ದೇಶದಲ್ಲೆಡೆ ಸಹೋದರ ಭಾಂಧವ್ಯದ ರಕ್ಷಾ ಬಂಧನ ಆಚರಣೆ

Tuesday, August 20th, 2013
raksha-bandhan

ಮಂಗಳೂರು ;  ಅಕ್ಕತಂಗಿಯರು ತಮ್ಮ ನೆಚ್ಚಿನ ಅಣ್ಣ ತಮ್ಮಂದಿರುಗಳ ಕೈಗೆ ರಕ್ಷಾ ಬಂಧನ ಕಟ್ಟುವ ಮೂಲಕ ರಕ್ಷಾ ಬಂಧನ ಆಚರಿಸಿದರು. ಪ್ರತಿವರ್ಷ ನೂಲು ಹುಣ್ಣಿಮೆಯಂದು ಗಂಡನ ಮನೆಯಲ್ಲಿರುವ ಹೆಣ್ಣುಮಕ್ಕಳು ತವರಿಗೆ ಬಂದು ತಮ್ಮ ಅಣ್ಣ ತಮ್ಮಂದಿರಿಗೆ ರಾಖಿ ಕಟ್ಟುತ್ತಾರೆ. ಬಲಗೈಗೆ ರಾಖಿ ಕಟ್ಟಿ ಆರತಿ ಬೆಳಗುತ್ತಾರೆ. ಹಳ್ಳಿ ಸಂಪ್ರದಾಯದಂತೆ ಒಂದು ಕಟ್ಟಿಗೆಯ ಮಣೆಯ ಮೇಲೆ ಸಹೋದರರನ್ನು ಕುಳ್ಳರಿಸುತ್ತಾರೆ. ನಂತರ ಹಣೆ ತೊಳೆದು ವಿಭೂತಿ, ಕುಂಕುಮದ ತಿಲಕವನ್ನಿಡುತ್ತಾರೆ. ನಮ್ಮನ್ನು ಕಷ್ಟದಲ್ಲಿ ಪೊರೆಯುತ್ತಾ ಬಂದ ಸಹೋದರರು ಬಾಳೆಲ್ಲಾ ನಗುನಗುತಿರಲಿ ಎಂದು […]

ತಣ್ಣೀರು ಬಾವಿ ಸಮುದ್ರ ಕಿನಾರೆಯಲ್ಲಿ ಇಂದು ಸಮುದ್ರ ಪೂಜೆ ಆಚರಣೆ

Tuesday, August 20th, 2013
Karwar to get captive port soon

ಮಂಗಳೂರು :  ಇಂದು ಶ್ರೀ ಶ್ರೀ ಶ್ರೀ ಪೂಜಾ ಸಂಧ್ಯಾನಾಥ ಜಿ. ಯವರ ನೇತೃತ್ವದಲ್ಲಿ ಊರಿನ ಜನರೆಲ್ಲರೂ ಸೇರಿ ದೇವರ ವಿಧಿ ವಿಧಾನಗಳನ್ನು ನೆರವೇರಿಸಿದರು. ಈ ಕಾರ್ಯಕ್ರಮವು ಏಳು ಪಟ್ಣ ಮೊಗವೀರ ಸಂಯುಕ್ತ ಸಭಾ ಆಶ್ರಯದಲ್ಲಿ ನಡೆಯಿತು . ದೇವರ ವಿಧಿವಿಧಾನಗಳ ಬಳಿಕ ತಣ್ಣೀರು ಬಾವಿ ಸಮುದ್ರ ಕಿನಾರೆಯಲ್ಲಿ ಸಾಮೂಹಿಕವಾಗಿ ಸಮುದ್ರ ಪೂಜೆಯನ್ನು ಸ್ವಾಮಿಜಿಗಳ ನೇತೃತ್ವದಲ್ಲಿ ನಡೆಸಿದರು. ನಂತರ ಸಮುದ್ರಕ್ಕೆ ತೆಂಗಿನಕಾಯಿ, ಹೂವು ಸಮರ್ಪಸಿದರು. ಊರಿನ ಬಾಂಧವರೆಲ್ಲರೂ ಹಾಲೆರೆದು ಸಮುದ್ರ ದೇವತೆಯನ್ನು ನೆನೆದು ಪೂಜಿಸಿದರು. ಅಧ್ಯಕ್ಷರಾಗಿ ಶಾಸಕ […]

