ಗ್ಯಾಸ್‌ಗೆ ಆಧಾರ್ ಗೊಡವೆ ಇಲ್ಲ

Tuesday, March 11th, 2014
Sylinder

ಮೈಸೂರು: ಅಡುಗೆ ಅನಿಲ ಸಿಲಿಂಡರ್ ಪಡೆಯಲು ‘ಆಧಾರ್’ ಇನ್ನು ಅಡ್ಡಿಯಾಗದು. ರಾಜ್ಯದೆಲ್ಲೆಡೆ ಸಬ್ಸಿಡಿ ಸಿಲಿಂಡರ್ ಗ್ರಾಹಕರ ಮನೆ ಬಾಗಿಲಿಗೆ ಬರಲಿದೆ. ಇದರ ಅರ್ಥ ಸಿಲಿಂಡರ್ ಏಜೆನ್ಸಿಗಳಿಗೆ ಆಧಾರ್ ಸಂಖ್ಯೆ ನೀಡಿ, ಅದನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡಬೇಕೆಂಬ ನಿಯಮ ಕೈಬಿಡಲಾಗಿದೆ. ಈ ನಿಯಮ ಆಧಾರ್ ಪೈಲಟ್ ಯೋಜನೆ ಜಾರಿಗೊಂಡ ರಾಜ್ಯದ ಮೂರು ಜಿಲ್ಲೆಗಳಾದ ಮೈಸೂರು, ತುಮಕೂರು ಮತ್ತು ಧಾರವಾಡ ಜಿಲ್ಲೆಗಳಿಗೂ ಅನ್ವಯವಾಗಿದೆ. ಪ್ರತಿಯೊಬ್ಬ ಗ್ರಾಹಕ ವರ್ಷಕ್ಕೆ 11 ಸಿಲಿಂಡರ್‌ಗಳನ್ನು ಪಡೆಯಬಹುದಾಗಿದ್ದು, ಪ್ರತಿ ಸಿಲಿಂಡರ್‌ಗೆ 423 ರೂ. […]

ಮಂಗಳೂರು ವಿಮಾನ ನಿಲ್ದಾಣದಲ್ಲಿ ಚಿನ್ನ ವಶ

Tuesday, March 11th, 2014
Mangalore-Airport

ಮಂಗಳೂರು: ಬಜಪೆ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ರು.30,60,398 ಮೌಲ್ಯದ ಒಂದು ಕೆ.ಜಿ. 130 ಗ್ರಾಂ ಚಿನ್ನವನ್ನು ವಶಪಡಿಸಿ ಕೊಂಡಿದ್ದಾರೆ. ಕಾಸರಗೋಡಿನ ಮಹ ಮ್ಮದ್ ಕುಂಞÂ ಎಂಬಾತ ದುಬಾಯಿ ಯಿಂದ ಮಂಗಳೂರಿಗೆ ಜೆಟ್ ಏರ್‍ವೇಸ್‍ನಲ್ಲಿ ಆಗಮಿಸಿದ್ದು, ಈ ಸಂದ ರ್ಭದಲ್ಲಿ ಚಿನ್ನವನ್ನು ಕಳ್ಳಸಾಗಾಟ ಮಾಡುತ್ತಿದ್ದ. ಆರೋಪಿಯನ್ನು ಬಂಧಿಸಿ ಮುಂದಿನ ತನಿಖೆ ನಡೆಸಲಾಗುತ್ತಿದೆ.

ಗುಜರಾತಿಗೆ ಹೋಗಿ ಜನಪ್ರಿಯತೆ ಕಳೆದುಕೊಂಡ ಕೇಜ್ರಿವಾಲ್

Tuesday, March 11th, 2014
Arvind-Kejriwa

ಅಹಮದಾಬಾದ್: ಇತ್ತೀಚೆಗೆ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲಾ ಅವರು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಮುಖತಃ ಭೇಟಿಯಾಗಲು ಗುಜರಾತಿಗೆ ಹೋಗಿದ್ದರಲ್ಲ. ಅದರ ಪ್ರಭಾವ/ ಪರಿಣಾಮ ಗೋಚರವಾಗಿದೆ. ಆದರೆ ಅದು ಅವರಿಗೇ ಮುಳುವಾಗಿದೆ. ಕಳೆದ ವಾರ ನಾಲ್ಕು ದಿನಗಳ ಕಾಲ ಗುಜರಾತಿನಲ್ಲಿ ಅಡ್ಡಾಡಿದ ಅರವಿಂದ್ ಕೇಜ್ರಿವಾಲಾ ಭಾರಿ ಯಶಸ್ಸು ಸಾಧಿಸಿದರು ಎಂದು AAP ಬೆಂಬಲಿಗರು ಹೇಳಿಕೊಂಡಿದ್ದರೆ ಅವರ ಟೀಕಾಕಾರರು ಅದೊಂದು ದೊಡ್ಡ ಫ್ಲಾಪ್ ಷೋ ಎಂದು ಜರಿದಿದ್ದಾರೆ. ಇನ್ನು, ಟ್ವಿಟ್ಟರ್ ಮೂಲಕ ನಡೆದಿರುವ […]

