ಕೊಲ್ಯ ಶ್ರೀ ನಾಗಬ್ರಹ್ಮ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಜ.26 ರಿಂದ ಜ.30ರ ವರೆಗೆ ಅಷ್ಟಪವಿತ್ರ ನಾಗಮಂಡಲೋತ್ಸವ

Thursday, November 5th, 2015
ಕೊಲ್ಯ ಶ್ರೀ ನಾಗಬ್ರಹ್ಮ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಜ.26 ರಿಂದ ಜ.30ರ ವರೆಗೆ ಅಷ್ಟಪವಿತ್ರ  ನಾಗಮಂಡಲೋತ್ಸವ

ಮಂಗಳೂರು : ಅಷ್ಟಪವಿತ್ರ ನಾಗಮಂಡಲೋತ್ಸವ ಸಮಿತಿ ಕೊಲ್ಯ ಇದರ ಅಶ್ರಯದಲ್ಲಿ ಶ್ರೀ ನಾಗಬ್ರಹ್ಮ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಜ.26 ರಿಂದ ಜ.30ರ ವರೆಗೆ ಅಷ್ಟಪವಿತ್ರ ನಾಗಮಂಡಲೋತ್ಸವ ವೇದಮೂರ್ತಿ ಜಗದೀಶ್ ಭಟ್ ಮರಕಡ ಇವರ ಪೌರೋಹಿತ್ಯದಲ್ಲಿ ನಾಗಪಾತ್ರಿ ಸಗ್ರಿ ಗೋಪಾಲಕೃಷ್ಣ ಸಾಮಗರ ಮಾರ್ಗದರ್ಶನದೊಂದಿಗೆ ನಡೆಯಲಿದೆ ಎಂದು ಅಷ್ಟಪವಿತ್ರ ನಾಗಮಂಡಲೋತ್ಸವ ಸಮಿತಿಯ ಧರ್ಮದರ್ಶಿ ಭಾಸ್ಕರ್ ಐತಾಳ್ ಹೇಳಿದ್ದಾರೆ. ಶ್ರೀ ಕ್ಷೇತ್ರದಲ್ಲಿ ಪ್ರತಿ ಶನಿವಾರ ವಿಶೇಷ ನಾಗತಂಬಿಲ, ಪ್ರತೀ ತಿಂಗಳ ಆಶ್ಲೇಷಾ ನಕ್ಷತ್ರ ದಿನ ಆಶ್ಲೇಷಾ ಬಲಿಪೂಜೆ, ವರ್ಷಂಪ್ರತಿ ಸಹಸ್ರ ಸೀಯಾಳಾಭಿಷೇಕ, ನಾಗರಪಂಚಮಿ […]

ಚಲನಚಿತ್ರ ನಟ ಅರ್ಜುನ್ ಸರ್ಜ ಕುಟುಂಬಸ್ಥರಿಂದ ಕುಕ್ಕೆಯಲ್ಲಿ ಸೇವೆ ಸಲ್ಲಿಕೆ

Thursday, November 5th, 2015
Arjun Sharja

ಸುಬ್ರಹ್ಮಣ್ಯ: ಬಹು ಭಾಷಾ ನಟ ಅರ್ಜುನ್ ಸರ್ಜ ಹಾಗೂ ಕುಟುಂಬಸ್ಥರು ಬುಧವಾರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿ ಶ್ರೀ ದೇವರ ದರ್ಶನ ಹಾಗೂ ವಿಶೇಷ ಪೂಜೆ ಸಲ್ಲಿಸಿ ತೆರಳಿದರು. ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಕನ್ನಡ ಬಹು ನಿರೀಕ್ಷಿತ ಚಲನಚಿತ್ರ ಗೇಮ್ ಇದೇ ತಿಂಗಳ 27 ರಂದು ರಾಜ್ಯದಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ತಾನು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದು ಮನೀಷಾ ಕೊಯಿರಾಲ ನಾಯಕಿಯಾಗಿ ಅಭಿನಯಿಸಿದ್ದಾರೆ.ಖ್ಯಾತ ನಿರ್ಮಾಪಕ ಎ ಎಮ್ ಆರ್ ರಮೇಶ ಈ ಚಿತ್ರ […]

