ಕರಾವಳಿ ಕಾಲೇಜಿಗೆ ಬಿ.ಸಿ.ಎ ಪದವಿ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ

Monday, June 16th, 2014
Ganesh rao

ಮಂಗಳೂರು : ನಗರದ ಕೊಟ್ಟಾರ ಚೌಕಿ ಸಮೀಪದಲ್ಲಿರುವ ಅಂತರಾಷ್ಟ್ರೀಯ ಖ್ಯಾತಿಯ ಪ್ರತಿಷ್ಠಿತ ಕರಾವಳಿ ಕಾಲೇಜಿಗೆ ಎಪ್ರಿಲ್ 2014ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಅಂತಿಮ ವರ್ಷ (6ನೇ ಸೆಮಿಸ್ಟರ್) ಬಿ.ಸಿ.ಎ ಪದವಿ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ಬಂದಿರುತ್ತದೆ. ಈ ವಿಶೇಷ ಸಾಧನೆಗಾಗಿ ಕಾಲೇಜಿನ ವಿದ್ಯಾರ್ಥಿ ವೃಂದ ಮತ್ತು ಅಧ್ಯಾಪಕ ವೃಂದವನ್ನು ಕಾಲೇಜಿನ ಆಡಳಿತ ಮಂಡಳಿ ಜಿ.ಆರ್ ಎಜ್ಯುಕೇಶನ್ ಟ್ರಸ್ಟ್ (ರಿ.)ನ ಅಧ್ಯಕ್ಷರಾಗಿರುವ ಶ್ರೀ ಎಸ್. ಗಣೇಶ್ ರಾವ್ ಇವರು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ. ಕರಾವಳಿ ಕಾಲೇಜಿನ ಬಹತೇಕ ಹೆಚ್ಚಿನ […]

ನಿಮ್ಮ ಗ್ರಾಮದಲ್ಲಿ ರುದ್ರಭೂಮಿ ಕೊರತೆಯೇ? ತಹಶೀಲ್ದಾರರಿಗೆ ಮನವಿ ಸಲ್ಲಿಸಿ-ಎ.ಬಿ.ಇಬ್ರಾಹಿಂ

Monday, June 16th, 2014
Ibrahim

ಮಂಗಳೂರು : ಮನುಷ್ಯ ಬದುಕಿದ್ದಾಗ ಯಾವರೀತಿ ಗೌರವಾದರಗಳಿಂದ ಬದುಕು ಸಾಗಿಸುವನೋ ಅದೇ ರೀತಿ ಅವರು ಸತ್ತಾಗಲು ಅವರ ಪಾರ್ಥಿವ ಶರೀರವನ್ನು ಗೌರವಾದರಗಳಿಂದ ಮುಕ್ತಿ ಕಾಣಿಸಬೇಕು. ಇದಕ್ಕಾಗಿ ಎಲ್ಲಾ ಗ್ರಾಮಗಳಲ್ಲಿ ರುದ್ರಭೂಮಿ ಇರಲೇಬೇಕು. ಅದ್ದರಿಂದ ದ.ಕ.ಜಿಲ್ಲೆಯ ಎಲ್ಲಾ ತಹಶೀಲ್ದಾರರು ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ರುದ್ರಭೂಮಿ ಕೊರತೆ ಬಗ್ಗೆ ವಿವರವಾದ ವರದಿಯೊಂದನ್ನು ಸಿದ್ದಪಡಿಸಲು ರುದ್ರಭೂಮಿ ಕೊರತೆ ಇರುವ ಗ್ರಾಮಸ್ಥರು ಕೂಡಲೇ ಮನವಿಗಳನ್ನು ಆಯಾ ತಹಶೀಲ್ದಾರರಿಗೆ ನೀಡುವಂತೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಸೂಚಿಸಿದ್ದಾರೆ. ಅವರು ಇಂದು ತಮ್ಮ ಕಚೇರಿಯಲ್ಲಿ ಜಿಲ್ಲೆಯ ಕಂದಾಯಾಧಿಕಾರಿಗಳ ಸಭೆ […]