ವೀರಪ್ಪ ಮೊೈಲಿಗೆ ಟಿಕೆಟ್ ನೀಡದಂತೆ ಸೋನಿಯಾಗೆ ಮನಮೋಹನ್ ಸಿಂಗ್ ಪತ್ರ

Tuesday, March 11th, 2014
Manmohan-Singh

ಬೆಂಗಳೂರು: ಎತ್ತಿನಹೊಳೆ ಯೋಜನೆಯನ್ನು ಸವಾಲಾಗಿ ಪರಿಗಣಿಸಿ ಶಂಕುಸ್ಥಾಪನೆ ನೆರವೇರಿಸಿದ ಕೇಂದ್ರ ಸಚಿವ ಎಂ. ವೀರಪ್ಪ ಮೊೈಲಿ ಚುನಾವಣೆಯಲ್ಲಿ ಸ್ಪರ್ಧಿಸುವುದೇ ಅನುಮಾನವಾಗಿದ್ದು, ಖುದ್ದು ಪ್ರಧಾನಿ ಡಾ.ಮನಮೋಹನ್ ಸಿಂಗ್ ಟಿಕೆಟ್ ನೀಡದಂತೆ ಸೋನಿಯಾಗಾಂಧಿಗೆ ಪತ್ರ ಬರೆದಿರುವುದು ಬೆಳಕಿಗೆ ಬಂದಿದೆ. ರಿಯಲಾನ್ಸ್ ಹಗರಣದಲ್ಲಿ ವೀರಪ್ಪ ಮೊೈಲಿ ವಿರುದ್ಧ ದೆಹಲಿ ಸರ್ಕಾರ ಎಫ್‍ಐಆರ್ ದಾಖಲಿಸಿರು ವುದು ಒಂದು ಕಾರಣವಾದರೆ. ಗುಪ್ತದಳದ ಪ್ರಕಾರ ಮೊೈಲಿ ಕ್ಷೇತ್ರದ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ ಎಂಬ ವರದಿ ಸಲ್ಲಿಕೆಯಾಗಿರುವುದು ಮತ್ತೊಂದು ಕಾರಣ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಮೊದಲ […]

ಸಿದ್ದರಾಮಯ್ಯ ಸಮಾಜವನ್ನು ಅಚ್ಚುಕಟ್ಟಾಗಿ ಒಡೆಯುತ್ತಿದ್ದಾರೆ

Tuesday, March 11th, 2014
HD-Deve-Gowda

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ಜಾತಿ ಸಮಾವೇಶವನ್ನೂ ಬಾಕಿ ಉಳಿಸಿಲ್ಲ. ಸಮಾಜವನ್ನು ಒಡೆಯುವ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ಹಿಂದುಳಿದ ವರ್ಗಗಳಲ್ಲಿನ ಸಣ್ಣ ಸಮಾಜಗಳನ್ನೂ ಭಾಗ ಮಾಡಿದ್ದಾರೆ. ಮಠಗಳಿಗೆ ಸಮಾಜದ ಹೆಸರಿನಲ್ಲಿ 50 ಲಕ್ಷ, ಒಂದು ಕೋಟಿ ಹಣ ನೀಡಿ ಅವರನ್ನೂ ವಿಭಜನೆ ಮಾಡಿದ್ದಾರೆ. ಇವರ ಉದ್ದೇಶ ಒಂದೇ- ಸಮಾಜ ಒಡೆಯುವುದು. ಹಿಂದುಳಿದವರನ್ನು ಬಾಳುವುದಕ್ಕೂ ಬಿಡುತ್ತಿಲ್ಲ. ಈ ಎಲ್ಲ ಸಮಾಜಗಳನ್ನು ಛಿದ್ರ ಛಿದ್ರ ಮಾಡಲು ಮುಂದಾಗಿದ್ದಾರೆ… ಮುಖ್ಯಮಂತ್ರಿ ಸಿದ್ದರಾಮಯ್ಯ ಜೆಡಿಎಸ್ ಸರ್ವನಾಶ ಮಾಡುತ್ತೇನೆ ಎಂದಿದ್ದಾರೆ. ಅವರ ಬಳಿ ಅಧಿಕಾರ […]

