ದ.ಕ ಜಿಲ್ಲೆಯಲ್ಲಾದ ಮಹಿಳೆಯರ ಅಸಹಜ ಸಾವುಗಳ ಸಮಗ್ರ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

Thursday, October 10th, 2013
Protest

ಮಂಗಳೂರು : ದ.ಕ ಜಿಲ್ಲೆಯಲ್ಲಾದ ಮಹಿಳೆಯರ ಅಸಹಜ ಸಾವುಗಳ ಸಮಗ್ರ ತನಿಖೆಗೆ ಆಗ್ರಹಿಸಿ ಹಾಗೂ ಉಜಿರೆಯ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸಿಬಿ‌ಐ ತನಿಖೆಗೆ ಒತ್ತಾಯಿಸುವಂತೆ ವಿವಿಧ ಸಂಘಟನೆಗಳ ವತಿಯಿಂದ ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಯಿತು. ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷರಾದ ಟಿ.ಎನ್.ಸೀಮಾ ಅವರು ಪ್ರತಿಭಟನೆಯನ್ನುದ್ದೇಶಿಸಿ ,  ಉಜಿರೆಯ ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿನಿಯಾದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೊಳಗಾಗಿ ಒಂದು ವರ್ಷವಾಗಿದೆ. ಇಲ್ಲಿಯವರೆಗೂ ನಿಜವಾದ ಅಪರಾಧಿಗಳನ್ನು ಬಂಧಿಸಲು […]

ಮುಂಬೈ ನಿವಾಸಿಗೆ ವಂಚಿಸಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದರೋಡೆ

Wednesday, October 9th, 2013
Anil-Kumar-Sharma

ಮಂಗಳೂರು: ಮುಂಬೈ ನಿವಾಸಿಗೆ ವಂಚಿಸಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದರೋಡೆಗೈದ ತಂಡವನ್ನು ಬರ್ಕೆ ಪೊಲೀಸರು ಪತ್ತೆ ಹಚ್ಚಿದ್ದು, ಮೂವರನ್ನು ಬಂಧಿಸಿ ದ್ದಾರೆ. ಬಂಧಿತ ಆರೋಪಿಗಳನ್ನು ಮೂಲತಃ ಉತ್ತರ ಪ್ರದೇಶದವನಾದ ಪ್ರಸ್ತುತ ಜಪ್ಪಿನಮೊಗರಿನಲ್ಲಿ ವಾಸವಾ ಗಿರುವ ಅನಿಲ್‌ಶರ್ಮಾ, ವಾಮಂ ಜೂರಿನ ರಿಚಿ ಯಾನೆ ರಿಚ್ಮಂಡ್, ಮತ್ತು ಜೆಪ್ಪು ಕುಡ್ಪಾಡಿಯ ವಿಜೇಶ್ ಕುಮಾರ್ ಯಾನೆ ವಿಜು ಎಂದು ಗುರುತಿಸ ಲಾಗಿದೆ. ಬಂಧಿತರಿಂದ  ಬೆಳ್ಳಿಯ ಆಭರಣಗಳು, ಚಿನ್ನಾಭರಣಗಳು, ನಗದು ಸೇರಿದಂತೆ ಒಟ್ಟು 765000/- ಮೌಲ್ಯದ ಸ್ವತ್ತುಗಳು ಮತ್ತು ಸ್ವಿಫ್ಟ್ ಕಾರು ಹಾಗೂ […]

ಉಡುಪಿ ಮೂಲದ 20 ಮಂದಿ ಯುವಕರಿಗೆ ವಂಚನೆ

Wednesday, October 9th, 2013
gulf

ಮಂಗಳೂರು:  ದುಬೈಯಲ್ಲಿ ಉತ್ತಮ ಉದ್ಯೋಗ ಕೊಡಿಸುವುದಾಗಿ ಹೇಳಲಾಗಿತ್ತು. ಆದರೆ ಅವರಿಗೆ ಕೊಟ್ಟಿದ್ದು ಗಿಡ ನೆಡುವ ಕೆಲಸವನ್ನು. ಇತ್ತ ಕೊಟ್ಟ ಹಣವೂ ಇಲ್ಲದೆ, ಅತ್ತ ಕೆಲಸವೂ ಇಲ್ಲದೆ ಕನಸು ಕಟ್ಟಿಕೊಂಡು ವಿದೇಶಕ್ಕೆ ಹಾರಿದವರು ಇದೀಗ ಬರಿಗೈಲಿ ಮರಳಿದ್ದರೆ. ದಕ್ಷಿಣ ಕನ್ನಡ, ಉಡುಪಿ ಮೂಲದ 2೧ ಮಂದಿ ಯುವಕರು ವಂಚನೆಗೆ ಒಳಗಾಗಿದ್ದು, ಅವರಲ್ಲಿ ಒಂಬತ್ತು ಮಂದಿ ಸಾಲ ಮಾಡಿ ಊರಿಗೆ ವಾಪಸ್ ಆಗಿದ್ದರೆ ಇನ್ನುಳಿದವರು ವಿದೇಶಿ ನೆಲದಲ್ಲಿ ಬೀದಿಪಾಲಾಗಿದ್ದಾರೆ. ಕೊಪ್ಪದ ಅಬ್ದುಲ್ ಜಾವೇದ್, ಮನೋಹರ ಕೈರೋಚ್, ಹೊನ್ನಾವರದ ಜಗದೀಶ ಮುರ್ಡೇಶ್ವರ, […]

