ಮಂಗಳೂರು ದಸರಾ ಡಾ| ಡಿ.ವೀರೇಂದ್ರ ಹೆಗ್ಗಡೆಯವರಿಂದ 101ನೇ ದಸರಾ ಮಹೋತ್ಸವ ಉದ್ಘಾಟನೆ

Tuesday, September 24th, 2013
kudroli

ಮಂಗಳೂರು : ಕುದ್ರೋಳಿ ಶ್ರೀ ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷ ಎಚ್.ಎಸ್. ಸಾಯಿರಾಮ್ ನಗರದ ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿಯಲ್ಲಿ ಅಕ್ಟೋಬರ್ 5 ರಿಂದ 14 ರವರೆಗೆ ಮಂಗಳೂರು ದಸರಾ -2013 ನ್ನು ಆಚರಿಸಲಾಗುವುದು ಎಂದು  ತಿಳಿಸಿದರು. ಪತ್ರಿಕಾಗೊಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎಚ್.ಎಸ್. ಸಾಯಿರಾಮ್, ಅಕ್ಟೋಬರ್ 5ರಂದು ಬೆಳಿಗ್ಗೆ 11.30 ಕ್ಕೆ ಕ್ಷೇತ್ರದ ಶ್ರೀ ಗೋಕರ್ಣನಾಥ ಕಲ್ಯಾಣ ಮಂಟಪದ ಸ್ವರ್ಣ ಕಲಾಮಂಟಪದಲ್ಲಿ ಶಾರದಾ ಮಾತೆ ಹಾಗೂ ನವದುರ್ಗೆಯರು ಸೇರಿದಂತೆ ಗಣಪತಿಯ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುವುದು. ಈ ಬಾರಿಯ ದಸರಾ […]

ಮ.ನ.ಪಾ ಮೇಯರ್ ಆಯ್ಕೆಗೆ ದ.ಕ. ಜಿಲ್ಲಾ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

Tuesday, September 24th, 2013
BJP

ಮಂಗಳೂರು : ದ.ಕ. ಜಿಲ್ಲಾ ಬಿಜೆಪಿ ಕಾರ್ಯಕರ್ತರು ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಆಯ್ಕೆ ಶೀಘ್ರವಾಗಿ ನೆರವೇರಬೇಕೆಂದು ಆಗ್ರಹಿಸಿ  ಸೋಮವಾರ ಮ.ನ.ಪಾ ಮುಂಭಾಗ ಪ್ರತಿಭಟನೆ ನಡೆಸಿದರು. ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ ಅವರು, ಪ್ರತಿಭಟನೆಯನ್ನು ಉದ್ದೇಶಿಸಿ ಮೇಯರ್ ನೇಮಕ ಮಾಡದೆ ಕಾಂಗ್ರೆಸ್ ಸಂವಿಧಾನವನ್ನು ಉಲ್ಲಂಘನೆ ಮಾಡಿದೆ. ಸಂವಿಧಾನದ ಪ್ರಕಾರ ಮತದಾನವಾದ ಆರು ತಿಂಗಳೊಳಗೆ ಮೇಯರ್ ನೇಮಕಗೊಳ್ಳಬೇಕು. ಆದರೆ ಮ.ನ.ಪಾ ದಲ್ಲಿ ಪುರುಷ ಪ್ರಾಧಾನ್ಯತೆ ಹೊಂದಿರುವುದರಿಂದ ಇಲ್ಲಿ ತನಕ ಮೇಯರ್ ನೇಮಕವಾಗಿಲ್ಲ ಎಂದರು. ಮ.ನ.ಪಾ ಯಲ್ಲಿ ಆಡಳಿತ […]

ಪಾಕಿಸ್ತಾನದ ಪೇಶಾವರದಲ್ಲಿರುವ ಐತಿಹಾಸಿಕ ಚರ್ಚ್ ಮೇಲೆ ದಾಳಿ 70ಕ್ಕೂ ಹೆಚ್ಹು ಸಾವು, ನೂರಕ್ಕೂ ಅಧಿಕ ಗಾಯ

