂಗ್ ಪ್ರೀ

Monday, October 10th, 2011
Kapil-Sibal

ನವ ದೆಹಲಿ : ರಾಷ್ಟ್ರಾದ್ಯಂತ ಮೊಬೈಲ್‌ ಸೇವೆಯನ್ನು ರೋಮಿಂಗ್‌ನಿಂದ ಮುಕ್ತಗೊಳಿಲು ಕೇಂದ್ರ ಸರಕಾರವು ಹೊಸ ದೂರ ಸಂಪರ್ಕ ನೀತಿಯನ್ನು ಜಾರಿಗೊಳಿಸಲು ಸಜ್ಜಾಗಿದ್ದು, ಈ ಮೂಲಕ ಜನತೆಗೆ ಹೊಸ ಕೊಡುಗೆ ನೀಡಲು ಮುಂದಾಗಿದೆ. ಕೇಂದ್ರದ ಹೊಸ ದೂರ ಸಂಪರ್ಕ ನೀತಿ – 2011 ಮುಂದಿನ ವಾರ ಪ್ರಕಟಗೊಳ್ಳುವ ನಿರೀಕ್ಷೆಯಿದ್ದು, ಬಂಡವಾಳ ಹೂಡಿಕೆಗೆ ಹೊಸ ದೂರ ಸಂಪರ್ಕ ಹಣಕಾಸು ನಿಗಮ ಸ್ಥಾಪನೆ, ಖಾಸಗಿ ದೂರವಾಣಿ ಕಂಪನಿಗಳು ಲೈಸೆನ್ಸ್‌ ಮರಳಿಸಲು ಅವಕಾಶ ಕೊಡುವುದು ಸೇರಿದಂತೆ ಹಲವಾರು ಅಂಶಗಳಿರುವ ದೂರ ಸಂಪರ್ಕ ನೀತಿಯನ್ನು […]

ನಕ್ಸಲರ ಮಧ್ಯೆ ಭೀಕರ ಗುಂಡಿನ ಕಾಳಗ ಪೋಲಿಸ್ ಪೇದೆ ಬಲಿ

Sunday, October 9th, 2011
Mahadeva S Mane

ಬೆಳ್ತಂಗಡಿ : ಬೆಳ್ತಂಗಡಿ ಸಮೀಪದ ಸವಣಾಳು ಬಳಿ ಶನಿವಾರ ಮಧ್ಯರಾತ್ರಿ ನಕ್ಸಲ್ ನಿಗ್ರಹ ಪಡೆ ಮತ್ತು ನಕ್ಸಲರ ಮಧ್ಯೆ ಭೀಕರ ಗುಂಡಿನ ಕಾಳಗ ನಡೆದಿದ್ದು ನಕ್ಸಲ್ ನಿಗ್ರಹ ಪಡೆ ಪೇದೆ ಮಾನೆ ಗುಂಡಿಗೆ ಬಲಿಯಾಗಿದ್ದಾರೆ.ನಕ್ಸಲರ ಗುಂಡೇಟಿನಿಂದ ಸ್ಥಳದಲ್ಲೇ ಸಾವನ್ನಪ್ಪಿದ ಕಾನ್ಸ್‌ಟೇಬಲ್ ಮಹದೇವ ಎಸ್.ಮಾನೆ (40 ವರ್ಷ) ಬಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣ ಗ್ರಾಮದವರು. ಬೆಳ್ತಂಗಡಿಯಿಂದ ಹದಿನೇಳು ಕಿ.ಮೀ ದೂರದಲ್ಲಿರುವ ಸವಣಾಳು ಗ್ರಾಮದ ಬಳಿ ಅರಣ್ಯ ಪ್ರದೇಶದಲ್ಲಿ ನಕ್ಸಲರು ಕಾಣಿಸಿಕೊಂಡಿದ್ದಾರೆ ಎಂಬ ಮಾಹಿತಿ ಪಡೆದ ಸ್ಥಳೀಯ ಪೊಲೀಸರು […]

ಮೈಸೂರು ದಸರಾ ಜಂಬೂ ಸವಾರಿ

Thursday, October 6th, 2011
Mysore-Dasara

ಮೈಸೂರು : ವೈಭವಯುತ ಮೈಸೂರು ದಸರಾ ಜಂಬೂ ಸವಾರಿಗೆ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹಾಗೂ ಗಣ್ಯರು ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಸುಮಾರು 750ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊತ್ತ ಬಲರಾಮ ಆನೆಗಳಾದ ಸರಳ ಹಾಗೂ ಮೇರಿ ಮತ್ತು ಅಶ್ವಪಡೆಯೊಂದಿಗೆ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಉಸ್ತುವಾರಿ ಸಚಿವ ರಾಮದಾಸ್, ಮೇಯರ್ ಪುಷ್ಪಲತಾ ಚಿಕ್ಕಣ್ಣರವರಿಗೆ ತಮ್ಮ ಸೊಂಡಿಲನೆತ್ತಿ ಗಣ್ಯರಿಗೆ ಗೌರವಸಲ್ಲಿಸಿದವು. ಈ ಸಂದರ್ಭ ಕುಶಾಲತೋಪು ಸಿಡಿಸಲಾಯಿತು. ಬಳಿಕ ಅಂಬಾರಿಯನ್ನು ಹೊತ್ತು ರಾಜಗಾಂಭೀರ್ಯದಲ್ಲಿ […]

