ದ್ವಿತೀಯ ಪಿಯುಸಿ ಪರೀಕ್ಷೆ ಪ್ರಾರಂಭ, ಮಾರ್ಚ್ 28ರವರೆಗೆ ಪರೀಕ್ಷಾ ಕೇಂದ್ರಗಳ ಸುತ್ತ 144 ಸೆಕ್ಷನ್ ಜಾರಿ

Wednesday, March 13th, 2013
Second PU examination at DK

ಮಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆಯು ಇಂದಿನಿಂದ 28ರ ವರೆಗೆ ನಡೆಯಲಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ  ವರ್ಷ 49 ಪರೀಕ್ಷಾ ಕೇಂದ್ರಗಳಲ್ಲಿ  170 ಕಾಲೇಜುಗಳ 32,267 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ದ್ವಿತೀಯ ಪಿಯು ಪರೀಕ್ಷೆಯು ಸುಸೂತ್ರವಾಗಿ ಹಾಗೂ ಸುವ್ಯವಸ್ಥಿತವಾಗಿ ನಡೆಯುವ ಹಿನ್ನಲೆಯಲ್ಲಿ  ಜಿಲ್ಲೆಯಲ್ಲಿ  ಮಾರ್ಚ್ 28ರವರೆಗೆ ಪರೀಕ್ಷಾ ಕೇಂದ್ರಗಳ ಸುತ್ತ 144 ಸೆಕ್ಷನ್ ಪ್ರಕಾರ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. ವಿವಿಧ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪರೀಕ್ಷಾ ಕೇಂದ್ರದ ಸುತ್ತಲಿನ 200 […]

ಬೆಳ್ತಂಗಡಿ : ಶಾಲಾ ಬಾಲಕಿ ಮೇಲೆ ಅತ್ಯಾಚಾರ ಯತ್ನ ನಾಲ್ವರ ಬಂಧನ

Wednesday, March 13th, 2013
Belthangady

ಬೆಳ್ತಂಗಡಿ :14 ವರ್ಷದ ಬಾಲಕಿ ಮೇಲೆ ಬಲಾತ್ಕಾರಕ್ಕೆ ಯತ್ನಿಸಿ ಕೊಲೆ ಬೆದರಿಕೆ ಹಾಕಿದ ಆರೋಪ ಮೇಲೆ ನಾಲ್ವರನ್ನು ಬೆಳ್ತಂಗಡಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಮಿತ್ತಬಾಗಿಲು ಗ್ರಾಮದ ಫಯಾಜ್‌ (19), ನಾಸಿರ್‌ (18), ನೌಶಾದ್‌ (19), ಭಂಡಾರಿಕೋಡಿ ಮನೆ ಶಾಕೀರ್‌ (19)  ಬಂಧಿತ ಆರೋಪಿಗಳು. ಮಾರ್ಚ್ 9ರಂದು ಮನೆಗೆ ಒಂಟಿಯಾಗಿ ಬರುತ್ತಿದ್ದ ಬಂಡಾರಿಕೋಡಿ ಸರಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿನಿಯೊಬ್ಬಳನ್ನು ಪಾದೆಗುತ್ತು ಎಂಬಲ್ಲಿ ಈ ನಾಲ್ವರು ಯುವಕರು ನೇತ್ರಾವತಿ ನದಿ ತಟದಲ್ಲಿ ಅಡ್ಡಗಟ್ಟಿ ತಮ್ಮ ಜತೆ ಬರುವಂತೆ ಒತ್ತಾಯಿಸಿದ್ದು […]