ಕಾಸರಗೋಡಿನಲ್ಲಿ ಮನೆಗೆ ಬೆಂಕಿ ಬಿದ್ದು ನಾಲ್ಕು ಮಂದಿ ಸಜೀವ ದಹನ

Tuesday, August 20th, 2013
Four members of family found burnt inside house at Kannur

ಕಾಸರಗೋಡು:  ಮನೆಗೆ ಬೆಂಕಿ ಬಿದ್ದ ಪರಿಣಾಮ ಸೋಮವಾರ ತಡರಾತ್ರಿ ನಿದ್ದೆಯಲ್ಲಿದ್ದ ನಾಲ್ಕು ಮಂದಿ ಸಜೀವ ದಹನಗೊಂಡ ದುರ್ಘಟನೆ ಕಣ್ಣೂರಿನ ಚೆರುಪುಳದಲ್ಲಿ ನಡೆದಿದೆ. ಸುಟ್ಟು ಕರಕಲಾಗಿರುವ ನಾಲ್ಕು ಶವಗಳು ಕೋಣೆಯಲ್ಲಿ ಪತ್ತೆಯಾಗಿದೆ ಈ ದುರ್ಘಟನೆಯಲ್ಲಿ ಸಾಜಿ (42), ಮತ್ತು  ಸಿಂಧು(31) ಮತ್ತು ಅವರ ಮಕ್ಕಳಾದ ಅಧೀರಾ (10), ಮತ್ತು  ಅತುಲ್ಯ(5) ಮೃತಪಟ್ಟಿದ್ದಾರೆ. ಮನೆಗೆ ಬೆಂಕಿ ಬಿದ್ದಿತ್ತೇ ಅಥವಾ ಇದು ಸಾಮೂಹಿಕ ಆತ್ಮಹತ್ಯೆಯೇ ಎನ್ನುವುದು ಇದುವರೆಗೆ ತಿಳಿದುಬಂದಿಲ್ಲ. ಎಲ್ಲಾ ಶವಗಳು ಒಂದೇ ಕೋಣೆಯಲ್ಲಿ ಸಿಕ್ಕಿರುವ ಕಾರಣ ಇದು ಆತ್ಮಹತ್ಯೆ ಪ್ರಕರಣವಾಗಿರಬಹುದೆಂದು […]

ಇ.ಎಸ್.ಐ. ಆಸ್ಪತ್ರೆಗೆ ಸಂಭಂಧಟ್ಟ ಬೇಡಿಕೆಗಳನ್ನು ಈಡೇರಿಸುವಂತೆ ಉಪವಾಸ ಸತ್ಯಾಗ್ರಹ

Tuesday, August 20th, 2013
Indefinite hunger strike begins demanding end to ESI Hospital problems

ಮಂಗಳೂರು :  ಅಖಿಲ ಭಾರತ ಕಾರ್ಮಿಕ ಸಂಘದ ರಾಜ್ಯ ಘಟಕ ಪ್ರಧಾನ ಕಾರ್‍ಯದರ್ಶಿ ಸುದತ್ತ ಜೈನ್ ಶಿರ್ತಾಡಿ ಅವರ ನೇತೃತ್ವದಲ್ಲಿ ದ.ಕ. ಜಿಲ್ಲೆಯ ಎಲ್ಲ ವ್ಯಾಪ್ತಿಗೆ ಇ.ಎಸ್.ಐ.ಸಿ. ಸೌಲಭ್ಯ  ಒದಗಿಸುವಂತೆ ಅಗ್ರಹಿಸಿ ಹಾಗೂ ಕದ್ರಿಯ ಇ.ಎಸ್.ಐ. ಆಸ್ಪತ್ರೆಯನ್ನು ಸಂಪೂರ್ಣ ಕೇಂದ್ರ ಸರಕಾರ ವಹಿಸಿಕೊಳ್ಳುವಂತೆ ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಿಂದ ಪಾದಯಾತ್ರೆಯಲ್ಲಿ ಸಾಗಿ ಕದ್ರಿ ಶಿವಭಾಗ್‌ನ ಇ.ಎಸ್.ಐ. ಆಸ್ಪತ್ರೆ ಎದುರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದರು. ಉಪವಾಸ ಸತ್ಯಾಗ್ರಹವನ್ನುದ್ದೇಶಿಸಿ ಮಾತನಾಡಿ ಜಿಲ್ಲೆಯಲ್ಲಿ ಇಂದು ಅನೇಕರು ಅಸುರಕ್ಷಿತ ಸ್ಥಳಗಳಲ್ಲಿ ಕೆಲಸ […]