ಕಾವು ಪಂಚಲಿಂಗೇಶ್ವರ ದೇವಸ್ಥಾನದ ಬಳಿ ಶಾಸಕ ಜೆ.ಆರ್.ಲೋಬೊ ಗುದ್ದಲಿ ಪೂಜೆ ಕಾರ್ಯಕ್ರಮ

Tuesday, October 8th, 2013
J.R.Lobo

ಮಂಗಳೂರು: ನಗರದ ಬಜಾಲ್ ಸಮೀಪದ ಕುಂಟಾಲ್ ಗುಡ್ಡೆಗೆ ತೆರಳುವ ರಸ್ತೆ ಕಾಮಗಾರಿಗೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ ಕಾವು ಪಂಚಲಿಂಗೇಶ್ವರ ದೇವಸ್ಥಾನದ ಬಳಿ ಮಂಗಳವಾರ ಗುದ್ದಲಿ ಪೂಜೆ ನೆರವೇರಿಸಿದರು. ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ನಡೆಯಲಿರುವ ಈ ಕಾಮಗಾರಿಗೆ ಗುದ್ದಿ ಪೂಜೆ ನೆರವೇರಿಸಿದ ನಂತರ ಮಾತನಾಡಿದ ಶಾಸಕ ಜೆ.ಆರ್.ಲೋಬೊ, ಬಜಾಲ್ ಪ್ರದೆಶವು ಮಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿದ್ದರೂ ಕೂಡ ಗ್ರಾಮೀಣ ಪ್ರದೇಶಗಳಂತೆಯೇ ಇದೆ. ಹಾಗಾಗಿ ಈ ಪ್ರದೇಶವು ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಕಾಣಬೇಕಾಗಿದೆ. ಮುಂದಿನ […]

ನಾಪತ್ತೆಯಾಗಿದ್ದ ಅಕ್ಷತಾಳ ಪ್ರಿಯಕರ ಮದನ್ ಮೃತ ದೇಹ ಹುಡುಕಾಟ

Tuesday, October 8th, 2013
akshata-an-madan

ಮಂಗಳೂರು: ರಥಬೀದಿ ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿನಿ ಅಕ್ಷತಾ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿ ನಾಪತ್ತೆಯಾಗಿದ್ದ ಪ್ರಿಯಕರ ಮದನ್ ಮೃತ ದೇಹ ಮುಳಿಹಿತ್ಲು ಐಸ್ ಪ್ಲಾಂಟ್ ಸಮೀಪ ಇದೆ ಎಂಬ ಜ್ಯೋತಿಷಿಯೊಬ್ಬರ ಮಾಹಿತಿಯಂತೆ ಮನೆಯವರು ನಿನ್ನೆ ಹುಡುಕಾಟಕ್ಕೆ ಇಳಿ  ಅಕ್ಷತಾಳ ಪ್ರಿಯಕರ ಮದನ್ ಕಳೆದ ಕೆಲ ವಾರಗಳಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ಆತನ ಮನೆಯವರು ಜ್ಯೋತಿಷಿಗಳ ಮೊರೆ ಹೋಗಿದ್ದರು. ಈ ವೇಳೆ ಕನ್ಯಾನದ ಜ್ಯೋತಿಷಿಯೊಬ್ಬರು ಮದನ್ ಬದುಕುಳಿದಿಲ್ಲ, ಆತ ಕೂಡ ಸಾವನ್ನಪ್ಪಿದ್ದಾನೆ. ಅವನ ಮೃತದೇಹ ಅಕ್ಷತಾಳ ಶವ […]