ಭಕ್ತಿ ಭಾವೈಕತೆಯ ಆಯುಧ ಪೂಜೆ

Wednesday, October 5th, 2011
Viajaya Dashami

ದಸರಾ ಹಬ್ಬದ ಕೊನೆಯ ದಿನ ವಿಜಯದಶಮಿಯಾದರೆ. ಒಂಭತ್ತನೆ ದಿನ ನಾಡಿನೆಲ್ಲೆಡೆ ಆಯುಧ ಪೂಜೆ ಸಂಭ್ರಮವನ್ನು ಆಚರಿಸಲಾಗುತ್ತದೆ, ಎಲ್ಲೆಡೆ ವಾಹನಗಳಿಗೆ ಹಾಗೂ ಆಯುಧಗಳಿಗೆ ಪೂಜೆ ನಡೆಸಲಾಗುತ್ತದೆ ಅಂಗಡಿ, ಕಚೇರಿ, ಮಳಿಗೆಗಳಲ್ಲಿ ವಾಹನ ಸೇರಿದಂತೆ ಉಪಯೋಗಿಸುವ ಎಲ್ಲಾ ಆಯುಧಗಳನ್ನು ಹೂ ತೋರಣಗಳಿಂದ ಶೃಂಗಾರಗೊಳಿಸಿ ಭಕ್ತಿ ಭಾವೈಕತೆಯಿಂದ ಪೂಜೆ ಸಲ್ಲಿಸಲಾಗುತ್ತಿದೆ. ಜಾತಿ ಭೇಧವಿಲ್ಲದೆ ಆಯುಧ ಪೂಜೆಯನ್ನು ನಾಡಿನೆಲ್ಲೆಡೆ ಆಚರಿಸುತ್ತಾರೆ. ವಾಹನಗಳಿಗೆ ಪೂಜೆ ಸಲ್ಲಿಸುವುದರಿಂದ ದೀರ್ಘ ಬಾಳ್ವಿಕೆ ಸಹಿತ ಅಪಘಾತವನ್ನು ತಪ್ಪಿಸಬಹುದಾಗಿದೆ ಎಂಬುದು ನಂಬಿಕೆಯಾಗಿದೆ. ಇದರಂತೆ ತಮ್ಮ ತಮ್ಮ ಊರುಗಳಲ್ಲಿ ದೇವಾಲಯಗಳಿಗೆ ತೆರಳಿ […]

ರಾಜ್ಯದ ಶ್ರೀಮಂತ ಮಹಿಳೆ ಅನಿತಾ ಕುಮಾರಸ್ವಾಮಿ

Tuesday, October 4th, 2011
Anita Kumaraswamy

ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಧರ್ಮಪತ್ನಿ ಅನಿತಾ ಕುಮಾರಸ್ವಾಮಿಯವರು 2010-11ನೇ ಸಾಲಿಗೆ ಆಸ್ತಿ ವಿವರಗಳ ಅಫಡವಿಟ್ ಸಲ್ಲಿಸಿರುವ ಪ್ರಕಾರ ಒಟ್ಟು ಅಧಿಕೃತ ಆಸ್ತಿ ಮೊತ್ತ 160 ಕೋಟಿ ರುಪಾಯಿ. ಶಾಸಕಿಯಾಗಿ ಲೋಕಾಯುಕ್ತಕ್ಕೆ ಸಲ್ಲಿಸಿರುವ ಆಸ್ತಿ ವಿವರ ದಾಖಲೆಗಳನ್ನು ಪರಿಶೀಲಿಸಿದಾಗ ಈ ಅಂಶ ದೃಢಪಟ್ಟಿದೆ. ಇಲ್ಲಿ ಒಂದು ಅಂಶ ಸ್ಪಷ್ಟಪಡಿಸುವುದಾದರೆ ಬಳ್ಳಾರಿಯ ಜನಾರ್ಧನ ರೆಡ್ಡಿ ಅಧಿಕೃತ ಆಸ್ತಿ ಲೋಕಾಯಯುಕ್ತ ದಾಖಲೆಗಳ ಪ್ರಕಾರ ಕೇವಲ 144 ಕೋಟಿ ರು. 2009-10ರಲ್ಲಿ ಶಾಸಕಿ ಅನಿತಾರ ಆಸ್ತಿ ಮೊತ್ತ 51.22 ಕೋಟಿ […]