ರೋಗ ತಡೆಗೆ ರಾಜ್ಯದೆಲ್ಲೆಡೆ ಉಚಿತ ತಪಾಸಣಾ ಕೇಂದ್ರಗಳು : ಯು.ಟಿ. ಖಾದರ್

Saturday, July 13th, 2013
ರೋಗ ತಡೆಗೆ ರಾಜ್ಯದೆಲ್ಲೆಡೆ ಉಚಿತ ತಪಾಸಣಾ ಕೇಂದ್ರಗಳು : ಯು.ಟಿ. ಖಾದರ್

ಮಂಗಳೂರು: ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಮಾಧ್ಯಮ ಪ್ರತಿನಿದಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ  ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್  ಭಾಗವಹಿಸಿದರು. ಜಿಲ್ಲೆಯ ವೆನ್ಲಾಕ್ ಮತ್ತು ಲೇಡಿಗೋಷನ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ಕಿಮೋಥೆರಪಿ ಚಿಕಿತ್ಸೆ ನೀಡಲು ಸರ್ಕಾರ 9 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕ್ಯಾನ್ಸರ್ ರೋಗವನ್ನು ಪತ್ತೆ ಹಚ್ಚಲು ಉಚಿತ ತಪಾಸಣಾ ಕೇಂದ್ರಗಳನ್ನು ರಾಜ್ಯದೆಲ್ಲೆಡೆ ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದರು. ಡೆಂಗ್ಯೂ ಮುಂತಾದ ರೋಗಗಳ ಬಗ್ಗೆ ಮುಂದಿನ ವರ್ಷ ಜನವರಿ ತಿಂಗಳಿಂದಲೇ ಎಲ್ಲಾ ಜಿಲ್ಲೆಗಳಲ್ಲಿ […]

ಆತ್ಮಹತ್ಯೆ ಮಾಡಿಕೊಳ್ಳುವಂತಹ ಹೇಡಿ ನಾನಲ್ಲ : ಶ್ರುತಿ

Saturday, July 13th, 2013
Shruthi

ಬೆಂಗಳೂರು: ವಿಷಾಹಾರ ಸೇವನೆಯಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಶ್ರುತಿ ಶುಕ್ರವಾರ (ಜು.12) ಆಸ್ಪತ್ರೆಗೆ ದಾಖಲಾಗಿದ್ದರು. ಶನಿವಾರ ಅವರು ಆಸ್ಪತ್ರೆಯಿಂದ ಬಿಡುಗಡೆಯಾದರು. ಬಿಡುಗಡೆಯಾದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ ನಿನ್ನೆ ರಾತ್ರಿಯಿಂದ ಎಲ್ಲರನ್ನೂ ಕಾಯಿಸಿದ್ದಕ್ಕೆ ಮೊದಲು ನಾನು ಕ್ಷಮೆ ಕೇಳುತ್ತೇನೆ. ರಾತ್ರಿ 8 ಗಂಟೆ ಹೊತ್ತಿಗಾದರೂ ನಿಮ್ಮೊಂದಿಗೆ ಮಾತನಾಡೋಣ ಎಂದುಕೊಂಡಿದ್ದೆ. ಆದರೆ ತುಂಬಾ ಆಯಾಸವಾಗಿತ್ತು ಸಾಧ್ಯವಾಗಲಿಲ್ಲ ಎಂದು  ಹೇಳಿದರು. ಆತ್ಮಹತ್ಯೆ ಯತ್ನ ವದಂತಿಗೆ ಪ್ರತಿಕ್ರಿಯಿಸಿರುವ ಸ್ಯಾಂಡಲ್‌ವುಡ್ ನಟಿ ಶೃತಿ, ಇದು ಕೇವಲ ವದಂತಿ ಅಷ್ಟೇ, ಆತ್ಮಹತ್ಯೆ ಮಾಡಿಕೊಳ್ಳುವಂತಹ ಹೇಡಿ ನಾನಲ್ಲ ಎಂದು ಹೇಳುವ […]