ಗೀತಾ ಸ್ಪರ್ಧೆಗೆ ಶಿವರಾಜ್ ಕುಮಾರ್ ಬೆಂಬಲ

Tuesday, March 11th, 2014
Geetha-Shivarajkumar

ಬೆಂಗಳೂರು: ಪತ್ನಿ ಗೀತಾ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ನನ್ನ ಬೆಂಬಲ ಇದೆ ಎಂದು ಖ್ಯಾತ ನಟ ಶಿವರಾಜ್ ಕುಮಾರ್ ಅವರು ಮಂಗಳವಾರ ಹೇಳಿದ್ದಾರೆ. ಇದರೊಂದಿಗೆ ಡಾ.ರಾಜ್ ಕುಟುಂಬದ ಸದಸ್ಯರೊಬ್ಬರು ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸುವುದು ಖಚಿತವಾಗಿದೆ. ಗೀತಾ ಸ್ಪರ್ಧೆಗೆ ನಮ್ಮ ಕುಟುಂಬ ವಿರೋಧವಿಲ್ಲ. ಅವರಿಗೆ ನನ್ನ ಹಾಗೂ ಕುಟುಂಬದ ಸಂಪೂರ್ಣ ಬೆಂಬಲ ಇದ್ದು, ಅಗತ್ಯ ಬಿದ್ದರೆ ತಾವು ತಮ್ಮ ಪತ್ನಿ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುವುದಾಗಿ ತಿಳಿಸಿದ್ದಾರೆ. ಗೀತಾ ಅವರ ಸ್ಪರ್ಧೆ ಕುರಿತು […]

ನಟಿ ವಿಂದ್ಯಾ ಆಸ್ಪತ್ರೆಯಿಂದ ಮನೆಗೆ

Monday, March 10th, 2014
Vindya

ಬೆಂಗಳೂರು: ಮಧುಮೇಹ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ‘ಮನದ ಮರೆಯಲ್ಲಿ’ ಚಿತ್ರದ ನಟಿ ವಿಂದ್ಯಾ ಬೌರಿಂಗ್ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಕಾರಣ ವಿಂದ್ಯಾಗೆ ಅಳವಡಿಸಲಾಗಿದ್ದ ವೆಂಟಿಲೇಟರ್‌ನ್ನು ಶನಿವಾರ ತೆಗೆಯಲಾಗಿತ್ತು. ಭಾನುವಾರ ಮಧ್ಯಾಹ್ನ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ವಿಂದ್ಯಾ ಅವರ ಆರೋಗ್ಯ ಇನ್ನಷ್ಟು ಸುಧಾರಿಸಬೇಕಿದೆ. ಹೀಗಾಗಿ ಮೂರು ದಿನ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ ಎಂದು ಮನದ ಮರೆಯಲ್ಲಿ ಚಿತ್ರದ ನಿರ್ದೇಶಕ ರಾಜೀವ್ ನೇತ್ರಾ ತಿಳಿಸಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ವಿಂದ್ಯಾ, ಜೀವನದಲ್ಲಿ […]

ಆರ್‌ಎಲ್‌ಡಿ ಪಕ್ಷ ಸೇರಿದ ಜಯಪ್ರದಾ, ಅಮರ್ ಸಿಂಗ್

Monday, March 10th, 2014
Jaya prada

ನವದೆಹಲಿ: ನಟಿ, ರಾಜಕಾರಣಿ ಜಯಪ್ರದಾ ಮತ್ತು ಸಮಾಜವಾದಿ ಪಕ್ಷದ ಮಾಜಿ ನೇತಾರ ಅಮರ್ ಸಿಂಗ್ ಅವರು ಸೋಮವಾರ ರಾಷ್ಟ್ರೀಯ ಲೋಕ ದಳ ಪಕ್ಷಕ್ಕೆ ಸೇರಿದ್ದಾರೆ. ಇವರಿಬ್ಬರನ್ನೂ ಆರ್‌ಎಡಿ ನಾಯಕ ಅಜಿತ್ ಸಿಂಗ್ ಸ್ವಾಗತಿಸಿದ್ದಾರೆ. ಆರ್‌ಎಲ್‌ಡಿಗೆ ಸೇರ್ಪಡೆಯಾದ ನಂತರ ಮಾತನಾಡಿದ ಅಮರ್ ಸಿಂಗ್,  ಚರಣ್ ಸಿಂಗ್ ಅವರು ಈ ದೇಶಕ್ಕೆ ಹೆಚ್ಚಿನ ಕೊಡುಗೆಗಳನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ. ಅದೇ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್‌ನ ಮೇಲೆ ವಾಗ್ದಾಳಿ ನಡೆಸಿದ ಅವರು ಉಭಯ ಪಕ್ಷಗಳು ಉತ್ತರ ಪ್ರದೇಶದ ವಿಭಜನೆಗೆ ಯಾವುದೇ […]