ಪುತ್ತೂರು ಕಾರಂತ ಬಾಲವನ: ಕಟ್ಟಡಗಳ ಸಂರಕ್ಷಣೆ – ತ್ವರಿತಗೊಳಿಸಲು ಕಾರ್ಯದರ್ಶಿಗಳ ಸೂಚನೆ

Thursday, November 5th, 2015
Karantha Balavana

ಮಂಗಳೂರು : ಪುತ್ತೂರು ಡಾ. ಶಿವರಾಮ ಕಾರಂತ ಬಾಲವನ ಅಭಿವೃದ್ಧಿಗೆ ಸರಕಾರದಿಂದ ನೇಮಕಗೊಂಡಿರುವ ಉನ್ನತ ಮಟ್ಟದ ಸಮಿತಿ ಸಭೆಯು ಬುಧವಾರ ಬಾಲವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಎನ್.ಎಸ್. ಚನ್ನಪ್ಪ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಚನ್ನಪ್ಪ ಗೌಡ, ಪುತ್ತೂರು ಡಾ. ಶಿವರಾಮ ಕಾರಂತ ಬಾಲವನ ಅಭಿವೃದ್ಧಿಗೆ 2015-16ರ ರಾಜ್ಯ ಬಜೆಟ್‌ನಲ್ಲಿ ಒಂದು ಕೋಟಿ ರೂ. ಹಣ ಘೋಷಣೆಯಾಗಿ ಬಿಡುಗಡೆಯಾಗಿದೆ. ಈ ಹಿನ್ನೆಯಲ್ಲಿ ಇಲಾಖೆಯ […]

ನ. 5: ’ರೈಟ್ ಬೊಕ್ಕ ಲೆಫ್ಟ್’ ತುಳು ಚಲನಚಿತ್ರ ಬಿಡುಗಡೆ

Thursday, November 5th, 2015
ನ. 5: ’ರೈಟ್ ಬೊಕ್ಕ ಲೆಫ್ಟ್’ ತುಳು ಚಲನಚಿತ್ರ  ಬಿಡುಗಡೆ

ಮಂಗಳೂರು: ಶ್ರೀ ಮಂಗಳಾಂಬಿಕಾ ಪ್ರೊಡಕ್ಷನ್ ಪುತ್ತೂರು ಲಾಂಛನದಲ್ಲಿ ನಿರ್ಮಾಣವಾಗಿರುವ ’ರೈಟ್ ಬೊಕ್ಕ ಲೆಫ್ಟ್-ನಡುಟು ಕುಡೊಂಜಿ’ ತುಳು ಚಲನಚಿತ್ರದ ಬಿಡುಗಡೆ ಸಮಾರಂಭ ನ. 5ರಂದು ಬೆಳಗ್ಗೆ 9.00ಕ್ಕೆ ಮಂಗಳೂರಿನ ಜೋತಿ ಚಿತ್ರಮಂದಿರದಲ್ಲಿ ಜರಗಲಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 10 ಚಿತ್ರ ಮಂದಿರಗಳಲ್ಲಿ ಚಿತ್ರ ಏಕಕಾಲಕ್ಕೆ ಬಿಡುಗಡೆಗೊಳ್ಳಲಿದೆ. ಜೀವನದಲ್ಲಿ ಸೋತ ವ್ಯಕ್ತಿಯೊಬ್ಬ ಹೇಗೆ ಯಶಸ್ಸು ಸಾಧಿಸುತ್ತಾನೆ ಎಂಬ ಒಳ್ಳೆಯ ಚಿತ್ರಕಥೆಯನ್ನು ರೈಟ್ ಬೊಕ್ಕ ಲೆಫ್ಟ್ ಸಿನಿಮಾ ಹೊಂದಿದೆ. ’ಬಲೆ ತೆಲಿಪಾಲೆ’ ಖ್ಯಾತಿಯ ಸಂದೀಪ್ ಶೆಟ್ಟಿ ಮಾಣಿಬೆಟ್ಟು ಈ […]