ಸಹಾಯಕ ಪೋಲೀಸ್ ಉಪನಿರೀಕ್ಷಕ ಕೆ.ಆನಂದ ಮತ್ತು ಪತ್ನಿ ಕುಸುಮ ಅವರಿಗೆ ಬೀಳ್ಕೋಡುಗೆ

Monday, June 16th, 2014
Bantwal Police

ಬಂಟ್ವಾಳ: 41 ವರ್ಷಗಳ ಕಾಲ ವಿವಿಧ ಠಾಣೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸಹಾಯಕ ಪೋಲೀಸ್ ಉಪನಿರೀಕ್ಷಕ ಕೆ.ಆನಂದ ಮತ್ತು ಪತ್ನಿ ಕುಸುಮ ಅವರಿಗೆ ಶ್ರೀ ಅನ್ನಪೂಣೇಶ್ವರೀ ದೇವಸ್ಥಾನದ ಆಡಳಿತ ಸಮಿತಿಯ ವತಿಯಿಂದ ಬೀಳ್ಕೋಡುಗೆ ಸಮಾರಂಭ ದೇವಸ್ಥಾನದಲ್ಲಿ ನಡೆಯಿತು. ಈ ಸಂದರ್ಭ ಬಂಟ್ವಾಳ ನಗರಠಾಣಾ ಉಪನಿರೀಕ್ಷಕ ನಂದಕುಮಾರ್, ಸಮಿತಿಯ ಅಧ್ಯಕ್ಷ ಸೇಸಪ್ಪ ಕೋಟ್ಯಾನ್, ಶ್ರೀ ರಕ್ತೇಶ್ವರೀ ದೇವಸ್ಥಾನದ ಆಡಳಿತ ಮೋಕ್ತೇಸರ ಗೋಪಾಲ ಸುವರ್ಣ, ಪ್ರಕಾಶ್ ಕಾರಂತ, ಜನಾರ್ಧನ ಆಚಾರ್ಯ, ಪ್ರಮುಖರಾದ ಜಗನ್ನಾಥ ಶೆಟ್ಟಿ, ಕೇಪು ಗೌಡ, ಕೃಷ್ಣ […]

ಮುಂಬಯಿಯಲ್ಲಿನ ತುಳುವರೇ ಭಿನ್ನರು: ನಿಟ್ಟೆ ಶಶಿಧರ ಶೆಟ್ಟಿ

Sunday, June 15th, 2014
Tulu Okkoota Meeting

ಮುಂಬಯಿ :ಅಖಿಲ ಭಾರತ ತುಳು ಒಕ್ಕೂಟದ (ಅಭಾತುಒ) ಮುಂಬಯಿ ಸಮಿತಿಯು ಬೆಳ್ಳಿಹಬ್ಬದ ಸವಿನೆನಪಿನ `ತುಳುಪರ್ಬ-2014’ಸಂಭ್ರಮದ ನಿಮಿತ್ತ ಇಂದಿಲ್ಲಿ ಆದಿತ್ಯವಾರ ಅಪರಾಹ್ನ ಮಾಟುಂಗಾ ಪಶ್ಚಿಮದಲ್ಲಿನ ಕರ್ನಾಟಕ ಸಂಘ ಮುಂಬಯಿ ಇದರ ಸಮರಸ ಭವನದಲ್ಲಿ ಪೂರ್ವಭಾವಿ ಸಭೆ ನಡೆಸಿತು. ಒಕ್ಕೂಟದ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ನಿಟ್ಟೆ ಶಶಿಧರ ಶೆಟ್ಟಿ ಮತ್ತು ತುಳು ಕೂಟ ಮೂಡಬಿದ್ರೆ ಇದರ ಕಾರ್ಯಾಧ್ಯಕ್ಷ ಚಂದ್ರಹಾಸ ದೇವಾಡಿಗ, ತುಳು ಕೂಟ ಬೊಂಬಾಯಿ ಕಾರ್ಯಾಧ್ಯಕ್ಷ ತೋನ್ಸೆ ಜಯಕೃಷ್ಣ ಎ.ಶೆಟ್ಟಿ, […]