ಬೆಂಬಲಿಗರ ಬಂಡಾಯಕ್ಕೆ ಮಣಿದ ಬಿಎಸ್‌ವೈ, ರಾಜನಾಥ್ ಸಿಂಗ್‌ಗೆ ಪತ್ರ

Monday, March 10th, 2014
Yaddyurappa

ಬೆಂಗಳೂರು: ಕೆಜೆಪಿಯನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿ, ಮಾತೃ ಪಕ್ಷಕ್ಕೆ ಮರುಸೇರ್ಪಡೆಯಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಡೆಗೂ ತಮ್ಮ ಬೆಂಬಲಿಗರ ಬಂಡಾಯಕ್ಕೆ ಮಣಿದು, ಅತಂತ್ರವಾಗಿರುವ ತಮ್ಮ ಬೆಂಬಲಿಗರಿಗೆ ಸೂಕ್ತ ಸ್ಥಾನಮಾನ ನೀಡುವಂತೆ ಬಿಜೆಪಿ ಹೈಕಮಾಂಡ್‌ಗೆ ಒತ್ತಾಯಿಸಿದ್ದಾರೆ. ಈ ಸಂಬಂಧ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿರುವ ಯಡಿಯೂರಪ್ಪ, ಪತ್ರದಲ್ಲಿ ತಮ್ಮ ಬೆಂಬಲಿಗರಿಗೆ ಸೂಕ್ತ ಸ್ಥಾನಮಾನ ನೀಡುವಂತೆ ಮನವಿ ಮಾಡಿದ್ದಾರೆ. ಇತ್ತೀಚಿಗಷ್ಟೆ ಯಡಿಯೂರಪ್ಪ ಅವರ ಕೆಲವು ಬೆಂಬಲಿಗರನ್ನು ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿ, ಅವರ ವಿರುದ್ಧವೇ ಬಂಡಾಯವೆದ್ದಿದ್ದರು.

ಮಂಗಳೂರು ಮತ್ತೆ ಗುಂಡಿನ ದಾಳಿ

Monday, March 10th, 2014
Fire-Again

ಮಂಗಳೂರು: ಇಲ್ಲಿನ ಬಿಜೈ ನ್ಯೂ ರೋಡ್‌ನ‌ಲ್ಲಿರುವ ಭಾರತಿ ಡೆವಲಪರ್ಸ್ ಕಚೇರಿ ಮೇಲೆ ಅಪರಿಚಿತರಿಂದ ಗುಂಡಿನ ದಾಳಿ ನಡೆದಿರುವ ಘಟನೆ ಸೋಮವಾರ ವರದಿಯಾಗಿದೆ. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಅಪರಿಚಿತ ವ್ಯಕ್ತಿಗಳಿಬ್ಬರು ಕಚೇರಿಯೊಳಗೆ ನುಗ್ಗಿ ನೆಲದ ಮೇಲೆ ಗುಂಡಿ ಹಾರಿಸಿ ಪರಾರಿಯಾಗಿದ್ದಾರೆ ಎಂದು ಸಂಸ್ಥೆಯ ‌ಮಾಲಕ ಲೊಕನಾಥ ಶೆಟ್ಟಿ ಸ್ಥಳೀಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ದಾಳಿಯ ವೇಳೆ ಮಾಲಕರು ಕಚೇರಿಯಲ್ಲಿ ಇರಲಿಲ್ಲ ಎನ್ನಲಾಗಿದೆ. ಈ ಸಂಬಂಧ ಘಟನಾ ಸ್ಥಳಕ್ಕೆ ಮಂಗಳೂರು ಪೊಲೀಸ್‌ ಆಯುಕ್ತ ಹಿತೇಂದ್ರ ಭೇಟಿ […]