ಅಕ್ರಮ ಗಾಂಜಾ ಸಾಗಾಟ ಮಾಡುತ್ತಿದ್ದ ಮೈಸೂರಿನ ಮೂವರು ಆರೋಪಿಗಳ ಬಂಧನ

Wednesday, March 13th, 2013
Ganja seize at Attavar

ಮಂಗಳೂರು : ಅಕ್ರಮ ಗಾಂಜಾ ಸಾಗಾಟ ಮಾಡುತ್ತಿದ್ದ ಮೈಸೂರಿನ ಮೂವರು ಆರೋಪಿಗಳನ್ನು ಕರಾವಳಿ ಕಾವಲು ಪಡೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಆರೋಪಿಗಳು  ಮೈಸೂರಿನಿಂದ ಉಡುಪಿಗೆ ಮಾರಾಟಕ್ಕಾಗಿ ಅಮಲು ಪದಾರ್ಥ ಗಾಂಜವನ್ನು ಸಾಗಿಸುತ್ತಿದ್ದುದಾಗಿ ತಿಳಿದುಬಂದಿದ್ದು,  ಮಂಗಳೂರಿನ ಅತ್ತಾವರ ದ ಉಪ್ಪಿನ ದಕ್ಕೆಯಲ್ಲಿ ಆರೋಪಿಗಳು ಇರುವ ಸುಳಿವು ಪಡೆದ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂದಿಸಿದ್ದಾರೆ. ಮೈಸೂರಿನಸೈಯ್ಯದ್‌ ಅನೀಸ್‌ ಅಹ್ಮದ್‌(53), ಮನ್ಸೂರ್‌ ಅಹ್ಮದ್‌(28) ಹಾಗೂ ಚಿಕ್ಕಮಗಳೂರಿನ ಅನ್ವರ್‌ ಪಾಷಾ (45) ಆರೋಪಿಗಳಾಗಿದ್ದು, ಮೂರು ಟ್ರಾವೆಲ್‌ ಬ್ಯಾಗುಗಳಲ್ಲಿ ಸುಮಾರು 8,65,000 ಬೆಲೆಯ […]

ಕಾರ್ಪೊರೇಶನ್‌ ಬ್ಯಾಂಕ್‌ 108ನೇ ವರ್ಷಕ್ಕೆ ಪಾದಾರ್ಪಣೆ

Wednesday, March 13th, 2013
Corporation Bank's Foundation Day

ಮಂಗಳೂರು : ಖಾನ್‌ ಬಹಾದೂರ್‌ ಹಾಜಿ ಅಬ್ದುಲ್ಲಾ ಹಾಜಿ ಕಾಸಿಂ ಸಾಹೇಬ್‌ ಬಹಾದೂರ್‌ ರವರಿಂದ 1906ರ ಮಾರ್ಚ್ 12ರಂದು ಉಡುಪಿಯಲ್ಲಿ ಸ್ಥಾಪನೆಗೊಂಡ ಕಾರ್ಪೊರೇಶನ್‌ ಬ್ಯಾಂಕ್‌ ನ 108ನೇ ಸಂಸ್ಥಾಪನಾ ದಿನಾಚರಣೆ ಯನ್ನು ನಗರದ ಡಾ| ಟಿ.ಎಂ.ಎ ಪೈ ಇಂಟರ್ ನ್ಯಾಷನಲ್ ಕನ್ವೆನ್ಶನ್‌ ಸೆಂಟರ್‌ ನಲ್ಲಿ ಮಂಗಳವಾರ ಆಚರಿಸಲಾಯಿತು. ಸಮಾರಂಭವನ್ನು ಬ್ಯಾಂಕಿನ ಅಧ್ಯಕ್ಷ, ಆಡಳಿತ ನಿರ್ದೇಶಕ ಅಜಯ್‌ ಕುಮಾರ್‌ ಉದ್ಘಾಟಿಸಿದರು. 38 ರೂಪಾಯಿ, 13 ಆಣೆ ಹಾಗೂ 2 ಪೈಸೆಯ ಪ್ರಥಮ ದಿನದ ವ್ಯವಹಾರದೊಂದಿಗೆ ಕಾರ್ಯಾರಂಭಿಸಿದ ಕಾರ್ಪೊರೇಶನ್‌ ಬ್ಯಾಂಕ್‌ […]