ಎಸ್‌ಬಿಐ ’ಗ್ರೇಟ್ ಮಲ್ನಾಡ್ ಚಾಲೆಂಜ್’ ಸೈಕಲ್‌ ಜಾಥಾ

Tuesday, November 3rd, 2015
cycle Jatha

ಸುಬ್ರಹ್ಮಣ್ಯ: ಬೆಂಗಳೂರಿನ ಐಸೈಕಲ್ ಕಂಪೆನಿಯು ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹಯೋಗದಲ್ಲಿ ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ 700 ಕಿ.ಮೀ. ದೂರದ 8 ದಿನಗಳ ’ಗ್ರೇಟ್ ಮಲ್ನಾಡ್ ಚಾಲೆಂಜ್’ ಪರಿಸರ ಸಂರಕ್ಷಣೆ ಮತ್ತು ಪರಿಸರ ಪ್ರವಾಸೋದ್ಯಮ ಜಾಗೃತಿಯ ದೃಷ್ಠಿಯಿಂದ ಸೈಕಲ್ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಶನಿವಾರ ಮಡಿಕೇರಿಯಿಂದ ಆರಂಭವಾದ ಜಾಥಾವು ರಾತ್ರಿ ಸುಬ್ರಹ್ಮಣ್ಯಕ್ಕೆ ಬಂದಾಗ ಇಲ್ಲಿನ ವಿಜಯ ಕಂಫಟ್ಸ್‌ನಲ್ಲಿ ಉದ್ಯಮಿ ರಾಧಾಕೃಷ್ಣ ಬೋಂಟಡ್ಕ ಸಾಹಸಿಗರನ್ನು ಸ್ವಾಗತಿಸಿದರು.ಭಾನುವಾರ ಕುಕ್ಕೆಯಿಂದ ಮುಂದುವರೆದ ಜಾಥಾಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಂಗಳೂರಿನ […]

ಪಟಾಕಿ/ ಸಿಡಿಮದ್ದುಗಳಿಂದ ಆಗುವ ಶಬ್ಬ ಮಾಲಿನ್ಯ ತಡೆಗಟ್ಟಿ

Tuesday, November 3rd, 2015
Diwali light

ಮಂಗಳೂರು : ಈ ವರ್ಷದ ದೀಪಾವಳಿ ಹಬ್ಬ ಸಮೀಪಿಸುತ್ತಿದ್ದು ಸಾರ್ವಜನಿಕ ಆಸ್ತಿ ಮತ್ತು ಆರೋಗ್ಯದ ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಶಬ್ಬ ಮಾಲಿನ್ಯ ನಿಯಂತ್ರಣದಲ್ಲಿಡುವ ಉದ್ದೇಶದಿಂದ ಪರಿಸರ ಸಂರಕ್ಷಣೆ ನಿಯಮಾವಳಿಗಳು 1999ರ ಅನ್ವಯ ಹಾಗೂ ಮಾನ್ಯ ಸರ್ವೊಚ್ಚ ನ್ಯಾಯಾಲಯದ ಆದೇಶ WP(C)72/98. 21.7.2005 ರಪ್ರಕಾರ 125DB (AL) ಅಥವಾ 145Db (C) pk ಕ್ಕಿಂತ (ಪಟಾಕಿ ಸಿದ್ಧಪಡಿಸುವ ಸ್ಥಳದಿಂದ 4 ಮೀಟರ್ ಅಂತರದಲ್ಲಿ ) ಹೆಚ್ಚು ಶಬ್ಧ ಮಡುವ ಪಟಾಕಿ ಹಾಗೂ ಸಿಡಿಮದ್ದುಗಳ ಮಾರಾಟ ಮಾಡುವುದಾಗಲಿ ಅಥವಾ […]