ಸೆಪ್ಟಂಬರ್ 6 ರಂದು “ಪಾರು ಐ ಲವ್ ಯು” ಚಲನಚಿತ್ರ ತೆರೆಗೆ

Tuesday, August 20th, 2013
Paru-I Love You film

ಮಂಗಳೂರು : ಜಗತ್ ಜ್ಯೋತಿ ಮೂವಿ ಮೇಕರ್‍ಸ್ ಲಾಂಛನದಲ್ಲಿ ನಿರ್ಮಾಣಗೊಂಡ “ಪಾರು ಐ ಲವ್ ಯು” ಸಿನಿಮಾವು ಇದೇ ಬರುವ ತಿಂಗಳು ಸೆ.6 ರಂದು ತೆರೆ ಕಾಣಲಿದೆ ಎಂದು ಚಿತ್ರದ ನಾಯಕ ನಟ ರಂಜನ್ ರವರು ಸೋಮವಾರ ನಗರದ ಹೊಟೇಲ್ ವುಡ್‌ಲ್ಯಾಂಡ್ಸ್ ನಲ್ಲಿ ಅಯೋಜಿಸಲಾದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು. ಈ ಚಿತ್ರ ತಾನು ನಟಿಸಿರುವ ಮೊದಲ ಸಿನಿಮಾವಾಗಿದೆ. ನಾವೂ ಪ್ರತಿಯೊಂದು ಜಿಲ್ಲೆಗಳಿಗೂ ಹೋಗಿ ಪ್ರಚಾರ ಕಾರ್ಯ ಆರಂಭಿಸಿದ್ದೇವೆ.  ಸಿನಿಮಾದ ಮಾಹಿತಿಯು ಇನ್ನೂ ಮಂಗಳೂರಿನ ಜನತೆಗೆ ತಲುಪಿಲ್ಲ  ಈ ಹಿನ್ನೆಲೆಯಲ್ಲಿ ಪ್ರಚಾರ  […]

ಬಲಿಷ್ಠ ಗೋರಕ್ಷಣಾ ಕಾನೂನು ಜಾರಿಗೆ ತರಲು ಜನಜಾಗ್ರತಿ ಸಮಿತಿಯಿಂದ ಪ್ರತಿಭಟನೆ

Monday, August 19th, 2013
Jana Jagruti Samiti to hold protest rally for cattle protection

ಮಂಗಳೂರು : ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಕಾನೂನು ಸುವ್ಯವಸ್ಥೆಯ ವೈಪಲ್ಯವಿದ್ದು ಅದನ್ನು ಸರಿಪಡಿಸುವ ಪರವಾಗಿ ಬಲಿಷ್ಠ ಗೋರಕ್ಷಣಾ ಕಾನೂನು ಜಾರಿಗೆ ತರಲು ಜನಜಾಗ್ರತಿ ಸಮಿತಿಯಿಂದ ಆಗಸ್ಟ್ 19 ಸೋಮವಾರ ರಂದು ಡಿ.ಸಿ. ಆಫೀಸ್ ಬಳಿ ಪ್ರತಿಭಟನೆ ನಡೆಯಿತು. ಜನಜಾಗ್ರತಿ ಸಮಿತಿಯ ಸಂಚಾಲಕರಾದ ಕಟೀಲು ದಿನೇಶ್ ಪೈಯವರು ಮಾತಾಡಿ ಕರ್ನಾಟಕದ ಕರಾವಳಿ ಜಿಲ್ಲೆಯಲ್ಲಿ ಗೋಸಂಬಂಧಿ ಅಪರಾಧಗಳು ತೀವ್ರವಾಗಿ ಹೆಚ್ಚುತ್ತಿವೆ. ಕೃಷಿಕರ ಮತ್ತು ಹೈನುಗಾರಿಕೆ ಮಾಡುವವರ ಮನೆಯಿಂದ ಗೋವುಗಳನ್ನು ಕಳವು ಮಾಡಿ ಕೊಂಡೊಯ್ಯಲಾಗುತ್ತದೆ. ಗೋಹತ್ಯೆ ಮಾಡಿ ಕದ್ದು ಗೋಮಾಂಸ ಮಾರಾಟ ಮಾಡಲಾಗುತ್ತಿದೆ. ಈ […]

