‘ಚೆಲ್ಲಾಪಿಲ್ಲಿ’ ಕನ್ನಡ ಚಲನಚಿತ್ರ ರಾಜ್ಯಾದಾದ್ಯಂತ ಬಿಡುಗಡೆ

Friday, July 5th, 2013
Chella Pilli

ಮಂಗಳೂರು : ಶೈನ್ ಸಿಟಿ ಪ್ರೊಡಕ್ಷನ್ ಮಂಗಳೂರು ನಿರ್ಮಾಣದ  “ಚೆಲ್ಲಾಪಿಲ್ಲಿ” ಕನ್ನಡ ಚಲನಚಿತ್ರ ಶುಕ್ರವಾರ ರಾಜ್ಯಾದಾದ್ಯಂತ ಬಿಡುಗಡೆಯಾಗಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಅವರು ದೀಪ ಬೆಳಗುವುದರ ಮೂಲಕ ಮಂಗಳೂರಿನ ಜ್ಯೋತಿ ಸಿನಿಮಾ ಮಂದಿರದಲ್ಲಿ ಬಿಡುಗಡೆ ಸಮಾರಂಭಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರು, ಚೆಲ್ಲಾಪಿಲ್ಲಿ ಸಿನಿಮಾವು ಶತದಿನಗಳನ್ನು ಪೂರೈಸುವಲ್ಲಿ ಸಂಶಯವಿಲ್ಲ. ಚಿತ್ರರಂಗದಲ್ಲಿ ಹೊಸ ಛಾಪು ಮೂಡಿಸಲು ಹೊರಟಿರುವ ಹೊಸ ನಿರ್ಮಾಪಕರು, ನಿರ್ದೇಶಕರು, ಕಲಾವಿದರು ಕನ್ನಡ ಸಿನಿಮಾರಂಗದಲ್ಲಿ ತಮ್ಮ ಪ್ರತಿಭೆಗಳ ಮೂಲಕ ಚಿತ್ರ […]

ಅಡುಗೆ ಸೋಡಾ ಬೆರೆಸುವ ಅಹಾರ ಒಳ್ಳೆದಲ್ಲ

Friday, July 5th, 2013
Gastric

ಅಡುಗೆ ಸೋಡಾದ ರಾಸಾಯನಿಕ ಹೆಸರು ಸೋಡಿಯಂ ಬೈ ಕಾರ್ಬೊನೇಟ್. ಇದೊಂದು ಪ್ರತ್ಯಾಮ್ಲ. ಇದನ್ನು ಬಿಸ್ಕತ್ತು, ಬ್ರೆಡ್, ಕೇಕ್ ಮುಂತಾದ ಬೇಕರಿ ಪದಾರ್ಥಗಳನ್ನು ತಯಾರಿಸುವಾಗ ಅಲ್ಪ ಪ್ರಮಾಣದಲ್ಲಿ ಹಾಕುತ್ತಾರೆ. ಇದರಿಂದ ಈ ಆಹಾರ ಪದಾರ್ಥಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೂಕ್ಷ್ಮ ರಂಧ್ರಗಳಾಗಿ, ಅವು ಗಾತ್ರದಲ್ಲಿ ಹಿಗ್ಗಿಕೊಂಡು, ತಿನ್ನುವಾಗ ಹಗುರವಾದ ಭಾವನೆ ನೀಡುತ್ತವೆ. ಸಾಮಾನ್ಯವಾಗಿ ಬ್ರೆಡ್‌ನ ತಯಾರಿಕೆಯಲ್ಲಿ ಯೀಸ್ಟ್ ಅನ್ನು ಗಾತ್ರ ಹಿಗ್ಗಿಸುವಿಕೆಗೆ ಬಳಸುತ್ತಾರೆ. ಆದರೆ ಈ ವಿಧಾನ ಸ್ವಲ್ಪ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ `ತ್ವರಿತ ಬ್ರೆಡ್’ನ (ಇನ್‌ಸ್ಟೆಂಟ್ ಬ್ರೆಡ್) […]