Monday, September 23rd, 2013
pakisthan church

ಪೇಶಾವರ: ಇಬ್ಬರು ಆತ್ಮಾಹುತಿ ಬಾಂಬರ್‍ಗಳು ಪಾಕಿಸ್ತಾನದ ಪೇಶಾವರದಲ್ಲಿರುವ ಐತಿಹಾಸಿಕ ಚರ್ಚ್ ಮೇಲೆ ನಡೆಸಿದ ದಾಳಿಯಲ್ಲಿ ಕನಿಷ್ಟ 70 ಜನರು ಸಾವಿಗೀಡಾಗಿರುವ ಶಂಕೆಯಿದ್ದು, ನೂರಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಪಾಕ್ ಇತಿಹಾಸ ದಲ್ಲೇ ಅಲ್ಪಸಂಖ್ಯಾತ ಕ್ರೈಸ್ತರ ಪ್ರಾರ್ಥನಾ ಮಂದಿರದ ಮೇಲೆ ನಡೆದ ಅತ್ಯಂತ ಘೋರ ದಾಳಿ ಇದಾಗಿದೆ. ಪೇಶಾವರದ ಕೊಹಟಿ ಗೇಟ್ ಪ್ರದೇಶದಲ್ಲಿರುವ ಆಲ್ ಸೈಂಟ್ ಚರ್ಚ್‍ನಲ್ಲಿ ನೀಡಲಾಗುತ್ತಿದ್ದ ಮಧ್ಯಾಹ್ನದ ಊಟಕ್ಕೆಂದು ಸುಮಾರು 600ರಷ್ಟು ಜನರು ಸೇರಿದ್ದರು. ಈ ಸಂದರ್ಭ ಪೊಲೀಸ್ ವಸ್ತ್ರ ಧರಿಸಿ ಪ್ರವೇಶ ಮಾಡಿದ ಬಾಂಬರ್‍ಗಳು […]

ಲೇಡಿಗೋಷನ್ ಆಸ್ಪತ್ರೆಯಲ್ಲಿ 31ನೇ ಅಮಲಭಾರತ ಅಭಿಯಾನ

Monday, September 23rd, 2013
Lady Goshan

ಮಂಗಳೂರು : ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರಿಂದ ಪ್ರಾರಂಭಗೊಳಿಸಲ್ಪಟ್ಟ ಸ್ವಚ್ಛ ಸುಂದರ ಹಾಗೂ ಆರೋಗ್ಯ ಪೂರ್ಣ ಸಮಾಜದ ಕಲ್ಪನೆಯ “ಅಮಲ ಭಾರತ” ಸ್ವಚ್ಚತಾ ಜನ ಜಾಗರಣ ಮಹಾಯಜ್ನದ 31ನೇ ಕಾರ್ಯಕ್ರಮವು ಭಾನುವಾರ ಮಂಗಳೂರು ಲೇಡಿಗೋಷನ್ ಆಸ್ಪತ್ರೆಯ ಅವರಣದಲ್ಲಿ ಜರಗಿತು. ಅಮಲ ಭಾರತ ಅಭಿಯಾನದ ಅಧ್ಯಕ್ಷರಾದ ಡಾ| ಜೀವರಾಜ್ ಸೊರಕೆಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ಪರಿಸರವನ್ನು ಸ್ಚಚ್ಚಗೊಳಿಸುವ ಅಮ್ಮನವರ ಅಮಲ ಭಾರತ ಯೋಜನೆ ಯಶಸ್ವಿಗೆ ವಿದ್ಯಾರ್ಥಿಗಳ ಪಾತ್ರ ಬಹಳ ಪ್ರಾಮುಖ್ಯವಾಗಿದೆ […]