ಗ್ರಾಮ ಸಹಾಯಕವನ್ನು ‘ಡಿ’ ದರ್ಜೆ ನೌಕರರಾಗಿ ಖಾಯಂ ಗೊಳಿಸಲು ಒತ್ತಾಯಿಸಿ ಸಾಂಕೇತಿಕ ಮುಷ್ಕರ

Monday, October 7th, 2013
D-group-protest

ಮಂಗಳೂರು : ಕರ್ನಾಟಕ ರಾಜ್ಯ ಸರ್ಕಾರಿ ಕಂದಾಯ ಇಲಾಖಾ ಗ್ರಾಮ ಸಹಾಯಕರ.ರಿ. ದಕ್ಷಿಣ ಕನ್ನಡ ಜಿಲ್ಲಾ ಶಾಖೆ, ಮಂಗಳೂರು ಇವರ ವತಿಯಿಂದ ಸಾಂಕೇತಿಕ ಮುಷ್ಕರವನ್ನು   ಅಕ್ಟೋಬರ್ 7, 2013ನೇ  ಸೋಮವಾರ ಮಂಗಳೂರು ದ.ಕ.ಜಿಲ್ಲಾಧಿಕಾರಿಗಳ ಕಚೇರಿ ಬಳಿ ನಡೆಸಲಾಯಿತು. ಪರಮೇಶ್ವರ ನಾಯಕ್, ಕಂದಾಯ ಇಲಾಖೆ ನೌಕರರ ಸಂಘ ಅಧ್ಯಕ್ಷ ಮಾತನಾಡಿ ಸರಕಾರಿ ಆದೇಶ ಸಂಖ್ಯೆ : ಕಂ.ಇ.3.ಯು.ವಿ.ಎಸ್.77 ದಿನಾಂಕ 16/9/1998 ಮತ್ತು ಕಂ.ಇ.83.ಯು.ವಿ.ಎಸ್(1)82 ದಿನಾಂಕ 23/09/82ರ ಅನ್ವಯ ಸರಕಾರವು ರಾಜ್ಯದ 10,450 ಗ್ರಾಮ ಸಹಾಯಕರ ಹುದ್ದೆಗಳನ್ನು ಸೃಷ್ಟಿಸಲಾಗಿತ್ತು.  […]

ಮಂಗಳೂರಿನ ದಂಬೇಲ್‌ ಬಳಿ ಫಲ್ಗುಣಿ ನದಿಯಲ್ಲಿ ದುರ್ಘ‌ಟನೆ

Monday, October 7th, 2013
body-dead

ಮಂಗಳೂರು: ರವಿವಾರ ರಜೆಯಾಗಿದ್ದರಿಂದ ಮಕ್ಕಳು ಒಟ್ಟಾಗಿ ಆಟ ಆಡಲು ತೆರಳಿದ್ದ 5 ಮಂದಿ ಹುಡುಗರು ನೀರಿನಲ್ಲಿ ಮುಳುಗಡೆಯಾದ ಘಟನೆ ನಗರದ ದಂಬೇಲ್‌ ಸಮೀಪದ ಬಂಗ್ರ ಕೂಳೂರಿನ ಪಟ್ಟೋಡಿ ಬಳಿ ಫಲ್ಗುಣಿ ನದಿಯಲ್ಲಿ ಸಂಭವಿಸಿದ್ದು, ಅವರಲ್ಲಿ ಮೂವರ‌ ಮೃತದೇಹಗಳು ಪತ್ತೆಯಾಗಿವೆ. ಕೋಡಿಕಲ್‌ ಕಟ್ಟೆಯ ನಿವಾಸಿಗಳಾದ ಎಸ್‌. ಪ್ರಜ್ವಲ್‌ (14), ಯಕ್ಷಿತ್‌ (14), ರಕ್ಷಿತ್‌ (15), ಕಲಂದರ್‌ (19) ಮತ್ತು ರಾಜೇಶ್‌ (19) ನೀರಿನಲ್ಲಿ ಮುಳುಗಡೆಯಾದವರು. ಅವರಲ್ಲಿ ಪ್ರಜ್ವಲ್‌, ಕಲಂದರ್‌ ಮತ್ತು ರಕ್ಷಿತ್‌ ಅವರ ದೇಹಗಳು ಪತ್ತೆಯಾಗಿವೆ. ಇನ್ನುಳಿದ ಇಬ್ಬರು […]

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನವರಾತ್ರಿ ಪೂಜೆ ನೆರೆವೇರಿಸದ ಮಹಿಳಾ ಅರ್ಚಕರು