ಮಣಿಪಾಲ ವೈದ್ಯಕೀಯ ವಿದ್ಯಾರ್ಥಿನಿಯ ರೇಪ್, ಆನಂದ ಶಿವಮೊಗ್ಗ ಜೈಲಿಗೆ

Friday, July 5th, 2013
Ananda poojary

ಉಡುಪಿ: ಮಣಿಪಾಲ ವೈದ್ಯಕೀಯ ವಿದ್ಯಾರ್ಥಿನಿಯ  ರೇಪ್ ಪ್ರಕರಣದಲ್ಲಿ ಆರೋಪಿಯಾಗಿರುವ ಆನಂದನ ಐದು ದಿನಗಳ ಪೊಲೀಸ್‌ ಕಸ್ಟಡಿ ಅವಧಿ ಇಂದು ಅಂತ್ಯಗೊಂಡ ಕಾರಣ ಶುಕ್ರವಾರ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಆತನಿಗೆ ಜುಲೈ 15ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇನ್ನೊಬ್ಬ ಆರೋಪಿ ಹರಿಪ್ರಸಾದ್ ನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಆತನನ್ನು ಶಿವಮೊಗ್ಗಕ್ಕೆ ಸ್ಥಳಾಂತರಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಯೋಗೀಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಭದ್ರತಾ ಕಾರಣಗಳಿಂದಾಗಿ ಆನಂದನನ್ನು ಶಿವಮೊಗ್ಗ ಜೈಲಿಗೆ ಸ್ಥಳಾಂತರಿಸಬೇಕೆಂದು ನ್ಯಾಯಾಧೀಶರು ಆದೇಶ ನೀಡಿದ್ದಾರೆ.

ತುಂಬಿ ಹರಿದ ನೇತ್ರಾವತಿ ನದಿ, ತಟದಲ್ಲಿ ಸುಮಾರು 300ಕ್ಕೂ ಹೆಚ್ಚು ಮನೆಗಳು ಜಲಸಮಾಧಿ

Friday, July 5th, 2013
Kallapu Rain

ಮಂಗಳೂರು : ಸತತವಾಗಿ ಸುರಿದ ಮಳೆಯಿಂದಾಗಿ ಉಳ್ಳಾಲ ನೇತ್ರಾವತಿ ನದಿ ತುಂಬಿ ಹರಿಯುತ್ತಿದ್ದು, ನೇತ್ರಾವತಿ ತಟದಲ್ಲಿ ಕೃತಕ ನೆರೆಯಿಂದ ಸುಮಾರು 300ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. 100ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಕಲ್ಲಾಪು ಪಟ್ಲ, ಆಡಂಕುದ್ರು, ಜಪ್ಪಿನಮೊಗರು, ಉಳ್ಳಾಲ ಮಾರ್ಗತಲೆ, ಕಕ್ಕೆತೋಟ, ಉಳ್ಳಾಲ ಉಳಿಯ, ಉಳ್ಳಾಲ ಹೊಗೆ, ಅಂಬ್ಲಿಮೊಗರು ಗ್ರಾಮದ ಕೋಟ್ರಗುತ್ತು, ಮದಕ, ಗಟ್ಟಿಕುದ್ರು, ದೋಟ, ಅಡು, ಪೆಂರ್ಗಾಬ್‌, ಹರೇಕಳ ಗ್ರಾಮದ ಡೇರಿಕಟ್ಟೆ, ಬೈತಾರ್‌, ಪಾವೂರು ಕಡವು, ಪಾವೂರು ಗ್ರಾಮದ ಇನೋಳಿ ಕೆಳಗಿನ ಕೆರೆ, ಗಾಡಿಗದ್ದೆ, […]

ಮಹಾನದಿ

Thursday, July 4th, 2013
Mahanadi

‘ಮಹಾನದಿ’ ಕಲಾತ್ಮಕ ಮತ್ತು ಕಮರ್ಷಿಯಲ್ ಬೆರಕೆಯ ಸಾಲಿಗೆ ಸೇರುವ ಚಿತ್ರ. ಇಂತಹ ಚಿತ್ರಗಳಲ್ಲಿ ಸಾಕಷ್ಟು ವೈರುಧ್ಯಗಳು ಸಹಜ. ಇಲ್ಲಿ ನಿರ್ದೇಶಕರು ಆರಿಸಿಕೊಂಡಿರುವುದು ಹಳೆಯ ಕಥಾವಸ್ತು. ಅದಕ್ಕೆ ಈಗಿನ ಗ್ಲಾಮರ್ ಮೆತ್ತಲಾಗಿದೆ. ಒಂದೆಡೆ ಸದಭಿರುಚಿಯೂ ಬೇಕು, ಇನ್ನೊಂದೆಡೆ ಈಗಿನ ಪ್ರೇಕ್ಷಕರಿಗೂ ಹಿಡಿಸಬೇಕು ಎಂಬ ಗುರಿ ಇಟ್ಟುಕೊಂಡು ನಿರ್ದೇಶಕರು ಬ್ಯಾಲೆನ್ಸ್ ಮಾಡಲು ಯತ್ನಿಸಿದ್ದಾರೆ. ಆದರೆ ಹೆಚ್ಚು ಗ್ಲಾಮರ್ ಎದ್ದು ಕಂಡಿದೆ. ಕರಾವಳಿ ಮೀನುಗಾರ ಕುಟುಂಬದ ಬದುಕಿನ ಚಿತ್ರಣವನ್ನು ‘ಮಹಾನದಿ’ ಕಟ್ಟಿಕೊಡಬಹುದು ಎಂಬ ನಿರೀಕ್ಷೆ ಅಷ್ಟರ ಮಟ್ಟಿಗೆ ಯಶಸ್ವಿಯಾಗಿಲ್ಲ. ಸಾಕಷ್ಟು ಗೊಂದಲಗಳನ್ನು […]