ಹಾಸನ-ಬಿಸಿರೋಡ್ ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣ

Saturday, September 21st, 2013
press-meet

ಮಂಗಳೂರು : ರಾಷ್ಟ್ರೀಯ ಹೆದ್ದಾರಿ ಸಂತ್ರಸ್ತರ ಹೋರಾಟ ಸಮಿತಿ ಸಂಘಟನಾ ಕಾರ್ಯದರ್ಶಿ ಶಿವಶಂಕರ್ ಭಟ್ ಅಗಲೀಕರಣಕ್ಕೆ ಕಲ್ಲಡ್ಕ ಪೇಟೆಯನ್ನೇ ಬಲಿಕೊಡುವ ಹುನ್ನಾರ ನಡೆಯುತ್ತಿದೆ. ಇದರಿಂಧಾಗಿ 30 ಅಂಗಡಿ ಮುಂಗಟ್ಟುಗಳು ಸರಿಸುಮಾರು 200 ಮನೆಗಳು ನಾಶವಾಗುವ ಭೀತಿಯಲ್ಲಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ-ಬಿ.ಸಿ.ರೋಡು ಚತುಷ್ಪಥ ರಸ್ತೆ ನಿರ್ಮಾಣದ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಭೂ ಸ್ವಾಧೀನಾಧಿಕಾರಿಯವರ ಆದೇಶದಂತೆ ಕಲ್ಲಡ್ಕ ಪೇಟೆಯ ಇಕ್ಕೆಲಗಳಲ್ಲಿ 22.5 ಮೀಟರ್ ಸ್ವಾದೀನಪಡಿಸುವಂತೆ ಈಗಾ ಗಲೇ ಗುರುತು ಹಾಕಲಾಗಿದೆ. ಇದರಂತೆ ನಡೆದರೆ ಹೆದ್ದಾರಿ ಅಕ್ಕಪಕ್ಕದಲ್ಲಿರುವ […]

ಕರಾವಳಿಯಲ್ಲಿ ಓಡಲು ಸಿದ್ಧವಾಗಿದೆ ಕೊಂಚಾಡಿಯ ‘ರಿಕ್ಷಾ ಡ್ರೈವರ್’

Saturday, September 21st, 2013
Rikshw driver Tulu Movie

ಮಂಗಳೂರು : ನಮ್ಮ ದೇಶದಲ್ಲಿ ಪ್ರತ್ಯೇಕವಾಗಿ ನಮ್ಮ ತುಳುನಾಡಿನಲ್ಲಿ ಸಂಚಾರ (ಸಾರಿಗೆ) ವ್ಯವಸ್ಥೆಯಡಿ ಯಾವ ಸಂದರ್ಭಗಳಲ್ಲೂ, ಯವ ಸಮಯಗಳಲ್ಲೂ ಸಿಗುವ ಒಂದೇ ಒಂದು ಸೌಕರ್ಯ ಅಂದರೆ ಅದು “ಆಟೋ ರಿಕ್ಷಾ”. ದಿನವಿಡೀ ಹಗಲು-ರಾತ್ರಿ, ಬಿಸಿಲು-ಮಳೆ ಎನ್ನದೆ ದುಡಿದು ದಾರಿಯುದ್ದಕ್ಕೂ ಸಾರ್ವಜನಿಕರಿಗೆ ರಕ್ಷಣೆಯಾಗಿ ನಿಲ್ಲುವುದು ಇದೇ ರಿಕ್ಷಾ ಡ್ರೈವರ್ ಗಳು. “ರಿಕ್ಷಾ ಡ್ರೈವರ್ ” ಶೀರ್ಷಿಕೆ ಯಲ್ಲೇ ಇದು ಸಾಮಾನ್ಯ ರಿಕ್ಷಾ ಡ್ರೈವರ್ ನ ಬದುಕಿನ ಕಥೆಯೆಂದು ಪ್ರತಿಯೊಬ್ಬರಲ್ಲೂ ಮೂಡಿಬರುವ ಭಾವನೆ . ಹೌದು ,ಈ ಚಿತ್ರ ಕೂಡ […]

