‘ರಿಯಾಲಿಟಿ ಷೊ’ಹಾಡಿಯ ಹೈದ ರಾಜೇಶನ ಕುಟುಂಬದ ಅರಣ್ಯರೋದನ

Friday, January 24th, 2014
Rajesh-Family

ಮೈಸೂರು: ‘ರಿಯಾಲಿಟಿ ಷೊ’ ಮೂಲಕ ರಾತ್ರೋರಾತ್ರಿ ಜನಪ್ರಿಯತೆ ಗಳಿಸಿ ಸಿನಿಮಾ ನಾಯಕ ನಟನೂ ಆಗಿ ದುರಂತ ಅಂತ್ಯ ಕಂಡ ‘ಜಂಗಲ್‌ ಜಾಕಿ’ ರಾಜೇಶನ ಕುಟುಂಬ ಅತ್ತ ಹಾಡಿಗೂ ಹೋಗ­ಲಾಗದೆ ಇತ್ತ ಮೈಸೂರಿ­ನಲ್ಲಿ­ಯೂ ನೆಲೆ ಕಂಡುಕೊಳ್ಳಲಾಗದೆ ಅಕ್ಷ­ರಶಃ ತ್ರಿಶಂಕು ಸ್ಥಿತಿ ಎದುರಿಸುತ್ತಿದೆ. ರಾಜೇಶನ ಜನಪ್ರಿಯತೆಯನ್ನೇ ಕಾಸಾ­ಗಿಸಿಕೊಳ್ಳಲು ಸಿನಿಮಾ ನಿರ್ಮಿಸಿ ಆತ­ನನ್ನು ನಾಯಕ ನಟನಾಗಿ ದುಡಿಸಿದ ನಿರ್ಮಾಪಕರು ನೀಡಿದ ಸಂಭಾವನೆಯ ಚೆಕ್‌ಗಳು ಬೌನ್ಸ್‌ ಆಗಿರುವ ಕಾರಣ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಕುಟುಂಬ ದಿನದ ತುತ್ತಿಗೂ ಪರದಾಡು­ವಂತಾಗಿದೆ. ಹಾಡಿಗೆ ಹೋದರೆ […]

ಹೈಫೈ ಎಂಜಿ, ಬ್ರಿಗೇಡ್ ರಸ್ತೆಯಲ್ಲಿ ಉಚಿತ ವೈಫೈ!

Friday, January 24th, 2014
Mohandas-Pai

ಬೆಂಗಳೂರು : ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಸಂಚರಿಸುವ ಜನರಿಗೆ ಸಿಹಿ ಸುದ್ದಿ ಕಾದಿದೆ, ಜ.24ರಿಂದ ಎರಡು ರಸ್ತೆಗಳಲ್ಲಿ ಉಚಿತ ವೈಫೈ ಸೇವೆ ಆರಂಭವಾಗಲಿದೆ. ಸಿಎಂ ಸಿದ್ದರಾಮಯ್ಯ ಸರ್ಕಾರ ಬಜೆಟ್ ಘೋಷಿಸಿದ್ದ ಈ ಯೋಜನೆ ಸದ್ಯ ಕಾರ್ಯರೂಪಕ್ಕೆ ಬರುತ್ತಿದೆ. `ನಮ್ಮ ವೈಫೈ` ಹೆಸರಿನಲ್ಲಿ ಈ ಸೇವೆ ಆರಂಭವಾಲಿದೆ. ಈ ಮಹತ್ವದ ಯೋಜನೆಗಾಗಿ ಸರ್ಕಾರ ಡಿ-ವಿಯೋಸ್ ಎಂಬ ಖಾಸಗಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಮುಂದಿನ ಹಂತದಲ್ಲಿ ಶಾಂತಿನಗರ, ಯಶವಂತಪುರ, ಕೋರಮಂಗಲ ಮುಂತಾದ ಬಿಎಂಟಿಸಿಯ ಟಿಟಿಎಂಸಿಯಲ್ಲಿಯೂ ವೈಫೈ ಯೋಜನೆ […]