ಅಮೂಲ್ಯ ಎರಡನೇ ಇನ್ನಿಂಗ್ಸ್

Thursday, July 4th, 2013
Shravani Subhrahmanya

ಬೆಂಗಳೂರು : ಅಮೂಲ್ಯ ಎರಡನೇ ಇನ್ನಿಂಗ್ಸ್ ಗೆ ಸಜ್ಜಾಗಿದ್ದಾರೆ. ಈ ಬಾರಿ ಅವರು ‘ಶ್ರಾವಣಿ ಸುಬ್ರಹ್ಮಣ್ಯ’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಚಿತ್ರದ ನಾಯಕ ನಟನಾಗಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೂ ತೆಲುಗಿನ ‘ಶ್ರಾವಣಿ ಸುಬ್ರಹ್ಮಣ್ಯಂ’ ಚಿತ್ರಕ್ಕೂ ಸಂಬಂಧವಿಲ್ಲವಂತೆ. ಹೆಸರಷ್ಟೇ ರಿಮೇಕ್, ಕಥೆ ಸ್ವಮೇಕ್ ಎನ್ನುತ್ತದೆ ಚಿತ್ರತಂಡ. ಬ್ರೇಕ್ ನಿರೀಕ್ಷೆಯಲ್ಲಿ ಅಮೂಲ್ ಬೇಬಿ ಅಮೂಲ್ಯ ಶ್ರಾವಣಿ ಸುಬ್ರಹ್ಮಣ್ಯ ‘ಶಿಶಿರ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಮಂಜು ಸ್ವರಾಜ್ ಈ ಚಿತ್ರದ ನಿರ್ದೇಶಕರು. […]

ನಗರದಲ್ಲೊಂದು ಮಳೆಯಿಂದ ರಕ್ಷಣೆಗೆ ಮೋಡರ್ನ್ ಬೈಕ್

Thursday, July 4th, 2013
Mangalore Modern Bike

ಮಂಗಳೂರು : ನಗರದ ಬಂದರು ಬದ್ರಿಯಾ ಕಾಲೇಜಿನ ಸಮೀಪ ವಿರುವ ಅಶೋಕ ಆಟೊ ವರ್ಕ್ಸ್ ನಲ್ಲಿ  ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿರುವ ಪೂರ್ಣೇಶ್ ತನ್ನ ಹಿರೋ ಹೊಂಡ ಬೈಕನ್ನು ಮಳೆಯಲ್ಲಿ ರೈನ್ ಕೋಟ್ ರಹಿತವಾಗಿ ಸಂಚರಿಸಲು ಯೋಗ್ಯವಾಗುವಂತೆ ಸಿದ್ದಗೊಳಿಸಿದ್ದಾರೆ. 2001 ಮಾಡೆಲಿನ ಹಿರೋ ಹೊಂಡಾ ಕಂಪನಿಯ ಬೈಕನ್ನು ಸುಮಾರು 4 ಸಾವಿರ ವೆಚ್ಚದಲ್ಲಿ ಕಾರಿನಂತೆ ಬೈಕಿನ ಎದುರಿಗೆ ಗಾಜು, ಮೇಲ್ಚಾವಣಿ ನಿರ್ಮಿಸಿ ಹೊಸ ಮಾದರಿಯ ಪ್ರಯೋಗ ನಡೆಸಿದ್ದಾರೆ. ಕೇವಲ 5 ಬೋಳ್ಟ್ ಗಳನ್ನು ಅಳವಡಿಸಿ ಈ ಹೊಸ ಪ್ರಯೋಗ […]