ಮಂಗಳೂರು ಜೈಲಿನಲ್ಲಿ ಕುಖ್ಯಾತ ರೌಡಿ ಮಾಡೂರ್ ಇಸುಬು ಮತ್ತು ಇನ್ನೋರ್ವ ಖೈದಿಯ ಹತ್ಯೆ

Monday, November 2nd, 2015
Maduru Isubu

ಮಂಗಳೂರು : ನಗರದ ಸಬ್‍ಜೈಲಿನಲ್ಲಿ ಖೈದಿಗಳ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ವಿಚಾರಣಾಧೀನ ಖೈದಿಗಳ ಹತ್ಯೆಯಾಗಿದೆ. ಮಾಡೂರ್ ಇಸುಬು ಮತ್ತು ಗಣೇಶ್ ಶೆಟ್ಟಿ  ಸೋಮವಾರ ಬೆಳಗ್ಗೆ ಹತರಾದರು ಎಂದು ಜೈಲು ಮೂಲಗಳು ತಿಳಿಸಿವೆ. ಮಾಡೂರ್ ಇಸುಬು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರನಾಗಿದ್ದು, ಇತ್ತೀಚಿಗೆ ವಿದೇಶದಿಂದ ಕರೆತರಲಾಗಿತ್ತು. ಈತ ಬಿಜೆಪಿ ಮುಖಂಡ ಸುಖಾನಂದ ಶೆಟ್ಟಿ ಹತ್ಯೆ, ಕ್ಯಾಂಡಲ್ ಸಂತು ಹತ್ಯೆ ಮೊದಲಾದ ಪ್ರಕರಣ ಗಳಲ್ಲಿ ಭಾಗಿಯಾಗಿದ್ದ. ಅಕಾಶಭವನ್ ಶರಣ್ ತಂಡದ ಖೈದಿಗಳ ತಂಡದಿಂದ ಈ ಕೃತ್ಯ ನಡೆದಿದೆ. ಭೂಗತ ಪಾತಕಿ ವಿಕ್ಕಿ […]

ರಾಜಶ್ರೀಯೊಂದಿಗೆ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾರ್ತಿಕ್ ಗೌಡ

Saturday, October 31st, 2015
karthik Gowda

ಕುಶಾಲನಗರ : ಕೇಂದ್ರ ಕಾನೂನು ಸಚಿವ ಡಿ.ವಿ ಸದಾನಂದ ಗೌಡರ ಮಗ ಕಾರ್ತಿಕ್ ಗೌಡ ಅವರು ಉದ್ಯಮಿ ಕೂಡಕಂಡಿ ನಾಣಯ್ಯ ಅವರ ಪುತ್ರಿ ರಾಜಶ್ರೀ(ಸ್ವಾತಿ)ಯೊಂದಿಗೆ ಸಪ್ತಪದಿ ತುಳಿಯುವ ಮೂಲಕ ಶುಕ್ರವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕುಶಾಲನಗರದ ರೈತ ಸಹಕಾರ ಭವನದ ಅಲಂಕೃತ ಭವ್ಯ ಮಂಟಪದಲ್ಲಿ ಶುಕ್ರವಾರ ಬೆಳಿಗ್ಗೆ 11.20 ಗಂಟೆಗೆ ಸಲ್ಲುವ ಧನುರ್ ಲಗ್ನದ ಶುಭ ಘಳಿಗೆಯಲ್ಲಿ ಕಾರ್ತಿಕ್ ಗೌಡ ಅವರು ರಾಜಶ್ರೀಗೆ ಮಾಂಗಲ್ಯಧಾರಣೆ ಮಾಡಿದರು. ರಾಜ್ಯಪಾಲ ವಜುಭಾಯಿ ವಾಲಾ, ಕೇಂದ್ರ ಸಚಿವೆ ಮೇನಕಾ ಗಾಂಧಿ, ಯಡಿಯೂರಪ್ಪ, […]