ನೀರಿನ ಪೈಪ್ ಲೈನ್ ರಿಪೇರಿ, ಜಪ್ಪು ಸಂತ ಆ್ಯಂಟನಿ ಆಶ್ರಮದ ಆವರಣ ಗೋಡೆ ಕುಸಿತ

Tuesday, March 12th, 2013
St Antony’s Ashram compound wall

ಮಂಗಳೂರು : ನಗರದ ಜಪ್ಪು ಬಳಿ ಮಂಗಳೂರು ಮಹಾನಗರಪಾಲಿಕೆಯ ಸಿಬ್ಬಂದಿಗಳು ಒಡೆದ ನೀರಿನ ಪೈಪ್ ಲೈನ್ ರಿಪೇರಿ ಮಾಡುತ್ತಿದ್ದ ವೇಳೆ ಸಂತ ಆ್ಯಂಟನಿ ಆಶ್ರಮದ ಆವರಣ ಗೋಡೆ ಕುಸಿದು ಬಿದ್ದ ಘಟನೆ ಇಂದು ನಡೆದಿದೆ. ಒಡೆದ ಪೈಪ್ ನಿಂದಾಗಿ ನೀರು ಸೋರಿಕೆಯಾಗುತ್ತಿದ್ದರಿಂದ  ಅದನ್ನು ಸರಿ ಪಡಿಸುವ ಸಲುವಾಗಿ ಸಂತ ಆ್ಯಂಟನಿ ಆಶ್ರಮದ ಆವರಣ ಗೋಡೆ ಬಳಿಯ ಮಣ್ಣನ್ನು ತೆಗೆಯಲಾಗುತ್ತಿತ್ತು ಇದರ ಪರಿಣಾಮವಾಗಿ ಆಶ್ರಮದ ಗೋಡೆ ಕುಸಿದು ಬಿದ್ದಿದ್ದು ಆಶ್ರಮವು ಸುಮಾರು 115 ವರ್ಷಗಳಷ್ಟು ಹಳೆಯದಾಗಿದ್ದು ನಿರಾಶ್ರಿತರು ಸೇರಿದಂತೆ […]

ಮಕ್ಕಳ ಶಿಕ್ಷಣ ಹಕ್ಕು ಕಾಯಿದೆ- 2009ರ ಸಮರ್ಪಕ ಜಾರಿಗೆ ಎಲ್ಲರ ಪ್ರಯತ್ನ ಅಗತ್ಯ : ಡಾ.ಉಮೇಶ್ ಆರಾಧ್ಯ

Tuesday, March 12th, 2013
Children's Right to Education Act

ಮಂಗಳೂರು : ಇಂದು ನಗರದ ಎಸ್.ಡಿ.ಎಂ ಕಾಲೇಜಿನಲ್ಲಿ ಮಕ್ಕಳ ಶಿಕ್ಷಣ ಹಕ್ಕು ಕಾಯಿದೆ- 2009ರ ಕುರಿತು ಸಾರ್ವಜನಿಕ ಸಂವಾದ ಕಾರ್ಯಕ್ರಮವನ್ನು  ಏರ್ಪಡಿಸಲಾಗಿದ್ದು ಇದರ ಉದ್ಘಾಟನೆಯನ್ನು  ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಡಾ.ಉಮೇಶ್ ಆರಾಧ್ಯ ನೆರವೇರಿಸಿದರು. ಎಸ್.ಡಿ.ಎಂ ಲಾ ಕಾಲೇಜು ಮಂಗಳೂರು, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ದ.ಕ ಹಾಗೂ ವಿವಿಧ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಉದ್ಘಾಟನೆಯನ್ನು ನೆರವೇರಿಸಿದ  ಡಾ.ಉಮೇಶ್ ಆರಾಧ್ಯ  ಮಾತನಾಡಿ, ಹಿಂದಿನ ದಿನಗಳಲ್ಲಿ ಶಿಕ್ಷಣ ಪಡೆಯಲು ಬಹಳಷ್ಟು […]