ಕ್ಯಾನ್ಸರ್ ಪೀಡಿತೆಯ ಚಿಕಿತ್ಸೆಯ ಸಹಾಯಕ್ಕಾಗಿ ಮನವಿ

Saturday, September 21st, 2013
Cancer Patient Celin

ಮಂಗಳೂರು : ಆಕೆಯ ವಯಸ್ಸು 56, ಹೆಸರು ಸೆಲಿನ್ ಡಿ’ಸೋಜ. ಒಂದು ವರ್ಷದ ಹಿಂದೆ ಬಾಯಿ ಕ್ಯಾನ್ಸರ್ ಗೆ ತುತ್ತಾಗಿ, ಜೀವನ ಚಕ್ರ ನಿಂತು ಹೋಗಿದೆ ಮಲಗಿದಲ್ಲಿಯೇ ಪರರ ಆಶ್ರಯ ಕೇಳುವಂತಾಗಿದೆ. ಬಜಾಲ್ ವೀರನಗರದ, ಪೈಸಲ್ ನಗರದ ನಿವಾಸಿ ಸೆಲಿನ್ ಡಿ’ಸೋಜ ಮೂರು ವರ್ಷದ ಹಿಂದೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ತಲೆ ತಿರುಗಿ ಬಿದ್ದು ಸಂಜೆಯವರೆಗೆ ಮನೆಯಲ್ಲಿ ಯಾರೂ ಇಲ್ಲದ ಕಾರಣ ಬಿದ್ದಲ್ಲಿಯೇ ಇದ್ದರು. ಸಂಜೆ ನೆರೆಯವರು ಇವರನ್ನು ಕರೆದಾಗಲೇ ಬಿದ್ದಿರುವ ವಿಷಯ ತಿಳಿದಿದ್ದು. ಅಷ್ಟು ಹೊತ್ತಿಗೆ […]

ಸಿ‌ಐಟಿಯು ವತಿಯಿಂದ ನಗರದ ಜ್ಯೋತಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಪ್ರದರ್ಶನ ಹಾಗೂ ಬೃಹತ್ ಮೆರವಣಿಗೆ

Saturday, September 21st, 2013
mangalore-protest

ಮಂಗಳೂರು :  ಕಾರ್ಮಿಕ ಕ್ಷೇತ್ರದಲ್ಲಿನ ಅವ್ಯವಸ್ಥೆಗಳನ್ನು  ಖಂಡಿಸಿ ಸಿ‌ಐಟಿಯು ವತಿಯಿಂದ, ಕನಿಷ್ಠ ಕೂಲಿ, ಮನೆ ನಿವೇಶನ ಎಲ್ಲಾ ಕುಟುಂಬಗಳಿಗೂ ರೇಷನ್, ಕಾರ್ಮಿಕ ಕಾನೂನಿನ ಕಟ್ಟುನಿಟ್ಟಿನ ಜಾರಿ ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಅಗ್ರಹಿಸಿ ಶುಕ್ರವಾರ ನಗರದ ಜ್ಯೋತಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ  ಬೃಹತ್ ಮೆರವಣಿಗೆ ಹಾಗೂ ಪ್ರತಿಭಟನಾ ಪ್ರದರ್ಶನ ನಡೆಯಿತು. ಸಿ‌ಐಟಿಯು ಕೇಂದ್ರ ಸಮಿತಿ ಮುಖಂಡ ಬಿ.ಮಾಧವ ಪ್ರತಿಭಟನಕಾರರನ್ನು ಉದ್ದೇಶಿಸಿ  ಕಾರ್ಮಿಕರು ಬಿಪಿ‌ಎಲ್ ರೇಷನ್ ಕಾರ್ಡ್, ಸಂಬಳದಲ್ಲಿ ಹೆಚ್ಚಳ, ಸಾಮಾಜಿಕ ಭದ್ರತೆ, ಪಿಂಚಣಿ ಸೌಲಭ್ಯ ಹಾಗೂ ಎಫ್ ಡಿ‌ಐ […]