ಹಿರಿಯ ಪೊಲೀಸ್‌ ಅಧಿಕಾರಿಗಳ ಜತೆ ದ.ಕ. ಕಾನೂನು ಸುವ್ಯವಸ್ಥೆ ಬಲಪಡಿಸುವ ಬಗ್ಗೆ ಚರ್ಚೆ

Friday, October 30th, 2015
DK Police need strengthen in Law and order

ಮಂಗಳೂರು: ರಾಜ್ಯದ ಹಿರಿಯ ಪೊಲೀಸ್‌ ಅಧಿಕಾರಿಗಳ ಜತೆ ಸಚಿವ ರಮಾನಾಥ ರೈ ಅವರು ಬೆಂಗಳೂರಿನ ತನ್ನ ಕಚೇರಿಯಲ್ಲಿ ಸಭೆ ನಡೆಸಿ ದ.ಕ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಬಲಪಡಿಸುವ ಬಗ್ಗೆ ಚರ್ಚೆ ನಡೆಸಿದರು. ಜಿಲ್ಲೆಯ ಪೊಲೀಸ್‌ ಇಲಾಖೆಯ ಸಮಗ್ರ ಅಭಿವೃದ್ಧಿ, ಕಾನೂನು ಸುವ್ಯವಸ್ಥೆ ಬಲಪಡಿಸುವುದು, ಭೂಗತ ಚಟುವಟಿಕೆಗಳನ್ನು ಮಟ್ಟಹಾಕುವುದು, ಜಿಲ್ಲೆಯಾದ್ಯಂತ ವಿವಿಧ ಸೂಕ್ಷ್ಮ ಸ್ಥಳಗಳಲ್ಲಿ ಸಿಸಿ ಕೆಮರಾ ಅಳವಡಿಕೆ, ಸೈಬರ್‌ ಪೊಲೀಸ್‌ ಠಾಣೆ ಪ್ರಾರಂಭ, ಜಿಲ್ಲೆಗೆ ಹೆಚ್ಚುವರಿ ಪೊಲೀಸ್‌ ಸಿಬಂದಿ ನೇಮಕ, ಕೋಮುಸೌಹಾರ್ದ ಸಭೆಗಳನ್ನು ಏರ್ಪಡಿಸುವುದು ಹಾಗೂ ಜಿಲ್ಲಾ […]

ಮಂಗಳೂರು ಸ್ಮಾರ್ಟ್ ಸಿಟಿ-ಸಾರ್ವಜನಿಕರ ಅಭಿಪ್ರಾಯ ಮುಖ್ಯ- ಗೋಪಾಲಕೃಷ್ಣ

Friday, October 30th, 2015
N Gopalakrishna

ಮ೦ಗಳೂರು : ಮಂಗಳೂರು ನಗರವನ್ನು ಸ್ಮಾರ್ಟ್ ಸಿಟಿ ಯಾಗಿ ಘೋಷಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ, ಈ ನಿಟ್ಟಿನಲ್ಲಿ ಮಂಗಳೂರಿನ ನಾಗರೀಕರ ಅಭಿಪ್ರಾಯಗಳನ್ನು ಸಂಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಜರೂರಾಗಿ ಕಳುಹಿಸಬೇಕಾದ ಅಗತ್ಯತೆ ಇದೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾದ ಹೆಚ್.ಎನ್ ಗೋಪಾಲಕೃಷ್ಣ ಅವರು ಗುರುವಾರ ಈ ಸಂಬಂಧ ಪಾಲಿಕೆಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹಾಜರಿದ್ದ ಮಂಗಳೂರು ನಗರದ ಎಲ್ಲಾ ಪದವಿಪೂರ್ವ/ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರಿಗೆ ತಿಳಿಸಿದರು. ಸಾರ್ವಜನಿಕರ ಅಭಿಪ್ರಾಯ ಸಂಗ್ರಹಣೆಗೆ ನಗರದ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು ತಮ್ಮ […]