ಹ್ಯಾಪಿ ಬರ್ತಡೇ ಅಜಯ್ ರಾವ್

Friday, January 24th, 2014
Ajay-Rao

ಬೆಂಗಳೂರುಃ  ಇಂದು ನಟ ಅಜಯ್ ರಾವ್ ಹುಟ್ಟು ಹಬ್ಬ.ಸ್ಯಾಂಡಲ್ ವುಡ್ ನ ಅತ್ಯಂತ ಮುದ್ದಾದ ನಟರಲ್ಲಿ ಅಜಯ್ ಕೃಷ್ಣ ರಾವ್ ಒಬ್ಬರು. ಹೆಚ್ಚಾಗಿ ಜನಕ್ಕೆ ತಿಳಿದಿರುವುದು ಅಜಯ್ ರಾವ್ ಹೆಸರಲ್ಲಿ.ಇವರು ತಮ್ಮ ಹೋಂಬ್ಯಾನರ್ ಆರಂಭ ಮಾಡುತ್ತಿದ್ದಾರೆ. ಅದನ್ನು ಇಂದು ಕನ್ನಡದ ಸ್ಟಾರ್ ನಟ ಪುನೀತ್ ರಾಜ್ ಕುಮಾರ್ ಅವರು ಲಾಂಚ್ ಮಾಡುತ್ತಿದ್ದಾರೆ. ಈ ಬ್ಯಾನರಿನ ಅಡಿಯಲ್ಲಿ ನಿರ್ಮಿತವಾಗುವ ಚಿತ್ರಗಳ ಬಗ್ಗೆ ತಿಳಿಸುತ್ತಾರೆ. ಜನವರಿ 24 ಅಂದರೆ ಇಂದು ಅವರ ಜನ್ಮದಿನ. ಅಜಯ್ ಬಹು ನಿರೀಕ್ಷಿತ,ಬೃಹತ್ ಕನಸಾದ ಶ್ರೀ […]

ಸುನಂದಾ ಸಾವಿನ ತನಿಖೆ ಕ್ರೈಮ್ ಬ್ರಾಂಚ್ ಪೊಲೀಸರಿಗೆ

Friday, January 24th, 2014
Sunanda-Pushkar

ನವದೆಹಲಿ: ಕೇಂದ್ರ ಸಚಿವ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರ ನಿಗೂಢ ಸಾವಿನ ತನಿಖೆಯನ್ನು ದೆಹಲಿ ಕ್ರೈಮ್ ಬ್ರಾಂಚ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಈ ಪ್ರಕರಣದಲ್ಲಿ ಒಳಗೊಂಡ ವಿವಿಧ ಅಂಶಗಳನ್ನು ಪರಿಗಣಿಸಿ ಈ ಪ್ರಕರಣನ್ನು ಕ್ರೈಮ್ ಬ್ರಾಂಚ್‌ಗೆ ಹಸ್ತಾಂತರಿಸಲಾಗಿದೆ. ಸುನಂದಾ ಸಾವಿನ ತನಿಖೆ ನಡೆಸಿದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಪ್ರಕರಣದ ಹತ್ಯೆ ಅಥವಾ ಆತ್ಮಹತ್ಯೆಯ ವಿವಿಧ ಕೋನಗಳನ್ನು ತನಿಖೆ ಮಾಡುವಂತೆ ಆದೇಶಿಸಿದ್ದಾರೆ.. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಔಷಧಿಯ ಅತಿಸೇವನೆಯಿಂದ ವಿಷಕಾರಿಯಾಗಿ ಸಾವನ್ನಪ್ಪಿದ್ದಾರೆಂದು ಹೇಳಲಾಗಿದೆ. ತರೂರ್ ಜತೆ […]