ಮುದ್ದುಕೃಷ್ಣ ಸ್ಪರ್ಧೆಯು ತಾಯಂದಿರಿಗೆ ತಮ್ಮ ಮಕ್ಕಳಲ್ಲಿ ಮುದ್ದುಕೃಷ್ಣನನ್ನು ನೋಡುವ ಸಂಭ್ರಮ : ಟಿ.ರಾಘವೇಂದ್ರ ರಾವ್

Sunday, August 18th, 2013
MUDDU KRISHNA

ಮಂಗಳೂರು : ರೋಟರಿ ಮಲ್ಪೆ ಕೊಡವೂರು ಮತ್ತು ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕೊಡವೂರು ಇವರ ಸಂಯುಕ್ತ ಆಶ್ರಯದಲ್ಲಿ ಆಗಸ್ಟ್ 18 ರವಿವಾರದಂದು ಶ್ರೀ ದೇವಳದ ವಸಂತ ಮಂಟಪದಲ್ಲಿ ನಡೆಯಿತು. ಇದರ ಉದ್ಘಾಟನೆಯನ್ನು ಶ್ರೀ ದೇವಳದ ಮೊಕ್ತೇಸ್ತರಾದ ಟಿ.ರಾಘವೇಂದ್ರ ರಾವ್ ನೆರವೇರಿಸಿದರು. ಬಳಿಕ ಮಾತಾಡಿ ಶ್ರೀ ಕೃಷ್ಣನ ಲೀಲಾವಿನೋದಗಳನ್ನು ನೆನಪಿಸುವಂತಹ ಕಾರ್ಯಕ್ರಮಗಳಲ್ಲಿ  ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಜಾಗ್ರತೆಗೊಳ್ಳುತ್ತದೆ ಹಾಗೂ ಎಲ್ಲಾ ತಾಯಂದಿರಿಗೆ ತಮ್ಮ ಮಕ್ಕಳಲ್ಲಿ ಮುದ್ದುಕೃಷ್ಣನನ್ನು ನೋಡುವ ಸಂಭ್ರಮವಾಗಿದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಶ್ರೀ ಸಾರ್ವಜನಿಕ […]

ಕಾರ್ಕಳದ ಬೆಳುವಾಹಿಯಲ್ಲಿ ಆರಂಭಗೊಂಡ ಚಿಟ್ಟೆಪಾರ್ಕ್

Sunday, August 18th, 2013
Ingurated in Karkala Beluvahi Buterfly Park

ಮಂಗಳೂರು : ಕಾರ್ಕಳದ ಬೆಳುವಾಹಿಯಲ್ಲಿ ಸಮೀಪ ಚಿಟ್ಟೆಗಳಿಗಾಗಿ ನಿರ್ಮಿಸಲ್ಪಟ್ಟ  ಚಿಟ್ಟೆಪಾರ್ಕನ್ನು ಆಗಸ್ಟ್ 18ರಂದು ಶಾಸಕರಾದ ನಳಿನ್ ಕುಮಾರ್ ಕಟೀಲ್ ರವರು ಉದ್ಘಾಟಿಸಿದರು. ನಂತರ ಮಾರ್ತಾಡಿ ಪರಿಸರ ಮಾಲಿನ್ಯದಿಂದ ಚಿಟ್ಟೆಗಳು ನಾಶವಾಗುತ್ತಿವೆ.ಈ ಚಿಟ್ಟೆಪಾರ್ಕ್ ಚಿಟ್ಟೆಗಳಿಗೆ ಆಶ್ರಯತಾನವಾಗಿದೆ.ನಗರಪ್ರದೇಶದ ಜನರಿಗೆ ಮತ್ತು ಪ್ರವಾಸಿಗರಿಗೆ ಚಿಟ್ಟೆಗಳನ್ನು ವಿಕ್ಷೀಸಲು ಅನುಕೂಲವಾಗುತ್ತದೆ ಎಂದರು. ಬಳಿಕ ಸಮ್ಮಿಲನ್ ಶೆಟ್ಟಿ ಮಾತಾಡಿ ಇದುವರೆಗೆ ಸುಮಾರು 113 ಚಿಟ್ಟೆ ಪ್ರಭೇದಗಳು ಪತ್ತೆಯಾಗಿದೆ. ಪಶ್ಚಿಮ ಘಟ್ಟ ತಪ್ಪಲಿನ,ಕಾಂತವರ ಬಳಿ ಇರುವ ಈ ಪಾರ್ಕ್ ಸುಮಾರು 7.35 ಎಕ್ರೆಯಲ್ಲಿ ಸ್ವಂತ ಜಾಗದಲ್ಲಿ ನಿರ್ಮಿಸಲಾಗಿದೆ. […]