ಸ್ಥಳೀಯ ಚುನಾವಣಾ ಫಲಿತಾಂಶ, ಕೆಜೆಪಿಯತ್ತ ಬಿಜೆಪಿ

Tuesday, March 12th, 2013
BJP & KJP

ಬೆಂಗಳೂರು : ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾರ ನೀಡಿರುವ ತೀರ್ಪಿನಿಂದಾಗಿ ಅತಂತ್ರ ಸ್ಥಿತಿಗೆ ತಲುಪಿರುವ, ಕಾಂಗ್ರೆಸ್ ನ್ನು ಬಲವಾಗಿ ವಿರೋದಿಸುವ ಬಿಜೆಪಿ ಇದೀಗ ಜೆಡಿಎಸ್ ನೊಂದಿಗೆ ಕೈ ಜೋಡಿಸಲು ಒಲವು ತೋರಿದೆ ಎಂಬ ಸುದ್ದಿಯೊಂದಿಗೆ,  ಪಕ್ಷದಿಂದ ಹೊರಹೋಗಿ  ತನ್ನದೇ ಆದ ಮತ್ತೊಂದು ಪಕ್ಷ ವನ್ನು ಸ್ಥಾಪಿಸಿ ಆ ಮೂಲಕ ಪಕ್ಷದಲ್ಲಿ ಬಿರುಕು ಮೂಡಿಸಿದ ಯಡಿಯೂರಪ್ಪರನ್ನು ವಾಪಸ್ ಕರೆತರುವ ನಿಟ್ಟಿನಲ್ಲಿ ಅವರತ್ತ ಸ್ನೇಹದ ಹಸ್ತ ಚಾಚಿದೆ ಎನ್ನಲಾಗಿದೆ. ಈಗಾಗಲೇ ನಿನ್ನೆ ಫಲಿತಾಂಶ ಪ್ರಕಟಗೊಂಡು ಸೋಲು ಖಚಿತ ಗೊಳ್ಳುತ್ತಿದ್ದಂತೆ […]

ಪುತ್ತೂರು : ಗಾಂಜಾ ಸಾಗಾಟ ಇಬ್ಬರು ಆರೋಪಿಗಳ ಸೆರೆ

Tuesday, March 12th, 2013
ಪುತ್ತೂರು : ಗಾಂಜಾ ಸಾಗಾಟ ಇಬ್ಬರು ಆರೋಪಿಗಳ ಸೆರೆ

ಪುತ್ತೂರು : ಅಕ್ರಮ ಗಾಂಜಾ ಸಾಗಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪುತ್ತೂರು ಪೊಲೀಸರು ಸೋಮವಾರ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಚಿಕ್ಕಮಗಳೂರಿನ ರಾಘವೇಂದ್ರ ಹಾಗೂ ಪುತ್ತೂರಿನ ರಿಜ್ವಾನ್ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು ನ್ಯಾನೋ ಕಾರೊಂದರಲ್ಲಿ ಉಪ್ಪಿನಂಗಡಿ ಕಡೆಯಿಂದ ಪುತ್ತೂರು ಕಡೆಗೆ ಗಾಂಜಾ ಸಾಗಾಟ ಮಾಡುತ್ತಿರುವ ಕುರಿತು ಪುತ್ತೂರು ನಗರ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ರಫೀಕ್ ಅವರಿಗೆ ಮಾಹಿತಿ ಲಭಿಸಿತ್ತು. ಈ ಮಾಹಿತಿಯ ಹಿನ್ನೆಲೆ ಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸರು ರೂಪಾಯಿ ೧೦ ಸಾವಿರ […]