ಉಕ್ಕಿ ಹರಿದ ಬಜ್ಪೆ ಮರವೂರು ಡ್ಯಾಂ ಅಪಾಯದಲ್ಲಿ ಸಿಲುಕಿದ್ದವರ ರಕ್ಷಣೆ

Thursday, July 4th, 2013
maravoor dam

ಮಂಗಳೂರು: ನಿರಂತರವಾಗಿ  ಸುರಿಯುತ್ತಿರುವ ಭಾರೀ ಮಳೆಯಿಂದಾಗಿ  ಬಜ್ಪೆ ಮರವೂರು ಸೇತುವೆಯ ಬಳಿ ಕುಡಿಯುವ ನೀರಿನ ಯೋಜನೆಗಾಗಿ ನಿರ್ಮಿಸಲಾಗಿದ್ದ ಅಣೆಕಟ್ಟಿನ ಮೇಲಿನಿಂದ ನೀರು ಉಕ್ಕಿ ಹರಿಯುತ್ತಿದ್ದು, ಇದೇ ಪ್ರದೇಶದ ಮನೆಗಳು ಸಂಪೂರ್ಣವಾಗಿ ನೀರಿನಿಂದ ಆವೃತವಾಗಿ ಅಪಾಯದಲ್ಲಿ ಸಿಲುಕಿದ್ದವರನ್ನು ರಕ್ಷಿಸಲಾಗಿದೆ. ಗುರುಪುರ ಫಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿದ ವೆಟೆಂಡ್ ಡ್ಯಾಂ ನಿಂದಾಗಿ ಸುತ್ತಮುತ್ತಲಿನ ಪ್ರದೇಶಗಳಿಗೆ ನೀರು ನುಗ್ಗಿದೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹದಿಂದ ಹೆಚ್ಚುವರಿ ನೀರು ಹರಿಯುತ್ತಿದ್ದರೂ ಡ್ಯಾಂನಿಂದ ನೀರನ್ನು ಹೊರಬಿಡುತ್ತಿಲ್ಲ ಎಂದು ಗ್ರಾಮಸ್ಥರುಆರೋಪಿಸಿದ್ದಾರೆ. ಇದೊಂದು ಪ್ರಾಕೃತಿಕ […]

ಮಣಿಪಾಲ ಅತ್ಯಾಚಾರ ಆರೋಪಿ ಹರಿಪ್ರಸಾದ್ ಮತ್ತು ಸಹೋದರರಿಗೆ ಜುಲೈ 15ರ ತನಕ ನ್ಯಾಯಾಂಗ ಬಂಧನ

Wednesday, July 3rd, 2013
Udupi Rape

ಉಡುಪಿ: ಮಣಿಪಾಲ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಹರಿಪ್ರಸಾದ್ ನ ಇಂದು ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಧೀಶೆಯಾಗಿರುವ ನಾಗಜ್ಯೋತಿಯವರು ಆರೋಪಿಗೆ ಜುಲೈ 15ರ ತನಕ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಜೈಲಿನಲ್ಲಿ ಹರಿಪ್ರಸಾದ್ ಮೇಲೆ ದಾಳಿ ನಡೆಯುವ ಸಾಧ್ಯತೆಗಳಿರುವ ಕಾರಣಕ್ಕೆ ಭದ್ರತಾ ಕಾರಣಗಳಿಗಾಗಿ ಆತನನ್ನು ನನ್ನು ಶಿವಮೊಗ್ಗ ಜೈಲಿಗೆ ಸ್ಥಳಾಂತರಿಸಲಾಗಿದೆ. ಆರೋಪಿಗಳ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಯೋಗೀಶ ಮತ್ತು ಹರಿಪ್ರಸಾದ್ ಸೋದರರಾದ ಬಾಲಚಂದ್ರ ಮತ್ತು ಹರೀಂದ್ರ ನನ್ನು ಕೂಡ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅವರಿಗೂ ಜುಲೈ 15ರ ತನಕ ನ್ಯಾಯಾಂಗ […]

ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರ ಕತ್ತು ಕೊಯ್ದ ಕೊಲೆ

Wednesday, July 3rd, 2013
Shamsid Uda

ಬೆಂಗಳೂರು : ಡಿ.ಜೆ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರನ್ನು ಅವರ ಕಚೇರಿಯಲ್ಲೇ ಕತ್ತು ಕೊಯ್ದ ಕೊಲೆ ಮಾಡಿರುವ ದಾರುಣ ಘಟನೆ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಟ್ಯಾನರಿ ರಸ್ತೆಯ ಈದ್ಗಾ ಕಾಂಪ್ಲೆಕ್ಸ್ ನಲ್ಲಿಯ ಕ್ರೆಡಿಟ್ ಕೋ ಆಪರೇಟಿವ್ ಕಚೇರಿಯಲ್ಲಿಯೇ ಶಂಷಿಲ್ ಉದಾ (63) ಕೊಲೆಯಾದ ದುರ್ದೈವಿ. ಬುಧವಾರ ಬೆಳಗ್ಗೆ ಶಂಷಿಲ್ ಅವರನ್ನು  ಕೊಲೆ ಮಾಡಲಾಗಿದೆ. ಪ್ರತಿದಿನ ಶಂಷಿಲ್ 8.30ಕ್ಕೆ ಸೊಸೈಟಿಗೆ ಆಗಮಿಸುತ್ತಿದ್ದರು. ಬುಧವಾರ ಸಹ ಅವರು ಕಚೇರಿಗೆ […]