ನಗರದ ಬೈಕಂಪಾಡಿ ,ಯೆಯ್ಯಾಡಿ ಮತ್ತು ಕೊಂಚಾಡಿ ಪರಿಸರದಲ್ಲಿ ಗ್ಯಾಸ್ ಸೋರಿಕೆ

Friday, September 20th, 2013
gas-leak

ಮಂಗಳೂರು : ನಗರದ ಬೈಕಂಪಾಡಿ ,ಯೆಯ್ಯಾಡಿ ಮತ್ತು ಕೊಂಚಾಡಿ ಪರಿಸರದಲ್ಲಿ  ಗ್ಯಾಸ್ ಸೋರಿಕೆಯ ದಟ್ಟ ವಾಸನೆ ಅನುಭವಕ್ಕೆ ಬರುತ್ತಿರುವುದರಿಂದ ಜನರು ಭಯ ಭೀತರಾಗಿದ್ದಾರೆ. ಕೆಲವು ಮೂಲಗಳ ಪ್ರಕಾರ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿ ಗ್ಯಾಸ್ ಸೋರಿಕೆಯಾಗಿದೆ ಎಂದು ವರದಿಯಾಗಿತ್ತು ಇನ್ನೂ ಕೆಲವರು ಎಮ್‌ಆರ್‌ಪಿಎಲ್‌ನಲ್ಲಿ ಗ್ಯಾಸ್ ಸೋರಿಕೆಯಾಗಿದೆ ಎಂದು ವದಂತಿ ಹಬ್ಬಿಸಿದ್ದರು,ಆದರೆ ಇಲ್ಲಿಯವರೆಗೆ ಯಾವುದೇ ಗ್ಯಾಸ್ ಸೋರಿಕೆ ಕಂಡು ಬಂದಿಲ್ಲ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎನ್. ಪ್ರಕಾಶ್ ಅವರು ಜನರು ಭಯ ಪಡುವ ಅಗತ್ಯವಿಲ್ಲ. ಸಂಬಂಧಪಟ್ಟವರಿಗೆ ಈಗಾಗಲೇ ಗ್ಯಾಸ್ ವಾಸನೆ […]

ಸಿಪಿಎಂ ಕಾರ್ಯಕರ್ತನ ಹತ್ಯೆ ಮುಖ್ಯ ಆರೋಪಿ ನ್ಯಾಯಾಲಯದ ಮುಂದೆ ಶರಣು

Friday, September 20th, 2013
prajith

ಕಾಸರಗೋಡು : ಸಿಪಿಎಂ ಕಾರ್ಯಕರ್ತ ಮಾಂಙಾಡ್ ನಿವಾಸಿ ಎಂ.ಬಿ.ಬಾಲಕೃಷ್ಣನ್(45) ನನ್ನು ಮಾರಕಾಯುಧಗಳಿಂದ ಇರಿದು ಕೊಲೆಗೈದ  ಪ್ರಕರಣದಲ್ಲಿ ಮುಖ್ಯ ಆರೋಪಿ ನ್ಯಾಯಾಲಯದ ಮುಂದೆ ಶರಣಾಗಿದ್ದಾನೆ. ಉದುಮ ಆರ್ಯಡ್ಕ ಕಾಲನಿ ನಿವಾಸಿ ಪ್ರಜಿತ್ ಯಾನೆ ಕುಟ್ಟಾಪಿ(25) ಎಂಬಾತನೇ ಹೊಸದುರ್ಗ ಪ್ರಥಮ ದರ್ಜೆ ನ್ಯಾಯಾಲಯ ಮುಂದೆ ಶರಣಾದಾತ.ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಪ್ರಜಿತ್ ನಿನ್ನೆ ಬೆಳಿಗ್ಗೆ 10.30ರ ವೇಳೆಗೆ ದಿಢೀರ್  ನ್ಯಾಯವಾದಿಯೊಬ್ಬರ ಜೊತೆಗೆ ಕೋರ್ಟಿನಲ್ಲಿ ಪ್ರತ್ಯಕ್ಷನಾಗಿದ್ದ. ಆರೋಪಿಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ. ಪ್ರಕರಣದಲ್ಲಿ ಒಟ್ಟು ಮೂವರು ಆರೋಪಿಗಳಿದ್ದು, ಇತರ ಇಬ್ಬರು […]