ಕಲುಬುರ್ಗಿಯವರ ಅವಹೇಳನಕಾರಿ ಹೇಳಿಕೆಗೆ ಖಂಡನೆ- ಕಲ್ಕೂರ

Sunday, June 15th, 2014
Kulkura

ಮಂಗಳೂರು : ಪ್ರಾಚೀನ ಕಾಲದಿಂದ ಆರಾಧಿಸಿಕೊಂಡು ಬರುತ್ತಿರುವ ಮೂರ್ತಿ ಪೂಜೆ ಬಗ್ಗೆ ಅವಹೇಳನಕಾರಿಯಾದ ಹೇಳಿಕೆಯನ್ನು ನೀಡಿದ ಪ್ರೊ. ಎಂ. ಎಂ. ಕಲುಬುರ್ಗಿಯವರ ಪತ್ರಿಕಾ ವರದಿಯನ್ನು ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಹಾಗೂ ಸದಸ್ಯರು ಖಂಡತುಂಡವಾಗಿ ಖಂಡಿಸಿರುತ್ತಾರೆ. ಯಾವಾಗಲೋ ಎಲ್ಲೊ ಬರೆದ ಅನಂತಮೂರ್ತಿ ಲೇಖನವನ್ನು ಎತ್ತಿ ಹಿಡಿದು ತನ್ನ ಸ್ವಂತದ್ದಷ್ಟನ್ನು ಸೇರಿಸಿ ಅಗ್ಗದ ಪ್ರಚಾರಕ್ಕಾಗಿ ಇಂದು ಹೇಳಿಕೆ ನೀಡ ಬೇಕಾದ ಅಗತ್ಯವಿರಲಿಲ್ಲ. ಇದು ಕೋಟಿ ಕೋಟಿ ಆಸ್ತಿಕ ಬಂಧುಗಳಿಗೆ ಘಾಸಿ ಉಂಟುಮಾಡುವ ತುಚ್ಛ […]

ಶ್ರೀ. ಧ. ಮಂ. ಆಂಗ್ಲ ಮಾಧ್ಯಮ ಶಾಲೆಯ ಆದಿತ್ಯ ಮತ್ತು ದರ್ಶನ್ ಗೆ ತಾಲೂಕು ಮಟ್ಟದ ಪ್ರಜ್ಞಾ ಸಾಧಕ ಪ್ರಶಸ್ತಿ

Sunday, June 15th, 2014
Dharshan Aditya

ಧರ್ಮಸ್ಥಳ: : ಪ್ರಸಕ್ತ 2013-14 ವರ್ಷದ ಸುಳ್ಯದ ಪ್ರಜ್ಞಾ ಎಜ್ಯುಕೇಶನ್ ಟ್ರಸ್ಟ್ ನಡೆಸಿದ ಸದಾ ಸಿದ್ದರಾಗಿರೋಣ ರಾಜ್ಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಧರ್ಮಸ್ಥಳದ ಶ್ರೀ. ಧ. ಮಂ. ಆಂಗ್ಲ ಮಾಧ್ಯಮ ಶಾಲೆಯ 7 ನೇ ತರಗತಿಯ ವಿದ್ಯಾರ್ಥಿ ದರ್ಶನ್ ಭಾಗವಹಿಸಿದ್ದು, ಕಳೆದ ಸಾಲಿನ 6ನೇ ತರಗತಿಯ ಪರೀಕ್ಷೆಯಲ್ಲಿ ತಾಲೂಕು ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ. ಇವರು ಜೂನ್ 15 ಭಾನುವಾರದಂದು ಲಯನ್ಸ್ ಸೇವಾ ಸದನ, ಸುಳ್ಯದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ 2 ಸಾವಿರ ರೂಪಾಯಿ ವಿದ್ಯಾರ್ಥಿ ವೇತನ […]

ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಪ್ರತಿಭಾ ಪುರಸ್ಕಾರ

Sunday, June 15th, 2014
Ramakrishna school

ಮಂಗಳೂರು: ಬಂಟ್ಸ್ ಹಾಸ್ಟೆಲ್ನಲ್ಲಿರುವ ಶ್ರೀ ರಾಮಕೃಷ್ಣ ಪ್ರೌಢ ಶಾಲೆಯಲ್ಲಿ 2013-14ರ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೇಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ 34 ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಶಾಲಾ ವತಿಯಿಂದ ಪುರಸ್ಕರಿಸಲಾಯಿತು. ಎ.ಬಿ.ಶೆಟ್ಟಿ ಸಭಾಂಗಣದಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಕೆ.ಅಜಿತ್ಕುಮಾರ್ ರೈ ಮಾಲಾಡಿ, ಕಾರ್ಯದರ್ಶಿಗಳಾದ ಮೇಘನಾಥ ಶೆಟ್ಟಿ, ಖಜಾಂಚಿ ಮನಮೋಹನ ಶೆಟ್ಟಿಯವರು ಆಗಮಿಸಿ, ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಸನ್ಮಾನಿಸಿದರು. ಹಾಗು ತಮ್ಮ ಭಾಷಣದಲ್ಲಿ ವಿದ್ಯಾರ್ಥಿಗಳ ಸಾಧನೆಯನ್ನು ಪ್ರಶಂಸಿಸಿದರು. ವೇದಿಕೆಯಲ್ಲಿ ಶಿಕ್ಷಕ ರಕ್ಷಕ […]

ಹೈಬ್ರಿಡ್ ಬೈಕ್ ವಿದ್ ಟು ವೀಲ್ ಡ್ರೈವ್ ಕರಾವಳಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ಅಪೂರ್ವ ಸಾಧನೆ

Friday, June 13th, 2014
Karavali College

ಮಂಗಳೂರು : ನಗರದ ನೀರುಮಾರ್ಗದಲ್ಲಿರುವ ಪ್ರತಿಷ್ಠಿತ ಕರಾವಳಿ ಇನ್ಸ್ಪಿಟ್ಯೂಟ್ ಆಫ್ ಟೆಕ್ನಾಲಜಿಯ ಅಂತಿಮ ವರ್ಷ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಸುಬಿನ್ ಡಿ ತಂಬಿ ಹಾಗೂ ಅನಜು ಐಸಾಕ್ ಇವರು, ಪ್ರೋ. ಪಿ. ರಮೇಶ್ ಕುಮಾರ್ ಇವರ ಮಾರ್ಗದರ್ಶನದಲ್ಲಿ ವಿಶಿಷ್ಟ ರೀತಿಯ ಆಧುನಿಕ ದ್ವಿಚಕ್ರ ವಾಹನ ‘ಹೈಬ್ರಿಡ್ ಬೈಕ್ ವಿದ್ ಟು ವೀಲ್ ಡ್ರೈವ್’ವನ್ನು ನಿರ್ಮಿಸುವ ಮೂಲಕ ದ್ವಿಚಕ್ರ ವಾಹನಗಳ ಯುಗದಲ್ಲಿ ಹೊಸ ಆಯಾಮವನ್ನು ಸೃಷ್ಟಿಸಿದ್ದಾರೆ. ಈ ದ್ವಿಚಕ್ರ ವಾಹನದಲ್ಲಿ ಗ್ರಾಹಕರಿಗೆ ಎರಡು ಆಯ್ಕೆಗಳಿದ್ದು, ಇದು ಪೆಟ್ರೋಲ್ […]