ಮೂಡಬಿದ್ರೆಯ ಗುರು ಬಸದಿ ಪಂಚಲೋಹದ ವಿಗ್ರಹಕಳ್ಳರ ಬಂಧನ

Saturday, July 13th, 2013
Guru Basadi Idol Theft

ಮೂಡಬಿದ್ರೆ: ಜೂನ್ 17ರಂದು ರಾತ್ರಿ ಮೂಡಬಿದ್ರೆಯ ಗುರು ಬಸದಿಯಲ್ಲಿ ಬೆಲೆಬಾಳುವ ವಿಗ್ರಹಗಳನ್ನು ಕಳವು ಮಾಡಿದ್ದ ಇಬ್ಬರು ವಿಗ್ರಹಕಳ್ಳರನ್ನು ಕೋಲಾರ ಪೊಲೀಸರು ಶುಕ್ರವಾರ ಕರ್ನಾಟಕ ಮತ್ತು ಆಂಧ್ರಪ್ರದೇಶ ಗಡಿಯಲ್ಲಿ ಬಂಧಿಸಿದ್ದಾರೆ. ಕರ್ನಾಟಕ  ಗಡಿಪ್ರದೇಶವಾದ ಕರ್ನೂಲ್ ನಲ್ಲಿ ಒರಿಸ್ಸಾ ಮೂಲದ ದಾಸ್ ಮತ್ತು ಪ್ರಮೋದ್ ಎಂಬವರನ್ನು ಕೋಲಾರ ಪೊಲೀಸರು ಬಂಧಿಸಿದ್ದಾರೆ. ಶ್ರೀ ಆದಿನಾಥ ಸ್ವಾಮಿ ಪಂಚಲೋಹದ ವಿಗ್ರಹವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಪಂಚಲೋಹದ ವಿಗ್ರಹದ ಮೌಲ್ಯ ಸುಮಾರು ಒಂದು ಸಾವಿರ ಕೋಟಿ ಎಂದು ಅಂದಾಜಿಸಲಾಗಿದೆ.  ಕಳ್ಳತನವಾಗಿರುವ ಇತರ ವಿಗ್ರಹಗಳನ್ನು ಇನ್ನಷ್ಟೇ ಪತ್ತೆ […]

ತಾಯಿ ಹಾಗೂ ಪತ್ನಿಯನ್ನು ಬರ್ಬರವಾಗಿ ಕತ್ತಿಯಿಂದ ಕಡಿದು, ಆತ್ಮಹತ್ಯೆ ಮಾಡಿದ ಸುಪರ್ ಮಾರ್ಕೆಟ್ ಉದ್ಯೋಗಿ

Saturday, July 13th, 2013
Bantwala Murder

ಬಂಟ್ವಾಳ : ಸುಪರ್ ಮಾರ್ಕೆಟ್ ಉದ್ಯೋಗಿಯೊಬ್ಬ  ತನ್ನ ತಾಯಿ ಹಾಗೂ ಪತ್ನಿಯನ್ನು ಬರ್ಬರವಾಗಿ ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಣಿಯ ಕೊಡಾಜೆ ಪಂತ್ತಡ್ಕ ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ. ಕೊಡಾಜೆ ಪಂತಡ್ಕ ನಿವಾಸಿ ಅಬ್ದುಲ್ ಹಮೀದ್ ಎಂಬಾತನೇ ಈ ಕೃತ್ಯ ವೆಸಗಿ, ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಕತ್ತಿಯಿಂದ ಹಲ್ಲೆಗೀಡಾಗಿ ತೀವ್ರ ಗಾಯಗಳಾಗಿರುವ ಹಮೀದ್ ಪತ್ನಿ ಅಸ್ಮಾ(28) ಹಾಗೂ ತಾಯಿ ಮರಿಯಮ್ಮ(55) ರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎಂದು […]

ಮಂಗಳೂರಿನ ರೈಲ್ವೇ ಟ್ರಾಕ್ ನಲ್ಲಿ ಚೆನ್ನೈ ಪ್ರೇಮಿಗಳಿಂದ ಆತ್ಮ ಹತ್ಯೆ ಯತ್ನ

Friday, July 12th, 2013
Chennai Lovers sucide atempt

ಮಂಗಳೂರು :  ಮಂಗಳೂರಿನ ಒಲ್ಡ್‌ಕೆಂಟ್ ಸಮೀಪದ ರೈಲ್ವೇ ಟ್ರಾಕ್ ನಲ್ಲಿ ಚೆನ್ನೈ ಮೂಲದ ಯುವಕ ಹಾಗೂ ಯುವತಿ ಆತ್ಮ ಹತ್ಯೆಗೆ ಯತ್ನಿಸಿದ ಘಟನೆ ಶುಕ್ರವಾರ ಮದ್ಯಾಹ್ನ ನಡೆದಿದೆ. ಯುವಕ ಸುಮಾರು 24 ವರ್ಷ ಹಾಗೂ ಯುವತಿ ಸುಮಾರು 18 ವರ್ಷದ ಆಸುಪಾಸಿನವರಾಗಿದ್ದಾರೆ ಎಂದು ತಿಳಿದು ಬಂದಿದೆ. ಇವರಿಬ್ಬರ ದೇಹದ ಮೇಲೆ ಚಾಕುವಿನಿಂದ ಇರಿದ ಗಾಯದ ಗುರುತುಗಳು ಕಂಡು ಬಂದಿದ್ದು, ಇಬ್ಬರೂ ವಿಷ ಸೇವಿಸಿದ್ದರು ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಇವರಿಬ್ಬರೂ ಪ್ರೀತಿಸುತ್ತಿದ್ದು ಆತ್ಮ ಹತ್ಯೆ ಗೆ ಕಾರಣ ತಿಳಿದು ಬಂದಿಲ್ಲ. […]