2005ಕ್ಕಿಂತ ಹಳೆಯ ನೋಟುಗಳನ್ನು ಮರಳಿ ಪಡೆಯುತ್ತಿರುವ ಆರ್‌ಬಿಐ

Friday, January 24th, 2014
500-1000-notes

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್‌ 2005ರ ಮಾರ್ಚ್ 31 ರಿಂದ ಹಳೆಯ ನೋಟುಗಳನ್ನು ಮರಳಿ ಪಡೆಯುವ ನಿರ್ಧಾರ ಕೈಗೊಂಡಿದೆ. ಮಾರ್ಚ 2014ರವರೆಗಿನ ಎಲ್ಲಾ ಹಳೆಯ ನೋಟುಗಳನ್ನು ಮರಳಿ ಪಡೆಯಲು ಆರ್‌‌ಬಿಐ ನಿರ್ಧರಿಸಿದೆ. ಎಪ್ರಿಲ್‌ ತಿಂಗಳಲ್ಲಿ ಜನರು ತಮ್ಮ ಹತ್ತಿರವಿರುವ ಹಳೆಯ ನೋಟುಗಳನ್ನು ಬ್ಯಾಂಕ್‌ಗಳಿಗೆ ನೀಡಿ ಹೊಸ ನೋಟುಗಳನ್ನು ಪಡೆಯಬಹುದು ಎಂದು ಆರ್‌‌ಬಿಐ ಮೂಲಗಳು ತಿಳಿಸಿವೆ. ಮುಂದಿನ ದಿನಗಳಲ್ಲಿ 2005ಕ್ಕಿಂತ ಹಳೆಯ ನೋಟುಗಳು ಚಲಾವಣೆಗೆ ಅವಕಾಶ ನೀಡುವುದಿಲ್ಲ ಎಂದರ್ಥವಲ್ಲ. ಜುಲೈ 2014ರ ನಂತರ ನಿಮ್ಮ ಹತ್ತಿರ 2005ಕ್ಕಿಂತ ಹಳೆಯ […]

ಶೂಟಿಂಗ್ ವೇಳೆ ಗಾಯಗೊಂಡ ಬಾಲಿವುಡ್ ಸೂಪರ್‌ಸ್ಟಾರ್ ಶಾರೂಕ್

Thursday, January 23rd, 2014
shahrukh-khan

ಮುಂಬೈ:ಬಾಲಿವುಡ್ ಸೂಪರ್‌ಸ್ಟಾರ್ ಶಾರುಕ್ ಖಾನ್ ಚಲನಚಿತ್ರವೊಂದರ ಚಿತ್ರೀಕರಣ ಸಂದರ್ಭದಲ್ಲಿ ಗಾಯಗೊಂಡ ಘಟನೆ ನಡೆದಿದೆ. ತಮ್ಮ ಮುಂಬರುವ ಚಿತ್ರ ‘ಹ್ಯಾಪಿ ನ್ಯೂ ಇಯರ್‌’ನಲ್ಲಿ ಖಾನ್ ಬ್ಯುಸಿಯಾಗಿದ್ದಾಗ ಗಾಯಗೊಂಡಿದ್ದು ಅವರನ್ನು ನಾನಾವತಿ ಆಸ್ಪತ್ರೆಗೆ ಒಯ್ಯಲಾಯಿತು. ಮುಂಬೈನ ಜುಹು ಪ್ರದೇಶದಲ್ಲಿ ಶೂಟಿಂಗ್ ನಡೆಸುತ್ತಿದ್ದಾಗ ಶಾರೂಕ್ ಮೈಮೇಲೆ ಬಾಗಿಲು ಉರುಳಿಬಿದ್ದಿದ್ದರಿಂದ ಕೈ, ಹಾಗು ಮುಖಕ್ಕೆ ಗಾಯವಾಗಿ ರಕ್ತ ಹರಿಯಲಾರಂಭಿಸಿತು. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಮುಂಬೈನ ಪಂಚತಾರಾ ಹೊಟೆಲ್‌ನಲ್ಲಿ ಶೂಟಿಂಗ್ ನಡೆಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಹ್ಯಾಪಿ ನ್ಯೂ ಇಯರ್ ಚಿತ್ರದಲ್ಲಿ ದೀಪಿಕಾ […]