ನರನಾರಾಯಣನಾಗುವ ಏಕೈಕ ಭೂಮಿ ಭಾರತ : ಪ್ರಭಾಕರ ಭಟ್

Friday, June 13th, 2014
Rama Vidya Kendra Kalladka

ಬಂಟ್ವಾಳ : ಒಳ್ಳೆಯ ಚಿಂತನೆಗಳು ಯೋಜನೆಗಳನ್ನು ಮನಸ್ಸಿನಲ್ಲಿ ತುಂಬಿಕೊಂಡು ಅದೆಲ್ಲವೂ ದೇಶಕ್ಕೆ ಸಮರ್ಪಿತವಾದಾಗ ಅದರಿಂದ ನಮಗೂ ಒಳಿತೇ ಸಂಭವಿಸುತ್ತದೆ. ನಾವು ಯಾವುದೇ ವೃತ್ತಿಯಲ್ಲಿದ್ದರೆ ನಮ್ಮ ತನುಮನ ಧನ ದೇಶಕ್ಕೆ ಸಮರ್ಪಿತವಾದಾಗ ನಿಜವಾಗಿ ನಾವು ತೃಪ್ತರಾಗಲು ಸಾಧ್ಯ ಎಂದು ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ಡಾ| ಪ್ರಭಾಕರ ಭಟ್ ಹೇಳಿದರು. ಅವರು ಶ್ರೀರಾಮ ಪದವಿ ಪೂರ್ವ ವಿದ್ಯಾಲಯದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ‘ಆಗತ ಸ್ವಾಗತ’ ಇದರಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಾ, ಪರೀಕ್ಷೆ ,ಅಂಕಗಳು ವಿದ್ಯಾಭ್ಯಾಸದ ಒಂದು ಭಾಗವಾದರೆ […]

ಆಶಾಲತಾ ನಾಪತ್ತೆ ಪ್ರಕರಣ: ಬಂಟ್ವಾಳ ಪೊಲೀಸರಿಗೆ ಅಭಿನಂದನೆ

Friday, June 13th, 2014
Bantwal Police

ಬಂಟ್ವಾಳ: ಪೋಲೀಸರು ಯಾವುದೇ ಒತ್ತಡಕ್ಕೆ ಒಳಗಾಗದೇ ತಾಳ್ಮೆಯಿಂದ ಕೆಲಸ ಮಾಡಿದರೆ ಯಾವುದೇ ಪ್ರಕರಣವನ್ನು ಬೇಧಿಸುತ್ತಾರೆ, ಅವರಿಗೆ ಸಾರ್ವಜನಿಕರು ಕೂಡಾ ಸಹಾಯ ಮಾಡಬೇಕು ಎಂದು ಹಿಂದುಳಿದ ವರ್ಗ ಆಯೋಗದ ಸದಸ್ಯ ಎಂ. ತುಂಗಪ್ಪ ಬಂಗೇರ ಹೇಳಿದರು. ಅವರು ಬಂಟ್ವಾಳ ವೃತ್ತ ನಿರೀಕ್ಷಕ ಕಚೇರಿಯಲ್ಲಿ ಸರಪಾಡಿ ಅಪ್ರಾಪ್ತೆ ಆಶಾಲತಾ ನಾಪತ್ತೆ ಪ್ರಕರಣಕ್ಕೆ ಸಂಬಂದಿಸಿದಂತೆ ಆರೋಪಿಗಳನ್ನು ಬಂಧಿಸಿದ ವೃತ್ತ ನಿರೀಕ್ಷಕ ಬೆಳ್ಳಿಯಪ್ಪ ಗ್ರಾಮಾಂತರ ಠಾಣಾ ಉಪನೀರೀಕ್ಷಕ ನಾಗರಾಜ್ ಮತ್ತು ಅವರ ತಂಡಕ್ಕೆ ಅಭಿನಂದನೆ ಸಲ್ಲಿಸಿ ಮಾತನಾಡಿದರು. ಸಾಕಷ್ಟು ಉಹಾಪೋಹಗಳಿಗೆ ಕಾರಣವಾಗಿದ್ದ ಪ್ರಕರಣಕ್ಕೆ […]