ಗ್ರಾಮಾಂತರ ರಿಕ್ಷಾಗಳ ನಗರ ಪ್ರವೇಶ ವಿರೋಧಿಸಿ ವಿವಿಧ ರಿಕ್ಷಾ ಸಂಘಟನೆಗಳಿಂದ ಪ್ರತಿಭಟನೆ

Friday, July 12th, 2013
auto drivers protest

ಮಂಗಳೂರು: ಗ್ರಾಮಾಂತರ ರಿಕ್ಷಾಗಳು ಮಂಗಳೂರು ನಗರವನ್ನು ಪ್ರವೇಶಿಸುವುದನ್ನು ವಿರೋಧಿಸಿ ಮಂಗಳೂರಿನ ವಿವಿಧ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘಟನೆಗಳು ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಶುಕ್ರವಾರ ಬೆಳಿಗ್ಗೆ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಜ್ಯೊತಿ ವೃತ್ತ ದಿಂದ ಮೆರವಣಿಗೆ ಮೂಲಕ ಬಂದು ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು. ದ.ಕ ಜಿಲ್ಲಾ ಆಟೋರಿಕ್ಷಾ ಸಮನ್ವಯ ಸಮಿತಿಯ ಅಧ್ಯಕ್ಷರಾದ ಅಲಿಹಸನ್ ಮಾತನಾಡಿ,  ಗ್ರಾಮಾಂತರ ರಿಕ್ಷಾಗಳು ಕಾನೂನು ಬಾಹಿರವಾಗಿ ನಗರದೊಳಗೆ ಪ್ರವೇಶಿಸಿ ಬಾಡಿಗೆ ಮಾಡುತ್ತಿದೆ.  ಗ್ರಾಮದಲ್ಲಿ ಸುಮಾರು 20  ಸಾವಿರ ರಿಕ್ಷಾಗಳು ಒಡಾಡುತ್ತಿವೆ. […]

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ 2013ನೇ ಸಾಲಿನ ಚೊಚ್ಚಲ ಬಜೆಟ್ ಮಂಡನೆ

Friday, July 12th, 2013
Siddu Budget

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ ಇಂದು ಮಧ್ಯಾಹ್ನ 12.30ಕ್ಕೆ ತಮ್ಮ ಚೊಚ್ಚಲ ಹಾಗೂ 2013ನೇ ಸಾಲಿನ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರು, ಜನರ ಅವಶ್ಯಕತೆಗಳನ್ನು ಈಡೇರಿಸುವುದು ತಮ್ಮ ಕರ್ತವ್ಯ ಎಂದು ಹೇಳಿದರು. ರಾಜ್ಯದ ಜನರ ನೀರಿಕ್ಷೆಗಳು ಹೆಚ್ಚು ಇಲ್ಲ. ಆದರೆ ಹಿಂದಿನ ಸರ್ಕಾರ ಜನರ ನಿರೀಕ್ಷೆಯನ್ನು ಹುಸಿ ಮಾಡಿದೆ. ಜನತೆಗೆ ಉತ್ತಮ ನೀರು, ಊಟ, ಮನೆ, ಮಾರುಕಟ್ಟೆ, ವಿದ್ಯುತ್ ಮತ್ತು ಉತ್ತಮ ರಸ್ತೆ ಒದಗಿಸುವುದು ನಮ್ಮ ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದರು. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜನರ […]