ಜನತೆಗೆ ನೀಡಿದ ಭರವಸೆಗಳ ಈಡೇರಿಕೆಗೆ ಕಾಂಗ್ರೆಸ್ ಬದ್ದ : ಜನಾರ್ದನ ಪೂಜಾರಿ

Tuesday, March 12th, 2013
Janardhan Poojary

ಮಂಗಳೂರು : ರಾಜ್ಯದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಹೆಚ್ಚಿನ ಕಡೆಗಳಲ್ಲಿ  ಕಾಂಗ್ರೆಸ್ ಗೆಲುವನ್ನು ಸಾಧಿಸಿದ್ದು, ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ನೀಡಿರುವ ಜನತೆಗೆ ಪ್ರಣಾಳಿಕೆಯಲ್ಲಿ ಪಕ್ಷವು ನೀಡಿದ ಭರವಸೆಗಳನ್ನು ಈಡೇರಿಸಲು ಪ್ರಯತ್ನಿಸಲಾಗುವುದು ಎಂದು ಕಾಂಗ್ರೆಸ್‌ ಪಕ್ಷದ ಜಿಲ್ಲಾ ಚುನಾವಾಣಾ ಉಸ್ತುವಾರಿ ವಹಿಸಿದ್ದ ಹಿರಿಯ ಕಾಂಗ್ರೆಸ್‌ ನಾಯಕ ಬಿ. ಜನಾರ್ದನ ಪೂಜಾರಿ ತಿಳಿಸಿದರು. ಅವರು  ಸೋಮವಾರ ಕಾಂಗ್ರೆಸ್ ನ ಪ್ರಚಾರ ಸಮಿತಿ ಸಭೆಯಲ್ಲಿ ನಡೆದ ಸುದ್ದಿಗೋಷ್ಠಿಯನ್ನು ದ್ದೇಶಿಸಿ ಮಾತನಾಡಿದರು. ಮುಂದಿನ 5 ವರ್ಷಗಳ ಕಾಲ ಆಸ್ತಿ ತೆರಿಗೆಯನ್ನು ಮತ್ತು ನೀರಿನ […]

ಉಡುಪಿಯಲ್ಲಿ 3 ದಶಕಗಳ ಬಳಿಕ ಅಧಿಕಾರಕ್ಕೆ ಬಂದ ಕಾಂಗ್ರೆಸ್

Monday, March 11th, 2013
Congress in Udupi

ಉಡುಪಿ : ಉಡುಪಿ ನಗರಸಭೆಯ ಇತಿಹಾಸದಲ್ಲಿ 3 ದಶಕಗಳಲ್ಲಿ ಇದೆ ಮೊದಲ ಬಾರಿಗೆ ಕಾಂಗ್ರೆಸ್ ಗೆಲುವು ದಾಖಲಿಸಿಕೊಂಡಿದೆ. ಒಟ್ಟು 35 ವಾರ್ಡುಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 22 ವಾರ್ಡ್ ಗಳಲ್ಲಿ ಗೆಲುವನ್ನು ಸಾದಿಸಿದರೆ ಬಿಜೆಪಿ ಪಕ್ಷ ಕೇವಲ 12 ಸೀಟುಗಳನ್ನು ಗೆದ್ದುಕೊಂಡು ತೀವ್ರ ನಿರಾಸೆಯನ್ನನುಭವಿಸಿದೆ. ಒಂದು ಸ್ಥಾನ ಪಕ್ಷೇತರ ಅಭ್ಯರ್ಥಿಯ ಪಾಲಾಗಿದೆ. ಕಾರ್ಕಳ ಪುರಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲುವು ದಾಖಲಿಸಿದ್ದು, ಒಟ್ಟು 23 ವಾರ್ಡುಗಳಲ್ಲಿ ಕಾಂಗ್ರೆಸ್‌ 12 ಸ್ಥಾನಗಳನ್ನು, ಬಿಜೆಪಿ 11 ಸ್ಥಾನಗಳನ್ನು ಪಡೆದಿದೆ. ಕುಂದಾಪುರ ಪುರಸಭೆಯಲ್ಲಿ […]