ಬೆಂಗಳೂರಿನಲ್ಲಿ ಅತೀ ದೊಡ್ಡ ರಾಷ್ಟ್ರಧ್ವಜ ಉದ್ಘಾಟನೆ

Thursday, January 23rd, 2014
National-Flag

ಬೆಂಗಳೂರು: ಬೆಂಗಳೂರಿನಲ್ಲಿ ಇಂದು ಅತೀ ದೊಡ್ಡ ರಾಷ್ಟ್ರಧ್ವಜ ಉದ್ಘಾಟನೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಸ್ಟೀಲ್ ನಿಂದ ನಿರ್ಮಿತವಾದ 210 ಅಡಿಗಳ ಎತ್ತರದ ಅತೀ ದೊಡ್ಡ ದ್ವಜ ಸ್ತಂಭ. ಆ ಧ್ವಜ ಸ್ತಂಭದಲ್ಲಿ 48 ಅಡಿ ಉದ್ದ, 72 ಅಡಿ ಅಗಲದ, 35 ಕೆಜಿ ತೂಕದ ರಾಷ್ಟ್ರಧ್ವಜವನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಇಂದು ಉದ್ಘಾಟನೆ ಮಾಡಿದರು. ರಾಷ್ಟ್ರೀಯ ಸೇನಾ ಸ್ಮಾರಕದಲ್ಲಿ ಬಹುದೊಡ್ಡ ರಾಷ್ಟ್ರಧ್ವಜ ರಾರಾಜಿಸಿದೆ. ಈ ಸಮಾರಂಭದಲ್ಲಿ ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಹಾಜರಿದ್ದು,ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. […]

ಪಾತರಗಿತ್ತಿ ಪಕ್ಕ ಖ್ಯಾತಿ ಗಾಯಕ ಯಶವಂತ ಹಳಿಬಂಡಿ ವಿಧಿವಶ

Thursday, January 23rd, 2014
Yashwath-Halibandi

ಬೆಂಗಳೂರು : ‘ವರಕವಿ ಬೇಂದ್ರೆಯವರ ‘ಪಾತರಗಿತ್ತಿ ಪಕ್ಕ ನೋಡಿದ್ದೇನ ಅಕ್ಕ..’ ಹಾಡಿನ ಮೂಲಕ ಖ್ಯಾತಿ ಪಡೆದಿದ್ದ ಸುಗುಮ ಸಂಗೀತ ಕ್ಷೇತ್ರದ ಗಾಯಕ ಯಶವಂತ ಹಳಿಬಂಡಿ ಅವರು ಮಂಗಳವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಯಶವಂತ ಹಳಿಬಂಡಿ ಅವರ ಪಾರ್ಥೀವ ಶರೀರವನ್ನು ಬ್ಯಾಂಕ್ ಕಾಲೋನಿಯಲ್ಲಿರುವ ಅವರ ನಿವಾಸದಲ್ಲಿ ಇರಿಸಲಾಗಿದೆ. ನಂತರ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ಧಾರಾವಾಡದಲ್ಲಿ 1950, ಮೇ 25ರಂದು ಜನಿಸಿದ ಯಶವಂತ ಹಳಿಬಂಡಿ ಅವರು ಸುಗಮ ಸಂಗೀತ ಕ್ಷೇತ್ರದಲ್ಲಿ […]