ರಾಜ್ಯ ಕಾಂಗ್ರೆಸ್ ಸರಕಾರ ಕಳ್ಳಕಾಕರ ಸರಕಾರವಾಗಿದೆ : ನಳಿನ್ ಕುಮಾರ್

Friday, July 12th, 2013
Bantwal BJP

ಬಂಟ್ವಾಳ: ರಾಜ್ಯ ಸರಕಾರದ ಹೊರಡಿಸಿರುವ ಪಂಚಾಯತ್ ರಾಜ್ ಅಧಿನಿಯಮ ತಿದ್ದುಪಡಿ ನೀತಿಯನ್ನು ವಿರೋಧಿಸಿ ಬಿಜೆಪಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ವತಿಯಿಂದ ಗುರುವಾರ ಬಿ.ಸಿ ರೋಡಿನ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು. ಅಧಿಕಾರ ಬಂದು ಎರಡು ತಿಂಗಳಲ್ಲಿಯೇ  ಪಂಚಾಯತ್ ಸದಸ್ಯರ ಹಕ್ಕನ್ನು ಮೊಟಕುಗೊಳಿಸಲು ಮುಂದಾಗಿರುವ ಕ್ರಮ ಸರಿಯಲ್ಲ, ಪಂಚಾಯತ್ ರಾಜ್ ಕಾಯಿದೆಗೆ ತಿದ್ದುಪಡಿ ತರುವ ಕರಾಳ ಮಸೂದೆಯನ್ನು ರಾಜ್ಯ ಸರಕಾರ ಜಾರಿಗೊಳಿಸಲು ಮುಂದಾಗಿರುವುದು ಅಧಿಕಾರ ವಿಕೇಂದ್ರೀಕರಣದ ವ್ಯವಸ್ಥೆಯನ್ನು ಕಿತ್ತುಗೊಳ್ಳುವ ಪ್ರಜಾತಂತ್ರ ವಿರೋಧಿ ನಿಲುವಾಗಿದೆ ಎಂದು ಸಂಸದ […]

ಮೊಲೆ ಕಚ್ಚಿದ ಕಂದಮ್ಮನಿಗೆ 90 ಬಾರಿ ಇರಿದ ಮಹಾತಾಯಿ

Friday, July 12th, 2013
Breast Feeding

ಬೀಜಿಂಗ್ : ಮೊಲೆ ಕಚ್ಚಿದ ಕಂದಮ್ಮನಿಗೆ ಸಿಟ್ಟಿಗೆದ್ದ ಮಹಾತಾಯಿಯೊಬ್ಬಲು ಬರೋಬ್ಬರಿ 90 ಬಾರಿ ಮೂತಿ-ಮುಖ ನೋಡದೆ ಇರಿದು ಬಿಟ್ಟಿದ್ದಾಳೆ. ಮಗು ಈಗ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ. ಅಮ್ಮನ ಹಾಲು ಅಮೃತಕ್ಕೆ ಸಮಾನ, ಹುಟ್ಟಿದ ಮಗುವಿಗೆ ಸ್ತನ್ಯಪಾನದಷ್ಟು ಮಹತ್ವದ ಆಹಾರ ಇನ್ನೊಂದಿಲ್ಲ. ಆರು ತಿಂಗಳು ಮಗುವಿಗೆ ಯಾವುದೇ ಬೇರೆ ಆಹಾರ ನೀಡದೆ ಮೊಲೆ ಹಾಲು ಮಾತ್ರ ನೀಡಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ. ಇದೊಂದು ಪ್ರಕರಣ ಇದಕ್ಕೆ ವಿರುದ್ದವಿದೆ. ಪೂರ್ವ ಚೀನಾದ ಜ್ಹುಹೂನ ಜಿಯಾಂಗ್ಸು ಪ್ರದೇಶದಲ್ಲಿ  ಜ್ಹೈವೋ ಬಾಯೋ(Xiao Bao) […]

ಯೋಜನೆಗಳ ಪ್ರಗತಿ ಲೋಪಕ್ಕೆ ಅಧಿಕಾರಿಗಳೇ ಹೊಣೆಗಾರರು ; ಕೆಡಿಪಿ ಸಭೆಯಲ್ಲಿ ರಮಾನಾಥ ರೈ

Friday, July 12th, 2013
KDP review meeting

ಮಂಗಳೂರು: ದ.ಕ. ಜಿ. ಪಂ. ಸಭಾಂಗಣದಲ್ಲಿ ಜಿಲ್ಲಾ ತ್ತೈಮಾಸಿಕ ಕೆಡಿಪಿ ಸಭೆ ಗುರುವಾರ ಸಚಿವ ರಮಾನಾಥ ರೈ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಬಸವ ವಸತಿ ಯೋಜನೆ, ಅಂಬೇಡ್ಕರ್‌ ವಸತಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಪ್ರಗತಿ ತೀರಾ ಕಡಿಮೆಯಾಗಿದೆ. ಅಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ ವಸತಿಗಳು ಬಡವರಿಗೆ ಸಕಾಲದಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಇದರಲ್ಲಾಗುವ ಲೋಪಕ್ಕೆ ಅಧಿಕಾರಿಗಳೇ ಹೊಣೆಗಾರರು ಎಂದು ರಾಜ್ಯ ಅರಣ್ಯ, ಪರಿಸರ ಖಾತೆ ಮತ್ತು ದ. ಕ.ಜಿಲ್ಲಾ ಉಸ್ತುವಾರಿ ಸಚಿವಬಿ. ರಮಾನಾಥ ರೈ ಎಚ್ಚರಿಸಿದ್ದಾರೆ. ರಾಜೀವ ಗಾಂಧಿ […]