ಸಿಟಿ,ಸರ್ವಿಸ್,ಎಕ್ಸ್ ಪ್ರೆಸ್ ಬಸ್ಸುಗಳ ಪ್ರಯಾಣ ದರ ಏರಿಕೆ

Sunday, August 18th, 2013
Bus Owners Association

ಮಂಗಳೂರು : ಇಂಧನ ಮತ್ತು ಬಿಡಿಭಾಗಗಳ ಬೆಲೆ ಎರಿಕೆಯಿಂದ ನಗರದ ಸಿಟಿ,ಸರ್ವಿಸ್,ಎಕ್ಸ್ ಪ್ರೆಸ್ ಬಸ್ಸುಗಳ ಪ್ರಯಾಣ ದರವನ್ನು ಆಗಸ್ಟ್ 20ರಿಂದ 10 ರಿಂದ 15% ಏರಿಸಲಾಗುದೆಂದು  ಬಸ್ಸು ಮಾಲಕರ ಸಂಘದ  ಜನರಲ್ ಸೆಕ್ರೆಟರಿಯಾದ ಎಸ್. ಸದಾನಂದ ಛಾತ್ರರವರು ಓಸಿಯನ್ ಪರ್ಲ್ ನಲ್ಲಿ  ನಡೆದ ಪತ್ರಿಕಾಘೊಷ್ಟಿಯಲ್ಲಿ ತಿಳಿಸಿದರು. ನಂತರ ಮಾತಾಡಿ ಇಂದನದ ದರ ಏರಿಕೆಯಾದಲ್ಲಿ ಬಸ್ಸಿನ ದರ ಏರಿಸುವುದು ಅನಿವಾರ್ಯವಾಗುತ್ತಿದೆ. ನಾವು ಬಸ್ಸುಗಳ ಪ್ರಯಾಣ ದರವನ್ನು  ಕನಾರ್ಟಕ ಸರಕಾರದ ಆದೇಶದ ಪ್ರಕಾರ ಕನಿಷ್ಠ ಪ್ರಮಾಣದಲ್ಲಿ ಏರಿಸುತ್ತೇವೆ ಎಂದು ಆಶ್ವಾಸನೆ […]

ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ರಕ್ಷಿತ್ ಎಸ್. ಪೂಜರಿ

Saturday, August 17th, 2013
student association

ಮಂಗಳೂರು : 2013-14ನೇ ಸಾಲಿನ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಚುನಾವಣೆಯು ಆಗಸ್ಟ್ 17ರಂದು ಶ್ರೀ ದಿನಕರ ಶೆಟ್ಟಿಯವರ ನೇತೃತ್ವದಲ್ಲಿ ನಗರದ ಎನ್.ಜಿ.ಒ.  ಸಭಾಂಗಣದಲ್ಲಿ ನಡೆಯಿತು. ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ವಕೀಲರ ಸಂಘದ  ಅಧ್ಯಕ್ಷರಾದ ಅಶೋಕ್ ಅರಿಗ ನೆರವೇರಿಸಿದರು. ಬಳಿಕ ಮಾತಾಡಿ   ವಿದ್ಯಾರ್ಥಿಗಳು ಕಾನೂನನ್ನು ಗೌರವಿಸಿ,ಗುರುಶಿಷ್ಯರ ಉದಾತ್ತ ಸಂಬಂಧಕ್ಕೆ ಬೆಲೆ ಕೊಟ್ಟು,ರಾಜಕೀಯ ರಹಿತ ಬಲಿಷ್ಠರಗಬೇಕು ಎಂದು ಹೇಳಿದರು.ಮುಖ್ಯ ಅಥಿತಿಗಳಾಗಿ ಭೋಜರಾಜ್ ವಾಮಂಜೂರು,ನಮ್ಮ ತುಳುನಾಡು ಟ್ರಸ್ಟನ ಅಧ್ಯಕ್ಷರಾದ ಜಿ.ವಿ.ಎಸ್.ಉಲ್ಲಾಳ್ ಉಪಸ್ಥಿತರಿದ್ದರು.ಹಾಗೆನೆ ಸ.ಕ.ವಿ.ಸ. ದ ನಾಯಕರುಗಳಾದ ಉತ್ತಮ್ […]