ಲೊಕೇಶ್ ಬಿ.ಅವಿೂನ್ ದೊಡ್ಡಿಕಟ್ಟೆ ನಿಧನ

Wednesday, January 22nd, 2014
Lokesh-B.-Amin

ಮುಂಬಯಿ : ಮುಂಬಯಿಯಲ್ಲಿನ ಹೆಸರಾಂತ ಜೆಮಿನಿ ಟೈಲರ್ಸ  ಮಾಜಿ ಪಾಲುದಾರ, ಸುಪ್ರಸಿದ್ಧ ಹೈವೇ ಟೈಲರ್ಸ ನ ಮಾಲಕ ಲೊಕೇಶ್ ಬಿ. ಅವಿೂನ್ (86.) ಅಲ್ಪ ಕಾಲದ ಅನಾರೋಗ್ಯದಿಂದ ಮತ್ತು ವೃದ್ಧಾಪ್ಯದಿಂದ ಇಂದಿಲ್ಲಿ ಬುಧವಾರ (22.01.2014) ಮುಂಜಾನೆ ಘಾಟ್ಕೋಪರ್ನ ಆಶಿರ್ವಾದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮೃತರು ಮೂಲತಃ ಮಂಗಳೂರು ತಾಲೂಕಿನ ಬಜ್ಪೆ ದೊಡ್ಡಿಕಟ್ಟೆ ಮೂಲದವರಾಗಿದ್ದು, ಮುಂಬಯಿಯ ಮಾಟುಂಗದ ಮೊಗಲ್ ಲೇನ್ ನಿವಾಸಿಯಾಗಿದ್ದರು. ಲೊಕೇಶ್ ಅವಿೂನ್ ಅವರು ಭಾರತ್ ಕೋ.ಅಪರೇಟಿವ್ ಬ್ಯಾಂಕ್ ಮುಂಬಯಿ ಲಿಮಿಟೆಡ್ ಇದರ ಸ್ಥಾಪಕ ಸದಸ್ಯರಾಗಿದ್ದು, ಬಿಲ್ಲವರ ಎಸೋಸಿಯೇಶನ್ನ ಮುಂಬಯಿ ಇದರ ಸೇವಾದಳದ ಸಕ್ರೀಯ […]

ಜೀವವುಳಿಸಲು ಭಗವಂತನು ನೀಡಿದ ಅವಕಾಶವೇ ರಕ್ತದಾನ-ಕೊಂಡೆವೂರು ಶ್ರೀಗಳು

Wednesday, January 22nd, 2014
Kondevoor Math

ಮಂಗಳೂರು : ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಮ್ ಚಾರಿಟೇಬಲ್ ಟ್ರಸ್ಟ್ ಕೊಂಡೆವೂರು ನೇತೃತ್ವದಲ್ಲಿ ರಕ್ತನಿಧಿ ಕೇಂದ್ರ ಎ.ಜೆ.ಆಸ್ಪತ್ರೆ,ಎ.ಜೆ. ವೈದ್ಯಕೀಯ ಮಹಾವಿದ್ಯಾಲಯ ಮಂಗಳೂರು ಸಹಯೋಗದಲ್ಲಿ 19/01/2014 ಆದಿತ್ಯವಾರ ಜರಗಿದ ರಕ್ತದಾನ ಶಿಬಿರವನ್ನು ಪ.ಪೂ. ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಯವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಇಂದು ಬಡ ರೋಗಿಗಳಿಗೆ ರಕ್ತದ ಅವಶ್ಯಕತೆ ಬಹಳ ಇದೆ. ಇಂತಹ ಸಂದರ್ಭದಲ್ಲಿ ಭಗವಂತನು ನಮಗೆ ನೀಡಿದ ರಕ್ತದಾನದ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಜೀವವುಳಿಸಲು ನೆರವಾಗಬೇಕಿದೆ ಮಾತ್ರವಲ್ಲ ಶ್ರೀ ನಿತ್ಯಾನಂದ ಯೋಗಾಶ್ರಮದ ಪಂಚಮುಖೀ […]