Monday, October 7th, 2013
widows pooja

ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಭಾನುವಾರ ಇಬ್ಬರು ವಿಧವೆಯರಿಂದ ಕುದ್ರೋಳಿ ಕ್ಷೇತ್ರದಲ್ಲಿ  ಪೂಜೆ ಮಾಡಿಸುವುದರೊಂದಿಗೆ ಅರ್ಚಕರನ್ನಾಗಿ ನೇಮಕ ಮಾಡಿಸಿದರು. ಮಹಿಳೆಯರಾದ ಇಂದಿರಾ ಶಾಂತಿ(ಬಂಟ್ವಾಳ ಮೂಡ ಬಿ.ಸಿ.ರೋಡ್ ನವರು) ಲಕ್ಷ್ಮೀ ಶಾಂತಿ(ಪುತ್ತೂರಿನ ಬನ್ನೂರು ಗ್ರಾಮದವರು) ಇವರನ್ನು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದೊಳಕ್ಕೆ ಸಕಲ ಗೌರವಗಳೊಂದಿಗೆ ಬರಮಾಡಿಕೊಳ್ಳಲಾಯಿತು. ಕುದ್ರೋಳಿ ಕ್ಷೇತ್ರದಲ್ಲಿರುವ  ನಾರಾಯಣಗುರು ಮೂರ್ತಿಗೆ, ಶನೀಶ್ವರ, ಮಹಾಗಣಪತಿಗೆ ಪೂಜೆ ಸಲ್ಲಿಸಿದ ಬಳಿಕ ಶ್ರೀ ಗೋಕರ್ಣನಾಥ ದೇವರ ಗರ್ಭಗುಡಿಗೆ ಪ್ರವೇಶಿಸಿ ಪೂಜೆ ಸಲ್ಲಿಸುವುದರೊಂದಿಗೆ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಶ್ವತ್ಥಮರದ […]

ಮಂಗಳೂರು ದಸರಾ 2013 ಹಾಗೂ ಶ್ರೀ ಗೋಕರ್ಣನಾಥ ಕ್ಷೇತ್ರದ 101ನೇ ವಾರ್ಷಿಕ ಉತ್ಸವ

Saturday, October 5th, 2013
Mangalore-Dasara

ಮಂಗಳೂರು : ಮಂಗಳೂರು ದಸರಾ 2013 ಹಾಗೂ ಶ್ರೀ ಗೋಕರ್ಣನಾಥ ಕ್ಷೇತ್ರದ 101ನೇ ವಾರ್ಷಿಕ ಉತ್ಸವದ ಅಂಗವಾಗಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಶ್ರೀ ಶಾರದಾ ಮಾತೆ ಹಾಗೂ ನವದುರ್ಗೆಯರ ಮೂರ್ತಿ ಪ್ರತಿಷ್ಠಾಪನೆಯನ್ನು ಶನಿವಾರ  ಭಕ್ತ ಸಮೂಹದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಶಾರದ ಮಾತೆಯನ್ನು ವಾದ್ಯ, ಚಂಡೆ, ವಾದಗದೊಂದಿಗೆ ಹುಲಿವೇಷದ ನೃತ್ಯದ ಜೊತೆ ಜೊತೆಯಲ್ಲಿ ಮೆರವಣಿಗೆಯಲ್ಲಿ ದೇವಳಕ್ಕೆ ಸುತ್ತ ಪ್ರದಕ್ಷಿಣಿ ಹಾಕಲಾಯಿತು. ಬಳಿಕ ಸಕಲ ವಿಧಿವಿಧಾನಗಳನ್ನು ಅನುಸರಿಸಿ ಮಾತೆ ಶಾರದ ದೇವಿಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಯಿತು. ನಗರದ ಖ್ಯಾತ ಉದ್ಯಮಿ […]

ಪಾಪ್ಯುಲರ್ ಫ್ರಂಟ್ ನಿಂದ ವಿದ್ಯಾರ್ಥಿವೇತನ ವಿತರಣೆ

Saturday, October 5th, 2013
scolership

ಮಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಕರ್ನಾಟಕ ವತಿಯಿಂದ ಸ್ಕಾಲರ್ಶಿಪ್ ವಿತರಣಾ ಕಾರ್ಯಕ್ರಮವು ನಗರದ ಸಂತ ಅಲೋಶಿಯಸ್ ಕಾಲೇಜು ಸಭಾಂಗಣದಲ್ಲಿ ದಿನಾಂಕ 04-10-2013ರಂದು ನಡೆಯಿತು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಪುತ್ತರೂ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿ ಮುಸ್ಲಿಮ್ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಕೆ.ಎಸ್.ಮುಹಮ್ಮದ್ ಮಸೂದ್, ಮುಸ್ಲಿಮರು ಹಾಗೂ ಇತರ ಹಿಂದುಳಿದ ಸಮುದಾಯಗಳಲ್ಲಿ ಶಿಕ್ಷಣವನ್ನು ಪ್ರೋತ್ಸಾಹಿಸುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯವನ್ನು ಶ್ಲಾಘಿಸಿದರು. ಸಂಘಟನೆಯ […]